jaatakadalli navagrahala bage putta mahiti-Navagraha Explained in kannada text and english text on the black colour background along with navagrahas like surya, chandra, mangala, budha, guru, shukra, shanii, rahu and ketu

ಜಾತಕದಲ್ಲಿ ನವಗ್ರಹಗಳ ಬಗ್ಗೆ ಪುಟ್ಟ ಮಾಹಿತಿ | Navagraha Important Details in Kannada

jaatakadalli navagrahala bage putta mahiti-Navagraha Explained in kannada text and english text on the black colour background along with navagrahas like surya, chandra, mangala, budha, guru, shukra, shanii, rahu and ketu
Navagraha image on the black background with English and kannada scripture

ನವಗ್ರಹಗಳ (Navagraha) ಶಕ್ತಿ ಪರಿಣಾಮ ದೋಷಗಳು ಮತ್ತು ಪರಿಹಾರಗಳು

Index of Important Points

ನವಗ್ರಹಗಳು (Nava graha) ನಮ್ಮ ಜೀವನದ ಆಗುಹೋಗುಗಳನ್ನು ನಿರ್ಧರಿಸುತ್ತವೆ. ಈ 9 ಗ್ರಹಗಳು ಹುಟ್ಟಿನಿಂದ ಸಾವಿನವರೆಗೂ ಎಲ್ಲಾ ಕ್ಷಣಗಳಿಗೆ,  ಸುಖಕ್ಕೂ ದುಃಖಕ್ಕೂ ಕಾರಣವಾಗಿರುತ್ತದೆ.

ಗುರು ಗ್ರಹ (ಬ್ರಹಸ್ಪತಿ) | Jupiter graha (planet) in Kannada

Gurugraha jupiter planet aspects completely detailed in blog

ಗುರು (ಬ್ರಹಸ್ಪತಿ) ಕುರಿತು ಪುಟ್ಟ ಮಾಹಿತಿ ನೋಡೋಣ…. | Jupiter planet important aspects in Kannada

  • ಗುರು ( ಬ್ರಹಸ್ಪತಿ ) (Jupiter graha (planet) )
  • ಸ್ವಕ್ಷೇತ್ರ – ಧನು ಮತ್ತು ಮೀನ
  • ಸಂಖ್ಯೆ – ೩ ಮೂರು
  • ಉಚ್ಚ ಕ್ಷೇತ್ರ – ಕರ್ಕಾಟಕ
  • ನೀಚ ಕ್ಷೇತ್ರ – ಮಕರ
  • ದಿಕ್ಕು – ಈಶಾನ್ಯ
  • ಧಾನ್ಯ – ಕಡಲೆ
  • ಬಣ್ಣ – ಹಳದಿ
  • ಮಿತ್ರ ಗ್ರಹ – ಸೂರ್ಯ ಚಂದ್ರ ಹಾಗೂ ಕುಜ ( ಮಂಗಳ )
  • ಶತ್ರು ಗ್ರಹ – ಶುಕ್ರ ಹಾಗೂ ಬುಧ
  • ಸಮ ಗ್ರಹ – ಶನಿ
  • ರತ್ನ – ಪುಷ್ಯರಾಗ ಅಥವಾ ಕನಕ ಪುಷ್ಯರಾಗ
  • ದಶಾವಧಿ  – ೧೬ ಹದಿನಾರು ವರ್ಷಗಳು

ಗುರುಗ್ರಹನು (Jupiter graha (planet) ) ಧನು ಮತ್ತು ಮೀನರಾಶಿಗಳ ಅಧಿಪತಿಯಾಗಿದ್ದು ಕರ್ಕ, ಮಕರ ರಾಶಿಗಳು ಕ್ರಮವಾಗಿ ಅವನ ಉಚ್ಚ ಮತ್ತು ನೀಚ ಕ್ಷೇತ್ರಗಳಾಗಿರುತ್ತವೆ. ಧನುವು ಮೂಲತ್ರಿಕೋಣ ರಾಶಿಯಾಗಿರುತ್ತದೆ. 

ಗುರು Jupiter graha (planet) ಜ್ಯೋತಿಷ್ಯದಲ್ಲಿ ಪುರುಷ ಗ್ರಹ. ಗುರುವು ನೈಸರ್ಗಿಕವಾಗಿ ಶುಭ ಗ್ರಹನಾಗಿರುತ್ತಾನೆ. 

ಗುರುವು Jupiter graha (planet) ಆಕಾಶ ತತ್ವಕ್ಕೆ ಅಭಿಮಾನಿ ಮತ್ತು ವಾತ-ಕಫ ದೋಷಗಳ ಕಾರಕನಾಗಿದ್ದಾನೆ. 

ರವಿ-ಚಂದ್ರ-ಮಂಗಳರು (Sun – Moon – Mars) ಮಿತ್ರ ಗ್ರಹರಾಗಿರುತ್ತಾರೆ, ಬುಧ-ಶುಕ್ರರು ಶತ್ರುಗ್ರಹಗಳಾಗಿದ್ದಾರೆ ಮತ್ತು ಶನಿ-ರಾಹುಗಳು ತಟಸ್ಥರಾಗಿರುತ್ತಾರೆ. 

ಬೃಹತ್ಪರಾಶರಿಯಲ್ಲಿ ಗುರುವಿನ (Jupiter graha (planet)) ಸ್ವರೂಪವನ್ನು ಈ ರೀತಿ ವರ್ಣಿಸಿರುತ್ತಾರೆ …

 ಬ್ರಹದ್‍ಗಾತ್ರೋ ಗುರುಶ್ಚೈವ ಪಿಂಗಲೋ ಮೂರ್ದಜೇಕ್ಷಣೈಃ | ಕಫಪ್ರಕೃತಿಕೋ ಧಿಮಾನ್ ಸರ್ವಶಾಸ್ತ್ರವಿಶಾರದಃ || (ಬೃ-ಪ-ಹೋ ೦೩-೨೮) 

ಅಂದರೇ….ಬೃಹತ್ತಾದ ದೇಹ, ಹಳದಿ ಬಣ್ಣದ ನೇತ್ರಗಳು ಮತ್ತು ಕೇಶಗಳುಳ್ಳ, ಕಫಪ್ರಕೃತಿಯುಳ್ಳವನೂ, ಸರ್ವಶಾಸ್ತ್ರಗಳನ್ನು ಬಲ್ಲವನೂ, ಬುದ್ಧಿವಂತನಾದವನು ಇವು ಗುರುವಿನ ಲಕ್ಷಣ.

 ಫಲದೀಪಿಕಾ ಮಂತ್ರೇಶ್ವರರ ಪ್ರಕಾರ …

ಪೀತದ್ಯುತಿಃ ಪಿಂಗಕಚೇಕ್ಷಣಃ ಸ್ಯಾತ್ ಪೀನೋನ್ನತೋರಾಚ್ಚ ಬೃಹಶ್ಚರೀರಃ | ಕಫಾತ್ಮಕಃ ಶ್ರೇಷ್ಠಮತಿಃ ಸುರೇಢ್ಯಃ ಸಿಂಹಾಬ್ಜನಾದಶ್ಚ ವಸುಪ್ರಧಾನಃ ||

(ಫಲದೀಪಿಕಾ ೦೨-೧೨)

ಅಂದರೇ…ಗುರುವು (Jupiter graha (planet)) ಹಳದಿ ಬಣ್ಣದ ಕಾಂತಿಯುತ ಶರೀರ ಉಳ್ಳವನು ನೀಲಿ ಮತ್ತು ಹಳದಿ ಮಿಶ್ರಿತ ಬಣ್ಣದ ಕಣ್ಣು ಮತ್ತು ಕೂದಲು ಉಳ್ಳವನು, ಸ್ಥೂಲ ಮತ್ತು ಎತ್ತರವಾದ ದೊಡ್ಡ ಗಾತ್ರದ ಶರೀರ ಉಳ್ಳವನು, ಕಫ ಪ್ರಕೃತಿಯವನು, ಶ್ರೇಷ್ಟವಾದ ಬುದ್ಧಿ ಉಳ್ಳವನು, ಸಿಂಹದ ಘರ್ಜನೆಯಂತೆ ಸ್ವರ ಉಳ್ಳವನು, ಧನಕಾರಕನು, ಮಂತ್ರಿಯು ಆಗಿರುತ್ತಾನೆ. 

ಹಾಗಾಗಿ..ಗುರು (Jupiter graha (planet)) ಶಬ್ದದ ಅರ್ಥವೇ ದೊಡ್ಡಗಾತ್ರದವನು, ಭಾರವಾದಂತವನು ಎಂಬುದಾಗಿದೆ. 

ಫಲದೀಪಿಕಾ ಮತದಂತೆ ಗುರುವಿನಿಂದ (Jupiter planet) ಚಿಂತಿಸಬೇಕಾದ ವಿಷಯಗಳು – 

ಜ್ಞಾನಂ ಸದ್ಗುಣಮಾತ್ಮಜಂ ಚ ಸಚಿವಂ ಸ್ವಾಚಾರಮಾಚಾರ್ಯಕಮ್ ಮಾಹಾತ್ಮ್ಯಂ ಶ್ರುತಿಶಾಸ್ತ್ರಧೀಸ್ಮೃತಿಮತಿಂ ಸರ್ವೋನ್ನತಿಂ ಸದ್ಗತಿಮ್ | ದೇವಬ್ರಾಹ್ಮಣಭಕ್ತಿಮಧ್ವರತಪಃ ಶ್ರದ್ಧಾಶ್ಚ ಕೋಶಸ್ಥಲಂ ವೌದುಷ್ಯಂ ವಿಜಿತೇಂದಿಯಂ ಧನಸುಖಂ ಸಂಮಾನಮೀಢ್ಯಾದ್ದಯಾಮ್ ||

(ಫಲದೀಪಿಕಾ ೦೨-೦೫)

ಅಂದರೆ… ಜ್ಞಾನ, ಸದ್ಗುಣ, ಮಕ್ಕಳು, ಮಂತ್ರಿ, ಸದಾಚಾರ, ವಿದ್ಯಾದಾರ, ಮಹತ್ವ, ವೇದ, ಶಾಸ್ತ್ರ ಮತ್ತು ಸ್ಮೃತಿ ಇತ್ಯಾದಿಗಳ ಜ್ಞಾನ, ಸಕಲ ವಿಚಾರಗಳಲ್ಲಿ ಅಭಿವೃದ್ಧಿ, ಸದ್ಗತಿ, ದೇವ-ಬ್ರಾಹ್ಮಣರಲ್ಲಿ ಭಕ್ತಿ, ತ್ಯಾಗ, ತಪಸ್ಸು, ಶ್ರದ್ಧೆ, ಕೋಶಾಗಾರ, ವಿದ್ವತ್ತು, ಜಿತೇಂದ್ರಿಯ, ಪತಿ, ಸುಖ, ಸನ್ಮಾನ, ಪ್ರಶಂಸೆ, ದಯೆ ಮೊದಲಾದ ವಿಚಾರ ಗುರುವಿನಿಂದ (Jupiter graha (planet)) ಚಿಂತಿಸಬೇಕು. 

ಗೋಚಾರವನ್ನು ಚಂದ್ರರಾಶಿ ಅಥವಾ ಜನ್ಮರಾಶಿಯಿಂದ ತಿಳಿಯಬೇಕು. 

ಸರ್ವೇಷು ಲಗ್ನೇಷ್ವಪಿ ಸತ್ಸು ಚಂದ್ರಲಗ್ನಂ ಪ್ರಧಾನಂ ಖಲು ಗೋಚರೇಷು | ತಸ್ಮಾತ್ತದೃಕ್ಷಾದಪಿ ವರ್ತಮಾನಗ್ರಹೇಂದ್ರಚಾರೈಃ ಕಥಯೇತ್ಫಲಾನಿ ||

(ಫಲದೀಪಿಕಾ, ಗೋಚರಫಲಾಧ್ಯಾಯ-೦೧) 

ಹಾಗಾಗಿ….ಗೋಚಾರದ ಫಲಗಳನ್ನು ತಿಳಿಯಲು ಎಲ್ಲ ಲಗ್ನಗಳಲ್ಲಿ ಚಂದ್ರ ಲಗ್ನವೇ (Chandra / Moon Lagna) ಪ್ರಧಾನ ಆಗಿರುತ್ತದೆ. 

ಆದ್ದರಿಂದ ತಾತ್ಕಾಲಿಕ ಗ್ರಹರ ಸಂಚಾರದ ಫಲಾಫಲ ತಿಳಿಯಲು ಚಂದ್ರ (Chandra / Moon Planet ) ನಿಂದ (ಜನ್ಮರಾಶಿ / Zodiac Sign) ಆ ಗ್ರಹಸ್ಥಿತ ರಾಶಿಗಳನ್ನು ಪರಿಗಣಿಸಬೇಕು. 

ಇನ್ನು ಕೆಲವರು ಮುವತ್ತು ವಯಸ್ಸಿನ ವರೆಗೆ ಆಯಾ ಜಾತಕದ ಲಗ್ನದಿಂದಲೇ ನಿರ್ಣಯಿಸಬೇಕು ಎನ್ನುತ್ತಾರೆ ಹಾಗಾಗಿ ಅದು ಅವರವರ ಮಂಥನ ಹಾಗೂ ತರ್ಕಕ್ಕೆ ಬಿಟ್ಟ ವಿಚಾರ….

ಗುರುಗ್ರಹದ (Jupiter Planet) ಗೋಚಾರ ಫಲ

 ಸ್ವಾಯಧರ್ಮತನಯಾಸ್ತಸಂಸ್ಥಿತೋ ನಾಕನಾಯಕ ಪುರೋಹಿತಃ ಶುಭಃ | ರಿಃಫರಂಧ್ರಖಜಲತ್ರಿಗೈರ್ಯದಾ ವಿದ್ಯತೇ ಗಗನಚಾರಿಭಿರ್ನ ಹಿ ||

(ಫಲದೀಪಿಕಾ, ಗೋಚರಫಲಾಧ್ಯಾಯ-೦೭) 

ಜನ್ಮರಾಶಿಯಿಂದ ಗುರುವು (Jupiter graha (planet)) ಶುಭಫಲ ನೀಡುವ ಸ್ಥಾನಗಳು 2-5-7-9-11 ಹಾಗಾಗಿ ಬ್ರಹಸ್ಪತಿಯು ಜನ್ಮರಾಶಿಯಿಂದ 2-5-7-9-11 ನೇಯವನಾಗಿ ಸಂಚಾರ ಮಾಡುತ್ತಿರುವಾಗ ಶುಭನಾಗಿರುತ್ತಾನೆ

ಇದೇ ರೀತಿ ಜನ್ಮರಾಶಿಯಿಂದ 4-6-8-12 ನೇಯವನಾಗಿ ಗುರುಗೋಚಾರವಾಗಲು (Jupiter graha (planet)) ಅಶುಭ ಫಲವನ್ನು ಕೊಡುತ್ತಾನೆ.

 ಬರೀ ಗ್ರಹದ ಗೋಚಾರ ಫಲವನ್ನು ಮಾತ್ರ ಪೂರ್ಣವಾಗಿ ಪರಿಗಣಿಸಬಾರದು ಏಕೆಂದರೆ….

ಯಾವುದೇ ಗ್ರಹ ಗೋಚಾರದಲ್ಲಿ ಅಶುಭನಾಗಿ ಜಾತಕುಂಡಲಿಯಲ್ಲಿ ಶುಭನಾಗಿದ್ದಲ್ಲಿ ಅಶುಭ ಗೋಚಾರ ಫಲ ಕಡಿಮೆಯಾಗಿರುತ್ತದೆ. ಹಾಗಾಗಿ ಕೇವಲ ಗೋಚಾರವೊಂದೇ ಫಲ ನಿರ್ಣಾಯಕವಲ್ಲ. 

ಹಾಗಾಗಿ ಭಯಪಡುವ ಅಗತ್ಯವಿಲ್ಲ.

ಗುರು ಗ್ರಹದ ಮಂತ್ರಗಳು (Jupiter graha Mantra)

ದೇವಾನಾಂಚ ಋಷಿನಾಂಚ್ಚ 

ಗುರುಂ ಕಾಂಚನ ಸನ್ನಿಭಮ್| 

ಬುದ್ದಿರ್ಭೂತಮ್ ತ್ರಿಲೋಕೇಶಂ 

ತಮ್ ನಮಾಮಿ ಬೃಹಸ್ಪತಿಮ್ |

ಗುರುಬ್ರಹ್ಮ, ಗುರುರ್ವಿಶ್ಣು, 

ಗುರುದೇವೋ ಮಹೇಶ್ವರಃ l 

ಗುರುಸಾಕ್ಷಾತ್ ಪರಬ್ರಹ್ಮ

ತಸ್ಮೈ  ಶ್ರೀ ಗುರವೇನಮಃ

ಗುರು ದಶಾ ಫಲ | Jupiter planet Dasha phala

ಜಾತಕ ಕುಂಡಲಿಯಲ್ಲಿನ ಆಯಾ ಸ್ಥಾನಗಳಲ್ಲಿ ಸ್ಥಿತನಾದ ಗುರುವಿನಿಂದ (Jupiter planet) ಆಯಾ ಸ್ಥಾನಗಳಿಗನುಗುಣವಾಗಿ ಗುರು ದಶಾ ಫಲ (೧೬ ವರ್ಷಗಳು)

ಮೇಷ ಸ್ಥಿತ ಗುರುವಿನಿಂದ (Jupiter Planet from Aries)

ಸೌಭಾಗ್ಯ;ಉದ್ಯಮ ತಕರಾರುಗಳಲ್ಲಿ ವಿಜಯ;ಭೂ ಸ್ವತ್ತಿನ ಹೆಚ್ಚಳ; ಜವಾಬ್ದಾರಿ ಸ್ಥಾನ ಅಥವಾ ಧರ್ಮಾಧಿಕಾರಿಯಾಗುವ ಅವಕಾಶ; ಸ್ವಜನರಿಂದ ಪ್ರಶಂಸೆಗಳು; ಅಪಾರ ಗೌರವ ಹಾಗೂ ಖ್ಯಾತಿ…. ಇತ್ಯಾದಿ.

ವ್ರಷಭ ಸ್ಥಿತ ಗುರುವಿನಿಂದ (Jupiter Planet from Taurus)

ಆಸ್ತಿ ಲಾಭ; ಸಣ್ಣ ಪುಟ್ಟ ತಕರಾರುಗಳು;ಉತ್ತಮವಾದ ಉದ್ಯಮ ಸ್ಥಾಪನೆ; ವ್ಯಾಪಾರ ವ್ಯವಸಾಯಗಳಿಂದ ಲಾಭ; ಜಮೀನು ಹಾಗೂ ದನಕರುಗಳ ವ್ರದ್ಧಿ; ಮಿತ್ರರಿಂದಲೂ ಶತ್ರುಗಳಿಂದಲೂ ಗೌರವ ಪ್ರಾಪ್ತಿ….. ಇತ್ಯಾದಿ.

ಮಿಥುನ ಸ್ಥಿತ ಗುರುವಿನಿಂದ (Jupiter Planet from Gemini)

ಸಂಗಾತಿಗೆ ಅಪಾಯ ಸಾಧ್ಯತೆ; ಸಂತಾನ ಹಾನಿಯ ಸಾಧ್ಯತೆ; ಮಾನಸಿಕ ಅಶಾಂತಿ; ರಾಜಕೀಯ ವ್ಯಕ್ತಿಗಳಿಂದ ಭೀತಿ;ಪರಸ್ಥಳಕ್ಕೆ ಪ್ರಯಾಣ…. ಇತ್ಯಾದಿ.

ಕಟಕ ಸ್ಥಿತ ಗುರುವಿನಿಂದ (ಉಚ್ಚ ಕ್ಷೇತ್ರ) (Jupiter Planet from Cancer)

ಉದ್ಯೋಗ ಭಡ್ತಿ; ರಾಜಕೀಯ ವಿಜಯ; ಜನೋಪಕಾರಿ ಕಾರ್ಯಗಳು; ರಾಷ್ಟ್ರೀಯ ಸೇವೆ; ಅತ್ಯುನ್ನತ ಸ್ಥಾನ ಮಾನ; ಅನಿರೀಕ್ಷಿತವಾಗಿ ಅಪಾರ ಐಶ್ವರ್ಯ ಪ್ರಾಪ್ತಿ; ಉನ್ನತ ಶಿಕ್ಷಣ; ಪತ್ರಿಕೋದ್ಯಮದಲ್ಲಿ ಯಶಸ್ಸು; ಜಮೀನು ಖರೀದಿ;ಕೌಟುಂಬಿಕ ಸುಖ…. ಇತ್ಯಾದಿ.

ಸಿಂಹ ಸ್ಥಿತ ಗುರುವಿನಿಂದ (Jupiter Planet from Leo)

ಭೂಮಿ ಪ್ರಾಪ್ತಿ; ವ್ಯಕ್ತಿಯ ಸಮಸ್ತ ಅಭೀಷ್ಟ ಸಿದ್ಧಿ;ರಾಜ ಗೌರವ; ಖ್ಯಾತಿ;ವ್ಯವಸಾಯೋತ್ಪನ್ನಗಳ ಸಂಗ್ರಹ…. ಇತ್ಯಾದಿ.

ಕನ್ಯಾ ಸ್ಥಿತ ಗುರುವಿನಿಂದ (Jupiter Planet from Virgo)

ಆಸ್ತಿ ನಷ್ಟ;ನರಗಳ ವ್ಯಾಧಿ ಸಾಧ್ಯತೆ; ಆಲಸ್ಯ; ಬಂಧುಗಳಲ್ಲಿ ವೈಮನಸ್ಸು; ಅನ್ಯಸ್ಥಳ ವಾಸ… ಇತ್ಯಾದಿ.

ತುಲಾ ಸ್ಥಿತ ಗುರುವಿನಿಂದ (Jupiter Planet from Libra)

ಸ್ವಾಭಿಮಾನ ರಹಿತ ಜೀವನ; ಸ್ವಾರ್ಥ ಹಿತಾಸಕ್ತಿಗಳು;ಅಡ್ಡ ಹಾದಿ ಹಿಡಿಯುವ ಸಾಧ್ಯತೆ; ನಿರ್ಜನ ಪ್ರದೇಶದಲ್ಲಿ ವಾಸ; ತಡೆದುಕೊಳ್ಳಲು ಅಸಾಧ್ಯವಾದ ಕಷ್ಟಗಳು; ದುಷ್ಟ ಪ್ರವ್ರತ್ತಿ;ಸಮಾಜ ಮತ್ತು ಕುಟುಂಬದಲ್ಲಿ ವೈಮನಸ್ಸು…. ಇತ್ಯಾದಿ.

ವ್ರಶ್ಚಿಕ ಸ್ಥಿತ ಗುರುವಿನಿಂದ (Jupiter Planet from Scorpio)

ನಿರಾತಂಕವಾಗಿ ಅಭಿವೃದ್ಧಿ; ಮಾನಸಿಕ ನೆಮ್ಮದಿ;ಹೊಸ ಜಮೀನು ಆಸ್ತಿಗಳ ಖರೀದಿ; ಆಧ್ಯಾತ್ಮಿಕ ವಿಚಾರಧಾರೆ;ತತ್ವ ಸಿದ್ಧಾಂತಗಳನ್ನು ಒಳಗೊಂಡ ಜೀವನ…. ಇತ್ಯಾದಿ.

ಧನುಸ್ಸು ಸ್ಥಿತ ಗುರುವಿನಿಂದ (Jupiter Planet from Sagittarius)

ಅತ್ಯಧಿಕ ಧನಾಗಮ; ಪುತ್ರ ಸಂತಾನ ಭಾಗ್ಯ; ಸಂಸಾರ ವ್ರದ್ಧಿ; ಎಲ್ಲಾ ಉದ್ಯಮಗಳಲ್ಲಿ ವಿಜಯ; ಅತ್ಯಂತ ಖ್ಯಾತಿ; ಬಂಧುಗಳ ವ್ರದ್ಧಿ;ಪರಮ ಸೌಖ್ಯ ಜೀವನ…. ಇತ್ಯಾದಿ.

ಮಕರ ಸ್ಥಿತ ಗುರುವಿನಿಂದ (Jupiter Planet from Capricorn)

ಸಂಗಾತಿಗೆ ಅನಾರೋಗ್ಯ; ಮಕ್ಕಳಿಗೆ ಅಪಾಯದ ಭೀತಿ; ಆಸ್ತಿ ನಷ್ಟ;ಮಾನ ಹಾನಿಯ ಸಾಧ್ಯತೆ; ಅಧಾರ್ಮಿಕ ಕಾರ್ಯಗಳು; ದುಷ್ಟ ಚಿಂತನೆ;ಅನೇಕ ಶತ್ರುಗಳ ಉಗಮ; ಕಿರಿಕಿರಿಯ ಜೀವನ…. ಇತ್ಯಾದಿ.

ಕುಂಭ ಸ್ಥಿತ ಗುರುವಿನಿಂದ (Jupiter Planet from Aquarius)

ಆಸ್ತಿ ನಷ್ಟ; ಖಾಯಿಲೆಗಳ ಭೀತಿ; ಪ್ರಾಣಿಗಳಿಂದ ಅಪಾಯ ಸಾಧ್ಯತೆ; ದುರದೃಷ್ಟ; ಆಘಾತ;ಕಷ್ಟಕಾರ್ಪಣ್ಯಗಳು…. ಇತ್ಯಾದಿ.

ಮೀನ ಸ್ಥಿತ ಗುರುವಿನಿಂದ (Jupiter Planet from Pisces)

ಸಂಪೂರ್ಣ ದಶಾವಧಿ ಕಾಲವೂ (ಹದಿನಾರು ವರ್ಷಗಳು) ಅಪಾರ ಖ್ಯಾತಿ; ಉಚ್ಚ ಶಿಕ್ಷಣ; ಜ್ಞಾನ ಪ್ರದರ್ಶನದಿಂದ ಲಾಭ; ಆಸ್ತಿ ಸಂಪಾದನೆ; ಯಶಸ್ಸು;ಸುಖ ಸಂತೋಷಗಳು….. ಇತ್ಯಾದಿ.

