ಋಷಿ | Rushi | Sage

ಋಷಿ ಪರಂಪರೆ

ನಮ್ಮ ಋಷಿ ಪರಂಪರೆಯೊಳಗೊಂದು ಸುತ್ತು “ಋಷಿಗಳ ಪರಿಚಯ”

ಋಷಿ ಎನ್ನುತ್ತಿದ್ದಂತೆ ಕಾಡಿನ ಯಾವುದೋ ಮೂಲೆಯಲ್ಲಿ ಕಾಷಾಯ ವಸ್ತ್ರಧಾರಿಯಾಗಿ ಕಟ್ಟಿದ ಶಿಖೆ- ನೀಳವಾದ ಗಡ್ಡವನ್ನು ಬಿಟ್ಟಿರುವ, ಕೈಯಲ್ಲಿ ಕಮಂಡಲವನ್ನು ಧರಿಸಿದ ವ್ಯಕ್ತಿಯ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ.

ಋಷಿಯಾಗಲು ಇದಿಷ್ಟೇ ಅಂಶಗಳು ಸಾಕಾಗದು. ಒಂದು ನಿರ್ದಿಷ್ಟ ವಿಷಯದ ಕುರಿತಾಗಿ ಆಳವಾದ ಜ್ಞಾನವನ್ನು ಪಡೆಯಲು ಅರ್ಹನಿಶಿ ಅವಿರತ ಪ್ರಯತ್ನ(ತಪಸ್ಸು) ಮಾಡುತ್ತಾ ಸತ್ಯವನ್ನು ಅರಿತವನನ್ನು ಋಷಿ ಎನ್ನಬಹುದು.
ಲೋಕದ ಹಿತಕ್ಕಾಗಿ ಸಮಯಾಸಮಯಗಳೆನ್ನದೆ ಶ್ರಮಿಸುವವರೇ ಋಷಿಗಳು. ಅವರು ಹಿಂದೂ ಇದ್ದರೂ, ಈಗಲೂ ಇದ್ದಾರೆ, ಮುಂದೂ ಇರುತ್ತಾರೆ. ಈಗಿನ ವಿಜ್ಞಾನಿಗಳು ಒಂದರ್ಥದಲ್ಲಿ ಋಷಿಗಳೇ, ಹಿಂದಿನ ಕಾಲದ ಋಷಿಗಳು ವಿಜ್ಞಾನಿಗಳೂ ಹೌದು.
ಇದಕ್ಕೆ ಜಾತಿ, ವರ್ಣ, ದೇಶ, ಭಾಷೆಯ ಲೆಕ್ಕಾಚಾರ ಮಾಡಬಾರದು.

ಭಾರತದಲ್ಲಿ ಋಷಿ ಎಂಬ ಪದದ ಮೂಲಕ ಒಂದು ಪರಂಪರೆ ಅವ್ಯಾಹತವಾಗಿ ಬೆಳೆದು ಬಂದಿರುವುದರಿಂದ ಅವರ ಮಹತ್ವ, ಕೊಡುಗೆಯನ್ನು ನಾವು ಅರಿಯಬೇಕಾಗಿದೆ.

ಭಾರತದ ಋಷಿಗಳನ್ನು ಏಳು ರೀತಿಯಲ್ಲಿ ವಿಂಗಡಿಸಲಾಗಿದೆ. ಅವರವರ ಗುಣ, ಸಾಧನೆಗಳೇ ಈ ವಿಂಗಡಣೆಗಳಿಗೆ ಆಧಾರ.

  1. ಬ್ರಹ್ಮರ್ಷಿ,
  2. ದೇವರ್ಷಿ,
  3. ಮಹರ್ಷಿ,
  4. ಪರಮರ್ಷಿ,
  5. ಕಾಂಡರ್ಷಿ,
  6. ಶ್ರುತರ್ಷಿ,
  7. ರಾಜರ್ಷಿ


ಹೀಗೆ ವೇದ, ಉಪನಿಷತ್ತು, ಕಾವ್ಯ, ಪುರಾಣ, ಆಗಮ ಮತ್ತು ಶಾಸ್ತ್ರಗ್ರಂಥಗಳಲ್ಲಿಋಷಿಗಳನ್ನು ವಿಭಾಗಿಸಲಾಗಿದೆ.

