ನಾರದಮುನಿ ಇವರ ಬಗ್ಗೆ ನಿಮಗೆಷ್ಟು ಗೊತ್ತು?
Index of Important Points
ನಾರಾಯಣ ನಾರಾಯಣ ~ ನಾರದರು
ಭಗವಂತನ ಈ ಸೃಷ್ಠಿಯಲ್ಲಿ ನಾವು ಚೇತನ&ಅಚೇತನ ಎಂಬ ಎರಡು ವರ್ಗಗಳನ್ನು ಕಾಣುತ್ತೇವೆ ಸ್ವತಂತ್ರವಾಗಿ ಆಲೋಚನೆ ಮಾಡುವ ,ತನ್ನ ಜೀವನವನ್ನು ತನಗೆ ಬೇಕಾದಂಥ ರೀತಿಮಲ್ಲಿ ರೂಪಿಸಬಲ್ಲ ಬುದ್ಧಿಶಕ್ತಿ, ಪ್ರಜ್ಞೆ, ಕೇವಲ ಮನುಷ್ಯನಿಗೆ ಮಾತ್ರವೇ ಉಂಟು. ಮತ್ತಾವ ಚೇತನಕ್ಕೂ ಇದು ಇಲ್ಲಾ.ಆದ್ದರಿಂದಲೇ “ಮಾನವ ಜನ್ಮ ದೊಡ್ಡದು…*ಎಂದಿದ್ದಾರೆ ದಾಸಾರ್ಯರು.
ಈ ಮಾನವ ಜನ್ಮ ಬರಲೂ ಸಹ ಮುಂಚೇ ಜೀವಿಯು ೮೪ ಲಕ್ಷ ಜನ್ಮಗಳನ್ನು ಹಾದು ಬಂದಿದ್ದು ಇದನ್ನು ಹಾನಿಮಾಡಿಕೊಳ್ಳದೇ ಸತ್ಯದ ಜಿಜ್ಞಾಸೆಯಿಂದ ತಮ್ಮ ಜೀವನವನ್ನೇ ಮುಡುಪಾಗಿಟ್ಟು ತಪಸ್ಸು, ಧ್ಯಾನ, ಜ್ಞಾನಗಳ ಮೂಲಕ ಪರಿಹಾರಗಳನ್ನು ಕಡುಹಿಡಿದು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿರು ಮಹಾಪುರುಷರೇ.. ಋಷಿಗಳು.
ಇಂಥಹ ಋಷಿಗಳಿಂದ ನಮಗೆ ಬಂದಿರುವ ಆಧ್ಯಾತ್ಮವಿದ್ಯೆ ಯನ್ನು
ವೇದಗಳು ಅಥವಾ ಶ್ರುತಿಗಳು ಎನ್ನುತ್ತಾರೆ.ಇವು ಋಷಿಗಳ ಸ್ವಕಪೋಲಕಲ್ಪಿತ ಜ್ಯಾನವಲ್ಲಾ..ಸಾಕ್ಷಾತ್ ದೇವರಿಂದಲೇ ಅವರ ಶುದ್ಧ ಚಿತ್ತದಲ್ಲಿ ಅಭಿವ್ಯೆಕ್ತವಾದವುಗಳು.
ಇಂಥ ಮಹಾ ಋಷಿಗಳ ಸಾಲಿನಲ್ಲಿ ದೇವರ್ಷಿ ಗಳೆನಿಸಿದವರು..ನಮಗೆಲ್ಲಾ ಚಿರಪರಿಚಿತ ಪಾತ್ರಧಾರಿಗಳೂ ಆದ.. ನಾರದ ಮಹರ್ಷಿಗಳು.
ನಾರದ ಮುನಿಗಳ ಹೆಸರನ್ನು ಯಾರು ಕೇಳಿಲ್ಲ..? ಪ್ರತಿಯೊಂದು ಪುರಾಣ, ಹರಿಕಥೆ, ಪೌರಾಣಿಕ, ಯಕ್ಷಗಾನ..ಇತಿಹಾಸಾದಿ ಪ್ರತಿಯೊಂದರಲ್ಲೂ ತ್ರಿಯುಗಗಳಲ್ಲಿಯೂ..ಅವರ ಪಾತ್ರ ಹಿರಿದಾದುದು.
ನಾರ ಎಂದರೆ..ಮನುಷ್ಯರಿಗೆ ಪ್ರಯೋಜನವಾಗುವ ಜ್ಞಾನ…
ದ..ಎಂದರೇ..ಕೊಡುವವರು..
ನಾರದ ಎಂದರೇ ಮಾನವರಿಗೆ ಸರಿಯಾದ ಜ್ಞಾನ ಕೊಟ್ಟು ಸರಿದಾರಿಯನ್ನು ತೋರಿಸುವವರು.ಇವರು ಬರೀ ಜಗಳ ಹಚ್ಚುವವರಲ್ಲಾ…ಬದಲಾಗಿ ಜಗಳ ಹಚ್ಚಿದರೂ..ಸಜ್ಜನರ ಉದ್ಧಾರಕ್ಕಾಗಿ.. ಭಗವಂತನ ಜ್ಞಾನ ತತ್ವ ಪ್ರಸಾರಕ್ಕಾಗಿ..ಲೋಕಕಲ್ಯಾಣಕ್ಕಾಗಿ ಭಗವಂತನ ಅಣತಿ ಪಾಲನೆಗಾಗಿ ಮಾತ್ರ.
