ವಿವಾಹ ಯೋಗ

ವಿವಾಹ ಯೋಗ ಬರುವುದಕ್ಕೆ ಏನು ಮಾಡಬೇಕು ?

ವಿವಾಹ ಯೋಗಕ್ಕೆ ತ್ವರಿತ ಮಾರ್ಗ

ವಿವಾಹವಾಗಬೇಕೆನ್ನುವ ಬಯಕೆ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಕಂಕಣ ಬಲ ಬೇಗ ಕೂಡಿ ಬಂದರೆ, ಇನ್ನೂ ಕೆಲವರಿಗೆ ವಯಸ್ಸು ದಾಟಿದರೂ ಕಂಕಣ ಬಲ ಕೂಡಿ ಬರುವುದಿಲ್ಲ. ಶೀಘ್ರ ಕಂಕಣ ಬಲ ಕೂಡಿ ಬರಲು ಹುಡುಗರು ಏನು ಮಾಡಬೇಕು.. ಹುಡುಗಿಯರು ಏನು ಮಾಡಬೇಕು..

ಕಳೆದ ವರ್ಷ ಕೆಲವು ಕಾರಣಗಳಿಂದ ನೀವು ಮದುವೆಯಾಗದಿದ್ದರೆ, ಮದುವೆಯಾಗಲು ಹಲವು ಅಡೆತಡೆಗಳಿವೆ ಎಂದು ನೀವು ಭಾವಿಸುತ್ತಿದ್ದರೆ, ನೀವು ಖಂಡಿತವಾಗಿ ವಿವಾಹವಾಗಲೇಬೇಕೆಂದು ಬಯಸುತ್ತಿದ್ದರೆ ಈ ಕೆಳಗಿನ ಪರಿಹಾರಗಳನ್ನು ತೆಗೆದುಕೊಳ್ಳಬಹುದು. ‌ ‌ ‌ ‌ ‌ ಹುಡುಗನ ಜಾತಕದಲ್ಲಿ ಶುಕ್ರನು ದುರ್ಬಲನಾಗಿದ್ದರೆ ದಾಂಪತ್ಯದಲ್ಲಿ ಅಡೆತಡೆಗಳು ಮತ್ತು ಹುಡುಗಿಯ ಜಾತಕದಲ್ಲಿ ಗುರು ಬಲಹೀನನಾಗಿದ್ದರೆ ದಾಂಪತ್ಯದಲ್ಲಿ ಅಡೆತಡೆಗಳು ಉಂಟಾಗುತ್ತವೆ. ನೀವು ಶೀಘ್ರದಲ್ಲೇ ಮದುವೆಯಾಗಲು ಬಯಸಿದರೆ ಈ ಪ್ರಯತ್ನಗಳು ಒಮ್ಮೆ ಪ್ರಯತ್ನಿಸಿ ಕಂಕಣ ಬಲ ಕೂಡಿ ಬರಲೂಬಹುದು.

ಹುಡುಗಿಯರಿಗೆ ಕಂಕಣ ಬಲ ಕೂಡಿ ಬರಲು ಹೀಗೆ ಮಾಡಿ:

  1. ಮೊಲಗಳಿಗೆ ಆಹಾರವನ್ನು ನೀಡಿ.
  2. ಗುರುವಾರ ಉಪವಾಸ ವ್ರತವನ್ನು ಆಚರಿಸಿ ವಿಷ್ಣು ಮತ್ತು ಗುರುವನ್ನು ಧ್ಯಾನಿಸಿ.
  3. ದೇವಸ್ಥಾನದಲ್ಲಿ ಹಳದಿ ವಸ್ತುಗಳನ್ನು ದಾನ ಮಾಡಿ.
  4. ಗುರುವಾರದಂದು ಆಲದ ಮರಕ್ಕೆ, ಅರಳಿ ಮರಕ್ಕೆ ಮತ್ತು ಬಾಳೆ ಮರಕ್ಕೆ ನೀರನ್ನು ಅರ್ಪಿಸಿ.
  5. ಪ್ರತಿದಿನ ಹಣೆಗೆ ಕುಂಕುಮ ಅಥವಾ ಶ್ರೀಗಂಧದ ತಿಲಕವನ್ನು ಹಚ್ಚಿ, ತುಳಸಿ ಮಾಲೆಯನ್ನು ಧರಿಸಿ.
  6. ಹೆಚ್ಚಿನ ಸಂದರ್ಭಗಳಲ್ಲಿ ಹಳದಿ ಬಟ್ಟೆಗಳನ್ನು ಧರಿಸಿ.
  7. ಮನೆಯಲ್ಲಿ ಕರ್ಟನ್ ಮತ್ತು ಶೀಟ್ ಗಳ ಬಣ್ಣವನ್ನು ಗುಲಾಬಿ ಬಣ್ಣದಲ್ಲಿ ಇರಿಸಿ.
  8. ಗುರುವಾರದಂದು ಅರಳಿ ಮರದ ಕೆಳಗೆ ಶುದ್ಧ ತುಪ್ಪದ ದೀಪವನ್ನು ಬೆಳಗಿಸಿ.
  9. ಹುಡುಗಿಯ ತಂದೆ ಅಥವಾ ಸಹೋದರನು ವಿವಾಹ ಸಂಬಂಧದ ಬಗ್ಗೆ ಮಾತನಾಡಲು ಮನೆಯಿಂದ ಹೊರಗೆ ಹೋದಾಗ, ಆ ಹುಡುಗಿಯು ಅವರು ಹಿಂತಿರುಗುವವರೆಗೂ ತನ್ನ ಕೂದಲನ್ನು ತೆರೆದಿರಬೇಕು.