ಬ್ರಹ್ಮರ್ಷಿ
🔥ಬ್ರಹ್ಮ, ಬ್ರಹ್ಮಾಂಡದ ಕುರಿತು ಸಂಪೂರ್ಣ ಆತ್ಮಜ್ಞಾನವನ್ನು ಪಡೆದವನು.

ದೇವರ್ಷಿ
🔥ಪ್ರಾಪಂಚಿಕ ಮತ್ತು ಆತ್ಮವಿಷಯಗಳೆರಡರಲ್ಲೂ ಪೂರ್ಣಜ್ಞಾನವನ್ನು ಹೊಂದಿ ಬ್ರಹ್ಮಾಂಡದ ಒಳಿತಿಗಾಗಿ ಶ್ರಮಿಸುವವರು. ಇವರು ದೇವತೆಗಳಿಗೂ ಸಲಹೆಗಾರರು.

ಮಹರ್ಷಿ
🔥ಜಗತ್ತಿನ ಕುರಿತು ಮಹತ್ತಾದ ಜ್ಞಾನವನ್ನು ಪಡೆದವನು.

ಪರಮರ್ಷಿ
🔥ಭಗವಂತ, ಜೀವ, ಜಗತ್ತಿನ ಕುರಿತಾದ ಪರಮಜ್ಞಾನವನ್ನು ಹೊಂದಿದವನು.

ಕಾಂಡರ್ಷಿ
🔥ವೇದಗಳಲ್ಲಿ ಬರುವ ಯಜ್ಞಕ್ರಿಯೆಗಳು, ಕರ್ಮಕಾಂಡಗಳನ್ನು ಅಧ್ಯಯನ ಮಾಡಿದವನು.

ಶ್ರುತರ್ಷಿ
🔥ವೇದಗಳನ್ನುಸಂಪೂರ್ಣವಾಗಿ ತಿಳಿದವನು.

ರಾಜರ್ಷಿ
🔥ಪ್ರಾಪಂಚಿಕವಾಗಿ ಒಂದು ರಾಜ್ಯದ ಪೂರ್ಣಹೊಣೆಯನ್ನು ಹೊತ್ತು ರಾಜ್ಯಭಾರ ಮಾಡುತ್ತಾ, ಒಳಗೆ ಋಷಿಯಂತೆ ತಪೋನಿರತನಾಗಿ ಸಮಾಜದಲ್ಲಿ ಜೀವನ ನಡೆಸುವವನು.

ನಾಲ್ಕು ಯುಗಗಳು ಸೇರಿ ಒಂದು ಚತುರ್ಯುಗ.
ಇಂತಹ 71 ಚತುರ್ಯುಗಳು ಸೇರಿ ಒಂದು ಮನ್ವಂತರ.
ಒಟ್ಟು 14 ಮನ್ವಂತರಗಳಿವೆ.
ಪ್ರತೀ ಮನ್ವಂತರಕ್ಕೂ7 ಜನ ಋಷಿಗಳಿರುತ್ತಾರೆ. ಅವರನ್ನುಸಪ್ತರ್ಷಿಗಳೆಂದು ಕರೆಯುತ್ತಾರೆ.
ಇವರು ಸದಾ ವಿಶ್ವದ ಒಳಿತಾಗಿ ಶ್ರಮಿಸುತ್ತಿದ್ದಾರೆ ಎಂಬ ನಂಬಿಕೆಯಿದೆ.
ಖಗೋಳ ವಿಜ್ಞಾನಿಗಳು ಸಪ್ತರ್ಷಿ ಮಂಡಲವನ್ನು ಆಗಸದಲ್ಲಿ ತೋರಿಸುವುದೂ ಉಂಟು.

ಸ್ವಯಂಭುವ ಮನ್ವಂತರದ ಸಪ್ತ ಋಷಿಗಳು

ಪ್ರತಿ ಮನ್ವಂತರದಲ್ಲೂ ಸಪ್ತ ಋಷಿಗಳು ಬದಲಾಗುತ್ತಾರೆ. ಗರುಡ ಪುರಾಣದಲ್ಲಿ ಉಲ್ಲಿಸಿದಂತೆ ಸ್ವಾಯಂಭುವ ಮನ್ವಂತರದ ಸಪ್ತ ಋಷಿಗಳು ಇವರು.