ದೇವರ್ಷಿಗಳೆಂದೇ ಪ್ರಸಿದ್ರರಾದ ನಾರದರು..ನಮ್ಮ ಧಾರ್ಮಿಕ ಸಾಹಿತ್ಯದಲ್ಲಿ ಸುಪ್ರಸಿದ್ರರಾದ &ಆಕರ್ಷಕ ವ್ಯೆಕ್ತಿಗಳು.
*ಋಗ್ವೇದ ಸಂಹಿತೆಯ “ಇಂದ್ರ ಸುತೇಷು” ಎಂಬ ಸೂಕ್ತದ((೮.೧೩) ಋಷಿಗಳು ನಾರದ- ಕಾಣ್ವರು. ಹಾಗೆಯೇ
ಸುಖಾಯ ಆ ನಿವೀದಿತ..ಎಂದು ಪ್ರಾರಂಭವಾಗುವ (೯.೧೦೪.೧೦೫) ಸೂಕ್ತಗಳಿಗೆ ನಾರದರು &ಪರ್ವತರು ದ್ರಷ್ಟಾರ ಋಷಿಗಳು. ಅಥರ್ವಣವೇದದಲ್ಲಿಯೂ (೫,೧೯,೯,೧೨,೪,೧೬) ಮಂತ್ರದ್ರಷ್ಟಾರರಾದ ನಾರದರನ್ನು ಕಾಣುತ್ತೇವೆ.
ಛಾಂದೋಗ್ಯ ಉಪನಿಷತ್ ನ ಭೂಮವಿದ್ಯೆಯಲ್ಲಿ (ಅ.೭) ನಾರದರನ್ನು ಸನತ್ಕುಮಾರರ ಶಿಷ್ಯರನ್ನಾಗಿ ತೋರಿದೆ. ಪುರಾಣಗಳಲ್ಲಂತೂ ಹಲವಾರು ಕಡೆ ಕಾಣುತ್ತೇವೆ.
ಭಾಗವತದಲ್ಲಿ (೧,೫, ೨೩-೨೨,೧,೬,೫-೩೬) ನಾರದರ ಕಥೆ ಸ್ವಲ್ಪವಿಸ್ತಾರವಾಗಿಯೇ ಬಂದಿದೆ.
ಹಿಂದಿನ ಜನ್ಮದಲ್ಲಿ ಶೂದ್ರ ದಾಸಿಯೊಬ್ಬಳ ಮಗನಾಗಿ ಹುಟ್ಟಿ, ಐದು ವರ್ಷದ ಬಾಲಕನಾಗಿರುವಾಗಲೇ ತಮ್ಮ ಊರಿಗೆ ಚಾತುರ್ಮಾಸ್ಯ ವ್ರತಕ್ಕಾಗಿ ಬಂದ ಸಾಧುಸಂತರು ಕೆಲವರನ್ನು ಶ್ರದ್ಧೆಯಿಂದ ಸೇವಿಸಿ ,ಅವರಿಂದ ಮಂತ್ರೋಪದೇಶ ಪಡೆದರು. ತಾಯಿ ಹಾವು ಕಚ್ಚಿ ಸತ್ತದ್ದರಿಂದ ಅನಾಥನಾದ ಬಾಲಕ ಭಗವಂತನ ಮಂತ್ರೋಶ್ಚಾರಣೆ ಮಾಡುತ್ತಾ.ಧ್ಯಾನಮಗ್ನನಾಗಿರಲು ಒಂದು ಕ್ಷಣಕಾಲ ಭಗವಂತನ ರೂಪದ ದರ್ಶನ ವಾಯಿತೂ. ಮತ್ತೆ ಆ ರೂಪವನ್ನೂ ನೋಡಬಯಸಿ ಪ್ರಾರ್ಥಿಸಿದಾಗ…ಈ ಜನ್ಮದಲ್ಲಿ ಇಷ್ಟೇ ಪ್ರಾಪ್ತಿ ಯೆಂದು..ಹರಿನಾಮಸಂಕೀರ್ತನೆಯಲ್ಲಿ ಕಾಲಕಳೆಯಬೇಕೆಂದು ಆಕಾಶವಾಣಿ ನಡಿಯಿತು. ಅದರಂತೆ ಆ ಜನ್ಮವನ್ನು ನೀಗಿಸಿ ಆ ದೇಹ ಪತನವಾದ ಮೇಲೆ.ಬ್ರಹ್ಮದೇವರ ಮಾನಸ ಪುತ್ರರಾಗಿ ಜನಿಸಿ, ದೇವರ್ಷಿ ಪದವಿಗೆ ಭಾಜನರಾದರು.
ದೇವರ್ಷಿ ನಾರದರಿಗೂ ಸಾಮವೇದ-ಸಂಗೀತಗಳಿಗೂ ನಿಕಟ ಸಂಬಂದವುಂಟು.