ವಿಶೇಷ ಸೂಚನೆ:

ಇದು ಕೇವಲ ಆಯಾ ಸ್ಥಾನಗಳಲ್ಲಿ ಇರುವ ಗುರುವು ತನ್ನ ದಶಾವಧಿಯಲ್ಲಿ ಪ್ರದರ್ಶಿಸುವ ಫಲಗಳಾಗಿವೆ.

ಇವಿಷ್ಟೇ ಅಲ್ಲದೇ ಇತರ ಗ್ರಹಗಳ ಸ್ಥಾನ, ಬಲಾಬಲ, ದೃಷ್ಟಿ, ಸಂಯೋಗ, ಶತ್ರುತ್ವ ಹಾಗೂ ಮಿತ್ರತ್ವಗಳು ಕೂಡಾ ಫಲ ನೀಡುವಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸುತ್ತದೆ….

ರಾಹು ಕೇತು

ರಾಹು-ಕೇತು ಗ್ರಹಗಳ ಮಹತ್ವ

ಸಾಮಾನ್ಯವಾಗಿ ರಾಹು ಕೇತುಗಳನ್ನು ಛಾಯಾಗ್ರಹಗಳೆಂದೇ ಹೇಳಲಾದರೂ ‘ಪ್ರಾಚೀನ ಜ್ಯೋತಿಷ್ಯ ಗ್ರಂಥಗಳು’ ಈ ಗ್ರಹಗಳಿಗೂ ಮಹತ್ವ ಕೊಟ್ಟಿರುತ್ತದೆ.

ರಾಹು ಗ್ರಹಕ್ಕೆ ‘ಕಾಲ ರುದ್ರ’ ಎಂದೂ, ಕೇತುವಿಗೆ ‘ವಿಕ್ರಮಕಾರಕ’ ಎಂದೂ ಹೇಳುತ್ತಾರೆ. ರಾಹುವಿನ ಉಚ್ಛಸ್ಥಾನ, ಮಿಥುನ, ಸ್ವಕ್ಷೇತ್ರ ಕನ್ಯಾ. ಅದರ ನೀಚ ಸ್ಥಾನ ಧನು ;ಅಂತೆಯೇ…
ಧನು ರಾಶಿಯು ಕೇತುವಿನ ಉಚ್ಛಸ್ಥಾನ. ಮಿಥುನ ನೀಚ ಸ್ಥಾನ. ಸ್ವಕ್ಷೇತ್ರ ಮೀನ ರಾಶಿ.

ಕುಂಡಲಿಯ 3, 6, 12ನೇ ಸ್ಥಾನಗಳಲ್ಲಿ ರಾಹು ಇದ್ದರೆ ಅನಿಷ್ಠ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿರುತ್ತಾನೆ. ಉಳಿದ 1,2,4,5,7,8,9,10 ರಲ್ಲಿದ್ದರೆ ಯಾವುದೇ ಬಗೆಯ ಶುಭ ಫಲ ಕೊಡುವುದಿಲ್ಲವಾದರೂ ಅವನ ಸ್ಥಾನ (ಉಚ್ಛ-ನೀಚ-ಸ್ವಕ್ಷೇತ್ರ)ಹಾಗೂ ಯುತಿಯನ್ನವಲಂಬಿಸಿ ನಿರ್ಧಾರವಾಗುತ್ತದೆ.

ಮಿಥುನದ ಶೂನ್ಯಾಂಶದಲ್ಲಿ ರಾಹು ಉಚ್ಛನಿರುತ್ತಾನೆ. ಧನುರಾಶಿಯ ಶೂನ್ಯಾಂಶದಲ್ಲಿ ರಾಹು ನೀಚನಿರುತ್ತಾನೆ. ಅದರ ಮೂಲ ತ್ರಿಕೋಣ ಕರ್ಕಾಟಕದ ಪಂಚಮಾಂಶ, ಧನುರಾಶಿಯ ಶೂನ್ಯಾಂಶ ಕೇತುವಿನ ಉಚ್ಛಸ್ಥಾನ. ಮಿಥುನದ ಶೂನ್ಯಾಂಶ ಅದರ ನೀಚಸ್ಥಾನ. ಸಿಂಹರಾಶಿಯ ಪಂಚಮಾಂಶ ಕೇತುವಿನ ಮೂಲ ತ್ರಿಕೋಣ.

ರಾಹು ಇಲ್ಲವೇ ಕೇತುವು ಕುಂಡಲಿಯ ದ್ವಿತೀಯ ಇಲ್ಲವೇ ಸಪ್ತಮ ಸ್ಥಾನದಲ್ಲಿದ್ದು, ಧನಾದಧಿಪತಿಯು(ದ್ವಿತೀಯ ಸ್ಥಾನಾಧಿಪತಿ) ಇಲ್ಲವೇ ಸಪ್ತಮ ಸ್ಥಾನಾಧಿಪತಿಯು ಅಶುಭ ಗ್ರಹದಿಂದ ಯುಕ್ತನಾಗಿದ್ದರೆ ತಮ್ಮ ದಶೆಯಲ್ಲಿ ಈ ಗ್ರಹಗಳು ಏನೂ ಶುಭಫಲಗಳನ್ನು ಕೊಡಲಾರವು.

ಕೇಂದ್ರ (1-4-7-10) ಇಲ್ಲವೇ ತ್ರಿಕೋಣ (5,9) ಅಧಿಪತಿಗಳೊಡನೆ ರಾಹು ಇಲ್ಲವೇ ಕೇತು ದ್ವಿಸ್ವಭಾವ ರಾಶಿಯಲ್ಲಿದ್ದರೆ ಈ ಗ್ರಹಗಳ ದಶೆಯಲ್ಲಿ ಅಧಿಕಾರ ಮತ್ತು ಸಂಪತ್ತು ದೊರೆಯುವುದು.

ಈ ಯೋಗದಲ್ಲಿ ಕೇಂದ್ರಾಧಿಪತಿಯು ಇಲ್ಲವೇ ತ್ರಿಕೋಣಾಧಿಪತಿಯು ಸಪ್ತಮ, ಅಷ್ಠಮ ಇಲ್ಲವೇ ವ್ಯಯ ಈ ಮೂರು ಸ್ಥಾನಗಳ ಗ್ರಹಗಳಿಂದ ದೃಷ್ಟಿತನಾಗಿದ್ದರೆ ಇಲ್ಲವೇ ಯುಕ್ತನಾಗಿದ್ದರೆ ತಾಯಿಯ ಇಲ್ಲವೇ ಆತನ ತಾಯಿಯ ಬಳಗದವರಿಗೆ ಅಪಾಯದ ಸಾಧ್ಯತೆಗಳು ಹೆಚ್ಚು..

ಸ್ಥಿರ ರಾಶಿಯಲ್ಲಿಯ (ವೃಷಭ, ಸಿಂಹ, ವೃಶ್ಚಿಕ, ಮಕರ) ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಗಳೊಡನೆ ರಾಹು ಇಲ್ಲವೇ ಕೇತುವು ಕುಂಡಲಿಯಲ್ಲಿದ್ದರೆ, ಇಲ್ಲವೇ ಚರ ರಾಶಿಯಲ್ಲಿಯ (ಮೇಷ, ಕರ್ಕಾಟಕ, ತುಲಾ, ಧನು) ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಗಳಿಂದ ರಾಹು ಇಲ್ಲವೇ ಕೇತು ಕೂಡಿದ್ದರೆ ಈ ಗ್ರಹಗಳ ದೆಶೆಯಲ್ಲಿ ಧನ ಪ್ರಾಪ್ತಿಯಾಗುತ್ತದೆ.

ರಾಹು ಇಲ್ಲವೇ ಕೇತು ಅಶುಭ ಮನೆಯಲ್ಲಿದ್ದರೆ ಈ ಫಲ ಸಿಗುವುದಿಲ್ಲ ಅಂತೆಯೇ ರಾಹು-ಕೇತು ಗ್ರಹಗಳು ಮೇಷ, ವೃಷಭ, ಕರ್ಕ, ಸಿಂಹ, ತುಲಾ, ವೃಶ್ಚಿಕ, ಧನು, ಮಕರ ರಾಶಿಗಳಲ್ಲಿ ಕೇಂದ್ರಾಧಿಪತಿಗಳಿಂದಾಗಲೀ ಇಲ್ಲವೇ ತ್ರಿಕೋಣಾಧಿಪತಿಗಳಿಂದಾಗಲೀ ಯುಕ್ತವಾಗಿದ್ದರೆ ಆ ಜಾತಕನು ಧನವಂತನಾಗುವನು.

ರಾಹು ಇಲ್ಲವೇ ಕೇತು ತಮ್ಮ ಉಚ್ಛ ಸ್ಥಾನದಲ್ಲಿ ಅಥವಾ ಸ್ವಕ್ಷೇತ್ರದಲ್ಲಿ ಆ ಸ್ಥಾನಾಧಿಪತಿಗಳೊಡನೆ ಇದ್ದು ಆ ಸ್ಥಾನಗಳು ನವಮ ಅಥವಾ ಏಕಾದಶ ಆಗಿದ್ದರೆ ಎಲ್ಲಾ ರೀತಿಯಲ್ಲೂ ಸುಖ ಸಂಪತ್ತು ಸೌಭಾಗ್ಯ ಕರುಣಿಸುತ್ತಾರೆ ಅಂತೆಯೇ ನೀಚ ಕ್ಷೇತ್ರಗಳಲ್ಲಿದ್ದರೆ ಅಷ್ಟೇ ಹಾನಿಯನ್ನು ಮಾಡುತ್ತಾರೆ.

ಏನೇ ಇದ್ದರೂ ರಾಹು ಮತ್ತು ಕೇತು ಗ್ರಹಗಳು ವ್ಯಕ್ತಿಯ ಭವಿಷ್ಯ ನಿರ್ಧಾರದಲ್ಲಿ ತಮ್ಮದೇ ಆದಂತಹ ವೈಶಿಷ್ಟ್ಯಪೂರ್ಣ ಮಹತ್ವವನ್ನು ಹೊಂದಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲಾ…!

ಮಂಗಳ ಗ್ರಹ 

  • ಗ್ರಹ – ಮಂಗಳ | ಕುಜ | ಅಂಗಾರಕ
  • ಸ್ವಕ್ಷೇತ್ರ – ಮೇಷ ಹಾಗೂ ವೃಶ್ಚಿಕ
  • ಉಚ್ಚ ಕ್ಷೇತ್ರ – ಮಕರ
  • ನೀಚ ಕ್ಷೇತ್ರ – ಕರ್ಕಾಟಕ
  • ಸಂಖ್ಯೆ – ೯
  • ರತ್ನ – ಹವಳ
  • ಮಿತ್ರರು – ರವಿ..ಚಂದ್ರ..ಗುರು ಹಾಗೂ ಕೇತು
  • ಶತ್ರುಗಳು – ರಾಹು ಬುಧ
  • ಕುಜ ದೋಷ ಸ್ಥಾನಗಳು – ಲಗ್ನದಿಂದ ೧..೨..೪..೭..೮ ಹಾಗೂ ೧೨

ಈತ ರುದ್ರಾಂಶ ಸಂಭೂತ. ಇವನು ಶುಭವಿದ್ದರೆ ಸರ್ವವೂ ಮಂಗಳ ಇಲ್ಲವಾದರೆ ಜೀವನವೆ ಅಮಂಗಳ ಕಾರಣ ಇವನು ಸಂಹಾರಕ ಶಕ್ತಿಯನ್ನು ತಿಳಿಯುವುದಾದರೆ ರುದ್ರನಿಗೆ ಸಮಾನವೆಂದು ಶಾಸ್ತ್ರಜ್ಞರು ತಿಳಿಸಿರುವರು.

ಇವನಿಗೆ‌ ‘ಅಗ್ನಿಮೂರ್ದಾ’ ಎಂದು ವೇದಗಳಲ್ಲಿ ಕರೆಯಲಾಗಿದೆ ಅಂದರೆ ” ಶಿರದಲ್ಲಿ ಅಗ್ನಿಯನ್ನು ಧರಿಸಿದವರು ಎಂದರ್ಥ ” .

ಹಾಗಾಗಿಯೆ ಮಂಗಳನ ಸ್ವಭಾವ ಪ್ರಹಾರಕ ಮತ್ತು ಸಂಹಾರಕ ಮತ್ತು ಆಕ್ರಮನಕಾರಿಯಾಗಿರುವನು. 

ಗ್ರಹಗಳಲ್ಲಿ ಇವನಿಗೆ ಸೇನಾಧಿಪತಿಯ‌ ಸ್ಥಾನವನ್ನು ಪಡೆದು ಜೋತಿಷ್ಯ ರೀತ್ಯಾ ಧೈರ್ಯ, ಸಾಹಸ , ಸಂಘರ್ಷ , ಯುದ್ದದ ಪ್ರತಿನಿಧಿ , ಪಿತ್ತ ಪ್ರಧಾನ ಪ್ರಕೃತಿ , ನ್ಯಾಯ ತತ್ಪರ , ಸಮಯಾವಧಿಯಲ್ಲಿ ಕಾರ್ಯ ಪರಿಪೂರ್ಣಗೊಳಿಸುವ , ಕಟು ನೇರ ಮತ್ತು ಸತ್ಯ ವಚನಗಳನ್ನು ನುಡಿಯುವವನು ಜೊತೆಗೆ ಪ್ರಸವ ಸಂಬಂಧಿತ ಪ್ರಕ್ರಿಯೆಗಳನ್ನು ಪ್ರತಿನಿಧಿಸುವ ಗ್ರಹ .

ಈತ ಶುಭವಾದಲ್ಲಿ ಮೇಲಿನ ಗುಣಗಳಿಂದ ವ್ಯಕ್ತಿಗೆ ಶುಭ ಉಂಟಾಗುವುದು ಅಶುಭನಾಗಿದ್ದಲ್ಲಿ ಇವೆ ಕಾರಣಗಳಿಂದ ಅವನ ಪತನವಾಗುವುದು , 

ರಕ್ತವಿಕಾರ , ಚರ್ಮರೋಗಗಳು,  ಚೋದಕ (ಹಾರ್ಮೋನ್) ಅಸಮತೋಲನ , ಒಗ್ಗದಿರುವಿಕೆ  (ಅಲರ್ಜಿ), ಪಿತ್ತಜನ್ಯ ವಿಕಾರಗಳು,  ಗರ್ಭ ನಾಶಕ ಮುಂತಾದವು ಇವನಿಂದ ಜನ್ಯವಾಗುವ ರೋಗಗಳು .

ಕುಜ ದೋಷ ಎಂದರೇನು?

 ಕುಜದೋಷ ಹಾಗೂ ಅದರ ಪರಿಹಾರದ ಬಗ್ಗೆ ಪುಟ್ಟ ಮಾಹಿತಿ ನೀಡುತ್ತಿದ್ದೇನೆ.

ಭಾರತದಲ್ಲಿ ಶೇಕಡಾ ೫೦ ಕ್ಕೂ ಮಿಕ್ಕಿದ ಮಂದಿಯ ಜಾತಕದಲ್ಲಿ ಕುಜ ದೋಷ ಇರುತ್ತದೆ ಎಂದು ಕೆಲವು ಜ್ಯೋತಿಷ್ಯ ಮೂಲಗಳು ಹೇಳುತ್ತವೆ ಅಂತೆಯೇ ಇದಕ್ಕೆ ಪರಿಹಾರಗಳು ಕೂಡ ಇವೆ.

 ಹಾಗಾಗಿ ಕುಜದೋಷ ಇದೆ ಎಂದೊಡನೆ ಗಾಬರಿಪಡುವ ಅವಶ್ಯಕತೆ ಏನಿಲ್ಲ..

ಕುಜ ದೋಷ

ಯಾವುದೇ ಜಾತಕ ಅಥವಾ ಗ್ರಹ ಚಕ್ರ ಕುಂಡಲಿಯಲ್ಲಿ ಕುಜನು  ಲಗ್ನ ದಲ್ಲಿ ಅಲ್ಲದೆ ನಾಲ್ಕನೇ ಸ್ಥಾನ 7ನೇ ಸ್ಥಾನ 12ನೇ ಸ್ಥಾನದಲ್ಲಿ ಇದ್ದರೆ ಕುಜ ದೋಷ ಇರುತ್ತದೆ

ಹಾಗೆ ಕೆಲವರು 2ನೇ ಸ್ಥಾನ ಹಾಗೂ ಎಂಟನೇ ಸ್ಥಾನದಲ್ಲಿ ಇದ್ದರೆ ಕೂಡ ಕುಜದೋಷ ಇರುತ್ತದೆ ಎನ್ನುತ್ತಾರೆ

ಸ್ತ್ರೀ ಹಾಗೂ ಪುರುಷರಲ್ಲಿ 7 ಹಾಗೂ 12ನೇ ಸ್ಥಾನದಲ್ಲಿ ಇರುವ ಕುಜನಿಂದ ಉಂಟಾಗುವ ದೋಷ ಸ್ವಲ್ಪ ಪ್ರಬಲವಾಗಿರುತ್ತದೆ ಕಾರಣ ಏಳನೆಯದು ವಿವಾಹ ಅಥವಾ ದಾಂಪತ್ಯ ಸ್ಥಾನವಾದರೆ 12ನೇ ವ್ಯಯಸ್ಥಾನ 

ಜಾತಕ ಕುಂಡಲಿಯಲ್ಲಿ ಮೇಷ ಸಿಂಹ ವೃಶ್ಚಿಕ ಮಕರ ಹಾಗೂ ಕುಂಭ ರಾಶಿಗಳಲ್ಲಿ ಕುಜನಿದ್ದರೆ ಅದು 1 4 7 ಹಾಗೂ 12ನೇ ಸ್ಥಾನವೇ ಆಗಿದ್ದರು ಕುಜದೋಷ ಸ್ವಾಭಾವಿಕವಾಗಿಯೇ ನಿವಾರಣೆ ಆಗಿರುತ್ತದೆ ಅಂತವರು ವಿಶೇಷವಾಗಿ ಪೂಜೆ ಮಾಡಿಸುವ ಅವಶ್ಯಕತೆ ಇರುವುದಿಲ್ಲ ಎಂದು ಕೆಲವು ಜ್ಯೋತಿಷ್ಯರ ಅಭಿಪ್ರಾಯ ಹಾಗೆಯೇ ಕರ್ಕಾಟಕ ಹಾಗೂ ಸಿಂಹ ಲಗ್ನದ ಜಾತಕರಿಗೆ ಕುಜ ದೋಷ ಇರುವುದಿಲ್ಲ ಹಾಗೂ ಮಿಥುನ ವೃಶ್ಚಿಕ ಲಗ್ನದವರಿಗೆ ಕೂಡ ಕುಜ ದೋಷ ಇರುವುದಿಲ್ಲ ಎನ್ನಲಾಗಿದೆ

ಕುಜ ದೋಷಕ್ಕೆ ಪರಿಹಾರಗಳು

ಮುಖ್ಯವಾಗಿ ಕುಜ ದೋಷಕ್ಕೆ ಪರಿಹಾರ ಸುಬ್ರಹ್ಮಣ್ಯ ಸ್ವಾಮಿಯ ಹಾಗೂ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಆರಾಧನೆ ಉತ್ತಮ ಇದಲ್ಲದೆ

ಕುಜ ಗಾಯತ್ರಿ ಮಂತ್ರ ಪೂಜಾ ಪೀಡಾ ಪರಿಹಾರ ಮಂತ್ರ ಇವುಗಳನ್ನು ನಿತ್ಯ ಪಠಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದು 

ವಿವಾಹದ ವಿಷಯಕ್ಕೆ ಬರುವುದಾದರೆ ಕುಜ ದೋಷ ಇರುವ ಜಾತಕರಿಗೆ ಕುಜ ದೋಷ ಇರುವ ಜಾತಕದ ಅವರನ್ನೇ ಮದುವೆ ಮಾಡಿಸಬೇಕಾಗುತ್ತದೆ.

ಮತ್ತೊಮ್ಮೆ ಹೇಳಬಯಸುತ್ತೇನೆ….ಕುಜ ದೋಷ ಇದೆ ಎಂದ ಮಾತ್ರಕ್ಕೆ ಭಯಭೀತರಾಗುವುದು ಬೇಡ… ಅದಕ್ಕೆ ಸಂಬಂಧಿಸಿದ ಸರಳ ಪರಿಹಾರ ಕ್ರಮಗಳನ್ನು ಕೈಗೊಂಡರಾಯಿತು.

ಅಂತೆಯೇ ಅಸಡ್ಡೆ ಕೂಡ ಬೇಡ..! ಏಕೆಂದರೆ ಅದು ಎಂತಹಾ ಆಪತ್ತನ್ನು ಕೂಡ ತಂದೊಡ್ಡಬಹುದು..!

ಋಣಮೋಚನ ಮಂಗಳ ಸ್ತೋತ್ರ

ಋಣಮೋಚನ ಮಂಗಳ ಸ್ತೋತ್ರವನ್ನು ಭಗವಾನ್‌ ಶ್ರೀ ಹನುಮಾನ್‌ ನಿಗೆ ಅರ್ಪಿಸಲಾಗಿದೆ. ಜೀವನದಲ್ಲಿ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗದೇ ಸಾಲವನ್ನು ಮಾಡಿಕೊಂಡವರು ಸಾಲ ಆದಷ್ಟು ಬೇಗ ತೀರಿಸುವಂತಾಗಲು ಈ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಬೇಕು. ಈ ಮಂತ್ರ ಪಠಿಸಿದರೆ ಸಾಲದ ಭಾದೆಯು ಕಡಿಮೆಯಾಗುತ್ತದೆ.

ಶ್ರೀ ಋಣಮೋಚನ ಮಂಗಳ ಸ್ತೋತ್ರವನ್ನು ಪ್ರತಿದಿನವು ತಪ್ಪದೇ ಪಠಿಸಿದರೆ ನಮ್ಮೆಲ್ಲಾ ಆರ್ಥಿಕ ಸಮಸ್ಯೆಗಳು ಮತ್ತು ತೊಂದರೆಗಳು ನಿವಾರಣೆಯಾಗುತ್ತದೆ. ಯಾರಾದರು ಈ ಮಂತ್ರವನ್ನು ಪಠಿಸಬೇಕೆಂದರೆ ನಿಮ್ಮ ಮಂತ್ರದ ಆರಂಭವು ಮಂಗಳವಾರದಿಂದಲೇ ಆರಂಭವಾಗಬೇಕು. ಅಂದರೆ ಮೊದಲನೆ ದಿನ ಮಂತ್ರವನ್ನು ಮಂಗಳವಾರದಂದು ಓದಿ. ಒಂದು ವೇಳೆ ಈ ಮಂತ್ರವನ್ನು ಪ್ರಿತಿದಿನ ಜಪಿಸಲು ಸಾಧ್ಯವಾಗದೇ ಇದ್ದರೆ ಪ್ರತೀ ಮಂಗಳವಾರವಾದರೂ ಓದಬಹುದು.

ಇನ್ನು ಯಾವುದೇ ಕಾರಣಗಳಿಲ್ಲದೆಯೂ ಕೂಡ ನೀವು ಈ ಮಂತ್ರವನ್ನು ಪಠಿಸಬಹುದು. ಪ್ರತಿದಿನ ಪಠಿಸಲು ಇಚ್ಛಿಸುವವರು ಶುಕ್ಲ ಪಕ್ಷದ ಮೊದಲ ಮಂಗಳವಾರದಿಂದಲೇ ಆರಂಭಿಸಿದರೆ ಒಳ್ಳೆಯದು. ಪ್ರತಿದಿನ ಸ್ನಾನದ ನಂತರ ದೇವರನ್ನು ಪ್ರಾರ್ಥಿಸಿ ಈ ಸ್ತೋತ್ರವನ್ನು ಪಠಿಸಲು ಕುಳಿತುಕೊಳ್ಳಿ. ಇಲ್ಲಿದೆ ನೋಡಿ ಋಣಮೋಚನ ಮಂಗಳ ಸ್ತೋತ್ರ:

ಮಂಗಳೋ ಭೂಮಿ ಪುತ್ರಶ್ಚ ಋಣ ಅರ್ಥ ಧನ ಪ್ರದಾ

ಸ್ತಿರಸನೋ ಮಹಾಕಾಯ ಸರ್ವಕರ್ಮ ವಿರೋಧಕ |

ಲೋಹಿತೋ ಲೋಹಿತಾಕ್ಷಾಶ್ಚ ಸಮಾಗಾನಂ ಕೃಪಾಕರ

ಧರಾತ್ಮಜ ಕುಜೋಭೌಮ ಭೂತಿದೋ ಭೂಮಿನಂದನ ||

ಅಂಗಾರಕೋ ಯಮಸಚ್ಚೈವ ಸರ್ವರೋಗಾಪಹಾರಕ

ವೃಷ್ಟೆಕರ್ತಹಾಪಹಾರ್ತ ಚ ಸರ್ವಕಾಮ ಫಲ ಪ್ರದಾ |

ಯತನಿ ಕುಜ ನಮಾನಿ ನಿತ್ಯಂ ಯಶ್ರದಯ ಪಾದೇತ್

ಋಣಂ ನಾ ಜಯತೇತಸ್ಯ ಧನಂ ಶೀಘ್ರಮೆವ ಪುನ್ಯೂತ್ ||

ಧರಣಿ ಗರ್ಭ ಸಂಭೂತಂ ವಿದ್ಯುತ್ ಕಾಂತಿ ಸಮಪ್ರಭಂ

ಕುಮಾರಂ ಶಕ್ತಿ ಹಸ್ತಂಚ ಮಂಗಳಂ ಪ್ರಣಯಾಮ್ ಯಹಂ |

ಸ್ತೋತ್ರಂ ಅಂಗಾರಕ ಸ್ಯೆತಾತ್ ಪಾದನೀಯಮ್ ಸದಾನ್ರುಬಿ

ನಾತೇಶಂ ಭೌಮಾಜ ಪೀಡ ಸ್ವಲ್ಪಾಪಿ ಭವತಿ ಕ್ವಚ್ಚಿತ್‌||

ಅಂಗಾರಕ ಮಹಾಭಾಗ ಭಗವಾನ್ ಭಕ್ತವತ್ಸಲಂ

ತ್ವಂ ನಮಾಮಿ ಮಮಾಶೇಷಂ ಋಣಮಸು ವಿನಸ್ಯ |

ಋಣ ರೋಗಾದಿ ದಾರಿದ್ರಂ ಯೆ ಚೆನ್ಯೆ ಹ್ಯಪ ಮೃತ್ಯುವೆ

ಭಯ ಕ್ಲೇಷ ಮನಸ್ತಾಪ ನಸ್ಯಂತು ಮಮ ಸರ್ವದಾ ||

ಅತಿ ವಕ್ರ ದುರಾರಾದ್ಯ ಬೋಗ ಮುಕ್ತ ಜಿತ್ಮಾನ

ತುಷ್ಟೋ ದದಾಸಿ ಸಾಮ್ರಾಜ್ಯಂ ರುಷ್ಟೋ ಹರಚ ತಥಕ್ಷಣಾತ್ |

ಪುತ್ರಂ ದೇಹಿ ಧನಂತ್ವಮಾಸ್ಮಾ ಸರನಗತ

ಋಣದಾರಿದ್ರಾ ದುಖೆಃನ ಶತ್ರುನಾಂಚ ಬಯತ್ ತಥಾ ||

ವಿರಂಚಿ ಸಕ್ರ ವಿಷ್ಣುನಾಂ ಮನುಷ್ಯಾನಾಂ ತಕಾಕಥಾ

ತೆನಾತ್ವಹಃ ಸರ್ವ ಸತ್ವಿನ ಗ್ರಹಂ ರಾಜೊ ಮಹಾಬಲ |

ಯಬಿರ್ ದ್ವಾದಸಬಿ ಶ್ಲೋಕೈಯಶ್ತತೋತಿ ಚ ದರುಸತಮ್

ಮಹಾತೀಮಾ ಶ್ರೀಯಪ್ನೋತಿ ಯಾಪಾರೋ ದನದೋಯುವ ||

ಇದೇ ಶ್ರೀ ಋಣಮೋಚನ ಮಂಗಳ ಸ್ತೋತ್ರವಾಗಿದ್ದು, ಈ ಮಂತ್ರವನ್ನು ಪ್ರತಿನಿತ್ಯ ಶುದ್ಧರಾಗಿ ಪಠಿಸಿ. ಇದರಿಂದ ನಿಮ್ಮ, ನಿಮ್ಮ ಕುಟುಂಬದ ಸದಸ್ಯರ ಆರ್ಥಿಕ ಸಮಸ್ಯೆಗಳು ದೂರಾಗಿ ಆಂಜನೇಯನ ಅನುಗ್ರಹದಿಂದ ಮನೆಯಲ್ಲಿ ಲಕ್ಷ್ಮಿಯು ನೆಲೆಯಾಗಿ, ಸಾಲ ಭಾದೆಯು ನಿವಾರಣೆಯಾಗುತ್ತದೆ.

