ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಮ್
ಶ್ರೀಸಂಸ್ಥಾನಗೋಕರ್ಣಶ್ರೀರಾಮಚಂದ್ರಾಪುರಮಠ*ಧರ್ಮಕರ್ಮಖಂಡ**
ಗ್ರಹಣ ಕಾಲಾಚರಣೆ | ಗ್ರಹಣ ಆಚರಣೆ
Index of Important Points
(ಧಾರ್ಮಿಕಪಂಚಾಂಗವನ್ನಾಶ್ರಯಿಸಿ ಕಾಲನಿರ್ಣಯ ಹೇಳಲಾಗಿದೆ)
➡️ಆಶ್ವಯುಜ ಅಮಾವಾಸ್ಯಾ = 25.10.22 ನೇ ಮಂಗಳವಾರಸಂಜೆ 5.07 ರಿಂದ 6.29 ರ ತನಕ ಸ್ವಾತೀ ನಕ್ಷತ್ರ ತುಲಾ ರಾಶಿಯಲ್ಲಿ ಸೂರ್ಯನಿಗೆ ಕೇತು ಗ್ರಹಣವು ಸಂಭವಿಸಲಿದೆ.
➡️ಸ್ವಾತೀ, ಚಿತ್ರಾ, ವಿಶಾಖಾ, ಅರ್ದ್ರಾ, ಶತಭಿಷಾ ನಕ್ಷತ್ರದವರಿಗೆ ಹಾಗೂ ತುಲಾ, ವೃಶ್ಚಿಕ, ಮೀನ, ಕರ್ಕಾಟಕ ರಾಶಿಯವರಿಗೆ ಅಶುಭ ಫಲವಿರುತ್ತದೆ.
➡️ಗ್ರಹಣ ಅರಿಷ್ಟ ಪರಿಹಾರವಾಗಿ ಗ್ರಹಣ ಸ್ಪರ್ಶಕಾಲದಲ್ಲಿ ಸಚೈಲ ಸ್ನಾನಮಾಡಿ ರವಿ~ಕೇತುಗ್ರಹ ಜಪ, ಗ್ರಹಣ ಶಾಂತಿ ಹವನ, ದಾನಾದಿಗಳನ್ನು ಯಥಾ ಶಕ್ತಿ ಆಚರಿಸಬಹುದು.
➡️ಅನುಕೂಲ ಇರುವವರು ಸುವರ್ಣ ಸೂರ್ಯಬಿಂಬ ಮತ್ತು ನಾಗಬಿಂಬವನ್ನು ತುಪ್ಪತುಂಬಿದ ತಾಮ್ರದ ಪಾತ್ರೆಯಲ್ಲಿಟ್ಟು ಎಳ್ಳು, ವಸ್ತ್ರ, ದಕ್ಷಿಣೆ ಸಹಿತವಾಗಿ ಸೂರ್ಯಗ್ರಹಣ ಸೂಚಿತ ದೋಷಪರಿಹಾರಾರ್ಥವಾಗಿ ಸಂಕಲ್ಪ ಮಾಡಿಕೊಂಡು ಗ್ರಹಣ ಮೋಕ್ಷ ಕಾಲದಲ್ಲಿ ದಾನ ಮಾಡಬಹುದು.
➡️ಗ್ರಹಣಕಾಲದಲ್ಲಿ ಬ್ರಾಹ್ಮಣರು ಲಭ್ಯವಿಲ್ಲವಾದರೆ ಗ್ರಹಣಕಾಲದಲ್ಲಿ ದಾನಸಂಕಲ್ಪಿಸಿ ಗ್ರಹಣಾನಂತರ ದಾನಮಾಡಬಹುದಾಗಿದೆ. ಆದರೆ ಆ ಸಂದರ್ಭದಲ್ಲಿ ದ್ವಿಗುಣ ಮಾಡಬೇಕೆಂದು ನಿಯಮ.
➡️ ಗ್ರಹಣಸ್ಪರ್ಶವಾದ ಕೂಡಲೇ ಸ್ತ್ರೀ ಪುರುಷರಾದಿಯಾಗಿ ಎಲ್ಲರೂ ಸಚೈಲ ಸ್ನಾನಮಾಡಿ ದೇವೋಪಾಸನೆಯನ್ನು ಮಾಡಬೇಕು.
