ಯೇ ಯಾಂತ್ಯಭ್ಯುದಯೇ ಪ್ರೀತಿಂ ನೋಜ್ಝಂತಿ ವ್ಯಸನೇಷು ಚ |
ತೇ ಬಾಂಧವಾಸ್ತೇ ಸುಹೃದೋ ಲೋಕಃ ಸ್ವಾರ್ಥಪರೋಪರಃ ||
ಸುಭಾಷಿತ ಮಂಜರೀ — ಲೋಚನ
ನಮ್ಮ ಅಭ್ಯುದಯಕಾಲದಲ್ಲಿ ಯಾರು ಸಂತೋಷಪಡುವರೋ , ವಿಪತ್ಕಾಲದಲ್ಲಿ ನಮ್ಮನ್ನು ತ್ಯಜಿಸುವದಿಲ್ಲವೋ ಅವರೇ ಬಂಧುಗಳು. ಅವರೇ ಸ್ನೇಹಿತರು. ಉಳಿದವರು ಸ್ವಾರ್ಥಿಗಳು.
ಧರ್ಮೋ ಯಶೋ ನಯೋ ದಾಕ್ಚಂ ಮನೋಹಾರಿ ಸುಭಾಷಿತಂ | ಇತ್ಮಾದಿಗುಣರತ್ನಾನಾಂ ಸಂಗ್ರಹೀ ನಾವಸೀದತಿ ॥ ೧
ಸುಭಾಷಿತರತ್ನ ಭಾಂಡಾಗಾರ
ಧರ್ಮ, ಯಶಸ್ಸು, ನೀತಿ, ದಾಕ್ಷಿಣ್ಯ ಹಾಗೆಯೇ ಮನೋಹರವಾದ ಸುಭಾಷಿತ- ಇವೇ ಮೊದಲಾದ ಗುಣರತ್ನಗಳನ್ನು ಶೇಖರಿಸುವವನು ಯಾವಾಗಲೂ ದುಃಖಕ್ಕೊಳ ಗಾಗುವುದಿಲ್ಲ.
