ಋಷಿ ಪಂಚಮಿ ಕಥಾ

ಋಷಿ ಪಂಚಮಿ ಕಥಾ

ಪೂರ್ವಕಾಲದಲ್ಲಿ ದೇವಶರ್ಮ ಎಂಬ ಹೆಸರಿನ ಒಬ್ಬ ಬ್ರಾಹ್ಮಣನಿದ್ದನು. ಅವನು ಸುಶೀಲನೂ ಸದಾ ಅಧ್ಯಯನಶೀಲನೂ, ಮಹಾಪಂಡಿತನೂ, ಷಟ್ಕರ್ಮ ನಿರತನೂ, ಅಗ್ನಿಹೋತ್ರ ಪಾಲಕನೂ ಆಗಿದ್ದನು. 

ಆದ್ದರಿಂದ ಎಲ್ಲಾ ವರ್ಗದ ಜನರೂ ಅವನನ್ನು ಪೂಜಿಸುತ್ತಿದ್ದರು. ಗೌರವಿಸುತ್ತಿದ್ದರು. 

ಭಾದ್ರಪದ ಶುಕ್ಲ ಪಕ್ಷದ ಪಂಚಮೀ ತಿಥಿಯಂದು ದೇವಶರ್ಮನ ತಂದೆಯ ಶ್ರಾದ್ಧವಿತ್ತು. 

ಭಕ್ತಿಯಿಂದ ಜಿತೇಂದ್ರಿಯನಾಗಿ ತನ್ನ ತಂದೆಯ ಶ್ರಾದ್ಧವನ್ನು ಮಾಡುತ್ತಿದ್ದನು. ಶ್ರಾದ್ಧದ ಎಲ್ಲಾ ಸಾಮಗ್ರಿಗಳನ್ನು ಹೆಂಡತಿಯು ಸಿದ್ಧ  ಮಾಡುತ್ತಿದ್ದಳು.

ಬಿಸಿಯಾದ ಹಾಲನ್ನು ತಣ್ಣಗಾಗಲು ಮನೆಯ ಹೊರಭಾಗದಲ್ಲಿ ತಂದಿಟ್ಟಿದ್ದಳು. 

ನಾಯಿಯು ಬಂದು ಆ ಹಾಲನ್ನು ನೆಕ್ಕ ತೊಡಗಿತು. ಇದನ್ನು ಕಂಡ ಯಜಮಾನಿಯು ಕಟ್ಟಿಗೆಯಿಂದ ನಾಯಿಯನ್ನು ಬಲವಾಗಿ ಹೊಡೆದಳು. ಅದರಿಂದ ನಾಯಿಯ ಸೊಂಟವು ಮುರಿದೇ ಹೋಯಿತು. 

ದಂಪತಿಗಳು  ನಾಯಿ ಮುಟ್ಟಿದ ಪಾತ್ರೆ ಪದಾರ್ಥಗಳನ್ನು ಹೊರಗೆ ಹಾಕಿ, ಮನೆ ಶುದ್ಧಮಾಡಿ ಬೇರೆಯೇ ಪದಾರ್ಥಗಳನ್ನು ತಂದು  ಶ್ರಾದ್ಧಕ್ಕೆ ಅಣಿಗೊಳಿಸಿದರು. 

ಮುನ್ನ ದಿನವೇ ಮನೆ ಮನೆಗಳಿಗೆ ಹೋಗಿ ಬ್ರಾಹ್ಮಣರಿಗೆ ಆಮಂತ್ರಣವನ್ನು ಕೊಟ್ಟು ಬಂದಿದ್ದರು. 

ಅಂದು ಮಧ್ಯಾಹ್ನ ಸಕಾಲದಲ್ಲಿ ಎಲ್ಲ ಬ್ರಾಹ್ಮಣರು ಅಲ್ಲಿಗೆ ಆಗಮಿಸಿದರು. 

 ಅವರೆಲ್ಲರನ್ನೂ ದೇವಶರ್ಮನು ಅರ್ಘ್ಯ ಪಾದ್ಯಾದಿಗಳಿಂದ ಪೂಜಿಸಿದ ,ಪಾದ ಪ್ರಕ್ಷಾಳನ ಮಾಡಿದ , ಮನೆಯ ಮಧ್ಯದಲ್ಲಿ ಅವರೆಲ್ಲರನ್ನೂ ಒಳ್ಳೆಯ ಆಸನದಲ್ಲಿ ಕುಳ್ಳಿರಿಸಿ, ಪಿಂಡಪ್ರದಾನ ಮಾಡಿದ ಬಳಿಕ ಭೋಜನ ಹಾಕಿದ, ನಂತರ ಎಲ್ಲರಿಗೂ ತಾಂಬೂಲ ದಕ್ಷಿಣೆ ವಸ್ತ್ರಾದಿಗಳನಿತ್ತ. 