  1. ಮರೀಚಿ
  2. ಅತ್ರಿ
  3. ಅಂಗೀರಸ
  4. ಪುಲಸ್ತ್ಯ
  5. ಪುಲಹ
  6. ಕ್ರತು ಮತ್ತು
  7. ವಸಿಷ್ಠ.

(Reference: Garuda Purana V1C87)

The Seven Sages of Swayambhu Manvantara

The seven sages change in every Manvantara. These are the seven sages of Swayambhuva Manvantara as mentioned in Garuda Purana.

  1. Marichi
  2. Atri
  3. Angiras
  4. Pulastya
  5. Pulaha
  6. Kratu and
  7. Vasistha.

(Reference: Garuda Purana V1C87)


ಪ್ರಸ್ತುತ ನಡೆಯುತ್ತಿರುವುದು ವೈವಸ್ವತ ಮನ್ವಂತರ.

ವೈವಸ್ವತ ಮನ್ವಂತರದಲ್ಲಿ (ಸಪ್ತರ್ಷಿ) ಸಪ್ತ ಋಷಿಗಳ ಉಲ್ಲೇಖ ಕೆಳಗಿನಂತಿದೆ.

  1. ವಸಿಷ್ಠ,
  2. ಕಶ್ಯಪ
  3. ಅತ್ರಿ
  4. ಜಮದಗ್ನಿ
  5. ಗೌತಮ
  6. ವಿಶ್ವಾಮಿತ್ರ
  7. ಭಾರದ್ವಾಜ

ಒಟ್ಟು 14 ಮನ್ವಂತರಗಳು ಸೇರಿ ಒಂದು ಕಲ್ಪವಾಗುತ್ತದೆ. ಹೀಗೆ ನೋಡಿದರೆ ವೈವಸ್ವತ ಮನ್ವಂತರ ಇದುವರೆಗೆ ಎಷ್ಟು ಬಾರಿ ಬಂದಿದೆಯೋ ಯಾರಿಗೆ ಗೊತ್ತು? ಹಾಗಾಗಿ ನಿಖರವಾಗಿ ಈ ಕಾಲಮಾನದಲ್ಲಿ ಇವರೇ ಸಪ್ತರ್ಷಿಗಳು ಎನ್ನಲು ಸಾಧ್ಯವಿಲ್ಲ.
ಅದೇನೇ ಇರಲಿ ಪ್ರಾಚೀನ ಭಾರತದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾದ ಋಷಿಗಳ ಕೊಡುಗೆ ನಮ್ಮ ಅರಿವಿಗೆ ಬರುತ್ತದೆ. ದಕ್ಷಿಣ ಭಾರತಕ್ಕೆ ಅಗಸ್ತ್ಯ ಮಹರ್ಷಿಗಳ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಆಯುರ್ವೇದದಲ್ಲಿ ಚ್ಯವನ, ಚರಕಾದಿಗಳು, ಆತ್ಮಜ್ಞಾನದಲ್ಲಿ ನಚಿಕೇತ, ನಾರದಾದಿಗಳು, ಕಾವ್ಯದಲ್ಲಿ ವ್ಯಾಸ, ವಾಲ್ಮೀಕಿಗಳು ಹೀಗೆ ಹೇಳಹೊರಟರೆ ಒಂದು ದೊಡ್ಡ ಸರದಿಯೇ ನಿಲ್ಲುತ್ತದೆ.

ವೇದದ ಭಾಷೆ ತುಂಬಾ ಕ್ಲಿಷ್ಟ , ಅದನ್ನು ಜನಸಾಮಾನ್ಯರು ನೇರವಾಗಿ ಅರ್ಥಮಾಡಿಕೂಳುವುದು ಕಷ್ಟ . ಹಾಗಾಗಿ ವೇದಗಳಿಗೆ ಪೂರಕವಾಗಿ ವೇದಾರ್ಥ ಚಿಂತನೆ ನಡೆಯಬೇಕು ಎನ್ನುವ ಉದ್ದೇಶದಿಂದ ವೇದವ್ಯಾಸರು ವೇದಗಳಿಗೆ ಅನ್ವಯವಾಗಿ ಇತಿಹಾಸ ಪುರಾಣಗಳನ್ನು ರಚಿಸಿದರು .

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