Kuja Dosha | Mangala dosha | ಕುಜ ದೋಷ | ಮಂಗಳ ದೋಷ

The need to provide information about Kujadosa is evident today. There is a tendency here and there to scare people by looking for a superficial Kujadosha without properly criticizing it.

What is kuja dosha?

Kuja dosha should be viewed from lagna in birth chart. If Kuja Graha is in second, fourth, seventh, eighth or twelfth house from Lagna, it becomes dosha.

Or

If there is Kuja in the 1st, 2nd, 4th, 5th, 7th, 8th, 12th places from Lagna, Shukra and Moon positions in Janma Kundali, the superficial conclusion is that there is Kuja dosha.

ಕುಜದೋಷದ ಬಗ್ಗೆ ಮಾಹಿತಿ ನೀಡುವ ಅಗತ್ಯ ಇಂದು ಎದ್ದುಕಾಣುತ್ತಿದೆ. ಅದನ್ನು ಸರಿಯಾಗಿ ಟೀಕಿಸದೆ ಮೇಲ್ನೋಟಕ್ಕೆ ಕುಜದೋಷ ಹುಡುಕಿ ಜನರನ್ನು ಹೆದರಿಸುವ ಪ್ರವೃತ್ತಿ ಅಲ್ಲೊಂದು ಇಲ್ಲೊಂದು ಇದೆ.

ಕುಜ ದೋಷ ಎಂದರೇನು?

ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿ ಲಗ್ನದಿಂದ ನೋಡಬೇಕು. ಕುಜ ಗ್ರಹವು ಲಗ್ನದಿಂದ ದ್ವಿತೀಯ, ನಾಲ್ಕನೇ, ಏಳನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿದ್ದರೆ ಅದು ದೋಷವಾಗುತ್ತದೆ.

ಅಥವಾ

ಜನ್ಮ ಕುಂಡಲಿಯಲ್ಲಿ ಲಗ್ನ, ಶುಕ್ರ ಮತ್ತು ಚಂದ್ರ ಸ್ಥಾನಗಳಿಂದ 1, 2, 4, 5, 7, 8, 12 ನೇ ಸ್ಥಾನಗಳಲ್ಲಿ ಕುಜ ಇದ್ದರೆ, ಕುಜ ದೋಷವಿದೆ ಎಂಬುದು ಮೇಲ್ನೋಟದ ತೀರ್ಮಾನ.

In which position of horoscope is Kuja Dosha fierce?

Kuja placed in two, seven or eight from lagna in men’s horoscope indicates fiercest nature.

Kuja in the seventh, eighth and twelfth houses from the Ascendant in a woman’s horoscope indicates a dosha of a fiercest nature.

ಜಾತಕದ ಯಾವ ಸ್ಥಾನದಲ್ಲಿ ಕುಜದೋಷ ಉಗ್ರವಾಗಿರುವುದು ?

ಪುರುಷರ ಜಾತಕದಲ್ಲಿ ಲಗ್ನದಿಂದ ಎರಡು, ಏಳು ಅಥವಾ ಎಂಟರಲ್ಲಿ ಇರುವ ಕುಜ ಉಗ್ರ ಸ್ವಭಾವವನ್ನು ಸೂಚಿಸುತ್ತದೆ.

ಮಹಿಳೆಯ ಜಾತಕದಲ್ಲಿ ಲಗ್ನದಿಂದ ಏಳನೇ, ಎಂಟನೇ ಮತ್ತು ಹನ್ನೆರಡನೇ ಮನೆಗಳಲ್ಲಿ ಕುಜ ಉಗ್ರ ಸ್ವರೂಪದ ದೋಷವನ್ನು ಸೂಚಿಸುತ್ತದೆ.

Which nakshatras do not suffer from kuja dosha?

Ashwini, Mrigashira, Punarvasu, Pushya, Ashlesha, Uttara, Swati, Anuradha, Purvashadha, Uttarashadha, Shravana, Uttarabhadra. These Nakshatras do not suffer from kuja dosha even if they have kuja dosha.

ಯಾವ ನಕ್ಷತ್ರಗಳಲ್ಲಿ ಕುಜ ದೋಷವಿಲ್ಲ?

ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷ, ಉತ್ತರ, ಸ್ವಾತಿ, ಅನುರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರ.

ಈ ನಕ್ಷತ್ರಗಳು ಕುಜ ದೋಷವನ್ನು ಹೊಂದಿದ್ದರೂ ಸಹ ಕುಜ ದೋಷದಿಂದ ಬಳಲುವುದಿಲ್ಲ.

In which position of kundli, what characteristics mars will have?

  • Kuja in 1st house indicates quarrelsomeness and dominance.
  • If Kuja is in 2nd house, there will be harsh words.
  • Kuja in the 4th house is emotionally aggressive, which may lead to frequent changes in career.
  • Kuja in 7th house displays excessive energy, creates differences with family members.
  • Kuja in 8th house impacts the marital life of the person.
  • If Kuja is in 12th house financial loss, enemies and suppressed anger.

ಕುಂಡಲಿಯ ಯಾವ ಸ್ಥಾನದಲ್ಲಿ, ಮಂಗಳವು ಯಾವ ಗುಣಲಕ್ಷಣಗಳನ್ನು ಹೊಂದಿರುತ್ತದೆ?

  • 1 ನೇ ಮನೆಯಲ್ಲಿ ಕುಜ ಜಗಳತನ ಮತ್ತು ಪ್ರಾಬಲ್ಯವನ್ನು ಸೂಚಿಸುತ್ತದೆ.
  • ಕುಜ 2ನೇ ಮನೆಯಲ್ಲಿದ್ದರೆ ಕಟುವಾದ ಮಾತುಗಳು ಕೇಳಿ ಬರುತ್ತವೆ.
  • 4 ನೇ ಮನೆಯಲ್ಲಿ ಕುಜ ಭಾವನಾತ್ಮಕವಾಗಿ ಆಕ್ರಮಣಕಾರಿ, ಇದು ವೃತ್ತಿಜೀವನದಲ್ಲಿ ಆಗಾಗ್ಗೆ ಬದಲಾವಣೆಗಳಿಗೆ ಕಾರಣವಾಗಬಹುದು.
  • 7 ನೇ ಮನೆಯಲ್ಲಿ ಕುಜ ಅತಿಯಾದ ಶಕ್ತಿಯನ್ನು ಪ್ರದರ್ಶಿಸುತ್ತಾನೆ, ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸುತ್ತಾನೆ.
  • 8 ನೇ ಮನೆಯಲ್ಲಿ ಕುಜ ವ್ಯಕ್ತಿಯ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.
  • ಕುಜ 12 ನೇ ಮನೆಯಲ್ಲಿದ್ದರೆ ಆರ್ಥಿಕ ನಷ್ಟ, ಶತ್ರುಗಳು ಮತ್ತು ಧಮನಿತ ಕೋಪವನ್ನು ಸೂಚಿಸುತ್ತದೆ.

ಆದರೆ ಈ ರೀತಿಯಾಗಿ ತೀರ್ಮಾನಕ್ಕೆ ಬಂದರೂ ಅಂತಹಾ ದೋಷಗಳಿಗೆ ಅಪವಾದಗಳು ಕೂಡಾ ಇವೆ ಅಂದರೆ ಪರಿಹಾರಗಳೂ ಇವೆ ಎಂಬುದನ್ನು ಗಮನಿಸುವುದು ಅಗತ್ಯ ಇದೆ.

22 Remedies for Kuja Dosha to be checked in Kundali itself. Part 1

There are 22 ways of exceptions to Kujadosa. Those 22 types of solutions need to be checked in the kundli itself.

When checked by applying them, in most of the horoscopes Kuja Dosha will be resolved in the horoscope itself.

The aim of this article is to explain about that.

Cancer and Leo born do not have Kuja Dosha.

If Planet Mars in 7th house is seen by Planet Jupiter, Kuja dosha will be solved.

If the lord of that house or any auspicious planet is in the 7th place from the birth ascendant in the horoscope of a woman, Kuja dosha with fertility and widowhood will be solved.

