ಚಾತುರ್ಮಾಸ್ಯದ ಪ್ರಧಾನ ನಿಯಮಗಳು
ಆಷಾಡ ಶುಕ್ಲ ಏಕಾದಶಿಯಿಂದ ಆರಂಭ, ಕಾರ್ತೀಕ ಶುದ್ಧ ದ್ವಾದಶಿಗೆ ಮುಕ್ತಾಯ (ಉಪವಾಸಾದಿ ವ್ರತಗಳು) ಬಾಕಿ ವ್ರತಗಳು ಕಾರ್ತೀಕ ಹುಣ್ಣಿಮೆಯಂದು ಮುಕ್ತಾಯ.
ವನ ಭೋಜನ (ಧಾತ್ರಿ ಹವನ) ದೊಂದಿಗೆ ಈ ಚಾತುರ್ಮಾಸ್ಯ ವ್ರತವು ಸಂಪನ್ನವಾಗುವುದು.
೧. ಆಷಾಡ ಶುಕ್ಲ ದ್ವಾದಶಿಯಿಂದ ಒಂದು ಮಾಸ ಪರ್ಯಂತ ಶಾಕ ವ್ರತ. ಆಗ ತರಕಾರಿಗಳು ಉಪಯೋಗಿಸಲು ಬರುವುದಿಲ್ಲ.
ಉಪ್ಪಿನ ಬದಲಾಗಿ ಸೈಂಧವ ಲವಣ
ಖಾರಕ್ಕೆ ಮೆಣಸಿನಕಾಯಿ ಬದಲಾಗಿ ಮೆಣಸು ಜೀರಿಗೆ
ಹುಳಿಗೆ ಕೆಲವರು ಮಾವಿನ ಕಾಯಿ ಪುಡಿ ಬಳಸಿದರೆ ಮತ್ತೆ ಕೆಲವರಿಗೆ ಮಾವಿನಕಾಯಿ ಪುಡಿ ಬದಲಿಗೆ ಹಳೇ ಹುಣಸೇ ಹಣ್ಣು ಉಪಯೋಗಿಸುತ್ತಾರೆ (ಸಂಪ್ರದಾಯ ಭೇದದಿಂದಾಗಿ) ನೆಲ್ಲಿಕಾಯಿ ಪುಡಿಯನ್ನೂ ಉಪಯೋಗಿಸ ಬಹುದು ಆದರೆ ಅದನ್ನು ಕೆಲವು ನಿಷಿದ್ಧ ದಿನಗಳಲ್ಲಿ ಉಪಯೋಗಿಸುವ ಹಾಗಿಲ್ಲ
೨ . ದಧಿ ವ್ರತ: ನಂತರದ ಒಂದು ಮಾಸ ಪೂರ್ತಿ ಮೊಸರು ಬರೋದಿಲ್ಲ (ಅನಿಷಿದ್ಧ ತರಕಾರಿ ಬರುತ್ತೆ) ಬೆಣ್ಣೆ ತೆಗೆದ ಮಜ್ಜಿಗೆ ಮಾತ್ರ ಸ್ವೀಕಾರಾರ್ಹ.
೩ . ಕ್ಷೀರ ವ್ರತ: ನಂತರ ಒಂದು ತಿಂಗಳಲ್ಲಿ ಹಾಲು ಬರೋದಿಲ್ಲ (powder ಹಾಲು ಕೂಡ ಬರೋದಿಲ್ಲ)
೪ . ದ್ವಿದಳ ವ್ರತ: ಕೊನೆಯ ತಿಂಗಳಲ್ಲಿ ಬೇಳೆಗಳು, ಕಾಳುಗಳು, ಬಹುಬೀಜ ಪದಾರ್ಥಗಳು ಸ್ವೀಕರಿಸಲು ಬರೋದಿಲ್ಲ.
ಇವೆಲ್ಲದ್ದಕ್ಕೂ ಆರಂಭದ ದಿನದಲ್ಲಿ ಸಂಕಲ್ಪವನ್ನು, ಅಂತ್ಯದ ದಿನದಲ್ಲಿ ಬಿಟ್ಟ ಪದಾರ್ಥಗಳನ್ನು ದಾನ ಮಾಡಿ ಸಮರ್ಪಣೆ ಮಾಡಿ, ನಂತರ ಹೊಸ ವ್ರತದ ಸಂಕಲ್ಪವನ್ನು ಮಾಡಬೇಕು.
