ಧನುರ್ಮಾಸವು ಅಸಾಮಾನ್ಯ – ತಿಳಿಯದ ಮಾಹಿತಿ | Dhanurmasa

ಹಿಂದೂ ಧರ್ಮದಲ್ಲಿರುವ ಪ್ರತಿಯೊಂದು ತಿಂಗಳುಗಳು ಕೂಡಾ ಅತ್ಯಂತ ಮಹತ್ವವನ್ನು ಪಡೆದಿದೆ. ಆಯಾಯ ತಿಂಗಳಿಗೆ ಅನುಸಾರವಾಗಿ ಆಚರಣೆಗಳು, ಸಂಪ್ರದಾಯಗಳು, ದೇವರ ಪೂಜಾ ವಿಧಾನಗಳ ಮೂಲಕ ಜೀವನವನ್ನು ಹೇಗೆ ನಡೆಸಬೇಕೆನ್ನುವುದರ ಸಾರವನ್ನು ತಿಳಿಸಿಕೊಡುತ್ತದೆ. 

ಧನುರ್ಮಾಸ ಎಂದರೇನು ?

ಸೌರ ಮಂಡಲದ ರಾಜನಾದ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿ ಒಂದು ತಿಂಗಳು. 

ಡಿಸೆಂಬರ್‌ 16ರಂದು ಸೂರ್ಯನು ಧನುರಾಶಿಯನ್ನು ಪ್ರವೇಶಿಸಲಿದ್ದು ಮಕರ ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಡೆಯುತ್ತಾನೆ. ಈ ಅವಧಿಯನ್ನೇ ‘ಧನುರ್ಮಾಸ’ ಎಂದು ಕರೆಯುತ್ತಾರೆ. 

ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆಯನ್ನು ಹೀಗೆ ಮಾಡಿದರೆ ಶ್ರೇಷ್ಠ..!

ಧನುರ್ಮಾಸದ ವಿಶೇಷತೆ ಏನು, ಮಹತ್ವವೇನು?

ಧನುರ್ಮಾಸವೆಂದರೆ ಎಲ್ಲಾ ದೇವಾಲಯಗಳಲ್ಲೂ ಬ್ರಾಹ್ಮೀ ಮುಹೂರ್ತದಲ್ಲೇ ಪೂಜೆ ನಡೆಯುವುದು ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಸಂಪ್ರದಾಯ, ಹಾಗಾದರೆ ಧನುರ್ಮಾಸದ ವಿಶೇಷತೆ ಏನು, ಮಹತ್ವವೇನು?

ಮಾಸಗಳು ಬದಲಾದಂತೆ ವಾತಾವರಣವೂ ಬದಲಾಗುತ್ತದೆ ಇದಕ್ಕೆ ಅನುಗುಣವಾಗಿ ಮನುಷ್ಯನ ದೇಹವೂ ಒಗ್ಗಿಕೊಳ್ಳಬೇಕೆನ್ನುವ ವೈಜ್ಞಾನಿಕ ಹಿನ್ನೆಲೆಯೂ ಮಾಸಗಳಲ್ಲಿ ಬರುವ ಆಚರಣೆಗಳ ಹಿಂದಿದೆ.

ಈ ಮಾಸವು ಶುಭಕರವಲ್ಲವೆಂದು ಮದುವೆ, ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳನ್ನೂ ಮಾಡುವುದಿಲ್ಲ. 

ಬದಲಾಗಿ ಈ ಮಾಸ ಪೂರ್ತಿ ವಿಷ್ಣುವಿನ ಆರಾಧನೆಯಲ್ಲೇ ಕಳೆಯುತ್ತಾರೆ. 

ಉತ್ಥಾನ ದ್ವಾದಶಿಯಂದು ಯೋಗ ನಿದ್ರೆಯಿಂದ ಏಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಕಾಲವೆಂದು ಹೇಳಲಾಗುತ್ತದೆ. ಹಾಗಾಗಿ ಧನುರ್ಮಾಸವು ಶ್ರೀಹರಿಯ ಪೂಜೆಗೆ ಶ್ರೇಷ್ಠವಾದ ಕಾಲವೆನಿಸಿಕೊಂಡಿದೆ. 

ಶೈವ ಆರಾಧಕರು ಧನುರ್ಮಾಸದಲ್ಲಿ ಶಿವನ ಆರಾಧನೆಯನ್ನೂ ಮಾಡುತ್ತಾರೆ.

ಧನುರ್ಮಾಸದ ಮಹತ್ವ

ಬ್ರಾಹ್ಮೀ ಮುಹೂರ್ತದಲ್ಲಿ ಚುಮುಚುಮು ಚಳಿಯಲ್ಲೇ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ. 

ಇದರ ಹಿಂದೆ ಕಾರಣವೂ ಇದೆ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.

ಧನುರ್ಮಾಸದಲ್ಲಿ ವಿಶೇಷವಾಗಿ ಮುಂಜಾನೆ ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತಂ, ಶ್ರೀ ವಿಷ್ಣು ಸೂಕ್ತಂ ಅಥವಾ ನಾರಾಯಣ ಉಪನಿಷತ್ತನ್ನು ಪಠಣ ಮಾಡಲಾಗುತ್ತದೆ. 

ಕೆಲವರು ಮಹಾವಿಷ್ಣುವಿನೊಂದಿಗೆ ಮಹಾಲಕ್ಷ್ಮೀಯನ್ನು ಪೂಜಿಸುತ್ತಾರೆ, ಹೀಗೆ ಪೂಜಿಸುವುದರಿಂದ ಸಂಪತ್ತು ಒಲಿಯುವುದೆಂದು ಹೇಳಲಾಗುತ್ತದೆ. 

ಹಿಂದೆ ದೇವ ರಾಜನಾದ ಇಂದ್ರನು ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ವಿಷ್ಣುವಿಗೆ ಸಮರ್ಪಿಸಿ, ಶ್ರೀಹರಿಯೊಂದಿಗೆ ಮಹಾಲಕ್ಷ್ಮಿಯನ್ನೂ ದ್ವಾದಶನಾಮಗಳಿಂದ ಸ್ತುತಿಸಿದಳಂತೆ, ಇದರ ಫಲವಾಗಿ ಇಂದ್ರನು ರಾಜ್ಯವನ್ನು ಮರಳಿ ಪಡೆದನು ಎನ್ನುವ ಪುರಾಣ ಕಥೆಯಿದೆ.