ಕುಂಡಲಿಯಲ್ಲಿಯೇ ಪರಿಶೀಲಿಸಬೇಕಾದ ಕುಜ ದೋಷದ ೨೨ ಪರಿಹಾರಗಳು. ಪಾರ್ಟ್ ೧

ಕುಜದೋಷಕ್ಕೆ ೨೨ ರೀತಿಯಲ್ಲಿ ಅಪವಾದಗಳು ಇವೆ. ಆ ೨೨ ರೀತಿಯ ಪರಿಹಾರಗಳನ್ನು ಕುಂಡಲಿಯಲ್ಲಿಯೇ ಪರಿಶೀಲಿಸಬೇಕಾಗಿದೆ.

ಅವುಗಳನ್ನು ಅನ್ವಯಿಸಿ ಪರಿಶೀಲನೆ ಮಾಡಿದಾಗ ಹೆಚ್ಚಿನ ಜಾತಕಗಳಲ್ಲಿ ಕುಜ ದೋಷ ಜಾತಕದಲ್ಲಿಯೇ ಪರಿಹಾರ ಆಗಿರುತ್ತದೆ.

ಆ ಬಗ್ಗೆ ವಿವರಿಸುವುದು ಈ ಬರಹದ ಗುರಿ.

ಕನ್ಯಾ-ವರರ ಜಾತಕ ಹೊಂದಾಣಿಕೆಯಲ್ಲಿ ಕುಜದೋಷವನ್ನು ಪರಿಶೀಲಿಸುವುದು ಸಂಪ್ರದಾಯ.

ಕರ್ಕಾಟಕ ಮತ್ತು ಸಿಂಹ ಲಗ್ನ ಸಂಜಾತರಿಗೆ ಕುಜದೋಷ ಇಲ್ಲ.

೭ ನೇ ಸ್ಥಾನದಲ್ಲಿರುವ ಕುಜ ಗ್ರಹವನ್ನು, ಗುರು ಗ್ರಹ ನೋಡಿದರೆ ಕುಜ ದೋಷ ಪರಿಹಾರವಾಗುವುದು .

ಹೆಣ್ಣಿನ ಜಾತಕದಲ್ಲಿ ಜನ್ಮ ಲಗ್ನದಿಂದ ೭ ನೇ ಸ್ಥಾನದಲ್ಲಿ ಆ ರಾಶಿಯ ಅಧಿಪತಿ ಅಥವಾ ಯಾವುದಾದರೂ ಶುಭ ಗ್ರಹ ಇದ್ದರೆ ಸಂತಾನ ದೋಷ, ವೈಧವ್ಯ ದೋಷವಿರುವ ಕುಜ ದೋಷ ಪರಿಹಾರವಾಗುವುದು.