ಸಂಗೀತ ಮಕರಂದ ಎಂಬ ಸಂಗೀತಶಾಸ್ತ್ರಗ್ರಂಥವನ್ನು ರಚೀಸಿದವರು ಅವರೇ. ವೀಣೆಯ ನಿರ್ಮತೃಗಳೂ, ಅವರೇ. ಅವರು ತ್ರಿಲೋಕ ಸಂಚಾರಿಗಳಾಗಿ ಕಷ್ಟದಲ್ಲಿರುವವರಿಗೆ ಸಜ್ಜನರಿಗೆ ಸಹಾಯಕರಾಗಿ, ಧರ್ಮಪ್ರಜ್ಞೆಯನ್ನು ಉಪದೇಶಿಸುತ್ತಾರೆ.ಕೆಲವು ಸಲ ಜನರನ್ನು ತಿದ್ದಿ ಸರಿದಾರಿಗೆ ತರಲು ಕುಚೇಷ್ಟೆಗಳನ್ನು ಮಾಡಿ ಜಗಳವನ್ನು ತಂದೊಡ್ಡುವುದೂ ಉಂಟು! ವಾಲ್ಮೀಕಿಗಳಿಗೆ ರಾಮಾಯಣವನ್ನು ರಚಿಸಲು, ವ್ಯಾಸರಿಗೆ ಭಾಗವತವನ್ನು ರಚಿಸಲು, ಸ್ಪೂರ್ತಿ ನೀಡಿದವರು ನಾರದರೇ. ಪ್ರಹ್ಲಾದನಿಗೆ ತಾಯ ಗರ್ಭದಲ್ಲಿರುವಾಗಲೇ ಭಾಗವತ ಧರ್ಮವನ್ನು ಉಪದೇಶಿಸಿದವರು ಇವರೇ. (ಕಲಿಯುಗದಲ್ಲಿ ತಮ್ಮ ಅಂಶದಿಂದ ಶ್ರೀಪುರಂದರದಾಸರಾಗಿ ಅವತರಿಸಿ ದಾಸಶ್ರೇಷ್ಠರೆನಿಸಿ, ಭಗವಂತನ ತತ್ವ ಲೋಕಕ್ಕರುಹಿದವರು ಇವರೇ)
ಇಂಥಹ ಮಹಾತ್ಮರನ್ನು ಸ್ವಯಂ ಶ್ರೀಕೃಷ್ಣನೇ ಹೃತ್ಪೂರ್ವಕವಾಗಿ ಹೊಗಳಿರುತ್ತಾನೆ.(ಮಹಾಭಾರತ-ಶಾಔತಿಪರ್ವ-ಅ- ೨೩೦)
ನಾರದರ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಗ್ರಂಥಗಳು:
- ನಾರದ ಭಕ್ತಿಸೂತ್ರ,
- ನಾರದಸ್ಮೃತಿ,
- ನಾರದೀಯ ಶಿಕ್ಷಾ
- ನಾರದಪರಿವ್ರಜಕೋಪನಿಷತ್,
- ನಾರದೀಯ ಪುರಾಣ,
- ನಾರದ ಪಂಚರಾತ್ರ.
ಹೀಗೆ ಈ ಮಹಾಪುರುಷರು ಜೀವನದಲ್ಲಿ ಅತಿ ನಿಕೃಷ್ಟ ಸ್ಥಾನದಿಂದ ಸ್ಥಪ್ರಯತ್ನದ ಮೂಲಕ & ಭಗವಂತನ ಆನುಗ್ರಹದ ಮೂಲಕ ಅತಿ ಉತ್ಕುಷ್ಟ ಸ್ಥಾನವನ್ನು ತಲುಪಿ ದೇವರ್ಷಿ ಪದವನ್ನು ಪಡೆದು ಪರೋಪಕಾರಿಗಳಾಗಿ .ತ್ರಿಲೋಕಸಂಚಾರಿಗಳಾಗಿ.. ಲೋಕಕಲ್ಯಾಣ ವೆಸಗಿದ ಈ ಮಹಾಮಹಿಮರು ನಮಗೆಲ್ಲಾ ಆದರ್ಶ ಪ್ರಾಯರಾಗಿದ್ದೂ ಅವರಂತೆ ಸಾಧನೆಯ ಹಾದಿಯಲ್ಲಿ ನಾವುಗಳೂ ಸಾಗಿ ಜನ್ಮದ ಸಾರ್ಥ್ಯಕ್ಯವನ್ನು ಸಾಧಿಸಿಕೊಳ್ಳುವಂತಾಗಲೀ ಎಂಬ ಯಥಾಮತಿ ಚಿಂತನೆಯೊಂದಿಗೆ
ಭಗವದ್ಭಕ್ತಿಗೆ ಭೋಗಾಕಾಂಕ್ಷೆ ಅಡ್ಡಿಯಾಗುತ್ತದೆ
🌺 ಒಮ್ಮೆ ನಾರದ ಮಹರ್ಷಿ ವೈಕುಂಠಕ್ಕೆ ಹೋಗಿ ಲಕ್ಷ್ಮೀದೇವಿಯನ್ನು ಸ್ತುತಿಸಿದನು. ಆಕೆ ತನ್ನ ಪತಿಯಾದ ವಿಷ್ಣುವನ್ನು ಅನುಕ್ಷಣವೂ ಬಿಡದೇ ಸೇವಿಸುವ ಸತಿಯೆಂದೂ, ಇಂತಹ ಭಾಗ್ಯವನ್ನು ಪಡೆದ ಶ್ರೀ ವಿಷ್ಣು ಅದೆಷ್ಟು ಪುಣ್ಯವಂತನೋ ಎಂದು ಕೀರ್ತಿಸಿದನು. ಆಮೇಲೆ ನಾರದನು ವಿಷ್ಣುವಿನೆಡೆಗೆ ಮುಖಮಾಡಿ, “ಇಂತಹ ಪತಿವ್ರತಾ ಶಿರೋಮಣಿಯನ್ನು ಹೆಂಡತಿಯಾಗಿ ಪಡೆದರೂ ಸಹ ತಾವೇಕೆ ಸದಾಕಾಲ ಚಿಂತಾಕ್ರಾಂತರಾಗಿ ಇರುತ್ತೀರಿ?” ಎಂದು ಅವನನ್ನು ಪ್ರಶ್ನಿಸಿದನು.