ಧನುರ್ಮಾಸದ ಆಚರಣೆ

ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಬೇಕು.

ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ, ನಂತರ ಮಧ್ಯಮ, ಸೂರ್ಯೋದಯದ ನಂತರ ಅಧಮ, ನಿಷ್ಪಲವೆಂದು ಹೇಳಲಾಗುತ್ತದೆ.

ಪ್ರತಿನಿತ್ಯ ದೇವರಿಗೆ ನೈವೇದ್ಯವಾಗಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ಅರ್ಪಿಸಬೇಕು.

ಪಾರಾಯಣವನ್ನು ನೈವೇದ್ಯ ಅರ್ಪಣೆಯ ನಂತರವೂ ಮಾಡಬಹುದು.

ಸಂಧ್ಯಾವಂದನೆ, ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ಯಾವುದೇ ದೋಷವಿರುವುದಿಲ್ಲ.

ಧನುರ್ಮಾಸದ ಒಂದು ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಸಾವಿರ ವರ್ಷ ಪೂಜೆ ಮಾಡಿದ ಫಲ ದೊರೆಯುವುದು.

ಕಾತ್ಯಾಯಿನಿ ವ್ರತ

ಭಾಗವತ ಪುರಾಣದಲ್ಲಿ ಧನುರ್ಮಾಸದ ಮುಂಜಾನೆ ಮಾಡುವ ವ್ರತದ ಫಲವು ಭಕ್ತರಿಗೆ ಸರ್ವವಿಧದ ಫಲಗಳನ್ನು ನೀಡುತ್ತದೆ ಎನ್ನುವ ಉಲ್ಲೇಖವಿದೆ. ನಂದಗೋಪನ ಮಗನಾದ ಶ್ರೀಕೃಷ್ಣನನ್ನು ಪತಿಯಾಗಿ ವರಿಸಲು ಗೋಪಿಯರೆಲ್ಲ ಸೇರಿ ಈ ವ್ರತವನ್ನು ಮಾಡುತ್ತಾರೆ. ಅಂತಹ ಪರಮಾತ್ಮನನ್ನೇ ದೊರಕಿಸಿಕೊಡುವ ಪುಣ್ಯ ಮಾಸವಾದ್ದರಿಂದ ಧನು ಮಾಸದಲ್ಲಿ ಶೈವ, ವೈಷ್ಣವ, ಶಾಕ್ತರೆಲ್ಲರೂ ದೇಗುಲಗಳಲ್ಲಿ ಧನುರ್ಮಾಸದ ಆಚರಣೆಯನ್ನು ಮಾಡುತ್ತಾರೆ

ಹುಗ್ಗಿಯ ಪ್ರಾಮುಖ್ಯತೆ

ಪಾಂಡವರು ರಾಜ್ಯವನ್ನು ಕಳೆದುಕೊಂಡು ವನವಾಸದಲ್ಲಿರಬೇಕಾದರೆ ಧರ್ಮರಾಯನು ನಾರದನನ್ನು ‘ ರಾಜ್ಯ, ಕೋಶಗಳನ್ನೆಲ್ಲಾ ಕಳೆದುಕೊಂಡಿದ್ದೇವೆ, ಸದ್ಯದಲ್ಲೇ ಕೌರವರೊಂದಿಗೆ ಯುದ್ಧವೂ ನಡೆಯಲಿದೆ. ಹಾಗಾಗಿ ಯುದ್ಧದಲ್ಲಿ ಜಯಶಾಲಿಯಾಗುವುದೋ? ಕಳೆದುಕೊಂಡ ರಾಜ್ಯ ಮರಳಿ ದೊರೆಯುವುದೋ’ ಎಂದು ಪ್ರಶ್ನಿಸುತ್ತಾನೆ. ಆಗ ನಾರದರು ‘ ಬ್ರಾಹ್ಮೀ ಮುಹೂರ್ತದಲ್ಲಿ ಹರಿಯನ್ನು ಪೂಜಿಸಿ, ಯಾರು ಹುಗ್ಗಿಯನ್ನು ಸಮರ್ಪಿಸುತ್ತಾರೋ ಅವನು ಕ್ಷಣ ಮಾತ್ರದಲ್ಲಿ ಶತ್ರುಗಳನ್ನು ಜಯಿಸುತ್ತಾನೆ. ಹಿಂದೆ ಇಂದ್ರನೂ ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯನ್ನು ವಿಷ್ಣುವಿಗೆ ಸಮರ್ಪಿಸಿದುದೂ, ಶ್ರೀಹರಿಯ ಅನುಗ್ರಹದಿಂದ ರಾಜ್ಯವನ್ನು ಮರಳಿ ಪಡೆದುದಾಗಿಯೂ’ ಯುಧಿಷ್ಟಿರನಿಗೆ ತಿಳಿಸುತ್ತಾರೆ.

‘ಧನುರ್ಮಾಸದಲ್ಲಿ ಪ್ರತಿನಿತ್ಯ ಉ‍ಷಾಃಕಾಲದಲ್ಲಿ ಶ್ರೀಹರಿಗೆ ಹುಗ್ಗಿಯನ್ನು ಸಮರ್ಪಿಸಿ,’ ಪೂಜಿಸಿದರೆ ಯುದ್ಧದಲ್ಲಿ ಜಯಶೀಲರಾಗುವಿರೆಂದು ತಿಳಿಸಿದರು. ಇದರಂತೆ ಪಾಂಡವರು ಶ್ರೀಕೃಷ್ಣನಿಗೆ ಧನುರ್ಮಾಸದ ಪೂಜೆಯನ್ನು ಮಾಡಿ ಅನುಗ್ರಹವನ್ನು ಪಡೆದು ಮಹಾಭಾರತ ಯುದ್ಧವನ್ನು ಜಯಿಸಿದರೆಂದು ಹೇಳಲಾಗುತ್ತದೆ. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ದ್ರೌಪದಿಯು ಪ್ರತಿನಿತ್ಯ ಬೆಳಗ್ಗೆ ಬೇಗ ಹುಗ್ಗಿಯನ್ನು ಮಾಡಿಕೊಡುತ್ತಿದ್ದಳು, ಅದನ್ನು ಶ್ರೀಕೃಷ್ಣನು ತಿಂದು ಹೋಗುತ್ತಿದ್ದನೆಂದೂ ಪುರಾಣ ಕಥೆಯಲ್ಲೂ ಉಲ್ಲೇಖಿಸಲಾಗಿದೆ.