➡️ಪುರುಷರು ತಮಗೆ ಉಪದೇಶವಿರುವ ಮಂತ್ರಗಳನ್ನು , ಇಷ್ಟದೇವತಾ ಮಂತ್ರ ಜಪ, ಗಾಯತ್ರೀ ಮಂತ್ರವನ್ನೂ ಜಪಿಸಬೇಕು, ಸ್ತ್ರೀಯರು ದೇವತಾ ಸ್ತ್ರೋತ್ರಗಳನ್ನು ಪಠಿಸಬೇಕು.
➡️ಗ್ರಹಣ ಸ್ಪರ್ಶಕಾಲದಲ್ಲಿ ಸ್ನಾನ, ಮಧ್ಯಕಾಲದಲ್ಲಿ ಜಪ, ಹೋಮ, ಗ್ರಹಣ ಬಿಡುವ ಕಾಲದಲ್ಲಿ ದಾನ ಮಾಡಬೇಕು.
➡️ತಣ್ಣೀರಿನಲ್ಲಿ ಸ್ನಾನ ವಿಶೇಷ, ನದೀಸ್ನಾನ ಮತ್ತೂ ವಿಶೇಷ.
➡️ಜಾತಾಶೌಚ, ಮೃತಾಶೌಚವಿದ್ದರೂ ಗ್ರಹಣ ಕಾಲದಲ್ಲಿ ಸ್ನಾನ, ದಾನಗಳನ್ನು ಮಾಡಬೇಕು.
➡️ ರಜಸ್ವಲಾಸ್ತ್ರೀಯರೂ ಗ್ರಹಣಸ್ನಾನವನ್ನು ಮಾಡಬೇಕು.
➡️ಗ್ರಹಣಕಾಲದಲ್ಲಿ ಪ್ರತಿಯೊಬ್ಬರೂ ಉಟ್ಟಬಟ್ಟೆ ಹಾಗೂ ಮುಟ್ಟಿದ ಬಟ್ಟೆಯನ್ನು , ಮುಟ್ಟಿದ ಪಾತ್ರೆ ಮೊದಲಾದ ವಸ್ತುಗಳನ್ನು ತೊಳೆಯಬೇಕು.
➡️ಸೂರ್ಯಗ್ರಹಣಕಾಲವು ಮಂತ್ರೋಪದೇಶ ಪಡೆಯಲು ಅತ್ಯಂತ ಪ್ರಶಸ್ತ ಕಾಲವಾಗಿದೆ. ➡️ ಗ್ರಹಣಕಾಲದಲ್ಲಿ ಮಲಗಿದರೆ ರೋಗಪ್ರಾಪ್ತಿ, ಮೂತ್ರವಿಸರ್ಜನೆ ಮಾಡಿದರೆ ದಾರಿದ್ರ್ಯ, ಆಹಾರ ಸ್ವೀಕರಿಸಿದರೆ ನರಕ ಪ್ರಾಪ್ತಿ ಇತ್ಯಾದಿ ದೋಷಗಳನ್ನು ಹೇಳಿದ್ದಾರೆ.
➡️ಸೂರ್ಯ ಗ್ರಹಣದ ನಂತರ ಶುದ್ಧ ಸೂರ್ಯ ಬಿಂಬದರ್ಶನದ ಬಳಿಕ ಸ್ನಾನವನ್ನು ಮಾಡಿದ ಮೇಲೆ ಶುದ್ಧಿಯಾಗುವುದು. ಆದ್ದರಿಂದ ಪ್ರಸ್ತುತ ಈ ಗ್ರಹಣದಲ್ಲಿ ಸೂರ್ಯನು ಗ್ರಹಣ ಗ್ರಸ್ತನಾಗಿಯೇ ಅಸ್ತನಾಗುವುದರಿಂದ ಅದೇ ದಿವಸ ಅಂದರೆ ಮಂಗಳವಾರ ಸಂಜೆ ಶುದ್ಧ ಸೂರ್ಯ ಬಿಂಬ ದರ್ಶನವಾಗದಿರುವುದರಿಂದ ಮರು ದಿವಸ ಬುಧವಾರ ಬೆಳಗ್ಗೆ 6:25ರ ಸೂರ್ಯೋದಯದ ನಂತರ ಶುದ್ಧ ಸೂರ್ಯ ಬಿಂಬ ದರ್ಶನಾನಂತರ ಸ್ನಾನವನ್ನು ಮಾಡಿದ ನಂತರವಷ್ಟೇ ಶುದ್ಧಿ ಆಗುತ್ತದೆ.ಆ ಬಳಿಕವೇ ನಿತ್ಯಾನುಷ್ಠಾನಗಳನ್ನು, ಆಹಾರ ತಯಾರಿಕೆ ಮತ್ತು ಸೇವನೆಯನ್ನು ಮಾಡಬೇಕು.
