ಶ್ರೀ ವೈಕುಂಠ ಏಕಾದಶಿ? ಇದರ ಮಹತ್ವ ಏನು?

Vaikuntha Ekadashi Mahotsava | Raamapada | 18-12-2018

ಶ್ರೀ ವೈಕುಂಠ ಏಕಾದಶಿ? ಇದರ ಮಹತ್ವ ಏನು?

ಭಗವತ್ ಅವಲೋಕನ ದಿನಂ

ಭಗವಂತನನ್ನು ಅವಲೋಕನ ಮಾಡುವ, ಭಗವಂತನನ್ನು ಒಳ ಕಣ್ಣಿನಿಂದ ನೋಡಿ ಭಗವಂತನ ಸಾಕ್ಷಾತ್ಕಾರಕ್ಕೆ ಅವಕಾಶವಿರುವ ಒಂದು ಅದ್ಭುತವಾದ ದಿನ ಇದು ಶ್ರೀ ವೈಕುಂಠ ಏಕಾದಶಿ

ಇದನ್ನು ಮೋಕ್ಷ ಉತ್ಸವ ದಿನ ಎಂದು ಕೂಡ ಕರೆಯುತ್ತಾರೆ ಯಾಕೆಂದರೆ ಈ ದಿನ ಮೋಕ್ಷವನ್ನು ಪಡೆಯಲು ಅಂದರೆ ಮುಕ್ತಿಯನ್ನು ಪಡೆಯಲು ತುಂಬಾ ಅರ್ಹವಾದ ದಿನ

ನೀ ನೋಡಿರಬಹುದು ತುಂಬಾ ಜನ ವೈಕುಂಠ ಏಕಾದಶಿ ದಿನ ಮೋಕ್ಷವನ್ನು ಪಡೆಯಲು ಕಾತುರದಿಂದ ಇರುತ್ತಾರೆ ಅವತ್ತಿನ ದಿನ ಪಡೆದರೆ ಸ್ವರ್ಗಕ್ಕೆ ಹೋಗುತ್ತಾರೆ ಅನ್ನುವ ಒಂದು ಮಾತಿದೆ.

ಇದು ಮುಕ್ತಿಯ ಹಬ್ಬ ಈ ದಿನ ಅಸಂಖ್ಯಾತವಾದ ಜೀವಿಗಳು ಮುಕ್ತಿಯನ್ನು ಪಡೆಯುತ್ತದೆ.

ಜನ್ಮದಿನ ಮತ್ತು ಮುಕ್ತಿ ದಿನ ಎರಡು ದಿನ ಬಹಳ ಮುಖ್ಯವಾದ ದಿನಗಳು ನಮ್ಮ ಜೀವನದಲ್ಲಿ.

ಹುಟ್ಟುಹಬ್ಬ ಯಾಕೆ ಆಚರಿಸುತ್ತಾರೆ ಅಂತ ಹೇಳಿದ್ರೆ ಹುಟ್ಟಿನಿಂದ ನಮಗೆ ನಮ್ಮ ದೇಹವು ಸಿಗುತ್ತದೆ. ಅದುಕ್ಕೆ ಆಚರಿಸುತ್ತಾರೆ.

ಈ ದೇಹ ಯಾಕಪ್ಪ ಬೇಕು ನಮಗೆ ಅಂದ್ರೆ ಇದು ಮೋಕ್ಷವನ್ನು ಪಡೆಯಲಿಕ್ಕೆ ಇರುವ ಒಂದು ಸಾಧನ.

ಹುಟ್ಟುಹಬ್ಬ ಪ್ರತಿವರ್ಷ ಆಚರಿಸುತ್ತಾರೆ ಆದರೆ ಮೋಕ್ಷದ ಹಬ್ಬ ಅದನ್ನು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ ಮತ್ತು ಇದು ಅವರ ಜೀವನದಲ್ಲಿ ಒಂದು ಸಾರಿ ಮಾತ್ರ ಆಗುತ್ತದೆ.

ಇದನ್ನು ಮುಕ್ಕೋಟಿ ಏಕಾದಶಿಯಿಂದ ಕೊಡ ಕರೀತಾರೆ ಯಾಕಂದ್ರೆ ಈ ದಿನ ಮೂರು ಕೋಟಿ ದೇವತೆಗಳು ಸಹ ಶ್ರೀ ಮಹಾವಿಷ್ಣುವಿನ ಪ್ರಾರ್ಥನೆ ಮಾಡುತ್ತಾರೆ ತಮ್ಮ ಕಷ್ಟಗಳನ್ನು ಪರಿಹರಿಸಬೇಕಾಗಿ ಕೊರುತ್ತಾರೆ.

ಮತ್ತೊಂದು ವಿಶೇಷ ಏನಪ್ಪಾಂದ್ರೆ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ ದಿನ ಕೂಡ ಶ್ರೀ ವೈಕುಂಠ ಏಕಾದಶಿ ದಿನ.

ಯಾವುದಾದರೂ ಹೊಸ ಕೆಲಸಗಳನ್ನು ಪ್ರಾರಂಭ ಮಾಡು ಹಾಗಿದ್ದರೆ ಯಾರಿಗಾದರೂ ಏನಾದರೂ ತುಂಬಾ ಒಳ್ಳೆಯ ಕೆಲಸಗಳನ್ನು ಒಳ್ಳೆ ಉಪದೇಶವನ್ನು ಮಾಡೋ ಹಾಗಿದ್ರೆ ಈದಿನ ತುಂಬಾ ಮಹತ್ವವಾದ ದಿನ

Leave a Comment

Your email address will not be published. Required fields are marked *