ವೈಜ್ಞಾನಿಕ ಹಿನ್ನೆಲೆಯ ಪ್ರಕಾರ ಚಳಿಗಾಲದಲ್ಲಿನ ಒಣ ಹವೆಯಿಂದ ಚರ್ಮವು ಒಡೆದು ಹೊಸ ಚರ್ಮವು ರೂಪುಗೊಳ್ಳುವುದರಿಂದ ಚರ್ಮವನ್ನು ಪೋಷಿಸುವಂತಹ ಆಹಾರ ಅವಶ್ಯಕ. ಈ ಕಾಲದಲ್ಲಿ ದೇಹದಲ್ಲಿ ಕೊಬ್ಬಿನಂಶವು ಕಡಿಮೆಯಾಗುವುದರಿಂದ ಹುಗ್ಗಿಯನ್ನು ಸೇವಿಸಬೇಕೆಂದು ಹೇಳುತ್ತಾರೆ. ಹುಗ್ಗಿಯಲ್ಲಿ ಕೊಬ್ಬಿನಂಶ ಹೇರಳವಾಗಿರುವುದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗಿ ಶಾರೀರಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

ಧನುರ್ಮಾಸ ಎಂದರೇನು?

ಸೂರ್ಯನು ಧನಸ್ಸು ರಾಶಿಗೆ ಪ್ರವೇಶಿಸುವ ಕಾಲವನ್ನು ಧನುರ್ಮಾಸ ಎನ್ನುತ್ತಾರೆ. 

ಧನುರ್ಮಾಸದ ವಿವರಣೆ:

ಒಟ್ಟು ರಾಶಿಗಳ ಸಂಖ್ಯೆ 12.  ಧನುರಾಶಿಯು 9ನೇಯದು.  ಸೂರ್ಯನು ಧನುರಾಶಿಯನ್ನು ಪ್ರವೇಶಿಸಿ, ಅಲ್ಲಿಂದ ಬಿಡುವವರೆಗೆ ಅಂದರೆ ಮಕರ ರಾಶಿಯನ್ನು ಸೇರುವವರೆಗೂ ಧನುರ್ಮಾಸ ಆಚರಿಸಲಾಗುತ್ತದೆ.  ಯಾವ ಸಮಯದಲ್ಲಿ ಸೂರ್ಯನು ಧನುರಾಶಿಯನ್ನು ಪ್ರವೇಶಿಸುತ್ತಾನೋ ನಂತರವೇ  ಧನುರ್ಮಾಸ ಆಚರಣೆ ಮಾಡಬೇಕಾಗುತ್ತದೆ.  

ಉದಾಹರಣೆಗೆ ಸೂರ್ಯನು ಬೆಳಿಗ್ಗೆಯಿಂದಲೇ ಧನುರಾಶಿಯನ್ನು ಪ್ರವೇಶಿಸಿದರೆ, ಅಂದೇ ಧನುರ್ಮಾಸ ಆರಂಭವಾಗುತ್ತದೆ.  ಆದರೆ ಕೆಲವು ಸಮಯ ಸೂರ್ಯನು ಮಧ್ಯಾಹ್ನದ ನಂತರ ಪ್ರವೇಶಿಸುತ್ತಾನೆ ಅಂತಹ ಸಂದರ್ಭದಲ್ಲಿ ಮಾರನೇ ದಿನ ಆಚರಿಸಲಾಗುತ್ತದೆ. 

ಸಾಮಾನ್ಯವಾಗಿ ಈ ಕಾಲವು ಡಿಸೆಂಬರ್ ತಿಂಗಳನ 16 ಅಥವಾ 17ರಂದು ಕಂಡು ಜನವರಿ ತಿಂಗಳನ 14 ಅಥವಾ 15ರಂದು ಉತ್ತರಾಯಣ ಆರಂಭದೊಂದಿಗೆ ಸಮಾಪ್ತವಾಗುತ್ತದೆ. 

ಸೂರ್ಯನಾರಾಯಣನು ಇಂದು ರಾತ್ರಿ 03:29 ಗಂಟೆಗೆ ಧನಸ್ಸು ರಾಶಿಯನ್ನು ಪ್ರವೇಶಿಸುತ್ತಾನೆ. ನಾಳೆಯಿಂದ ಧನುರ್ಮಾಸ ಪೂಜೆ ಪ್ರಾರಂಭವಾಗುತ್ತದೆ.

ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯಾಗಿದೆ. ಉತ್ತರಾಯಣವು ಹಗಲಾಗಿದೆ.

ಉತ್ಥಾನದ್ವಾದಶಿಯಂದು ಎದ್ದ ಭಗವಂತನಿಗೆ ಧನುರ್ಮಾಸವು ಅರುಣೋದಯ ಕಾಲವೆನಿಸಿದೆ.  ಶ್ರೀಹರಿಯ ಪೂಜೆಗೆ ವಿಶೇಷ ಕಾಲವೆನಿಸಿದೆ.