➡️ಮಂಗಳವಾರ ಬೆಳಗಿನ ಜಾವ 05.07 ರ ನಂತರ ಆಹಾರ ಸೇವನೆ ನಿಷಿದ್ಧ . ಬುಧವಾರ ಬೆಳಿಗ್ಗೆ ಸೂರ್ಯೋದಯದ 6.25ರ ನಂತರ ಸ್ನಾನವಾದ ಮೇಲೆ ಆಹಾರ ಸ್ವೀಕರಿಸಬೇಕು.
➡️ಬಾಲಕರು, ಅಶಕ್ತರು, ರೋಗಿಗಳು ಮಂಗಳವಾರ ಬೆಳಿಗ್ಗೆ 10. 50 ನಿಮಿಷದ ಒಳಗೆ ಹಾಗೂ ರಾತ್ರಿ 7.00 ರ ನಂತರ ಅಲ್ಪಾಹಾರವನ್ನು / ಫಲಾಹಾರವನ್ನು ಸ್ವೀಕರಿಸಬಹುದು.
➡️24ನೇ ತಾರೀಕು ಸೋಮವಾರ ನರಕಚತುರ್ದಶಿಯಂದು ತಯಾರಿಸಿದ ಬೇಯಿಸಿದ ಪದಾರ್ಥಗಳು, ಭಕ್ಷ ಭೋಜ್ಯಗಳು ಗ್ರಹಣದ ನಂತರ ಸ್ವೀಕರಿಸಲು ಯೋಗ್ಯವಾಗಿರುವುದಿಲ್ಲ.
➡️ಹಾಲು, ಮೊಸರು, ತುಪ್ಪ, ಬೆಲ್ಲ, ಎಣ್ಣೆ, ಉಪ್ಪಿನಕಾಯಿ, ಧವಸ ಧಾನ್ಯಗಳು, ತರಕಾರಿಗಳು, ಹಣ್ಣು ಹಂಪಲುಗಳು ಇತ್ಯಾದಗಳನ್ನು ದರ್ಭೆ- ತುಳಸಿ ಇತ್ಯಾದಿಗಳಿಂದ ಮುಚ್ಚಿಟ್ಟಲ್ಲಿ ಗ್ರಹಣದ ನಂತರವೂ ಬಳಸಬಹುದಾಗಿದೆ.
➡️ಗ್ರಹಣದ ದಿನ ಪ್ರಾತಃಸಂಧ್ಯಾವಂದನೆ ಹಾಗೂ ಮಾಧ್ಯಾಹ್ನಿಕ ಎಂದಿನಂತೆ ಮಾಡಬಹುದಾಗಿದೆ.
➡️ಗ್ರಹಣದ ನಂತರ ಸಾಯಂ ಸಂಧ್ಯಾವಂದನೆಯನ್ನು ಅಶೌಚಕಾಲದಲ್ಲಿ ಮಾಡುವ ಸಂಧ್ಯಾವಂದನೆಯ ನಿಯಮದಂತೆ ಮಾಡಬೇಕು.
➡️ಮನೆದೇವರ ಪೂಜೆ ಬೆಳಗ್ಗೆ ಅಥವಾ ಮಧ್ಯಾಹ್ನ ಮಾಡುವವರು ಎಂದಿನಂತೆ ಮಾಡುವುದು. ಅನ್ನ ನೈವೇದ್ಯ ಮಾಡುವ ಪದ್ಧತಿಯಿರುವಲ್ಲಿ ನೈವೇದ್ಯ ಮಾಡಿ ಆ ನೈವೇದ್ಯವನ್ನು ಗೋವಿಗೆ ಅಥವಾ ಜಲಚರಗಳಿಗೆ ನೀಡುವುದು.
