ಭಗವಾನ್ ದತ್ತರಿಂದ ಪ್ರದೀಪ್ತ ನವನಾಥರಿಂದ ಪ್ರಚಲಿತ ಶಾಬರಿವಿದ್ಯೆಯೂ ಕಲಿಯುಗದಲ್ಲಿ ಪ್ರತ್ಯಕ್ಷ ಸಿದ್ದವಾಗಿರುವ ತಂತ್ರಶಾಸ್ತ್ರ ಅನ್ಯ ತಂತ್ರವಿದ್ಯೆಗಳಿಗೆ ಹೋಲಿಸಿದಾಗ ಇದರ ಸಾಧನೆ ಬಹಳಷ್ಟು ಸುಲಭ ಮತ್ತು ಶಕ್ತಿಯುತವಾಗಿದೆ ಈ ವಿದ್ಯೆಯು ಷಟಕರ್ಮಗಳನ್ನು ಒಳಗೊಂಡು ಪ್ರತಿಯೊಬ್ಬರು ಸಾಧಿಸಬಹುದಾದ ಸಾಧನೆಗಳಾಗಿವೆ ಇದರಲ್ಲಿ ಜಾತಿ – ಪಂಥ – ಲಿಂಗಭೇದಗಳಿಲ್ಲ ಇದು ಸರ್ವರಿಗೂ ಶುಭಕರವೆ, ಜನ್ಮದಿಂದ ಮೃತ್ಯುವರೆಗೆ ಅದರಿಂದ ಮೋಕ್ಷದವರೆಗೆ ಬರುವ ಸರ್ವ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರ ಮತ್ತು ಪ್ರತಿ ವಿಷಯಕ್ಕೂ ವಿಶೇಷ ಮಾಹಿತಿ ಇರುವುದು ಶಾಸ್ತ್ರಿ ವಿದ್ಯೆಯನ್ನು ಕಲಿತವರು ಜೋತಿಷ್ಯ ಕಲಿಯುವ ಅಗತ್ಯವಿಲ್ಲ ಮತ್ತು ಇನ್ಯಾವ ಶಾಸ್ತ್ರದ ಅಧ್ಯಯನದ ಅಗತ್ಯವು ಇರುವುದಿಲ್ಲ ಇದು ಸರ್ವಜ್ಞಾನದ ಭಂಡಾರ
ಸಿದ್ದಶಾಬರ ಮಂತ್ರಗಳು ಮತ್ತು ಯಂತ್ರಗಳು ಎಂದು ಹೇಳುವುದೇಕೆ
ವೈದಿಕ ಅಥವಾ ತಾಂತ್ರಿಕ ಯಾವುದೆ ಯಂತ್ರಗಳನ್ನು ಅಥವಾ ಮಂತ್ರಗಳನ್ನು ಫಲಕಾರಿಯಾಗಿ ಮಾಡಬೇಕಾದರೆ ಅದಕ್ಕೆ ಅದರದ್ದೆ ಆದ ಪುನಶ್ಚರಣ ವಿಧಿಯನ್ನು ಆಚರಿಸಿ ಮೊದಲು ಆ ಮಂತ್ರವನ್ನು ನಾವು ಸಿದ್ದಿಸಿಕೊಂಡಾಗಲೆ ಆಯಾ ಮಂತ್ರಗಳನ್ನು ಉಪಯೋಗ ಮಾಡಬಹುದು ಇರದಿದ್ದರೆ ಮಂತ್ರವನ್ನು ಎಷ್ಟು ಜಪಿಸಿದರು ಏನು ಪ್ರಯೋಜನ ಆಗದು ಈ ಮಂತ್ರವು ಸಿದ್ದವಾಗಬೇಕಾದರೆ ಮೊದಲು ದೀಕ್ಷೆಯನ್ನು ಪಡೆಯಬೇಕು ಇದರ ನಂತರ ನಿರಂತರವಾಗಿ ಬಿಡದೆ ಗುರುಗಳು ಸೂಚಿಸಿದಷ್ಟು ದಿನಗಳವರೆಗೆ ಸೂಚಿಸಿದೆ ಸಂಖ್ಯೆಯಲ್ಲಿ ಜಪಿಸಬೇಕು ಇದರ ಬಳಿಕ ಆಯಾ ಮಂತ್ರಗಳ ಜಪಸಂಖ್ಯೆಯು ಮುಗಿದ ಮೇಲೆ ಸೂಕ್ತದಿನವನ್ನು ನೋಡಿ ಗುರುಮಾರ್ಗದರ್ಶನದಲ್ಲಿ ದಶಾಂಶ ಹವನ , ತರ್ಪಣ , ಷೋಡಶದಾನ , ಹೀಗೆ ಹತ್ತಾರು ವರುಷಗಳವರೆಗೆ ಕೋಟಿ ಸಂಖ್ಯೆಯಲ್ಲಿ ಮಂತ್ರವನ್ನು ಹೇಳಿದಾಗ ಅದು ನಮಗೆ ಫಲವನ್ನು ನೀಡುವುದು ಅಂದರೆ ಸಾಮಾನ್ಯವಾಗಿ ಎಲ್ಲ ಮಂತ್ರಗಳನ್ನು ಜಪಿಸಿ ಸಿದ್ದಿಸಿಕೊಳ್ಳಬೇಕು ಆದರೆ ಶಾಬರಿ ವಿದ್ಯೆಯು ಹಾಗಲ್ಲ ಇದರ ಮಂತ್ರಗಳು ಮತ್ತು ಯಂತ್ರಗಳು ದತ್ತರ ಮತ್ತು ನವನಾಥರ ಕೃಪೆಯಿಂದ ಸ್ವಂಯಸಿದ್ದ ಇದರಲ್ಲಿ ನೀವು ಹೆಚ್ಚು ಪ್ರಯತ್ನ ಪಡೆಯದೆಯೂ ಅದ್ಬುತ ಫಲಪಡೆಯುವ ಸಾಧನಾ ಮಾರ್ಗ ಆಗಿದೆ ಅಂದರೆ
ಗುರುವಿನಿಂದ ದೀಕ್ಷೆ ~ ಗುರುವಾಖ್ಯ ಪಾಲನೆ ~ ನಿತ್ಯಾನುಷ್ಠಾನ ಈ ಮೂರೆ ನಿಯಮಗಳು
ಇದು ಸಾಧಕರಿಗೆ ಸುಲಭವು ಮತ್ತು ದೇವರಿಗೂ ದುರ್ಲಭ ವಿದ್ಯೆಯಾಗಿದೆ ಪ್ಪತ್ಯಂಗೀರಾ ತಂತ್ರ ಅಥವಾ ಬಗಳಾಮುಖಿ , ಧೂಮಾವತಿ ತಂತ್ರ ಆರಾಧಕರಿಗೆ ಪ್ರತಿತಂತ್ರಗಳು ಬಹಳಷ್ಟು ವಿರಳ ಆದರೆ ಈ ವಿದ್ಯೆಯ ಸಾಧನೆ ಜಗತ್ತಿನ ಚರಾಚರ ಶಕ್ತಿಯನ್ನು ಕೂಡ ನಿಯಂತ್ರಿಸುವ ಸಾಮರ್ಥ್ಯವನ್ನು ನೀಡುವುದು ಗುರು ಕೀ ಶಕ್ತಿ ಮೇರಿ ಭಕ್ತಿ ಈ ವಾಕ್ಯವೆ ಇದರ ಶಕ್ತಿ ನೀವು ಗುರುವನ್ನು ಆಶ್ರಯಿಸಿ ಅಷ್ಟೆ ಸಾಕು ನಿಮ್ಮ ಸಕಲ ಇಚ್ಚೆಗಳನ್ನು ಗುರುವಿನ ತಪಶಕ್ತಿಯೂ ಪೂರ್ಣಗೊಳಿಸುವುದು ಇದರಲ್ಲಿ ಸಂಶಯವೇ ಇಲ್ಲ
ಇಂತಹ ವಿಶೇಷ ವಿದ್ಯೆಯ ಬೋಧನೆಯನ್ನು ಅವಶ್ಯವಾಗಿ ಉಪಯೋಗಿಸಿಕೊಳ್ಳಿ
ಇದರಲ್ಲಿ ಶಾಂತಿಕರ್ಮ , ವಶೀಕರಣ , ಸ್ತಂಭನ ಒಳಗೊಂಡಂತೆ ಅನೇಕ ಉಪಯೋಗಗಳಿವೆ.