ಹುಡುಗರಿಗೆ ಕಂಕಣ ಬಲ ಕೂಡಿ ಬರಲು ಹೀಗೆ ಮಾಡಿ:

  1. ಶುಕ್ರವಾರದಂದು ಉಪವಾಸ ವ್ರತವನ್ನು ಆಚರಿಸಬೇಕು.
  2. ಹುಡುಗರು 21 ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕುಳಿತು ಪೂಜೆ ಮಾಡಿ – ಸೀತಾ ರಾಮರ ಪಾದಗಳಿಗೆ ಸಿಂಧೂರವನ್ನು ಅರ್ಪಿಸಬೇಕು.
  3. ಪ್ರತಿ ಗುರುವಾರದಂದು ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಬೇಕು.
  4. ಶುಕ್ಲ ಪಕ್ಷದ ಪ್ರತಿ ಸೋಮವಾರದಂದು ಉಪವಾಸವನ್ನು ಇಟ್ಟುಕೊಳ್ಳಿ ಮತ್ತು ಎಕ್ಕದ ಎಂಟು ಎಲೆಗಳನ್ನು ಪೂಜಿಸಿ, ಏಳು ಎಲೆಗಳಿಂದ ತಟ್ಟೆಯನ್ನು ಮಾಡಿ ಎಂಟನೇ ಎಲೆಯ ಮೇಲೆ ನಿಮ್ಮ ಹೆಸರನ್ನು ಬರೆದು ಶಿವನಿಗೆ ಅರ್ಪಿಸಿ.
  5. ಮನೆಯ ದಕ್ಷಿಣ ಭಾಗದಲ್ಲಿ ಬೇವಿನ ಮರವನ್ನು ನೆಟ್ಟು ಅದಕ್ಕೆ ಪ್ರತಿನಿತ್ಯ ನೀರನ್ನು ಅರ್ಪಿಸಿ.
  6. ಮದುವೆಗೆ ಮೊದಲು ಕುಂಭ ವಿವಾಹ ಮಾಡಿ.
  7. ಕಣ್ಣುಗಳಿಗೆ ಬಿಳಿ ಬಣ್ಣದ ಕಾಜಲ್‌ನ್ನು ಹಚ್ಚಬೇಕು. ಒಂದು ವೇಳೆ ಬಿಳಿ ಬಣ್ಣದ ಕಾಜಲ್‌ ಲಭ್ಯವಿಲ್ಲದಿದ್ದರೆ ಕಪ್ಪು ಬಣ್ಣದ ಕಾಜಲ್‌ನ್ನು ಕೂಡ ಹಚ್ಚಿಕೊಳ್ಳಬಹುದು.
  8. ಮನೆಯಲ್ಲಿ ವಾಸ್ತು ದೋಷವಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ವಾಸ್ತು ದೋಷವಿದ್ದರೆ ಅದನ್ನು ಶೀಘ್ರದಲ್ಲೇ ಪರಿಹರಿಸಿಕೊಳ್ಳಿ.