➡️ಸಾಯಂಕಾಲ ಮಾಡುವ ದೇವರ ಪೂಜೆಯನ್ನ ಗ್ರಹಣದ ಆರಂಭಕ್ಕೂ ಮೊದಲೇ ಅಂದರೆ ಐದು ಗಂಟೆ ಏಳು ನಿಮಿಷಕ್ಕಿಂತಲು ಮೊದಲೇ ಮಾಡುವುದು. ಅನಂತರ ದೇವತಾಬಿಂಬಗಳನ್ನು ಸಂಪ್ರದಾಯದಂತೆ ಜಲದಲ್ಲಿ ಮುಳುಗಿಸಿಡುವುದು. ಮರು ದಿವಸ ಬೆಳಗ್ಗೆ ಸ್ನಾನಾನಂತರ ಪುನಃ ದೇವರನ್ನು ಪೀಠದಲ್ಲಿರಿಸಿ ಪೂಜೆ ಇತ್ಯಾದಿಗಳನ್ನು ನಡೆಸುವುದು.
➡️ಅಮಾವಾಸ್ಯೆಯ ದಿವಸ ನಡೆಸುವ ಶ್ರಾದ್ಧವನ್ನು ಮರುದಿವಸ ನಡೆಸುವುದು.
➡️ ಸೋಮವಾರ ನರಕ ಚತುರ್ದಶಿಯ ಹಬ್ಬ, ಲಕ್ಷ್ಮೀ ಪೂಜೆಗಳನ್ನಾಚರಿಸುವುದು.
➡️ಬುಧವಾರದಂದು ಪಾಡ್ಯ ಮಿತಿಯಲ್ಲಿ ಗೋ ಪೂಜೆ ,ಬಲೀಂದ್ರ ಪೂಜೆಯನ್ನಾಚರಿಸುವುದು.
➡️ಮೂರು ದಿವಸಗಳ ಬಲೀಂದ್ರಪೂಜೆ ನಡೆಸುವವರು ಮಂಗಳವಾರದಂದು ಗ್ರಹಣ ಕಾಲಕ್ಕೂ ಮೊದಲೇ ಬಲೀಂದ್ರ ಪೂಜೆಯನ್ನು ಮಾಡಿ ದರ್ಭೆ ಆಚ್ಛಾದನೆ ಮಾಡಬೇಕು. ಮರು ದಿವಸ ಬಲಿಂದ್ರ ಪೂಜೆಯನ್ನು ಮುಂದುವರೆಸುವುದು.
ಶ್ರೀಗುರುಸ್ಮರಣೆಗಳೊಂದಿಗೆಧರ್ಮಕರ್ಮಖಂಡಶ್ರೀರಾಮಚಂದ್ರಾಪುರಮಠ
ಗ್ರಹಣ. ಮತ್ತು ದೀಪಾವಳಿ ಹಬ್ಬ ಅಚರಣೆ*
ದಿನಾಂಕ :-25-10-2022 ನೇ ಮಂಗಳವಾರದಂದು ಗ್ರಾಸ್ತಾಸ್ತ ಕೇತುಗ್ರಸ್ತ ಸೂರ್ಯಗ್ರಹಣ ಇರುತ್ತದೆ.
ಗ್ರಹಣ ಸ್ಪರ್ಶಕಾಕ ಹಗಲು :— 2:28 P.M. (14:28 I.S.T)
ಗ್ರಹಣ ಮಧ್ಯಕಾಲ ಹಗಲು :— 4:30 P.M. ( 16:30 I.ST)
ಗ್ರಹಣ ಮೋಕ್ಷಕಾಲ ಸಂಜೆ:— 6:32 P.M. (18:32 I.S.T )
ಗ್ರಹಣವು ಕರ್ನಾಟಕ ಮತ್ತು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.ಗ್ರಹಣದ ಮೋಕ್ಷವು ಸೂರ್ಯಾಸ್ತದ ನಂತರ ಅಗುವುದರಿಂದ ಗ್ರಹಣದ ಮೋಕ್ಷವು ಕಾಣಿಸುವುದಿಲ್ಲ.
