ಸಾಲಿಗ್ರಾಮ | Saligrama a Power Factory

What is Saligram?

Garuda Purana says that

“a touch of Saligrama stone destroys the sins of a crore of births”

Saligrama is the divine stone on which twenty four different forms of Lord Vishnu are seated and each form in turn has several varieties.

Saligrama with its spirals and perforations becomes a character for the unique worship of Vishnu.

Saligrama is available in the Kali Gandaki River in Nepal.

ಸಾಲಿಗ್ರಾಮ ಎಂದರೇನು?

ಸಾಲಿಗ್ರಾಮದ  ಸ್ಪರ್ಶದಿಂದ ಕೋಟಿ ಜನ್ಮಗಳ ಪಾಪ ನಾಶವಾಗುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ.

ಸಾಲಿಗ್ರಾಮವು ವಿಷ್ಣುವಿನ ಇಪ್ಪತ್ನಾಲ್ಕು ವಿವಿಧ ರೂಪಗಳು ಕುಳಿತಿರುವ ದೈವಿಕ ಕಲ್ಲು ಮತ್ತು ಪ್ರತಿ ರೂಪವು ಪ್ರತಿಯಾಗಿ ಹಲವಾರು ಪ್ರಭೇದಗಳನ್ನು ಹೊಂದಿರುತ್ತದೆ.

ಸಾಲಿಗ್ರಾಮವು ಅದರ ಸುರುಳಿಗಳು ಮತ್ತು ರಂದ್ರಗಳಿಂದ ವಿಷ್ಣುವಿನ ವಿಶಿಷ್ಟವಾದ ಪೂಜೆಗೆ ಪಾತ್ರವಾಗುತ್ತದೆ.

ನೇಪಾಳದಲ್ಲಿರುವ ಕಾಲಿ ಗಂಡಕಿ ನದಿಯಲ್ಲಿ ಸಾಲಿಗ್ರಾಮ ಲಭ್ಯವಿದೆ.

ಸಾಲಿಗ್ರಾಮವನ್ನು ಪೂಜಿಸುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.

ಸಾಲಿಗ್ರಾಮ ಕಲ್ಲು ಇರುವ ಮನೆಯಲ್ಲಿ ಯಾವಾಗಲೂ ಸಿರಿ ಸಂಪತ್ತು ಧನ ಧಾನ್ಯ ಅಭಿವೃದ್ಧಿ ಆಗುತ್ತದೆ.

ಸಾಲಿಗ್ರಾಮದ ನಿತ್ಯ ಪೂಜೆಯಿಂದ ಹಿಂದಿನ ಜನ್ಮದಲ್ಲಿ ಹಾಗೂ ಈ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳೆಲ್ಲವೂ ತೊಳೆದುಹೋಗುತ್ತವೆ.

ದೈವಿಕ ಶಕ್ತಿಯನ್ನು ಹೊಂದಿರುವ ಸಾಲಿಗ್ರಾಮವನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಆಗಮಿಸುವುದು.

ಸಾಲಿಗ್ರಾಮದ ವರ್ಣಗಳು ಮತ್ತು ಫಲ

ಸಾಲಿಗ್ರಾಮದಲ್ಲಿ ಹಲವಾರು ವರ್ಣಗಳು ಇದೆ ಮತ್ತು ಒಂದೊಂದು ವರ್ಣದ ಸಾಲಿಗ್ರಾಮ ಪೂಜೆಯಿಂದ ಒಂದೊಂದು ಫಲಗಳು ಇವೆ. ಅದರ ಬಗ್ಗೆ ಈಗ ತಿಳಿಯೋಣ.

