ಭೌಮಾಶ್ವಿನಿ ಅಮೃತಸಿದ್ಧಿ ಯೋಗ

ಭೌಮಾಶ್ವಿನಿ ಅಮೃತಸಿದ್ಧಿ ಯೋಗ

ಇದೇ ಮಂಗಳವಾರ ಅಂದರೆ 14-12-2021, ಅಶ್ವಿನಿ ನಕ್ಷತ್ರ ಯುಕ್ತ ಮಂಗಳವಾರ ಅಮೃತಸಿದ್ಧಿಯೋಗ ಉಂಟಾಗಿದೆ. ಇದನ್ನು ಭೌಮಾಶ್ವಿನಿ ಅಮೃತ ಸಿದ್ಧಿ ಯೋಗ ಎನ್ನುತ್ತಾರೆ. 

ಈ ಶುಭದಿನ ದೇವಿ ಭಗವತಿ, ಹರಿದ್ರಾ ಗಣಪತಿ, ಸಿಂಧೂರ ಗಣಪತಿ, ನರಸಿಂಹ, ಸುಬ್ರಹ್ಮಣ್ಯ, ನಾಗ, ಅಗ್ನಿ ಹಾಗೂ ಕುಜ (ಮಂಗಳ) ಗ್ರಹ ಆರಾಧಕರಿಗೆ ಪರ್ವಕಾಲ.

ಈ ದಿನ ದೇವಿ ಅಥರ್ವಶೀರ್ಷ ಮಂತ್ರದ ಪಾರಾಯಣ, ಜಪ, ಪುರಶ್ಚರಣ, ಹೋಮಾದಿಗಳು ಸಾಧಕರಿಗೆ ವಿಶೇಷ ಫಲವನ್ನು ನೀಡುತ್ತದೆ.

ಋಣಮುಕ್ತಿಗಾಗಿ, ರೋಗ ನಿವಾರಣೆಗಾಗಿ, ಅಪಮೃತ್ಯುದೋಷ ನಿವಾರಣೆಗಾಗಿ, ಶತೃ ನಾಶಕ್ಕಾಗಿ ಮಾಡುವ ಸಾಧನೆ ಆರಾಧನೆಗಳು ಅತಿಶೀಘ್ರದಲ್ಲಿ ಫಲವನ್ನು ಕೊಡುತ್ತದೆ.

ಗಣಪತಿ ಅಥರ್ವಶೀರ್ಷ, ಮಹಾ ಮೃತ್ಯುಂಜಯ , ದೇವಿ ಅಥರ್ವಶೀರ್ಷ, ಋಣಮೋಚಕ ಸ್ತೋತ್ರ, ಜ್ವಾಲಾ ನೃಸಿಂಹ – ಜ್ವಾಲಾ ಸುದರ್ಶನ ಮಂತ್ರ, ಸರ್ಪ ಸೂಕ್ತ, ನಾಗ ಅಷ್ಟೋತ್ತರ, ಸುಬ್ರಹ್ಮಣ್ಯ ಭುಜಂಗ, ಹಾಗೂ ಇದೇ ದೇವತೆಗಳ ಮೂಲ ಮಂತ್ರ ಜಪ, ಇವೆಲ್ಲಾ ತಮ್ಮ ಅವಶ್ಯಕತೆ ಹಾಗೂ ಸಂದರ್ಭಾನುಸಾರ ಯಾವುದು ಅತಿ ಅವಶ್ಯಕವೋ ಅದನ್ನು ಸಾಧಕರು ಈ ಪರ್ವ ಕಾಲದಲ್ಲಿ ಸಾಧನೆ ಮಾಡಿ ಸಿದ್ಧಿಸಿಕೊಳಬಹುದು.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