Devine yellow background with red footer having the panchanga image with the text ಮುಹೂರ್ತ-ಪಂಚಾಂಗ-ನಕ್ಷತ್ರ-ಅಂದ್ರೆ-ಏನು-ಇದನ್ನು-ಸರಳವಾಗಿ-ಅರ್ಥ-ಮಾಡಿಕೊಳ್ಳಿ.-understanding-of-Muhoortha-Panchanga-Nakshatra-acharane-ಆಚರಣೆ including acharane.com logo

ಮುಹೂರ್ತ, ಪಂಚಾಂಗ, ನಕ್ಷತ್ರ ಅಂದ್ರೆ ಏನು? ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಿ. | understanding of Muhoortha, Panchanga & Nakshatra

ಮುಹೂರ್ತ ಪಂಚಾಂಗ ಅಂದ್ರೆ ಏನು? ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಿ.

Index of Important Points

ಪಂಚಾಂಗವು ಹಿಂದೂ ಸಮಯಪಾಲನೆಯ ಸಾಂಪ್ರದಾಯಿಕ ಘಟಕಗಳನ್ನು ಅನುಸರಿಸುತ್ತದೆ ಮತ್ತು

ಪ್ರಮುಖ ದಿನಾಂಕಗಳು ಮತ್ತು ಅವುಗಳ ಲೆಕ್ಕಾಚಾರಗಳನ್ನು ಕೋಷ್ಟಕ ರೂಪದಲ್ಲಿ ಪ್ರಸ್ತುತಪಡಿಸುತ್ತದೆ.

ಪಂಚಾಂಗವು ಆಕಾಶದ ವಿದ್ಯಮಾನಗಳಾದ ಸೌರ ಗ್ರಹಣಗಳು, ಹವಾಮಾನ ಮುನ್ಸೂಚನೆ

(ಮಳೆ, ಶುಷ್ಕ ಕಾಗುಣಿತಗಳು) ಮತ್ತು ಅನೇಕ ಪ್ರಾಪಂಚಿಕ ಘಟನೆಗಳನ್ನು ಮುನ್ಸೂಚಿಸುತ್ತದೆ.

ಪಂಚಾಂಗ ಎಂಬುದು ಸಂಸ್ಕೃತ ಪದವಾಗಿದ್ದು, ಅಕ್ಷರಶಃ “ಐದು ಅಂಗಗಳನ್ನು ಹೊಂದಿರುವ” ಅರ್ಥ.

ಸರಳವಾಗಿ ಹೇಳುವುದಾದರೆ, “ಪಂಚಾಂಗ” ಎಂದರೆ ಪ್ರತಿ ದಿನದ “ದಿನ/ರಾಶಿ, ನಕ್ಷತ್ರ, ತಿಥಿ, ಯೋಗ, ಕರಣ”.

ಸರಳ ಮಹೂರ್ಥ ಅಧ್ಯಯನವಿಚಾರಧಾರೆ

ಪಂಚಾಂಗ ಶ್ರವಣ, ಪಂಚಾಂಗ ಪಠಣ ಹಾಗೂ ಪಂಚಾಂಗ ನೋಡುವುದರಿಂದ ಏನು ಪ್ರಯೋಜನ?

ನಿತ್ಯ ಪಂಚಾಂಗ  ನೋಡುವುದರಿಂದ  ನಮಗೇನುಲಾಭವೆಂದು  ಮನಸ್ಸಿನಲ್ಲಿ  ಇರಬಹುದು. ಅಂತಹ  ಪ್ರಶ್ನೆಯನ್ನು  ನಿರ್ಮೂಲನೆಮಾಡಲು  ಈ  ಉತ್ತರ.

ಮೊದಲು  ಪಂಚಾಂಗ  ವೆಂದರೇ, ದಿನನಿತ್ಯವೂ  ಬದಲಾಗುವ  ಪಂಚ  ಅಂಗಗಳಿಂದ  ಕೂಡಿದ  ಗಣಿತದ ಗಣಿ  ಅದು  ಪಂಚಾಂಗವೆಂದು  ಕರಿಯಲ್ಪಡುತ್ತದೆ.

 ಆ  ಪಂಚ  ಅಂಗಗಳು

  1. ☀️ ತಿಥಿ
  2. ☀️ವಾರ
  3. ☀️ ನಕ್ಷತ್ರ
  4. ☀️ಯೋಗ
  5. ☀️ಕರಣ

ಇವು ದಿನನಿತ್ಯವೂ ಬದಲಾವಣೆ ಆಗುತ್ತದೆ.

ಇದರೊಟ್ಟಿಗೆ ವಿಷ ಮತ್ತು ಅಮೃತ ಘಳಿಗೆಗಳು ಸೇರಿರುತ್ತದೆ.  

ಅದನ್ನು  ಸ್ಮರಣೆ  ಮಾಡುವುದರಿಂದ,  ಅಥವಾ  ಮತ್ತೊಬ್ಬರ  ಬಾಯಿಯಿಂದ  ಕೇಳುವುದರಿಂದ  ತುಂಬಾ  ಉಪಯೋಗವಿದೆ. 

ಅದು ಏನೆಂದರೆ

ತಿಥ್ಯೈಶ್ವರ್ಯ ಮವಾಪ್ನೊತಿ ವಾರದಾಯುಷ್ಯ ವರ್ಧನಂ|
ನಕ್ಷತ್ರಾತ್ ಹರತೆ ಪಾಪಂ ಯೋಗಾದ್ರೋಗ ನಿವಾರಣಮ್||
ಕರಣಾತ್ ಕಾರ್ಯಸಿದ್ದಿಂ ಚ ಗರಲಾತ್ ಶತ್ರುನಾಶನಂ|
ಅಮೃತಾತ್ ಸರ್ವಸೌಖ್ಯಂ ಚ ಪಂಚಾಂಗ ಫಲಮುತ್ತಮಮ್||

  1. ☀️ತಿಥಿಯನ್ನು ಉಚ್ಚರಿಸುವುದರಿಂದ ಅಥವಾ ಕೇಳುವುದರಿಂದ ಸಂಪತ್ತು ಸ್ಥಿರವಾಗಿರುತ್ತದೆ.
  2. ☀️ವಾರದಿಂದ ಆಯುಷ್ಯ ಅಭಿವೃದ್ಧಿಯಾಗುತ್ತದೆ.
  3. ☀️ ನಕ್ಷತ್ರದಿಂದ  ನಾವು  ಮಾಡಿದ  ಪಾಪಗಳನ್ನು  ನಾಶವಾಗುತ್ತದೆ (ಹಾಗೆಂದು  ಹೆಚ್ಚಿನ  ಪಾಪ  ಮಾಡುವುದು  ಬೇಡ)
  4. ☀️ಯೋಗದಿಂದ   ನಮ್ಮಲ್ಲಿ  ಅಡಗಿರುವ  ರೋಗವನ್ನು  ನಿಯಂತ್ರಿಸುತ್ತದೆ.
  5. ☀️ ಕರಣದಿಂದ   ಆ  ದಿನ  ನಾವು  ಸಂಕಲ್ಪಿಸಿದ  ಕಾರ್ಯದಲ್ಲಿ   ಜಯವನ್ನು  ಸಾಧಿಸಬಹುದು, ನಮಗಿಂತಲು  ಮೊದಲು  ಆ  ಸ್ಥಳದಲ್ಲಿ   ನಮಗೆ  ವಿಜಯವನ್ನು  ಸಾದಿಸಿಕೊಡಲು  ನಮಗಾಗಿ  ಕಾಯುತ್ತಾ  ಇರುತ್ತದೆ  ಆ  ಕರಣವೆಂಬ  ಹೆಸರು.
  6. ☀️ವಿಷ ಘಳಿಗೆಯಿಂದ ಶತ್ರು ನಿವಾರಣೆ ಮತ್ತು ಮನಸ್ಸಿನ ಕಹಿ ನಿವಾರಣೆ.
  7. ☀️ಅಮೃತ ಘಳಿಗೆಯಿಂದ ಸರ್ವರಿಗೂ ಸಖ ದೊರಕುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಈ ರೀತಿಯಾಗಿ ಪಂಚಾಂಗದ ಫಲವು ಉತ್ತಮವಾಗಿದೆ.