ಭೋಜನ ವಿಚಾರ
ಬಾಲಕರು,ವೃದ್ಧರು,ರೋಗಿಗಳು,ಅಶಕ್ತರು,ಗರ್ಭಿಣಿಯರು, ಬಾಣಂತಿಯರು ದಿ:- 25-10-2022 ಮಂಗಳವಾರ ಹಗಲು 12:00 ಘಂಟೆಯವರೆಗೆ ಆಹಾರ ಸೇವಿಸಬಹುದು.
ತರ್ಪಣ ವಿಚಾರ
ದಿನಾಂಕ:- 25-10-2022 ಮಂಗಳವಾರದಂದು ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣದ ಮಧ್ಯ ಕಾಲದ ವರೆಗು ತರ್ಪಣಾದಿಗಳನ್ನ ನಡೆಸ ಬಹುದು. ದಿನಾಂಕ :- 24-10-2022 ಸೋಮವಾರ ನರಕ ಚರ್ತುದಶಿ ಆಚರಣೆ ಮಡಲು ಬರುವುದಿಲ್ಲ. ನರಕ ಚರ್ತುದಶಿ ಆಚರಣೆ ಮಾಡುವವರು ದಿನಾಂಕ 25-10-2022 ಮಂಗಳವಾರ ಗ್ರಹಣ ಮುಗಿದ ನಂತರ ಸಂಜೆ 6:45 ರ ನಂತರ ಆಚರಿಸತಕ್ಕದ್ದು. ಅಮಾವಾಸ್ಯೆ ಯಲ್ಲಿ ಲಕ್ಷ್ಮೀ ಪೂಜೆಯನ್ನ ಮಾಡುವವರು ಸಹ 25 ನೇ ತಾರೀಖಿನಂದು ಸಂಜೆ 6:45 ರ ನಂತರ ಮಾಡತಕ್ಕದ್ದು.( ವಿಷಯ ಸೂಚನೆ:- 24 ನೇ ತಾರೀಖಿನಂದು ಧನ ಲಕ್ಷ್ಮೀ ಪೂಜೆ ಮಾಡಲಿಚ್ವಿಸುವವರು ಸಂಜೆ 4:30ರ ನಂತರ ಪೂಜೆ ಪ್ರಾರಭಿಸಿ ರಾತ್ರಿ 10:30 ಬಳಿಕ ಅಥವ ಬೇಳಿಗ್ಗೆ 7:30 ರೊಳಗಾಗಿ ವಿಸರ್ಜಿಸಬೇಕು. )ಕೇದಾರೇಶ್ವರ ವ್ರತ ಮಾಡುವವರು ದಿನಾಂಕ 24-10-2022 ಸೋಮವಾರ ವ್ರತ ಮಾಡತಕ್ಕದ್ದು. ( ವಿಷಯ ಸೂಚನೆ:- ಅಮಾವಾಸ್ಯೆ ಯಲ್ಲಿ ಕೇದಾರೇಶ್ವರ ವ್ರತಮಾಡಿ ತಾಯಿ ಗೌರಿಗೆ ಉಡಿ [ನೊಂಬುವರು] ತುಂಬುವವರು ಈ ದಿನ ಸಂಜೆ 4:31 P.M. ನಂತರ ರಾತ್ರಿ 10:30 ರ ತನಕ ಮಾಡಬಹುದು.) ಕೇದಾರೇಶ್ವರ ಗೌರಿಯನ್ನ 24-10-2022 ಸೋಮವಾರ ಸಂಧ್ಯಾ ಕಾಲದಲ್ಲಿ ವಿಸರ್ಜಿಸಬೇಕು.ದಿನಾಂಕ:- 26-10-2022 ಬುಧವಾರ ಗೋ ಪೂಜೆ ಮಾಡುವವರು ಬೆಳಿಗ್ಗೆ 7:30 ರ ಒಳಗಾಗಿ ಅಥವ ಹಗಲು 9:20 A.M ರಿಂದ 12:5 P.M. ವರೆಗೆ ಗೋ ಪಾದ ಪೂಜೆ ಮಾಡಬಹುದು.ರಾಹುಕಾಲ 12:07 P.M. ರಿಂದ 1:35 P.M ವರೆಗೆ ಯಮಗಂಡ ಕಾಲ 7:43 A.M ರಿಂದ 9:11 A.M ವರೆಗೆಗೋವುಗಳು ಸಂಜೆ ಮನೆಗೆ ಬರುವ ಸಮಯ ಸಂಜೆ ( (ಕೊಟ್ಟಿಗೆ ಅಥವ ಹಟ್ಟಿಗೆ ) 5:30P.M ರಿಂದ 7:00 P.M ವರೆಗೆ ಶುಭಸಮಯ ಇರುತ್ತದೆ.ಗ್ರಹಣ
ಶಾಂತಿ ವಿಚಾರ:-
ಚಿತ್ತ,ಸ್ವಾತಿ,ನಕ್ಷತ್ರ ಮತ್ತು ಕನ್ಯಾ,ತುಲಾ,ಮೇಷ,ಮೀನ,ಸಿಂಹ, ರಾಶಿಯವರಿಗೆ ಗ್ರಸ್ತಾಸ್ತ ಕೇತುಗ್ರಸ್ತ ಸೂರ್ಯಗ್ರಹಣ ದೋಷ ಕಾರಿ ಯಾಗುತ್ತದೆ.ಈ ದೋಷ ಪರಿಹಾಕ್ಕೆ ಹೆಸರುಕಾಳು.ಅವರೆಕಾಳು.ಗೋದಿ. ತೊಗರಿಕಾಳು. ಧಾನ್ಯಗಳ ಮೇಲೆ ಕೆಳಗೆ ಕೊಟ್ಟಿರುವ ಈ ಶ್ಲೋಕಗಳನ್ನು ಒಂದು ಕಾಗದದ ಮೇಲೆ ಬರೆದು ಧಾನ್ಯದ ಮೇಲೆ ಇಟ್ಟು ಪೂಜಿಸಿ ಯತಿಗಳಿಗೆ ಕೊಡುವುದರಿಂದ ದೋಷ ಪರಿಹಾರ ಆಗುತ್ತದೆ.