ಚಂದ್ರ ಗ್ರಹ 

ಚಂದ್ರದೋಷ

ಸಪಾತ ಚಂದ್ರ ಹಾಗೂ ಚಂದ್ರ ಗ್ರಹಣ

‘ಪಾತ’ ಇದು ರಾಹು-ಕೇತುವಿನ ಹೆಸರು, ಪಾತಗಳೊಡನೆ ಚಂದ್ರ ಅಥವಾ ಸೂರ್ಯನಿದ್ದಾಗ ಅನಿಷ್ಟ ಫಲಗಳ ಭಯದಲ್ಲಿ ಅಧಿಕ ವೃದ್ಧಿಯಾಗುವುದು. ನಿರ್ಣಯ ಸಾಮಥ್ಯದ ಕೊರತೆ ಹಾಗೂ ಮನಸ್ಸಿನಲ್ಲಿ ಧ್ವಂಧ್ವ ಸ್ಥಿತಿ ಇವು ಕನಿಷ್ಠ ಫಲಗಳು ಆದರೆ ಚಂದ್ರ ಹಾಗೂ ಪಾತಗಳ ಅಂಶಗಳಲ್ಲಿ ನಿಕಟತೆ ಇದ್ದಾಗ ಆಕಸ್ಮಿಕ ದುರ್ಘಟನೆ ಮುಂತಾದ ಫಲಗಳು ಅನುಭವಕ್ಕೆ ಬರುವವು ಸರಳ ಉಪಾಯಗಳು ಅಡಿಪಾಯವಾಗಿದ್ದರು ಅವು ಸರ್ವೆಡೆಯೂ ಅನ್ವಯ ಆಗುವುದಿಲ್ಲ. ಬಲ್ಲವರು ರುದ್ರಸೂಕ್ತ , ಅಥವಾ ರುದ್ರ ಗಾಯತ್ರಿಯನ್ನು ನಿತ್ಯ ಹೇಳಬೇಕು

ಕೇಮದ್ರುಮ ಯೋಗ

ಕೇಮದ್ರುಮ ಯೋಗವು ಅನೇಕ ದೋಷಗಳಿಗೆ ಜನ್ಮ ಕೊಡುತ್ತದೆ ಈ ಯೋಗವಿರುವಾಗ ಜಾತಕನಿಗೆ ಧನದ ಅಭಾವ, ಕಷ್ಟದಿಂದ ಕಾರ್ಯ , ಭಾಗ್ಯದ ವಿಡಂಬನೆ , ಉದ್ವೇಗ ಜಾತಕದ ಅನ್ಯ ಶುಭ ಯೋಗಗಳನ್ನು ಕ್ಷೀಣ ಮುಂತಾದ ಫಲಗಳು

ಚಂದ್ರನ ಮುಂದಿನ ಹಾಗೂ ಹಿಂದಿನ ಭಾವಗಳು ಗ್ರಹಶೂನ್ಯವಾಗಿದ್ದರೆ , ಕೇಮದ್ರುಮ ಯೋಗವಾಗುವುದು , ಒಂದು ವೇಳೆ ಚಂದ್ರನು ಪಕ್ಷ ಬಲಿಯಾಗಿದ್ದರೆ ಈ ಯೋಗದ ಪ್ರಭಾವ ಕಡಿಮೆಯಾಗುವುದು ಆದಾಗ್ಯೂ ಚಂದ್ರನೊಡನೆ ಯಾವುದೇ ಗ್ರಹ ಸ್ಥಿತವಿದ್ದರೆ ಚಂದ್ರನ ಮೇಲೆ ಯಾವುದೇ ಗ್ರಹದ ದೃಷ್ಟಿಯಿದ್ದರೆ ಹಾಗೂ ಚಂದ್ರ ಅಥವಾ ಲಗ್ನದಿಂದ ಕೇಂದ್ರದಲ್ಲಿ ಯಾವುದಾದರೂ ಗ್ರಹ ಸ್ಥಿತವಿದ್ದರೆ – ಈ ಮೂರು ಅಂಶಗಳಲ್ಲಿ ಯಾವುದಾದರೊಂದು ಅಂಶ ಅನ್ವಯವಾದರೆ ಕೇಮದ್ರುಮಯೋಗ ಪ್ರಭಾವಹೀನವಾಗುವುದು.

ಇದರ ಶಾಂತಿಗೆ ನಿತ್ಯ ವಸಿಷ್ಠ ಮುನಿಕೃತ ದಾರಿದ್ರ್ಯ ದಹನ ಸ್ತ್ರೋತ್ರವನ್ನು ಹೇಳಬೇಕು

🌛 ಕ್ಲೀಣ ಚಂದ್ರದೋಷ ಅಂದರೇನು 🌜

“ನೀಮ್ಮ ಜನ್ಮ ಈ ತಿಥಿಯಂದು ಆಗಿದಿಯೇ” ?

ಕೃಷ್ಣಪಕ್ಷದ ಅಷ್ಟಮಿಯಿಂದ ಕ್ಷೀಣ ಚಂದ್ರನ ದೋಷವು ಆರಂಭವಾಗಿ , ನಿತ್ಯ ಅಧಿಕವಾಗುವುದು ಕೃಷ್ಣ ಚತುರ್ದಶಿ ಮತ್ತು ಅಮಾವಾಸ್ಯೆಯಲ್ಲಿ ಎಲ್ಲಕ್ಕಿಂತ ಅಧಿಕವಾಗಿ ತನ್ನ ಚರಮ ಮಟ್ಟವನ್ನು ತಲುಪುವುದು ನಂತರ ದೋಷದ ಪ್ರಮಾಣ ಕ್ರಮವಾಗಿ ಕ್ಷಿಣಿಸುತ್ತಾ ಶುಕ್ಲಪಕ್ಷದ ಪಂಚಮಿಯಂದು ಸಮಾಪ್ತಿ ಆಗುವುದು.

ಕ್ಷೀಣ ಚಂದ್ರನ ದೋಷವಿದ್ದಾಗ ವ್ಯಕ್ತಿಯ ಸ್ವಭಾವ ಹಾಗೂ ಪ್ರಕೃತಿಯಲ್ಲಿ ಭಾವನಾತ್ಮಕ ಏರಿಳಿತ , ಶೀಘ್ರಕೋಪ, ಶ್ರಮವಹಿಸಿ ಕಾರ್ಯದಲ್ಲಿ ಪ್ರವೃತ್ತರಾಗುವ ಅಭ್ಯಾಸದ ಕೊರತೆ, ಕೆಲವೊಮ್ಮೆ ಗಮನಹೀನತೆ ಹಾಗೂ ಕೆಲವೊಮ್ಮೆ ಅನಾವಶ್ಯಕ ಆಕ್ರಮಣ ಪ್ರವೃತ್ತಿ ಕಂಡು ಬರುವುದು, ಹತಾಶೆ ಹಾಗೂ ಹತಾಶೆಯ ಪರಾಕಾಷ್ಠೆಯಲ್ಲಿ ಸಹಜವಾಗಿಯೇ ಖಿನ್ನತೆಯ ಸ್ಥಿತಿ ಉತ್ಪನ್ನವಾಗುತ್ತದೆ.

ಕ್ಷೀಣ ಚಂದ್ರನ ಈ ಸಾಮಾನ್ಯ ದೋಷದ ಶಾಂತಿಗಾಗಿ ವ್ಯಕ್ತಿಯು ಈ ಮೊದಲೇ ಹೇಳಲ್ಪಟ್ಟ ಚಂದ್ರನ ಶಾಂತಿಯ ಸರಳ ಪರಿಹಾರಗಳನ್ನು ನಿಯಮಿತ ಮಾಡಬೇಕು , ಶಿವನ ಆರಾಧನೆ ಅತ್ಯಂತ ಪ್ರಭಾವಶಾಲಿ.

ಕ್ರಾಂತಿಸಾಮ್ಯ ಅಥವಾ ಮಾಹಾಪಾತ ದೋಷ

ಸೂರ್ಯ – ಚಂದ್ರರ ಕ್ರಾಂತಿ ಪರಸ್ಪರ ಸಾಮಾನ್ಯವಾಗಿದ್ದರೆ, ಆ ಅವಧಿಯಲ್ಲಿ ಮಾಹಾಪಾತ ಅಥವಾ ಕ್ರಾಂತಿಸಾಮ್ಯ ಎನಿಸುತ್ತದೆ. ಸಾಯನ ಸೂರ್ಯ ಹಾಗೂ ಚಂದ್ರನ ಸ್ಪಷ್ಟಾದ ಯೋಗ 180 ಅಥವಾ 360 ಅಂಶವಿರುವಾಗ ಪ್ರಾಯಶಃ ಮಾಹಾಪಾತ ಕಾಲ ಮಧ್ಯದಲ್ಲಿರುವುದು. ಈ ಸಮಯದಿಂದ ಸುಮಾರು 3-3 ಗಂಟೆ ಅತ್ತ – ಇತ್ತ ಮಾಹಾಪಾತಕಾಲವೆಂದು ತಿಳಿಯುವುದು ಸೂಕ್ತವಾದುದು. ಈ ಕಾಲದಲ್ಲಿ ಜನ್ಮವಾದರೆ ಆಯಸ್ಸಿನ ಕ್ಷಯ , ಅನಾರೋಗ್ಯ, ಪ್ರಬಲ ರೋಗಬಾಧೆ ,ಸುಖಗಳಲ್ಲಿ ಕೊರತೆ ಉಂಟಾಗುವುದು , ಶಾಸ್ತ್ರೋಕ್ತವಾಗಿ ಉತ್ತಮ ಯೋಗವಿದ್ದರು ಜಾತಕನು ಅಸಹಾಯಕನಾಗಿರುವನು. ಇದರ ಶಾಂತಿ ಯಥಾಶೀಘ್ರ ಮಾಡುವುದೆ ಶ್ರೇಯಸ್ಕರ , ಶಾಂತಿಯ ನಂತರವು ನಿತ್ಯ ಸೂರ್ಯ ನಮಸ್ಕಾರ ಮತ್ತು ಮಂತ್ರ ಜಪ ಮಾಡಲೆ ಬೇಕು.

ಚಂದ್ರ ದೋಷ ಪರಿಹಾರ

ರಾಹುವಿನೊಂದಿಗೆ , ಶನಿ , ಕೇತು ಇವರೊಂದಿಗೆ ಚಂದ್ರನಿದ್ದರೆ ಬಹಳಷ್ಟು ತೊಂದರೆಗಳು ಉದ್ಭವವಾಗುವವು ಈ ವಿಪತ್ತುಗಳ ನಿವಾರಣೆಗೆ  ಸಂಕಷ್ಟಿ ವ್ರತವನ್ನು ಮಾಡುವುದು ಉತ್ತಮ.

ಶುಕ್ಲಪಕ್ಷದಲ್ಲಿ ಅಷ್ಟಮಿಯಿಂದ ಪ್ರಾರಂಭಿಸಿ ಹುಣ್ಣಿಮೆಯವರೆಗೆ ನಿತ್ಯ ಮೊಸರನ್ನು ಪ್ರಾತಃ ಕಾಲದಲ್ಲಿ ಸ್ವಲ್ಪ ಬೆಲ್ಲವನ್ನು ಸೇರಿಸಿ ಸೇವಿಸಬೇಕು.

ಮನೆಯ ಪಶ್ಚಿಮ ಭಾಗಕ್ಕೆ ಶ್ವೇತ ಪುಷ್ಪಗಳ ಬಳ್ಳಿಯನ್ನು ಹಚ್ಚಬೇಕು ಇದರಿಂದ ಚಂದ್ರನೊಂದಿಗೆ ಶನಿ ದೋಷವು ನಿವಾರಣೆ ಆಗುವುದು.

ವರ್ಷದಲ್ಲ ಒಮ್ಮೆಯಾದರು ದತ್ತರ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ಎರಡು ದಿನಗಳ ಕಾಲ ಅಲ್ಲಿ ಸಾಧ್ಯವಾದ ಸೇವೆ ಮಾಡಿ ಮರಳಬೇಕು ಶ್ರೀ ದತ್ತ ದೇವರು, ಚಂದ್ರ ಸಹೋದರ ಹಾಗಾಗಿ ಅವರೊಲಿದರೆ ಸರ್ವವೂ ಶುಭವೆ

⏺️ ಚಂದ್ರನು ನೀಚಸ್ಥ ಅಥವಾ ಶತ್ರುರಾಶಿಯಲ್ಲಿ ಸ್ಥಿತನಾಗಿದ್ದರೆ ಅಥವಾ 6-8-12 ರ ಬಾವಾದಿಪತಿಯಾಗಿದ್ದರೆ ಅಂಥವರು ನವರಾತ್ರಿಯಲ್ಲಿ ಚಂಡಿ ಉಪಾಸಕರಿಂದ 3 ಬಾರಿ ಚಂಡಿ ಪಾರಾಯಣ ಮಾಡಿಸಬೇಕು.

⏺️ ಶಿವಾಲಯದಲ್ಲಿ ಕೆಲಸ ಕಾರ್ಯ ಮಾಡುವ ಸೇವಕರಿಗೆ ಪ್ರತಿ ಜನ್ಮನಕ್ಷತ್ರದಲ್ಲಿ ಶಕ್ತಿಯಿದ್ದಷ್ಟು ಅಕ್ಕಿಯನ್ನು ದಾನ ಮಾಡಬೇಕು.

⏺️ ರೋಹಿಣಿ ನಕ್ಷತ್ರವು ಹುಣ್ಣಿಮೆಯಂದು ಬಂದಾಗ ಬೆಳ್ಳಿಯ ಪೂಜಾ ವಸ್ತುಗಳನ್ನು ಅವಶ್ಯವಾಗಿ ಖರೀದಿಸಿ.

⏺️ ಶುಕ್ಲ ಪಕ್ಷದಲ್ಲಿ ಬರುವ  ಉತ್ತರ ಫಾಲ್ಗುಣ ನಕ್ಷತ್ರದಲ್ಲಿ ಅಕ್ಕಿಯ ಹಿಟ್ಟನ್ನು ಮೀನುಗಳಿಗೆ ಆಹಾರದ ರೂಪದಲ್ಲಿ ನೀಡಬೇಕು.

⏺️ ವೈದಿಕ ಚಂದ್ರಯಂತ್ರವನ್ನು ನಿಮ್ಮ ಜನ್ಮತಿಥಿ ಅಥವಾ ನಕ್ಷತ್ರದಲ್ಲಿ ಮನೆಗೆ ತೆಗೆದುಕೊಂಡು ಬಂದು ಪೂಜಾ ಮಂದಿರದಲ್ಲಿ ಸ್ಥಾಪಿಸಬೇಕು

⏺️ ಶ್ರಾವಣ / ಕಾರ್ತಿಕದ ಸೋಮವಾರ ವ್ರತವನ್ನು ಆಚರಿಸಬೇಕು.

⏺️ ಗುರುಗಳ ಕೈಯಿಂದ ಪಂಚಮುಖಿ ರುದ್ರಾಕ್ಷವನ್ನು ಧರಿಸಬೇಕು.

⏺️ ಪ್ರತಿ ಸೋಮವಾರ ಮನೆಯ ಈಶಾನ್ಯ ಭಾಗದಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿ ಅದರ ಮೇಲೆ 4-5 ಬಿಂದು ಹಾಲನ್ನು ಹಾಕಿ ಇದರಿಂದ ಚಂದ್ರನ ಅನಿಷ್ಠ ದಿನೆ ದಿನೆ ಕಡಿಮೆಯಾಗುವುದು.

⏺️ ರೋಹಿಣಿ ನಕ್ಷತ್ರದ ದಿನ ಶುದ್ದ ಬೆಳ್ಳಿಯ ಉಂಗುರವನ್ನು ಖರೀದಿಸಿ ಪಂಚಾಮೃತದಲ್ಲಿ ಶುದ್ದಿಕರಿಸಿ ಕನಿಷ್ಠಿಕಾ (ಕಿರು) ಬೆರಳಿಗೆ ಧರೀಸಿ.

⏺️ ನಿತ್ಯ ಸ್ನಾನದ ನೀರಿಗೆ ಸ್ವಲ್ಪ ಹಾಲನ್ನು ಹಾಕಿ ಸ್ನಾನ ಮಾಡಿ .

⏺️ ಹುಣ್ಣಿಮೆಯ ದಿನ ಚಂದ್ರೋದಯ ಸಮಯ ಸ್ನಾನ ಮಾಡಿ ಬೆಳ್ಳಿ ಕಲಶದಲ್ಲಿ ಹಾಲು, ಅಕ್ಕಿ , ಬಿಳಿ ಹೂ ಹಾಕಿ ಚಂದ್ರನಿಗೆ ಅರ್ಘ್ಯವನ್ನು ನೀಡಿ.

⏺️ ಹುಣ್ಣಿಮೆ ದಿನ ಶಿವಾಲಯದಲ್ಲಿ ಸಿಹಿಯನ್ನು ಹಂಚಿರಿ .

⏺️ ಸೋಮವಾರದಂದು ಮನೆಯ ಸ್ತ್ರೀಯರಿಗೆ ಉಡುಗೊರೆ ಆದಿ ನೀಡಿ.

⏺️ ಸೋಮವಾರ ಬರುವ ಭದ್ರಾ ಸಮಯದಲ್ಲಿ ಶಿವನಿಗೆ ಜಲಾಭಿಷೇಕ ಮಾಡಿ ೨೦೮ ಬಿಲ್ವದಳವನ್ನು  ಅರ್ಪಿಸುವುದರಿಂದ ಮಾನಸಿಕ ರೋಗದಿಂದ ನಿವಾರಣೆ ದೊರೆಯುವುದು .

⏺️ಸೋಮವಾರ ಯಾವುದೆ ಕಾರಣಕ್ಕೂ ಶ್ವೇತವಸ್ತ್ರವನ್ನು ಧರಿಸದಿರುವುದು ಸೂಕ್ತ.

⏺️ ಒಂದು ವೇಳೆ ಯಾವುದೆ ಸ್ಥಾನದಲ್ಲಿ 3 ಬಾರಿಗಿಂತ ಅಧಿಕ ಬಾರಿ ಅಪಘಾತಗಳು ಸಂಭವಿಸಿದ ಜಾಗದಲ್ಲಿ ಚಂದ್ರದೋಷವಿರುವರು ಒಬ್ಬರೆ ಹೋಗಬಾರದು ಕಾರಣ ಆ ಸ್ಥಾನದೋಷವು ಚಂದ್ರದೋಷವಿರುವ ವ್ಯಕ್ತಿಗೆ ಹೆಚ್ಚು ಬಾಧಕವಾಗುವುದು.

⏺️ ಒಂದು ವೇಳೆ ಜಾತಕನ ಕುಂಡಲಿಯಲ್ಲಿ ಚಂದ್ರ ಉಚ್ಚರಾಶಿಯವನು ಅಂದರೆ ವೃಷಭದಲ್ಲಿದ್ದಾಗ ಶ್ವೇತ ಪದಾರ್ಥಗಳನ್ನು ದಾನ ಮಾಡಬಾರದು ಒಂದು ವೇಳೆ ನೀಚ ರಾಶಿಯಲ್ಲಿ (ವೃಶ್ಚಿಕ) ದಲ್ಲಿ ಚಂದ್ರನಿರುವಾಗ ದಾನ ಪಡೆಯಬಾರದು.

⏺️ ಚಂದ್ರನ‌ ಸ್ಥಿತಿಯು ಯಾವುದೆ ಬಾವದಲ್ಲಿ ಅಶುಭವಿದ್ದರೆ ನೀವು ಶ್ರೀಚಕ್ರವನ್ನು ಪೂಜಿಸುವ ಗುರುಗಳನ್ನು ಭೇಟಿಯಾಗಿ ಅವರ ಪೂಜೆಗೆ ಹಾಲು , ಮೊಸರು , ಪನ್ನಿರು , ಗಂಧ ಮತ್ತು ಶ್ವೇತಪುಷ್ಪಗಳನ್ನು ಪ್ರತಿ ಹುಣ್ಣಿಮೆಯಂದು ನೀಡಿ ಇದರಿಂದ ಚಂದ್ರಜನ್ಯ ಯಾವುದೇ ದೋಷವು ಜೀವನಪೂರ್ತಿ ನಿಮಗೆ ತಾಗದು.

⏺️ ತ್ರೀಕ ಬಾವದಲ್ಲಿ ಚಂದ್ರನಿದ್ದರೆ ಸೂರ್ಯಾಸ್ತದ ನಂತರ ಹಾಲನ್ನು ಸ್ವೀಕರಿಸಬೇಡಿ ಮತ್ತು ಸೋಮವಾರ , ಹುಣ್ಣಿಮೆ ದಿನ ಸ್ವಲ್ಪ ಹಾಲನ್ನು ಕರಿ ಜಾಲಿಗಿಡಕ್ಕೆ ಹಾಕಿ.

⏺️ ಅವಕಾಶ ದೊರೆತಾಗ ಸ್ಮಶಾನ ಪಕ್ಕದಲ್ಲಿರುವ ಬಾವಿ , ಕೆರೆ , ಬೋರವೆಲನ ನೀರಿನಿಂದ ಸ್ನಾನ ಮಾಡಿ ಹೀಗೆ 5 ಸ್ನಾನ ಮಾಡಿದರೆ ಚಂದ್ರನ ದೋಷವು ಅರ್ಧದಷ್ಟು ಕಡಿಮೆ ಆಗುವುದು

⏺️ ಚಂದ್ರ ತಿವ್ರಗಾಮಿಯಾದ ಗ್ರಹ ಮನಸ್ಸಿಗೆ ಕಾರಕನವನು, ಆದ್ದರಿಂದ ಮನಸ್ಸನ್ನು ಚಂಚಲ ಎಂದಿರುವರು ಹೇಗೇಗೆ ಚಂದ್ರನ ಸ್ಥಿತಿ ಪರಿವರ್ತನೆ ಆಗುವುದೊ ಅಂಥೆಯೆ ಮನಸ್ಸು ಬದಲಾಗುವುದು ಆದ್ದರಿಂದ ಒಂದುವೇಳೆ ಯಾರದ್ದೆ ಜನ್ಮ ಕುಂಡಲಿಯಲ್ಲಿ ಯಾವುದೇ ಪ್ರಾಕಾರದ ಚಂದ್ರ ಅಶುಭವಾಗಿದ್ದಾಗ ಅಂಥವರು ಯಾವುದೆ ದೊಡ್ಡ ನಿರ್ಧಾರವನ್ನು ಒಂಟಿಯಾಗಿ ತೆಗೆದುಕೊಳ್ಳಬಾರದು ಬದಲಾಗಿ ತಮ್ಮ ಮನೆಯಲ್ಲಿನ ಸ್ತ್ರೀಯರ ಸಲಹೆ ಅವಶ್ಯವಾಗಿ ಪಡೆಯಬೇಕು .