  1. ಕರ್ಕಾಟಕ ಮತ್ತು ಸಿಂಹ ಲಗ್ನ ಸಂಜಾತರಿಗೆ ಕುಜದೋಷ ಇಲ್ಲ.
  2. ೭ ನೇ ರಾಶಿಯಲ್ಲಿರುವ ಕುಜನನ್ನು ಗುರು ನೋಡಿದಲ್ಲಿ ದೋಷ ಪರಿಹಾರ.
  3. ಕನ್ಯಾ ಜಾತಕದಲ್ಲಿ ಜನ್ಮ ಲಗ್ನದಿಂದ ೭ ನೇ ರಾಶಿಯಲ್ಲಿ ಆ ರಾಶಿಯ ಅಧಿಪತಿ ಅಥವಾ ಯಾವುದಾದರೂ ಶುಭ ಗ್ರಹ ಇದ್ದರೆ ಸಂತಾನ ದೋಷ, ವೈಧವ್ಯ ದೋಷ, ಕುಜ ದೋಷ ಪರಿಹಾರ.
  4. ೭ ನೇ ಸ್ಥಾನದ ಅಧಿಪತಿ ೭ ನೇ ಮನೆಯಲ್ಲಿ ಇದ್ದರೆ ಕುಜ ದೋಷ ಇಲ್ಲ.
  5. ಕನ್ಯಾ- ವರರ ಜಾತಕಗಳಲ್ಲಿ ಸಮಾನವಾದ ಕುಜ ದೋಶ ಇದ್ದಲ್ಲಿ ಅಥವಾ ಕುಜದೋಶಕ್ಕೆ ಸಮಾನವಾದ ಪಾಪ ಗ್ರಹ ದೋಷ ಇದ್ದಲ್ಲಿ[ರವಿ,ಶನಿ,ಕೇತು,ರಾಹು, ಕುಜ-ಇವುಗಳು ಪಾಪ ಗ್ರಹರು]ಕುಜ ದೋಷ ಪರಿಹಾರ.
  6. ಜನ್ಮ ಲಗ್ನದಿಂದ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.
  7. ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜದೋಶ ಇದ್ದು ಮತ್ತೊಂದರಲ್ಲಿ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.
  8. ಲಗ್ನದಿಂದ೨,೪,೭,೮,೧೨ರಲ್ಲಿರುವ ಕುಜನು ಗುರುವಿನೊಟ್ಟಿಗೆ ಇದ್ದರೆ ಅಥವಾ ಬುಧ,ಗುರು ಗಳಿಂದ ನೋಡಲ್ಪಟ್ಟರೆ ಕುಜದೋಷ ಪರಿಹಾರ.
  9. ಕುಜನು ಗುರು ಅಥವಾ ಚಂದ್ರನ ಒಟ್ಟಿಗೆ ಇದ್ದರೆ ಅಥವಾ ಅವರಿಂದ ನೋಡಲ್ಪಟ್ಟರೆ ಕುಜ ದೋಷ ಪರಿಹಾರ.
  10. ಮೇಷ,ವೃಶ್ಚಿಕ,ಮಕರ,ಕರ್ಕಟಕ,ಸಿಂಹ,ಧನುಸ್ಸು,ಮೀನ ಈ ರಾಶಿಗಳಲ್ಲಿ ಕುಜ ಇದ್ದರೆ ಕುಜ ದೋಷ ಇಲ್ಲ.
  11. ಕುಜನು, ರವಿ, ಚಂದ್ರ,ಗುರು ನವಾಂಶದಲ್ಲಿ ಇದ್ದರೆ ಕುಜದೋಷ ಇಲ್ಲ.
  12. ಕುಜನು ಕರ್ಕಾಟಕ,ಮಿಥುನ,ಕನ್ಯಾ ರಾಶಿಗಳಲ್ಲಿ ಇದ್ದರೆ ಅಥವಾ ಅಸ್ತನಾಗಿ ಇದ್ದರೆ ಶುಭಾಶುಭ ಫಲ ಇಲ್ಲವಾದ ಕಾರಣ ಕುಜ ದೋಷ ಇಲ್ಲ.
  13. ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜ ದೋಷವಿದ್ದು ಮತ್ತೊಂದರಲ್ಲಿ ಅದೆ ರಾಶಿಯಲ್ಲಿ ಶನಿ,ಕುಜ,ಅಥವಾ ಯಾವುದಾದರೂ ಪಾಪಗ್ರಹ ಇದ್ದಲ್ಲಿ ಕುಜ ದೋಷ ಇಲ್ಲ.
  14. ಜಾತಕದಲ್ಲಿ ಯಾವ ರಾಶಿಯಲ್ಲಿ ಕುಜನು ಇದ್ದಾನೋ ಆ ರಾಶಿಯ ಅಧಿಪತಿ ೧,೪,೭,೧೦,೫,೯ರಲ್ಲಿ ಇದ್ದರೆ ಕುಜ ದೋಷ ಪರಿಹಾರ.
  15. ಮೇಷ ಲಗ್ನವಾಗಿ ಅಲ್ಲಿ ಕುಜನು ಇದ್ದರೆ,ಮಕರ ಲಗ್ನವಾಗಿ ಧನು ರಾಶಿಯಲ್ಲಿ ಕುಜನು ಇದ್ದರೆ,ಸಿಂಹ ಲಗ್ನವಾಗಿ ವೃಶ್ಚಿಕದಲ್ಲಿ ಕುಜನು ಇದ್ದರೆ,ಕರ್ಕಾಟಕ ಲಗ್ನವಾಗಿ ಮಕರದಲ್ಲಿ ಕುಜನು ಇದ್ದರೆ, ಧನುರ್ಲಗ್ನವಾಗಿ ಕರ್ಕಾಟಕದಲ್ಲಿ ಕುಜನು ಇದ್ದರೆ ಆಯಾಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ.
