ಜ್ಯೋತಿರ್ಲಿಂಗ | Jyotirlinga

Maha Jyotirlingam shrines according to Dwadasha Jyotirlinga Stotram

According to Shivapurana there are 64 Jyotirlingas, in which 12 are considered most sacred.

Saurashtre Somanatham Cha Shrishaile Mallikarjunam |
Ujjaiyinyaam Mahakaalam Omkaretwamaamaleshwaram ||1||

Paralyam Vaidyanatham Cha Dakinyam Bheemashankaram |
Setubandhe Tu Ramesham Nagesham Darukavane ||2||

Varanaasyaam Tu Vishvesham Tryambakam Gautamithate |
Himalaye Tu Kedaaram Grishmesham tu vishaalake ||3||

eytani Jyotirlingani Sayam Pratah Patennaraha |
Saptajanma Kritam Papam Smaranena Vinashyati ||4||

Laghu Dwadasha Jyotirlinga Stotram
  • Somanath (saurashtra, Gujarath)
  • Mallikarjuna (Srishailam, Andra pradesh)
  • Mahakaaleshwara (Ujjain, Madhya Pradesh)
  • Omkareshwara (Khandwa, Madhya pradesh)
  • Vaidhyanath (Deoghar, Jharkhand)
  • Bhimashankar (Khed, Pune ,Maharashtra)
  • Rameshwaram (Tamil Naadu)
  • Nageshwara (Near Dwaraka Gujarath)
  • Vishwanatha (Vaaranasi, Uttar Pradesh)
  • Triambakeshwara (Nashik, Maharashtra)
  • Kedaarnath (Uttarakhand)
  • grishneshwara (Aurangabad, Maharashtra)

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರದ ಪ್ರಕಾರ ಮಹಾ ಜ್ಯೋತಿರ್ಲಿಂಗ ದೇವಾಲಯಗಳು

  • ಸೋಮನಾಥ್ (ಸೌರಾಷ್ಟ್ರ, ಗುಜರಾತ್)
  • ಮಲ್ಲಿಕಾರ್ಜುನ (ಶ್ರೀಶೈಲಂ, ಆಂಧ್ರ ಪ್ರದೇಶ)
  • ಮಹಾಕಾಲೇಶ್ವರ (ಉಜ್ಜಯಿನಿ, ಮಧ್ಯಪ್ರದೇಶ)
  • ಓಂಕಾರೇಶ್ವರ (ಖಾಂಡ್ವಾ, ಮಧ್ಯಪ್ರದೇಶ)
  • ವೈದ್ಯನಾಥ್ (ದಿಯೋಘರ್, ಜಾರ್ಖಂಡ್)
  • ಭೀಮಾಶಂಕರ್ (ಖೇಡ್, ಪುಣೆ, ಮಹಾರಾಷ್ಟ್ರ)
  • ರಾಮೇಶ್ವರಂ (ತಮಿಳುನಾಡು)
  • ನಾಗೇಶ್ವರ (ದ್ವಾರಕಾ ಹತ್ತಿರ ಗುಜರಾತ್ )
  • ವಿಶ್ವನಾಥ (ವಾರಣಾಸಿ, ಉತ್ತರ ಪ್ರದೇಶ)
  • ತ್ರಯಂಬಕೇಶ್ವರ (ನಾಸಿಕ್, ಮಹಾರಾಷ್ಟ್ರ)
  • ಕೇದಾರನಾಥ (ಉತ್ತರಾಖಂಡ)
  • ಗ್ರಿಷ್ಣೇಶ್ವರ (ಔರಂಗಾಬಾದ್, ಮಹಾರಾಷ್ಟ್ರ)

ವಿಜ್ಞಾನ ಮತ್ತು ಜ್ಯೋತಿರ್ಲಿಂಗ

ಭಾರತದ ಅಪರೂಪದ ಸಂಸ್ಕೃತಿ, ನಮ್ಮ ಪೂರ್ವಜರಿಗಿದ್ದ ಅದ್ವಿತೀಯ ವಿಜ್ಞಾನ ಹಾಗು ಖಗೋಳಶಾಸ್ತ್ರದಲ್ಲಿ ಅವರಿಗಿದ್ದ ಪಾಂಡಿತ್ಯವನ್ನು ಒಂದೇ ಒಂದು ಉದಾಹರಣೆಯ ಮೂಲಕ ತಿಳಿಸಿ ನಮ್ಮಲ್ಲಿ ಚಾಣಾಕ್ಷತನ ಎಷ್ಟಿದೆ ಅನ್ನೋದನ್ನ ಹೇಳುತ್ತೇನೆ.