ಸೂಚನೆ: ಈ ಪರಿಹಾರ ಕ್ರಮಗಳನ್ನು ಕೇವಲ ಮಾಹಿತಿಗಾಗಿ ನೀಡಲಾಗಿದೆ. ವಿವಾಹ ವಿಳಂಬಕ್ಕೆ ಜಾತಕದಲ್ಲಿ ಬೇರೆ ಕಾರಣಗಳು ಸಹ ಇರಬಹುದು. ಆದ್ದರಿಂದ, ನಿಮ್ಮ ಜಾತಕವನ್ನು ಅರ್ಹ ಜ್ಯೋತಿಷಿಗಳಿಗೆ ಅಥವಾ ತಜ್ಞರಿಗೆ ತೋರಿಸಿ ನಂತರವೇ ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಕಂಕಣ ಬಲಕ್ಕೆ ನಾಡಿದೋಷವೇ ಅಡ್ಡಿಯಾದರೆ, ಅದಕ್ಕೆ ಪರಿಹಾರವೇನು?

ವಧು-ವರರ ಕುಂಡಲಿಯನ್ನು ಹೊಂದಾಣಿಕೆಯಲ್ಲಿ ನಾಡಿ ದೋಷ ಕಂಡು ಬಂದರೆ ಅದನ್ನು ಅತ್ಯಂತ ಕೆಟ್ಟ ದೋಷವಾಗಿ ಪರಿಗಣಿಸಲಾಗುತ್ತದೆ. ವಧು ಅಥವಾ ವರನ ಕುಂಡಲಿಯಲ್ಲಿ ನಾಡಿ ದೋಷ ಕಂಡು ಬಂದಲ್ಲಿ, ಅಂಥವರು ಮದುವೆಯಾದರೆ ಮುಂದೆ ಸಂಗಾತಿಯೋರ್ವ ಸಾವಿಗೀಡಾಗಬಹುದು. ಹಾಗಾದರೆ ನಾಡಿ ದೋಷಕ್ಕೆ ಪರಿಹಾರವೇನು..? ನಾಡಿ ದೋಷವಿದ್ದವರನ್ನು ವಿವಾಹವಾಗಬಹುದೇ..?

ಹಿಂದೂ ಧರ್ಮದ ಪ್ರಕಾರ ವಿವಾಹ ಬಂಧವೊಂದನ್ನು ಬೆಸೆಯುವ ನಿರ್ಧಾರ ಕೈಗೊಳ್ಳುವಾಗ ಅಷ್ಟಗುಣಗಳ ಮಿಲನದಲ್ಲಿ ನಾಡಿ ಗುಣದ ಹೊಂದಾಣಿಕೆ ಅತ್ಯಂತ ಮಹತ್ವ ಪಡೆದಿದೆ. ವಧು-ವರರ ಕುಂಡಲಿಯನ್ನು ಹೊಂದಾಣಿಕೆಯಲ್ಲಿ ನಾಡಿ ದೋಷ ಕಂಡು ಬಂದರೆ ಅದನ್ನು ಅತ್ಯಂತ ಕೆಟ್ಟ ದೋಷವಾಗಿ ಪರಿಗಣಿಸಲಾಗುತ್ತದೆ. ಅಲ್ಲದೆ ಈ ದೋಷವು ಪ್ರಾಣಾಂತಿಕವೂ ಆಗಬಹುದು ಎನ್ನಲಾಗುತ್ತದೆ. ಅಂದರೆ ವಧು ಅಥವಾ ವರನ ಕುಂಡಲಿಯಲ್ಲಿ ನಾಡಿ ದೋಷ ಕಂಡು ಬಂದಲ್ಲಿ, ಅಂಥವರು ಮದುವೆಯಾದರೆ ಮುಂದೆ ಸಂಗಾತಿಯೋರ್ವ ಸಾವಿಗೀಡಾಗಬಹುದು. ಅಲ್ಲದೇ ಇದು ಸಂಗಾತಿಗಳಿಬ್ಬರಿಗೂ ತೊಂದರೆ ಉಂಟು ಮಾಡಬಹುದು.

​1. ನಾಡಿ ದೋಷವಿದ್ದರೂ ವಿವಾಹ ಆಗಬಹುದೇ..