⏺️ ಚಂದ್ರನು ಕುಂಭ ಲಗ್ನದಲ್ಲಿ ದಶಮ ಭಾವದಲ್ಲಿ ಸ್ಥಿತನಾಗಿದ್ದಾಗ ತನ್ನ ನೀಚ ರಾಶಿಯಲ್ಲಿರುವ ಕಾರಣ , ಆತ ಈ ಭಾವದ ಶುಭಫಲಗಳನ್ನು ನಾಶಪಡಿಸುತ್ತಾನೆ ಅಂದರೆ ತಂದೆ ಮತ್ತು ಕಾರ್ಯ ವ್ಯವಹಾರದಲ್ಲಿ ಹಾನಿಯಾಗುತ್ತದೆ. ಉದಾಹರಣೆಗೆ ತಂದೆಗೆ ಆರೋಗ್ಯ ಸಂಬಂಧಿತ ಸಮಸ್ಯೆ ಉದ್ಭವಿಸುವುದು ಇದರ ಪರಿಹಾರಕ್ಕೆ ನಿತ್ಯ ಪವಿತ್ರ ನದಿಯ ನೀರನ್ನು ಸಂಗ್ರಹಿಸಿ ಕುಡಿಯುವ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ ಹಾಕಿ 42 ದಿನಗಳ ಕಾಲ ಕುಡಿಯುವುದರಿಂದ ಸಮಸ್ಯೆ ಶಾಂತವಾಗುವುದು.

⏺️ ಚಂದ್ರ ಸ್ತ್ರೀ ಪ್ರತಿನಿಧಿ ಗ್ರಹ ಆದ್ದರಿಂದ ಸ್ತ್ರೀಯರಿಗೆ ದುಃಖ ನೀಡಲು ಹೋಗಬೇಡಿ ಅಂದರೆ ಜಾತಕ ಅಕ್ಕ – ತಂಗಿ- ಮಗಳು – ಅಮ್ಮ – ಪತ್ನಿ ಇವರೊಂದಿಗೆ ಉತ್ತಮ ವರ್ತನೆ ತೊರಿಸಬೇಕು .

⏺️ ಈ ಪೃಥ್ವಿಯ ಮೇಲೆ ಜಲದ ಮೇಲೆ ಚಂದ್ರನ ಪ್ರಭಾವ ಹೆಚ್ಚು, ಪರಿಣಾಮವಾಗಿ ಸಮುದ್ರದಲ್ಲಿ ಉಬ್ಬರ – ಇಳಿತಗಳಾಗುವವು , ಆದ್ದರಿಂದ ಯಾರ ಜಾತಕದಲ್ಲಿ ಚಂದ್ರನು ಆಶುಭನಾಗಿರುವನೊ ಅವರು ಸಮುದ್ರ ಪ್ರವಾಸ , ನದಿಯಲ್ಲಿ ಈಜುವುದು ಆದಿ ಮಾಡಲು ಹೋಗಬಾರದು.

⏺️ ಜಾತಕದಲ್ಲಿ ಚಂದ್ರನೊಂದಿಗೆ ರಾಹು ಅಥವಾ ಶನಿ ಸ್ಥಿತರಿದ್ದರೆ ಜಾತಕನು ಹುಣ್ಣಿಮೆ ಹಾಗೂ ಅದರ ಹಿಂದಿನ ದಿನ ಏಕಾಂಗಿಯಾಗಿ ಇರುವುದು ಆಗಲಿ ಅಥವಾ ಮಹತ್ವದ ನಿರ್ಣಯ ಕೈಗೊಳ್ಳುವುದು ಆಗಲಿ ಮಾಡಬಾರದು ಇದರಿಂದ ಅವನಿಗೆ ಹಾನಿ ಸಂಭವಿಸುವುದು ಇಂಥವರು 90 ದಿನಗಳ ಕಾಲ ನಿತ್ಯ ಲಲಿತಾ ಅಷ್ಟೋತ್ತರ ಪಠಿಸಬೇಕು.

⏺️ ಯಾರ ಜಾತಕದಲ್ಲಿ ಚಂದ್ರನು ಅನಿಷ್ಟಕಾರಕನಾಗಿದ್ದಾನೊ ಅಂಥವರು ಜೀವನ ಪರ್ಯಂತ ಸರಳ ಉಪಾಯಗಳನ್ನು ಮಾಡಬೇಕು , ಇದರಿಂದ ಚಂದ್ರನ ಅನಿಷ್ಟ ಫಲಗಳು ನಿವಾರಣೆ ಆಗುವುದು ಜೊತೆಗೆ ಯಾರ ಜಾತಕದಲ್ಲಿ ಚಂದ್ರನು ಶುಭವಾಗಿದ್ದಾನೊ ಅಂಥವರು ಸಹ ಈ ಉಪಾಯಗಳಿಂದ ಅವನ ಶುಭತ್ವ ವೃದ್ಧಿಸಿಕೊಳ್ಳಬಹುದು.

⏺️ ಮದುವೆಯ ದೋಷವಿರುವ ಕನ್ಯೆಯರು ಶಿವಾಲಯಕ್ಕೆ ಹೋಗಿ ತಾಮ್ರದ ಪಾತ್ರೆಯಿಂದ ಶಿವನಿಗೆ ಅಭಿಷೇಕ ಮಾಡಿ ಅಕ್ಷತೆ , ಶ್ವೇತ ಪುಷ್ಪಗಳನ್ನು 21 ಸೋಮವಾರ ಮಾಡುವುದರಿಂದ ಕನ್ಯೆಗೆ ಉತ್ತಮ ವರನ ಪ್ರಾಪ್ತಿಯಾಗುವುದು.

⏺️ ಚಂದ್ರನನ್ನು ಬಲಿಷ್ಠ ಮಾಡಬೇಕು ಎಂದಾಗ ಶಿವನ ಉಪೇಕ್ಷೆ ಸಲ್ಲದು ಅಂದರೆ ಯಾವುದೇ ಶಿವಾಲಯ ಎದುರಾದಾಗ ಮಾನಸಿಕವಾದರು ನಮಸ್ಕಾರ ಸಲ್ಲಿಸಿಯೆ ಮುಂದುವರೆಯಬೇಕು.

⏺️ ಬಾಲಾರಿಷ್ಟ ಯೋಗವಿದ್ದಾಗ ಅಥವಾ ಮಗುವಿಗೆ ಚಂದ್ರನು ದುರ್ಭಲವಾಗಿದ್ದಾಗ ಕ್ಯಾಲ್ಸಿಯಂ ಅಂಶದ ಕೊರತೆಯಿಂದ ರೋಗಗಳು ಉದ್ಭವವಾಗುವುದು ಹಾಗಾಗಿ 54 ದಿನಗಳ ಕಾಲ ಅಂಥಹ ಜಾತಕನ ಉನ್ನತಿಗಾಗಿ ತಂದೆ ತಾಯಿಗಳು ಮೊಸರನ್ನವನ್ನು ಬಡವರಿಗೆ ದಾನವಾಗಿ ನೀಡಬೇಕು.

⏺️ ಜಾತಕನು ಮಲಗುವ ಮಂಚದ ಕೆಳಗೆ ನಾಲ್ಕು ಬೆಳ್ಳಿಯ ಮೊಳೆಯನ್ನು ಹುಣ್ಣಿಮೆಯಂದು ಖರೀದಿಸಿ ಹೊಡೆದರೆ ನಿದ್ರಾ ದೋಷ ನಿವಾರಣೆ ಆಗುವುದು.

⏺️ ಅಕಾಲದಲ್ಲಿ ಮಳೆಯಾದಾಗ ಆಣೆಕಲ್ಲುಗಳು ಬಿಡುತ್ತವೆ, ಇಂಥ ಆಣೆಕಲ್ಲುಗಳನ್ನು ಗಾಜಿನ ಸೀಸೆಯಲ್ಲಿರಿ ಪೂಜಾಸ್ಥಳದಲ್ಲಿಡಿ ಇದರಿಂದ ಜಾತಕದದ 6-8-12 ರ ಸ್ಥಿತ ಚಂದ್ರದೋಷ ನಿವಾರಣೆ ಆಗುವುದು .

ಚಂದ್ರ ನನ್ನು ಪ್ರಬಲಗೊಳಿಸುವ ಉಪಾಯಗಳು

ಈ ಕೆಳಗಿನ ಮಂತ್ರದಲ್ಲಿ ಯಾವುದಾದರೂ ಒಂದು ಮಂತ್ರವನ್ನು ನಿಮ್ಮ ಜನ್ಮತಿಥಿಯಿಂದ ಆರಂಭಿಸಿ 90 ದಿನಗಳ ಕಾಲ ನಿತ್ಯ 108 ಬಾರಿ ಹೇಳಿದರೆ ಚಂದ್ರನು ಅತ್ಯಂತ ಬಲಿಷ್ಠನಾಗುವನು ಜೊತೆಗೆ ಅವನು ಜಾತಕದ ಯಾವ ಭಾವದಲ್ಲಿ ಇರುವನೋ ಮತ್ತು ದೃಷ್ಟಿ ಇಡುವನೊ ಅದರ ಸಂಪೂರ್ಣ ಫಲ ನೀಡುವನು.

🕉️ ಓಂ ಅತ್ರಪುತ್ರಾಯ ವಿದ್ಮಹೇ ಸಾಗರೋಧ್ಭವಾಯ ದೀಮಹಿ ತನ್ನಶ್ಚಂದ್ರ ಪ್ರಚೋದಯಾತ್ |

🕉️ ಯಾ ತೇ ರುದ್ರ ಶಿವಾ ತನೂರಘೋರಾ ಪಾಪಕಾಶಿನಿ | ತಯಾ ನಸ್ತನ್ವಾ ಶಂತಮಯಾ ಗಿರಿಶಂತಾಬಿಚಾಕಶೀಹಿ ||

🕉️ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ | ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್.|

🕉️ ದುರ್ಗಾ ಸೂಕ್ತ ನಿತ್ಯ ೧೧ ಬಾರಿ.

🕉️ ಶ್ರೀ ಸೂಕ್ತ 3 ಬಾರಿ ಪಠಿಸಿದರೆ ಸಾಕು.

ಸೂಚನೆ: ವೈದಿಕ ಮಂತ್ರಗಳಿಗೆ ಮಡಿಯ ಅಗತ್ಯತೆ ಇರುವುದು ಇವುಗಳ ಜಪವನ್ನು ಶಾಖಾಹಾರಿಗಳು ಮಾತ್ರ ಮಾಡಬಹುದು

ಶನಿ

ಶನಿಯೆಂದರೆ ಎಲ್ಲರಿಗೂ ಭಯವಾಗುವುದು ಸಾಮಾನ್ಯ. ಶನಿಯ ಕೋಪದಿಂದ ನಾವು ಸಾಡೇಸಾತಿ ಶನಿ ದೋಷವನ್ನು, ಶನಿ ದೋಷವನ್ನು, ಅಪಘಾತ, ವಿವಾದ, ಜಗಳ, ಅನಗತ್ಯ ಮನಸ್ತಾಪಗಳನ್ನು ಎದುರಿಸಬೇಕಾಗುತ್ತದೆ. 

ವಿವಿಧ ಹೆಸರುಗಳಿಂದ ಕರೆಯಲ್ಪಡುವ ಭಗವಾನ್‌ ಶನಿದೇವರು ಹಿಂದೂ ಪುರಾಣಗಳಲ್ಲಿ ಹೆಚ್ಚು ಗೌರವಿಸಲ್ಪಟ್ಟ ದೇವರು. 

ಆಗಾಗ್ಗೆ ದುರಾದೃಷ್ಟ ಮತ್ತು ಪ್ರತೀಕಾರದ ಮುನ್ನುಡಿ ಎಂದು ಕರೆಯಲ್ಪಡುವ ಭಗವಾನ್ ಶನಿದೇವ ಜಗತ್ತನ್ನು ಆಳುವ ಒಂಬತ್ತು ಗ್ರಹಗಳಲ್ಲಿ (ನವಗ್ರಹ) ಏಳನೇ ಸ್ಥಾನವನ್ನು ಪಡೆದಿದ್ದಾರೆ. ಸೂರ್ಯದೇವ ಮತ್ತು ಛಾಯಾದೇವಿಯರ ಮಗನಾದ ಶನಿಯನ್ನು ನ್ಯಾಯ ಮತ್ತು ಕರ್ಮದ ಅಧಿಪತಿ ಎನ್ನಲಾಗುತ್ತದೆ. 

ದುಷ್ಟ ಮತ್ತು ದುರಾದೃಷ್ಟವನ್ನು ನಿವಾರಿಸಲು, ಹಿಂದೂಗಳು ಸಾಡೇಸಾತಿ ಅಂದರೆ ಏಳೂವರೆ ವರ್ಷಗಳ ಕಾಲ ನಡೆಯುವ ದುರಾದೃಷ್ಟದ ಹಂತವನ್ನು ಮೀರಿಸಲು ನಿಯಮಿತವಾಗಿ ಶನಿದೇವರ ಮಂತ್ರ ಜಪ ಮಾಡುತ್ತಾರೆ.

 ಶನಿಯ ದುಷ್ಟರಿಣಾಮದಿಂದ ವಾದ – ವಿವಾದಗಳನ್ನು, ಎಲ್ಲದರಲ್ಲೂ ವಿಳಂಬ, ಅನಗತ್ಯ ಜಗಳ, ಸಾವು – ನೋವು ಉಂಟಾಗುತ್ತದೆ. ಶನಿವಾರವನ್ನು ಭಗವಾನ್ ಶನಿಯ ದಿನವೆಂದು ಪರಿಗಣಿಸಲಾಗುತ್ತದೆ. ನೀವು ಕೂಡ ಶನಿಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಈಗಾಗಲೇ ಹೇಳಿರುವ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದರೆ ಈ ಮಂತ್ರವನ್ನು ತಪ್ಪದೇ ಪಠಿಸಿ.

  • ಬಣ್ಣ – ಕಪ್ಪು
  • ರತ್ನ – ನೀಲ
  • ಸ್ವಕ್ಷೇತ್ರ – ಮಕರ ಹಾಗೂ ಕುಂಭ
  • ಉಚ್ಛ ಕ್ಷೇತ್ರ – ತುಲಾ
  • ನೀಚ ಕ್ಷೇತ್ರ – ಮೇಷ
  • ಮಿತ್ರ ಗ್ರಹ – ಶುಕ್ರ ಮತ್ತು ಬುಧ
  • ಶತ್ರು ಗ್ರಹ – ಸೂರ್ಯ ಮತ್ತು ಕುಜ
  • ಸಮ ಗ್ರಹ – ಗುರು ಮತ್ತು ಚಂದ್ರ
  • ಲೋಹ – ಕಬ್ಬಿಣ – ಉಕ್ಕು
  • ಗುಣ – ಕತ್ತಲೆ – ಕ್ರೂರ
  • ದೈವ – ಯಮ
  • ದಿಕ್ಕು – ಪಶ್ಚಿಮ
  • ಸಂಖ್ಯೆ – ೮ ಎಂಟು
  • ಕಾಲ – ವಸಂತ
  • ದಿನ – ಶನಿವಾರ (ಅಮಾವಾಸ್ಯೆ)
  • ದಶಾವಧಿ –  ಹತ್ತೊಂಬತ್ತು ವರ್ಷ
  • ಧಾನ್ಯ – ಎಳ್ಳು
  • ಸಮಿತ್ತು – ಶಮೀ

ಶನಿ ಗ್ರಹ ಯಾವ ಸ್ಥಾನದಲ್ಲಿ ಇದ್ದರೆ ಏನಾಗುತ್ತದೆ ?

🪐 ಆಯಾಯ ಸ್ಥಾನಗಳಲ್ಲಿ ಶನಿಯು ಇದ್ದಾಗ…..🪐🌚🙏🏻

ಪ್ರತೀ ಜಾತಕ ಕುಂಡಲಿಯಲ್ಲಿ ಶನಿಯು ಯಾವುದಾದರೂ ಒಂದು ಸ್ಥಾನದಲ್ಲಿ ಇರುತ್ತಾನೆ ಇದರಿಂದ ಏನೇನು ಫಲಗಳು ಎಂಬ ಕುರಿತು ಒಂದು ಪುಟ್ಟ ಮಾಹಿತಿಗಳನ್ನು ನೀಡುವ ಪ್ರಯತ್ನ ಅಷ್ಟೇ…..

🪐  ಲಗ್ನ ಸ್ಥಾನದಲ್ಲಿ ಶನಿ ಇದ್ದರೆ….

ಲಗ್ನ ಎಂದರೆ ಶರೀರ ಅಥವಾ ತನು ಸ್ಥಾನವಾಗಿದೆ.

ಕೋಲು ಮುಖ ಉದ್ದನೆಯ ಹಾಗೂ ಬಲಿಷ್ಠ ಶರೀರದವರಾಗಿರುತ್ತಾರೆ;

ಆರೋಗ್ಯವು ಶನಿಯು ಯಾವ ಲಗ್ನದಲ್ಲಿ ಯಾರೊಂದಿಗೆ ಇದ್ದಾನೆ ಎಂಬುದನ್ನು ಅವಲಂಬಿಸಿರುತ್ತದೆ; ಶುಕ್ರನೊಂದಿಗಿದ್ದರೆ ಉದ್ಯೋಗ ಹಾಗೂ ಸಂಸಾರ ಜೀವನ ಉತ್ತಮ ಆಗಿರುತ್ತದೆ; ಹತ್ತನೆಯ ಸ್ಥಾನದ ಮೇಲೆ ಶನಿ ದೃಷ್ಟಿ ಇರುವುದರಿಂದ ವ್ಯಾಪಾರ-ಉದ್ಯೋಗ ಕ್ಷೇತ್ರಗಳಲ್ಲಿ ಶನಿಯ ಹಸ್ತಕ್ಷೇಪ ಇರುತ್ತದೆ; ಶ್ರಮಜೀವಿ; ಶಿಸ್ತು ಬದ್ಧ ಜೀವನ ಶೈಲಿ ಹಾಗೂ ಮಹತ್ವಾಕಾಂಕ್ಷಿ ಆಗಿರುತ್ತಾರೆ ಅಲ್ಲವೇ ಏಳನೆಯ ಸ್ಥಾನದ ಮೇಲೆಯೂ ಗಮನ ಇರುವುದರಿಂದ ವಿವಾಹ-ವೈವಾಹಿಕ ಜೀವನದ ವಿಷಯದಲ್ಲಿ ಕೊಂಚ ಏರುಪೇರು ಆಗಿರುತ್ತದೆ .ಮೂರನೇ ಮನೆಯ ಮೇಲೂ ದೃಷ್ಟಿ ಹಾಯಿಸುವುದರಿಂದ ಸೋದರ ಸಹೋದರಿಯರ ಜೊತೆ ಸಂಬಂಧಗಳ ಮೇಲೆ ಪ್ರಭಾವ ಇರುತ್ತದೆ.

🪐 ಲಗ್ನದಿಂದ ಎರಡನೇ ಸ್ಥಾನದಲ್ಲಿ ಶನಿ ಇದ್ದರೆ….

ಇದು ಧನ ಸ್ಥಾನ.

ಈ ಸ್ಥಾನದಲ್ಲಿ ಶನಿ ಶುಕ್ರನೊಡನೆ ಇದ್ದರೆ ಯಶಸ್ಸು ಹಾಗೂ ಸಂಪತ್ತು ದೊರೆಯುವಂತೆ ಮಾಡುತ್ತಾನೆ. ಕುಟುಂಬದಿಂದ ದೂರ ಇರುವ ಸಾಧ್ಯತೆ;ತನ್ನ 35-36 ಪ್ರಾಯದ ಮೇಲೆ ಸಮೃದ್ಧವಾಗಿ ಸಂಪತ್ತು ಪ್ರಾಪ್ತಿ; ಮಾತಾಪಿತೃ ಸಹಕಾರ ಸಿಗುವುದಿಲ್ಲ.ಶನಿ ದಶೆ ನಡೆಯುವ ಅವಧಿಯಲ್ಲಿ ಇವರಿಗೆ ಹೆಚ್ಚಿನ ಲಾಭ ಆಗುತ್ತದೆ.

🪐 ಲಗ್ನದಿಂದ ಮೂರನೇ ಸ್ಥಾನದಲ್ಲಿ ಶನಿ ಇದ್ದರೆ…

ಇದು ಭಾತೃ  ಸ್ಥಾನ.

ಸ್ವಾರ್ಥ ಮನೋಭಾವನೆ ಅಧಿಕ ;ಒಂದು ವೇಳೆ ಈ ಸ್ಥಾನದಲ್ಲಿ ಶನಿಯ ಜತೆಗೆ ರವಿ ಗ್ರಹ ಇದ್ದರೆ ಮಾತಾಪಿತೃ ಹಾಗೂ ಸಹೋದರ/ರಿಯರ ಜತೆಗಿನ ಸಂಬಂಧ ಚೆನ್ನಾಗಿರುವುದಿಲ್ಲ. ಜತೆಗೆ ಉನ್ನತ ಶಿಕ್ಷಣಕ್ಕೆ ನಾನಾ ಅಡ್ಡಿಗಳು ಬರುತ್ತವೆ. ಧಾರ್ಮಿಕ ಪುಣ್ಯ ಕಾರ್ಯಗಳಿಗೆ ಅಡೆತಡೆಗಳ ಸಾಧ್ಯತೆ.

🪐 ಲಗ್ನದಿಂದ ನಾಲ್ಕನೇ ಸ್ಥಾನದಲ್ಲಿ ಶನಿ ಇದ್ದರೆ…

ಇದು ಮಾತೃ; ಆಸ್ತಿ; ವಿದ್ಯಾಭ್ಯಾಸ ಸ್ಥಾನ.

ಕುಟುಂಬದ ಜೊತೆ ಸಂತೋಷವಾಗಿ ಕಾಲ ಕಳೆಯುವಿಕೆ;ಮಾತಾಪಿತೃ ಜತೆಗೆ ಬಾಂಧವ್ಯ ದೀರ್ಘ ಕಾಲ ಅಸಾಧ್ಯ; ವಿದ್ಯಾಭ್ಯಾಸಕ್ಕೆ ಅಡೆತಡೆಗಳು ;ಆರೋಗ್ಯ ಉತ್ತಮವಾಗಿರುತ್ತದೆ. ಶತ್ರುಗಳ ಜೊತೆ ಹೋರಾಟದ ಬದುಕು ಸಂಭವ; ಒಂದು ವೇಳೆ ಈ ಸ್ಥಾನದಲ್ಲಿ ಶನಿ ನೀಚನಾಗಿದ್ದರೆ ಉದರ ದೋಷ ಹಾಗೂ ಸಂದು ನೋವುಗಳು ಕಾಣಿಸಿಕೊಳ್ಳಬಹುದು; ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ಭರವಸೆಯ ಪ್ರಗತಿ; ಶುಕ್ರ ಬುಧರೊಂದಿಗೆ ಶನಿ ಇದ್ದರೆ ಅಪಾರ ಆಸ್ತಿ ಸಂಪಾದನೆ

🪐 ಲಗ್ನದಿಂದ ಐದನೇ ಸ್ಥಾನದಲ್ಲಿ ಶನಿ ಇದ್ದರೆ….

ಇದು ಪಿತೃ ; ಪೂರ್ವ ಜನ್ಮ ಪುಣ್ಯ ಹಾಗೂ ಸುತ ಸ್ಥಾನ.

ಇಲ್ಲಿ ಶನಿ ಇದ್ದರೆ ನಿಮ್ಮ ಆಸೆ-ಆಕಾಂಕ್ಷೆಗಳಿಗೆ ತಡೆ ; ತಂದೆ ಜತೆಗೆ ಸಂಬಂಧ ಸಾಧಾರಣ ;ಮದುವೆ, ಸಂತಾನ ವಿಚಾರ ವಿಳಂಬ ;ಒಂದು ವೇಳೆ ಶನಿಯು ಬುಧ ಅಥವಾ ಶುಕ್ರನ ಜತೆಗೆ ಇದ್ದರೆ ತುಂಬಾ ಚಟುವಟಿಕೆ ಉಳ್ಳವರು. ಗುಣವತಿ, ಶ್ರೀಮಂತ, ಧರ್ಮವಂತೆ, ಶಿಸ್ತುಬದ್ಧ ಸಂಗಾತಿ ಸಿಗುತ್ತಾರೆ;ಆಕಸ್ಮಿಕ ಧನ-ಸಂಪತ್ತು ಲಾಭ; ಮಕ್ಕಳಿಂದ ನೋವು ಅನುಭವಿಸುವ ಸಾಧ್ಯತೆ.

🪐 ಲಗ್ನದಿಂದ ಆರನೇ ಸ್ಥಾನದಲ್ಲಿ ಶನಿ ಇದ್ದರೆ….

ಇದು ಶತ್ರು ಸ್ಥಾನ.

ಇಲ್ಲಿ ಶನಿ ಗ್ರಹ ಇದ್ದರೆ ಶತ್ರುಗಳು ನಾಶವಾಗುತ್ತಾರೆ. ಇಷ್ಟ ಕೆಲಸ ಪ್ರಾಪ್ತಿ;.ದೀರ್ಘಾಯುಷ್ಯ ನೀಡುತ್ತದೆ. ಹಣಕಾಸಿನ ವ್ಯವಹಾರದಲ್ಲಿ ತುಂಬಾ ಜಾಣರು. ಒಂದು ವೇಳೆ ಶನಿ ನೀಚನಾಗಿದ್ದಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ವಿದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಸ್ವತಂತ್ರ ಉದ್ಯಮ ಪ್ರಾರಂಭ ಆದರೆ ಮಾಲೀಕರಾಗುವ ಅವಕಾಶ ಕಡಿಮೆ. ಕುಟುಂಬದ ನೆರವು ದೊರೆಯುತ್ತದೆ; ವಿಪರ್ಯಾಸವೆಂದರೆ ಶತ್ರುಗಳಿಂದ ಅಧಿಕ ಲಾಭ ಪ್ರಾಪ್ತಿ..!

🪐 ಲಗ್ನದಿಂದ ಏಳನೇ ಸ್ಥಾನದಲ್ಲಿ ಶನಿ ಇದ್ದರೆ…..

ಇದು ಕಳತ್ರ ಅಥವಾ ವಿವಾಹ ಸ್ಥಾನ.