ಧನುರ್ಮಾಸದ ನಿಯಮಗಳು :

ತಸ್ಮಾತ್ ಸರ್ವಪ್ರಯತ್ನೇನ ಚಾಪಮಾಸೇ ದಿನೆ ದಿನೆ |

ಉಷ:ಕಲೆ ತು ಸಂಪ್ರಾಪ್ತೇ ಅರ್ಚಯಿತ್ವಾ ಜನಾರ್ಧನಂ|

ಉಪಚಾರೈ: ಷೋಡಶೀಭಿರ್ಮುದ್ಗಾನ್ನಂ ಚ ನಿವೇದಯೇತ್ |

ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇಲ್ಪದ್ವಾದಶೀದಿನೇ |

ತಥಾ ಪ್ರಾತರ್ಧನುರ್ಮಾಸೇ ತ್ಯಕ್ತಾ ವ ಕರ್ಮಾಣ್ಯರ್ಚಯೇಚ್ಚಮಾಮ್ |

  1. ಉಷ:ಕಾಲದಲ್ಲೇ ಏಳಬೇಕು. ‌                                                                                                                                         
  2. ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು.  ಆಕಾಶದಲ್ಲಿ ನಕ್ಷತ್ರ ಕಾಣಿಸುವ ಹೊತ್ತಿಗೆ ಮಾಡಿದ ಪೂಜೆ ಶ್ರೇಷ್ಠ.  ನಂತರ ಮಧ್ಯಮ. ಸೂರ್ಯೋದಯಾನಂತರ ಅಧಮ, ನಿಷ್ಫಲ. (ಕೃಷ್ಣಾಚಾರ್ಯ ಸ್ಮೃತಿಮುಕ್ತಾವಲಿ) ‌                                                                                                       
  3. ಪ್ರತಿನಿತ್ಯ ದೇವರಿಗೆ ಮುದ್ಗಾನ್ನ ನೈವೇದ್ಯ ಸಮರ್ಪಿಸಬೇಕು.                                                                                                                                       
  4. ಪಾರಾಯಣಾದಿಗಳನ್ನು ನೈವೇದ್ಯ ನಂತರ ಮಾಡಬಹುದು.
  5. ಶ್ರಾದ್ಧಾದಿಗಳನ್ನು ಮಾಡುವವರು ಸೂರ್ಯೋದಯಕ್ಕಿಂತ ಮುಂಚಿತವಾಗಿ ಮಾಡುವುದು ಉತ್ತಮ
  6. ಸಂಧ್ಯಾವಂದನ, ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ದೋಷವಿಲ್ಲ

ಧನುರ್ಮಾಸದಲ್ಲಿ ಬ್ರಹ್ಮಯಜ್ಞ, ಶ್ರಾದ್ಧಾದಿ ಪಿತೃಕಾರ್ಯಗಳನ್ನೂ ಸೂರ್ಯೋದಯ ನಂತರ ಕೂಡ

ಪೂರೈಸಬಹುದು.

ಧನುರ್ಮಾಸ ಆಚರಣೆಯಿಂದ ಪ್ರಾಪ್ತಿ : 

ದಧ್ಯಾರ್ದಕಂ ಚ ಮುದ್ಗಾನ್ನಂ ದದ್ಯಾಚ್ಚೈಲಾಗುಡೋಜ್ಜ್ವಲಮ್ |

ಸುಸುಖೋಷ್ಣಂ ಸಕಂದಂ ಚ ವಿಷ್ಣವೇ ಯ: ಸಮರ್ಪಯೇತ್|

ದೃಷ್ಟ್ವಾ ತಚ್ಚುಭಮುದ್ಗಾನ್ನಂ ಸಂತುಷ್ಟೋ ಭಕ್ತವತ್ಸಲ: |

ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಚ ಜಗದೀಶ್ವರ: |

ಧನುರ್ಮಾಸದಲ್ಲಿನ ಮುದ್ಗಾನ್ನ ನಿವೇದನೆಯು ಭಗವಂತನಿಗೆ ಅತ್ಯಂತ ಪ್ರೀತಿಪಾತ್ರ ವಾದುದು,  ಇದರಿಂದ ಶತ್ರುಗಳು ನಶಿಸುವರು, ದೀರ್ಘಾಯಸ್ಸು ಪಡೆಯುವರು. ಧನಧಾನ್ಯ ಸಂಪತ್ತು ಭರಿತವಾಗುವುದು. ವೇದಶಾಸ್ತ್ರಾಭ್ಯಾಸ, ಎಲ್ಲಕ್ಕೂಂ ಸಾಧನವಾಗಿದೆ.  ಎಲ್ಲದಕ್ಕಿಂತ ಮುಖ್ಯವಾಗಿ ಪ್ರತಿಜನ್ಮದಲ್ಲೂ ವೈಷ್ಣವನಾಗಿಯೇ   ಜನಿಸುವ ಮಹಾಭಾಗ್ಯ.

ಸೂರ್ಯೋದಯಕ್ಕಿಂತ ಮುಂಚಿ ಮುದ್ಗಾನ್ನ ನಿವೇದಿಸಬೇಕು.  ಆದರೆ ನಾವು ಭೋಜನವನ್ನುಂ ಸೂರ್ಯೋದಯ ನಂತರವೇ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಸೂರ್ಯೋದಯಕ್ಕಿಂತ ಮುಂಚಿತ ಭೋಜನ ಕೂಡದು.

ಧನುರ್ಮಾಸದಲ್ಲಿ ಏನು ನಿಷೇಧ:

ಈ ಧನುರ್ ಮಾಸದ ಪರ್ವ ಸಮಯದಲ್ಲಿ ಉಪನಯನ, ಗೃಹಪ್ರವೇಶ, ಮದುವೆ, ನಾಮಕರಣ ಮುಂತಾದವುಗಳನ್ನು  ಮಾಡುವುದನ್ನು ನಿಷೇಧಿಸಲಾಗಿದೆ.

