ಜಗನ್ಮಾತೆ ಮಹಾಲಕ್ಷ್ಮಿಯ ಕೆಲವು ವಿಸ್ಮಯಕಾರಿ ಮಾಹಿತಿಗಳು | astonishing information of Shree Lakshmi
Index of Important Points
🌷 ಲಕ್ಷ್ಮಿಯ ಬಗ್ಗೆ ದೇಶದ ಬೇರೆ ಬೇರೆ ಕಡೆ ಯಾವ ಯಾವ ತರಹದ ನಂಬಿಕೆಗಳಿವೆ ಎಂದು ತಿಳಿದುಕೊಳ್ಳಿ. ಲಕ್ಷ್ಮಿ ಎನ್ನುವ ಪದ ಸಂಸ್ಕೃತದ “ಲಕ್ಷ್” ಎನ್ನುವ ಪದದಿಂದ ಬಂದಿದೆ; ಲಕ್ಷ್ ಅಂದ್ರೆ “ಗುರಿ” ಅಂತ ಅರ್ಥ ಸಂಸ್ಕೃತದಲ್ಲಿ ಇದರರ್ಥ “ಗಮನಿಸುವುದು” ಅಥವಾ “ಅಂದುಕೊಳ್ಳುವುದು”. ಇದಕ್ಕೆ “ಗುರಿ” ಎನ್ನುವ ಅರ್ಥ ಸಹ ಇದೆ. ಲಕ್ಷ್ಮಿಗೆ ಎಷ್ಟೊಂದು ಹೆಸರುಗಳಿವೆ. ಲಕ್ಷ್ಮಿಯ ನೆರಳನ್ನು “ಅಲಕ್ಷ್ಮಿ” ಎಂದು ಕರೆಯುತ್ತಾರೆ. ಬಂಗಾಳದ ಕೆಲವು ಕಡೆ ದೀಪಾವಳಿ ಹಬ್ಬದಲ್ಲಿ “ಅಲಕ್ಷ್ಮಿ”ಗೂ ಪೂಜೆ ಮಾಡುವ ವಾಡಿಕೆ ಇದೆ. ಕೋಲ್ಕತಾದ ಕಾಳಿಘಾಟ್‍ನಲ್ಲಿರುವ ಕಾಳಿಯನ್ನು ದೀಪಾವಳಿ ಸಮಯದಲ್ಲಿ ಮಹಾಲಕ್ಷ್ಮೀ ರೂಪದಲ್ಲಿ ಪೂಜಿಸುತ್ತಾರೆ.
🌷 ಲಕ್ಷ್ಮೀಗೆ ಇರುವ ನೂರಾರು ಹೆಸರುಗಳೂ ತಾವರೆ ಹೂವಿಂದಾನೇ ಬಂದಿರುವುದು. ನಮ್ಮಲ್ಲಿ ಲಕ್ಷ್ಮಿಗೂ ತಾವರೆ ಹೂವಿಗೂ ನೇರವಾದ ಹೋಲಿಕೆಗಳನ್ನು ಕೊಡುತ್ತೇವೆ. ಲಕ್ಷ್ಮೀ ಗೆ ಈ ಹೆಸರುಗಳು ಬಂದಿರುವುದೇ ತಾವರೆ ಹೂವಿನಿಂದ: “ಪದ್ಮ”, “ಕಮಲ” ಅಂದರೆ ತಾವರೆ ಹೂವಲ್ಲಿ ನೆಲೆಸಿರುವವಳು. “ಪದ್ಮಪ್ರಿಯೆ” ಅಂದರೆ ತಾವರೆ ಹೂವನ್ನು ಇಷ್ಟ ಪಡುವವಳು. “ಪದ್ಮಮಾಲಾಧರಾದೇವಿ” : ಅಂದರೆ ತಾವರೆ ಹೂವಿನ ಹಾರ ಧರಿಸಿರುವವಳು. “ಪದ್ಮಾಕ್ಷಿ” : ತಾವರೆಯಂತಹ ಕಣ್ಣುಗಳನ್ನು ಹೊಂದಿರುವವಳು, ಹೀಗೇ.
🌷 ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಇಡುವ ಸುಮಾರು ಹೆಸರುಗಳು ಲಕ್ಷ್ಮೀಯದೇ. ಲಕ್ಷ್ಮಿಗಿರುವ ಬೇರೆ ಬೇರೆ ಹೆಸರುಗಳು. ಮನುಶ್ರೀ, ಚಕ್ರಿಕ, ಕಮಲಿಕ, ಐಶ್ವರ್ಯ, ಲಲಿಮ, ಕಲ್ಯಾಣಿ, ನಂದಿಕ, ರಜುಲ, ವೈಷ್ಣವಿ, ಸಮೃದ್ಧಿ, ನಾರಾಯಣಿ, ಭಾರ್ಗವಿ, ಶ್ರೀದೇವಿ, ಚಂಚಲ, ಜಲಜ, ಮಾಧವಿ, ಸುಜಾತ, ಶ್ರೇಯ, ರಮಾ, ಯಶಸ್ವಿನಿ.
🌷 ಲಕ್ಷ್ಮಿ ಪೂಜೆಗೆ ತಾವರೆ ಹೂವು, ಶ್ರೀಗಂಧ, ಕುಂಕುಮ, ಎಲೆ – ಅಡಿಕೆ ಇರಬೇಕು. ತೆಂಗಿನಕಾಯಿ, ಹಣ್ಣುಗಳು, ಬೆಲ್ಲದಲ್ಲಿ ಮಾಡಿದ ಸಿಹಿ ತಿಂಡಿಗಳು, ಅನ್ನ ಇವು ಲಕ್ಷ್ಮಿಯ ಪೂಜೆಯಲ್ಲಿ ಮಾಡುವ ನೈವೇದ್ಯಗಳು.