ಜಾತಕದಲ್ಲಿ ನಾಡಿ ದೋಷ ಕಂಡುಬಂದಲ್ಲಿ ಅಂಥ ವಿವಾಹಕ್ಕೆ ಸಾಮಾನ್ಯವಾಗಿ ಒಪ್ಪಿಗೆ ನೀಡಲಾಗುವುದಿಲ್ಲ. ವಧು-ವರರ ಜಾತಕದ ಅಷ್ಟ ಗುಣಗಳ ಪೈಕಿ ಎಲ್ಲವೂ ಹೊಂದಾಣಿಕೆಯಾಗಿದ್ದರೂ ನಾಡಿ ದೋಷವಿದ್ದರೆ ಅದು ಅನಿಷ್ಟ ಎಂದೇ ಪರಿಗಣಿಸಲಾಗುತ್ತದೆ ಎಂದು ನಾರದ ಪುರಾಣದಲ್ಲಿ ಹೇಳಲಾಗಿದೆ. ನಾಡಿ ದೋಷವಿದ್ದರೂ ಸಂಗಾತಿಗಳು ವಿವಾಹವಾದಲ್ಲಿ ಅವರ ಭವಿಷ್ಯ ಜೀವನ ನರಕವಾಗಬಹುದು ಅಥವಾ ಸತತ ಜಗಳಗಳಾಗಬಹುದು ಅಥವಾ ಆ ಸಂಬಂಧ ಬಹು ಬೇಗನೇ ಮುರಿದು ಹೋಗಬಹುದು. ಅಷ್ಟೇ ಅಲ್ಲ, ಇಬ್ಬರಲ್ಲೊಬ್ಬರ ಸಾವು ಸಹ ಸಂಭವಿಸಬಹುದು.​

2. ವಿವಾಹಕ್ಕೆ ಬೇಕು ಅಷ್ಟಕೂಟ ಮಿಲನ:

ನಾಡಿ ದೋಷದ ಕೆಟ್ಟ ಪರಿಣಾಮಗಳ ಬಗ್ಗೆ ನಾವು ಬಹಳವಾಗಿಯೇ ಕೇಳಿದ್ದೇವೆ. ಆದರೆ ನಿಜಕ್ಕೂ ನಾಡಿ ದೋಷದಿಂದ ಅಷ್ಟೆಲ್ಲ ಕೆಟ್ಟ ಪರಿಣಾಮಗಳಾಗುತ್ತವಾ ಅಥವಾ ಇದನ್ನು ಸುಖಾಸುಮ್ಮನೆ ಅತಿ ಕೆಟ್ಟದಾಗಿ ಬಿಂಬಿಸಲಾಗಿದೆಯಾ ಎಂಬುದನ್ನು ತಿಳಿಯಬೇಕು. ಆದರೆ ಇದನ್ನು ತಿಳಿಯಲು ನಾಡಿ ದೋಷದ ಅರ್ಥವೇನು ಹಾಗೂ ಕುಂಡಲಿಯಲ್ಲಿ ಇದು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಅರಿಯಬೇಕಾಗುತ್ತದೆ. ವಿವಾಹ ಬಂಧ ನಿರ್ಧರಿಸುವಾಗ ಸಂಗಾತಿಗಳ ಜಾತಕ ಗುಣಗಳ ಹೊಂದಾಣಿಕೆಯ ಎಂಟು ಗುಣಗಳ ಪೈಕಿ ನಾಡಿಯೂ ಒಂದಾಗಿದೆ. ಜಾತಕದ ಎಂಟು ಗುಣಗಳ ಹೊಂದಾಣಿಕೆಯನ್ನು ಅಷ್ಟಕೂಟ ಮಿಲನ ಎಂದು ಕರೆಯಲಾಗುತ್ತದೆ. ಈ ಅಷ್ಟಕೂಟ ಮಿಲನ ಗುಣಗಳು ಹೀಗಿವೆ- ವರ್ಣ, ವಾಶ್ಯ, ತಾರಾ, ಯೋನಿ, ಗೃಹ ಮೈತ್ರಿ, ಗಣ, ಭಕೂಟ ಮತ್ತು ನಾಡಿ.

​3. ಮೂರು ವಿಧದ ನಾಡಿ ದೋಷಗಳು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ವಿಧದ ನಾಡಿ ದೋಷಗಳನ್ನು ಗುರುತಿಸಲಾಗಿದೆ. ಅವು ಹೀಗಿವೆ:

ಆದಿ ನಾಡಿ: ವಿವಾಹ ಬಂಧನಕ್ಕೊಳಗಾಗಬಯಸುವ ಸಂಗಾತಿಯೊಬ್ಬರ ಜಾತಕದಲ್ಲಿ ಆದಿ ನಾಡಿ ದೋಷವಿದ್ದಲ್ಲಿ ಆ ಸಂಬಂಧವು ಬಹುಬೇಗನೆ ವಿಚ್ಛೇದನಕ್ಕೊಳಗಾಗುತ್ತದೆ ಎಂದು ವರಾಹಮಿಹಿರ ಶಾಸ್ತ್ರದಲ್ಲಿ ಹೇಳಲಾಗಿದೆ.

