Acharane Editorial Team

Acharane Editorial Team writes simple and respectful articles about Hindu traditions, rituals, stories, festivals, and family values. Each article is written for readers who want calm cultural understanding without fear, pressure, or exaggerated claims.

Sunrise prayer setting with lamp, beads, and manuscript for Gayathri Mantra

ಗಾಯತ್ರಿ ಮಂತ್ರ: ಅರ್ಥ, ಪಾರಾಯಣ ಮತ್ತು ಶಾಂತ ಭಾವನೆ

ಪೃಥ್ವಿ, ಆಪ ತೇಜ ಇತ್ಯಾದಿ ಪಂಚಭೂತಗಳಿಗೆ ಅಧಿದೇವತೆಗಳಾದ ಗಣೇಶ, ದುರ್ಗಾ, ಸೂರ್ಯ, ವಿಷ್ಣು ಹಾಗೂ ಶಿವ ಈ ಐದು ದೇವತೆಗಳನ್ನೇ ಒಟ್ಟಿಗೆ ಸೇರಿಸಿ ಸಮಷ್ಟಿಯಾಗಿ ‘ಪಂಚಾಯತನ’ ಎಂದು ಕರೆದು ಪೂಜಿಸುವ ಪದ್ಧತಿ ಬಹುತೇಕ ಎಲ್ಲ ಗೃಹಸ್ಥರ ಮನೆಗಳಲ್ಲಿ ಹಾಗೂ ಮಠಮಾನ್ಯಗಳಲ್ಲಿ ಪ್ರಚಲಿತವಿದೆ. ಈ ಐದು ದೇವತೆಗಳ ಸಮಷ್ಟಿರೂಪವೇ ಪರಬ್ರಹ್ಮತತ್ವ (ಗಾಯತ್ರಿ) ಆಗಿದೆ. ಗಾಯತ್ರೀ ದೇವಿಯ ಶಿರದಲ್ಲಿರುವ ಚಂದ್ರಮೌಳಿಯು ಸಚ್ಚಿದಾನಂದ ತತ್ವವನ್ನು ಸೂಚಿಸುತ್ತದೆ. ತಾವರೆ ಹೂವಿನ ಮೇಲೆ ಗಾಯತ್ರಿ ಕುಳಿತಿರುತ್ತಾಳೆ. ಈ ತಾವರೆಯು ಕೆಸರಿನಲ್ಲಿ ಹುಟ್ಟಿ ನೀರಿನಲ್ಲೇ ಬೆಳೆದು ನಿಂತಿದ್ದರೂ ಕೆಸರು ಅಥವಾ ನೀರನ್ನು ತನಗೆ ಮೆತ್ತಿಸಿಕೊಳ್ಳುವುದಿಲ್ಲ. ಹೀಗೆ ಸಂಸಾರಸಾಗರದಲ್ಲಿ ಜನಿಸಿದ ಮಾನವನು ಸಂಸಾರದ ಭಾಗವಾದ ರಾಗ-ದ್ವೇಷಾದಿಗಲನ್ನು ಅಚಿಟಿಸಿಕೊಳ್ಳದೇ ಅಲಿಪ್ತನಾಗಿಯೇ ಉಳಿದು ಬ್ರಹ್ಮತತ್ವವನ್ನು ಹೊಂದಲು ಪ್ರಯತ್ನಿಸಬೇಕೆಂಬುದೇ ಇದರ ಗೂಢಾರ್ಥವಾಗಿದೆ.

ಗಾಯತ್ರಿ ಮಂತ್ರ: ಅರ್ಥ, ಪಾರಾಯಣ ಮತ್ತು ಶಾಂತ ಭಾವನೆ Read More »