🌺 ಅದಕ್ಕೆ ವಿಷ್ಣು “ನೀನು ಯಾರನ್ನಾದರೆ ಇಷ್ಟೊಂದು ಹೊಗಳುತ್ತಿದ್ದೀಯೋ ಆಕೆಯೇ ನನ್ನ ಚಿಂತೆಗೆ ಕಾರಣ” ಎಂದು ಹೇಳಿದ. “ಅದು ಹೇಗೆ? ಇಷ್ಟೊಂದು ಸೇವೆಯನ್ನು ಮಾಡುವ ಸತಿ ನಿನಗೆ ಸದಾ ಕಾಲ ನೆರಳಿನಂತೆ ಜೊತೆಯಿರುವಾಗ, ಈಕೆಯೇ ನಿನ್ನ ದುಃಖಕ್ಕೆ ಕಾರಣವೆಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ?” ಎಂದು ಕೇಳಿದ ನಾರದ. “ತೋರಿಸುತ್ತೇನೆ ನೋಡು” ಎಂದು ವಿಷ್ಣು ಹೇಳಿದ.
🌺 ಭೂಮಂಡಲದ ಒಂದು ದೇಶದಲ್ಲಿ ಒಂದು ಚಿಕ್ಕ ಗ್ರಾಮ. ಅಲ್ಲಿ ಭಗವಂತನನ್ನು ಯಾರೂ ಪೂಜಿಸುತ್ತಿರಲಿಲ್ಲ…. ಸತ್ಸಂಗವೆನ್ನುವುದನ್ನು ಅವರಿಗೆ ಗೊತ್ತೇ ಇರಲಿಲ್ಲ. ಎಲ್ಲರೂ ಯಾವಾಗಲೂ ಯಾವುದೋ ಒಂದು ಕೆಟ್ಟ ಕಾರ್ಯದಲ್ಲಿ ಮುಳುಗಿ ಹೋಗಿರುತ್ತಿದ್ದರು. ಭಗವಂತನು ಒಬ್ಬ ಹರಿಕಥಾ ಭಾಗವತನ ರೂಪದಲ್ಲಿ ಅಲ್ಲಿಗೆ ಹೋದನು. ಕೈಯ್ಯಲ್ಲಿ ತಂಬೂರಿ ಹಿಡಿದು ಆ ಊರಿನಲ್ಲಿ ಹರಿಕಥಾ ಕಾಲಕ್ಷೇಪವನ್ನು ಪ್ರಾರಂಭಿಸಿದ. ಆರಂಭದಲ್ಲಿ ಕೆಲವರು ಬಂದು ಹರಿಕಥೆಯನ್ನು ಕೇಳಲಾರಂಭಿಸಿದರು. ಬರ ಬರುತ್ತಾ ಊರಿನವರೆಲ್ಲಾ ಬಂದು ಹರಿಕಥೆಯನ್ನು ಕೇಳತೊಡಗಿದರು.
🌺 ಹರಿದಾಸನು ಮೂರು ಗಂಟೆಗೆ ಹರಿಕಥೆಯನ್ನು ಆರಂಭಿಸುತ್ತಿದ್ದಂತೆಯೇ, ಊರಿನಲ್ಲಿ ಇದ್ದವರೆಲ್ಲರೂ ಮನೆಗೆ ಬೀಗ ಹಾಕಿಕೊಂಡು ಬಂದು ಪ್ರವಚನ ನಡೆಯುತ್ತಿದ್ದ ಸ್ಥಳದಲ್ಲಿ ಕುಳಿತುಕೊಂಡು ಶ್ರದ್ಧಾ ಭಕ್ತಿಗಳಿಂದ ಕೇಳುತ್ತಿದ್ದರು. ಆರು ಗಂಟೆಯ ಸುಮಾರಿಗೆ ಅದು ಮುಗಿಯುತ್ತಿದ್ದಂತೆಯೇ ಪುನಃ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಹರಿದಾಸರು ಕಥೆ ಹೇಳುತ್ತಿದ್ದುದು ಕೇವಲ ಒಂದು ಗಂಟೆಯೇ ಆದರೂ ಸುಮಾರು ಎರಡು ಗಂಟೆ ಮುಂಚಿತವಾಗಿ ಹೋಗಿ ಕುಳಿತುಕೊಳ್ಳದೇ ಇದ್ದರೆ ಒಳ್ಳೆಯ ಜಾಗ ಸಿಗುವುದಿಲ್ಲವೆಂದು ಎಲ್ಲರೂ ಮುಂಚಿತವಾಗಿಯೇ ಮನೆಯಿಂದ ಹೊರಟು ಬಿಡುತ್ತಿದ್ದರು.