ಮಧ್ಯ ನಾಡಿ:

 ಮಧ್ಯ ನಾಡಿ ದೋಷದಿಂದ ಓರ್ವ ಅಥವಾ ಇಬ್ಬರೂ ಸಂಗಾತಿಗಳ ಮರಣ ಸಂಭವಿಸಬಹುದು ಅಥವಾ ಜೀವನದಲ್ಲಿ ಮುಗಿಯಲಾಗದ ಕಷ್ಟ ಕೋಟಲೆಗಳನ್ನು ಅನುಭವಿಸಬೇಕಾಗಿ ಬರಬಹುದು.

ಅಂತ್ಯ ನಾಡಿ ದೋಷ: ಈ ವಿಧದ ನಾಡಿ ದೋಷದಿಂದ ಸಂಗಾತಿಗಳ ವೈವಾಹಿಕ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲವೊಮ್ಮೆ ಸಂಗಾತಿಯೊಬ್ಬರ ಸಾವು ಸಂಭವಿಸಬಹುದು.

​4. ಚಂದ್ರ ಹಾಗೂ ನಕ್ಷತ್ರಗಳೇ ನಾಡಿ ಗುರುತಿಗೆ ಆಧಾರ:

ವ್ಯಕ್ತಿಯೊಬ್ಬನ ಜನ್ಮ ಕುಂಡಲಿಯಲ್ಲಿ ಚಂದ್ರನಿರುವ ನಕ್ಷತ್ರದ ಆಧಾರದ ಮೇಲೆ ಆ ವ್ಯಕ್ತಿಯ ನಾಡಿಯನ್ನು ಗುರುತಿಸಲಾಗುತ್ತದೆ. ಒಟ್ಟು ೨೭ ನಕ್ಷತ್ರಗಳಿದ್ದು ಇವುಗಳ ಮೂಲಕವೇ ಒಟ್ಟು ಮೂರು ವಿಧದ ನಾಡಿಗಳನ್ನು ಗುರುತಿಸಲಾಗುತ್ತದೆ. ಒಟ್ಟು ೨೭ ನಕ್ಷತ್ರಗಳ ಪೈಕಿ ಕುಂಡಲಿಯಲ್ಲಿ ವಿಶೇಷ ೯ ನಕ್ಷತ್ರಗಳ ಗುಂಪಿನಲ್ಲಿ ಚಂದ್ರನ ಇರುವಿಕೆಯು ಆ ವ್ಯಕ್ತಿಯ ನಾಡಿಯನ್ನು ಸೂಚಿಸುತ್ತದೆ

​5. ಸಂಗಾತಿಗಳ ನಾಡಿ ಬೇರೆಯಾಗಿದ್ದರೆ ಅದು ಶುಭ:

ವಿವಾಹ ಸಮಯದಲ್ಲಿ ಕುಂಡಲಿ ನೋಡುವಾಗ ಸಂಗಾತಿಗಳಿಬ್ಬರ ನಾಡಿಗಳು ಬೇರೆ ಬೇರೆಯಾಗಿದ್ದರೆ ಅಂಥವರ ವಿವಾಹ ಸಂಬಂಧ ಏರ್ಪಡಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ: ವರನು ಆದಿ ನಾಡಿ ಹೊಂದಿದ್ದು, ವಧು ಮಧ್ಯ ಮತ್ತು ಅಂತ್ಯ ನಾಡಿ ಹೊಂದಿದ್ದರೆ ಅದನ್ನು ಅತ್ಯಂತ ಸೂಕ್ತ ಜೋಡಿ ಎಂದು ಹೇಳಲಾಗುತ್ತದೆ. ಆದರೆ ಇಬ್ಬರ ನಾಡಿಯೂ ಒಂದೇ ಆಗಿದ್ದಲ್ಲಿ ಅಂಥ ಸಂಬಂಧವನ್ನು ಬೆಸೆಯುವುದು ನಿಷಿದ್ಧ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಇಬ್ಬರ ನಾಡಿಯೂ ಒಂದೇ ಆಗಿದ್ದಾಗ ಅಂಥ ಕುಂಡಲಿಯ ಗುಣ ಹೊಂದಾಣಿಕೆ ಸ್ಕೋರ್ ಸೊನ್ನೆ ಆಗಿದ್ದು, ಅದನ್ನು ನಾಡಿ ದೋಷ ಎನ್ನಲಾಗುತ್ತದೆ.​