ಧನುರ್ಮಾಸ ಆಚರಿಸದಿದ್ದರೆ ಹಾನಿ :   ದಾರಿದ್ರ್ಯಬುದ್ಧಿಯಿಂದಾಗಿ ಅವನಿಗೆ ಮುಂದಿನ ಏಳು ಜನುಮಗಳಲ್ಲೂ ದಾರಿದ್ರ್ಯ, ಕ್ಷಯರೋಗಗಳೂ ಮಂದಬುದ್ಧಿಯೂ ಬರುತ್ತದೆ.  (ಆಗ್ನೇಯ ಪುರಾಣ ವಾಕ್ಯ)

ಮುದ್ಗಾನ್ನದಲ್ಲಿ ಅಕ್ಕಿ ಹೆಸರುಬೇಳೆಗಳ ಪ್ರಮಾಣ –  

ಮುದ್ಗಂ ತಂಡುಲಮಾನಂ ಸ್ಯಾದ್ಯುತ್ತಮೋತ್ತಮಮುಚ್ಯತೇ |

ಮಧ್ಯಮಂ ತಂಡುಲಾದರ್ಧಂ ತದರ್ಧಮಧಮಂ ಭವೇತ್|

ಮುದ್ಗಂ ತು ದ್ವಿಗುಣಂ ಕೇಚಿತ್ ಪ್ರಶಂಸಂತಿ ಮುನೀಶ್ವರಾ: |

ಯಥಾಬಲಂ ಪ್ರಕುರ್ವೀತ ನ ಹೀಯೇತ್ತಂಡುಲಾರ್ಧತ: |

  1.  ಅಕ್ಕಿ ಮತ್ತು ಹೆಸರುಬೇಳೆ ಸಮ ಪ್ರಮಾಣದಲ್ಲಿ ಸೇರಿಸಿ ಮಾಡುವುದು ಅತ್ಯುತ್ತಮ.
  2. ಅಕ್ಕಿಯ ಪ್ರಮಾಣದ ಅರ್ಧದಷ್ಟು ಹೆಸರುಬೇಳೆ ಸೇರಿಸಿ ಮಾಡುವುದು ಮಧ್ಯಮ.
  3. ಅಕ್ಕಿಯ ಪ್ರಮಾಣಕ್ಕಿಂತ ಕಾಲುಭಾಗ ಹೆಸರುಬೇಳೆ ಸೇರಿಸಿ ಮಾಡುವುದು ಅಧಮ.

ಹುಗ್ಗಿಯಲ್ಲಿ ಉಪಯೋಗಿಸಬೇಕಾದ ವಸ್ತುಗಳು

ಹುಗ್ಗಿಯಲ್ಲಿ ಉಪಯೋಗಿಸಬೇಕಾದ ವಸ್ತುಗಳು –

ಹೆಸರುಬೇಳೆ, ಅಕ್ಕಿ, ಬೆಲ್ಲ, ಶುಂಠಿ, ಏಲಕ್ಕಿ, ತುಪ್ಪ, 

ಹುಗ್ಗಿಯ ಜೊತೆಗೆ ಹುಣಿಸೇ ಗೊಜ್ಜು, ಬೆಲ್ಲ, ಸಕ್ಕರೆ, ಬೆಣ್ಣೆ ಉಪಯೋಗಿಸುವ ಸಂಪ್ರದಾಯವಿದೆ.

ಧನುರ್ಮಾಸದಲ್ಲಿ ಪ್ರಾರ್ಥನೆ –

ವಿಷ್ಣುಪ್ರಿಯ ವ್ಯತೀಪಾತ ಪಿತೃಣಾಮನೃಣಪ್ರದ |

ಪಿತೃಣಾಂ ಮಮ ವೈಕುಂಠಂ ಪ್ರಯಚ್ಚ ಭಗವಾನ್ ಹರೇ |

ತ್ವತ್ಪ್ರಸಾದೇನ ಮೇ ಭಕ್ತಿರಸ್ತ್ವೇವಮನಪಾಯಿನೀ |

ಜ್ಞಾನವಿಜ್ಞಾನವೈರಾಗ್ಯಂ ಪ್ರಯಚ್ಚ ಭಗವನ್ ಮಮ |

ಅನೇನ ಧನುರ್ವ್ಯತೀಪಾತಪೂಜಾರ್ಘ್ಯ ತಿಲ ತರ್ಪಣಾದಿಕರ್ಮಕರಣೇನ ವಿಷ್ಣುಚಕ್ರಾಂತ:ಸ್ಥಿತಸುದರ್ಶನಾತ್ಮಕ ಸಂಕರ್ಷಣರೂಪಿ ಪರಮಾತ್ಮಾ ಪ್ರಿಯತಾಂ |

ಧನುರ್ವ್ಯತೀಪಾತ ಯೋಗ

ಧನುರ್ವ್ಯತೀಪಾತ ಯೋಗ  – ವ್ಯತೀಪಾತವೆಂಬುದು ಒಂದು ವಿಶೇಷ ಯೋಗವಾಗಿದ್ದು, ಚಂದ್ರ ಸೂರ್ಯರು ಪರಸ್ಪರ ಒಬ್ಬರ ಮೇಲೊಬ್ಬರ ದೃಷ್ಠಿ ಬಿದ್ದ ಪರಿಣಾಮ ಕೋಪದ ಸಂಪಾತದಿಂದ ಒಬ್ಬ ಭಯಂಕರವಾದ ಪ್ರಲಯಾಗ್ನಿ ಸದೃಶನಾದ ಒಬ್ಬ ವ್ಯಕ್ತಿ ಜನಿಸಿದನು – ಅವನೇ “ವ್ಯತೀಪಾತ”.  

ವ್ಯತೀಪಾತವೆಂದರೆ ರವಿವಾರದಿಂದ ಕೂಡಿದ ಅಮಾವಾಸ್ಯೆ ಯಲ್ಲಿ ಶ್ರವಣ, ವ್ಯತೀಪಾತ ಎನ್ನುವವನು 17ನೇ ಅಧಿಪತಿ. 

ಸೂರ್ಯಚಂದ್ರರ ಅನುಗ್ರಹದಿಂದ ಈ ದಿನ ಅಂದರೆ ಈ ಯೋಗವಿದ್ದಾಗ ವಿಶೇಷ ಫಲವಿದೆ. 

ಯಾರು ಸ್ನಾನ-ದಾನಾದಿಗಳನ್ನು ಈ ದಿನ ಮಾಡುವರು ಬೇರೆ ಎಲ್ಲದಕ್ಕಿಂತ ಹೆಚ್ಚು ಫಲಕಾರಿ. 