ಶ್ಲೋ–
ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ |ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||ಯೋ ಸೌ ದಂಡಧರೋದೇವಃ ಯಮೋಮಹಿಷವಾಹನಃ |ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |ಸೂರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು |. (ಅಥವ ನವಗ್ರಹ ಹವನ ಮಾಡಿಸಿಕೊಳ್ಳತಕ್ಕದ್ದು)
ಊರು ಗ್ರಹಣ ಕಾಣಿಸುವ ಸಮಯ 1.ಬೆಂಗಳೂರು 5:12 P.M. To 5:56 P.M2.ಬಾಗಲಕೋಟೆ 5:00 P.M. To 6:00 P.M3.ಬಳ್ಳಾರಿ 5:04 P.M. To 5:57 P.M4.ಬೆಳಗಾಂ 5:00 P.M To 6:06 P.M5.ಬಿದರೆ 4:58 P.M. To. 5:51 P.M 6.ಬಿಜಾಪುರ. 4:58 P.M To. 6:00 P.M7.ಚಾಮರಾಜನಗರ. 5:15 P.M To. 6:00 P.M8.ಚಿಕ್ಕಮಗಳೂರು 5:09 P.M To 6:03. P.M9.ಚಿತ್ರದುರ್ಗ. 5:07 P.M. To 6:00 P.M 10.ಮಂಗಳೂರು 5:10 P .M To 6:07 P.M11.ದಾವಣಗೆರೆ 5:06 P.M. To. 6:01 P.M12.ಧಾರವಾಡ. 5:02 P.M To. 6:04 P.M 13.ಗದಗ. 5:02 P.M To. 6:01. P.M14.ಗುಲ್ಬರ್ಗ. 4:58 P.M. To. 5:55 P.M15.ಹಾಸನ. 5:11.P.M. To 6:02 P.M16.ಹಾವೇರಿ 5:04 P.M. To. 6:03 P.M17.ಕೋಲಾರ. 5:12. P.M. To 5:53. P.M18.ಕೊಪ್ಪಳ. 5:03 P.M To. 5:59 P.M19.ಮಂಡ್ಯ. 5:13 P.M To 5:59 P.M20.ಮೈಸೂರು 5:13 P .M. To 6:00 P.M21.ರಾಯಚೂರು 5:02 P.M. To 5:54 P.M22.ರಾಮನಗರ. 5:12 P.M. TO 5:56 P.M23.ಶಿವಮೊಗ್ಗ. 5:07 P.M. To 6:03. P.M24.ತುಮಕೂರು 5:14. P.M. TO 5 :58 P.M25.ಉಡುಪಿ 5:08 P.M. To 6: 07 P.M26.ಕಾರವಾರ. 5:03P.M. To 6:08 P.M27.ಯಾದಗಿರಿ 5:00 P.M To 5:54 P.M28.ಮಡಿಕೇರಿ 5:12 P.M To 6:04 P.M29.ಭೂಪಾಲ್ 4:42 P.M To 5:47 P.M30.ಭುವನೇಶ್ವರ. 4:56 P.M To. 5:16 P.M31ಚಂಡಿಘರ್ 4:24 P.M To 5:41 P.M32.