🌺 ಒಂದು ಮನೆಯಲ್ಲಿ ಅತ್ತೆ, ಆ ಮನೆಯ ಹೆಣ್ಣು ಮಕ್ಕಳು ತಮ್ಮ ಪಾಲಿನ ಕೆಲಸಗಳನ್ನು ಬೇಗ ಬೇಗನೆ ಮುಗಿಸಿಕೊಂಡು ತಯಾರಾಗಿ ಹರಿಕಥೆಯನ್ನು ಕೇಳಲು ಹೊರಟರು. ಅತ್ತೆಯಾದವಳು ಸೊಸೆಯನ್ನು ಕರೆದು ಉಳಿದ ಕೆಲಸಗಳನ್ನು ಬೇಗನೇ ಮುಗಿಸಿ ಮನೆಗೆ ಬೀಗ ಹಾಕಿಕೊಂಡು ಬಾ ಎಂದು ಹೇಳಿ ಎಲ್ಲರೂ ಹೊರಟು ಹೋದರು. ಸೊಸೆ ಬಾಕಿ ಉಳಿದಿದ್ದ ಕೆಲಸಗಳನ್ನೆಲ್ಲಾ ಮುಗಿಸಿ ಇನ್ನೇನು ಮನೆಗೆ ಬೀಗ ಹಾಕಬೇಕು ಎಂದು ಕೊಳ್ಳುತ್ತಿರುವಾಗ, ಒಬ್ಬ ಹಣ್ಣು ಹಣ್ಣು ಮುದುಕಿ ಕೋಲೂರುತ್ತಾ ಅತ್ತ ಕಡೆ ಬಂದಳು. ಆಕೆ ತೊಟ್ಟುಕೊಂಡಿದ್ದ ಮಾಸಿದ ಬಟ್ಟೆಗಳು ಆಕೆಯ ಬಡತನವನ್ನು ಎತ್ತಿ ತೋರುತ್ತಿತ್ತು. ಆಕೆ “ಅಮ್ಮಾ ತಾಯಿ ಸ್ವಲ್ಪ ಕುಡಿಯಲು ನೀರು ಕೊಡು” ಎಂದು ಆ ಮನೆಯ ಸೊಸೆಯನ್ನು ಕೇಳಿದಳು.
🌺 ತಾನು ಅತ್ತಕಡೆ ಹರಿಕಥೆಯನ್ನು ಕೇಳಲು ಹೋಗುವ ಗಡಿಬಿಡಿಯಲ್ಲಿರುವಾಗ ಈಕೆ ಅದೆಲ್ಲಿಂದ ವಕ್ಕರಿಸಿದಳು ಎಂದು ಮನಸ್ಸಿನಲ್ಲೇ ಗೊಣಗಿಕೊಂಡಳು ಆ ಸೊಸೆ. ಆದರೆ ಹರಿದಾಸರು ಕಥೆಯೊಂದರಲ್ಲಿ ದಾಹವಾದವರಿಗೆ ನೀರನ್ನು ಕೊಡುವುದು ಮತ್ತು ಹಸಿದವರಿಗೆ ಅನ್ನವಿಕ್ಕುವುದು ಪರಮ ಧರ್ಮವೆಂದು ಹೇಳಿದ್ದು ನೆನಪಾಯಿತು. ಒಂದು ವೇಳೆ ನಾನು ಈಕೆಗೆ ನೀರು ಕೊಡದಿದ್ದರೆ ನನಗೆ ಪಾಪ ಬರುತ್ತದೆ ಎಂದು ಆಲೋಚಿಸಿದಳು.
🌺 ಆಕೆ “ಅಜ್ಜಿ ನಾನು ಹರಿಕಥೆಯನ್ನು ಕೇಳಲು ಹೋಗುತ್ತಿದ್ದೇನೆ, ಬೇಗನೇ ಹೋಗದಿದ್ದರೆ ಅಲ್ಲಿ ಕುಳಿತುಕೊಳ್ಳಲು ಸರಿಯಾದ ಸ್ಥಳ ಸಿಗುವುದಿಲ್ಲ. ಕುಡಿಯಲು ನೀರನ್ನು ತಂದು ಕೊಡುತ್ತೇನೆ ಆದರೆ ನೀನು ಅದನ್ನು ಬೇಗನೇ ಕುಡಿದು ಮುಗಿಸಬೇಕು” ಎಂದು ಹೇಳಿದಳು. “ಗಟಗಟನೇ ಕುಡಿಯುತ್ತೀನಮ್ಮ ನನಗೂ ದಾಹ ವಿಪರೀತವಾಗಿದೆ” ಎಂದು ಆ ಮುದುಕಿ ಹೇಳಿದಳು.