ಶಿಸ್ತಿನ ಹಾಗೂ ಆಗಾಗ ಕೋಪಗೊಳ್ಳುವ ಸಂಗಾತಿ ದೊರೆಯುತ್ತಾರೆ ಇದರಿಂದ ಆಗಾಗ ಜಗಳವಾಡುವ ಸಾಧ್ಯತೆ ;ಉನ್ನತ ವಿದ್ಯಾಭ್ಯಾಸ; ಏಕಾಂಗಿಯಾಗಿ ಇರಲು ಇಷ್ಟಪಡುವವರು ಆಗುತ್ತಾರೆ ಹಾಗೂ ಮನೆಯಲ್ಲಿ ಕುಟುಂಬದ ಜೊತೆ ಸೇರಲು ಇಷ್ಟ ಪಡುವುದಿಲ್ಲ.

🪐 ಲಗ್ನದಿಂದ ಎಂಟನೇ ಸ್ಥಾನದಲ್ಲಿ ಶನಿ ಇದ್ದರೆ….

ಇದು ಆಯುಷ್ಯ ಸ್ಥಾನ 

ಲಗ್ನದಿಂದ ಎಂಟರಲ್ಲಿ ಶನಿಯಿದ್ದರೆ ದೀರ್ಘಾಯುಷ್ಯವನ್ನು ನೀಡುವ ಜತೆಗೆ ದುರದೃಷ್ಟವನ್ನೂ ತರುತ್ತಾನೆ. ಇವರಿಗೆ ಕಷ್ಟಗಳು ಹಾಗೂ ಸಮಸ್ಯೆಗಳು ಆಗಾಗ ಬರುತ್ತವೆ; ಜೀವನದ ಆರಂಭಿಕ ಹಂತದಲ್ಲೇ ಇವರು ಕುಟುಂಬದಿಂದ ದೂರ. ಶಿಕ್ಷಣದಲ್ಲಿ ಅಡೆತಡೆಗಳು ಹಾಗೂ ಸಂತಾನ ವಿಚಾರದಲ್ಲಿ ಸಮಸ್ಯೆಗಳಾಗುವ ಸಾಧ್ಯತೆ ಇರುತ್ತದೆ; ಆದರೆ ಶನಿದಶಾವಧಿಯಲ್ಲಿ ಅನಿರೀಕ್ಷಿತವಾಗಿ ಅತ್ಯಧಿಕ ಧನ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚಿದೆ.

🪐 ಲಗ್ನದಿಂದ ಒಂಬತ್ತರಲ್ಲಿ ಶನಿ ಇದ್ದರೆ….

ಇದು ಭಾಗ್ಯಸ್ಥಾನ.

ಶುಕ್ರನ ಜೊತೆಯಲ್ಲಿದ್ದರೆ ಉನ್ನತ ಭಾಗ್ಯ ಪ್ರಾಪ್ತಿ;

ನ್ಯಾಯ, ನೀತಿ, ಧರ್ಮ ಮಾರ್ಗದಲ್ಲಿ ನಡೆಯುವ ಗುಣ; ಆದರೆ ಮಾತಾಪಿತೃ ಸೌಖ್ಯ ದೊರೆಯುವುದಿಲ್ಲ .ಶನಿ ದಶೆ ನಡೆಯುವಾಗ ಉತ್ತಮ ಶುಭ ಫಲ ದೊರೆಯುತ್ತದೆ. ಸಾಲದಿಂದ ಮುಕ್ತಿ. ಹಾಗೂ ಅನಾರೋಗ್ಯ ಸಮಸ್ಯೆ ನಿವಾರಣೆ ಬೇಗ ಆಗುತ್ತದೆ.

🪐 ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಶನಿ ಇದ್ದರೆ…

ಇದು ಕರ್ಮ ಸ್ಥಾನ.

ಉದ್ಯೋಗ ಅಥವಾ ವೃತ್ತಿ ಬದುಕು ಬಹಳ ಸುಂದರವಾಗಿರುತ್ತದೆ . ಕಬ್ಬಿಣ; ಉಕ್ಕು ಲೋಹಗಳಿಗೆ  ಸಂಬಂಧಿಸಿದ ವ್ಯಾಪಾರ ಉದ್ಯಮ ದಾರರಿಗೆ ಉತ್ತಮ ಲಾಭ. ಸರ್ಕಾರಿ ನೌಕರಿ ಪ್ರಾಪ್ತಿ.

ಉದ್ಯೋಗಕ್ಕಾಗಿ ವಿದೇಶ ಪ್ರವಾಸ ಯಶಸ್ಸು. ಸಂಗಾತಿಯೊಡನೆ ಸಂತೋಷ ಆದರೆ ಮದುವೆ ವಿಳಂಬವಾಗುವ ಸಾಧ್ಯತೆ.

🪐 ಲಗ್ನದಿಂದ ಹನ್ನೊಂದರಲ್ಲಿ ಶನಿ ಇದ್ದರೆ….

ಇದು ಲಾಭ ಸ್ಥಾನವಾಗಿರುತ್ತದೆ;

ದೊಡ್ಡ ಪ್ರಮಾಣದ ಆಸ್ತಿ, ಸಮಾಜದಲ್ಲಿ ಉತ್ತಮ ಸ್ಥಾನ-ಮಾನ ದೊರೆಯುತ್ತದೆ. ಜಾತಕದಲ್ಲಿ ಶುಕ್ರನ ಜತೆಗೆ ಚಂದ್ರ ಅಥವಾ ಬುಧ ಇದ್ದು, ಅಲ್ಲೇ ಶನಿಯೂ ಇದ್ದರೆ ಯಶಸ್ಸು, ಅತ್ಯುನ್ನತ ಸ್ಥಾನ ಮಾನ ದೊರೆಯುತ್ತದೆ. ಸಮಾಜದಲ್ಲಿ ಅಪಾರ ಸಂಖ್ಯೆಯ ಸ್ನೇಹಿತರು ಇರುತ್ತಾರೆ. 

🪐 ಲಗ್ನದಿಂದ ಹನ್ನೆರಡನೇ ಸ್ಥಾನದಲ್ಲಿ ಶನಿ ಇದ್ದರೆ…

ಇದು ವ್ಯಯ ಸ್ಥಾನ.

ಆಸ್ತಿ ಕಳೆದುಕೊಳ್ಳುತ್ತಾರೆ. ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನೂ ಉಳಿಸಿಕೊಳ್ಳಲು ಆಗುವುದಿಲ್ಲ.

ವಿ.ಸೂ:-

ಇದು ಕೇವಲ ಶನಿಯು ಆಯಾ ಸ್ಥಾನಗಳಲ್ಲಿ ಇದ್ದಾಗ ಅವನು ಅವನ ದಶಾವಧಿಯಲ್ಲೂ ಹಾಗೂ ಇತರ ದಶಾವಧಿಯ ಶನಿ ಭುಕ್ತಿಯಲ್ಲೂ ಕೊಡುವ ಫಲವಾಗಿರುತ್ತದೆ ಹೊರತು ಕೇವಲ ಈ ಅಂಶಗಳೇ ಜಾತಕ ಕುಂಡಲಿಯನ್ನು ಸಂಪೂರ್ಣವಾಗಿ ನಿರ್ಧರಿಸುವುದಿಲ್ಲಾ…

ಹಾಗೂ ಶನಿಯ ಮಿತ್ರ;ಶತ್ರು;ಸಮ ಸ್ಥಾನಾದಿಗಳು ಹಾಗೂ ಅವನ ಶತ್ರು-ಮಿತ್ರರು ಅವರುಗಳ ದೃಷ್ಟಿ ಎಲ್ಲವನ್ನೂ ಪರಿಗಣಿಸಬೇಕು…..

ನಿಮ್ಮ ಜಾತಕದಲ್ಲಿ ಶನಿಯು ಯಾವ ಸ್ಥಾನದಲ್ಲಿದ್ದರೆ ಸ್ವಂತ ಮನೆ ನಿರ್ಮಿಸುವ ಯೋಗವಿದೆ?

ಸ್ವಂತ ಮನೆಯ ಕನಸು ಎಲ್ಲರೂ ಕಾಣುತ್ತಾರೆ. ಇದೆಲ್ಲದಕ್ಕೂ ಕಾಲ ಕೂಡಿಬರಬೇಕು. ಆ ಕಾಲದೊಂದಿಗೆ ಶನಿಯ ಕೃಪಾದೃಷ್ಟಿಯೂ ಇರಬೇಕು ಎನ್ನುತ್ತಾರೆ. ಹಾಗಾದರೆ ಶನಿ ನಿಮ್ಮ ಕುಂಡಲಿಯ ಯಾವ ಸ್ಥಾನದಲ್ಲಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ..

ಲಾಲ್‌ಕಿತಾಬ್‌ ಪ್ರಕಾರ ಯಾವುದೇ ಕಟ್ಟಡ ಅಥವಾ ಮನೆಯ ನಿರ್ಮಾಣಕ್ಕೆ ಕಾರಣವಾಗುವ ಗ್ರಹವೆಂದರೆ ಶನಿ. 

ಯಾರ ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿರುತ್ತಾನೋ ಅವನು ಕಟ್ಟಡ ನಿರ್ಮಿಸುವ ಆನಂದವನ್ನು ಪಡೆಯುತ್ತಾನೆ. 

ಇದಕ್ಕೆ ವ್ಯತಿರಿಕ್ತವಾಗಿ ಶನಿ ಅಶುಭ ಸ್ಥಾನದಲ್ಲಿದ್ದರೆ ಮನೆಯ ಸಂತೋಷದಿಂದ ವಂಚಿತನಾಗುತ್ತಾನೆ. 

ಜಾತಕದ ನಾಲ್ಕನೇ ಭಾವವನ್ನು ಮನೆ ಎಂದು ಪರಿಗಣಿಸಲಾಗುತ್ತದೆ. 

ಆದರೆ ಲಾಲ್‌ಕಿತಾಬ್‌ ಪ್ರಕಾರ ಎರಡನೇ ಮನೆಯನ್ನು ಮನೆಗೆ ಸಂಬಂಧಿಸಿದ್ದು ಎಂದು ಪರಿಗಣಿಸಲಾಗುತ್ತದೆ. 

ಅದೇ ರೀತಿಯಾಗಿ ಏಳನೇ ಮನೆಯನ್ನು ಸಂತೋಷ ಮತ್ತು ದುಃಖದ ಮನೆಯೆಂದು ಪರಿಗಣಿಸಲಾಗುತ್ತದೆ.

ಗ್ರಹಗಳು ಪ್ರತಿಯೊಬ್ಬ ಮನುಷ್ಯನ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಅದರಂತೆ ಶನಿ ನಿಮ್ಮ ಜಾತಕದ ಯಾವ ಮನೆಯಲ್ಲಿದ್ದರೆ ನಿಮ್ಮ ಕನಸಿನ ಮನೆಗಾಗಿ ಹಣವನ್ನು ಖರ್ಚು ಮಾಡುವುದು ನಿಷ್ಪ್ರಯೋಜಕ ಎನ್ನುವುದನ್ನು ತಿಳಿದುಕೊಳ್ಳಿ.

​ಶನಿ ಮೊದಲ ಸ್ಥಾನದಲ್ಲಿದ್ದರೆ

ಲಾಲ್‌ಕಿತಾಬ ಪ್ರಕಾರ ಜಾತಕದಲ್ಲಿ ಶನಿ ಮೊದಲ ಸ್ಥಾನದಲ್ಲಿದ್ದರೆ ಏಳನೇ ಮತ್ತು ಹತ್ತನೇ ಮನೆಗಳು ಖಾಲಿಯಾಗಿದ್ದರೆ ಶುಭ ಫಲಿತಾಂಶಗಳು ಸಿಗುತ್ತವೆ. ಇಲ್ಲವಾದರೆ ವ್ಯಕ್ತಿಯು ಸಾಲದ ಬಲೆಗೆ ಸಿಲುಕಿಕೊಳ್ಳುತ್ತಾನೆ ಹಾಗೂ ಅನಾನುಕೂಲಗಳು ಸಂಭವಿಸುತ್ತದೆ.

​ಶನಿ ಎರಡನೇ ಸ್ಥಾನದಲ್ಲಿದ್ದರೆ

ಜಾತಕದಲ್ಲಿ ಶನಿ ಎರಡನೇ ಸ್ಥಾನದಲ್ಲಿದ್ದರೆ, ನೀವು ಮನೆ ನಿರ್ಮಿಸುತ್ತಿದ್ದರೆ, ಮಧ್ಯದಲ್ಲಿ ಮನೆಯ ನಿರ್ಮಾಣವನ್ನು ನಿಲ್ಲಿಸಬೇಡಿ. ಇದು ಮನೆಯ ಸಂತೋಷವನ್ನು ಹೆಚ್ಚಿಸುತ್ತದೆ ಮತ್ತು ಜೀವನದಲ್ಲಿ ಪ್ರಗತಿಯನ್ನು ತರುತ್ತದೆ. ಮನೆಯ ಕೆಲಸ ಅರ್ಧದಷ್ಟು ಉಳಿದಿದ್ದರೆ ಮತ್ತು ನೀವು ಕೆಲಸವನ್ನು ನಿಲ್ಲಿಸಿದರೆ, ನಂತರ ಗಂಭೀರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.

​ಶನಿ ಮೂರನೇ ಸ್ಥಾನದಲ್ಲಿದ್ದರೆ

ಜಾತಕದಲ್ಲಿ ಶನಿಯು ಮೂರನೇ ಮನೆಯಲ್ಲಿದ್ದರೆ, ಆ ವ್ಯಕ್ತಿ ಮನೆ ನಿರ್ಮಿಸಿದ ನಂತರ ಮೂರು ನಾಯಿಗಳನ್ನು ಸಾಕಬೇಕು. ಇದನ್ನು ಮಾಡುವುದರಿಂದ ವ್ಯಕ್ತಿ ಸಂತೋಷವಾಗಿರುತ್ತಾನೆ ಮತ್ತು ಶನಿ ದೇವನ ಆಶೀರ್ವಾದ ಪಡೆಯುತ್ತಾನೆ. ಇಲ್ಲದಿದ್ದರೆ ವ್ಯಕ್ತಿಯು ಅನೇಕ ತೊಂದರೆಯನ್ನು ಮತ್ತು ದುಃಖವನ್ನು ಎದುರಿಸಬೇಕಾಗುತ್ತದೆ.

​ಶನಿ ನಾಲ್ಕನೇ ಸ್ಥಾನದಲ್ಲಿದ್ದರೆ

ಜಾತಕದಲ್ಲಿ ನಾಲ್ಕನೇ ಮನೆಯಲ್ಲಿ ಶನಿ ನೆಲೆಸಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ಬಾಡಿಗೆ ಮನೆಯಲ್ಲಿ ವಾಸಿಸಬೇಕು, ಆಗ ಮಾತ್ರ ಅದು ಅವನಿಗೆ ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಖಾಸಗಿ ಮನೆ ಕಟ್ಟಲಾರಂಭಿಸಿದರೆ ಅತ್ತೆ, ತಾಯಿ, ತಾಯಿಯ ಅಜ್ಜ, ಅಜ್ಜಿ ಮುಂತಾದವರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಜೀವನದ ಇತರ ಕ್ಷೇತ್ರಗಳಲ್ಲಿಯೂ ಅಡೆತಡೆಗಳು ಉಂಟಾಗುತ್ತದೆ.

​ಶನಿ ಐದನೇ ಸ್ಥಾನದಲ್ಲಿದ್ದರೆ

ಶನಿಯು ಐದನೇ ಮನೆಯಲ್ಲಿದ್ದರೆ ಮತ್ತು ಅಂತಹ ವ್ಯಕ್ತಿಯು ತನ್ನ ಮನೆಯನ್ನು ನಿರ್ಮಿಸುತ್ತಿದ್ದರೆ, ಅವನು ಸಂತತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದಾಹರಣೆಗೆ, ಮಕ್ಕಳ ಬೆಳವಣಿಗೆಯಲ್ಲಿ ಅಡಚಣೆ ಉಂಟಾಗಬಹುದು ಅಥವಾ ಅವರು ಮಕ್ಕಳ ಸಂತೋಷದಿಂದ ವಂಚಿತರಾಗಬೇಕಾಗಬಹುದು. ನಿಮ್ಮ ಮಕ್ಕಳು ಮನೆ ನಿರ್ಮಿಸುತ್ತಿದ್ದರೆ, ಅಂತಹ ಮನೆ ನಿಮಗೆ ಸೂಕ್ತವಾಗಿರುತ್ತದೆ. ಇಂತಹ ವ್ಯಕ್ತಿಯು 45 ವರ್ಷ ದಾಟಿದ ನಂತರವೇ ಮನೆ ನಿರ್ಮಿಸಬೇಕು.

​ಶನಿ ಆರನೇ ಸ್ಥಾನದಲ್ಲಿದ್ದರೆ

ಜಾತಕದಲ್ಲಿ ಶನಿ ಆರನೇ ಸ್ಥಾನದಲ್ಲಿದ್ದರೆ, ಆ ವ್ಯಕ್ತಿಯು 36 ರಿಂದ 39 ನೇ ವಯಸ್ಸಿನಲ್ಲಿ ಮನೆ ನಿರ್ಮಿಸಬೇಕು, ಇಲ್ಲದಿದ್ದರೆ ಮಗಳು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ, ಮಗಳಿಗೆ ತನ್ನ ಅಳಿಯಂದಿರ ಮನೆಯಲ್ಲಿ ಕಿರುಕುಳ ನೀಡಬಹುದು ಅಥವಾ ಪ್ರಗತಿಗೆ ಅಡ್ಡಿಯಾಗಬಹುದು.

​ಶನಿ ಏಳನೇ ಸ್ಥಾನದಲ್ಲಿದ್ದರೆ

ಶನಿ ಜಾತಕದ ಏಳನೇ ಮನೆಯಲ್ಲಿದ್ದರೆ, ಆ ವ್ಯಕ್ತಿಯು ಮನೆ ನಿರ್ಮಿಸುವುದು ಶುಭ. ಅವರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ ಮತ್ತು ಸಂತೋಷಗಳಿಗೆ ಕೊರತೆಯಿಲ್ಲ. ಅಲ್ಲದೆ, ಅಂತಹ ವ್ಯಕ್ತಿಯು ಒಂದರ ನಂತರ ಒಂದರಂತೆ ಮನೆಗಳನ್ನು ನಿರ್ಮಿಸುತ್ತಾನೆ ಅಥವಾ ಖರೀದಿಸುತ್ತಾನೆ. ಶನಿಯ ಸ್ಥಿತಿ ಶುಭವಾಗಿದ್ದಾಗ ಮಾತ್ರ ಇದು ಸಂಭವಿಸುತ್ತದೆ. ಇಲ್ಲದಿದ್ದರೆ, ಶನಿ ಅವರ ದುಷ್ಪರಿಣಾಮದಿಂದಾಗಿ, ಒಬ್ಬ ವ್ಯಕ್ತಿಯು ತನ್ನ ಮನೆಯನ್ನು ಸಹ ಮಾರಾಟ ಮಾಡಬೇಕಾಗಬಹುದು.

​ಶನಿ ಎಂಟನೇ ಸ್ಥಾನದಲ್ಲಿದ್ದರೆ

ಜಾತಕದಲ್ಲಿ ಶನಿ ಎಂಟನೇ ಮನೆಯಲ್ಲಿದ್ದರೆ ಮತ್ತು ಒಬ್ಬ ವ್ಯಕ್ತಿಯು ಮನೆ ನಿರ್ಮಿಸಲು ಪ್ರಾರಂಭಿಸಿದರೆ, ಅವನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಸಮಸ್ಯೆ ಎದುರಿಸುತ್ತಾನೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ರಾಹು-ಕೇತು ಶುಭ ಪರಿಣಾಮಗಳನ್ನು ನೀಡುತ್ತಿದ್ದರೆ ಉತ್ತಮ ಫಲವನ್ನು ಸಹ ಪಡೆಯಬಹುದು.

​ಶನಿ ಒಂಬತ್ತನೇ ಸ್ಥಾನದಲ್ಲಿದೆ

ಶನಿದೇವ ಜಾತಕದ ಒಂಬತ್ತನೇ ಮನೆಯಲ್ಲಿ ಕುಳಿತಿದ್ದರೆ ಆ ವ್ಯಕ್ತಿಯು ಮನೆ ನಿರ್ಮಿಸಲು ಪ್ರಾರಂಭಿಸಿದರೆ ಮತ್ತು ಆ ಮನೆಯಮಹಿಳೆ ಗರ್ಭಿಣಿಯಾಗಿದ್ದರೆ, ಅಂತಹ ಮನೆಯ ಮೇಲೆ ಹೂಡಿಕೆ ಮಾಡುವುದು ವ್ಯರ್ಥವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ, ತಂದೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಸ್ಯೆಗೆ ಪರಿಹಾರವೆಂದರೆ ಸಾಲವನ್ನು ಪಾವತಿಸಲು ನಿಮ್ಮ ಹಣವನ್ನು ಹೂಡಿಕೆ ಮಾಡುವುದು.

​ಶನಿ ಹತ್ತನೇ ಸ್ಥಾನದಲ್ಲಿದ್ದರೆ

ಶನಿದೇವ ಜಾತಕದಲ್ಲಿ ಹತ್ತನೇ ಸ್ಥಾನದಲ್ಲಿದ್ದರೆ ಮತ್ತು ವ್ಯಕ್ತಿಯು ತನ್ನ ಮನೆಯನ್ನು ನಿರ್ಮಿಸುತ್ತಿದ್ದರೆ, ಅವನು ದುಃಖವನ್ನು ಎದುರಿಸಬೇಕಾಗಬಹುದು. ಮನೆ ಪೂರ್ಣಗೊಂಡ ನಂತರ, ವ್ಯಕ್ತಿಯು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿಯು ಬಾಡಿಗೆ ಮನೆಯಲ್ಲಿ ವಾಸಿಸುವುದು ಉತ್ತಮ.

​ಶನಿ ಹನ್ನೊಂದನೇ ಸ್ಥಾನದಲ್ಲಿದ್ದರೆ

ಶನಿ ಜಾತಕದ ಹನ್ನೊಂದನೇ ಮನೆಯಲ್ಲಿದ್ದರೆ, ಅಂತಹ ವ್ಯಕ್ತಿಯು ತನ್ನ ವೃದ್ಧಾಪ್ಯದಲ್ಲಿ ಸ್ವಂತ ಮನೆಯಲ್ಲಿ ನೆಲೆಸುವ ಭಾಗ್ಯ ಪಡೆಯುತ್ತಾನೆ. ಅಂದರೆ, ಅಂತಹ ವ್ಯಕ್ತಿಯು ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಹೊಂದಿದ ನಂತರ ಪಡೆದ ಹಣದಿಂದ ಮನೆ ಪಡೆಯುವಾಗ ಮಾತ್ರ ಮನೆ ನಿರ್ಮಿಸಲು ಸಾಧ್ಯವಾಗುತ್ತದೆ.

​ಶನಿ ಹನ್ನೆರಡನೇ ಸ್ಥಾನದಲ್ಲಿದ್ದರೆ

ಶನಿ ಹನ್ನೆರಡನೇ ಮನೆಯಲ್ಲಿದ್ದರೆ ಒಬ್ಬ ವ್ಯಕ್ತಿಯು ಆಯತಾಕಾರದ ಮನೆಯನ್ನು ನಿರ್ಮಿಸುವುದು ಶುಭವಾಗಿರುತ್ತದೆ. ಆದರೆ ಮನೆ ನಿರ್ಮಿಸುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಅಂತಹ ವ್ಯಕ್ತಿಯು ನಿಧಾನವಾಗಿ ಮನೆಯನ್ನು ನಿರ್ಮಿಸುವ ಅನುಕೂಲವನ್ನು ಹೊಂದಿದ್ದಾನೆ ಆದರೆ ಮನೆಯನ್ನು ನಿರ್ಮಿಸುತ್ತಲೇ ಇರುತ್ತಾನೆ ಹೇಗೆಂದರೆ ಪ್ರತಿಯೊಬ್ಬರೂ ಅವರ ಮನೆಯ ಅಂತಸ್ತನ್ನು ಇನ್ನಷ್ಟು ಏರಿಸುವುದನ್ನು ಇಷ್ಟಪಡುತ್ತಾರೆ ಆದ್ದರಿಂದ ಇವರು ನಿರ್ಮಾಣ ಕಾರ್ಯಗಳನ್ನು ನಿಲ್ಲಿಸುವುದಿಲ್ಲ.

​ಶನಿದೇವರ ಮಂತ್ರದ ಪ್ರಯೋಜನಗಳು :

ಶನಿದೇವರ ಮಂತ್ರವೇ ಪಾಪಗಳಿಗೆ ಪ್ರಾಯಶ್ಚಿತ..! ಪ್ರಯೋಜನವೇ ಪಠಿಸುವಂತೆ ಮಾಡುವುದು

  • 1. ಶನಿ ಮಂತ್ರ ಜಪವು ನಮ್ಮ ಹಿಂದಿನ ಕಾರ್ಯಗಳು ಮತ್ತು ನಮ್ಮ ಕೆಟ್ಟ ಕರ್ಮಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
  • 2. ಈ ಮಂತ್ರಗಳು ನಮ್ಮ ಸ್ಥೈರ್ಯವನ್ನು ಹೆಚ್ಚಿಸಲು ಮತ್ತು ನಮ್ಮನ್ನು ಉನ್ನತಿಗೇರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ನಾವು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಅನುಭವಿಸುತ್ತೇವೆ.
  • 3. ನಿರಂತರ ಜಪವು ನಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ.
  • 4. ಈ ಮಂತ್ರಗಳು ನಮ್ಮ ಎಲ್ಲಾ ಆರ್ಥಿಕ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತವೆ.
  • 5. ಈ ಮಂತ್ರಗಳನ್ನು ಪಠಿಸುವುದು ವಿಶೇಷವಾಗಿ ಸಾಡೇಸಾತಿ ಶನಿದೋಷವನ್ನು ದೂರಾಗಿಸುತ್ತದೆ.
  • 6. ನಾವು ಶನಿ ಸ್ತೋತ್ರವನ್ನು ನಮಗೆ ಬೇಕಾದಷ್ಟು ಬಾರಿ ಪಠಿಸಬಹುದು, ಆದರೆ ಕನಿಷ್ಠ 8 ಬಾರಿ ಪಠಿಸಿದರೆ ಆಂತರಿಕ ಶಾಂತಿ ದೊರೆಯುವುದು.
  • 7. ನಾವು ಪ್ರಯಾಣದಲ್ಲಿ ಗರಿಷ್ಠ 108 ಬಾರಿ ಶನಿ ಸ್ತೋತ್ರವನ್ನು ಪಠಿಸಬಹುದು.
  • 8. ನಾವು ಶನಿ ಸ್ತುತಿಯನ್ನು ಹೆಚ್ಚು ಪಠಿಸಿದರೆ, ನಮ್ಮ ಜೀವನದಲ್ಲಿ ಸಮೃದ್ಧಿ, ಸಂಪತ್ತು ಮತ್ತು ಯಶಸ್ಸು ಹೆಚ್ಚಾಗುವುದು.