ಚೆನ್ನೈ 5:14 P.M To 5:45 P.M33.ಡೆಹರಾಡೂನ್ 4:26 P.M. To 5:37 P.M34.ದೆಹಲಿ 4:29 P.M To 5:42 P.M35.ಗಾಂಧಿನಗರ. 4:38 P.M To 6:05 P.M36.ಗ್ಯಾಂಗಟಕ್ 4:41 P.M To 4:58 P.M37.ಹೈದರಾಬಾದ್ 4:59 P.M To 5:48 P.M38.ಜೈಪುರ. 4:32 P.M To 5:49 P.M39.ಕಲ್ಕತ್ತ. 4:52 P.M To 5:04 P.M40.ಲಕ್ಲೋನೊ 4:36 P.M To 5:29 P.M 41.ಮುಂಬೈ 4:50 P.M To 6:09 P.M42.ಪಣಜಿ 5:00 P.M To 6:06 P.M43.ಪಾಟ್ನ. 4:43 P.M To 5:14 P.M44.ಪಾಂಡಿಚೇರಿ 5:18 P.M. To 5:48 P.M45.ರಾಯಮರ. 4:51 P.M To 5:32 P.M46.ರಾಂಚಿ 4:48 P.M To 5:15 P.M47.ಸಿಮ್ಹಾಲ 4:23P.M. To 5:39 P.M48.ಶ್ರೀನಗರ. 4:14 P.M. To 5:45 P.M49.ತಿರುವನಂತಪುರ. 5:30 P.M To 6:02 P.M50.ಗಯಾ 4:45 P.M To 5:15 P.M51.ವಾರಣಾಸಿ 4:42 P.M. To 5:22 P.M
eclipse and Diwali celebration*
Date :-25-10-2022 There will be Grastasta Ketugrasta Solar Eclipse on Tuesday. Eclipse Tangent Day :— 2:28 P.M. (14:28 I.S.T.) Eclipse Midday :— 4:30 P.M. (16:30 I.ST) Eclipse Mokshakala Evening:— 6:32 P.M. (18:32 I.S.T.)
There will be an eclipse celebration as the eclipse will be visible to Karnataka and India. Grahan Moksha is not visible as Grahan Moksha occurs after sunset.About dinner Children, old people, patients, disabled, pregnant women, elderly can eat food on:- 25-10-2022 Tuesday till 12:00 noon.
Shloka
yō sau vajradharōdēvaḥ ādityānāṁ prabhurmataḥ |sūragrahōparāgōt’tha grahapīḍāṁ vyapōhatu ||yō sau daṇḍadharōdēvaḥ yamōmahiṣavāhanaḥ |sūragrahōparāgōt’tha grahapīḍāṁ vyapōhatu |yō sau śūladharō dēvaḥ pinākī vr̥ṣavāhanaḥ |sūragrahōparāgōt’tha grahapīḍāṁ vyapōhatu |