ಬಂದಂತಹ ಎಲ್ಲಾ ಬ್ರಾಹ್ಮಣರೂ ನವದಂಪತಿಗಳಿಗೆ ಆಶೀರ್ವಾದ ನೀಡಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಅನಂತರ ಬಂಧುಬಾಂಧವರಿಗೆ  ಭೋಜನ ಮಾಡಿಸಿ ತಾನೂ ಉಂಡ.

ಸಾಯಂಕಾಲ ಮನೆಯ ಅಂಗಳದಲ್ಲಿರುವ ಕಟ್ಟೆಯಮೇಲೆ ಕುಳಿತುಕೊಂಡಿದ್ದ. ಆಗ ಅವನ ಹೆಂಡತಿಯು ನೀರು ತಂದು ಪತಿಯ ಕಾಲನ್ನು ತೊಳೆದು ನಮಸ್ಕರಿಸಿ ಪತಿಯ ಪದೋದಕವನ್ನು ಧಾರಣೆ ಮಾಡಿ ತನ್ನ ಕೆಲಸಕ್ಕೆ ಹೋದಳು. 

ಅದೇ ಸಮಯದಲ್ಲಿ ಸೊಂಟ ಮುರಿದ ಮುರಿದ ಹೆಣ್ಣು ನಾಯಿಯು ಅಲ್ಲಿಯೇ ಬಾಗಿಲ ಸಮೀಪದಲ್ಲಿ ಬಿದ್ದುಕೊಂಡಿತ್ತು. ಅವರ ಸಮೀಪದಲ್ಲೇ ಮನೆಯ ಎತ್ತು ನಿಂತುಕೊಂಡಿತ್ತು. ಪರಸ್ಪರ ಇವೆರಡೂ ಮಾತನಾಡತೊಡಗಿದವು. ಮಹಾಪಂಡಿತ ದೇವಶರ್ಮನಿಗೆ ಪಶುಪಕ್ಷಿಗಳ ಭಾಷೆಯು ಅರ್ಥವಾಗುತ್ತಿತ್ತು. 

ನಾಯಿ ಹೇಳಿತು:-ನನಗೆ ಬಹಳ ದುಃಖವಾಗಿದೆ .

ಯಾಕೆಂದರೆ ಸೊಸೆಯು ನನಗೆ ಬಹಳ ಜೋರಾಗಿ ಪ್ರಹಾರವನ್ನು ಮಾಡಿ ನನ್ನ ಸೊಂಟವನ್ನು ಮುರಿದಿದ್ದಾರೆ. ಅದಕ್ಕೆ ಕಾರಣವನ್ನು ಹೇಳುತ್ತೇನೆ ಕೇಳು. ನಾನು ಎಂದೂ ಸುಳ್ಳು ಮಾತನಾಡುವುದಿಲ್ಲ .ನಿನ್ನೆ ಈ ಮನೆಯಲ್ಲಿ ಶ್ರಾದ್ಧದ ತಯಾರಿಯನ್ನು ಮಾಡಲಾಗಿತ್ತು. ಹಾಲು ತಣ್ಣಗಾಗಲು ಇಟ್ಟಿದ್ದರು. ಹಾಲಿನ ಪಾತ್ರೆಗೆ ಆಕಸ್ಮತ್ತಾಗಿ ಒಂದು ಹಾವು ಬಂದು ಬಾಯಿಯನ್ನು ಹಾಕಿತು. ಅದನ್ನು ಕಂಡ ನಾನು ಅದರಲ್ಲಿ ಹಾವು ವಿಷವನ್ನು ಬಿಟ್ಟಿರುವ ಸಾಧ್ಯತೆ ಇದೆ, ಎಂದು ಅರಿತು ಅದು ನನ್ನ ಕಣ್ಣಿಗೆ ಬಿದ್ದ ಕಾರಣ, ನಾಳೆ ದಿನ ಇದನ್ನು ತಿಂದ ಬ್ರಾಹ್ಮಣರು ಸತ್ತರೆ ಬ್ರಹ್ಮಹತ್ಯಾ ಪಾಪವು ನನ್ನ ಮಗನಿಗೆ ಅಂಟಿಕೊಳ್ಳದೇ ಇರದೆಂಬ ಭಾವನೆಯಿಂದ ಅದನ್ನು ಹೋಗಿ ಮುಟ್ಟಿದೆ.