” ಶ್ವೇತ ಪೀತ ತಥಾ ರಕ್ತಾ ಕೃಷ್ಣಾ ಶಾಡ್ವಲ ಸನ್ನಿಭಾ
ಕಪಿಲಾ ಚ ತಥಾ ಧೂಮ್ರಾ ಕಲಂಕಾ ಬಹುವರ್ಣಿನೀ
ಅತಿವರ್ಣಾ ವಿವರ್ಣಾಚ ತಥಾ ಸಂದಿಗ್ಧ ವರ್ಣಿನೀ
ಏ ವಂ ವಿಧೈಸ್ತಥಾ ವರ್ಣೈ ರೂಪೈ ನಾನಾ ವಿಧಾಶಿಲಾ”||

 ಬಿಳೆ ,ಹಳದಿ, ಕೆಂಪು, ಕಪ್ಪು ಹಸಿರು, ಕಪಿಲ, ಧೂಮ್ರ ,ಮಿಶ್ರ ಬಣ್ಣ ,ಚುಕ್ಕೆಗಳು ಇರುವವು, ಅತಿದಟ್ಟ ವರ್ಣ, ಬಣ್ಣವಿಲ್ಲದ, ಸಂದಿಗ್ಧ ಬಣ್ಣ, ಹೀಗೆ ನಾನಾ ರೀತಿಯ ನಾನಾ ಆಕಾರದ ಸಾಲಿಗ್ರಾಮ ಗಳು ಸಿಗುತ್ತವೆ.

ಇವುಗಳ ಪೂಜೆಯಿಂದ ದೊರಕುವ ಫಲಗಳು..

ಧೂಮ್ರವರ್ಣದ ಸಾಲಿಗ್ರಾಮ ಶ್ರೇಷ್ಠವಾದದ್ದು, ಇದು ಯತಿಗಳ ಪೂಜೆಗೆ ಯೋಗ್ಯವಾದವು ಗಳು.

ಬಹಳ ಬಣ್ಣಗಳು ಳ್ಳ ಹಾಗೂ ಮೈಮೇಲೆ ಚುಕ್ಕಿ ಗಳುಳ್ಳ ಸಾಲಿಗ್ರಾಮಗಳು ಕ್ಷಯ ಕಾರಿಯಾದವುಗಳು.

ಅತಿ ದಟ್ಟ ಬಣ್ಣದ ಸಾಲಿಗ್ರಾಮದಿಂದ ದುಃಖ ಉಂಟಾಗುತ್ತದೆ.

ಮಸ ಮಸ ಕಾದ ಬಣ್ಣವುಳ್ಳ ಸಾಲಿಗ್ರಾಮ ದಿಂದ ಕುಲ ನಾಶವಾಗುತ್ತದೆ.

ಸಂದಿಗ್ಧ ಬಣ್ಣದ ಸಾಲಿಗ್ರಾಮ ದಿಂದ ಭೂಮಿ ಹಾನಿ ಉಂಟಾಗುತ್ತದೆ.

ಕಪಿಲ ಬಣ್ಣದ ಸಾಲಿಗ್ರಾಮ ಪೂಜೆಯಿಂದ ಪತ್ನಿಗೆ ಮರಣ ಉಂಟಾಗುತ್ತದೆ.

ನೀಲಿಬಣ್ಣದ ಸಾಲಿಗ್ರಾಮ ದಿಂದ ಸಂಪತ್ತು ಅಭಿವೃದ್ಧಿಯಾಗುತ್ತದೆ.

ಶ್ಯಾಮ ಬಣ್ಣದ ಸಾಲಿಗ್ರಾಮ ಆರೋಗ್ಯ ಪ್ರಾಪ್ತವಾಗುತ್ತದೆ.

ಕೆಂಪು ಬಣ್ಣದ ಸಾಲಿಗ್ರಾಮ ದಿಂದ ರಾಜ್ಯ ಲಾಭ, ಭೂಲಾಭ ಉಂಟಾಗುತ್ತದೆ.

ಅತಿ ಕೆಂಪು ಬಣ್ಣದ ಸಾಲಿಗ್ರಾಮ ಪೂಜೆಯಿಂದ ಮೃತ್ಯು ಪ್ರಾಪ್ತವಾಗುತ್ತದೆ.