ಸೂರ್ಯಚಂದ್ರಾದಿಗಳು  ವ್ಯತೀಪಾತ ಯೋಗವನ್ನು ಇಪ್ಪತ್ತೇಳು ಯೋಗಗಳಲ್ಲಿ   ಹದಿನೇಳನೇ ಅಧಿಪತಿಯನ್ನಾಗಿ ಮಾಡಿ, ನಿನ್ನ ದಿನದಲ್ಲಿ ಯಾರು ಸ್ನಾನ ದಾನಾದಿಗಳನ್ನು ಮಾಡುವರೋ ಅವರ ದಾನಾದಿಗಳೆಲ್ಲ ಕೋಟಿಪಟ್ಟು ವೃದ್ಧಿಸುವುವು ಎಂದು ವರವಿತ್ತರು. 

“ಅಸಂಖ್ಯೇಯಂ ವ್ಯತಿಪಾತೇ ದಾನಂ ವೇದವಿದೋ ವಿದುಃ “

ಲಕ್ಷ್ಮೀ ದ್ವಾದಶ ನಾಮ ಸ್ತೋತ್ರಂ :

ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮೃತೋದ್ಭವಾ |

ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಸರ್ವಸುಂದರೀ | ೧ |

ಪಂಚಮಂ ದೇವಗರ್ಭಾ ಚ ಷಷ್ಟಂ ಚ ಮಧುಸೂದನೀ |

ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ | ೨ |

ನವಮಂ ಶಾಂರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವತಾ |

ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ |೩ |

ಏತದ್ವಾದಶ ನಾಮಾನಿ ತ್ರಿಸಂಧ್ಯಂ ಯ: ಪಠೇನ್ನರ: |

ಆಯುರಾರೋಗ್ಯಮೈಶ್ವರ್ಯಮತಿಪುಣ್ಯಫಲಪ್ರದಂ | ೪ |

ದ್ವಿಮಾಸಂ ಸರ್ವಕಾರ್ಯಾಣಿ ಷಣ್ಮಾಸಾದ್ರಾಜ್ಯಮೇವ ಚ |

ಸಂವತ್ಸರಂ ತು ಪೂಜಾಯಾ: ಶ್ರೀಲಕ್ಷ್ಮ್ಯಾಯ: ಪೂಜ್ಯ ಏವ ಚ| ೫ |

ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ |

ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಂ |೬ |

ಶ್ರೀಮನ್ಮಂದಕಟಾಕ್ಷಲಬ್ಧವಿಭವ ಬ್ರಹ್ಮೇಂದ್ರಗಂಗಾಧರಾಂ

ತಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ|೭|

|| ಇತಿ ಯುಧಿಷ್ಟಿರಂ ಪ್ರತಿ ನಾರದವಚನಂ (ಸ್ಮೃತಿಮುಕ್ತಾವಲಿ) ||     

  ಶ್ರೀ ಲಕ್ಷ್ಮೀದ್ವಾದಶನಾಮಾವಳೀ

ಶ್ರೀ ದೇವ್ಯೈ ನಮ: | ಅಮೃತೋದ್ಭವಾಯೈ ನಮ: |  ಕಮಲಾಯೈ ನಮ: | ಲೋಕಸುಂದರ್ಯೈ ನಮ: |

ವಿಷ್ಣುಪತ್ನೈ ನಮ: | ಶ್ರೀ ವೈಷ್ಣವೈ ನಮ: | ವರಾರೋಹಾಯೈ ನಮ: | ಹರಿವಲ್ಲಭಾಯೈ ನಮ: |

ಶಾಂರ್ಙ್ಗಣ್ಯೈ ನಮ: |  ಮಹಾಲಕ್ಷ್ಮೈ ನಮ: | ತ್ರಿಲೋಕಸುಂದರ್ಯೈ ನಮ:| ದೇವಗರ್ಭಾಯೈ ನಮ: | 

ಭದ್ರಲಕ್ಷ್ಮೀ ಸ್ತೋತ್ರ :

ಶ್ರೀ – ಪದ್ಮಾ – ಕಮಲಾ – ಮುಕುಂದಮಹಿಷೀ -ಲಕ್ಷ್ಮೀ: ತ್ರಿಲೋಕೇಶ್ವರಿ |

ಮಾ- ಕ್ಷೀರಾಬ್ಧಿಸುತಾರವಿಂದಜನನೀ, ವಿದ್ಯಾ – ಸರೋಜಾತ್ಮಿಕಾ |

ಸರ್ವಾಭೀಷ್ಟ ಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |

ಪ್ರಾತ: ಶುದ್ಭತರಾ: ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ ||

ಧನುರ್ವ್ಯತೀಪಾತ ಯೋಗ :

ಧನುರ್ಮಾಸದಲ್ಲಿ ವ್ಯತೀಪಾತಯೋಗವು ಸಹಸ್ರ ಅರ್ಧೋದಕಕ್ಕೆ ಸಮಾನ.  ಈ ದಿನ  ಪಿತೃ ತರ್ಪಣವನ್ನು ಕೊಡಬೇಕು.    ಮೇಷದಲ್ಲಿ ರವಿಯಿದ್ದು, ಸಿಂಹರಾಶಿಯಲ್ಲಿ ಗುರು ಹಾಗೂ ಕುಜರಿದ್ದು ಹಾಗೂ ಶುಕ್ಲಪಕ್ಷ ದ್ವಾದಶಿಯಲ್ಲಿ ಹಸ್ತಾ ನಕ್ಷತ್ರವಿದ್ದರೂ ವ್ಯತೀಪಾತ ಯೋಗವೆನಿಸುವುದು.  

