ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯ ಮಹತ್ವ | The significance of Sri Satyanarayana Swamy Puja in kannada

ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯ ಮಹತ್ವ | The significance of Sri Satyanarayana Swamy Puja in kannada

🌻🌻 ಸತ್ಯನಾರಾಯಣ ವಿಷ್ಣುವಿನ ಒಂದು ರೂಪ. ಸತ್ಯನಾರಾಯಣನು ನವಗ್ರಹಗಳಿಗೆ ಅಧಿಪತಿ, ನವಗ್ರಹಗಳನ್ನು ನಿಯಂತ್ರಿಸುತ್ತಾನೆ. ನಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಗ್ರಹಗತಿಗಳು ತಮ್ಮ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ. ಸತ್ಯನಾರಾಯಣನನ್ನು ಪೂಜಿಸಿದರೆ, ಗ್ರಹಗಳ ಕೆಟ್ಟ ಪ್ರಭಾವದಿಂದ ಪಾರು ಮಾಡಿ, ಎಲ್ಲ ಒಳ್ಳೆಯದಾಗುವಂತೆ ಅನುಗ್ರಹಿಸುತ್ತಾನೆ. ಆದ್ದರಿಂದ ಸತ್ಯನಾರಾಯಣ ವ್ರತವನ್ನು ಎಲ್ಲ ಶುಭ ಸಮಾರಂಭಗಳಲ್ಲಿ ಮಾಡುವ ಪದ್ಧತಿ ಇದೆ.

🌻🌻 ಮದುವೆ, ಗೃಹಪ್ರವೇಶ, ಹುಟ್ಟುಹಬ್ಬ, ಹೊಸ ಕೆಲಸ / ವ್ಯಾಪಾರ ಶುರು ಮಾಡುವ ಮುನ್ನ, ವಿದ್ಯಾಭ್ಯಾಸ / ಪರೀಕ್ಷೆಯ ಸಮಯ ಇತ್ಯಾದಿ ಸಂದರ್ಭಗಳಲ್ಲಿ ಈ ಪೂಜೆಯನ್ನು ಮಾಡುತ್ತಾರೆ. ತಮ್ಮ ಕಾರ್ಯಗಳಲ್ಲಿ ಯಶಸ್ಸು ಕೊಡು ಎಂದು ಪ್ರಾರ್ಥನೆ ಮಾಡುತ್ತಾರೆ. ಸಾಮಾನ್ಯವಾಗಿ ಈ ವ್ರತವನ್ನು ಹುಣ್ಣಿಮೆ / ಪೂರ್ಣಿಮಾ ದಿನ ಮಾಡುತ್ತಾರೆ. ಇದಲ್ಲದೇ ನಿಮ್ಮ ಮನಸ್ಸಿಗೆ ಪೂಜೆ ಮಾಡಬೇಕು ಎಂದು ಅನಿಸಿದರೆ, ಯಾವ ದಿನ ಬೇಕಾದರೂ ಈ ಪೂಜೆಯನ್ನು ಮಾಡಬಹುದು.

🌻🌻 ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸಿ. ಒಂದು ಸಣ್ಣ ಚೊಂಬಿಗೆ ನಿಮ್ಮದೇ ವಡವೆ (ಸರ) ಹಾಕಿ, ಒಳಗೆ ಸ್ವಲ್ಪ ನೀರು ಹಾಕಿ, ಚೊಂಬಿನ ಬಾಯಿಗೆ 2 ವೀಳ್ಯದ ಎಲೆ ಇಟ್ಟು, ಮೇಲೆ ಒಂದು ತೆಂಗಿನಕಾಯಿ ಇಡಬೇಕು. ಒಂದು ಹೊಸ ಶಲ್ಯವನ್ನು ಈ ಕಳಶದ ಪಾತ್ರೆಯ ಸುತ್ತ ಹೊದಿಸಿ. ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರ ಮೇಲೆ ಈ ಕಲಶ ಸ್ಥಾಪನೆ ಮಾಡಬೇಕು. ಇದರೊಂದಿಗೆ ಇನ್ನೊಂದು ತಟ್ಟೆಯಲ್ಲಿ ನವಗ್ರಹ ಧಾನ್ಯಗಳನ್ನು ಸಣ್ಣ ದೊನ್ನೆಯಲ್ಲಿ ಇಡಬೇಕು. ಪ್ರತಿ ಧಾನ್ಯದ ಮೇಲೆ ಒಂದು ಹಣ್ಣು, ದಕ್ಷಿಣೆ ಇಡಬೇಕು.ಈ ಧಾನ್ಯಗಳನ್ನು ಸರಿಯಾದ ದಿಕ್ಕಿಗೆ ಇಡಬೇಕು.