ಬಿಳೆ ಬಣ್ಣದ ಸಾಲಿಗ್ರಾಮ ದಿಂದ ಧನಲಾಭ ಜೊತೆಗೆ ಮೋಕ್ಷ ದಾಯಕವಾಗಿದೆ.

ಬಹಳ ಬಣ್ಣಗಳು ಳ್ಳ ಸಾಲಿಗ್ರಾಮ ಸಂಪತ್ತನ್ನು ನೀಡುತ್ತದೆ.

ಯಾವ ಬಣ್ಣವಿಲ್ಲದ ಸಾಲಿಗ್ರಾಮ ಯಾವ ಫಲವನ್ನು ಕೊಡುವುದಿಲ್ಲ.

ಸಂದಿಗ್ಧ ಬಣ್ಣದ ಸಾಲಿಗ್ರಾಮ ಸರ್ವನಾಶವನ್ನು ಉಂಟುಮಾಡುತ್ತದೆ.

ವರ್ಜ್ಯ ಸಾಲಿಗ್ರಾಮಗಳು….

ಕಪ್ಪೆಯ ಆಕಾರದ, ಸುಡಲ್ಪಟ್ಟ, ಉಷ್ಣ ಆಗಿರುವ ಸಾಲಿಗ್ರಾಮಗಳನ್ನು ತ್ಯಜಿಸಬೇಕು.

ಇವುಗಳನ್ನು ಪೂಜಿಸುವುದರಿಂದ ದುಃಖ, ದಾರಿದ್ರ್ಯ ಉಂಟಾಗುತ್ತದೆ.

ಕಟ್ಟು ಹಾಕಲ್ಪಟ್ಟ, ಮತ್ತು ಮೂರು ಮೂಲೆಯ ಸಾಲಿಗ್ರಾಮ ದಿಂದ ಬಂಧು ನಾಶ.

ಒಳಭಾಗದಲ್ಲಿ ಒಡೆದ ಚಕ್ರದ ಸಾಲಿಗ್ರಾಮ ದಿಂದ ಬಂಧು ಪುತ್ರರ ನಾಶ.

ಭಯಂಕರವಾಗಿ ಗೋಚರಿಸುವ ಸಾಲಿಗ್ರಾಮ ದುಃಖವನ್ನು ಕುಲನಾಶವನ್ನು ಉಂಟುಮಾಡುತ್ತದೆ.

  ಸಾಲಿಗ್ರಾಮಗಳನ್ನು ಪೂಜಿಸುವ ಮುನ್ನ ಅದರ ವರ್ಣ ಮತ್ತು ಫಲದ ಕಡೆಗೆ ಗಮನವನ್ನು ನೀಡುವುದು ಉತ್ತಮ.. ಇಂತಹ ವಿಶೇಷತೆಗಳನ್ನು ಹೊಂದಿರುವ ಸಾಲಿ ಗ್ರಾಮಗಳಲ್ಲಿ 90ಕ್ಕೂ ಹೆಚ್ಚು ವಿಧಗಳಿವೆ.

ಸರ್ವೇಜನಾಃ ಸುಖಿನೋ ಭವಂತು

ಸಾಲಿಗ್ರಾಮಕ್ಕೆ ಯಾಕಿಷ್ಟು ಮಹತ್ವ?