6. ನಾಡಿ ದೋಷದ ವಿನಾಯಿತಿ ಹಾಗೂ ಪರಿಹಾರೋಪಾಯಗಳು

ನಾಡಿ ದೋಷಕ್ಕೂ ಕೆಲ ವಿನಾಯಿತಿಗಳಿವೆ. ಅಂದರೆ ಕುಂಡಲಿಯ ಇತರ ಗುಣಗಳು ಹೊಂದಾಣಿಕೆಯಾದಾಗ ನಾಡಿ ದೋಷಕ್ಕೆ ವಿನಾಯಿತಿ ಪಡೆಯಬಹುದು. ಯಾವೆಲ್ಲ ಸಂದರ್ಭಗಳಲ್ಲಿ ಈ ಪರಿಹಾರ ಕ್ರಮಗಳನ್ನು ಅನ್ವಯಿಸಬಹುದು ಎಂಬ ಅಂಶಗಳು ಹೀಗಿವೆ

ಪುರುಷ ಹಾಗೂ ಮಹಿಳಾ ಸಂಗಾತಿಗಳು ಒಂದೇ ನಕ್ಷತ್ರ ಹಾಗೂ ಭಿನ್ನ ಚರಣಗಳಲ್ಲಿ ಹುಟ್ಟಿದ್ದು, ಆಗ ನಾಡಿ ದೋಷವಿದ್ದರೂ ಅದನ್ನು ವಿನಾಯಿತಿಯಾಗಿ ಪರಿಗಣಿಸಬಹುದು.

ಹೆಣ್ಣು ಹಾಗೂ ಗಂಡಿನ ಜನ್ಮ ರಾಶಿ ಒಂದೇ ಆಗಿದ್ದು, ನಕ್ಷತ್ರಗಳು ಭಿನ್ನವಾಗಿದ್ದಾಗ ಸಹ ಅದನ್ನು ನಾಡಿದೋಷದ ವಿನಾಯಿತಿಯಾಗಿ ಪರಿಗಣಿಸಲಾಗುತ್ತದೆ.

ಹೆಣ್ಣು ಹಾಗೂ ಗಂಡು ಒಂದೇ ಜನ್ಮ ನಕ್ಷತ್ರ ಹಾಗೂ ಭಿನ್ನ ಜನ್ಮ ರಾಶಿಗಳನ್ನು ಹೊಂದಿದ್ದಾಗ ಕೂಡ ಅದನ್ನು ನಾಡಿ ದೋಷದ ವಿನಾಯಿತಿ ಎಂದು ಹೇಳಲಾಗುತ್ತದೆ. (ವಧುವಿನ ಜನ್ಮ ಚರಣ ಮತ್ತು ಜನ್ಮ ರಾಶಿಗಳು ವರನಿಗಿಂತ ಮುಂಚಿನದ್ದಾಗಿರಬಾರದು)

ಹನ್ನೆರಡೂವರೆ ಲಕ್ಷ ಬಾರಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ನಾಡಿ ದೋಷದ ದುಷ್ಪರಿಣಾಮ ಕಡಿಮೆಯಾಗಿ ಸಂಗಾತಿಯೊಂದಿಗೆ ಉತ್ತಮ ವೈವಾಹಿಕ ಜೀವನ ನಡೆಸಲು ಸಾಧ್ಯವಾಗುತ್ತದೆ.

ವಿವಾಹವಾಗಲು ಬಯಸುವ ಸಂಗಾತಿಗಳಿಬ್ಬರ ಕುಂಡಲಿಯಲ್ಲಿ ನಾಡಿ ದೋಷ ಕಂಡು ಬಂದಲ್ಲಿ, ವಿವಾಹವಾಗಲಿರುವ ಹೆಣ್ಣಿನ ಮದುವೆಯನ್ನು ಮೊದಲಿಗೆ ಮಹಾವಿಷ್ಣುವಿನ ಮೂರ್ತಿಯೊಂದಿಗೆ ನೆರವೇರಿಸಬೇಕು. ನಂತರವಷ್ಟೇ ಆಕೆಯನ್ನು ವರನೊಂದಿಗೆ ವಿವಾಹ ಮಾಡಿಸಬೇಕು.

