ಮಾರ್ಗಶಿರ ಮಾಸದ ಗುರುವಾರ ಲಕ್ಷ್ಮೀ ವ್ರತ

ಮಾರ್ಗಶಿರ ಮಾಸದ ಗುರುವಾರ ಲಕ್ಷ್ಮೀ ವ್ರತ.

 ಈ ವ್ರತಾಚರಣೆಯ ನಿಯಮಗಳು. 

 ಈ ವ್ರತವನ್ನು ಮಾರ್ಗಶಿರ ಮಾಸದ ಮೊದಲನೇ ಗುರುವಾರ ಸಂಕಲ್ಪ ಮಾಡಿ ಹಿಡಿದು ಅದೇ ಮಾರ್ಗಶಿರ ಮಾಸದ ಕೊನೆಯ ಗುರುವಾರ ಪೂಜೆ ಮಾಡಿ ಮುಕ್ತಾಯ ಮಾಡಬೇಕು.

 ವ್ರತ ಮಾಡುವವರು ಉಪವಾಸವಿದ್ದು ರಾತ್ರಿ ಮನೆಯವರೊಂದಿಗೆ ಊಟ ಮಾಡಬೇಕು. 

ಈ ವ್ರತ ಉದ್ಯಾಪನ ಮಾಡಿದ ಮೇಲೂ ಒಂದು ವರ್ಷ ಪ್ರತಿ ಗುರುವಾರ ರಾತ್ರಿ ಲಕ್ಷ್ಮಿ ಸ್ತೋತ್ರವನ್ನು ಓದಬೇಕು. 

ವ್ರತ ಹಿಡಿದ ಮಹಿಳೆ ಅಶಕ್ತಳಾದರೆ ಬೇರೆ ಹೆಣ್ಣುಮಕ್ಕಳು ಈ ಪೂಜೆಯನ್ನು ಮಾಡಬಹುದು. ಆದರೆ ವ್ರತ ಹಿಡಿದವರೇ ಉಪವಾಸ ಮಾಡಬೇಕು. 

ಮಾರ್ಗಶಿರ ಮಾಸದ ಕೊನೆಯ ಗುರುವಾರ ರಾತ್ರಿ 7 ಜನ ಮುತೈದೆಯರಿಗೆ ಅಥವಾ ಬಾಲಕಿಯರಿಗೆ ಅರಿಸಿಣ ಕುಂಕುಮ ಕೊಟ್ಟು ಊಟ ನೀಡಿ ಎಲೆ ಅಡಿಕೆ ದಕ್ಷಿಣೆ ಕೊಟ್ಟು ನಮಸ್ಕರಿಸಬೇಕು.

35 ಜನ ಮುತೈದೆಯರ ಪೂಜಾ ಫಲ ನಿಮ್ಮದಾಗುವುದು.

 ಇದರಿಂದ ಧನ ಧಾನ್ಯಾದಿ ಸರ್ವಸಂಪತ್ತು ಲಭಿಸುವುದು. ಕಾರಣ ಶುದ್ಧ ಮನಸ್ಸು ಹಾಗೂ ಸ್ವಚ್ಛ ಶರೀರದಿಂದ ಶಾಂತಚಿತ್ತಳಾಗಿ ಪೂಜೆಯನ್ನು ಆಚರಿಸಬೇಕು. 

ಹೀಗೆ ಲಕ್ಷ್ಮೀ ಸ್ಥಾಪನೆ ಮಾಡಿ ಗುರುವಾರ ದಿವಸ ಮುತ್ತೈದೆ ನಸುಕಿನಲ್ಲಿ ಎದ್ದು ತಲೆಸ್ನಾನ ಮಾಡಿ, ಮಡಿ ಬಟ್ಟೆ ಉಟ್ಟು, ಹು ಮುಡಿದು, ಅರಿಷಿಣ ಕುಂಕುಮ ಹಚ್ಚಿಕೊಂಡು, 

ಲಕ್ಷ್ಮಿಯನ್ನು ಕುಳ್ಳಿರಿಸುವ ಜಾಗವನ್ನು ಗೊಮಯದಿಂದ ಸಾರಿಸಿ ರಂಗೋಲಿ ಹಾಕಿ ದೇವಿಯನ್ನು ಕುಳ್ಳಿರಿಸಲು ಮಣೆ ಅಥವಾ ಮಂಟಪ ಮಾಡಿ, ಮಣೆಯ ಮೇಲೆ ಅಕ್ಕಿ ಹಾಕಿ, ಅದರಲ್ಲಿ ಓಮ್ ಅಥವಾ ಶ್ರೀ ಎಂದು ಬರೆಯಬೇಕು.