      ಪುರಾಣದಲ್ಲಿ ಹೇಳಿರುವಂತೆ ಜಲಂಧರ ( ಶಂಖಚೂಡ) ನನ್ನು ಕೊಲ್ಲಲು ವಿಷ್ಣುವು ಶಂಖಚೂಡನ ವೇಷಧಾರಿಯಾಗಿ ಆತನ ಸತಿ ವೃಂದಾಳ (ತುಳಸಿ) ಪಾತಿವ್ರತ್ಯವನ್ನು ಭಂಗ ಮಾಡಬೇಕಾಗುತ್ತದೆ. ಇದರಿಂದ ಕೋಪಗೊಂಡ ವೃಂದಾ ವಿಷ್ಣುವಿಗೆ   “ಹೇ ನಾಥ ತೇ ದಯಾ ನಾಸ್ತಿ ಪಾಷಾಣ ಸದೃಶಸ್ಯ ಚ” ಕಲ್ಲಿನಂತಹ ಮನಸ್ಸಿನ ನೀನು ಕಲ್ಲಾಗಿ ಅವತರಿಸು ಎಂದು ಶಾಪವನ್ನು ಕೊಡುತ್ತಾಳೆ.  ಪುನಃ ವಿಷ್ಣುವು ನೀನು ನನ್ನನ್ನು ಪತಿಯಾಗಿ ಪಡೆಯಲು ಹಲವು ವರ್ಷ ತಪಸ್ಸನ್ನು ಮಾಡಿರುವೆ ,ಆದರೆ ಅದು ನೆರವೇರಲಿಲ್ಲ ನಿನ್ನ ತಪಸ್ಸಿಗೆ ಈಗ ವರವನ್ನು ನೀಡುತ್ತಿರುವೆ, ನೀನು ಗಂಡಕಿ ನದಿಯಾಗಿ ಅವತರಿಸು ನಿನ್ನ ಒಡಲಿನಲ್ಲಿ ಸಾಲಿಗ್ರಾಮ ರೂಪದ ಕಲ್ಲಾಗಿ ನಾನು ನಿನ್ನ ಸಮೀಪದಲ್ಲಿ ಇರುವೆ.ಎಂದು ವರವನ್ನು ನೀಡುತ್ತಾರೆ. ಆದ್ದರಿಂದ ವಿಷ್ಣುವಿನ ಅವತಾರವಾದ ಸಾಲಿಗ್ರಾಮಕ್ಕೆ ಮಹತ್ವವನ್ನು ನೀಡಲಾಗಿದೆ.

         ಈ ಸಾಲಿಗ್ರಾಮವು ಅವಂತಿ ದೇಶದಲ್ಲಿ ಹರಿಯೆಂಬ ಹೆಸರಿನ ಪರ್ವತ ಇದ್ದು ಅಲ್ಲಿ ಪರಮ ಪವಿತ್ರವಾದ ಶಿಲಾಮಯ ಪ್ರದೇಶದಲ್ಲಿ ಸಾಲಿಗ್ರಾಮ ವೆಂಬ ಹೆಸರಿನ ಕ್ಷೇತ್ರವಿದೆ. ಅಂದರೆ ಈಗಿನ ನೇಪಾಳದ ಮಸ್ತಾಂಗ್ ಪ್ರದೇಶದಲ್ಲಿ ಹರಿಯುವ ಕಾಲಿ-ಗಂಡಕಿ ನದಿಯ ಸಮೀಪ ಸಾಲಿಗ್ರಾಮ ಊರಿದೆ ಅಲ್ಲಿ ಹೆಚ್ಚಾಗಿ ಸಾಲಿಗ್ರಾಮ ಶಿಲೆ ಸಿಗುತ್ತದೆ.

“ಪಶ್ಚಾತ್ ಸಹಸ್ರ ವರ್ಷಾಣಾಂ ಸಾಲಿಗ್ರಾಮ ಸ್ಯ ಚಕ್ರಕೇ

ವಜ್ರ ಕೀಟ ಇತಿಖ್ಯಾತೋಜಂತುರ್ಭೂತ್ವಾ ಹರಿಃ ಸ್ವಯಂ” ||

ಈ ಸಾಲಿಗ್ರಾಮದಲ್ಲಿ ಸಾಕ್ಷಾತ್ ವಿಷ್ಣು ಕೀಟ ಜಂತು ವಾಗಿರುವನು ಈ ಸಾಲಿಗ್ರಾಮಗಳು ಹಿರಣ್ಮಯ ವಾಗಿಯೂ,ಮಹಾ ಶಕ್ತಿಶಾಲಿಯಾಗಿಯೂ, ವಿದ್ಯುತ್ ಸಂಚಾರ ಉಳ್ಳವುಗಳಾಗಿಯೂ,ಪ್ರಕಾಶಮಾನವಾಗಿ ಯೂ ಇರುವವು.