​ಶನಿ ಬೀಜ ಮಂತ್ರ :

ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ

ಓಂ ಐಂ ಹ್ರಿಂ ಶ್ರೀಂ ಶಂ ಶನೈಶ್ಚರಾಯ ನಮಃ ಓಂ

ಓಂ ಹಿಂ ಶಂ ಶನಯೇ ನಮಃ

ಓಂ ಶಂ ಶನೈಶ್ಚರಾಯ ನಮಃ

ಪ್ರಯೋಜನ: 

ಶನಿ ಬೀಜ ಮಂತ್ರವು ಅತ್ಯಂತ ಶಕ್ತಿಯುತವಾಗಿದೆ ಮತ್ತು ನಮ್ಮ ಎಲ್ಲಾ ದುಃಖಗಳನ್ನು ಮತ್ತು ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಯಾವುದೇ ಕೆಟ್ಟದ್ದನ್ನು ತಪ್ಪಿಸಲು ಮತ್ತು ಸಂತೋಷದಾಯಕ ಮತ್ತು ಸಂತೃಪ್ತಿಯ ಜೀವನವನ್ನು ನಡೆಸಲು ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರಗಳನ್ನು ನಿಯಮಿತವಾಗಿ ಜಪಿಸುವುದರಿಂದ ನಾವು ಆಧ್ಯಾತ್ಮಿಕವಾಗಿ ಬೆಳೆಯಲು ಸಹಾಯ ಮಾಡುತ್ತದೆ, ಅದೃಷ್ಟವನ್ನು ನೀಡುತ್ತದೆ. ನಾವು ಶನಿವಾರ ಶುಕ್ಲ ಪಕ್ಷದಲ್ಲಿ ಈ ಮಂತ್ರವನ್ನು ಪಠಿಸಬಹುದು ಮತ್ತು ಅದನ್ನು 1, 3, 9, 27 ಅಥವಾ 108 ಬಾರಿ ಪಠಿಸಬಹುದು.

​ಶನಿ ಸ್ತೋತ್ರ

ಕೋಣಸ್ಥಃ ಪಿಂಗಲೋ ಬಭ್ರುಃ

ಕೃಷ್ಣೋ ರೌದ್ರೋಂತಕೋ ಯಮಃ |

ಸೌರಿಶ್ಯನೈಶ್ಚರೋ ಮಂದಃ ಪಿಪ್ಪಲಾದಿಷು ಸಂಸ್ಥಿತಃ ||

ಮಸ್ತೇ ಕೋಣಸಂಸ್ಥಾಯ

ಪಿಂಗಲಾಯ ನಮೋಸ್ತುತೇ |

ಮಸ್ತೇ ರೌದ್ರದೇಹಾಯ

ನಮಸ್ತೇ ಚಾಂತಕಾಯ ಚ |

ಮಸ್ತೇ ಮಂದಸಂಜ್ಞಾಯ

ನಮಸ್ತೇ ಸೌರಯೇ ವಿಭೋ |

ಮಸ್ತೇ ಯಮಸಂಜ್ಞಾಯ

ಶನೈಶ್ಚರ ನಮೋಸ್ತುತೇ |

್ರಸಾದಂ ಕುರು ದೇವೇಶಃ

ದೀನಸ್ಯ ಪ್ರಣತಸ್ಯಚ ||

ಪ್ರಯೋಜನ: ಶನಿ ಮಹಾಮಂತ್ರವನ್ನು ಪಠಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ. ಕೆಟ್ಟದ್ದನ್ನು ನಮ್ಮ ಜೀವನದಿಂದ ದೂರವಿರಿಸುತ್ತದೆ ಮತ್ತು ನಮ್ಮನ್ನು ಆರೋಗ್ಯವಂತ, ಶ್ರೀಮಂತ ಮತ್ತು ಸಮೃದ್ಧರನ್ನಾಗಿ ಮಾಡುತ್ತದೆ. ನಂಬಿಕೆ ಮತ್ತು ಏಕಾಗ್ರತೆಯಿಂದ ಯಾರಾದರೂ ಈ ಶನಿ ಸ್ತೋತ್ರವನ್ನು ಆಲಿಸಿದರೆ ಅಥವಾ ಜಪಿಸಿದರೆ, ಅವರು ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು.

​ಶನಿ ಏಕಾಶರಿ ಮಂತ್ರ

“ಓಂ ಶಂ ಶನೈಶ್ಚರಾಯ ನಮಃ”

ಪ್ರಯೋಜನ: ಯಾವ ವ್ಯಕ್ತಿಯ ಜಾತಕದಲ್ಲಿ ಶನಿ ಮಹಾದಶಾ, ಶನಿ ಸಾಡೇಸಾತಿ ಅಥವಾ ದುರ್ಬಲ ಶನಿಯನ್ನು ಪರಿಹರಿಸಲು ಏಕಾಶರಿ ಮಂತ್ರದ ದೈನಂದಿನ ಪಠಣ ಬಹಳ ಪರಿಣಾಮಕಾರಿಯಾಗಿದೆ. ಈ ಶನಿ ದೇವರ ಮಂತ್ರವನ್ನು 108 ಬಾರಿ ನಿಯಮಿತವಾಗಿ ಪಠಿಸುವುದರಿಂದ ನಮ್ಮ ಜೀವನದಲ್ಲಿ ಹೆಚ್ಚಿನ ಸಂಪತ್ತು, ಸಮೃದ್ಧಿಯನ್ನು ಮತ್ತು ಆರ್ಥಿಕ ಸದೃಢತೆಯನ್ನು ತರುತ್ತದೆ.

​ಶನಿ ಗಾಯತ್ರಿ ಮಂತ್ರ

“ಓಂ ಶನೈಶ್ಚರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹೀ ತನ್ನೋ ಮಂದಃ ಪ್ರಚೋದಯಾತ್‌”

 ಓಂ ಗ್ರಹರಾಜಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹೀ ತನ್ನೋ ಸೌರಿಃ ಪ್ರಚೋದಯಾತ್‌”

ಪ್ರಯೋಜನ: ಈ ಶನಿ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ನಮ್ಮ ಜೀವನದಲ್ಲಿ ಅನಗತ್ಯ ಅಡೆತಡೆಗಳನ್ನು ಎದುರಿಸಲು ಶಕ್ತಿ ಮತ್ತು ಧೈರ್ಯ ಸಿಗುತ್ತದೆ. ಪ್ರತೀ ಬೆಳಗ್ಗೆ ಈ ಮಂತ್ರದ ನಿರಂತರ ಪಠಣೆ ಒಳ್ಳೆಯದನ್ನು ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ.

​ಸಾಡೇಸಾತಿ ಶನಿ ಮಂತ್ರ

” ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮೇವ ಬಂಧನಾನ್ ಮೃತ್ಯೊರ್ಮುಕ್ಷೀಯ ಮಾಂಮೃತಾತ್”‌

ಮತ್ತು

” ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |

ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ “

ಮತ್ತು

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ ಶನ್ಯೋರಭಿಸ್ತವಂತು ನಃ  |

ಓಂ ಶಂ ಶನೈಶ್ಚರಾಯ ನಮಃ

ಪ್ರಯೋಜನ: ಮಹಾಮೃತುಂಜಯ ಮಂತ್ರವು ಈ ಗುಂಪಿನ ಒಂದು ಭಾಗವಾಗಿದೆ. ಏಕೆಂದರೆ, ಇದು ಶನಿ ದಶಾ ಜೊತೆಗೆ ಮನೆಯ ಎಲ್ಲಾ ದೋಷಗಳನ್ನು ಸಮಾಧಾನಗೊಳಿಸುತ್ತದೆ. ಈ ನಿರ್ದಿಷ್ಟ ಶನಿ ಮಂತ್ರವು ನಮ್ಮ ಕುಟುಂಬದಲ್ಲಿ ಶಾಂತಿಯನ್ನು ತರುವ ಮೂಲಕ ನಮಗೆ ಪ್ರಯೋಜನವನ್ನು ನೀಡುತ್ತದೆ. ಇದು ಎಲ್ಲಾ ಕಾಯಿಲೆಗಳನ್ನು ನಿವಾರಿಸುತ್ತದೆ ಮತ್ತು ನಮ್ಮ ಕುಂಡಲಿಯಲ್ಲಿನ ಕಾಳ ಸರ್ಪ ದೋಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

​ದಶರಥ ಶನಿ ಸ್ತೋತ್ರ

ಅಸ್ಯ ಶ್ರೀ ಶನೈಶ್ಚರ ಸ್ತೋತ್ರ ಮಹಾಮಂತ್ರಸ್ಯ | ದಶರಥ ಋಷಿಃ | ಶನೈಶ್ಚರೋ ದೇವತಾ | ತ್ರಿಷ್ಟುಪ್ ಛಂದಃ | ಶನೈಶ್ಚರ ಪ್ರೀತ್ಯರ್ಥೇ ಜಪೇ ವಿನಿಯೋಗಃ ||

ದಶರಥ ಉವಾಚಃ 

ಕೋಣಾಂತಗೋ ರೌದ್ರಯಮೋಥ ಬಭ್ರುಃ | ಕೃಷ್ಣಃ ಶ್ಯನಿಃ ಪಿಂಗಲ ಮಂದ ಸೌರಿಃ | ನಿತ್ಯಂ ಸ್ಮೃತೋ ಯೋ ಹರತೇ ಚ ಪೀಡಾಂ  |ತಸ್ಮೈನಮಃ ಶ್ರೀ ರವಿನಂದನಾಯ

ಪ್ರಯೋಜನ: ಕೋಪೋದ್ರಿಕ್ತನಾದ ಶನಿಯನ್ನು ಸಮಾಧಾನಗೊಳಿಸಲು, ಶನಿಯ ಆಶೀರ್ವಾದವನ್ನು ಪಡೆಯಲು ಈ ಮಂತ್ರವನ್ನು ಪಠಿಸಲಾಗುತ್ತದೆ.

​ಶನಿ ವೈದಿಕ ಮಂತ್ರ

” ಓಂ ಶನ್ನೋ ದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ

ಪ್ರಯೋಜನ: ಶನಿ ದೇವನು ಸೂರ್ಯ ದೇವರ ಮಗ. ಶನಿ ದೇವ ಅವರ ಈ ವೈದಿಕ ಮಂತ್ರವನ್ನು ಶುದ್ಧ ಹೃದಯ, ಮನಸ್ಸು ಮತ್ತು ಆತ್ಮದಿಂದ ಜಪಿಸುವುದರಿಂದ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

​ಶನಿ ಮಹಾರಾಜರನ್ನು ಸಮಾಧಾನಪಡಿಸುವುದು ಹೇಗೆ?

ಶನಿ ದೇವರ ಮಂತ್ರವನ್ನು ಜಪಿಸುವುದರ ಜೊತೆಗೆ, ಶನಿವಾರದಂದು ಈ ಆಚರಣೆಗಳನ್ನು ಆಚರಿಸಿ.

  • 1. ಶನಿವಾರ ಬೆಳಗ್ಗೆ ಮತ್ತು ಸಂಜೆ ನಿಯಮಿತವಾಗಿ ಉಪವಾಸ ಮಾಡಿ. ಅದು ಸಾಧ್ಯವಾಗದಿದ್ದರೆ, ಮಧ್ಯಾಹ್ನ ಒಂದು ಊಟವನ್ನು ಮಾಡುವ ಮೂಲಕ ಉಪವಾಸ ಆಚರಿಸಿ.
  • 2. ಕಪ್ಪು ಎಳ್ಳು / ಕಪ್ಪು ಉದ್ದನ್ನು ದಾನ ಮಾಡಿ ಅಥವಾ ಶನಿವಾರದಂದು ಎಳ್ಲೆಣ್ಣೆ ದೀಪವನ್ನು ಬೆಳಗಿಸಿ ಶನಿ ಮಂತ್ರಗಳನ್ನು ಪಠಿಸುತ್ತಿರಿ.
  • 3. ಜೀರಿಗೆಯೊಂದಿಗೆ ಮೊಸರು ಅನ್ನ ಮಾಡಿ ಮತ್ತು ದೇವಸ್ಥಾನದಲ್ಲಿ ಶನಿಗೆ ಅರ್ಪಿಸಿ ನಂತರ ಸುತ್ತಮುತ್ತಲಿನ ಕಾಗೆಗಳಿಗೆ ಆಹಾರವನ್ನು ನೀಡಿ.
  • 4. ಭಗವಂತನನ್ನು ಮೆಚ್ಚಿಸಲು ನಿಸ್ವಾರ್ಥ ಮನೋಭಾವದಿಂದ ಬಡವರಿಗೆ ಆಹಾರ ನೀಡಿ.
  • 5. ನೀವು ಪ್ರತಿದಿನ ಶನಿಯನ್ನು ಪೂಜಿಸಿದರೆ, ಪ್ರತಿನಿತ್ಯ ಸ್ನಾನ ಮಾಡಿದ ನಂತರ ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ಧರಿಸಲು ಮರೆಯದಿರಿ.
  • 6. ಭಗವಾನ್‌ ಹನುಮಂತನನ್ನು ಪೂಜಿಸುವುದು ಶನಿಯನ್ನು ಮೆಚ್ಚಿಸುವ ಮತ್ತೊಂದು ಮಾರ್ಗವಾಗಿದೆ.

ಶನಿದೇವನನ್ನು ಒಲಿಸಲು 7 ಮಹಾ ಉಪಾಯಗಳು

ಇಂದಿನ ಕಾಲದಲ್ಲಿ ಯಾವುದೇ ಓರ್ವ ವ್ಯಕ್ತಿ ಗ್ರಹವೊಂದಕ್ಕೆ ಹೆದರುತ್ತಾನೆ ಎಂದರೆ ಅದು ಶನಿದೇವ ಸೂರ್ಯ ಪುತ್ರ ಶನಿದೆವನ ಹೆಸರು ಸ್ಮರಣೆಗೆ ಬರುತ್ತಲೇ ಎಲ್ಲ ರೀತಿಯ ಅನಿಷ್ಟಗಳ ಶಂಕೆಯ ಕಾರಣ ಮನಸ್ಸು ಭಯಭೀತಗೊಳ್ಳುತ್ತದೆ. ಆದರೆ, ನಿಧಾನಗತಿಯಲ್ಲಿ ಸಾಗುವ ಶನಿದೇವ ಅತ್ಯಂತ ದಾರ್ಶನಿಕ ಹಾಗೂ ಆಧ್ಯಾತ್ಮಿಕ ಪ್ರವುತ್ತಿಯ ದೇವನಾಗಿದ್ದಾನೆ. ಶನಿದೇವ ವ್ಯಕ್ತಿಗಳನ್ನು ಅಗ್ನಿಪರೀಕ್ಷೆಗೆ ಒಳಪಡಿಸಿ ಶುದ್ಧ ಚಿನ್ನದ ಹಾಗೆ ಹೊಳೆಯುವಂತೆ ಮಾಡುತ್ತಾನೆ.

ಕುಂಡಲಿಯಲ್ಲಿ ಶನಿದೇವ ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿ ಅಪಾರ ಸಂಪತ್ತು ಹಾಗೂ ಮಾನ-ಸನ್ಮಾನಕ್ಕೆ ಪಾತ್ರನಾಗುತ್ತಾನೆ. ಒಂದು ವೇಳೆ ಶನಿ ಅಶುಭ ಸ್ಥಾನದಲ್ಲಿದ್ದರೆ. ವ್ಯಕ್ತಿಗೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ಶನಿ ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಮನೆ ನಿರ್ಮಿಸುತ್ತಾನೆ ಮತ್ತು ಅಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಮನೆಯನ್ನೂ ಸಹ ಮಾರಾಟ ಮಾಡಿಸುತ್ತಾನೆ ಎನ್ನಲಾಗುತ್ತದೆ. ಹಾಗಾದರೆ ಬನ್ನಿ ಶನಿದೇವನನ್ನು ಒಲಿಸಲು ಯಾವ ಉಪಾಯಗಳನ್ನು ಮಾಡಬೇಕು ಎಂಬುದನ್ನು ತಿಳಿಯೋಣ.

1. ತಂದೆ-ತಾಯಿಯನ್ನು ಗೌರವಿಸಿ

ಶನಿಯ ಅನುಗ್ರಹಕ್ಕೆ ಪಾತ್ರರಾಗಲು ಮೊದಲು ನೀವು ನಿಮ್ಮ ಹೆತ್ತವರನ್ನು ಗೌರವಿಸಬೇಕು. ಅವರ ಸೇವೆ ಮಾಡಬೇಕು. ಅವರು ದೂರದಲ್ಲಿದ್ದರೆ, ನೀವು ಅವರ ಭಾವಚಿತ್ರಕ್ಕೆ ನಮಸ್ಕರಿಸಿ. ಪ್ರತಿದಿನ ಕರೆ ಮಾಡಿ ಆಶೀರ್ವಾದ ಪಡೆಯಿರಿ. ಶನಿಯ ಈ ಪರಿಹಾರವು ನಿಮಗೆ ಅದ್ಭುತ ಪ್ರಯೋಜನಗಳನ್ನು ನೀಡಲಿದೆ.

2.ನೀಲಮಣಿ  ಧರಿಸಿ

ಒಂದು ವೇಳೆ ನಿಮ್ಮ ಜೀವನದಲ್ಲಿ ಶನಿಯ ಸಾಡೆಸಾತಿ ನಡೆಯುತ್ತಿದ್ದು ಮತ್ತು ಶನಿ ನೀಡುತ್ತಿರುವ ತೊಂದರೆಗಳಿಂದ ನೀವು ಚಿಂತಿತರಾಗಿದ್ದಾರೆ  ಜ್ಯೋತಿಷಿಯೊಬ್ಬರ ಸಲಹೆ ಪಡೆದು ನೀವು ನೀಲಮಣಿ ಅಥವಾ ನೀಲಿ ರತ್ನವನ್ನು ಧರಿಸಬೇಕು. ನೀವು ಅದನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಶಮಿ ವೃಕ್ಷದ ಬೇರುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮತ್ತು ಅದನ್ನು ನಿಮ್ಮ ಭುಜಕ್ಕೆ ಕಟ್ಟಿಕೊಳ್ಳಿ.

3. ಶನಿದೋಷ ನಿವಾರಣೆಗೆ ನಿತ್ಯ ಈ ಮಂತ್ರ ಪಠಿಸಿ

ಶನಿದೋಷದಿಂದ ಮುಕ್ತರಾಗಲು ನಿತ್ಯ ಓಂ ಪ್ರಾಂ ಪ್ರಿಂ ಪ್ರೌಂ ಸಃ ಶನಿಶ್ವರಾಯ ನಮಃ ಮಂತ್ರವನ್ನು ಪಠಿಸಿ. 

4. ಈ ವಸ್ತುಗಳಿಗೆ ಹೆಚ್ಚಿನ ಮಹತ್ವವಿದೆ

ಶನಿಯ ಕೃಪೆಗೆ ಪಾತ್ರರಾಗಲು ಲೋಹ, ಕಪ್ಪು ಎಳ್ಳು, ಉದ್ದಿನಬೆಳೆ, ಕಸ್ತೂರಿ, ಕಪ್ಪು ವಸ್ತ್ರ, ಕಪ್ಪು ಪಾದರಕ್ಷೆಗಳು, ಚಹಾಪುಡಿ ಇತ್ಯಾದಿಗಳ ದಾನ ಮಾಡಿ.

5.ಶನಿವಾರ ಈ ನಿಯಮ ಪಾಲಿಸಿ

ಆಳದ ಮರಕ್ಕೆ ಏಳುಬಾರಿ ಪ್ರದಕ್ಷಿಣೆಯನ್ನು ಹಾಕಿ ಕಚ್ಚಾ ಸೂತ್ರ ಸುತ್ತಿ. ಈ ವೇಳೆ ಶನಿ ಮಂತ್ರ ಪಠಿಸಿ. ಬಳಿಕ ದೀಪದಾನ ಮಾಡಿ. ಉಪ್ಪು-ಮಸಾಲೆ ರಹಿತ ಒಪ್ಪತ್ತು ಊಟ ಮಾಡಿ. 

6. ಈ ಉಪಾಯದಿಂದ ಶನಿದೇವ ಪ್ರಸನ್ನನಾಗುತ್ತಾನೆ

ಕಪ್ಪು ನಾಯಿಗೆ ಎಣ್ಣೆ ಹಚ್ಚಿದ ರೊಟ್ಟಿ ಹಾಗೂ ಸಿಹಿ ತಿನಿಸಿ. ಒಂದು ವೇಳೆ ಇದು ಸಾಧ್ಯವಾಗದೆ ಹೋದಲ್ಲಿ ಕಪ್ಪು ನಾಯಿಗೆ ಬಿಸ್ಕಿಟ್ ತಿನ್ನಿಸಿ. ಕಪ್ಪು ಹಸುವಿನ ಸೇವೆ ಮಾಡಿ

7. ಶನಿ ದೋಷ ನಿವಾರಣೆಗೆ ಹನುಮನನ್ನು ಆರಾಧಿಸಿ

ಶನಿಗೆ ಸಂಬಂಧಿಸಿದ ದೋಷ ನಿವಾರಣೆಯಾಗಬೇಕಾದರೆ ಆಂಜನೇಯ ಸ್ವಾಮಿಯ ಆರಾಧನೆ ಮಾಡಿ. ಸಾಡೆಸಾತಿ ನಡೆಯುತ್ತಿದ್ದೆ. ಮಂಗಳವಾರ ಹಾಗೂ ಶನಿವಾರ ಸುಂದರಕಾಂಡ ಪಠಿಸಿ, ಹನುಮನಿಗೆ ಕೇಸರಿ ಬಣ್ಣದ ವಸ್ತ್ರ ಅರ್ಪಿಸಿ

ಗ್ರಹ ಗತಿಗಳ ಪ್ರಕಾರ ಸೂಚಿಸಲಾದ ಪರಿಹಾರಗಳು

ರಕ್ಷಣೆಗಾಗಿ ಬಿಳಿ ಎಕ್ಕ

ಬಿಳಿ ಎಕ್ಕೆ ಗಿಡವು ಭಾರತದ ಎಲ್ಲ ಪ್ರದೇಶಗಳಲ್ಲಿ ಸಿಗುವಂತಹದು, ಆದರೆ ಪುರಾತನವಾದ ಗಿಡವು ಸಿಗುವುದು ದುರ್ಲಭವಾಗಿರುವುದು. ಎಕ್ಕೆ ಗಿಡದಲ್ಲಿ ಗುಲಾಬಿ, ನೀಲಿ , ಮತ್ತು ಬಿಳಿ ಈ ಮೂರು ಬಗೆಯ ಸಸ್ಯಗಳನ್ನು ಕಾಣಬಹುದು ಅದರಲ್ಲಿ ಬಿಳಿಎಕ್ಕವು ವಿರಳ ಮತ್ತು ದುರ್ಲಭವಾಗಿದೆ , ಇದನ್ನು ಶ್ವೇತಾರ್ಕ ಎಂದು ಕರೆಯುವುದುಂಟು .
ತಂತ್ರಶಾಸ್ತ್ರದಲ್ಲಿ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವುದು ಜೊತೆಗೆ ಆಯುರ್ವೇದದಲ್ಲಿ ಅನೇಕ ರೋಗವನ್ನು ಗುಣಮಾಡಲು ಔಷಧಿಯಾಗಿ ಬಳಿ ಲಾಗುವುದು , ಆದರೆ ಇದರ ಹಾಲು ತುಂಬಾ ವಿಷಕಾರಿ.

ಭೂತ ಪ್ರೇತ ಬಾಧೆ

🌞 ರವಿಪುಷ್ಯದ ದಿನ ಬಿಳಿ ಎಕ್ಕದ ಬೇರನ್ನು ಗಣಪತಿಯ ಮೂಲಮಂತ್ರದಿಂದ 101 ಬಾರಿ ಅಭಿಮಂತ್ರಿಸಿ ಧರಿಸಿದಾಗ ಭೂತ ಪ್ರೇತ ಬಾಧೆಗಳಿಂದ ಸುರಕ್ಷತೆ ಸಿಗುವುದು, ಇದು ಸಿದ್ದ ಪ್ರಯೋಗ

ಸುರೆಯ ನೀರು, ಮಧ್ಯದ ಮದಗುಣ ನಾಶ

🌞 ಕೃತಿಕಾ ನಕ್ಷತ್ರ ಸಮಯದಲ್ಲಿ ಬಿಳಿ ಎಕ್ಕದ ಬೇರನ್ನು ಹದಿನಾರು ಅಂಗುಲದ ತುಂಡನ್ನು ತೆಗೆದುಕೊಂಡು ಮದಿರಾಲಯದಲ್ಲಿ ಮದಿರೆಯಲ್ಲಿ ಇಡುವುದರಿಂದ ಸುರೆಯ ನೀರು ಬಿಳಿಯ ಬಣ್ಣ ಹೊಂದುವುದು ಮಧ್ಯದ ಮದಗುಣವು ನಾಶವಾಗುವುದು .