ಧನುರ್ವ್ಯತೀಪಾತ / ಧನುರ್ವೈಧೃತಿ ಸಂಕಲ್ಪ :

ಆಚಮನ, ಕೇಶವಾಯ ಸ್ವಾಹಾ…………  ಪ್ರಣವಸ್ಯ…………………. ಧನುರ್ಮಾಸ ನಿಮಾಯಕ ಸಂಕರ್ಷಣ ಪ್ರೇರಣಯಾ ಸಂಕರ್ಷಣ ಪ್ರೀತ್ಯರ್ಥಂ ಧನುರ್ವ್ಯತೀಪಾತ  (ಧನುರ್ವೈಧೃತಿ) ಪರ್ವಕಾಲೇ ಪಿತೃತರ್ಪಣಾಖ್ಯಂ ಕರ್ಮ ಕರ್ತುಂ ಆದೌ ವ್ಯತೀಪಾತಾರ್ಘ್ಯ ದಾನಂ ಕರಿಷ್ಯೇ | ವ್ಯತೀಪಾತ (ವೈಧೃತಿ) ಮಹಾಸತ್ವ ಸರ್ವಪಾಪಪ್ರಣಾಶನ |ಸಹಸ್ರಬಾಹೋ ವಿಶ್ವಾತ್ಮನ್ ಗೃಹಾಣಾರ್ಘ್ಯಂ ನಮೋಽಸ್ತು ತೇ | ವ್ಯತೀಪಾತ ನಮಸ್ತೇಽಸ್ತು ನಮಸ್ತೇ ವಿಶ್ವಮಂಗಲ | ವಿಷ್ಣುಚಕ್ರ ಸ್ವರೂಪಾಯ ನಮಸ್ತೇ ದಿವ್ಯತೇಜಸೇ |

ಧನುರ್ಮಾಸ ಮಹತ್ವ ಹಾಗೂ ಪೌರಾಣಿಕ ಹಿನ್ನೆಲೆ

ಸಂಗ್ರಹ
ಚೂಡಾಮಣಿ ಅಧ್ಯಾತ್ಮಿಕ ಕೇಂದ್ರ ಬೆಂಗಳೂರು


ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿ ಆಚರಣೆಗಳು ನಮಗೆ ದೈವತ್ವದತ್ತ ಕೊಂಡೊಯ್ಯುತ್ತದೆ, ಅಂಥಾ ಪವಿತ್ರ ಆಚರಣೆಗಳಲ್ಲಿ ಒಂದು ಧನುರ್ಮಾಸ. ಧನುರ್ಮಾಸದಲ್ಲಿ ಒಂದೇ ಒಂದು ದಿನ ಭಗವಾನ್ ವಿಷ್ಣುವನ್ನು ಪೂಜಿಸಿದರೆ ಸಾವಿರಾರು ವರ್ಷಗಳ ಕಾಲ ಪೂಜಿಸಿದಂತೆ ಎಂಬ ನಂಬಿಕೆ ಇದೆ. ಧನುರ್ಮಾಸವನ್ನು ಶೂನ್ಯ ಮಾಸ ಎಂದು ಸಹ ಕರೆಯುತ್ತಾರೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸ್ಥಳಾಂತರಗೊಳ್ಳುವ ಅವಧಿಯೇ ಧನುರ್ ಮಾಸ ಎನ್ನುತ್ತಾರೆ.


ಡಿಸೆಂಬರ್ 16ರಂದು ಪ್ರಾರಂಭವಾಗುತ್ತದೆ ಮತ್ತು 2022 ಜನವರಿ 13ರಂದು ಕೊನೆಗೊಳ್ಳುತ್ತದೆ. ಅಂದರೆ ಮಕರ ಸಂಕ್ರಾಂತಿಯಂದು ಕೊನೆಗೊಳ್ಳುತ್ತದೆ.

ಧನುರ್ ಸಂಕ್ರಾಂತಿ ಪೂಜಾ ಸಮಯ
2022ರ ಡಿಸೆಂಬರ್‌ 16ರಂದು ಧನುರ್‌ ಸಂಕ್ರಾತಿಯಿಂದ ಧನುರ್ಮಾಸ ಆರಂಭವಾಗುತ್ತದೆ.

ಪುಣ್ಯಕಾಲ ಪೂಜಾ ಸಮಯ: ಬೆಳಿಗ್ಗೆ 7.07 ರಿಂದ ಮಧ್ಯಾಹ್ನ 12.17 ರವರೆಗೆ

ಧನುರ್‌ ಸಂಕ್ರಾಂತಿ ಮಹಾ ಪುಣ್ಯಕಾಲ: ಬೆಳಿಗ್ಗೆ 7.07 ರಿಂದ ಬೆಳಿಗ್ಗೆ 8.50ರವರೆಗೆ

ಧನುರ್ಮಾಸದ ಮಹತ್ವ

  • 🚩ಡಿಸೆಂಬರ್ ಮಧ್ಯದಿಂದ ಜನವರಿ ಮಧ್ಯದವರೆಗೆ ಬರುವ ಧನುರ್ಮಾಸ, ಧನುರ್ ಮಾಸವನ್ನು ಶೂನ್ಯ ಮಾಸಂ ಅಥವಾ ಕರ್ಮ ಎಂದು ಪರಿಗಣಿಸಲಾಗುತ್ತದೆ. ಧನುರ್ಮಾಸವನ್ನು ಕೆಲವು ಪ್ರದೇಶಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕೇವಲ ಪ್ರಾರ್ಥನೆಗಳು ಮತ್ತು ದೈವಿಕ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳನ್ನು ಸಹ ಮಾಡುವುದಿಲ್ಲ.
  • 🚩ಧನುರ್ಮಾಸದಲ್ಲಿ ಬೆಳಗಿನ ಸಮಯದಲ್ಲಿ ವಿಷ್ಣುವಿನ ಆರಾಧನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಲಾಗುತ್ತದೆ. ಪಠಿಸುವ ಇತರ ಪ್ರಮುಖ ಮಂತ್ರಗಳು ಲಕ್ಷ್ಮಿ ದೇವಿಗೆ ಸಮರ್ಪಿತವಾಗಿವೆ.
  • 🚩ಧನುರ್ಮಾಸದ ಅವಧಿಯಲ್ಲಿ ಬರುವ ಏಕಾದಶಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಧನುರ್ಮಾಸದಲ್ಲಿ ಚಂದ್ರನ ಬೆಳವಣಿಗೆಯ ಹಂತದಲ್ಲಿ ಬರುವ ವೈಕುಂಠ ಏಕಾದಶಿಯು ಮೋಕ್ಷ ದ್ವಾರಂ ಎಂದೆ ಹೆಸರುವಾಸಿಯಾಗಿದೆ. ಈ ದಿನ ದೇವಾಲಯದ ಏಳು ಬಾಗಿಲುಗಳನ್ನು ಹಾದುಹೋಗಲು ಭಕ್ತರಿಗೆ ಮೋಕ್ಷ ದೊರಕದಂತೆ ಎಂಬ ನಂಬಿಕೆ ಇದೆ.
  • 🚩ಧನುರ್ ಸಂಕ್ರಮಣ ಎಂದು ಕರೆಯಲ್ಪಡುವ ಧನುರ್ ರಾಶಿಯಲ್ಲಿ ಸೂರ್ಯನ ಪ್ರವೇಶದಿಂದ ಧನುರ್ಮಾಸಂದ ಆರಂಭವನ್ನು ಗುರುತಿಸಲಾಗಿದೆ, ಆದ್ದರಿಂದ ಆ ಕಾಲಕ್ಕೆ ಧನುರ್ಮಾಸ ಎಂದು ಹೆಸರು. ಈ ತಿಂಗಳಲ್ಲಿ ಸೂರ್ಯ ಧನುರ್ ರಾಶಿಯನ್ನು ತಿಂಗಳ ಕೊನೆಯಲ್ಲಿ ಮಕರ ರಾಶಿಯನ್ನು ಪ್ರವೇಶಿಸುವವರೆಗೆ ಧನುರ್‌ಮಾಸ ಇರುತ್ತದೆ.
  • 🚩ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು. ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.