ಇದನ್ನ ಓದಿದ ನಂತರ ನಿಮಗೆ ನಮ್ಮ ಸಂಸ್ಕೃತಿ, ಬುದ್ಧಿಮತ್ತೆಯಿಂದ ನಿಮಗೆ ಹಿಂದೂ ಅಂತ ಹೇಳಿಕೊಳ್ಳೋಕೆ ಹೆಮ್ಮೆಯಂತೂ ಇಮ್ಮಡಿಯಾಗುತ್ತೆ.

‘ಮಹಾಕಾಲ’ದಿಂದ ಭಾರತದಲ್ಲಿರುವ ಶಿವನ ಜ್ಯೋತಿರ್ಲಿಂಗಗಳ ನಡುವಿನ ಅದ್ಭುತ ಸಂಬಂಧ ರಹಸ್ಯ, ರೋಚಕ ಹಾಗು ನಂಬಲಸಾಧ್ಯ.

ಈ ಭೂಮಂಡಲ ಅಥವಾ ಪೃಥ್ವಿಯ ಕೇಂದ್ರಸ್ಥಾನ(Centre of the Earth) ಉಜ್ಜಯಿನಿ ಅನ್ನೋದನ್ನ ನಮ್ಮ ಸನಾತನಿಗಳು ಯಾವಾಗಲೋ ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದರು, ಅದು ನಿಜವಂತ ಇತ್ತೀಚಿನ ಅನೇಕ ಸಂಶೋಧನೆಗಳೂ ಒಪ್ಪಿವೆ. ಈ ಉಜ್ಜಯಿನಿಗೂ ನಮ್ಮ ಪೂರ್ವಜರಿಗೂ ಅವರಿಗಿದ್ದ ಖಗೋಳಶಾಸ್ತ್ರದ ಪಾಂಡಿತ್ಯಕ್ಕೂ ಸಂಬಂಧವೇನಂತ ಯೋಚಸುತ್ತಿದೀರಾ.

ಅದಕ್ಕೂ ಕಾರಣವಿದೆ. ಭಾರತದಲ್ಲಿರುವ ಶೇಷ ಜ್ಯೋತಿರ್ಲಿಂಗಗಳ ಸಂಬಂಧ ಉಜ್ಜಯಿನಿಯೊಂದಿಗಿದೆ.

ಅದನ್ನು ತಿಳಿಯೋಣ ಬನ್ನಿ

ಉಜ್ಜಯಿನಿಯಿಂದ ಶೇಷ ಜ್ಯೋತಿರ್ಲಿಂಗಗಳಿಗಿರುವ ದೂರವೂ(in KM’s) ಕೂಡ ಒಂದು ರೋಚಕವೇ.

ಉಜ್ಜಯಿನಿಯಿಂದ

ಸೋಮನಾಥ – 777km

ಓಂಕಾರೇಶ್ವರ – 111km

ಭೀಮಾಶಂಕರ – 666km

ಕಾಶಿವಿಶ್ವನಾಥ – 999km

ಶ್ರೀಶೈಲ ಮಲ್ಲಿಕಾರ್ಜುನ – 999km

ಕೇದಾರನಾಥ – 888km

ತ್ರಿಯಂಬಕೇಶ್ವರ – 555km

ಬೈಜನಾಥ – 999km

ರಾಮೇಶ್ವರಂ – 1999km

ಘೃಷ್ಣೇಶ್ವರ -555km

ಸನಾತನ ಧರ್ಮದಲ್ಲಿ ಕಾರಣವಿಲ್ಲದ ಯಾವ ಸಂಗತಿಗಳೂ ಇಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ ಹಾಗು ಇದನ್ನ ನಮ್ಮ ಪೂರ್ವಜರು ಎರಡೂವರೆ ಸಾವಿರ ವರ್ಷ ಅದಕ್ಕಿಂತ ಮುಂಚೆಯೇ ತಿಳಿಸಿದ್ದರು.

ಜ್ಯೋತಿರ್ಲಿಂಗಗಳು ಹಾಗು ಅವುಗಳು ಸ್ಥಾಪಿಸಿರುವ ಜಾಗಗಳು ನಿಜಕ್ಕೂ ವೈಜ್ಞಾನಿಕವಾಗಿ ಭಾರತದ ರಕ್ಷಣೆ ಮಾಡುತ್ತಿವೆ ಎಂದರೆ ನೀವು ನಂಬುತ್ತೀರಾ?