🌺 ಸೊಸೆ ಮನೆಯೊಳಗೆ ಹೋಗಿ ಒಂದು ದೊಡ್ಡ ಲೋಟದಲ್ಲಿ ಕುಡಿಯಲು ನೀರು ತಂದು ಕೊಟ್ಟಳು. ಆ ಮುದುಕಿ ನೀರು ಕುಡಿದು ಆ ಲೋಟವನ್ನು ಹಿಂದಿರುಗಿ ಕೊಟ್ಟಳು. ಅದು ಮಿರಮಿರನೆ ಮಿಂಚುತ್ತಿದ್ದ ಬಂಗಾರದ ಲೋಟವಾಗಿತ್ತು!” “ಅಜ್ಜಿ ನಾನು ನಿನಗೆ ಕೊಟ್ಟದ್ದು ಈ ಲೋಟದಲ್ಲಿ ಅಲ್ಲ. ನಾನು ನಿನಗೆ ಕೊಟ್ಟ ಲೋಟವನ್ನು ಹಿಂದಿರುಗಿ ಕೊಡುವ ಬದಲು ನಿನ್ನ ಬಳಿ ಇದ್ದ ಲೋಟವನ್ನು ನನಗೆ ಕೊಟ್ಟಂತಿದೆ” ಎಂದು ಸೊಸೆ ಹೇಳಿದಳು. “ನೀನು ನನಗೆ ಕೊಟ್ಟದ್ದು ಇದೇ ಲೋಟವನ್ನು. ನನ್ನ ಬಳಿ ಬೇರೆ ಲೋಟವಿಲ್ಲ ನೋಡು” ಎಂದು ಆ ಮುದುಕಿ ಹೇಳಿದಳು. “ನಾನು ತಾಮ್ರದ ಲೋಟವನ್ನು ಕೊಟ್ಟಿದ್ದು ಅಜ್ಜಿ”
🌺 “ನನ್ನ ಬಳಿ ಬಂಗಾರದ ಲೋಟವಾದರೂ ಎಲ್ಲಿಯದು ತಾಯಿ. ಹೇಳಿ ಕೇಳಿ ನಾನು ಭಿಕ್ಷೆ ಬೇಡುವವಳು, ಧರಿಸಲೂ ಸಹ ನನ್ನ ಬಳಿ ಸರಿಯಾದ ಬಟ್ಟೆಗಳಿಲ್ಲ. ನನ್ನ ಚೀಲವನ್ನು ನೋಡು. ಇದರಲ್ಲಿ ಏನೂ ಇಲ್ಲ. ನೀನು ಕೊಟ್ಟ ಪಾತ್ರೆಯನ್ನೇ ನಿನಗೆ ಹಿಂದಿರುಗಿ ಕೊಟ್ಟಿದ್ದೇನೆ”. ನಮ್ಮ ಮನೆಯಲ್ಲಿ ಗುಲಗಂಜಿಯಷ್ಟು ಬಂಗಾರವೂ ಇಲ್ಲ ಅಜ್ಜಿ. ಆದರೂ ಸಹ ನಾವು ಸಂತೋಷವಾಗಿ ಜೀವನ ಮಾಡುತ್ತಿದ್ದೇವೆ ಎನ್ನುವುದು ಬೇರೆ ವಿಷಯ. ನಾನು ಖಂಡಿತವಾಗಿಯೂ ನಿನಗೆ ಕೊಟ್ಟದ್ದು ಮಾತ್ರ ತಾಮ್ರದ ಲೋಟವೇ, ನನಗೀಗಾಲೇ ಸಮಯವಾಗುತ್ತಿದೆ. ನನ್ನ ತಾಮ್ರದ ಲೋಟವನ್ನು ನನಗೆ ಕೊಟ್ಟರೆ ಮನೆಗೆ ಬೀಗ ಹಾಕಿಕೊಂಡು ಹರಿಕಥೆ ನಡೆಯುವಲ್ಲಿಗೆ ಹೋಗುತ್ತೇನೆ” ಎಂದಳು ಆ ಮನೆಯ ಸೊಸೆ. “ನಾನೇನು ಮಾಡಲಿ ತಾಯಿ, ನಾನು ಏನು ಮುಟ್ಟಿದರೂ ಅದು ಬಂಗಾರವಾಗಿ ಹೋಗುತ್ತದೆ. ಬಹುಶಃ ಅದರಿಂದಾಗಿಯೇ ನೀನು ತಾಮ್ರದ ಲೋಟದಲ್ಲಿ ನೀರು ಕೊಟ್ಟರೂ ಸಹ ಅದು ನನ್ನ ಕೈ ತಾಕುತ್ತಿದ್ದಂತೆ ಬಂಗಾರವಾಗಿರಬಹುದು” ಎಂದು ಹೇಳಿತು ಅಜ್ಜಿ.