🌷 ಲಕ್ಷ್ಮಿ ಫೋಟೋದಲ್ಲಿ ಲಕ್ಷ್ಮೀ ಕೈಯಿಂದ ನಾಣ್ಯಗಳು ಬೀಳುತ್ತಾ ಇರುತ್ತದಲ್ಲ ಅದು ಏಳಿಗೆಯ ಸಂಕೇತ. ಲಕ್ಷ್ಮೀ ಆನೆಗಳು ಲಕ್ಷ್ಮಿಯ ಶಕ್ತಿ. ಕೆಲವೊಂದು ಪುರಾಣದಲ್ಲಿ ಲಕ್ಷ್ಮೀ ಮುಖದಲ್ಲಿ ಯಾವಾಗಲೂ ನಗು ಇರುತ್ತದೆ. ನಾರಾಯಣನ ಹೊಕ್ಕಳಿಂದ ಬಂದ ಬಳ್ಳಿಯಲ್ಲಿ ಬಿಟ್ಟಿರುವ ತಾವರೆ ಹೂ ಮೇಲೆ ಕುಳಿತಿರುವ ಲಕ್ಷ್ಮೀ, ಮನುಷ್ಯನ ಜೈವಿಕ ಬೆಳವಣಿಗೆಯನ್ನು ತೋರಿಸುತ್ತದೆ.
🌷 ಅಷ್ಟ ಲಕ್ಷ್ಮಿ ಅಂದರೆ ನಮಗೆ ಹಣವನ್ನು ಪಡೆಯಲಿಕ್ಕೆ ಇರುವ ಬೇರೆ ಬೇರೆ ಮೂಲಗಳನ್ನು ಪ್ರತಿನಿಧಿಸುವ ಲಕ್ಷ್ಮಿಯ ಎಂಟು ವಿವಿಧ ರೂಪಗಳು. ಮಹಾಲಕ್ಷ್ಮಿ ಅಂದರೆ 18 ರೀತಿಯ ಸಂಪತ್ತಿಗೆ ಒಡತಿ ಅಂತ ಅರ್ಥ. ಆ 18ರಲ್ಲಿ 8 ಸಂಪತ್ತುಗಳನ್ನು ಅಷ್ಟ ಸಿದ್ಧಿಗಳು ಅಂತಾರೆ; ಒಂಬತ್ತನೆಯದು ಜ್ಞಾನ ಮತ್ತು ಹತ್ತನೇದು ಯಾರಲ್ಲೂ ಭೇದ ಭಾವ ಮಾಡದೇ ಜಗತ್ತಿಗೆ ಜ್ಞಾನವನ್ನು ಹಂಚುವುದು.
🌷 ಅಷ್ಟೇ ಅಲ್ಲದೇ, ಇನ್ನೂ 16 ಸಂಪತ್ತುಗಳನ್ನು ಕೊಡುತ್ತಾಳಂತೆ. ಕೀರ್ತಿ, ಜ್ಞಾನ, ಧೈರ್ಯ, ಶಕ್ತಿ, ಗೆಲುವು, ಒಳ್ಳೆಯ ಮಕ್ಕಳು, ಪರಾಕ್ರಮ, ಚಿನ್ನ, ಹೇರಳವಾದ ಧಾನ್ಯ, ಸಂಪತ್ತು, ಸಂತೋಷ, ಆನಂದ, ಬುದ್ಧಿ, ಅಂದ, ಯಶಸ್ಸು, ಚಿಂತನೆ, ಧ್ಯಾನ ಶಕ್ತಿ, ಒಳ್ಳೆತನ, ಆರೋಗ್ಯ, ಆಯಸ್ಸು.
🌷 ಲಕ್ಷ್ಮಿಗೆ ಕೋಟ್ಯಾಂತರ ರೂಪಗಳಿವೆಯಂತೆ. ಅವಳ ದಯೆ ಇಲ್ಲದೇ ಈ ಪ್ರಪಂಚದಲ್ಲಿ ಏನೂ ಇರಲಾರದಂತೆ. ಒಂದೊಂದು ಯುಗದಲ್ಲೂ ಒಂದೊಂದು ಹಿಂದೂ ಗ್ರಂಥಗಳಲ್ಲೂ ಬೇರೆ ಬೇರೆ ಉಲ್ಲೇಖ ಇರುವುದಕ್ಕೆ ಇದೇ ಕಾರಣವಂತೆ! ಗಾಳಿ, ಅನ್ನ, ನೀರು, ಏನೂ ಇರಲಾರದಂತೆ, ದುಡ್ಡಿಲ್ಲದೇ ಏನೂ ಇಲ್ಲ ಈ ಜಗತ್ತಲ್ಲಿ. ವೇದಾಂತಿಗಳನ್ನು ಬಿಟ್ಟರೆ ಉಳಿದವರಿಗೆಲ್ಲಾ ಜೀವನದಲ್ಲಿ ತುಂಬಾ ದುಡ್ಡು ಬೇಕೇಬೇಕು. ತಿರುಪೆ ಎತ್ತುವವನಿಗೂ ಯಾರಾದರೂ ನಾಲ್ಕು ಕಾಸು ಹಾಕಬೇಕಾದರೂ ಅದಕ್ಕೆ ಲಕ್ಷ್ಮಿಯ ದಯೆ ಇರಲೇಬೇಕು. ಸ್ವರ್ಗದಲ್ಲಿರುವ ದೇವೇಂದ್ರನಿಗೂ ಅಷ್ಟೊಂದು ಸಂಪತ್ತು ಸಿಕ್ಕಿದ್ದು ಈ ತಾಯಿ ದಯದಿಂದಲೇ ಅನಿಸುತ್ತದೆ ಪುರಾಣಗಳು.
🌷 ಮಹಾಲಕ್ಷ್ಮಿಗೆ ಹಲವು ರೂಪಗಳಿವೆ: ಶ್ರೀದೇವಿ, ಭೂದೇವಿ, ನೀಲಾದೇವಿ ಇವುಗಳು ತುಂಬಾ ಹೆಚ್ಚು ಕೇಳಲ್ಪಡುವುದು ಶ್ರೀದೇವಿ ಎನ್ನುವ ಹೆಸರು. ಅಲೆದಾಡುವ ಸಂಪತ್ತನ್ನು ತೋರುವಂತದ್ದು (ಸಂಸ್ಕೃತದಲ್ಲಿ ಅದನ್ನ ಚಂಚಲ ಅಂತಾರೆ). ಭೂದೇವಿ ಎನ್ನುವ ಹೆಸರು ಅಲೆದಾಡದೇ ಒಂದೆಡೆ ಇರುವ ಸಂಪತ್ತನ್ನು ತೋರುವಂತದ್ದು. ಸುಮಾರು 50 ವರ್ಷಗಳ ಹಿಂದೆ ತಮಿಳುನಾಡಲ್ಲಿದ್ದ ಆಂಡಾಳ್ ಎನ್ನುವ ಒಬ್ಬ ಸನ್ಯಾಸಿನಿ ಮಹಾಲಕ್ಷ್ಮಿಯ ಅವತಾರ ಅಂತ ನಂಬಿಕೆ. ಚಂಚಲವಾಗಿರುವವರ ಹತ್ತಿರ ಲಕ್ಷ್ಮೀ ಇರುವುದಿಲ್ಲ ಎಂದು ನಂಬಿಕೆ.