ಕುಂಡಲಿಯಲ್ಲಿನ ನಾಡಿದೋಷದಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳುಂಟಾಗಿದ್ದರೆ ಆಕೆ/ ಆತ ಚಿನ್ನ, ಬಟ್ಟೆ ಹಾಗೂ ಧಾನ್ಯಗಳನ್ನು ದಾನ ಮಾಡುವ ಮೂಲಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ಚಿನ್ನದ ಸರ್ಪದ ಮೂರ್ತಿಯನ್ನು ಮಾಡಿ ಅದನ್ನು ಸೂಕ್ತ ವಿಧಿವಿಧಾನಗಳೊಂದಿಗೆ ಪೂಜಿಸುವುದರಿಂದ ಹಾಗೂ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ನಾಡಿ ದೋಷವನ್ನು ದೂರ ಮಾಡಬಹುದು.

ದ್ವಿಕಳತ್ರ ಯೋಗ‌ ಮತ್ತು ತ್ರಿಕಳತ್ರ ಯೋಗ  ಯಾವ ಗ್ರಹಸ್ಥಿತಿಯಲ್ಲಿ ಬರುತ್ತದೆ

 ಕೆಲವೊಮ್ಮೆ ನಾವು ಜಾತಕ ನೋಡುವುದಕ್ಕಿಂತ ಮುಂಚೆ ಬೇರೆಯವರ ಬಳಿ ಜಾತಕ ವಿಮರ್ಶೆ‌ ಮಾಡಿಕೊಂಡು ಬರುತ್ತೇವೆ.

ಹೇಗೆ ಐದು ಬೆರಳುಗಳು ಸಮವಿರುವುದಿಲ್ಲವೋ ಹಾಗೆಯೇ ಜ್ಯೋತಿಷ ಪ್ರಪಂಚದಲ್ಲಿ ಎಲ್ಲಾ ಜ್ಯೋತಿಷಿಗಳು ಸರಿಯಾಗಿಯೇ ಇರುವುದಿಲ್ಲ.

ಆ ಕೆಲವು ಜ್ಯೋತಿಷಿಗಳಿಂದ ಶಾಸ್ತ್ರದ ಮೇಲೆಯೇ ಅಪಮಾನ ಮಾಡುವುದು ತರವಲ್ಲ.

ಇಂತಹ ಕೆಲವೊಂದು ಸಮಸ್ಯೆಗಳಲ್ಲಿ ದ್ವಿಕಳತ್ರ ಮತ್ತು ತ್ರಿಕಳತ್ರ ಯೋಗಗಳು. 

ಸಾಮನ್ಯವಾಗಿ ಕೆಲವು ಡಾಂಭಿಕ‌ ಜ್ಯೋತಿಷಿಗಳು ಮದುವೆಯು ಆಗದಿದ್ದಲ್ಲಿ  ಕುಂಭ ವಿವಾಹ, ಕದಳಿ‌ ವಿವಾಹ, ಅರ್ಕ ವಿವಾಹ  ಎಂಬ ಪರಿಹಾರಗಳನ್ನು ಬರೆಯುತ್ತಾರೆ

ಆದರೆ ನಿಜವಾಗಿಯೂ ಅವರ ಜಾತಕದಲ್ಲಿ ಯಾವುದೇ ರೀತಿಯ ದ್ವಿಕಳತ್ರ -ತ್ರಿಕಳತ್ರ ಯೋಗಗಳು ಇರುವುದೇ ಇಲ್ಲ.

ಅವನಿಗೆ ಒಂದೇ ವಿವಾಹ ಯೋಗವಿದ್ದಲ್ಲಿ ಈ ವಿವಾಹಗಳಿಂದ‌ ಆ ಯೋಗವೂ ವ್ಯಯವಾಗುವ ಸಮಸ್ಯೆ‌ ಎದುರಾಗಬಹುದು. 

ಆದ್ದರಿಂದ ಯಾವ ಗ್ರಹ ಸ್ಥಿತಿಯಿಂದ ದ್ವಿಕಳತ್ರ-ತ್ರಿಕಳತ್ರ ಯೋಗಗಳು ಬರುತ್ತದೆ ಎಂಬುದನ್ನು ಈ ಲೇಖನದಿಂದ ಚಿಂತಿಸೋಣ.