🌺”ಹಾಗಾದರೆ ಹೀಗೆ ಒಳಗೆ ಬಾ” ಎಂದು ಸೊಸೆ ಆ ಅಜ್ಜಿಯನ್ನು ಮನೆಯೊಳಕ್ಕೆ ಕರೆದುಕೊಂಡು ಹೋದಳು. “ಮೊದಲು ಇಲ್ಲಿರುವ ಬೀಗದ ಕೈಯ್ಯನ್ನು ಮುಟ್ಟು ನೋಡೋಣ” ಎಂದು ಮೆಲುದನಿಯಲ್ಲಿ ಹೇಳಿದಳು ಸೊಸೆ. ಆ ಅಜ್ಜಿ ಬೀಗವನ್ನು ಮುಟ್ಟುತ್ತಿದ್ದಂತೆಯೇ ಅದು ಬಂಗಾರವಾಯಿತು. “ಈ ಬಾಗಿಲ ಹಿಡಿಯನ್ನು ಮುಟ್ಟು ಎಂದ ಸೊಸೆ ಹೇಳಿದ ಕೂಡಲೇ ಅಜ್ಜಿ ಅದನ್ನೂ ಸಹ ಮುಟ್ಟಿದಳು, ಅದೂ ಸಹ ಬಂಗಾರವಾಯಿತು. ಹೀಗೆ ಸೊಸೆ ತನ್ನ ಮನೆಯಲ್ಲಿದ್ದ ಒಂದೊಂದೇ ಸಾಮಾನನ್ನು ಮುಟ್ಟುವಂತೆ ಹೇಳಿದ ಕೂಡಲೇ ಆ ಅಜ್ಜಿ ಅವನ್ನು ಮುಟ್ಟುವುದೇ ತಡ ಅವು ಬಂಗಾರದ್ದಾಗಿ ಮಾರ್ಪಡುವುದೂ ನಡೆಯಿತು. ಈ ಸುವರ್ಣ ಕ್ರಿಯೆಯಲ್ಲಿ ಮುಳುಗಿ ಆ ಸೊಸೆ ತಾನು ಹರಿಕಥೆ ಕೇಳಲು ಹೋಗಬೇಕಾಗಿದ್ದ ವಿಷಯವನ್ನೇ ಮರೆತು ಹೋದಳು. ಮರುದಿನ ಬೆಳಿಗ್ಗೆ ಆ ಸೊಸೆಯ ನೆರೆಹೊರೆಯವರು, “ನಿನ್ನೆ ಹರಿಕಥೆ ಕೇಳಲಿಕ್ಕೆ ಏಕೆ ಬರಲಿಲ್ಲ? ಹರಿದಾಸರು ನಿನ್ನೆ ಕಥೆಯನ್ನು ಬಹಳ ಸೊಗಸಾಗಿ ಹೇಳಿದರು!” ಎಂದರು.
🌺”ಕಥೆ ಕೇಳಿದರೆ ಏನು ಹೊಟ್ಟೆ ತುಂಬುತ್ತದೆಯೇ? ನಿನ್ನೆ ನಮ್ಮ ಮನೆಗೆ ಒಬ್ಬ ಹಣ್ಣು ಹಣ್ಣು ಮುದುಕಿ ಬಂದಿದ್ದಳು. ಆಕೆ ಮುಟ್ಟಿದ್ದೆಲ್ಲಾ ಬಂಗಾರವಾಯಿತು” ಎಂದು ಆ ಸೊಸೆ ಹೇಳಿದಳು.”ಹೌದಾ?” ಎಂದು ಅಲ್ಲಿ ನೆರೆದಿದ್ದವರೆಲ್ಲರೂ ಒಂದೇ ಉಸಿರಿನಲ್ಲಿ ಕೇಳಿದರು. ಅವರೆಲ್ಲರೂ ಸೇರಿಕೊಂಡು ಆ ಮುದುಕಿಯ ಬಳಿಗೆ ಹೋದರು. ನಮ್ಮ ಮನೆಗೆ ಬಾ ತಮ್ಮ ಮನೆಗೆ ಬಾ ಎಂದು ಬೇಡಿಕೊಂಡರು. ಎಲ್ಲರೂ ಸರತಿಯ ಸಾಲಿನಲ್ಲಿ ನಿಂತರು. ಮುದುಕಿ ಒಬ್ಬರ ನಂತರ ಒಬ್ಬರ ಮನೆಗೆ ಬರುವುದಾಗಿ ಹೇಳಿ ಅದರಂತೆ ಒಬ್ಬೊಬ್ಬರ ಮನೆಗೆ ಹೋಗಲಾರಂಭಿಸಿದಳು. ಆಗ ಆ ಊರಿನಲ್ಲಿ ಹರಿಕಥೆ ನಡೆಯುವಲ್ಲಿಗೆ ಹೋಗಿ ಕುಳಿತುಕೊಳ್ಳುವವರೇ ಇಲ್ಲವಾದರು. ಮಾರುವೇಷದಲ್ಲಿದ್ದ ವಿಷ್ಣುವು ತನ್ನ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೈಯ್ಯಲ್ಲಿ ತಂಬೂರಿಯನ್ನು ಹಿಡಿದುಕೊಂಡು ಎಷ್ಟು ಕುಣಿದರೂ ಸಹ ಒಬ್ಬರೇ ಒಬ್ಬರು ಹರಿಕಥೆ ಕೇಳಲು ಬರಲಿಲ್ಲ.