🌷 ಲಕ್ಷ್ಮಿಗೆ ಸಂಬಂಧಿಸಿದ 2 ದೊಡ್ಡ ಹಬ್ಬಗಳನ್ನು ನಮ್ಮಲ್ಲಿ ಆಚರಿಸುತ್ತಾರೆ. ಒಂದು ವರಮಹಾಲಕ್ಷ್ಮಿ ಪೂಜೆ, ಇನ್ನೊಂದು ದೀಪಾವಳಿ ಲಕ್ಷ್ಮಿ ಪೂಜೆ.
🌷 “ಶ್ರೀ” ಅಂದರೆ ನೆಮ್ಮದಿ – ಸಂತೋಷ ತರುವಂತದ್ದು ಎಂದು ಅರ್ಥ. ಅದಕ್ಕೇ ಯಾರನ್ನಾದರೂ ಆದರ – ಗೌರವದಿಂದ ಕರೆಯ ಬೇಕಾದರೆ (ಅಥವಾ ಹೆಸರು ಬರೆಯ ಬೇಕಾದರೆ) ಹೆಸರಿಗೆ ಮೊದಲು ಶ್ರೀ ಅಂತ ಸೇರಿಸುವುದು. ಅದೇ ತರಹ ಹೆಂಗಸರ ಹೆಸರಿಗೆ ಶ್ರೀಮತಿ ಅಂತ ಸೇರಿಸುತ್ತಾರೆ. 🌷 ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನೆಲೆಸಿರುವ ದೇವಿ ಹೆಸರು ಕರವೀರ ನಿವಾಸಿನಿ ಮಹಾಲಕ್ಷ್ಮೀ. ಅಂಬಾ ಬಾಯಿ ಎಂದು ಕರೆಯುತ್ತಾರೆ.
🌷 ಲಕ್ಷ್ಮಿಗೆ ಗೂಬೆ ವಾಹನ ಎನ್ನುವ ನಂಬಿಕೆ ಇದೆ. ಲಕ್ಷ್ಮಿಗೆ ದಿನಾ ಪೂಜೆ ಮಾಡುತ್ತಾರೆ. ಆದರೂ ಶರದ್ ಋತುವಿನಲ್ಲಿ ವಿಶೇಷ ಪೂಜೆ, ನೈವೇದ್ಯ, ಸಹಸ್ರನಾಮ ಪಾರಾಯಣ ಎಲ್ಲಾ ನಡೆಯುತ್ತದೆ. ಬಂಗಾಳದಲ್ಲಿ ಅಕ್ಟೋಬರ್ ನ ಸಮಯದಲ್ಲಿ ಹುಣ್ಣಿಮೆ ಇದ್ದಾಗ ಲಕ್ಷ್ಮಿ ಪೂಜೆ ಮಾಡುವ ಪದ್ದತಿ ಇದೆ. ವಾಹನ ಗೂಬೆ ಎನ್ನುವ ನಂಬಿಕೆ ಇಲ್ಲಿದೆ. ನಮ್ಮ ಲೋಕಕ್ಕೆ ಹುಣ್ಣಿಮೆಯ ರಾತ್ರಿ ಬಂದು ನಮ್ಮ ಕತ್ತಲು (ಕಷ್ಟ, ನೋವುಗಳು, ಕೋಪ, ಸೋಮಾರಿತನ) ಇದನ್ನೆಲ್ಲಾ ತೆಗೆದುಕೊಂಡು ಹೋಗುತ್ತಾಳೆ ಅನ್ನುವ ನಂಬಿಕೆ ಇಲ್ಲಿದೆ. ಗೂಬೆಯನ್ನು ಇಲ್ಲಿ ತೀಕ್ಷ್ಣ ಕಣ್ಣುಳ್ಳ, ವೈಭೋಗದ ಮತ್ತೆ ಬುದ್ಧಿವಂತಿಕೆಯ ಸಂಕೇತ ಅಂತ ನೋಡುತ್ತಾರೆ. ಇದೇ ಹಬ್ಬವನ್ನು ಒಡೀಶಾದಲ್ಲಿ “ಕುಮಾರ ಪೂರ್ಣಿಮಾ” ಅಂತಾರೆ. ಅಲ್ಲಿರುವ ಎಲ್ಲಾ ವ್ಯಾಪಾರಿಗಳೂ ತುಂಬಾ ಜೋರಾಗಿ ಮಾಡುವ ಹಬ್ಬ ಇದು. ಅಲ್ಲಿ ಆ ದಿನ “ಆಸ್ಪೂಚಿ” ಅನ್ನುವ ಆಟ ಆಡುವುದು ವಿಶೇಷವಂತೆ!
🌷 ಲಕ್ಷ್ಮಿಗೆ ಎಲ್ಲಾ ಫೋಟೋಗಳಲ್ಲೂ ಕೆಂಪು ಬಟ್ಟೆ ಹಾಕಿರುತ್ತಾರೆ. ಇದು ಅರ್ಥ ಸತತವಾಗಿ ನಡೆಯುವ ಕ್ರಿಯೆ ಅಂತ ತೋರಿಸುತ್ತದೆ. ಚಿನ್ನದ ಒಡವೆಗಳ ಅಲಂಕಾರ ವರವನ್ನು ಈಡೇರಿಸುವ ಗುಣವನ್ನು ತೋರಿಸುತ್ತದೆ.