ಶಾಂತಿ ಕರ್ಮ ಎಂದರೆ
ದಿನನಿತ್ಯದ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ನೀಡುವುದಾಗಿದೆ ಇದರಲ್ಲಿ ಗ್ರಹಗಳ ದೋಷಗಳು , ಸಂದಿಯ ದೋಷಗಳು , ಮಾಟ ಮಂತ್ರಾದಿ ಪ್ರಯೋಗಗಳು , ವಿದ್ಯೆ , ಸಾಲ , ವ್ಯಾಪಾರ , ವ್ಯವಹಾರ , ನೌಕರಿ , ಕೃಷಿ , ಮಕ್ಕಳ ಸಮಸ್ಯೆ , ಶತ್ರುಗಳಿಂದ ರಕ್ಷಣೆ ಎಂಬ ಎಲ್ಲ ವಿಧವಾದ ಸಮಸ್ಯೆಗಳಿಗೆ ಸುಲಭ ಉಪಾಯ – ತಂತ್ರೋಪಾಯ – ಯಂತ್ರಗಳ ಸಾಧನೆ – ಮಂತ್ರದ ಬಳಕೆ ಈ ಎಲ್ಲವನ್ನು ಒಳಗೊಂಡಿರುವುದು
ವಶೀಕರಣ ಎಂದರೆ ಅನ್ಯರನ್ನು ನಮಗೆ ಅನುಕೂಲ ಆಗುವಂತೆ ಮಾಡಿಕೊಳ್ಳುವುದು ಇದರಲ್ಲಿ ಶತ್ರುವಶೀಕರಣವು ಸೇರಿರುವುದು
ಸ್ತಂಭನ ಎಂದರೆ ನಿಲ್ಲಿಸುವುದು ಅದು ದುಷ್ಟಶಕ್ತಿಗಳನ್ನು , ಮೃಗಗಳನ್ನು ಶತ್ರುವಿನ ಮಾಟಾದಿ ಕ್ರಿಯೆಯನ್ನು ಮತ್ತು ಶತ್ರುವನ್ನು ಕೂಡ ಶಕ್ತಿಹೀನವಾಗಿ ಮಾಡುವ ವಿಧಾನ
ಈ ಎಲ್ಲದರೊಂದಿಗೆ ಅನೇಕ ರೋಗಿಗಳಿಗೆ ವನಸಿರಿ ಪರಿಹಾರ ನಿತ್ಯಕ್ಕೆ ಉಪಯೋಗ ಆಗುವ ಶಾಸ್ತ್ರದ , ಜೋತಿಷ್ಯದ ವಿಷಯ , ರತ್ನ – ರುದ್ರಾಕ್ಷ – ಲೋಹಗಳ ಮಾಹಿತಿಯನ್ನು ನಿಡಲಾಗುವುದು .