🌷🌷 ಪೂಜಾ ವಿಧಿ ಮತ್ತು ಸಾಮಗ್ರಿಗಳು. 🌷🌷

🌻🌻 ಮೊದಲು ಗಣಪತಿ ಪೂಜೆ ಮಾಡಬೇಕು. ನಂತರ ನವಗ್ರಹ ಪೂಜೆ ಮಾಡಿ, ಆಮೇಲೆ ಸತ್ಯನಾರಾಯಣನ ಪೂಜೆ ಮಾಡಬೇಕು. ಶ್ರೀ ಸತ್ಯನಾರಾಯಣ ಅಷ್ಟೋತ್ತರ. ಜೊತೆಗೆ ಲಕ್ಷ್ಮಿಅಷ್ಟೋತ್ತರ ಹೇಳಿ, ಲಕ್ಷ್ಮಿ ಪೂಜೆಯನ್ನು ಮಾಡಬೇಕು. ನೈವೇದ್ಯಕ್ಕೆ ಸಪಾತ ಭಕ್ಷ್ಯ / ಸಪಾದ ಭಕ್ಷ್ಯ (ಕೇಸರಿ ಭಾತ್ / ಸಜ್ಜಿಗೆ) ಮಾಡಿಕೊಳ್ಳಬೇಕು. ಸಪಾದ ಭಕ್ಷ್ಯ ಮಾಡುವ ವಿಧಾನ ಇಲ್ಲಿದೆ. ಇದನ್ನು ರವೆ, ಸಕ್ಕರೆ, ತುಪ್ಪ, ಹಾಲು, ಬಾಳೆಹಣ್ಣು ಉಪಯೋಗಿಸಿ ಮಾಡಬೇಕು.

🌻🌻 ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸತ್ಯನಾರಾಯಣ ವ್ರತ ಕಥೆಯಲ್ಲಿ ೫ ಅಧ್ಯಾಯ ಇದೆ. ಕೆಲವರು ಪ್ರತಿ ಅಧ್ಯಾಯ ಮುಗಿದ ಮೇಲೆ ಮಂಗಳಾರತಿ ನೈವೇದ್ಯ ಮಾಡುತ್ತಾರೆ. ಪೂಜೆಯ ನಂತರ ಸತ್ಯನಾರಾಯಣ ಪ್ರಾಸದ ಸ್ವೀಕಾರ ಮಾಡಿ. ಪೂಜೆಗೆ ಇಟ್ಟಿರುವ ನವಧಾನ್ಯಗಳು, ಹೊದಿಸಿರುವ ಶಲ್ಯ ಮತ್ತು ದಕ್ಷಿಣೆಯನ್ನು ಸತ್ಪಾತ್ರರಿಗೆ ದಾನ ಕೊಡಬೇಕು.

2 thoughts on “ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯ ಮಹತ್ವ | The significance of Sri Satyanarayana Swamy Puja in kannada”

  1. Hi your blog is worth appreciating and it has lot of useful information .
    Om Pooja Path offers several reasonably priced Pooja bundles for the GrihaPravesh Pooja, Bhoomi Pooja, Satyanarayan Pooja, and other Poojas. Help you find the most qualified, competent, and professional North Indian Pandit in line with your traditions and customs. In order to ensure that the ceremony is carried out in accordance with our customs and rituals, Om Pooja Path offers a trained, experienced pandit via our online pandit booking service
    Om Pooja Path is the best option for you if you’re seeking a North India Pandit for marriage in Bangalore.
    For more information visit our website :https://ompoojapath.com/book-the-best-north-indian-pandit-near-me-om-pooja-path/

  2. Hi your blog is worth appreciating and it has lot of useful information.
    If you are looking for north Indian pandit in Bangalore for pooja then OM POOJA PATH provides online pandit booking services throughout Bangalore.
    Om Pooja Path offers several reasonably priced Pooja bundles for the GrihaPravesh Pooja, Bhoomi Pooja, Satyanarayan Pooja, and other Poojas. Om Pooja Path offers a trained, experienced pandit via our online pandit booking service. Om Pooja Path is the best option for you if you’re seeking a North India Pandit for marriage in Bangalore.
    For more information visit our website :https://ompoojapath.com/book-the-best-north-indian-pandit-near-me-om-pooja-path/

Leave a Comment

Your email address will not be published. Required fields are marked *