🌷 ಲಕ್ಷ್ಮೀಯನ್ನು ಒಲಿಸಿಕೊಳ್ಳಲಿಕ್ಕೆ ಅಷ್ಟೋತ್ತರ, ಸಹಸ್ರನಾಮಗಳನ್ನು, ಹಾಡುಗಳನ್ನು ಹೇಳಬೇಕು. ತುಂಬಾ ಮುಖ್ಯವಾದವು ಅಂದರೆ ಶ್ರೀ ಮಹಾಲಕ್ಷ್ಮೀ ಅಷ್ಟಕ, ಶ್ರೀ ಲಕ್ಷ್ಮೀ ಸಹಸ್ರನಾಮ ಸ್ತೋತ್ರ, ಶ್ರೀ ವೇದಾಂತ ದೇಸಿಕರ್ ಬರೆದಿರುವ ಶ್ರೀ ಸ್ತುತಿ, ಆದಿ ಶಂಕರಾಚಾರ್ಯರು ಬರೆದಿರುವ “ಶ್ರೀ ಕನಕಧಾರಾ ಸ್ತೋತ್ರ”, ಯಮುನಾಚಾರ್ಯ ಶ್ರೀ ಚತು ಶ್ಲೋಕಿ, ಭಗವಾನ್ ಶ್ರೀ ಹರಿ ಸ್ವಾಮೀಜಿ ಶ್ರೀ ಲಕ್ಷ್ಮಿ ಶ್ಲೋಕ, ಅಗಸ್ತ್ಯರ ಅಗಸ್ತ್ಯ ಲಕ್ಷ್ಮೀ ಸ್ತೋತ್ರ ಮತ್ತೆ ವೇದಗಳಲ್ಲಿ ಹೇಳಿರೋ ಶ್ರೀ ಸೂಕ್ತ. ಶ್ರೀ ಸೂಕ್ತದಲ್ಲಿರುವ ಲಕ್ಷ್ಮೀ ಗಾಯತ್ರೀ ಶ್ಲೋಕ “ಓಂ ಮಹಾಲಕ್ಷ್ಮ್ಯೆ ಚ ವಿದ್ಮಹೇ ಶ್ರೀ ವಿಷ್ಣುಪತ್ನೀ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್” ಅನ್ನುವ ಮಂತ್ರ ತುಂಬಾ ಜನ ಹೇಳುತ್ತಾರೆ. ಲಕ್ಷ್ಮಿ ಸೋಬಾನೆ ಹಾಡುಗಳು ಎಲ್ಲರ ಮನೆಮಾತಿನ ತರಹ ಹರಡಿದೆ.
🌷 ನಾರಾಯಣನ ಜೊತೆ ಲಕ್ಷ್ಮಿಯನ್ನು ಪೂಜೆ ಮಾಡಿದಾಗ ಬರೀ ಸಂಪತ್ತನ್ನು ಕೊಡುವವಳು ಮಾತ್ರ ಅಲ್ಲದೇ ನೆಮ್ಮದಿ ಸಕಲ ಸಿರಿ ಸೌಭಾಗ್ಯ ಕೊಡುವ ಸಿರಿದೇವತೆ ನಮ್ಮ ಮಹಾಲಕ್ಷ್ಮೀ.
ಅಷ್ಟಲಕ್ಷ್ಮಿ ಸ್ತೋತ್ರಂ
ಆದಿಲಕ್ಷ್ಮಿ
ಸುಮನಸ ವಂದಿತ ಸುಂದರಿ ಮಾಧವಿ ಚಂದ್ರ ಸಹೋದರಿ ಹೇಮಮಯೇ |
ಮುನಿಗಣ ಮಂಡಿತ ಮೋಕ್ಷಪ್ರದಾಯಿನಿ ಮಂಜುಳ ಭಾಷಿಣಿ ವೇದನುತೇ |
ಪಂಕಜವಾಸಿನಿ ದೇವಸುಪೂಜಿತೆ ಸದ್ಗುಣವರ್ಷಿಣಿ ಶಾಂತಿಯುತೇ |
ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮೀ ಸದಾ ಪಾಲಯಮಾಂ ||೧||
ಧಾನ್ಯಲಕ್ಷ್ಮಿ
ಅಯಿಕಲಿ ಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ |
ಕ್ಷೀರ ಸಮುದ್ಭವ ಮಂಗಳರೂಪಿಣಿ ಮಂತ್ರನಿವಾಸಿನಿ ಮಂತ್ರನುತೇ |
ಮಗಳದಾಯಿನಿ ಅಂಬುಜವಾಸಿನಿ ದೇವಗಣಾಶ್ರಿತ ಪಾದಯುತೇ |
ಜಯ ಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮೀ ಸದಾ ಪಾಲಯಮಾಂ ||೨||
ಐಶ್ವರ್ಯಲಕ್ಷ್ಮಿ
ಧಿಮಿ ಧಿಮಿ ಧಿಂಧಿಮಿ ಧಿಂಧಿಮಿ ಧಿಂಧಿಮಿ ದುಂದುಭಿನಾದ ಸಂಪೂರ್ಣಮಯೇ |
ಘಮಘಮ ಘಂಘಮ ಘಂಘಮ ಘಂಘಮ ಶಂಖನಿನಾದ ಸುವಾದ್ಯನುತೇ |
ವೇದಪುರಾಣೇತಿಹಾಸ ಸುಪೂಜಿತೆ ವೈದಿಕಮಾರ್ಗ ಪ್ರದರ್ಶಯುತೇ |
ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾಂ ||೩||
ವಿದ್ಯಾಲಕ್ಷ್ಮಿ
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ |
ಮಣಿಮಯಭೂಷಿತ ಕರ್ಣವಿಭೂಷಿಣಿ ಶಾಂತಿ ಸಮಾವೃತೆ ಹಾಸ್ಯಮುಖೇ |
ನವನಿಧಿ ದಾಯಿನಿ ಕಲಿಮಲಹಾರಿಣಿ ಕಾಮಿತಫಲಪ್ರದ ಹಸ್ತಯುತೇ |
ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾ ಪಾಲಯಮಾಂ ||೪||
ವೀರಲಕ್ಷ್ಮಿ (ಧೈರ್ಯಲಕ್ಷ್ಮಿ)
ಜಯವರವರ್ಷಿಣಿ ವೈಷ್ಣವಿ ಭಾರ್ಗವಿ ಮಂತ್ರಸ್ವರೂಪಿಣಿ ಮಂತ್ರಮಯೇ |
ಸುರಗಣಪೂಜಿತೆ ಶೀಘ್ರಫಲಪ್ರದೆ ಜ್ಜಾನವಿಕಾಸಿನಿ ಶಾಸ್ತ್ರನುತೇ |
ಭವಭಯಹಾರಿಣಿ ಪಾಪವಿಮೋಚಿನಿ ಸಾಧುಜನಾಶ್ರಿತ ಪಾದಯುತೇ |
ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯಮಾಂ ||೫||
ವಿಜಯಲಕ್ಷ್ಮಿ
