ಗಜೇಂದ್ರ ಮೋಕ್ಷ ಕತೆಯ ಬಗ್ಗೆ ಒಂದು ಚಿಂತನೆ.
ಗಜೇಂದ್ರ ಮೊಸಳೆಯ ಬಾಯಿಗೆ ಸಿಲುಕಿ ಒಂದು ಸಾವಿರ ವರ್ಷಗಳ ಕಾಲದವರೆಗೆ ಯುದ್ಧ ಮಾಡಿ,ಅವನ ಎಲ್ಲಾ ಶಕ್ತಿ ಕುಂದಿದ ಮೇಲೆ, ಕೊನೆಯಲ್ಲಿ ಅವನಿಗೆ ಜ್ಞಾನ ಬಂತು.
ಭಗವಂತನನ್ನು ಬಿಟ್ಟು ಯಾರು ನನ್ನ ರಕ್ಷಣೆ ಮಾಡುವುದಿಲ್ಲ ಅಂತ.
ಭಗವಂತನಿಗೆ ಕರೆದ.
ಸ್ವಾಮಿ ಬಂದು ರಕ್ಷಣೆ ಮಾಡಿದ.
ಇದರ ಒಳ ಅರ್ಥ.
ನಾವು ಸಹ ಗಜ ದಂತೆ ಇದ್ದೀವಿ.ಅಂದರೆ ನಮ್ಮ ಒಳಗೆ ಕಾಮ ಕ್ರೋಧಾದಿಗಳೆಂಬ ಅರಿ ಷಡ್ವರ್ಗ ಗಳನ್ನು ತುಂಬಿಕೊಂಡು ನಾವು ಸಹ ಗಜ ದಂತೆ ದಪ್ಪವಾಗಿದ್ದೇವೆ.
ಅದು ಹೇಗೆ??
ಆನೆಯಷ್ಟು ದಪ್ಪ ನಾನಿಲ್ಲವಲ್ಲ ಅನ್ನುವ ಸಂದೇಹ ಬರಬಹುದು.
ಮೇಲ್ನೋಟಕ್ಕೆ ನಾವು ತೆಳ್ಳಗೆ ಇರಬಹುದು.
ಆದರೆ ಒಳಗಿನಿಂದ ನೋಡಿದಾಗ ಕಾಮ ಕ್ರೋಧಾದಿಗಳೆಂಬ ಅರಿ ಷಡ್ವರ್ಗ ಗಳನ್ನು ತುಂಬಿ ಕೊಂಡು ಅದಕ್ಕಿಂತ ಹೆಚ್ಚಾಗಿ ದಪ್ಪ ಇದ್ದೇವೆ.
ನಮ್ಮ ಒಳಗಡೆ ಇರುವ ಆ ದೋಷ ಪೂರ್ಣ ವಾಗಿ ಕ್ಷೀಣಿಸಿತು ಅಂದರೆ ಮಾತ್ರ ಭಗವಂತನ ನಾಮ ಸ್ಮರಣೆ
ಮತ್ತು ಅವನ ಅನುಗ್ರಹ ವಾಗಲಿಕ್ಕೆ ಸಾಧ್ಯ.
ಇಲ್ಲ ವೆಂದರೆ
ಎಷ್ಟು ವರುಷ ಇದ್ದರು ಉಪಯೋಗ ಇಲ್ಲ.
ಈ ಸಂಸಾರವೆಂಬ,ಮಡದಿ ಮಕ್ಕಳು, ಬಂಧು ಬಾಂಧವರೆಂಬ,ಮೋಹದ ಜಾಲದಲ್ಲಿ, ಮತ್ತು ನಾನಾ ವಿಧವಾದ ಲೌಕಿಕದ ವಿಷಯ ಕಾಮನೆಗಳೆಂಬ ಮೊಸಳೆಯ ಬಾಯಿಯಲ್ಲಿ ನಾವು ಸಿಲುಕಿದ್ದೇವೆ.
ಅಂತಹ ನಮಗೆ ಉದ್ದಾರ ಮಾಡಲು ಆ ಶ್ರೀಹರಿಯ ಪಾದಕ್ಕೆ ಮೊರೆ ಹೋಗುವದೇ ಒಂದೇ ದಾರಿ.