  16. ಅಶ್ವಿನಿ,ಮೃಗಶಿರೆ,ಪುನರ್ವಸು,ಪುಷ್ಯ,ಆಶ್ಲೇಶಾ,ಉತ್ತರಾ,ಸ್ವಾತಿ,ಅನುರಾಧ,ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರ, ರೇವತಿ — ಈ ನಕ್ಷತ್ರದವರಿಗೆ ಕುಜದೋಷ ಇಲ್ಲ.
  17. ಮಿಥುನ-ಕನ್ಯಾ ಲಗ್ನಗಳಲ್ಲಿ ಹುಟ್ಟಿದವರಿಗೆ ಕರ್ಕಟಕ-ತುಲಾ ರಾಶಿಗಳಲ್ಲಿ ಕುಜನು ಇದ್ದರೆ,ವೃಷಭ-ಸಿಂಹ ಲಗ್ನದವರಿಗೆ ಮಿಥುನ- ಕನ್ಯಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.
  18. ಮೇಷ-ವೃಶ್ಚಿಕ ಲಗ್ನದವರಿಗೆ ಕರ್ಕಟಕ- ಕುಂಭ ರಾಶಿಗಳಲ್ಲಿ, ಮಕರ- ಸಿಂಹ ಲಗ್ನದವರಿಗೆ ಮೇಷ- ವೃಶ್ಚಿಕ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.
  19. ಮಕರ-ಕರ್ಕಟಕ ಲಗ್ನದವರಿಗೆ ಕರ್ಕಟಕ-ಮಕರ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ ಮತ್ತು ಕರ್ಕಟಕ-ಮಕರ ಲಗ್ನದವರಿಗೆ ಮಕರ-ಕರ್ಕಟಕ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.
  20. ಧನು-ಮೀನ ಲಗ್ನದವರಿಗೆ ಕರ್ಕಟಕ-ತುಲಾರಾಶಿಗಳಲ್ಲಿ,ವೃಷಭ-ಸಿಂಹ ಲಗ್ನದವರಿಗೆ ಧನು-ಮೀನ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.
  21. ವೃಷಭ-ತುಲಾ ಲಗ್ನದವರಿಗೆ ಮೇಷ-ಕನ್ಯಾ ರಾಶಿಗಳಲ್ಲಿ,ವೃಶ್ಚಿಕ-ಮಿಥುನ ಲಗ್ನದವರಿಗೆ ವೃಷಭ- ತುಲಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.
  22. ಕುಂಭ-ಸಿಂಹ ಲಗ್ನದವರಿಗೆ ಕುಜನು ಯಾವರಾಶಿಯಲ್ಲಿ ಇದ್ದರೂ ದೋಷ ಇಲ್ಲ. ಕುಂಭ-ಸಿಂಹ ರಾಶಿಗಳು ಲಗ್ನದಿಂದ ೧-೨-೪-೫-೭-೮-೧೨ ನೇ ರಾಶಿಗಳಾಗಿದ್ದು ಅಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.

ಈ ರೀತಿಯಾಗಿ ಕುಜದೋಷಗಳಿಗೆ ಅಪವಾದ ಅಥವಾ ಪರಿಹಾರಗಳನ್ನು ಶಾಸ್ತ್ರಕಾರರು ತಿಳಿಸಿರುವ ಕಾರಣ ಕೆಲವೇ ಕೆಲವು ಜಾತಕಗಳಲ್ಲಿ ಮಾತ್ರಾ ಕುಜ ದೋಷ ಇರಬಹುದಾಗಿದೆ. (ಈ ವಿಚಾರವನ್ನು ಜ್ಯೋತಿಷಿಗಳು ಗಮನದಲ್ಲಿರಿಸಿಕೊಂಡು ಕುಜದೋಷದ ಬಗ್ಗೆ ಪರಿಶೀಲಿಸ ಬೇಕೆಂಬುದು ಶಾಸ್ತ್ರಕಾರರ ಮತ.)

Leave a Comment

Your email address will not be published. Required fields are marked *