ಚಾತುರ್ಮಾಸ್ಯ ಮಾಡುವವರು ಒಮ್ಮೆ ಗಮನಿಸಿ
ಮುಖ್ಯ ವ್ರತದೊಂದಿಗೆ ಕೆಲವು ಸಣ್ಣಪುಟ್ಟ ನಿಯಮಗಳನ್ನೂ ಅಳವಡಿಸಿಕೊಂಡರೆ ಹೆಚ್ಚಿನ ಸಫಲತೆ ಹೊಂದಿದಂತಾಗುವುದು.
- ೧. ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು
- ೨. ಸೂರ್ಯೋದಯದೊಳಗೆ ಸಂಧ್ಯಾವಂದನೆ ಹಾಗು ತ್ರಿಕಾಲ ಸಂಧ್ಯಾ
- ೩. ಸೂರ್ಯೋದಯದೊಳಗೆ ದೇವರ ನಿರ್ಮಾಲ್ಯ ವಿಸರ್ಜನೆ
- ೪. ಬಾಹ್ಯ ಆಂತರಕ ಶೌಚ
- ೫. ಕೋಪ ತ್ಯಾಗ
- ೬. ನಿಷಿದ್ಧವಾದ್ದನ್ನು ಅಪೇಕ್ಷಿಸದೆ ಇರುವುದು
- ೭. ನಿತ್ಯ ದಾನ
- ೮. ನಿತ್ಯ ಗೋಗ್ರಾಸ
- ೯. ಪೂಜೆ/ವೈಶ್ವದೇವ/ಬಲಿಹರಣ/ಬ್ರಹ್ಮ ಯಜ್ಞ
- ೧೦. ನಿತ್ಯದಲ್ಲೂ ಹೊಸದಾಗಿ ಒಂದು ಗೀತಾ/ಭಾಗವತ ಶ್ಲೋಕವನ್ನು ಕಲಿತು ಭಗವಂತನಿಗೆ ಜ್ಞಾನ ಪುಷ್ಪವೆಂದು ಸಮರ್ಪಿಸೋದು
- ೧೧. ಧ್ಯಾನ ಅಥವಾ ದೇವರ ಗುಣ ಚಿಂತನೆ ಮಾಡೋದು (ಕನಿಷ್ಠ ಒಂದು ಹತ್ತಾದರೂ)
- ೧೨. ಏಕಭುಕ್ತ (ಒಮ್ಮೆ ಮಾತ್ರ ಊಟ ಮಾಡೋದು, ಹಗಲಿನಲ್ಲಿ)
- ೧೩. ನಕ್ತ ಭೋಜನ (ರಾತ್ರಿ ಮಾತ್ರ ಊಟ)
- ೧೪. ಅಲವಣ (ಉಪ್ಪಿಲದ ಆಹಾರ)
- ೧೫. ದರ್ಭಶಯನ ಅಥವಾ ಭೂಮಿಶಯನ (ದರ್ಭಾಸನದ ಮೇಲೆ ಅಥವಾ ಬರೀ ನೆಲದ ಮೇಲೆ ಮಲಗೋದು)
- ೧೬. ಆಮಲಕ ಸ್ನಾನ (ನೆಲ್ಲಿ ಪುಡಿಯನ್ನು ಹಚ್ಚಿಕೊಂಡು ಸ್ನಾನ…… ನಿಷಿದ್ಧ ದಿನಗಳಲ್ಲಿ ಬಿಟ್ಟು)
- ೧೭. ದಿನಕ್ಕೊಂದು ಹರಿಕಥಾಮೃತಸಾರ ಪದ್ಯ ಕಲಿತು/ಅರ್ಥ ಮಾಡಿಕೊಂಡು ದೇವರಿಗೆ ಸಮರ್ಪಿಸೋದು