ಧನುರ್ಮಾಸದ ಪೌರಾಣಿಕ ಹಿನ್ನೆಲೆ

ಒಮ್ಮೆ ಸೃಷ್ಟಿಕರ್ತರಾದ ಬ್ರಹ್ಮದೇವರು ಹಂಸಪಕ್ಷಿಯ ಅವತಾರ ಮಾಡುತ್ತಾ ಲೋಕ ಸಂಚಾರ ಮಾಡುತ್ತಿರುವಾಗ ಸೂರ್ಯದೇವರು ಹಂಸರೂಪಿ ಬ್ರಹ್ಮದೇವರ ಮೇಲೆ ಹೆಚ್ಚಿನ ಶಾಖ ಮತ್ತು ಬೆಳಕನ್ನು ಬಿಡುತ್ತಾರೆ.

ಇದರಿಂದ ಕೋಪಗೊಂಡ ಬ್ರಹ್ಮ ದೇವರು ಸೂರ್ಯದೇವರಿಗೆ ನಿನ್ನ ತೇಜಸ್ಸು ಕ್ಷೀಣಿಸಲಿ ಎಂಬ ಶಾಪ ನೀಡುತ್ತಾರೆ. ಸೂರ್ಯದೇವರು ಕಾಂತಿಹೀನರಾಗಿ ತನ್ನ ಪ್ರಕಾಶ ಕಳೆದುಕೊಂಡರು.

ಇದರಿಂದ ಇಡೀ ಭೂಮಂಡಲ ಅಲ್ಲೋಲ ಕಲ್ಲೋಲವಾಯಿತು.

ಸೂರ್ಯದೇವರಿಲ್ಲದೆ ಋಷಿ-ಮುನಿಗಳಿಗೆ ನಿತ್ಯ-ಪೂಜೆ ಹಾಗೂ ಹೋಮ-ಹವನಗಳಿಗೆ ಬಹಳ ತೊಂದರೆಯಾಗಿ ನಿಲ್ಲಿಸುವಂತಾಯಿತು.

ಆಗ ದೇವಾನುದೇವತೆಗಳು ಹಾಗೂ ಮುನಿವೃಂದದೊಂದಿಗೆ ಬ್ರಹ್ಮದೇವರ ಕುರಿತು ತಪಸ್ಸು ಆಚರಿಸಿದರು.

ಇವರ ತಪಸ್ಸಿಗೆ ಬ್ರಹ್ಮದೇವರು ಪ್ರತ್ಯಕ್ಷನಾಗಿ ಸ್ಥಿತಿ ಅರಿತು, ಒಂದು ಪರಿಹಾರ ಸೂಚಿಸುತ್ತಾರೆ.

ಸೂರ್ಯದೇವ ಧನುರ್ಮಾಸದಲ್ಲಿ ಮೊದಲ ಜಾವದಲ್ಲಿ ಜಗದೊಡೆಯನಾದ ಶ್ರೀ ಮಹಾವಿಷ್ಣುವನ್ನು ಕುರಿತು ಪೂಜಿಸಿದರೆ ಆತನ ಶಾಪ ವಿಮೋಚನೆಯಾಗಲಿದೆ ಎಂಬ ಅಭಯ ಬ್ರಹ್ಮ ದೇವರಿಂದ ಬಂತು.

ಅಂತೆಯೇ ಶ್ರೀ ಸೂರ್ಯದೇವರು ಧನುರ್ಮಾಸದ ಪೂಜೆಯನ್ನು ಮೊದಲ ಜಾವದಲ್ಲಿ ಸತತವಾಗಿ ಹದಿನಾರು ವರುಷ ಮಾಡಿ ಶ್ರೀ ಮಹಾವಿಷ್ಣುವಿನ ಪೂರ್ಣಾನುಗ್ರಹದಿಂದ ಎಂದಿನಂತೆಯೇ ತೇಜಸ್ಸು ಹಾಗೂ ಕಾಂತಿ ಹೊಂದಿ ಜಗತ್ತಿಗೆ ಬೆಳಕು ನೀಡಿದರು ಎಂದು ಪುರಾಣದಿಂದ ತಿಳಿದು ಬರುತ್ತದೆ.

ಸೂರ್ಯದೇವರೇ ಈ ಧನುರ್ಮಾಸ ಪೂಜೆ ಮಾಡಿ ಜಗತ್ತಿಗೆ ಈ ಆಚರಣೆಯ ಮಹತ್ವ ತಿಳಿಯುವಂತೆ ಮಾಡಿದರು.

Leave a Comment

Your email address will not be published. Required fields are marked *