ಆನೆಕಾಲು ರೋಗ

ಆನೆಕಾಲು ರೋಗವು ಕರಾವಳಿ ಪ್ರದೇಶದಲ್ಲಿ ವಿಶೇಷವಾಗಿ ಕಂಡುಬರುವ ರೋಗವಾಗಿದೆ , ಈ ರೋಗದಲ್ಲಿ ಕಾಲುಗಳು ಆನೆಕಾಲಿನಂತೆ ದಪ್ಪವಾಗುತ್ತವೆ. ಈ ರೋಗದ ನಿವಾರಣೆಗೆ ರವಿಪುಷ್ಯ ಯೋಗದಲ್ಲಿ ನಿಮ್ಮ ಮನೆಯಿಂದ ಉತ್ತರ ದಿಕ್ಕಿಗೆ ಇರುವ ಬೇರನ್ನು ತರಬೇಕು. ಪಂಚಗವ್ಯ, ಪಂಚಾಮೃತದಿಂದ ಶುದ್ಧಗೊಳಿಸಿ ಕೆಂಪುದಾರದಲ್ಲಿ ಸುತ್ತಿ ಬಾವು ಇರುವ ಕಾಲಿನ ಭಾಗಕ್ಕೆ ಕಟ್ಟಬೇಕು ಇದರಿಂದ ರೋಗ ಗುಣಮುಖವಾಗುವುದು.

ಮೂಲವ್ಯಾಧಿಯ ನಿವಾರಣೆ

ಶನಿವಾರ ಪುಷ್ಯ ನಕ್ಷತ್ರವಿರುವಾಗ ಪ್ರಾತಃ ಕಾಲದಲ್ಲಿ ಸೂರ್ಯೊದಯ ಪೂರ್ವ ಬಿಳಿಎಕ್ಕದ 3 ಎಲೆಗಳನ್ನು ತಂದು ಶೌಚವನ್ನು ಮುಗಿಸಿ ಶುದ್ದರಾಗಿ ಆ ಮೂರು ಎಲೆಗಳನ್ನು ಒಂದೊಂದಾಗಿ ಗುದದ್ವಾರಕ್ಕೆ ಚೆನ್ನಾಗಿ ಉಜ್ಜಿ ದಕ್ಷಿಣ ದಿಕ್ಕಿಗೆ ಬಿಸಾಕಬೇಕು , ಇದೆ ರೀತಿ 21 ದಿನ ಮಾಡಿದರೆ ದೋಷ ನಿವಾರಣೆ ಆಗುವುದು.

ಸೂರ್ಯ ಗ್ರಹ

ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಗ್ರಹ ವನ್ನು ನವಗ್ರಹಗಳ ರಾಜ ಎಂದು ಕರೆಯಲಾಗುತ್ತದೆ ಸೂರ್ಯನ ಪ್ರಭಾವದಿಂದ ಮನುಷ್ಯ ಪಡೆಯುತ್ತಾನೆ ಸೂರ್ಯಗ್ರಹಣ ಶಾಂತಿಗಾಗಿ ಅನೇಕ ಪರಿಹಾರಗಳನ್ನು ಸೂಚಿಸಲಾಗಿದೆ.

ಸೂರ್ಯ ಮಂತ್ರ ಸೂರ್ಯ ಯಂತ್ರ ಮತ್ತು ಸೂರ್ಯನಮಸ್ಕಾರ ಸೇರಿದಂತೆ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ

ಪ್ರತಿದಿನ ಮಂತ್ರವನ್ನು ಉಚ್ಚರಿಸುವುದು ಮತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಸಕಾರಾತ್ಮಕ ಶಕ್ತಿಯನ್ನು ಪಡೆದುಕೊಳ್ಳಬಹುದು.

ಸೂರ್ಯ ಗ್ರಹವು ಸರ್ಕಾರಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸೇವೆಗಳ ಅಂಶವೆಂದು ಪರಿಗಣಿಸಲಾಗುತ್ತದೆ

ವೈದಿಕ ಜ್ಯೋತಿಷ್ಯದ ಪ್ರಕಾರ ಜನ್ಮ ಜಾತಕದಲ್ಲಿ ಸೂರ್ಯನು ಶುಭ ಸ್ಥಾನದಲ್ಲಿದ್ದರೆ ಅವನ ಜೀವನವು ಪ್ರಗತಿಯಲ್ಲಿರುತ್ತದೆ.

ಆದರೆ ಸೂರ್ಯನು ಕೆಟ್ಟ ಪರಿಣಾಮವನ್ನು ನೀಡಿದರೆ ಗೌರವದ ನಷ್ಟ ತಂದೆಗೆ ಸಂಕಟ ಉನ್ನತ ಸ್ಥಾನಗಳನ್ನು ಗಳಿಸಲು ಕಷ್ಟವಾಗುವುದು ಹೃದಯ ಮತ್ತು ಕಣ್ಣಿನ ಸಂಬಂಧಿಸಿದ ರೋಗಗಳು ಬರುವ ಸಾಧ್ಯತೆಗಳು ಹೆಚ್ಚು

ಜನ್ಮ ಜಾತಕದಲ್ಲಿ ಸೂರ್ಯನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸೂರ್ಯಗ್ರಹಕ್ಕೆ ಸಂಬಂಧಿಸಿದ ಹಲವಾರು ಪರಿಹಾರಗಳು ಇರುವುದರಿಂದ ಅವನ್ನು ಪಾಲಿಸಿ ಪರಿಹಾರಗಳನ್ನು ಪಡೆಯಿರಿ

ಗ್ರಹಸೂರ್ಯ
ಸ್ವಕ್ಷೇತ್ರಸಿಂಹ
ಉಚ್ಚ ಕ್ಷೇತ್ರಮೇಷ
ನೀಚ ಕ್ಷೇತ್ರತುಲಾ
ಮೂಲ ತ್ರಿಕೋಣಸಿಂಹ
ದಿಕ್ಕುಪೂರ್ವ
ಕಾರಕಪಿತೃ
ಧಾನ್ಯಗೋಧಿ
ಸಂಖ್ಯೆ೧ ಒಂದು
ರತ್ನಮಾಣಿಕ್ಯ
ಗ್ರಹ ಸಂಖ್ಯೆ1
ಶತ್ರುಗ್ರಹಶನಿ-ಶುಕ್ರ-ರಾಹು
ಮಿತ್ರ ಗ್ರಹಚಂದ್ರ-ಕುಜ-ಗುರು-ಕೇತು
ಸಮ ಗ್ರಹಬುಧ
ದಶಾವಧಿ೬ ಆರು ವರ್ಷಗಳು
ಅವತಾರ ರೂಪಶ್ರೀ ರಾಮ
ದೇವತೆಅಗ್ನಿ
ಧಾತುತಾಮ್ರ
ಬಣ್ಣರಕ್ತ ವರ್ಣ
ಬಟ್ಟೆಕೆಂಪು ಅಂಚಿರುವ ಬಟ್ಟೆ
ಸೂರ್ಯ ಗ್ರಹದ ಪ್ರಮುಖ ಅಂಶಗಳು

ಸೂರ್ಯ ಗ್ರಹ ದೋಷ

ಜನ್ಮಕಾಲ ಸೂರ್ಯದೋಷ ಹೇಗೆ :

ಪರಾಶರರು ಪ್ರಕಾರ ಜನ್ಮಕಾಲೀನ ದೋಷ ನಿವಾರಣೆ ಯಥಾಶಕ್ತಿ ಮಾಡದಿದ್ದರೆ , ಅನೇಕ ಅಷ್ಟವಾಗುವುದು ಈ ದೋಷ ವ್ಯಕ್ತಿಯನ್ನು ಪ್ರಭಾವಿತಗೊಳಿಸುವುದರೊಡನೆ ಆತನ ಸಂತಾನ ಕುಂಡಲಿಯಲ್ಲಿಯೂ ಕೂಡ ವಿಭಿನ್ನ ರೂಪವನ್ನು ಧಾರಣ ಮಾಡಿ , ವಿವಿಧ ದೋಷ ದೌರ್ಬಲ್ಯಗಳನ್ನು ಉಂಟು ಮಾಡುವುದು ,

⏺️ ಕಾರ್ತಿಕ ಜನ್ಮ ಅಥವಾ ನೀಚಗತ ಸೂರ್ಯನಿರುವುದು 

⏺️ ಸಾರ್ಪಶೀರ್ಷದ ಅವಧಿಯಲ್ಲಿ ಜನ್ಮ 

⏺️ಕ್ರಾಂತಿಸಾಮ್ಯ ಅಥವಾ ಮಹಪಾತದಲ್ಲಿ ಜನ್ಮ

⏺️ ಸೂರ್ಯಗ್ರಹಣದಲ್ಲಿ ಜನ್ಮ 

⏺️ ಅಮಾವಾಸ್ಯೆಯ ಜನ್ಮ 

⏺️ ಸಂಕ್ರಾಂತಿ ಜನ್ಮ 

ಇವೆಲ್ಲವು ಜನ್ಮಕಾಲದ ಸೂರ್ಯನ ದೋಷಗಳು

ಕಾರ್ತಿಕ ಜನ್ಮ(ನೀವು ಅಕ್ಟೋಬರ್ – ನವೆಂಬರ್ ನಲ್ಲಿ ಹುಟ್ಟಿದ್ದರೆ ಇದನ್ನು ಓದಿ)

ಪ್ರತಿ ವರ್ಷ ಅಕ್ಟೋಬರ್ ಮಧ್ಯದಿಂದ ನವೆಂಬರ್ ಮಧ್ಯದ ಅವಧಿಯಲ್ಲಿ ಸೂರ್ಯನು ತನ್ನ ನೀಚ ರಾಶಿ ತುಲಾದಲ್ಲಿರುವನು.

ಈ ಸಮಯದಲ್ಲಿ ಜನ್ಮವಾದವರಿಗೆ ಕಾರ್ತಿಕ ಜನ್ಮ ದೋಷ ವಾಗುವುದು‌. 

ಪ್ರಾಯಶಃ 17 ಅಕ್ಟೋಬರ್ ನಂದು ಸೂರ್ಯ ತುಲಾ ರಾಶಿಯನ್ನು ಪ್ರವೇಶಿಸಿ , ನಿತ್ಯ 1-1 ಅಂಶ ಭ್ರಮಣಿಸುತ್ತ 26-27 ಅಕ್ಟೋಬರ್ ನಂದು ತನ್ನ ಪರಮ ನೀಚ ಬಿಂದು ತುಲಾದ 10 ಅಂಶದ ಮೇಲೆ ಬರುತ್ತಾನೆ. 

ಕಾರ್ತಿಕ ಜನ್ಮದ ಅಶುಭ ಪ್ರಭಾವ ಪರಮನೀಚದ ಅತ್ತಿತ್ತ ಎಲ್ಲಕ್ಕಿಂತ ಅಧಿಕವಾಗಿರುವುದು , 

ಆದಾಗ್ಯೂ ಶೇಷ ದಿನಾಂಕಗಳಲ್ಲಿಯೂ ಕೂಡ ಇದರ ಪ್ರಭಾವ ಅಶುಭವಾಗಿಯೇ ಇರುತ್ತದೆ.

 ತುಲಾ ಸಂಕ್ರಾಂತಿಯ ಪ್ರಥಮ ದಿನವನ್ನು ಹೊರತುಪಡಿಸಿ 18-20 ನೇ ಅಕ್ಟೋಬರವರೆಗೆ ಇದರ ಕುಪ್ರಭಾವ ಸ್ವಲ್ಪ ಸ್ವಲ್ಪ ಸೀಮಿತವಿರುವುದು. 

ಆದರೆ ಶಾಂತಿಯ ವಿಧಾನವನ್ನು ಪ್ರತ್ಯೇಕ ಅವಸ್ಥೆಯಲ್ಲಿ ಮಾಡುವುದು ಅನಿವಾರ್ಯ.

ಕನ್ಯಾ ಮತ್ತು ವೃಶ್ಚಿಕ ಲಗ್ನಗಳಲ್ಲಿ ನೀಚಗತ ಸೂರ್ಯ ಜೀವನ ಸಂಗಾತಿಯ ಸುಖದಲ್ಲಿ ಕೊರತೆ, ಸಂತಾನೋತ್ಪತ್ತಿಯಲ್ಲಿ ಬಾಧೆ , ಜನ್ಮ ನಂತರ ಸಂತಾನಕ್ಕೆ ದೈಹಿಕ ಅಥವಾ ಮಾನಸಿಕ ದೌರ್ಬಲ್ಯ, ಕುಟುಂಬದಲ್ಲಿ ಚದುರುವಿಕೆ , ವ್ಯಾಪಾರದಲ್ಲಿ ಅಸ್ಥಿರತೆ ಕಾರಣ ಆರ್ಥಿಕ ಪ್ರಗತಿಗೆ ಅಡ್ಡಿ , ಸೌಖ್ಯದಲ್ಲಿ ಬಾಧೆ ಮೊದಲಾದವುಗಳಲ್ಲಿ ಒಂದು ಅಥವಾ ಅನೇಕ ಪರಿಣಾಮಗಳು ಗೋಚರವಾಗುವುದು ,ಇಂಥ ಸೂರ್ಯನು ಪ್ರತಿಷ್ಠೆ ಗೌರವ ಹಾಗೂ ಸನ್ಮಾನದಲ್ಲಿ ಕೊರತೆ ಅಥವಾ ಜನ್ಮಕುಂಡಲಿಯಲ್ಲಿ ನಿರ್ಮಾಣವಾಗುವ ರಾಜಯೋಗಗಳನ್ನು ಮತ್ತು ಅನ್ಯ ಯೋಗಗಳಿಗೂ ಕುಂದು ಉಂಟುಮಾಡುವನು.

ಆದರೆ ಪ್ರಾಯಶಃ ಇಂತಹ ಜಾತಕರು ದೀರ್ಘಾಯು ಆಗಿರುವರು , ಇಂತವರು ತಮ್ಮ ಜೀವನದಲ್ಲಿ ತಮ್ಮ ಸಂತಾನ ತಾರುಣ್ಯಕ್ಕೆ ಬರುವವರೆಗೆ ಶುಭಫಲಕ್ಕಾಗಿ ಕಾಯಬೇಕು , 

ಜೇಷ್ಠ ಪುತ್ರನಿಂದ ವಿಯೋಗ ಅಥವಾ ದೂರದ ಸ್ಥಿತಿಯು ತಲೆದೂರಬಹುದು , ತನ್ನ ಜನ್ಮ ಸ್ಥಾನದಿಂದ ದೂರ ಹೋದಾಗ ಶಾಂತಿ ಪ್ರಾಪ್ತಿಯಾಗುವುದು.

ತುಲಾ ಲಗ್ನದಲ್ಲಿಯೇ ಸೂರ್ಯನಿದ್ದರೆ , ಮುಖ್ಯವಾಗಿ ವ್ಯಾಪಾರದಲ್ಲಿ ಹಾನಿ , ಸ್ಥಿರತೆಯ ಅಭಾವ , ಪಾಲುದಾರಿಕೆಯಲ್ಲಿ, ಸಂಗಡಿಗರಲ್ಲಿ , ಸಮರ್ಥಕ ಮೊದಲಾದವರಿಂದ ವಂಚನೆ ಮತ್ತು ಅಪಯಶ ನಿಶ್ಚಿತ.

ಸೂರ್ಯನು ಯಾವುದೇ ರಾಶಿ ಅಥವಾ ಭಾವದಲ್ಲಿರಲಿ ಸಾಮಾನ್ಯವಾಗಿ ಆ ಭಾವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಶ್ರೇಷ್ಠತೆ ಹಾಗೂ ಸುಖಗಳಲ್ಲಿ ಸ್ವಲ್ಪ ಕೊರತೆಯನ್ನು ತರುವನು.

ಆದ್ದರಿಂದ ಸೂರ್ಯೋಪಾಸನೆಯನ್ನು ಸಾಮಾನ್ಯವಾಗಿ ಎಲ್ಲರೂ ಮಾಡುವುದು ಲಾಭದಾಯಕವೇ. ಸೂರ್ಯನ ಅನುಷ್ಠಾನ ಆದಿಯಿಂದ ಯಾವ ಹಾನಿಯು ಆಗುವುದಿಲ್ಲ, ಬದಲಾಗಿ ಶುಭವೆ ಆಗುವುದು.

ಸೂರ್ಯನನ್ನು ಜಾತಕದಲ್ಲಿ ಬಲಪಡಿಸುವುದು ಹೇಗೆ ?

ಸೂರ್ಯನನ್ನು ಜಾತಕದಲ್ಲಿ ಬಲಪಡಿಸಲು ಮಾಡಿ ಈ ಉಪಾಯವನ್ನು ಆತ್ಮಕಾರಕನಾದ ಸೂರ್ಯನು ಜಾತಕನಿಗೆ ಮಾನ, ಅಧಿಕಾರ, ಸರ್ಕಾರಿ ಸ್ಥಾನಮಾನ, ವರ್ಚಸ್ಸನ್ನು ಕೊಡುವುದಷ್ಟೆ ಅಲ್ಲದೆ ಆತ್ಮಕಾರಕ ಗ್ರಹವು ಕೂಡ .

ಹಾಗಾಗಿ ಸೂರ್ಯನನ್ನು ಬಲಪಡಿಸುವುದು ಅಥವಾ ಅವನ ಶುಭ ಪ್ರಭಾವ ಹೆಚ್ಚಿಸಲು ಕೆಳಗಿನ ಉಪಾಯಗಳನ್ನು ಮಾಡಬಹುದು.

  • 1) ದೇವಶಯನಿ ಏಕಾದಶಿಯಿಂದ ದೇವೊತ್ತಾನ ಏಕಾದಶಿಯ ವರೆಗೆ ನಿತ್ಯವೂ ಸ್ನಾನದ ನೀರಿಗೆ ಸ್ವಲ್ಪ ಅಗಿಲುಗಂಧವನ್ನು ಹಾಕಿ ಸ್ನಾನ ಮಾಡಿ.
  • 2) ನಿತ್ಯ ಭೋಜನದಲ್ಲಿ ಕೆಂಪು ಕಲ್ಲುಪ್ಪು ಬಳಿಸಿ 
  • 3) ಈ ೪ ಮಾಸಗಳ ಕಾಲ ಯಾವುದೇ ಕಾರಣಕ್ಕೂ ಮಧ್ಯಾಹ್ನ ನಿದ್ರೆ ಮಾಡಲು ಹೋಗಬೇಡಿ.
  • 4) ಚಾತುರ್ಮಾಸ್ಯದಲ್ಲಿ ಸೂರ್ಯೊಪಾಸನೆಗೆ ಉತ್ಕೃಷ್ಟ ಸಮಯ ಕಾರಣ ಸೂರ್ಯನಿಗೆ ಶಾಸ್ತ್ರದಲ್ಲಿ ಅನೇಕ ಸಾರಿ ನಾರಾಯಣ ಎಂದು ಸಂಬೋಧನೆ ಮಾಡಿದ್ದಾರೆ ನಿತ್ಯ ಸೂರ್ಯನಮಸ್ಕಾರ ಮಾಡಿ
  • 5) ಕೃಷ್ಣಪಕ್ಷದ ರವಿವಾರದಂದು 4 ತಾಮ್ರದ ಮೊಳೆಯನ್ನು ಕರಿದಿಸಿ ಶಯನದ ಮಂಚದ ನಾಲ್ಕು ಕಾಲುಗಳಿಗೆ ಹೊಡೆಯಿರಿ
  • 6) ನಿತ್ಯ ಗಾಯತ್ರೀ ದೀಕ್ಷಿತರ ಸಂಧ್ಯಾವಂದನೆ ಮುಗಿದ ಬಳಿಕ ಪಂಚಪಾತ್ರೆಯಲ್ಲಿರು ನೀರನ್ನು ಮನೆಗೆ ಪ್ರೋಕ್ಷಣೆ ಮಾಡಿ 
  • 7) ನಿತ್ಯ ಮನೆಯಲ್ಲಿ ಗೋದೊಳಿ ಸಮಯದಲ್ಲಿ ಆಕಳ ಬೆರಣಿಕೆಯ ಮೇಲೆ ಸ್ವಲ್ಪ ಹಸುವಿನ ತುಪ್ಪವನ್ನು ಹಾಕಿ ದೂನಿಯನ್ನು ಮನೆಯಲ್ಲಿರುವ ಎಲ್ಲ ಕೊನೆಗಳಿಗೂ ತೊರಿಸಿ .
  • 8) ನಿತ್ಯವೂ ಸೂರ್ಯೋದಯದ ಪೂರ್ವ ಎದ್ದು ಶುದ್ಧವಾಗಿ ಈಶಾನ್ಯಕ್ಕೆ ಮುಖಮಾಡಿ ೧೦ ನಿಮಿಷ ಓಂ ಮಿತ್ರಾಯ ನಮಃ ಜಪ ಮಾಡಿ 
  • 9) ಪ್ರತಿ ಏಕಾದಶಿಯ ವ್ರತವನ್ನು ಆಚರಿಸಿ 
  • 10) ಭೋಜನ ಮಾಡುವಾಗ ಹಿತ್ತಾಳೆ ಚಮಚವನ್ನು ಮತ್ತು ತಾಮ್ರದ ನೀರಿನ ಲೋಟವನ್ನು ಬಳಿಸಿ 
  • 11) ಕೃತಿಕಾ , ಉತ್ತರಾಪಾಲ್ಗುಣಿ , ಉತ್ತರಾಷಾಡಾ ನಕ್ಷತ್ರದಲ್ಲಿ ಬಂಗಾರದ ಉಂಗುರವನ್ನು ಖರೀದಿಸಿ ಅನಾಮಿಕ ಬೆರಳಿಗೆ ಧರಿಸಿ 
  • 12) ಹನ್ನೆರಡು ರವಿವಾರ ಸೂರ್ಯಸ್ನಾನ ಮಾಡಿ 
  • 13)ಶುಕ್ಲಪಕ್ಷದ ರವಿವಾರದಂದು ಪುಷ್ಯ ನಕ್ಷತ್ರವಿರುವಾಗ ತಾಮ್ರದಲ್ಲಿ ತಯಾರಿಸಿದ ಸೂರ್ಯನ ಯಂತ್ರವನ್ನು ಗೃಹದಲ್ಲಿ ಸ್ಥಾಪಿಸಿ.
  • 14) ಪ್ರತಿ ದ್ವಾದಶಿಯಂದು ತೆಳುಗೆಂಪು ಗೋವಿಗೆ ಗೋಗ್ರಾಸವನ್ನು ನೀಡಿ
  • 15) ಶಿವಾಲಯದಲ್ಲಿ ಅಮಾವಾಸ್ಯೆಯ ದೀಪ ದೀಪದಾನವನ್ನು ಮಾಡಿ 
  • 16) ಪ್ರತಿ ತಿಂಗಳು ದುರ್ಗಾಷ್ಟಮಿಯಂದು ಸೂರ್ಯನಿಗೆ ಅರ್ಘ್ಯ ನೀಡಿ 11 ಬಾರಿ ಸೂರ್ಯ ದ್ವಾದಶ ನಾಮ ಪಠಿಸಿ.
  • 17) ಶುಕ್ಲಪಕ್ಷದ ನವಮಿ , ಏಕಾದಶಿಯ, ತ್ರಯೋದಶಿ ತಿಥಿಯಂದು ಸೂರ್ಯನ ದರ್ಶನ ಮಾಡಿ.
  • 18) 90 ದಿನಗಳವರೆಗೆ ಸಂಕಲ್ಪ ಪೂರ್ವಕವಾಗಿ ಒಂದು ದಿನವು ಬಿಡದೆ ಗೋಧಿಯಿಂದ ತಯಾರಿಸಿದ ಪದಾರ್ಥಗಳನ್ನು ಸೇವಿಸಿ 
  • 19) ಅಮಾವಾಸ್ಯೆಯ ದಿನ ಸೂರ್ಯ ಅಸ್ತದ ಸಮಯದಲ್ಲಿ ಮೊಸರನ್ನವನ್ನು ತಯಾರಿಸಿ ಅದಕ್ಕೆ ಜೇನುತುಪ್ಪ ಮತ್ತು ೩ ಏಲಕ್ಕಿ ಹಾಕಿ ಪಚ್ಚಕರ್ಪೂರವನ್ನು ಅದರ ಮೇಲೆ ಹಚ್ಚಿ ಮನೆಯ ದೇವರಿಗೆ ಆರತಿಯನ್ನು ಮಾಡಿ ಆ ಅನ್ನವನ್ನು ರಾತ್ರಿ ಮನೆಯ ಮೇಲ್ಛಾವಣಿ ಮೇಲಿಡಿ
  • 20) ಸೂರ್ಯನು ಜಾತಕದಲ್ಲಿ ಸದೃಡನಾದರೆ ಭೂತಾದಿ ಬಾಧೆಗಳು ತೆಗಲುವುದಿಲ್ಲ ಹಾಗಾಗಿ ವರ್ಷದಲ್ಲಿ ೧೧ ರವಿವಾರಗಳು ವ್ರತವನ್ನು ಆಚರಿಸಿ
  • 21) ಗಾಯಾತ್ರಿ ಆರಾಧಕರಿಗೆ ರಥಸಪ್ತಮಿದಿನ ವಸ್ತ್ರ,ಗೋ,ಧನ,ಕನಕ ಆದಿ ದಾನ ಮಾಡಿ 
  • 22) ಸೂರ್ಯನು ಕುಂಡಲಿಯ 6,8,12 ನೇ ಭಾವದಲ್ಲಿದ್ದಾಗ ಮಿತ್ರ , ಉಚ್ಚ ಅಥವಾ ಆಂಶಬಲದಲ್ಲಿ ಬಲಿಷ್ಠನಾದರು ಶುಭ ಫಲವನ್ನು ನೀಡಲಾರ ಅಂಥವರು ಸಾಯಂ ಸಂಧ್ಯಾ ಸಮಯ ಪಚ್ಚಕರ್ಪೂರವನ್ನು ಹಾಕಿ ಸ್ನಾನ ಮಾಡಿ ಮತ್ತು ಸ್ನಾನ ಮಾಡುವಾಗ ಓಂ ಬಾಸ್ಕರಾಯ ನಮಃ ಎಂದು ಮಾನಸಿಕ ಜಪ ಮಾಡುತ್ತಾ ಸ್ನಾನವನ್ನು ಮಾಡಿ 
  • 23) ನಿಮ್ಮ ಜನ್ಮನಕ್ಷತ್ರದ ದಿನ ತಂದೆಗೆ ವಸ್ತ್ರವನ್ನು ಮತ್ತು ಸಿಹಿಯನ್ನು ಮರೆಯದೆ ನೀಡಿ 
  • 24) ಸೂರ್ಯನು ನಿಮ್ಮ ಲಗ್ನಕ್ಕೆ / ರಾಶಿ ಮಾರಕನಾಗಿದ್ದರೆ ಪ್ರತಿ ರವಿವಾರ ಸಪ್ತಧಾನ್ಯವನ್ನು ಹರಿಯುವ ನೀರಲ್ಲಿ ಬೀಡಿ.
  • 25) ಸೂರ್ಯನಿಂದ ಸಂತಾನ ದೋಷವಾಗುತ್ತಿದ್ದರೆ ಕೃಷ್ಣಪಕ್ಷದ ರವಿವಾರದಲ್ಲಿ ಒಂದು ಸೂರ್ಯನ ಮೂರ್ತಿಯನ್ನು ಮನೆಗೆ ತಂದು ಷೋಡಶೋಪಚಾರ ಪೂಜೆ ಸಲ್ಲಿಸಿ ಪುರೋಹಿತರಿಗೆ ದಾನವಾಗಿ ನೀಡಿ.
  • 26) ಸೂರ್ಯನಿಂದ ಶಿಕ್ಷಣದಲ್ಲಿ  ತೊಂದರೆ ಆಗುತ್ತಿದ್ದರೆ ರವಿವಾರ ಸಂಕಷ್ಟಿ ವ್ರತ ಬಂದಾಗ ೨೧ ಶ್ರೋತ್ರೀಯ ಬ್ರಾಹ್ಮಣರನ್ನು ಮನೆಗೆ ಕರಿಸಿ ೨೧ ಬಾರಿ ಗಣಪತಿ ಅಥರ್ವಶೀರ್ಷ ಪಾರಾಯಣ ಮಾಡಿ ಅವರಿಗೆ ಭೋಜನ ಮಾಡಿಸಿ ತಾಂಬೂಲ ದಕ್ಷಿಣೆ ನೀಡಿ ಮಗುವಿಗೆ ಆಶಿರ್ವಾದ ಮಾಡಲು ತಿಳಿಸಿ ಇದರಿಂದ ಮಕ್ಕಳಿಗೆ ತಗಲುವ ವಿದ್ಯಾಭಯ ನಿವಾರಣೆ ಆಗುವುದು.