ಈ ವಿದ್ಯೆಯನ್ನು ಕಲಿಯಲು ಜೋತಿಷ್ಯ ಕಲಿಯುವ ಅಗತ್ಯತೆ ಇರುವುದಿಲ್ಲ ಇದನ್ನೊಂದು ಕಲಿತರೆ ಇನ್ನು ಉಳಿದ ಯಾವ ಸಾಧನೆಯನ್ನು ಮಾಡುವ ಅಗತ್ಯತೆ ಉಳಿಯುವುದಿಲ್ಲ
ವರ್ಷದ ಸಾಧನೆಯಿಂದಲೆ ನೀವು ಜೀವನದ ಬೀಡಿಸಲಾಗದ ಸಮಸ್ಯೆ ಬಗೆಹರಿಸುವಿರಿ ,
ಶಾಸ್ತ್ರೋಕ್ತ ಬೋಧನೆ – ದೀಕ್ಷೆ – ಮತ್ತು ಮಾರ್ಗದರ್ಶನ
ಇದನ್ನು ಕಲಿಯುವ ಪೂರ್ವದಲ್ಲಿ ನಾವು ಅನೇಕ ಜನ್ಮಗಳಲ್ಲಿ ಮಾಡಿದ ಪಾಪಗಳನ್ನು ಪ್ರಾಯಶ್ಚಿತ್ತ ವಿಧಿಯ ಮೂಲಕ ಕಳಿದುಕೊಳ್ಳುವ ಅಗತ್ಯತೆ ಇರುವುದು.
ಕೆಳಗಿನಿ ಸಮಸ್ಯೆಗಳನ್ನು ಸುಲಭವಾಗಿ ಯಂತ್ರಗಳನ್ನು ಬಳಸಿ ಪರಿಹರಿಸಬಹುದು
1) ಚಂದ್ರದೋಷ – ಜಾತಕದಲ್ಲಿ ಚಂದ್ರ 6-8-12 ಮನೆಯಲ್ಲಿದ್ದರೆ ಅಥವಾ ಶನಿ ,ರಾಹು ,ಕೇತು ಈ ಗ್ರಹಗಳ ಸಂಯೋಗದಲ್ಲಿದ್ದರೆ ಅಥವಾ ಅಂಶಬಲದಲ್ಲಿ ಬಲಹೀನವಾಗಿದ್ದರೆ
2) ಗುರುದೋಷ , ಗುರುಶಾಪ , ಅಥವಾ ಗುರು ಚಾಂಡಾಲಯೋಗ ವಿದ್ದಾಗ , ಗುರುಗ್ರಹ ಬಲಹೀನವಾಗಿದ್ದರೆ
3) ಪುರುಷರ ವಿವಾಹದಲ್ಲಿ ಅಡೆತಡೆಗಳು ಉಂಟು ಆಗುತ್ತಿದ್ದರೆ.
4) ಮಕ್ಕಳ ವಿದ್ಯಾಭ್ಯಾಸ , ರೋಗನಿವಾರಣೆ ಮತ್ತು ದುಷ್ಟಚಟಗಳಿಂದ ರಕ್ಷಿಸಲು
5 ) ನಿದ್ರೆಯ ಸಮಸ್ಯೆ ಇರುವವರು ಅಥವಾ ನಿತ್ಯ ಕೆಟ್ಟು ಕನಸ್ಸು ಬಿಳುತ್ತಿದ್ದರೆ .
6) ಜೌದುಂಬರವನ್ನು ಕಡಿದಿದ್ದರೆ ಇದು ವ್ಯಕ್ತಿಯ ಉನ್ನತಿಗೆ ಬಾಧಕ ಆಗುವುದು ಇದರ ಪರಿಹಾರಕ್ಕೆ
7) ಸ್ತ್ರೀ ಜನ್ಮ ಪೀಡೆಯಿಂದ
8) ಧನದ ಮತ್ತು ವ್ಯಾಪಾರದ ಸಮಸ್ಯೆ
ಈ ಎಲ್ಲ ಸಮಸ್ಯೆಗಳಿಗೆ ನೀವು ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು
