ನಿಮ್ಮ ಮಗು ಚೆನ್ನಾಗಿ ಓದಬೇಕೆ? ಹಾಗಾದರೆ ನೀವಿದನ್ನು ಓದಿ.
ವಿದ್ಯೆಗೆ ಸಂಬಂಧಿಸಿದಂತೆ ಜ್ಯೋತಿಷ್ಯ ಶಾಸ್ತದ ಪ್ರಕಾರ ಪುಟ್ಟ ಮಾಹಿತಿ….
ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು ಎಂಬ ಆಸೆ ಎಲ್ಲಾ ಪೋಷಕರಲ್ಲೂ ಇರುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಮಯ ಹಾಗೂ ಹಣ ಎರಡನ್ನೂ ವ್ಯಯಿಸುತ್ತಾರೆ ಪೋಷಕರು. ಹೀಗಿರುವಾಗ ನಮ್ಮ ವಿಶಿಷ್ಟ ಪುರಾತನ ಜ್ಯೋತಿಷ ಶಾಸ್ತ್ರದ ಸಹಾಯವನ್ನೂ ಪಡೆದರೆ ಗುರಿ ಮುಟ್ಟುವುದು ಸ್ವಲ್ಪ ಮಟ್ಟಿಗೆ ಸುಲಭ ಸಾಧ್ಯ ಆಗುವುದರಲ್ಲಿ ಸಂಶಯವಿಲ್ಲ.
ಜ್ಯೋತಿಷ ಶಾಸ್ತ್ರದ ಪ್ರಕಾರ, ವಿದ್ಯೆ ಚೆನ್ನಾಗಿ ಸಿಗಬೇಕು ಎಂದರೆ ಆ ಜಾತಕದಲ್ಲಿ ಪ್ರಮುಖವಾಗಿ ಗುರು ಗ್ರಹ ಹಾಗೂ ಬುಧ ಗ್ರಹ ಈ ಎರಡೂ ಗ್ರಹಗಳು ಚೆನ್ನಾಗಿರಬೇಕು. ವಿದ್ಯಾಕಾರಕ ಬುಧ ಹಾಗೂ ಜ್ಞಾನಕಾರಕ ಗುರು ಈ ಎರಡೂ ಗ್ರಹಗಳು ವಿದ್ಯಾ ಪ್ರಾಪ್ತಿಯಲ್ಲಿ ವಿಶೇಷ ಪಾತ್ರ ವಹಿಸುತ್ತವೆ.
ಗಣಿತ ಶಾಸ್ತ್ರ ಎಂಬುದು ಬಹಳಷ್ಟು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಇದಕ್ಕೆ ಕಾರಣ ಕೆಲವೊಮ್ಮೆ ಅಂಥವರ ಜಾತಕದಲ್ಲಿ ಬುಧನ ಸ್ಥಿತಿ ಮೇಷ, ಕರ್ಕ, ವೃಶ್ಚಿಕ ಹಾಗೂ ಮೀನ ಈ ರಾಶಿಗಳಲ್ಲಿ ಬುಧ ಜಾತಕದಲ್ಲಿ ಇದ್ದಾಗ ರಾಶ್ಯಾಧಿಪತಿಯೊಂದಿಗಿನ ವೈರತ್ವ ಅಥವಾ ನೀಚತ್ವದಿಂದಾಗಿ ತನ್ನ ಬಲ ಕಳೆದುಕೊಳ್ಳುವ ಬುಧ ಜಾತಕನಿಗೆ ಒಳ್ಳೆಯ ವಿದ್ಯೆ ಕೊಡುವಲ್ಲಿ ವಿಫಲನಾಗುತ್ತಾನೆ. ಇನ್ನು ಗುರು ಗ್ರಹವೂ ವ್ಯಯದಲ್ಲಿದ್ದರೆ ಅಥವಾ ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಈ ಯಾವುದಾದರೊಂದು ರಾಶಿಯಲ್ಲಿದ್ದರೆ ಗುರು ಗ್ರಹವೂ ಬಲಹೀನನಾಗಿ ವಿದ್ಯಾರ್ಥಿಗಳು ಬಹಳ ಕಷ್ಟಪಡಬೇಕಾಗುತ್ತದೆ.
ಕರ್ಮಾಧಿಪತಿ ಗ್ರಹದ ಪಾತ್ರ
ಪ್ರತಿಯೊಬ್ಬರ ಜಾತಕದಲ್ಲೂ ಕರ್ಮಾಧಿಪತಿ ಗ್ರಹ ಎಂದಿರುತ್ತದೆ. ಅಂಥ ಕರ್ಮಾಧಿಪತಿ ಗ್ರಹ ಯಾವ ಉದ್ಯೋಗವನ್ನು ಸೂಚಿಸುತ್ತದೆಯೋ ಅದನ್ನೇ ಮೊದಲಿನಿಂದಲೂ ಅಭ್ಯಸಿಸಿ, ಅದೇ ವಿಷಯದಲ್ಲಿ ಪದವಿ ಪಡೆದರೆ ಭವಿಷ್ಯದಲ್ಲಿ ಉದ್ಯೋಗ ದೊರಕುವುದು ಸುಲಭವಾಗಿರುತ್ತದೆ.
ಬುಧ ಹಾಗೂ ಗುರು ಗ್ರಹಗಳು ಚೆನ್ನಾಗಿದ್ದರೂ ಕೆಲವರಿಗೆ ವಿದ್ಯೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕೆ ಮುಖ್ಯ ಕಾರಣ ಸರ್ಪದೋಷ. ಈ ದೋಷದಿಂದಾಗಿ ಶ್ರದ್ಧೆಯಿಂದ ಓದಿದರೆ ಒಳ್ಳೆಯ ವಿದ್ಯೆ ಪಡೆಯಬಹುದಾದ ವಿದ್ಯಾರ್ಥಿಗಳೂ ಸಿಟ್ಟು ಹಾಗೂ ಬೇಡದ ಹಠ ಮಾಡಿ ವಿದ್ಯೆಯಿಂದ ವಂಚಿತರಾಗುತ್ತಾರೆ.
ಇನ್ನು ರಾಹು ಕೇತುಗಳ ದುಷ್ಪರಿಣಾಮಗಳು ಕೂಡಾ ವಿದ್ಯೆಗೆ ಅಡ್ಡಿಯನ್ನುಂಟುಮಾಡುತ್ತದೆ.
ಹಾಗೆಯೇ ಶುಕ್ರ ಗ್ರಹ ಕೂಡಾ ವಿದ್ಯೆಯ ವಿಷಯದಲ್ಲಿ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ
ಏಕೆಂದರೆ ಶುಕ್ರ ಜ್ಞಾನಕಾರಕನೂ ಹೌದು ಅವನು ನೀಚ ಅಥವಾ ಮಾರಕನಾದರೇ ಓದಿದ್ದು ಅರ್ಥವಾಗದೇ ಹೋಗಬಹುದು..!
ಆದರೇ ಎಲ್ಲದಕ್ಕೂ ಪರಿಹಾರ ಎಂಬುದಿದೆ… ಅದೇನು ಎಂಬುದನ್ನು ನೋಡೋಣ….
ಪರಿಹಾರಗಳು….
ಇಂಥ ಸಮಸ್ಯೆಗಳ ಪರಿಹಾರದ ವಿಚಾರಕ್ಕೆ ಬಂದಾಗ ಪೋಷಕರು ಹೆಚ್ಚಿನ ಆಸಕ್ತಿ ತೋರಬೇಕಾಗುತ್ತದೆ. ಮಕ್ಕಳ ಜಾತಕವನ್ನು ಯೋಗ್ಯ ಜ್ಯೋತಿಷಿಗಳ ಬಳಿ ಕೊಟ್ಟು ಪರಿಶೀಲಿಸಿಸಬೇಕು. ಬುಧನ ದೋಷ ಪರಿಹಾರಕ್ಕಾಗಿ ಪುರುಷ ಸೂಕ್ತ ಹವನ (ಅಥವಾ ಪಠಣ)ಹಾಗೂ ಗುರು ದೋಷ ಪರಿಹಾರಕ್ಕೆ ಗುರು ಮಂತ್ರ ಜಪ, ಸ್ತೋತ್ರವನ್ನು ಮಾಡಿಸಬೇಕು ಅಥವಾ ಹವನ ಮಾಡಿಸಬೇಕು. ಅದರಲ್ಲೂ ಸರಸ್ವತಿ ಮಂತ್ರ ಹವನ ದಿಂದ ಖಂಡಿತ ವಿಶೇಷ ಫಲ ಸಿಗುತ್ತದೆ. ಇನ್ನು ಹವನ ಮಾಡಿಸಲು ಅಸಾಧ್ಯವಾದ ಅಶಕ್ತರು ಯಂತ್ರ ಮುದ್ರಿತ ಅಥವಾ ಶಾಸ್ತ್ರೋಕ್ತವಾಗಿ ಕೈಯಲ್ಲೇ ತಾಮ್ರದ ತಗಡಿನಲ್ಲಿ ಸರಸ್ವತಿ ಯಂತ್ರ ಬರೆಸಿ ಅದನ್ನು ತಮ್ಮ ಮಕ್ಕಳ ಕೈನಲ್ಲಿ ಪೂಜೆ ಮಾಡಿಸಿ ಧಾರಣೆ ಮಾಡಿಸಬಹುದು.
ನಿತ್ಯ ಸರಸ್ವತಿ ಅಷ್ಟೋತ್ತರ ಓದಿಸಬೇಕು.
ಮನೆಯ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಕುಳಿತು ಓದಲು ಮಕ್ಕಳಿಗೆ ಹೇಳಬೇಕು;ಏಕೆಂದರೆ ಈಶಾನ್ಯ ದೇವಮೂಲೆ ಆಗಿರುವುದರಿಂದ ಓದಿದ್ದು ತಲೆಯಲ್ಲಿ ಉಳಿಯಲು ಸಹಾಯಕ ಆಗುತ್ತದೆ.
ಇವುಗಳಲ್ಲಿನ ಯಾವುದಾದರೂ ಒಂದನ್ನು ಮಾಡಿ ಪ್ರಾಮಾಣಿಕ ಪರಿಹಾರ ಕಂಡುಕೊಂಡ ಅನೇಕರ ಉದಾಹರಣೆಗಳೂ ಕೂಡಾ ನಮ್ಮಲ್ಲಿ ಇದೆ..!
ಕೊನೆಯಲ್ಲಿ ಒಂದು ಮಾತು….
ಬಾಲ್ಯದಲ್ಲಿ ದೈವ ದೇವರು ಗುರುಹಿರಿಯರ ಆಶೀರ್ವಾದ ಗಳಿಸುವಂತೆ ತಮ್ಮ ಮಕ್ಕಳನ್ನು ರೂಪಿಸುವ ಜವಾಬ್ದಾರಿ ಹೆತ್ತವರಿಗೆ ಇದೆ ಎಂಬುದನ್ನು ಮರೆಯಬಾರದು..!
ಏಕೆಂದರೆ ಆ ಆಶೀರ್ವಾದ ಬಲದಿಂದ ಕೂಡ ಗ್ರಹಗತಿಗಳು ಉತ್ತಮ ಫಲ ನೀಡುತ್ತವೆ ಎನ್ನುವುದ ಮರೆಯಬಾರದು..!