ಜಯ ಕಮಲಾಸಿನಿ ಸದ್ಗತಿದಾಯಿನಿ ಜ್ಜಾನವಿಕಾಸಿನಿ ಗಾನಮಯೇ |
ಅನುದಿನಮರ್ಚಿತ ಕುಂಕುಮ ನೂಪುರ ಭೂಷಿತವಾಸಿತ ವಾದ್ಯನುತೇ |
ಕನಕಧಾರಾಸ್ತುತಿ ವೈಭವ ವಂದಿತೆ ಶಂಕರ ದೇಶಿಕ ಮಾನ್ಯಪದೇ |
ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾ ಪಾಲಯಮಾಂ ||೬||
ಗಜಲಕ್ಷ್ಮಿ
ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ |
ರಥಗಜತುರಗಪಾದಾತಿ ಸಮಾವೃತ ಪರಿಜನ ಮಂಡಿತ ಲೋಕನುತೇ |
ಹರಿಹರಬ್ರಹ್ಮ ಸುಪೂಜಿತೆ ಸೇವಿತೆ ತಾಪನಿವಾರಿಣಿ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ಸದಾ ಪಾಲಯಮಾಂ ||೭||
ಸಂತಾನ ಲಕ್ಷ್ಮಿ
ಅಯಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಜಾನಮಯೇ|
ಗುಣಗಣವಾರಿಧಿ ಲೋಕಹಿತೈಷಿಣಿ ಶಬ್ದವಿಭೂಷಿಣಿ ಗಾನನುತೇ|
ಸಕಲ ಸುರಾಸುರ ದೇವಮುನೀಶ್ವರ ಮಾನಸ ವಂದಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಸಂತಾನ ಲಕ್ಷ್ಮೀ ಸದಾ ಪಾಲಯಮಾಂ ||೮||
ಶ್ರೀ ಮಹಾಲಕ್ಷ್ಮೀ ಅಷ್ಟಕ
ನಮಸ್ತೇಸ್ತು ಮಹಾ ಮಾಯೇ ಶ್ರೀಪೀಠೆ ಸುರಪೂಜಿತೇ |
ಶಂಖಚಕ್ರಗಧಾ ಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ||೧||
ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |
ಸರ್ವ ಪಾಪ ಹರೇ ದೇವೀ ಮಹಾಲಕ್ಷ್ಮೀ ನಮೋಸ್ತುತೇ ||೨||
ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರೀ |
ಸರ್ವ ದುಃಖ ಹರೇ ದೇವೀ ಮಹಾಲಕ್ಷ್ಮೀ ನಮೋಸ್ತುತೇ ||೩||
ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನೀ |
ಮಂತ್ರ ಮೂರ್ತೇ ಸದಾದೇವೀ ಮಹಾಲಕ್ಷ್ಮೀ ನಮೋಸ್ತುತೇ ||೪||
ಆದ್ಯಂತ ರಹಿತೇ ದೇವಿ ಆದಿಶಕ್ತಿ ಮಹೇಶ್ವರೀ |
ಯೋಗಜ್ಞೇ ಯೋಗ ಸಂಭೂತೇ ಮಹಾಲಕ್ಷ್ಮೀ ನಮೋಸ್ತುತೇ ||೫||
ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾ ಶಕ್ತೀ ಮಹೋಧರೇ |
ಮಹಾ ಪಾಪ ಹರೆ ದೇವೀ ಮಹಾಲಕ್ಷ್ಮೀ ನಮೋಸ್ತುತೇ ||೬||
ಪದ್ಮಾಸನಸ್ಥಿತೇ ದೇವೀ ಪರಬ್ರಹ್ಮ ಸ್ವರೂಪಿಣೀ |
ಪರಮೇಶಿ ಜಗನ್ಮಾತ ಮಹಾಲಕ್ಷ್ಮೀ ನಮೋಸ್ತುತೇ ||೭||
ಶ್ವೇತಾಂಬರ ಧರೇ ದೇವೀ ನಾನಾಲಂಕಾರ ಭೂಷಿತೇ |
ಜಗತ್ ಸ್ಥಿತೇ ಜಗನ್ಮಾತ ಮಹಾಲಕ್ಷ್ಮೀ ನಮೋಸ್ತುತೇ ||೮||
ಮಹಾಲಕ್ಷ್ಮ್ಯಾಷ್ಟಕಂ ಸ್ತೋತ್ರಂ ಯಃ ಪಠೇತ್ ಭಕ್ತಿಮಾನ್ ನರಃ |
ಸರ್ವಸಿದ್ಧಿ ಮವಾಪ್ನೋತಿ ರಾಜ್ಯಮ್ ಪ್ರಾಪ್ನೋತಿ ಸರ್ವದಾ ||೯||
🌺 🌺 ಯಾ ದೇವಿ ಸರ್ವ ಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ 🌺 🌺
🌷🌷 ಈ ಕಲಿಯುಗದಲ್ಲಿ ನಾಮ ಜಪ ಪಾರಾಯಣಕ್ಕೆ ಬಹಳ ಪ್ರಾಮುಖ್ಯತೆಯನ್ನು ನಮ್ಮ ಹಿರಿಯರು ಕೊಟ್ಟಿದ್ದಾರೆ. ನಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿಯ ಅವಶ್ಯಕತೆ ಬಹಳ ಇದೆ. ನಮ್ಮ ನಿತ್ಯ ಜೀವನದಲ್ಲಿ ಸ್ವಲ್ಪ ಸಮಯವನ್ನು ಇದಕ್ಕಾಗಿ ಮೀಸಲು ಇಟ್ಟರೆ, ನಮಗೆ ಅರಿವಿಲ್ಲದಂತೆ ಮನಸ್ಸು ನೆಮ್ಮದಿಯ ಗೂಡಾಗುತ್ತದೆ. ಭಗವಂತನ ಜಪದ ಮಹಿಮೆ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಬಹುದು.
🌷🌷 ಇದಕ್ಕೆ ಪಾಂಡಿತ್ಯ ಅಥವಾ ವಿದ್ವತ್ ಅವಶ್ಯಕತೆ ಖಂಡಿತಾ ಇಲ್ಲ. ಮನೆಯಲ್ಲಿ ಪ್ರಥಮ ಗುರುವಾದ ತಾಯಿಯು, ಮಕ್ಕಳಿಗೆ ಬಾಯಿ ಪಾಠ ಮಾಡಿಸಿ, ಹಾಸಿಗೆಯಿಂದ ಏಳುವಾಗಲೇ, ಕರಾಗ್ರೇ ವಸತೇ ಲಕ್ಷ್ಮೀ ಕರ ಮಧ್ಯೇ ಸರಸ್ವತೀ ಕರ ಮೂಲೇ ಸ್ಥಿತೇ ಗೌರಿ ಪ್ರಭಾತೇ ಕರದರ್ಶನಮ್. ಲಕ್ಷ್ಮೀ, ಸರಸ್ವತೀ ಮತ್ತು ಗೌರೀ ಇವರುಗಳ ಪ್ರಾರ್ಥನೆಯಿಂದ ದಿನಚರಿಯನ್ನು ಆರಂಭಿಸಲು ಕಲಿಸಿದ್ದಾಳೆ ಮತ್ತು ತ್ರಿಮೂರ್ತಿಗಳಲ್ಲಿ ಹೇಗೆ ಭೇದವಿಲ್ಲವೋ, ಹಾಗೆಯೇ ತ್ರಿಮೂರ್ತಿಗಳ ಒಡತಿಯರಲ್ಲಿ ಯಾವ ಭೇದವಿಲ್ಲವೆಂಬುದನ್ನು ಕಲಿಸಿರುತ್ತಾಳೆ. ನಮ್ಮ ಅಂಗೈನ ಬೆರಳುಗಳ ತುದಿಯಲ್ಲಿ ಲಕ್ಷ್ಮಿಯೂ, ಅಂಗೈನ ಮಧ್ಯದಲ್ಲಿ ಸರಸ್ವತಿಯೂ ಮತ್ತು ಅಂಗೈನ ಬುಡದಲ್ಲಿ ಗೌರಿಯೂ ವಾಸವಾಗಿರುತ್ತಾಳೆ. ನಮ್ಮ ದಿನಚರಿಯು ಇದರಿಂದಲೇ ಪ್ರಾರಂಭವಾಗಿ, ಇವರ ಕೃಪೆ ಪಡೆದ ಮೇಲೆ ಬೇರೇನು ಬೇಕು!.
🌷🌷 ಲಕ್ಷ್ಮಿಯ ಕಟಾಕ್ಷ, ಸರಸ್ವತಿಯಿಂದ ವಿದ್ಯೆ ಮತ್ತು ವಿನಯ, ಗೌರಿಯಿಂದ ಕಾರುಣ್ಯ ಇತ್ಯಾದಿ ಪಡೆದ ಮೇಲೆ ಪ್ರತಿದಿನವೂ ಮಂಗಳಕರವಾಗಿಯೇ ಇರುತ್ತದೆ. ಅಂಗೈಗಳನ್ನು ದರ್ಶನ ಮಾಡಿ, ಎರಡು ಅಂಗೈಗಳನ್ನು ಉಜ್ಜಿ, ಆ ಬಿಸಿಯಿಂದ ಕಣ್ಣನ್ನು ಸ್ಪರ್ಷ ಮಾಡುವ ಸಂಪ್ರದಾಯವಿದೆ. ಇದರಿಂದ ಕಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ. ತ್ರಿಮೂರ್ತಿಯರಲ್ಲಿ ಹೇಗೆ ಭೇದವಿಲ್ಲವೋ, ಅದೇ ರೀತಿ ‘ಸರಸ್ವತಿ’, ‘ಲಕ್ಷ್ಮೀ’ ಮತ್ತು ‘ಮಾಹೇಶ್ವರಿ’ ಇವರಲ್ಲಿಯೂ ಯಾವ ಭೇದವೂ ಇಲ್ಲ. ಈ ಭಾವವನ್ನು ಆಯಾಯ ಅಷ್ಟೋತ್ತರ ಮತ್ತು ಸಹಸ್ರ ನಾಮಗಳಲ್ಲಿ ಕಾಣಬಹುದು. ಲಕ್ಷ್ಮೀ ಅಷ್ಟೋತ್ತರದಲ್ಲಿ
🌷🌷 ಬ್ರಹ್ಮ ವಿಷ್ಣು ಶಿವಾತ್ಮಿಕಾಯ್ಯೈ ನಮಃ ಸರಸ್ವತಿ ಅಷ್ಟೋತ್ತರದಲ್ಲಿ – ಮಹಾಕಾಳ್ಯೈ ನಮಃ, ಚಂಡಿಕಾಯ್ಯೈ ನಮಃ, ಅಂಬಿಕಾಯ್ಯೈ ನಮಃ ಇತ್ಯಾದಿ ಹಾಗೆಯೇ ಶ್ರೀ ದುರ್ಗಾ ಸಪ್ತಶತೀ ಪಾರಾಯಣ ಕಾಲದಲ್ಲಿ ಸಂಕಲ್ಪ ಕೂಡ ‘ಧರ್ಮಾರ್ಥ ಕಾಮ ಮೋಕ್ಷ ಚತುರ್ವಿಧ ಪುಣ್ಯ ಪುರುಷಾರ್ಥ ಸಿದ್ಧ್ಯರ್ಥಂಚ ಶ್ರೀ ಮಹಾಕಾಳೀ, ಮಹಾಲಕ್ಷ್ಮೀ, ಮಹಾಸರಸ್ವತೀ ದೇವತಾ ಪ್ರೀತ್ಯರ್ಥಂ ಚಂಡೀ ಸಪ್ತಶತೀ ಪಾಠಾಖ್ಯಂ ಕರಿಷ್ಯೇ’ ಎಂಬುದಾಗಿ ಹೇಳಿ ಭೇದಭಾವವನ್ನು ಕಳೆದಿದ್ದಾರೆ. ಅದೇ ರೀತಿ ಎಲ್ಲಾ ದೇವಿಯ ರೂಪಗಳು ಒಂದೇ ಎಂಬಂತೆ ಸಕಲರಲ್ಲಿಯೂ ಲಕ್ಷ್ಮೀ ರೂಪದಿಂದ ನೆಲೆಸಿರುವ ಆ ತಾಯಿಗೆ ಪುನಃ ನಮಸ್ಕಾರ ಎಂದು ಸ್ತೋತ್ರ ಮಾಡಿದ್ದಾರೆ.