 ಬೆಳ್ಳಿ ಅಥವಾ ತಾಮ್ರದ ತಂಬಿಗೆಗೆ ಮಡಿಯಿಂದ ನೀರು ತುಂಬಿ ಅದರೊಳಗೆ ಗರಿಕೆ ಪತ್ರೆ ದಕ್ಷಿಣೆ  ಇಡೀ ಅಡಿಕೆ ಹಾಕಿ ತಂಬಿಗೆ ಬಾಯಿಗೆ 5 ವೀಳ್ಯದೆಲೆ ಅಂಗಾತ ಇಟ್ಟು ಅದರ ಮೇಲೆ ಜುಟ್ಟು ಮೇಲೆ ಮಾಡಿ ತೆಂಗಿನ ಕಾಯಿ ಇಡಬೇಕು, ಇದು ಕಳಶ. ಕಳಶದ ಹಿಂದೆ ಲಕ್ಷ್ಮಿಯ ಭಾವಚಿತ್ರವನ್ನು ಇಡಬಹುದು. 

ಕಳಶಕ್ಕೆ ಹೂವಿನ ಮಾಲೆ ಗೆಜ್ಜೆವಸ್ತ್ರ ಹಾಕಿ ಎರಡು ಕಡೆ ದೀಪ ಹಚ್ಚಬೇಕು. ಕಳಶದ ಮುಂದೆ ನೈವೇದ್ಯಕ್ಕಾಗಿ ಹಣ್ಣುಕಾಯಿ, ಎಲೆ ಅಡಿಕೆ, ದಕ್ಷಿಣೆ ಇರುವ ತಟ್ಟೆಯನ್ನು ಇಡಬೇಕು. 

ಕಳಶದ ಮುಂದೆ ಬಲಗಡೆ ಎಡಗಡೆ ಮಣೆ ಹಾಕಬೇಕು. ಎದುರುಗಡೆ ಮಣೆ ಮೇಲೆ ವ್ರತ ಮಾಡುವ ಮುತೈದೇ ಕುಳಿತು ಕೊಳ್ಳಬೇಕು. ಬಲಗಡೆ ಮಣೆ ಮೇಲೆ ಓದುಬರಹ ಬಲ್ಲ ಪತಿ ಕುಳಿತು ಲಕ್ಷ್ಮೀ ಪುಸ್ತಕದ ಮಂತ್ರಗಳನ್ನು ಹೇಳಬೇಕು. 

ಹೇ ಜಗಜ್ಜನನಿ ಕರುಣಾಮಯಿ ಅಲ್ಪಳಾದ ನನ್ನ ಎಲ್ಲಾ ಮನದ ಕಾಮನೆಗಳನ್ನು ಈಡೇರಿಸಿ ಕೊಡು ತಾಯಿ ಎಂದು ಮನಸ್ಸಿನಲ್ಲಿ ಬೇಡಿಕೊಂಡು ನಮಸ್ಕಾರ ಮಾಡಿ ಮಣೆಯ ಮೇಲೆ ಕುಳಿತುಕೊಳ್ಳಬಹುದು. 

ಈ ಗುರುವಾರ ಪುಸ್ತಕದಲ್ಲಿ ಕೊಡಲಾದ ಮಂತ್ರವನ್ನು ಹೇಳುತ್ತಾ ಪೂಜೆ ಮಾಡಬೇಕು. ಜೊತೆಗೆ ಮಹಾಗಣಪತಿ ಸ್ಮರಣೆ ಮಾಡಬೇಕು. 

ನಂತರ ಧೂಪ,ದೀಪ  ಬೆಳಗಿ ಅಕ್ಷತೆ ಕಾಳು ಹಾಕಿ ನಿಂತಲ್ಲೇ ಪ್ರದಕ್ಷಿಣೆ ಹಾಕಿ ಹಣೆ ಹಚ್ಚಿ ನಮಸ್ಕಾರ ಮಾಡಬೇಕು. 

ನಂತರ ಗುರುವಾರ ಲಕ್ಶ್ಮೀ ಪೂಜೆ ಮಹಿಮೆ ಕಥೆ  ಪೂಜೆ ತರುವಾಯ ಓದಬೇಕು .ಹೀಗೆ ಭಕ್ತಿಯಿಂದ ಗುರುವಾರ ಲಕ್ಷ್ಮೀ ಪೂಜೆ ಮಾಡಬೇಕು. 

ಈ ತಿಂಗಳಿನಲ್ಲಿ ಬರುವ 4 ಗುರುವಾರಗಳು ಪೂಜೆ ಮಾಡಬೇಕು

ಈ ನಾಲ್ಕು ಮಾರ್ಗಶಿರ ಗುರುವಾರದಂದು ಪೂಜೆ ನಡೆಸಬೇಕು. 

Leave a Comment

Your email address will not be published. Required fields are marked *