- ೧೮. ಮೌನ ವ್ರತ (ಶಾಸ್ತ್ರದಲ್ಲಿ ಹೇಳಿದಂತೆ, ಭೋಜನ ಸಮಯದಲ್ಲಾದರೂ)
- ೧೯. ಗೋ ಪದ್ಮ
- ೨೦. ಧಾರಣ ಪಾರಣ(ಒಂದು ದಿನ ಉಪವಾಸ ಒಂದು ದಿನ ಆಹಾರ ಸ್ವೀಕಾರ)
- ೨೧. ಏಕಾದಶಿ ನಿಟ್ಟುಪವಾಸದ ಜೊತೆ ಜಾಗರಣೆ
ಹೀಗೆ ಇತ್ಯಾದಿ ನಿಯಮಗಳನ್ನು / ಉಪವ್ರತಗಳನ್ನು ಪರಿಗಣಿಸಿ. ಯಾರು ಯಾವುದನ್ನು ಮಾಡುತ್ತಿಲ್ಲವೋ / ಮಾಡಿಲ್ಲವೋ ಅದನ್ನು ಗಮನದಲ್ಲಿಟ್ಟುಕೊಂಡು ಆಚರಣೆಗೆ ತರೋದು ಅತ್ಯುತ್ತಮ.
ಸಣ್ಣ ಪುಟ್ಟ ನಿಯಮಕ್ಕೂ ಶ್ರೀಹರಿ ಪ್ರೀತನಾಗುವ…ನಾವು ಮನಸ್ಸು ಮಾಡಬೇಕಷ್ಟೇ
ಚಾತುರ್ಮಾಸ್ಯ ಮುಂದೆ ಬರುತ್ತಿರುವಂತಹ ಮಾಹಾಪರ್ವ ಕಾಲ ಈ ಅವಧಿಯಲ್ಲಿ ಮಾಹಾವಿಷ್ಣುವು ಶಯನ ಅವಸ್ಥೆಯಲ್ಲಿರುವನು ಹಾಗಾಗಿ ಈ ಸಂದರ್ಭದಲ್ಲಿ ಮಾಡುವಂತಹ ಪೂಜೆ , ಜಪ , ಅನುಷ್ಠಾನ, ವ್ರತ ಮತ್ತು ಉಪವಾಸ ಆದಿಗಳಿಗೆ ಬಹಳಷ್ಟು ಪ್ರಾಮುಖ್ಯತೆ ಇರುವುದು.
ಹಾಗೆಯೆ ಈ ೧೨೦ ದಿನಗಳಲ್ಲಿ ಮಾಡುವ ತಾಂತ್ರಿಕ , ಲಾಲಕಿತಾಬ ಮತ್ತು ವೈದಿಕ ಉಪಾಯಗಳ ಶಕ್ತಿಯು ದ್ವೀಗುಣವಾಗಿರುವುದು. ಇದರ ಸದುಪಯೋಗವನ್ನು ಸಾತ್ವಿಕರು ಪಡೆಯಲಿ ಎಂಬುದು ನಮ್ಮ ಆಶಯ
ಸೂರ್ಯನನ್ನು ಜಾತಕದಲ್ಲಿ ಬಲಪಡಿಸಲು ಮಾಡಿ ಈ ಉಪಾಯವನ್ನು
ಆತ್ಮಕಾರಕನಾದ ಸೂರ್ಯನು ಜಾತಕನಿಗೆ ಮಾನ, ಅಧಿಕಾರ, ಸರ್ಕಾರಿ ಸ್ಥಾನಮಾನ, ವರ್ಚಸ್ಸನ್ನು ಕೊಡುವುದಷ್ಟೆ ಅಲ್ಲದೆ ಆತ್ಮಕಾರಕ ಗ್ರಹವು ಕೂಡ .
ಹಾಗಾಗಿ ಸೂರ್ಯನನ್ನು ಬಲಪಡಿಸುವುದು ಅಥವಾ ಅವನ ಶುಭ ಪ್ರಭಾವ ಹೆಚ್ಚಿಸಲು ಕೆಳಗಿನ ಉಪಾಯಗಳನ್ನು ಮಾಡಬಹುದು.