ಹೌದು ಭಾರತದಲ್ಲಿನ ಜ್ಯೋತಿರ್ಲಿಂಗಗಳಿರುವ ಪ್ರದೇಶಗಳು ಅತಿ ಹೆಚ್ಚು ರೇಡಿಯೋ ಆ್ಯಕ್ಟಿವ್ ಕಿರಣಗಳನ್ನ ಸೂಸುವ ಪ್ರದೇಶಗಳಾಗಿವೆ. ಈ ರೇಡಿಯೋ ಆ್ಯಕ್ಟಿವ್ ಕಿರಣಗಳಿಂದ ಮನುಷ್ಯನಿಗೆ ಅತಿ ಅಪಾಯಕಾರಿಯಾಗಿದ್ದು ಇವುಗಳ ನಿಯಂತ್ರಣಕ್ಕೆಂದೇ ನಮ್ಮ ಪೂರ್ವಜರು ರೇಡಿಯೋ ಆ್ಯಕ್ಟಿವ್ ತರಂಗಗಳಿರುವ ಪ್ರದೇಶಗಳಲ್ಲಿ ಜ್ಯೋತಿರ್ಲಿಂಗಗಳ ಪ್ರತಿಷ್ಠಾಪನೆ ಮಾಡಿದ್ದರು.

ಪಂಚಾಮೃತವೆಂದು ನಾವು ಶಿವಲಿಂಗಕ್ಕೆ ಅಭಿಷೇಕ ಮಾಡೋದರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ, ಆದರೆ ಜ್ಯೋತಿರ್ಲಿಂಗಗಳಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸತತವಾಗಿ ಅಭಿಷೇಕ ಮಾಡುವುದರ ಉದ್ದೇಶವಾದರೂ ಏನು ಅನ್ನೋದು ನಿಮಗೆ ಗೊತ್ತೆ?

ಅತಿ ಹೆಚ್ಚು ರೇಡಿಯೋ ಆ್ಯಕ್ಟಿವ್ ತರಂಗಗಳನ್ನ ಸೂಸುವ ಪ್ರದೇಶದಲ್ಲಿ ಶಿವಲಿಂಗವನ್ನ ಸ್ಥಾಪನೆ ಮಾಡಿ ಅದಕ್ಕೆ ಪಂಚಾಮೃತ ಅಭಿಷೇಕ, ಅಂದರೆ ಹಾಲು ತುಪ್ಪ ಮೊಸರು ಗೋಮಯ ಬೆಣ್ಣೆ ಹೀಗೆ ಅಭಿಷೇಕ ಮಾಡುವುದರಿಂದ ರೇಡಿಯೋ ಆ್ಯಕ್ಟಿವ್ ತರಂಗಗಳನ್ನ ತಡೆಯಬಹುದು.

ಈ ಕಾರಣಕ್ಕಾಗೇ ಜ್ಯೋತಿರ್ಲಿಂಗಗಳಿರೋ ಪ್ರದೇಶಗಳಲ್ಲಿ ನಿರಂತರವಾಗಿ ಅಭಿಷೇಕ ಮಾಡುತ್ತ ತರಂಗಗಳ ನಿಯಂತ್ರಣ ಮಾಡಬಹುದೆಂದು ಹಾಗು ಈ ವೈಜ್ಞಾನಿಕತೆಯನ್ನ ಸಾಮಾನ್ಯ ಜನರಿಗೆ ಹೇಳಿದರೆ ಅರ್ಥವಾಗುವುದಿಲ್ಲ ಅನ್ನೋ ಕಾರಣಕ್ಕೆ ನಮ್ಮ ಪೂರ್ವಜರು ದೇವರು, ಶಿವಲಿಂಗ ಅಂತ ಆಧ್ಯಾತ್ಮಿಕ, ಪೌರಾಣಿಕ ಕತೆಗಳ ಮೂಲಕ ನಮಗೆ ಇದರ ಅರಿವು ಮಾಡಿಸಿದ್ದರು.

ಉಜ್ಜಯಿನಿ ಈ ಭೂಮಂಡಲದ ಮಧ್ಯಭಾಗ ಎಂದು ನಮ್ಮ ಪೂರ್ವಜರೂ ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದರು, ನಂತರ ಬಂದ ಬ್ರಿಟಿಷ್ ವಿಜ್ಞಾನಿಗಳು 100 ವರ್ಷಗಳ ಹಿಂದೆ ಪೃಥ್ವಿಯ ಮೇಲೆ ಎಳೆದ ಕಾಲ್ಪನಿಕ ರೇಖೆಯ ಮಧ್ಯಭಾಗವು(center place of the earth) ಕೂಡ ಉಜ್ಜಯಿನಿಯನ್ನೇ ಸೂಚಿಸಿತ್ತು ಅನ್ನುವುದು ಕೂಡ ಸಾವಿರಾರು ವರ್ಷಗಳ ಹಿಂದೆಯೇ ನಮ್ಮಲ್ಲಿದ್ದ ಖಗೋಳ ಶಾಸ್ತ್ರ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈಗಲೂ ಸೂರ್ಯನ ಹಾಗು ಅಂತರಿಕ್ಷದ ಮಾಹಿತಿಗಾಗಿ ಜಗತ್ತಿನ ವಿಜ್ಞಾನಿಗಳು ಭಾರತದ ಉಜ್ಜಯಿನಿಗೇ ಬರುತ್ತಾರೆ.

ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಏನಂದ್ರೆ ದೇಶದಲ್ಲಿರುವ ಹನ್ನೆರಡೂ ಜ್ಯೋತಿರ್ಲಿಂಗಗಳಿರುವ ಜಾಗವನ್ನ ಮ್ಯಾಪಿನಲ್ಲಿ ಗುರುತು ಹಾಕಿ ಅವುಗಳನ್ನೊಮ್ಮೆ ಪೆನ್ಸಿಲ್ ಮೂಲಕ ಗೆರೆಯೆಳೆದು ಜೋಡಿಸಿ,‌ ಆಗ ನಿಮ್ಮ ಕಣ್ಣಿಗೆ ಕಾಣುವುದೇ ಶಂಖ!! ಹೌದು ಬೇಕಿದ್ದರೆ ಟ್ರೈ ಮಾಡಿ ನೋಡಿ

ಭಾರತದಲ್ಲಿ ಇಲ್ಲಿಯವರೆಗೂ ಆಯುರ್ವೇದ, ವಿಜ್ಞಾನ, ಖಗೋಳಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ಜೀವನ ಪದ್ಧತಿ ಸಮೇತ ಸಿಕ್ಕ ಸುಮಾರು 12,000 ಪುರಾತನ ಗ್ರಂಥಗಳಲ್ಲಿ ಅಮೇರಿಕ ನಾಲ್ಕು ಸಾವಿರ ಹಾಗು ಜರ್ಮನಿ ಎರಡು ಸಾವಿರದ ಏಳು ನೂರು ಗ್ರಂಥಗಳ ಮೇಲೆ ಪೆಟೆಂಟ್ ಪಡೆದು ನಮ್ಮ ಭಾರತದ ಸಂಸ್ಕೃತಿಯನ್ನ ವಿಶ್ವವ್ಯಾಪಿ ಮಾಡುತ್ತ ಲಾಭ ಮಾಡಿಕೊಳ್ಳುತ್ತಿವೆ

ಆದರೆ ನಮ್ಮದೇ ಇತಿಹಾಸವನ್ನ ನಮ್ಮದೇ ಪ್ರಾಚೀನ ಗ್ರಂಥಗಳ ಬಗ್ಗೆ ನಮಗೆ ಗೊತ್ತರದಿರುವುದು ಅಥವಾ ತಿಳಿದುಕೊಳ್ಳಲೂ ಪ್ರಯತ್ನ ಮಾಡದಿರುವುದು ಮಾತ್ರ ನಿಜಕ್ಕೂ ವಿಷಾದನೀಯ ಹಾಗು ನಾಚಿಕೆಗೇಡಿನ ಸಂಗತಿಯೇ.

ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ ನಮ್ಮ ಸನಾತನ ಹಿಂದೂ ಧರ್ಮ ವೈಜ್ಞಾನಿಕವಾಗಿಯೇ ನಿರ್ಮಿಸಿದಂತ ಧರ್ಮವಾಗಿದ್ದು ಇದನ್ನ ಯಾರು ಎಷ್ಟೇ ಹೀಗಳೆದರು, ನಿರಾಕರಿಸಿದರೂ ಇದು ವಿಶ್ವವ್ಯಾಪಿ ಸಾರ್ವತ್ರಿಕ ಸತ್ಯ ಆದರೆ ಇದನ್ನ ನಾವು ಪೆಟೆಂಟ್ ಮಾಡಿಸಿಲ್ಲ ಅಷ್ಟೇ.

ನಮ್ಮತನ, ಇತಿಹಾಸ, ಸಂಸ್ಕೃತಿ ಆಚಾರ ವಿಚಾರ ನಾವು ಮರೆತರೆ ನಾವು ಜಗತ್ತಿನಲ್ಲಿ ಕಾಲ ಕಸಕ್ಕಿಂತ ಕಡೆಯಾಗುತ್ತೇವೆ. ಬನ್ನಿ ಈಗಲಾದರೂ ಇದರ ಬಗ್ಗೆ ಗಮನಹರಿಸಿ ನಮ್ಮ ಶಕ್ತಿಯನ್ನ ಬೌದ್ಧಿಕ ಸಾಮರ್ಥ್ಯವನ್ನ ಜಗತ್ತಿನೆದುರು ಅನಾವರಣ ಗೊಳಿಸೋಣ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