ದ್ವಿ ಕಳತ್ರ ಯೋಗ.

  • •ಸಪ್ತಮೇಶನು ಚರರಾಶಿಯಲ್ಲಿದ್ದು ಪಾಪಯೋಗದಲ್ಲಿದ್ದು ಪಾಪಗ್ರಹದಿಂದ‌ ನೋಡಲ್ಪಡುತ್ತಿದ್ದರೆ 
  • •ಸಪ್ತಮದಲ್ಲಿ ಪಾಪಗ್ರಹವಿದ್ದು ಪಾಪದೃಷ್ಟಿ ಸಪ್ತಮಭಾವಕ್ಕೆ ಇದ್ದರೆ 
  • •ಶುಕ್ರನು ಚರರಾಶಿಯಲ್ಲಿದ್ದು ಸಪ್ತಮೇಶನು ಬಲಹೀನನಾಗಿದ್ದರೆ
  • •ಸ್ಥಿರರಾಶಿಯಲ್ಲಿ ಶುಕ್ರನು ರವಿ ಮತ್ತು ಬುಧ ಯುತನಾಗಿ ಸಪ್ತಮೇಶನು ಪಾಪನಾಗಿದ್ದರೆ.
  • •ಸಪ್ತಮೇಶನು ಶನಿಯುತನಾಗಿ ಅಥವಾ ರಾಹುಯುತನಾಗಿದ್ದು ಲಗ್ನಾತ್ ಸಪ್ತಮದಲ್ಲಿ ಕುಜನಿದ್ದರೆ.
  • •ಲಗ್ನಾತ್ ಸಪ್ತಮದಲ್ಲಿ ಕುಜನಿದ್ದು ಆರರಲ್ಲಿ ಚಂದ್ರ ಮತ್ತು ಶುಕ್ರನಿದ್ದು ಲಗ್ನಾಧಿಪತಿ ಅಷ್ಟಮದಲ್ಲಿದ್ದರೆ.

 ಈ ರೀತಿಯ ಗ್ರಹಸ್ಥಿತಿ ಇದ್ದಲ್ಲಿ ದ್ವಿಕಳತ್ರ ಯೋಗ ಉಂಟಾಗುತ್ತದೆ. 

ತ್ರಿಕಳತ್ರ ಯೋಗ

  • •ಲಗ್ನ, ಎರಡನೇ ಮನೆ, ಮತ್ತು ಸಪ್ತಮದಲ್ಲಿ ಪಾಪಗ್ರಹವಿದ್ದು ಸಪ್ತಮಾಧಿಪತಿ ನೀಚಸ್ಥನಾಗಿದ್ದರೆ.
  • •ಎರಡ ಮತ್ತು ಸಪ್ತಮ ಭಾವದಲ್ಲಿ ಬಹು ಪಾಪಗ್ರಹರಿದ್ದು ಸಪ್ತಮಾಧಿಪತಿ ಪಾಪಯುತನಾಗಿದ್ದರೆ
  • •ಯುಗ್ಮ ರಾಶಿಯಲ್ಲಿ ಶುಕ್ರನಿದ್ದು ರಾಹು ಅಥವಾ ಕುಜನ ಯೋಗವೋ. ದೃಷ್ಟಿಯೋ ಇದ್ದರೆ
  • •ಉಭಯ ರಾಶಿಗಳಲ್ಲಿ ಒಂದರಲ್ಲಿ ಶುಕ್ರನಿದ್ದು ಕುಜ ಮತ್ತು ರಾಹು ದೃಷ್ಟಿ ಇದ್ದು ಪಾಪ ದೃಷ್ಟಿಯು ಇದ್ದರೆ.

ಈ ಲಕ್ಷಣಗಳು ತ್ರಿಕಳತ್ರ ಯೋಗ ಸೂಚಿಸುತ್ತದೆ

ಇದಕ್ಕೆ ಪರಿಹಾರವೆಂದರೆ  ಹುಡುಗನಾಗಿದ್ದಲ್ಲಿ ಕದಳೀ ವಿವಾಹ ಮತ್ತು ಹುಡುಗಿಯಾಗಿದ್ದಲ್ಲಿ ಕುಂಭ ವಿವಾಹ ಮಾಡಬೇಕು.

Leave a Comment

Your email address will not be published. Required fields are marked *