ನಾವು ಹುಟ್ಟಿದಾಗಿನಿಂದ ಈವತ್ತಿನ ವರೆಗೂ ಇದುನ ಕೇಳ್ತಾನೆ ಬಂದಿದ್ದೀವಿ . ಆದರೆ, ಏನು ಈ ದೇವಗಣ ಮನುಷ್ಯಗಣ ಮತ್ತೆ ರಾಕ್ಷಸಗಾನ ಅಂದ್ರೆ? ನಿಮಗೂ ಈ ಸಂಶಯ ಬಂದಿರುತ್ತೆ ಅಲ್ವಾ ?
ದೇವಗಣ ಅಂದ್ರೆ ಅವ್ರು ತುಂಬಾ ಒಳ್ಳೆಯವರಾ? ಮನುಷ್ಯ ಗಣ ಅಂದ್ರೆ ಸಾಮಾನ್ಯರ ? ರಾಕ್ಷಸ ಗಣ ಅಂದ್ರೆ ತುಂಬಾ ಕೆಟ್ಟವರ?
ಛೇ ಛೇ ! ಇಲ್ಲಾ ಇಲ್ಲಾ, ಹಾಗೆಲ್ಲ ಏನು ಇಲ್ಲಾ !
ಬನ್ನಿ ಹಾಗಾದ್ರೆ, ಈ ಗಣಗಳು ಅಂದ್ರೆ ಏನು ಅಂತ ಅರ್ಥಮಾಡಿಕೊಳ್ಳೋಣ.
ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತವೆ .
27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತದೆ ಅಂತ ಹೇಳ್ಬಹುದು.
ಮೊದಲನೇ ಗಣ – ದೇವ ಗಣ
Index of Important Points
ಮೊದಲನೆಯದಾಗಿ ನಿಮ್ಮ ಜನ್ಮ ಪುಷ್ಯ ನಕ್ಷತ್ರ, ಪುನರ್ವಸು ನಕ್ಷತ್ರ, ಶ್ರವಣ ನಕ್ಷತ್ರ, ಅನುರಾಧ ನಕ್ಷತ್ರ, ಅಶ್ವಿನಿ ನಕ್ಷತ್ರ, ಸ್ವತಿ ನಕ್ಷತ್ರ, ಮೃಗಶಿರ ಹಾಗೂ ರೇವತಿ ನಕ್ಷತ್ರ ನಕ್ಷತ್ರಗಳಲ್ಲಿ ನೀವು ಜನಿಸಿದರೆ ನೀವು ದೇವಗಣ ದವರ್ ಆಗಿರುತ್ತೀರಿ.
ದೇವ ಗಣದವರು ಹೆಸರಿನಂತೆಯೇ ಇವರ ಸ್ವಭಾವವು ದೇವರ ಹಾಗೆ ಇರುತ್ತದೆ ಎಂದು ಹೇಳಬಹುದು. ಸಾಧಾರಣ ಜೀವನ ಮತ್ತು ಉಚ್ಚ ಮನಸ್ಸಿನವರ ಆಗಿರುತ್ತಾರೆ. ಸರಳವಾಗಿ ರುತ್ತಾರೆ ನೇರವಾಗಿ ಇರುತ್ತಾರೆ ಮತ್ತು ಜಗಳದಿಂದ ದೂರವಾಗಿರುತ್ತದೆ. ಇವರು ದಾನ-ಧರ್ಮ ಮಾಡುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಯಾರಾದರೂ ಇವರಿಗೆ ತೊಂದರೆಯನ್ನು ಕೊಟ್ಟರೆ ಸೇಡು ತೀರಿಸಿಕೊಳ್ಳುವ ಬಗ್ಗೆ ಯೋಚಿಸುವುದಿಲ್ಲ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ. ಇವರು ಯಾರಿಗಾದರೂ ಸಲಹೆ ಕೊಟ್ಟರೆ ಎಲ್ಲವನ್ನು ಕೇಳುತ್ತಾರೆ ಎಂದು ಹೇಳಬಹುದು.ಇವರು ಕಮ್ಮಿ ಭೋಜನವನ್ನು ಸೇವಿಸುತ್ತಾರೆ ಇವರು ಹೃದಯದಿಂದ ಕೋಮಲ ಮನಸ್ಸಿನವನಾಗಿದ್ದರೆ.
