ಶ್ರೀ ರಾಘವೇಂದ್ರ ಸ್ವಾಮಿಯ ವಿಸ್ಮಯಕಾರಿ ಸಂಗತಿಗಳು । Amazing facts of Sri Raghavendra Swamy in kannada

ಶ್ರೀ ರಾಘವೇಂದ್ರ ಸ್ವಾಮಿಯ ವಿಸ್ಮಯಕಾರಿ ಸಂಗತಿಗಳು । Amazing facts of Sri Raghavendra Swamy

🌺 ಶ್ರೀ ರಾಘವೇಂದ್ರ ಗುರು ಸ್ತೋತ್ರ. 🌺

🎊 ಸ್ತೋತ್ರ ಸಾಹಿತ್ಯದಲ್ಲಿ ಅತ್ಯಂತ ಪ್ರಸಿದ್ಧವಾದ ಸ್ತೋತ್ರವೆಂದರೆ ಅದು ಶ್ರೀ ರಾಯರ ಸ್ತೋತ್ರ.

🎊 ಇದರ ರಚನೆಯ ಹಿನ್ನೆಲೆ ತಿಳಿಸುವ ಪುಟ್ಟ ಪ್ರಯತ್ನ. ಶ್ರೀ ಮಂತ್ರಾಲಯ ಮಹಾ ಪ್ರಭುಗಳ ಶಿಷ್ಯರಾದ ಶ್ರೀ ಬಿಚ್ಚಾಲಿ ಅಪ್ಪಣ್ಣ ಆಚಾರ್ಯರು ಇದನ್ನು ರಚನೆಯನ್ನು ಮಾಡಿದ್ದು. ಶ್ರೀ ರಾಯರು ವೃಂದಾವನ ಪ್ರವೇಶ ಸಮಯದಲ್ಲಿ ಅವರು ಅಲ್ಲಿ ಇರುವುದಿಲ್ಲ. ಅನೀರಿಕ್ಷಿತವಾಗಿ ತಿಳಿದು ಬಂದ ವಾರ್ತೆ ಇಂದ ಆಘಾತಗೊಂಡ ಶ್ರೀ ಅಪ್ಪಣ್ಣ ಆಚಾರ್ಯರು ತತ್‌ಕ್ಷಣವೇ ಮಂಚಾಲೆಗೆ ಧಾವಿಸುತ್ತಾರೆ.

🎊 ಶ್ರೀ ರಾಯರ ರೂಪ ವನ್ನು ಮನದಲ್ಲಿ ಚಿಂತಿಸುತ್ತಾ ತದೇಕಚಿತ್ತರಾಗಿ ಮಂಚಾಲೆ ಕಡೆ ಧಾವಿಸುತ್ತಿರುವಾಗ ಶ್ರೀ ಪೂರ್ಣಭೋದ ಎಂದು ಪ್ರಾರಂಭವಾದ ಸ್ತೋತ್ರ ಮಂಚಾಲೆಗೆ ಬಂದಾಗ ಯೋ ಭಕ್ತ್ಯಾ ಗುರು ರಾಘವೇಂದ್ರ.. ವಿಭೂತಿರತುಲಾ.. ಎಂಬ ಶ್ಲೋಕದವರೆಗೆ ಬಂದಿತ್ತಂತೆ.

🎊 ಗುರುಗಳ ಭವ್ಯವಾದ ವೃಂದಾವನ ವನ್ನು ನೋಡಿ ಅವರ ಹೃದಯ ಮತ್ತು ಕಣ್ಣು ತುಂಬಿ ಅವರ ಮಾತು ನಿಲ್ಲುತ್ತದೆ. ಆದರೆ ಆ ಸ್ತೋತ್ರ ಅಲ್ಲಿಗೆ ಅಪೂರ್ಣ ವಾಗಲಿಲ್ಲ. ತಮ್ಮ ಶಿಷ್ಯನ ವಾಣಿಗೆ ಶ್ರೀ ಮಂತ್ರಾಲಯ ಮಹಾಪ್ರಭುಗಳು ತಮ್ಮ ವಾಣಿಯನ್ನು ಜೋಡಿಸಿ “ಸಾಕ್ಷೀ ಹಯಾಸ್ಯೋತ್ರಹಿ” ಎಂದು ಹೇಳುತ್ತಾರೆ.

🎊 ಬೃಂದಾವನ ದಿಂದ ರಾಯರ ಧ್ವನಿ ಬಂದಿದ್ದು ಎಲ್ಲರಿಗೂ ಗೋಚರ ಮತ್ತು ಶ್ರವಣವಾಗಿದೆ. ಶ್ರೀ ಗುರುರಾಜರಿಂದ ಮುದ್ರೆ ಬಿದ್ದ ಸ್ತೋತ್ರ ವೆಂದು ಅಂದಿನಿಂದ ಇಂದಿನವರೆಗೂ ಮತ್ತು ಈ ಕ್ಷಣದವರೆಗೆ ಸಹ ಅಬಾಲ ವೃದ್ದರಾದಿ ಎಲ್ಲಾ ರಾಯರ ಭಕ್ತರು ಪಠಣೆ ಮಾಡುವುದು ರೂಢಿಯಲ್ಲಿದೆ.

🎊 ಶ್ರೀ ಅಪ್ಪಣ್ಣ ಆಚಾರ್ಯರು ಈ ಸ್ತೋತ್ರವನ್ನು ಮುಗಿಸಿದಾಗ ಶ್ರೀ ಗುರುರಾಜರು ವೃಂದಾವನ ಒಳಗಿದ್ದು ಶ್ರೀ ಹರಿಯ ಇನ್ನೊಂದು ರೂಪವಾದ ಶ್ರೀ ಹಯಗ್ರೀವ ದೇವರ ಸ್ತೋತ್ರವನ್ನು ಮಾಡುತ್ತಾ ಇದ್ದರಂತೆ. ಆದ್ದರಿಂದ ಕೊನೆಯಲ್ಲಿ ಹಯಗ್ರೀವನೇ ಸಾಕ್ಷಿ ಎಂದು ಹೇಳಿದ್ದಾರೆ. ಈ ಸ್ತೋತ್ರ ಮಹಿಮೆ.

🎊 ಇದನ್ನು ಭಕ್ತಿ ಶ್ರದ್ಧೆ ಮತ್ತು ವಿಶ್ವಾಸ ದಿಂದ ಪಠಣೆ ಮಾಡಿದವರಿಗೆ ಶ್ರೀ ಹರಿಯ ಕರುಣೆ ಎಂಬ ಪ್ರಸಾದ ಸಿಗುತ್ತದೆ ಮತ್ತು ಅವರ ಇಷ್ಟಾರ್ಥ ಸಿದ್ದಿಯಾಗುವುದು ಎಂಬುವದು ಬರಿ ಶ್ರೀ ಅಪ್ಪಣ್ಣ ಆಚಾರ್ಯರು ಮಾತಲ್ಲ. ನನಗು ಸಹ ಸಮ್ಮತ ಎನ್ನುವದು ಶ್ರೀ ಹಯಗ್ರೀವ ದೇವರು ರಾಯರ ಅಂತರಂಗ ದಲ್ಲಿದ್ದು ನುಡಿದಿದ್ದಾರೆ.

🎊 ಇದನ್ನು ಅರಿತ ಶ್ರೀ ರಾಯರು “ಸಾಕ್ಷೀ ಹಯಾಸ್ಯೋತ್ರಹಿ” ಎಂದು ವೃಂದಾವನ ಒಳಗಿದ್ದುಕೊಂಡು ಘೋಷಿಸಿದ್ದಾರೆಂದು ಇದರ ಹಿನ್ನೆಲೆ ಆಗಿದೆ.

ಓಂ ಶ್ರೀ ರಾಘವೇಂದ್ರಾಯ ನಮಃ

ಓಂ ಮಂತ್ರಾಲಯ ನಿವಾಸಿನೇ ನಮಃ

ಓಂ ಶ್ರೀರಾಮಮಾನಸಾಯ ನಮಃ

ಓಂ ದೇವಕೀನಂದನಾಯ ನಮಃ

ಓಂ ಹಯಗ್ರೀವ ಸ್ವಾಮಿ ನಮಃ

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