🌹ಯಾ ದೇವಿ ಸರ್ವ ಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ ||
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ. 🌹 🌹
🌷🌷 ಅನೇಕ ಮಹಿಮಾನ್ವಿತಳಾದ ಮಹಾಲಕ್ಷ್ಮಿಯು ಸಂಧ್ಯಾಕಾಲದಲ್ಲಿ ಗೋವುಗಳು ಮನೆಗೆ ಬರುವ ಕಾಲದಲ್ಲಿ ನಮ್ಮಲ್ಲಿ ಮನೆಯ ಮುಂಬಾಗಿಲನ್ನು ತೆರೆದು, ಹಿಂಬಾಗಿಲನ್ನು ಮುಚ್ಚಿ ‘ಲಕ್ಷ್ಮಿ’ ಬರುವ ಸಮಯವೆಂದು ‘ಜ್ಯೋತಿ’ ಯನ್ನು ಬೆಳಗಿಸಿ ದೇವಿಯನ್ನು ಆರಾಧಿಸುವ ಸಂಪ್ರದಾಯ ಇಂದಿಗೂ ನಮ್ಮ ಭಾರತೀಯರಲ್ಲಿ ಉಳಿದಿದೆ. ಈ ಸಂಪ್ರದಾಯಗಳನ್ನು ‘ಉಳಿಸಿ’ ಮುಂದುವರೆಸುವ ‘ಕರ್ತವ್ಯ’ ನಮ್ಮಲ್ಲರ ಮೇಲಿದೆ.
🌷🌷 ಸಂಪ್ರದಾಯ ಮತ್ತು ವೇದೋಕ್ತದಲ್ಲಿ ಪೂಜೆ ಮಾಡುವುದು ಲಕ್ಷ್ಮಿಯ ವಿವಿಧ ಚಕ್ರಗಳನ್ನು ಬರೆದು, ಅಲ್ಲಿ ವಿವಿಧ ರೂಪದ ಲಕ್ಷ್ಮಿಯನ್ನು ಆಹ್ವಾನಿಸಿ ಪೂಜೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಹಾಗೆಯೇ ಕೆಲವು ಗೃಹಿಣಿಯರು ‘ಲಕ್ಷ್ಮಿಯ ರಂಗೋಲಿ’ ಯನ್ನು ನಿತ್ಯ ಬರೆದು ಪೂಜಿಸುತ್ತಾರೆ. ಎಲ್ಲ ಸಂಪ್ರದಾಯಗಳು, ಆಚರಣೆಗಳು ವಿವಿಧ ರೀತಿಯಲ್ಲಿರಬಹುದು, ಆದರೆ ಎಲ್ಲ ಪೂಜೆಗಳು, ಅರ್ಚನೆಗಳು, ಸಂಕೀರ್ತನೆಗಳು ಮನಸ್ಸಿನ ನೆಮ್ಮದಿ ಮತ್ತು ಶಾಂತಿಗೆ ಮಾತ್ರ.
🌷🌷 ಪುತ್ರ, ಪೌತ್ರ, ಧನಂ, ಧಾನ್ಯಂ ಹಸ್ತ್ಯಶ್ವಾದಿಗವೇರಥಮ್ ಪ್ರಜಾನಾಂ ಭವಸಿ ಮಾತಾ ಆಯುಷ್ಯಂತಂ ಕರೋತು ಮೇ ಮಕ್ಕಳು, ಮೊಮ್ಮಕ್ಕಳು, ಧನ, ಧಾನ್ಯ, ಸಕಲ ಸಂಪತ್ತುಗಳನ್ನು ಕೊಟ್ಟು, ಅನುಭವಿಸಲು ಆರೋಗ್ಯ ಮತ್ತು ಆಯುಷ್ಯವನ್ನು ದೇವಿಯು ಎಲ್ಲರಿಗೂ ಕರುಣಿಸಲಿ.
ಲಕ್ಷ್ಮಿ ಕುಬೇರನ ವಿಗ್ರಹ ಹಸಿರು ಬಣ್ಣ
ಲಕ್ಷ್ಮಿ ದೇವಿಯನ್ನು ಮತ್ತು ಕುಬೇರ ದೇವನನ್ನು ಮನೆಯ ನಿಧಿಯ ರಕ್ಷಕನಾಗಿ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ಒದಗಿಸುವ ದೇವರಾಗಿ ಪೂಜಿಸಲಾಗುತ್ತದೆ. ಆದ್ದರಿಂದ ಮನೆಯಲ್ಲಿ ಕಡ್ಡಾಯವಾಗಿ ಲಕ್ಷ್ಮಿ ಕುಬೇರನ ಪ್ರತಿಮೆಯನ್ನು ಇಡಬೇಕೆಂದು ಹೇಳಲಾಗುತ್ತದೆ.
ಲಕ್ಷ್ಮಿ ಕುಬೇರನ ಪ್ರತಿಮೆಯನ್ನು ಅಂಗಡಿಗಳು, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಇಟ್ಟುಕೊಂಡು ಪೂಜಿಸುವ ಮೂಲಕ ವ್ಯಾಪಾರಗಳು ಅಭಿವೃದ್ಧಿ ಯಾಗುತ್ತದೆ.
ಲಕ್ಷ್ಮಿ ಕುಬೇರನ ಪ್ರತಿಮೆಯನ್ನು ಮನೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜಿಸುವುದರಿಂದ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತದೆ.
ಪ್ರತಿನಿತ್ಯ ಲಕ್ಷ್ಮಿ ಕುಬೇರನ ಪ್ರತಿಮೆಯನ್ನು ಪೂಜಿಸುವುದರಿಂದ ಸಂಪತ್ತು ಸಮೃದ್ಧಿಯಾಗುತ್ತದೆ.