ಎರಡನೇ ಗಣ – ಮನುಷ್ಯ ಗಣ
ನೀವು ಪೂರ್ವಾಷಾಡ ನಕ್ಷತ್ರ, ಉತ್ತರಾಷಾಡ ನಕ್ಷತ್ರ, ಪೂರ್ವ ಪಾಲ್ಗುಣಿ ನಕ್ಷತ್ರ, ಉತ್ತರ ಪಾಲ್ಗುಣಿ ನಕ್ಷತ್ರ, ಉತ್ತರ ಭದ್ರಪದ ನಕ್ಷತ್ರ, ಪೂರ್ವಭಾದ್ರಪದ ಭರಣಿ ನಕ್ಷತ್ರ, ರೋಹಿಣಿ ನಕ್ಷತ್ರ, ಆರಿದ್ರ ನಕ್ಷತ್ರಗಳಲ್ಲಿ ಜನಿಸಿದ್ದರೆ ನೀವು ಮನುಷ್ಯ ಗಣದವರು ಆಗಿರುತ್ತೀರಿ. ಈ ಗಣದಲ್ಲಿ ಜನಿಸಿದವರು ಕರ್ಮ ಶೀಲ ರಾಗಿರುತ್ತಾರೆ. ಕರ್ಮದಲ್ಲಿ ವಿಶ್ವಾಸವಿರುವ ರಾಗಿರುತ್ತಾರೆ.
ಆಕರ್ಷಕ ಮತ್ತು ಎಲ್ಲರನ್ನೂ ಪ್ರಭಾವಿಸುವ ದೃಢನಿರ್ಧಾರವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರು ಬೇಗ ಚಿಂತೆಗೆ ಒಳಗಾಗುತ್ತಾರೆ ಎಂದು ಹೇಳಬಹುದು. ಇವರು ನಿನ್ನೆ ಮತ್ತು ನಾಳೆಯ ಬಗ್ಗೆ ಹೆಚ್ಚಿಗೆ ಯೋಚಿಸುವುದಿಲ್ಲ. ಇವರು ಸ್ಥಿರವಾಗಿ ಇರುವುದನ್ನು ಇಷ್ಟಪಡುತ್ತಾರೆ. ಇವರು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಹೆಚ್ಚು ಒಳ್ಳೆಯದನ್ನು ಬಯಸುವುದಿಲ್ಲ ಸಾಮಾನ್ಯವಾಗಿ ಇರುತ್ತಾರೆ.
ಮೂರನೇ ಗಣ – ರಾಕ್ಷಸ ಗಣ
ನೀವು ಆಶ್ಲೇಷ ನಕ್ಷತ್ರ, ವಿಷಕ ನಕ್ಷತ್ರ, ಕೃತಿಕ ನಕ್ಷತ್ರ, ಮಕ ಜೇಷ್ಠ ಮೂಲ ಶತಭಿಷ ನಕ್ಷತ್ರ, ಜೇಷ್ಠ ನಕ್ಷತ್ರ ಹಾಗೂ ಚಿತ್ತ ನಕ್ಷತ್ರಗಳಲ್ಲಿ ಜನಿಸಿದರ ನೀವು ರಾಕ್ಷಸ ಗಣ ದವರ್ ಆಗಿರುತ್ತೀರಿ.ಇವರು ಧೈರ್ಯ ಮತ್ತು ಉತ್ಸಾಹಿ ಗಳಾಗಿರುತ್ತಾರೆ. ಇವರಿಗೆ ಒಳ್ಳೆಯ ಗುಣಗಳು ಇರುತ್ತದೆ ಆದರೆ ಸ್ವಲ್ಪ ನಕಾರಾತ್ಮಕ ಯೋಚನೆ ಇರುತ್ತದೆ.
ಇವರು ಸ್ವಲ್ಪ ಆತುರದ ಸ್ವಭಾವದವರಾಗಿರುತ್ತಾರೆ. ಯಾವಾಗಲೂ ತಮ್ಮ ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ. ಇವರು ಹೆಚ್ಚು ಹೆದರುವುದಿಲ್ಲ ಇಚ್ಛಾಶಕ್ತಿ ಹೆಚ್ಚಾಗಿರುತ್ತದೆ. ಇವರಿಗೆ ಸಿಟ್ಟು ಹೆಚ್ಚಾಗಿರುತ್ತದೆ ಮತ್ತು ಇವರ ಮಾತು ಸ್ವಲ್ಪ ಕಠೋರ ವಾಗಿರುತ್ತದೆ, ಇವರು ಯೋಗ ಧ್ಯಾನ ಮಾಡುವುದರಿಂದ ತಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವುದರಿಂದ ಇವರಿಗೆ ಒಳ್ಳೆಯದಾಗುತ್ತದೆ.
ನಕ್ಷತ್ರಗಳ ಗಣ ಕೂಟ
ಪ್ರತೀ ನಕ್ಷತ್ರವನ್ನು ದೇವ-ಮನುಷ್ಯ-ರಾಕ್ಷಸ ಗಣ ಎಂಬ ಮೂರು ಗಣ ಕೂಟಗಳ ವಿಭಾಗಗಳಾಗಿ ವಿಂಗಡಿಸಲಾಗಿದೆ.
ಇದನ್ನು ತಿಳಿದುಕೊಳ್ಳುವುದರಿಂದ ಉಪಯೋಗ ಏನೆಂದರೆ…
ಮದುವೆ; ವ್ಯವಹಾರ; ಗೆಳೆತನ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ಇತರರೊಂದಿಗೆ ಸಂವಹನಕ್ಕೆ ನಮ್ಮ ನಮ್ಮ ಗಣಕ್ಕೆ ಸರಿ ಹೊಂದುವವರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ…!
ಉದಾಹರಣೆಗೆ….
- ದೇವಗಣ+ದೇವ ಗಣ = ಆಗಿ ಬರುತ್ತದೆ.
- ದೇವ ಗಣ + ರಾಕ್ಷಸ ಗಣ =ಆಗಿ ಬರೋದಿಲ್ಲ.
- ರಾಕ್ಷಸ ಗಣ + ರಾಕ್ಷಸ ಗಣ = ಆಗಿ ಬರುತ್ತದೆ
- ಮನುಷ್ಯ ಗಣ+ದೇವ ಗಣ = ಆಗಿ ಬರುತ್ತದೆ.
- ಮನುಷ್ಯ ಗಣ+ರಾಕ್ಷಸ ಗಣ = ಆಗಿ ಬರೋದಿಲ್ಲ
…..ಈ ರೀತಿ ನೋಡಿಕೊಳ್ಳಿ…
೨೭ ನಕ್ಷತ್ರಗಳು ಈ ಮೂರು ಗಣಕೂಟಗಳಲ್ಲಿ ಹಂಚಿ ಹೋಗಿದೆ ಯಾವ ನಕ್ಷತ್ರ ಯಾವ ಗಣಕೂಟಕ್ಕೆ ಸೇರುವುದು ಎಂದು ನೋಡೋಣ….
🕉️ ೧ – ದೇವಗಣ:-🌷: ನಕ್ಷತ್ರಗಳು
ಅಶ್ವಿನಿ, ಮೃಗಶಿರಾ, ಆರ್ದ್ರ, ಪುಷ್ಯ, ಪುನರ್ವಸು, ಹಸ್ತಾ, ಸ್ವಾತಿ, ಅನುರಾಧ, ಶ್ರವಣ, ರೇವತಿ.
🕉️ ೨ – ಮನುಷ್ಯಗಣ:-🌷 ನಕ್ಷತ್ರಗಳು
ಭರಣಿ, ರೋಹಿಣಿ, ಪೂರ್ವ ಫಾಲ್ಗುಣಿ, ಉತ್ತರ ಪಾಲ್ಗುಣಿ, ಪೂರ್ವಾಷಾಢ, ಉತ್ತರಾಷಾಢ, ಪೂರ್ವಾಭಾದ್ರ, ಉತ್ತರಾಭಾದ್ರ.
🕉️ ೩ – ರಾಕ್ಷಸಗಣ🌷 ನಕ್ಷತ್ರಗಳು
ಕೃತಿಕಾ, ಅಶ್ಲೇಷ, ಮಾಘ, ಚಿತ್ರಾ, ವಿಶಾಖ, ಜ್ಯೇಷ್ಠ, ಮೂಲ, ಧನಿಷ್ಠ, ಶತಭಿಷ.

Nima ee ankana Dali hanchikondiro vichara nanage tilidiralila. Yake Deva Gana Manushya Gana and Rakshasa Gana antare anta. Bari Deva-Deva, Deva-Manushya, Manushya-Rakshasa, Rakshasa-Rakshasa madwe agbodu anta kelide ashte. Insightful ide good one
Thank you Mr. Deeraj,
We are here to provide the useful information to adopt in life.
we are working vigorously to get the most of the content here.
we are with you ! and we would like you to be with us !
Pingback: ವಿವಾಹ ಯೋಗ ಯೋಗ - Acharane