ಶುಕ್ರ ಗ್ರಹ

  • ಗ್ರಹ – ಶುಕ್ರ
  • ಸ್ವಕ್ಷೇತ್ರ – ವೃಷಭ ಹಾಗೂ ತುಲಾ
  • ಉಚ್ಚ ಕ್ಷೇತ್ರ – ಮೀನ
  • ನೀಚ ಕ್ಷೇತ್ರ – ಕನ್ಯಾ
  • ಮೂಲ ತ್ರಿಕೋಣ – ತುಲಾ
  • ದಿಕ್ಕು – ಆಗ್ನೇಯ
  • ಧಾನ್ಯ – ಅವರೆ
  • ರತ್ನ – ವಜ್ರ
  • ಸಂಖ್ಯೆ – ೬ ಆರು
  • ಮಿತ್ರ ಗ್ರಹ –  ಶನಿ ಹಾಗೂ ಬುಧ
  • ಶತ್ರು ಗ್ರಹ – ಚಂದ್ರ ಹಾಗೂ ಸೂರ್ಯ
  • ಸಮಗ್ರಹ –  ಗುರು ಹಾಗೂ ಕುಜ(ಮಂಗಳ)
  • ದಶಾವಧಿ – ೨0 – ವರ್ಷಗಳು

ಬುಧ ಗ್ರಹ

  • ಗ್ರಹ – ಬುಧ
  • ಸ್ವಕ್ಷೇತ್ರ – ಮಿಥುನ ಹಾಗೂ ಕನ್ಯಾ
  • ಉಚ್ಛ ಕ್ಷೇತ್ರ –  ಕನ್ಯಾ
  • ನೀಚ ಕ್ಷೇತ್ರ – ಮೀನ
  • ಮೂಲ ತ್ರಿಕೋಣ – ಕನ್ಯಾ
  • ರತ್ನ – ಪಚ್ಚೆ
  • ಸಂಖ್ಯೆ – ೫ ಐದು
  • ಮಿತ್ರ ಗ್ರಹ – ಸೂರ್ಯ ಹಾಗೂ ಶುಕ್ರ
  • ಶತ್ರು ಗ್ರಹ – ಚಂದ್ರ
  • ಸಮ ಗ್ರಹ – ಶನಿ;ಕುಜ ಹಾಗೂ ಗುರು
  • ದಿಕ್ಕು – ಉತ್ತರ
  • ಲೋಹ – ಸೀಸ
  • ದಶಾವಧಿ – ಹದಿನೇಳು ವರ್ಷಗಳು
  • ಧಾನ್ಯ – ಹೆಸರು ಕಾಳು

ಜೀವನಶೈಲಿಯನ್ನು ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ?

ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಾಗ ದೈವಕೃಪೆ ತಾನಾಗೇ ಲಭಿಸುತ್ತದೆ. ಅದು ಹೇಗೆ ಎಂದು ನೋಡೋಣ.

ರವಿಯ ಅನುಗ್ರಹ 

ಬೆಳಗಿನ ಜಾವ ಬೇಗನೆದ್ದು ಮನೆಯನ್ನು ಶುಚಿರ್ಭೂತವನ್ನಾಗಿ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ಉಂಟಾಗುತ್ತದೆ. ಸೂರ್ಯನ ಕಿರಣದಲ್ಲಿರುವ ‘ಡಿ’ ಮತ್ತು ‘ಇ’ ಪ್ರೋಟೀನ್ನಿಂದಾಗಿ ಚರ್ಮವು ಕಾಂತಿಯುತವಾಗುತ್ತದೆ. ದಿನವಿಡೀ ಮನಸ್ಸೂ ಉಲ್ಲಸಿತವಾಗಿರುತ್ತದೆ. 

ಚಂದ್ರನ ಅನುಗ್ರಹ 

ಚಂದ್ರನೆಂದರೆ ನೀರು. ಮನೆಯಲ್ಲಿ ಅಶೌಚ ಇರಬಾರದು. ಎಂಜಲು, ಮುಸುರೆ ಪಾತ್ರೆಗಳಿರಬಾರದು. ತಿಂದ ತಟ್ಟೆಗಳನ್ನು ಕೂಡಲೇ ತೊಳದಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮನೆಯ ವಾತಾವರಣ ಶುಭ್ರವಾಗಿದ್ದರೆ ಮನಸ್ಸೂ ಶುಭ್ರವಾಗಿರುತ್ತದೆ.

ಕುಜನ ಅನುಗ್ರಹ

ರಕ್ತಕ್ಕೆ ಅಧಿಪತಿ ಕುಜ. ಅನ್ನಾದಿ ಆಹಾರಗಳ ಸೇವನೆಯಿಂದ ರಕ್ತ ವೃದ್ಧಿಯಾಗುತ್ತದೆ. ಆ ಕಾರಣ ‘ಅನ್ನಂ ಬ್ರಹ್ಮ’ ಎಂಬ ವೇದವಾಕ್ಯವನ್ನು ಗೌರವಿಸಬೇಕು. ಆಹಾರ ಪದಾರ್ಥವನ್ನು ವೇಸ್ಟ್ ಮಾಡದಂತೆ ಜಾಗ್ರತೆ ವಹಿಸಬೇಕು. ನಿಯಮಿತವಾಗಿ ರಕ್ತ ದಾನವನ್ನು ಮಾಡಬೇಕು. ಅಶಕ್ತರಿಗೆ ಸಹಾಯ ಮಾಡಬೇಕು. 

ಬುಧನ ಅನುಗ್ರಹ

ಬುಧ ಬುದ್ದಿಕಾರಕ. ಬುದ್ಧಿ ಹೀನನಾದರೆ ಮಾಡುವ ಕೆಲಸದಲ್ಲೂ ತೊಂದರೆ ಉಂಟಾಗುತ್ತದೆ. ಹಾಗಾಗಿ ಆಡುವ ಮಾತಿನಲ್ಲಿ, ಮಾಡುವ ಕೆಲಸದಲ್ಲಿ ವಿವೇಕವಿರಬೇಕು. 

ಗುರುವಿನ ಅನುಗ್ರಹ

ಗುರು ಸಕಲ ದೋಷ ನಿವಾರಕ. ಮಾರ್ಗಸೂಚಕ. ನಮ್ಮಲ್ಲೊಂದು ಲೋಕೋಕ್ತಿಯಿದೆ. ‘ಕೋಶ ಓದಬೇಕು ಲೋಕ ಸುತ್ತಬೇಕು’ ಅಂತ. ಅರಿವೇ ಗುರು ಎನ್ನುವಂತೆ ಸುತ್ತಣ ಪರಿಸರವನ್ನು ನೋಡಿ ಕಲಿಯಬೇಕು. ಗಿಡ, ಮರಗಳಿಗೆ ನೀರೆಯುವ ಮೂಲಕ ಅವುಗಳನ್ನು ಪೋಷಿಸಬೇಕು. 

ಶುಕ್ರನ ಅನುಗ್ರಹ

ಶುಕ್ರನೆಂದರೆ ವೀರ್ಯ. ಪೌಷ್ಟಿಕದಾಯಕ ಆಹಾರ ಸೇವನೆಗೆ ಅಗತ್ಯವಾದ ಹಣ್ಣು, ತರಕಾರಿಗಳನ್ನು ಮನೆಗೆ ತರಬೇಕು. ಕುಟುಂಬ ಸೌಖ್ಯಕ್ಕೆ ಅಗತ್ಯವಾದ ಕಾರ್ಯಗಳನ್ನು ಮಾಡಬೇಕು. 

ಶನಿಯ ಅನುಗ್ರಹ 

ಶನಿ ಕರ್ಮಾಧಿಪತಿ. ಕರ್ಮಸೂಚಕವಾದ ಪಾದರಕ್ಷೆಗಳನ್ನು ಮನೆಯಾಚೆಯೇ ಬಿಡಬೇಕು. ಮನೆಯನ್ನು ಶುಭ್ರವಾಗಿಟ್ಟುಕೊಳ್ಳಬೇಕು. 

ರಾಹುವಿನ ಅನುಗ್ರಹ

ಹೊರಗಿನ ಪಾಪ ಮನೆಯೊಳಗೆ ಎನ್ನುವ ಮಾತಿನಂತೆ ಹೊರಗಿನಿಂದ ಮನೆಯೊಳಗೆ ಪ್ರವೇಶಿಸಿದ ಕೂಡಲೇ ಕೈಕಾಲುಗಳನ್ನು ತೊಳೆದುಕೊಳ್ಳಿ. ಮೂತ್ರ ಅಥವಾ ಮಲ ವಿಸರ್ಜನೆಯ ನಂತರ ಶುದ್ಧಾಚಮನ ಮಾಡಿ. ಕೈಕಾಲುಗಳನ್ನು ತೊಳೆಯಿರಿ. 

ಕೇತುವಿನ ಅನುಗ್ರಹ

ಅತಿಥಿ ದೇವೋ ಭವ ಎನ್ನುವುದು ಶಾಸ್ತ್ರೋಕ್ತಿ. ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದರಿಂದ ಉತ್ತಮ ಫಲಗಳನ್ನು ಕಾಣಬಹುದು.

‌ಗೋವು ಮತ್ತು ಗ್ರಹಗಳು

ಗೋವಿನಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆನ್ನುವುದು ಹಿಂದೂ ಧರ್ಮದಲ್ಲಿನ ನಂಬಿಕೆ. ಗೋವಿನ ಸೇವೆಯಿಂದ ಯಾವೆಲ್ಲಾ ಸಮಸ್ಯೆಗಳು ದೂರಾಗಲಿದೆ ಗೊತ್ತೇ..? ಗೋಪೂಜೆಯಿಂದ ಈ ಎಲ್ಲಾ ಸಮಸ್ಯೆಗಳು ದೂರಾಗುವುದು..

ಹಿಂದೂ ಧರ್ಮದಲ್ಲಿ ಗೋವಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ತಾಯಿ ಹಸುವಿನ ಸೇವೆ ಮಾಡುವುದರಿಂದ ದೊಡ್ಡ ತೊಂದರೆಗಳೂ ದೂರವಾಗುತ್ತವೆ ಎಂಬುದು ನಂಬಿಕೆ. ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ. ಹಸುವಿನ ಸೇವೆಯಿಂದ ಈ ಎಲ್ಲಾ 33 ಕೋಟಿ ದೇವಾನುದೇವತೆಗಳು ಸಂತೋಷಗೊಂಡು ಆ ವ್ಯಕ್ತಿಯ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ವರವನ್ನು ನೀಡುತ್ತಾರೆ ಎನ್ನುವ ನಂಬಿಕೆಯಿದೆ. ಅಷ್ಟೇ ಅಲ್ಲ, ಗೋವಿನ ಸೇವೆಯಿಂದ ಜಾತಕದ ಎಲ್ಲಾ ದೋಷಗಳೂ ನಿವಾರಣೆಯಾಗುತ್ತದೆ. ನಿಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳಿದ್ದರೆ, ಈ ಹಸುವಿಗೆ ಸಂಬಂಧಿತ ಕ್ರಮಗಳನ್ನು ಮಾಡುವುದರಿಂದ, ನಿಮ್ಮ ತೊಂದರೆಗಳು ಶೀಘ್ರದಲ್ಲೇ ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

​ಸಮೃದ್ಧಿಗಾಗಿ

ಗೋವಿಗೆ ತಿನ್ನಿಸಿದ ಯಾವುದೇ ವಸ್ತು ನೇರವಾಗಿ ದೇವರು-ದೇವತೆಗಳನ್ನು ತಲುಪುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಆದ್ದರಿಂದ ಮುಂಜಾನೆ ನಾವು ತಿನ್ನಲು ತಯಾರಿಸಿದ ರೊಟ್ಟಿಯನ್ನು ಅಥವಾ ಇನ್ನಾವುದೇ ಸಾತ್ವಿಕ ಆಹಾರವನ್ನು ಮೊದಲು ಹಸುವಿಗೆ ನೀಡಿ ನಂತರ ನಾವು ಆಹಾರವನ್ನು ತೆಗೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.

​ಬುಧ ಗ್ರಹದ ದುಷ್ಪರಿಣಾಮಗಳನ್ನು ನಾಶಮಾಡಲು

ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ ಅಥವಾ ಇನ್ಯಾವುದೇ ಕಾರಣದಿಂದ ಅದರ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದರೆ ಬುಧವಾರದಂದು ಹಸುವಿಗೆ ಹಸಿರು ಮೇವನ್ನು ತಿನ್ನಿಸಲು ಸಲಹೆ ನೀಡಲಾಗುತ್ತದೆ. ಇದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ನಮ್ಮ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

​ಶನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ

‌ ಶನಿಗೆ ಸಂಬಂಧಿಸಿದ ಯಾವುದೇ ರೀತಿಯ (ಸಾಡೇಸಾತಿ, ಚತುರ್ಥ, ಪಂಚಮ, ಕಂಟಕ ಶನಿ, ಶನಿ ದಶಾ/ಭುಕ್ತಿ….) ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಆಗ ಕಪ್ಪು ಬಣ್ಣದ ಹಸುವಿನ ಸೇವೆ ಮಾಡುವುದು ಸೂಕ್ತ. ಅದೇ ಸಮಯದಲ್ಲಿ, ಸಾಧ್ಯವಾದರೆ, ಬ್ರಾಹ್ಮಣರಿಗೆ ಕಪ್ಪು ಬಣ್ಣದ ಹಸುವನ್ನು ದಾನ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ.

​ಮಂಗಳ ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ


ಜಾತಕದಲ್ಲಿ ಮಂಗಳ ದೋಷವಿದ್ದರೆ ಆ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಂಪು ಬಣ್ಣದ ಹಸುವಿಗೆ ಆಹಾರವನ್ನು ನೀಡಬೇಕು. ನಂತರ ಮಂಗಳವಾರದಂದು ಗೋಮಾತೆಯನ್ನು ಪೂಜಿಸಿ, ತಿನ್ನಲು ಬೆಲ್ಲವನ್ನು ನೀಡಬೇಕು.

​ಗುರುವಿಗೆ ಸಂಬಂಧಿಸಿದ ತೊಂದರೆಗಳಿಗೆ

ಗುರುವು ಬಲವಾಗಿಲ್ಲದಿದ್ದರೆ ಮದುವೆ ವಿಳಂಬವಾಗುತ್ತದೆ. ಶಿಕ್ಷಣದಲ್ಲಿ ಅಡೆತಡೆಗಳು ಎದುರಾಗುತ್ತದೆ. ಇದರೊಂದಿಗೆ, ಅನೇಕ ಸಮಸ್ಯೆಗಳು (ಆರ್ಥಿಕ, ಉದ್ಯೋಗ, ಸಂತಾನ…( ನಿಮ್ಮನ್ನು ಸುತ್ತುವರೆಯಲು ಆರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗುರುವಾರ, ಹಸುವಿಗೆ ಅರಿಶಿನದ ತಿಲಕವನ್ನು ಹಣೆಗೆ ಹಚ್ಚಿ ಮತ್ತು ಗೋಧಿ ಹಿಟ್ಟಿನಲ್ಲಿ ಬೆಲ್ಲ, ನೆನೆಸಿದ ಹೆಸರುಬೇಳೆ ಮತ್ತು ಚಿಟಿಕೆ ಅರಿಶಿನ ಸೇರಿಸಿ ತಿನ್ನಿಸಿ.

​ಪಿತೃ ದೋಷವನ್ನು ನಿವಾರಣೆ ಮಾಡಲು

ವ್ಯಕ್ತಿಯ ಜಾತಕದಲ್ಲಿ ಪಿತೃದೋಷವಿದ್ದರೆ ಅಮಾವಾಸ್ಯೆ ದಿನದಂದು ಹಸುವಿಗೆ ರೊಟ್ಟಿ, ಬೆಲ್ಲ, ಹಸಿರು ಮೇವುಗಳನ್ನು ತಿನ್ನಲು ನೀಡಿ.

ಅದೇ ಸಮಯದಲ್ಲಿ, ನೀವು ಹಸುವಿಗೆ ಪ್ರತಿದಿನ ಸೇವೆ ಸಲ್ಲಿಸಿದರೆ, ಅದು ಉತ್ತಮವಾಗಿರುತ್ತದೆ. ಇದರಿಂದ ಪಿತೃದೋಷ ಶಮನವಾಗುವುದರ ಜೊತೆಗೆ ಇತರ ಗ್ರಹಗಳೂ ಕೂಡ ಸಮಾಧಾನಗೊಳ್ಳುತ್ತವೆ ಎನ್ನುವ ನಂಬಿಕಯಿದೆ.

ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಬಹಳಷ್ಟು ಮಹತ್ವವಿದೆ ಗೋವಿನಲ್ಲಿ ಮುಕ್ಕೋಟಿ ದೇವರುಗಳ ವಾಸ ಇರುತ್ತದೆ. ಗೋ ಪೂಜೆ ಮಾಡುವುದರಿಂದ ಸಕಲ ದೇವತೆಗಳ ವಾಸ ಇರುತ್ತದೆ ಪುಣ್ಯಗಳು ಫಲಗಳು ದೊರೆಯುತ್ತವೆ. ಸಕಲ ಸಮಸ್ಯೆಗಳು ನಿವಾರಣೆ ಆಗುತ್ತವೆ ಹಾಗೂ ಆರೋಗ್ಯ ಸಮಸ್ಯೆ ಇದ್ದರೂ ಕೂಡ ನಿವಾರಣೆ ಆಗುತ್ತದೆ. ನೆಮ್ಮದಿ ಜೀವನ ಕಾಣಬಹುದು, ಆರ್ಥಿಕ ಲಾಭವನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಗೋ ತಾಯಿಯ ಸಮಾನ ಎಂದು ಹೇಳಬಹುದು.

ಗೋಮಾತೆ ಯಾರಿಗೂ ಬೇಧ ಭಾವ ವಿಲ್ಲದೆ ಹಾಲನ್ನು ನೀಡುತ್ತದೆ ಹಾಗಾಗಿ ಹಸುವಿಗೆ ಪವಿತ್ರವಾದ ಸ್ಥಾನವನ್ನು ನೀಡಲಾಗಿದೆ.

ಹಸುವನ್ನು ಪ್ರೀತಿಯಿಂದ ಕಾಣಬೇಕು ಹಾಗೂ ತಿನ್ನಲು ಆಹಾರ ಪದಾರ್ಥಗಳನ್ನು ಕೊಡಬೇಕು. ಗೋ ಮಾತೆಯ ಆಶೀರ್ವಾದರಿಂದ ನಮ್ಮ ಸರ್ವ ಸಂಕಷ್ಟಗಳು ನಿವಾರಣೆ ಆಗುತ್ತವೆ. ಗೋ ಮಾತೆಯನ್ನು ಪೂಜಿಸುವುದರಿಂದಿಗೆ ಈ ಒಂದು ಮಂತ್ರವನ್ನು ಜಪಿಸುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆ ಮಂತ್ರ ಯಾವುದು ಯಾವ ರೀತಿಯಾಗಿ ಜಪಿಸಬೇಕು ಎಂದು ತಿಳಿಯೋಣ.

ಗೋವಿನ ಶರೀರದಲ್ಲಿ ಕೋಟಿ ದೇವತೆಗಳು ಇರುವುದಂರಿದ ಗೋವಿಗೆ ಗೌರವ ಕೊಡುವುದಂರಿದ ಹಾಗೂ ಗೋವನ್ನು ಪೂಜಿಸುವುದರಿಂದ ಗೋ ಸೇವೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ.

ಇನ್ನು ಈ ಒಂದು ವಿಶೇಶವಾದ ಉಪಾಯವನ್ನು ಮಾಡುವುದರಿಂದ ಉತ್ತಮ ಫಲಗಳು ದೊರೆಯುತ್ತವೆ. ‌ ಮೊದಲಿಗೆ ಒಂದು ಗೋಧಿ ರೊಟ್ಟಿಯನ್ನು ಮಾಡಬೇಕು‌. ಗೋ ಮಾತೆಯನ್ನು ಪೂಜಿಸಿ ಗೋಧಿ ರೊಟ್ಟಿಯನ್ನು ತಿನ್ನಿಸಬೇಕು ಹಾಗೂ ಈ ಒಂದು ಮಂತ್ರವನ್ನು ಜಪಿಸಬೇಕು. ‌ ‌ ‌ ‌

ಗೋವಿನ ಮೇಲೆ ಕೈ ಇಟ್ಟು ಸವರುತ್ತಾ ಈ ಒಂದು ಮಂತ್ರವನ್ನು ಪಠಿಸಬೇಕು.

ಮಂತ್ರ :-

ಓಂ ಸರ್ವ ದೇವಮಯೇ ದೇವೀ ಲೋಕಾನಾಮ್ ಶುಭ ನಂದಿನಿ ಮಾತೃ ಮಾಭಿಷಿತ ಸಫಲ ಪುರೋ ನಂದಿನಿ .

ಈ ಮಂತ್ರವನ್ನು ಕನಿಷ್ಠ 3 ಭಾರಿ ಆದರೂ ಹೇಳಬೇಕು ಗೋವಿನ ಮೈ ಸ್ಪರ್ಶ ಮಾಡುತ್ತಾ ಈ ಒಂದು ಮಂತ್ರವನ್ನು ಹೇಳಬೇಕು. ಗೋಮಾತೆ ಅನುಗ್ರಹದಿಂದ ನಿಮಗೆ ಯಾವುದೇ ರೀತಿ ಸಂಕಷ್ಟ ಇದ್ದರೂ ಕೂಡ ಅವೆಲ್ಲವೂ ನಿವಾರಣೆಯಾಗುತ್ತದೆ.

ಮಾಡುವ ಪ್ರತಿಯೊಂದು ಕೆಲಸದಲ್ಲಿ ಒಳ್ಳೆ ಯಶಸ್ಸನ್ನು ಪಡೆದುಕೊಳ್ಳಬಹುದು ಗೋಮಾತೆಯನ್ನು ಪೂಜಿಸಿ ಹಸುವಿಗೆ ಪ್ರೀತಿಯಿಂದ ಆಹಾರ ತಿನ್ನಲು ಕೊಡುವುದರಿಂದ ಸಾಕಷ್ಟು ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಬಹುದು ಹಾಗೂ ನಿಮ್ಮ ಮನೆಯಲ್ಲಿ ಸಕಾರಾತ್ಮಕತೆ ಇರುತ್ತದೆ ಹಾಗೂ ನಿಮ್ಮ ಒಳ್ಳೆಯ ಧನಾತ್ಮಕ ಆಲೋಚನೆಗಳು ವೃದ್ಧಿಯಾಗುತ್ತವೆ.

ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ ಹಾಗೂ ಅನಾರೋಗ್ಯ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ.

ಗೋ ಮಾತೆಯನ್ನು ಪೂಜಿಸುವುದರಿಂದ ಸಕಲ ದೇವತೆಗಳ ಆಶೀರ್ವಾದ ಕೂಡ ನಿಮಗೆ ದೊರೆಯುತ್ತದೆ.

ಸುಖಶಾಂತಿ ನೆಮ್ಮದಿಯಿಂದ ಜೀವಿಸಬಹುದು‌. ಅಷ್ಟ ಐಶ್ವರ್ಯ ಭೋಗಭಾಗ್ಯಾದಿಗಳು ದೊರೆಯುತ್ತವೆ. ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು.

3 thoughts on “ಜಾತಕದಲ್ಲಿ ನವಗ್ರಹಗಳ ಬಗ್ಗೆ ಪುಟ್ಟ ಮಾಹಿತಿ | Navagraha Important Details in Kannada”

  1. Pingback: ಚಾತುರ್ಮಾಸ್ಯದ ಪ್ರಧಾನ ನಿಯಮಗಳು - Acharane

  2. Pingback: ಚಾತುರ್ಮಾಸ್ಯದ ಪ್ರಧಾನ ನಿಯಮಗಳು - Acharane

  3. Pingback: ವಿವಾಹ ಯೋಗ ಯೋಗ - Acharane

Leave a Comment

Your email address will not be published. Required fields are marked *