ಸೊಸೆ ಆಗ ಬಡಿಗೆಯಿಂದ ಬಡಿದು ನನ್ನ ಸೊಂಟವನ್ನು ಮುರಿದಳು.  ಹಾಲಿನ ಪಾತ್ರೆಯನ್ನು ಮುಟ್ಟಿ ಮೈಲಿಗೆ ಮಾಡದಿದ್ದರೆ ವಿಷಪೂರಿತವಾದ ಹಾಲು ಮೊಸರು ಮುಂತಾದುವುಗಳನ್ನು ತಿಂದು ಎಲ್ಲಾ ಬ್ರಾಹ್ಮಣರು ಮನೆಯ ಜನರು ಸತ್ತುಹೋಗುವ ಸಾಧ್ಯತೆಯೂ ಇತ್ತು.

ಆದರೆ ಇದನ್ನರಿಯದ ಸೊಸೆಯು ಹೊಡೆದು-ಬಡಿದುಸೊಂಟ ಮುರಿಯುವಂತೆ ಮಾಡಿದ್ದಾಳೆ.

ಎತ್ತು ಹೇಳಿತು. 

ನಮ್ಮ ಮಗನು ನಮ್ಮನ್ನು ಉದ್ದೇಶಿಸಿ ಬ್ರಾಹ್ಮಣ ಭೋಜನವನ್ನು ಏನೋ ಮಾಡಿಸುತ್ತಿದ್ದಾನೆ. 

ಆದರೆ ಜನ್ಮಾಂತರದಲ್ಲಿ ನಾವು ಮಾಡಿದ ಯಾವುದೋ ಕರ್ಮವು ನಮ್ಮನ್ನು ಇಂತಹ ಹೀನ ಕಕ್ಷೆಯಲ್ಲಿ ಹುಟ್ಟುವಂತೆ ಮಾಡಿದೆ. 

ಈ ದಿನ ನನಗೆ ಯಾರೂ ಕೂಡ  ಹುಲ್ಲನ್ನೂ ಹಾಕಿಲ್ಲ ,ನೀರನ್ನೂ ಕುಡಿಯಲು ಕೊಟ್ಟಿಲ್ಲ .ಹಸಿವೆ ಬಾಯಾರಿಕೆಗಳಿಂದ ನಾನೀಗ ಕಂಗಾಲಾಗಿದ್ದೇನೆ. 

ಹಿಂದಿನ ಪಾಪದಿಂದ ನನ್ನನ್ನು ಉಪವಾಸ ಕೂಡಿಸಿ ಇಲ್ಲಿಯ ಗೂಟಕ್ಕೆ ಬಿಗಿದು ಕಟ್ಟಿದ್ದಾರೆ. 

 ದೇವಶರ್ಮನು ನಾಯಿ ಹಾಗೂ ಎತ್ತುಗಳ ಮಾತನ್ನು ಕೇಳಿದ. ಅವರಿಬ್ಬರೂ ಜನ್ಮಾಂತರದಲ್ಲಿ ನನ್ನ ತಂದೆ ಮತ್ತು ತಾಯಿಗಳೇ ಆಗಿದ್ದರು ಎಂದು ನಿಶ್ಚಯಿಸಿಕೊಂಡ. 

ಆಗ ಅವನಿಗೆ ಬಹಳಷ್ಟು ದುಃಖವಾಯಿತು ರಾತ್ರಿ ಅವನಿಗೆ ನಿದ್ದೆ ಕೂಡಾ ಬರಲಿಲ್ಲ. 

ಬೆಳಗ್ಗೆ ಎದ್ದ ಕೂಡಲೇ ಅವನು ನೇರವಾಗಿ ವಸಿಷ್ಠರ ಆಶ್ರಮಕ್ಕೆ ಬಂದ .

ದೀರ್ಘದಂಡ ನಮಸ್ಕಾರ ಮಾಡಿದ. ಪೂಜ್ಯರೇ ತಮ್ಮ ದರ್ಶನದಿಂದ ಈ ನನ್ನ ಜನ್ಮ ಸಫಲವಾಯಿತು.ಹುಟ್ಟು  ಸಾರ್ಥಕವಾಯಿತು. ನಮ್ಮ ಹಿಂದಿನ ಪಿತೃಗಳು ಎಲ್ಲರೂ ತೃಪ್ತರಾದರು

ಪೂಜ್ಯರೇ ನಾನು ನಮ್ಮ ತಂದೆಯ ಶ್ರಾದ್ಧವನ್ನು ವಿಧಿಃಪೂರ್ವಕವಾಗಿ ಮಾಡುತ್ತಿದ್ದೇನೆ .

ವಿಹಿತ ಬ್ರಾಹ್ಮಣರ ಹಾಗೂ ಕುಟುಂಬದ ಜನರ ಭೋಜನವನ್ನು ಮಾಡಿಸುತ್ತಿದ್ದೇನೆ. 