“ನಾನಾ ವಿಧಾನಿ ಚಕ್ರಾಣಿ ನಾನಾ ರೂಪಾಣಿ ಲೀಲಯಾ”

   ಇಂತಹ ಸಾಲಿಗ್ರಾಮ ಗಳಲ್ಲಿ ಚಕ್ರ ಮೊದಲಾದ ಚಿಹ್ನೆಗಳು ನಾನಾ ವಿಧವಾಗಿ, ನಾನಾ ರೂಪದಿಂದ ತಮ್ಮಷ್ಟಕ್ಕೆ ತಾವೇ ಲೀಲಾಯ ಮಾನವಾಗಿ ಚಿತ್ರಿಸಲ್ಪಡುವವು. ಸಹಸ್ರಾರು ವರ್ಷಗಳಿಂದ ನಿರ್ಮಾಣವಾಗುತ್ತಿರುವ ಇಂತಹ ಸಾಲಿಗ್ರಾಮಗಳಲ್ಲಿ ಸಾಕ್ಷಾತ್ ಲಕ್ಷ್ಮಿ ಪತಿಯಾದ ಭಗವಾನ್ ವಿಷ್ಣು ಪರಮಾತ್ಮನ ಸಾನ್ನಿಧ್ಯವು ಸದಾಕಾಲ ಇರುವುದು. ಆದ್ದರಿಂದ ಸಾಲಿಗ್ರಾಮದಲ್ಲಿ ವಿಷ್ಣುವಿನ ಆವಾಹನೆ ವಿಸರ್ಜನೆಯ ಅವಶ್ಯಕತೆ ಇರುವುದಿಲ್ಲ.

” ಸಾಲಿಗ್ರಾಮ ಶಿಲಾಯಾಂತು ನಾ$$ವಾಹನ ವಿಸರ್ಜನೇ”.

    ಒಂದು ಸಾಲಿಗ್ರಾಮವನ್ನು ಪೂಜಿಸಿದರೆ ನೂರು ಶಿವಲಿಂಗವನ್ನು ದರ್ಶನ ಮತ್ತು ಪೂಜಿಸಿದ ಫಲ ದೊರೆಯುತ್ತದೆ.

” ಮಹಾಲಿಂಗ ಕೋಟಿಬಿಃ ದೃಷ್ಟಿ ಯದ್ ಫಲಂ ಪೂಜತಿ

 ಸಾಲಿಗ್ರಾಮ ಶಿಲಾಯಾಂತು ಏಕಸ್ಯಂ ಇವ ತದ್ಭವೇತ್”.

 ಇದನ್ನು ಪೂಜಿಸುವುದರಿಂದ ಇಷ್ಟಾರ್ಥಸಿದ್ಧಿ ಆರೋಗ್ಯ ಐಶ್ವರ್ಯ ಶಾಂತಿ ದೊರೆಯುತ್ತದೆ ಇದರ ನೀರಿನ ಸ್ಪರ್ಶದಿಂದ ಚಿಂತೆ ಒತ್ತಡ ಕಡಿಮೆಯಾಗುತ್ತದೆ. ಆದರೆ ಹೆಣ್ಣು ಮಕ್ಕಳಿಗೆ ಸಾಲಿಗ್ರಾಮವನ್ನು ಮುಟ್ಟುವ ಮತ್ತು ಪೂಜಿಸುವ ಅಧಿಕಾರ ಇಲ್ಲ.

ಇಂತಹ ಭಗವಂತನ ನಿತ್ಯ ಸಾನ್ನಿಧ್ಯಹೊಂದಿರುವ ಸಾಲಿಗ್ರಾಮದಲ್ಲಿ ಹಲವು ವರ್ಣಗಳು ಹಲವು ವಿಧಗಳು ಇದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದುಕೊಳ್ಳೋಣ.

2 thoughts on “ಸಾಲಿಗ್ರಾಮ | Saligrama a Power Factory”

Leave a Comment

Your email address will not be published. Required fields are marked *