ಗಜೇಂದ್ರ ಮೋಕ್ಷ ಎಂದರೆ ಒಂದು ಆನೆಯ ಮತ್ತು ಮೊಸಳೆಯ ಕತೆಯಲ್ಲ.
ಸಂಸಾರ ಬಂಧನದಲ್ಲಿ ಸಿಲುಕಿಕೊಂಡು ಅದರಿಂದ ಮೋಚನೆಗಾಗಿ ಪರಿತಪಿಸುವ ನಮ್ಮ ಕತೆಯಾಗಿದೆ.
ಪ್ರತಿಯೊಂದು ಜೀವಿಯ ಉದ್ದಾರ ಆ ಭಗವಂತ ನಿಂದ ಎಂಬುದನ್ನು ತೋರಿಸಲೋಸುಗ ನಡೆದ ಕಥೆ ಅಂದು.
ಇಂದು ಸಹ ನಮ್ಮ ಉದ್ಧಾರಕ್ಕಾಗಿ ಅವನ ಮೊರೆ ಹೋಗೋಣ.
ಅವನೇ ನಮಗೆ ಉದ್ದಾರ ಮಾಡುವವ.
ಆನೆ ಕೆಸರಿನಲ್ಲಿ ಬಿದ್ದಾಗ ಅದನ್ನು ಸಹಜವಾಗಿ ಎತ್ತಲು ಯಾರಿಂದಲೂ ಸಾಧ್ಯವಿಲ್ಲ. ಯಾರು ಬರುವುದಿಲ್ಲ.
ಅದಕ್ಕೆ ಇನ್ನೊಂದು ಆನೆಯ ಸಹಾಯದಿಂದ ಅದರ ಸೊಂಡಿಲನ್ನು ಬಿಟ್ಟು ಅದರ ಸಹಾಯದಿಂದ ಮೇಲೆ ಎತ್ತುವರು.
ಅಂದರೆ ಅದಕ್ಕಿಂತ ಬಲಶಾಲಿಯಾದ ಇನ್ನೊಂದು ಪ್ರಾಣಿ ಬೇಕು.
ಸಣ್ಣ ಮಗು ಆಟವಾಡುವ ಸಮಯದಲ್ಲಿ ಬಿದ್ದಾಗ ಇನ್ನೊಂದು ಮಗು ಬಂದು ಎತ್ತಿ ಕೊಳ್ಳಲು ಸಾಧ್ಯವೇ??ಅದಕ್ಕೆ ಶಕ್ತಿ ಇದೆಯೇ??
ತಾಯಿ ಅಥವಾ ಬೇರೆ ಯಾರಾದರೂ ಬಂದು ಎತ್ತಿ ಕೊಳ್ಳಲು ಸಾಧ್ಯ.
ಯಾಕೆಂದರೆ ಆ ಮಗುವಿನ ಶಕ್ತಿ ಗಿಂತ ಅವರ ಬಲ ಹೆಚ್ಚು.
ಹಾಗಾಗಿ ಸಂಸಾರವೆಂಬ ಈ ಸಮುದ್ರ ದಲ್ಲಿ, ವಿಷಯ ಕಾಮನೆಗಳೆಂಬ ಮೊಸಳೆಯ ಬಾಯಿಗೆ ಸಿಕ್ಕ ಗಜವೆಂಬ ನಮಗೆ ಉದ್ದಾರ ಮಾಡಲು
ಆ ಭಗವಂತನ ಮೊರೆ ಹೋಗುವದೇ ಒಂದೇ ದಾರಿ.
ಬೇರೆ ಯಾವುದು short cut root ಇಲ್ಲ.
ನಿತ್ಯ ಅವನ ಸ್ಮರಣೆ, ಅವನ ಮಹಿಮೆ ಗಳ ಬಗ್ಗೆ ,ಶ್ರವಣ ಚಿಂತನೆ ,ಗಳು ನಡೆಯಲಿ.
ಇವುಗಳು ಮಾಡಲು ಸಹ ನಾವು ಸ್ವತಂತ್ರ ರಲ್ಲ.
ಅವನೇ ಮಾಡಿಸಬೇಕು. ಮಾಡಿಸುವ ಬುದ್ದಿ ಶಕ್ತಿಯನ್ನು ಆ ಶ್ರೀ ಹರಿಯೇ ಕೊಡಬೇಕು.