ನಿನ್ನೆ ಭೋಜನಾನಂತರ ಅಲ್ಲಿ ಒಂದು ನಾಯಿ ಬಂದಿತ್ತು .ಅದು ನಮ್ಮ ಮನೆಯಲ್ಲಿರುವ ಎತ್ತನ್ನು ಕುರಿತು ಮಾತನಾಡಿತು. 

ಶ್ರಾದ್ಧಕ್ಕಾಗಿ ತರಿಸಿದ್ದ ಹಾಲಿನಲ್ಲಿ ಹಾವಿನ ವಿಷ ಬಿದ್ದಿರುವ ಸಾಧ್ಯತೆಯನ್ನು ಕಂಡು ಹಾಲನ್ನು ಮುಟ್ಟಿ ಮೈಲಿಗೆ ಮಾಡಿ ಎಲ್ಲಾ ಬ್ರಾಹ್ಮಣರ ಜೀವ ಉಳಿಸಿದ್ದನ್ನು ಹೇಳಿತು. 

ಅದಕ್ಕಾಗಿ ಮನೆಯ ಯಜಮಾನಿಯು ತನ್ನ ಸೊಂಟವನ್ನು ಮುರಿದದ್ದನ್ನು ತಿಳಿಸಿತು. 

ಅದರಂತೆ ಎತ್ತು ಕೂಡಾ ತನಗೆ ಯಾರೂ  ಒಂದು ಹಿಡಿ ಹುಲ್ಲು ಹಾಕಿಲ್ಲ .ಸ್ವಲ್ಪ ನೀರು ಕೂಡಾ ಕುಡಿಯಲು ಕೊಟ್ಟಿಲ್ಲ ಎಂದು ತನ್ನ ದುಃಖವನ್ನು ಹೇಳಿಕೊಂಡಿತು. 

ಇದನ್ನು ಕೇಳಿ ನನಗೆ ಬಹಳ ದುಃಖವಾಯಿತು. ರಾತ್ರಿ ನಿದ್ರೆ ಬರಲಿಲ್ಲ .ಚಿಂತೆಯಲ್ಲಿಯೇ ರಾತ್ರಿ ಕಳೆಯಿತು.

ನಾಯಿ ಮತ್ತು ಎತ್ತು ಅವರ ಹಿಂದಿನ ಜನುಮದಲ್ಲಿ ನಮ್ಮ ತಂದೆ-ತಾಯಿಗಳು .ಅವರಿಬ್ಬರ ಅವಸ್ಥೆಯನ್ನು ಕಂಡು ನನಗೆ ಬಹಳ ದುಃಖವಾಗಿದೆ .ಅವರಿಗೆ ಈ ರೀತಿ ಆಗುವುದಕ್ಕೆ ಕಾರಣವಾದರೂ ಏನು ಎಂಬುದನ್ನು ತಿಳಿಸಿ.

ಬ್ರಾಹ್ಮಣರಿಗೆ ಸರಿಯಾದ ಊಟ ಹಾಕದೇ ಶ್ರಾದ್ದದ ಫಲ ಬರಲಿಲ್ಲವೆಂದು ದುಃಖ ಪಡುತ್ತಾರೆ. ಇದನ್ನು ತಿಳಿದ ಸುಮತಿಯು ಮರುದಿನ ಪೊರ್ಣ ಭೋಜನ ಮಾಡಿಸುತ್ತಾನೆ.

ಮರದಿನ ಋಷಿಪಂಚಮಿ ದಿನ. ಇಬ್ಬರು ಋಷಿಗಳನ್ನು ಕಂಡು ಅವರನ್ನು ಈ ಜನ್ಮಗಳಿಗೆ ಕಾರಣವನ್ನು ತಿಳಸಬೇಕೆಂದು ಪ್ರಾರ್ಥಿಸುತ್ತಾರೆ.

ಆಗ ಋಷಿಗಳು ನೀವು ಮಾಡಿದ ಪಾಪದ ಫಲದಿಂದ ಈ ಜನ್ಮ ಪಡೆದಿರುವರೆಂದು ಹೇಳುತ್ತಾರೆ. ನೀವು ಋಷಿಪಂಚಮಿ ವ್ರತ ಮಾಡಿ ಈ ಜನ್ಮದಿಂದ ಮಕ್ತರಾಗಿ ಎಂದು ಹೇಳುತ್ತಾರೆ.

ಋಷಿಪಂಚಮಿ ಆಚರಣೆಯಿಂದ ಸಕಲ ಪಾಪಗಳೂ ನಿವಾರಣೆಯಾಗಿ ದೀರ್ಘಾಯಸ್ಸು, ಐಶ್ವರ್ಯ ಮುಂತಾದವು ಲಭಿಸುತ್ತದೆ.

Leave a Comment

Your email address will not be published. Required fields are marked *