ಸಂಪತ್ತು ಹೆಚ್ಚಿಸುವ ಕುಬೇರ ಲಕ್ಷ್ಮಿ ಲ್ಯಾಮಿನೇಟೆಡ್ ಫೋಟೋ ಫ್ರೇಮ್
ಈ ಕುಬೇರ ಲಕ್ಷ್ಮಿ ಲ್ಯಾಮಿನೇಟೆಡ್ ಫೋಟೋ ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
ಅಂಗಡಿಗಳು, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಈ ಕುಬೇರ ಲಕ್ಷ್ಮಿ ಯಾಮಿನೇಟೆಡ್ ಫೋಟೋ ಇಟ್ಟು ಪೂಜಿಸುವುದರಿಂದ ವ್ಯಾಪಾರಗಳು ವೃದ್ಧಿಯಾಗುತ್ತವೆ.
ಕುಬೇರ ಲಕ್ಷ್ಮಿ ಲ್ಯಾಮಿನೇಟೆಡ್ ಫೋಟೋ ಮನೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜಿಸುವುದರಿಂದ ಆರ್ಥಿಕ ತೊಂದರೆಗಳು ನಿವಾರಣೆಯಾಗುತ್ತದೆ.
ಪ್ರತಿನಿತ್ಯ ಕುಬೇರ ಲಕ್ಷ್ಮಿ ಲ್ಯಾಮಿನೇಟೆಡ್ ಫೋಟೋವನ್ನು ಪೂಜಿಸುವುದರಿಂದ ಸಂಪತ್ತು ಸಮೃದ್ಧಿಯಾಗುತ್ತದೆ.
Easy tricks to attract Sri Lakshmi
As mentioned in Shri Lakshmi Mahima, Goddess Lakshmi herself said this.
Yatraabhyagavadanmana Charana prakshalanam bhojan |
Shri Lakshmi Mahima
Satsegha Pitrudevarchana Vidhi Satyangavan Palanam ||
Dhanyanampi sagraho na kalhischatta truyu pa priya |
Drishta Praha Hari Vasami Kamala Tasmin grihe Nishphala ||
Meaning: Where guests come to entertain,
Where they are fed,
Where gentlemen are served,
Where God is worshiped and
Other rituals are performed with constant enthusiasm,
Where truth is followed,
Where there is no wrongdoings,
Where cows are protected,
Where grain is collected for charity,
Where there is no sorrow,
Where the wife is contented and humble,
I always stay calm in such a place.
I occasionally see their place of service.
ಶ್ರೀ ಲಕ್ಷ್ಮಿಯನ್ನು ಆಕರ್ಷಿಸಲು ಸುಲಭ ಉಪಾಯಗಳು
ಶ್ರೀ ಲಕ್ಷ್ಮೀ ಮಹಿಮಾದಲ್ಲಿ ಉಲ್ಲೇಖಿಸಿರುವಂತೆ, ಸ್ವತಃ ಲಕ್ಷಿ ದೇವರು ಇದನ್ನು ಹೇಳಿದ್ದಾರೆ.
ಯತ್ರಾಭ್ಯಾಗವದನ್ಮನ ಚರಣ ಪ್ರಕ್ಷಾಲನಂ ಭೋಜನ್ |
ಶ್ರೀ ಲಕ್ಷ್ಮೀ ಮಹಿಮಾ
ಸತ್ಸೇಘ ಪಿತೃದೇವಾರ್ಚನ ವಿಧಿ ಸತ್ಯಾಂಗವಾನ್ ಪಾಲನಂ ||
ಧಾನ್ಯಾನಮಪಿ ಸಗ್ರಹೋ ನ ಕಲ್ಹಿಶ್ಚತ್ತಾ ತೃಯು ಪ ಪ್ರಿಯಾ |
ದೃಷ್ಟ ಪ್ರಾಹ ಹರಿ ವಸಾಮಿ ಕಮಲಾ ತಸ್ಮಿನ್ ಗೃಹೇ ನಿಷ್ಫಲ ||
ಅರ್ಥ: ಎಲ್ಲಿ ಅತಿಥಿ ಸತ್ಕಾರಕ್ಕೆ ಬರುತ್ತಾರೋ,
ಅವರಿಗೆ ಎಲ್ಲಿ ಆಹಾರವನ್ನು ನೀಡಲಾಗುತ್ತದೆಯೋ,
ಎಲ್ಲಿ ಸಜ್ಜನರಿಗೆ ಸೇವೆ ಸಲ್ಲಿಸಲಾಗುತ್ತದೆಯೋ,
ಎಲ್ಲಿ ದೇವರನ್ನು ಪೂಜಿಸಲಾಗುತ್ತದೆಯೋ ಮತ್ತು
ಇತರ ಆಚರಣೆಗಳನ್ನು ನಿರಂತರ ಉತ್ಸಾಹದಲ್ಲಿ ನಡೆಸಲಾಗುತ್ತದೆಯೋ,
ಎಲ್ಲಿ ಸತ್ಯವನ್ನು ಅನುಸರಿಸಲಾಗುತ್ತದೆಯೋ,
ಎಲ್ಲಿ ಅಕ್ರಮಗಳು ನಡೆಯುವುದಿಲ್ಲವೋ,
ಎಲ್ಲಿ ಗೋವುಗಳನ್ನು ರಕ್ಷಿಸಲಾಗಿದೆಯೋ,
ಎಲ್ಲಿ ಧಾನ್ಯವನ್ನು ದಾನಕ್ಕಾಗಿ ಸಂಗ್ರಹಿಸಲಾಗುವುದೋ ,
ಎಲ್ಲಿ ದುಃಖವಿಲ್ಲವೋ,
ಎಲ್ಲಿ ಹೆಂಡತಿ ಸಂತೃಪ್ತಿ ಮತ್ತು ವಿನಮ್ರಳಾಗಿರುತ್ತಾಳೆ,
ಅಂತಹ ಸ್ಥಳದಲ್ಲಿ ನಾನು ಯಾವಾಗಲೂ ಶಾಂತವಾಗಿ ವಾಸವಿರುತ್ತೇನೆ.
ನಾನು ಸಾಂದರ್ಭಿಕವಾಗಿ ಅವರ ಸೇವೆಯ ಸ್ಥಳವನ್ನು ನೋಡುತ್ತೇನೆ.