🌺 ಆಗ ಅಲ್ಲಿಗೆ ನಾರದನು ಬಂದನು. ವಿಷ್ಣು ನಾರದನೊಂದಿಗೆ “ನೋಡಿದೆಯಾ, ನನ್ನ ಅವಶ್ಯಕತೆ ಎಲ್ಲಿದೆಯೋ ನಾನು ಅಲ್ಲಿಗೆ ಹೋಗುತ್ತೇನೆ. ಅಲ್ಲಿಯವರಿಗೆ ಒಳಿತಾಗುತ್ತದೆ. ಅವರು ತೃಪ್ತಿಯಾಗಿ ಬದುಕ ತೊಡಗುತ್ತಾರೆ. ಆದರೆ ನಾನು ಹೋದ ಕಡೆಯೆಲ್ಲೆಲ್ಲಾ ನನ್ನ ಸತೀಮಣಿ ನನ್ನನ್ನು ಹುಡುಕಿಕೊಂಡು ಬರುತ್ತಾಳೆ. ಆಕೆ ಬಂದ ನಂತರ ಇನ್ನೇನಿದೆ ನನ್ನ ಮುಸುಡಿಯನ್ನು ಮೂಸಿ ನೋಡುವವರೂ ಇಲ್ಲವಾಗುತ್ತಾರೆ. ಆಗ ನಾನು ಸಹಜವಾಗಿಯೇ ಮತ್ತೊಂದು ಊರಿಗೆ ಹೋಗಬೇಕಾಗುತ್ತದೆ” ಎಂದು ಹೇಳಿದ. ಭಗವಂತನ ಹಿಂದೆ ಲಕ್ಷ್ಮಿ ಬಂದಮೇಲೂ ಸಹ ನಮ್ಮ ಶ್ರದ್ಧೆಯನ್ನು ನಾವು ಭಗವಂತನ ಮೇಲೆಯೇ ಇರಿಸಿಕೊಂಡರೆ ಭಗವಂತನೊಂದಿಗೆ ಅವನೊಂದಿಗೆ ಲಕ್ಷ್ಮಿಯೂ ಅಲ್ಲಿಯೇ ಇರುತ್ತಾಳೆ. ಮನುಷ್ಯರು ದೇವರನ್ನು ನಿರ್ಲಕ್ಷಿಸಿದರೆ ಅವನೊಂದಿಗೆ ಲಕ್ಷ್ಮಿ ಸಹ ಅಲ್ಲಿಂದ ಹೊರಟು ಹೋಗುತ್ತಾಳೆ.
ನಾರದ ಮುನಿಯ ಬಗ್ಗೆ ಕಡಿಮೆ ತಿಳಿದಿರುವ ಸಂಗತಿಗಳು | Lesser Known Facts about Narada Muni
- 1. ದೇವಋಷಿ ನಾರದರು ನಾರದ ಮುನಿ ಎಂದು ಕರೆಯಲ್ಪಡುವ ಬ್ರಹ್ಮಚಾರಿ.
- 2. ಅವನು ಬ್ರಹ್ಮ (ಬ್ರಹ್ಮಾಂಡದ ಸೃಷ್ಟಿಕರ್ತ) ಮತ್ತು ಜ್ಞಾನದ ದೇವತೆಯಾದ ದೇವಿ ಸರಸ್ವತಿಯ ಮಗ.
- 3. ನಾರದ ಮುನಿಯು ಬ್ರಹ್ಮದೇವನ ಕಂಠದಿಂದ ಜನಿಸಿದನು
- 4. ಅವರ ಪ್ರತಿ ಮಾತಿನ ಮೊದಲು ಮತ್ತು ನಂತರ ಅವರು “ನಾರಾಯಣ ನಾರಾಯಣ” ಎಂದು ಹೇಳುವುದು ಭಗವಾನ್ ವಿಷ್ಣುವಿನ ಮೇಲಿನ ಅವರ ಭಕ್ತಿಯನ್ನು ತೋರಿಸುತ್ತದೆ.
- 5. ಅವರನ್ನು ದೇವ ಋಷಿ ಎಂದು ಶ್ಲಾಘಿಸಲಾಗಿದೆ ಎಂದರೆ ದೇವತೆಗಳಿಗೆ ಸಮಾನವಾದ ಶಕ್ತಿಯನ್ನು ಹೊಂದಿರುವ ಋಷಿ.
- 6. ನಾರದ ಎಂದರೆ ಜ್ಞಾನವನ್ನು ಕೊಡುವವನು ಎಂದರ್ಥ.
- 7. ಅವರು ವೇದವ್ಯಾಸ, ಪ್ರಹ್ಲಾದ ಮತ್ತು ಮಹಾರಾಜ ಧ್ರುವ ಅವರ ಮಹಾನ್ ಗುರು
- 8. ದೈವಿಕ ಋಷಿ ನಾರದ ಮುನಿ ವೀಣೆಯನ್ನು ಮಹತಿ ಎಂದು ಕರೆಯಲಾಗುತ್ತಿತ್ತು