ಅಧ್ಯಾಯ  – 1

ಕಾಲಗಣನೆ ಮತ್ತು ಪಂಚಾಂಗದ ಬಗ್ಗೆ ತಿಳುವಳಿಕೆ  ಪ್ರಾಥಮಿಕವಾಗಿ   ನಾವು   ಮಹೂರ್ಥ ಅಧ್ಯಯನ ಮಾಡುವಾಗ   ಗಮನಹರಿಸಬೇಕು

14 ಮನ್ವಂತರಗಳು ಯಾವುವು?

ಪ್ರತಿ ಮನ್ವಂತರವು 43,200 ಮಾನವ ವರ್ಷಗಳನ್ನು ಅಥವಾ ಬ್ರಹ್ಮ ದೇವರ 1/14 ನೇ ದಿನವನ್ನು ಒಳಗೊಂಡಿದೆ.

14 ಮನ್ವಂತರಗಳ ಕಾಲಾವಧಿಯು ಬ್ರಹ್ಮ ದೇವರ ಒಂದು ದಿನ.

  • 1. ಸ್ವಯಂಭೂ ಮನ್ವಂತರ
  • 2. ಸ್ವಾರೋಚಿಷ ಮನ್ವಂತರ
  • 3. ಉತ್ತಮ ಮನ್ವಂತರ
  • 4. ತಪಸ/ತಾಮಸ ಮನ್ವಂತರ
  • 5. ರೈವತ ಮನ್ವಂತರ
  • 6. ಚಕ್ಷುಷ ಮನ್ವಂತರ
  • 7. ವೈವಸ್ವತ ಮನ್ವಂತರ (ಪ್ರಸ್ತುತ)
  • 8. ಸಾವರ್ಣಿ ಮನ್ವಂತರ
  • 9. ದಕ್ಷ ಸಾವರ್ಣಿ ಮನ್ವಂತರ
  • 10. ಬ್ರಹ್ಮ ಸಾವರ್ಣಿ ಮನ್ವಂತರ
  • 11. ಧರ್ಮ ಸವರ್ಣಿ ಮನ್ವಂತರ
  • 12. ರುದ್ರ ಸಾವರ್ಣಿ ಮನ್ವಂತರ
  • 13. ರೌಚ್ಯ ಅಥವಾ ದೇವ ಸಾವರ್ಣಿ ಮನ್ವಂತರ
  • 14.ಇಂದ್ರ ಸಾವರ್ಣಿ ಮನ್ವಂತರ

 ಕಾಲಗಣನೆ

 ಕಾಲಗಣನೆಯ ಅರ್ಥವೇನೆಂದರೆ ಸೌರಮಂಡಲದ ಆರಂಭದಲ್ಲಿ ಒಂದೇ ಸರಳರೇಖೆಯಲ್ಲಿ ಗ್ರಹಗಳು ಇದ್ದ ಸಮಯದಿಂದ ಕಾಲಗಣನೆ ಆರಂಭವಾಯಿತು ಎಂಬುದಾಗಿದೆ

 ಆನಂತರ ಕೃತಯುಗ ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳು, ಮಹಾಯುಗ ಕಲ್ಪ,

 ಹದಿನಾಲ್ಕು ಮನ್ವಂತರಗಳ ಲೆಕ್ಕಾಚಾರದಿಂದ ಕಾಲಗಣನೆಯನ್ನು ಮಾಡಲಾಗಿದೆ,

ಈ ಕಾಲಗಣನೆಗೆ ಸೇರಿದ ಭಾಗಗಳೆಂದರೆ,

  • ಸಂವತ್ಸರಗಳು
  • ಆಯನಗಳು
  • ಋತುಗಳು
  • ಮಾಸಗಳು 
  • ತಿಥಿ
  • ವಾರ
  • ಘಳಿಗೆ ( ಘಟಿ )
  • ವಿಘಳಿಗೆ( ವಿಘಟಿ)…. ಇತ್ಯಾದಿ ಸೇರಿರುತ್ತವೆ

 ಪಂಚಾಂಗ

 ಪಂಚಾಂಗವೆಂದರೆ ಜ್ಯೋತಿಷ್ಯದ ಐದು ಪ್ರಮುಖ ಅಂಗಗಳಾದ ತಿಥಿ,ವಾರ,ನಕ್ಷತ್ರ, ಯೋಗ ಮತ್ತು ಕರಣ  ಇವುಗಳು ಮುಹೂರ್ತ ನಿರ್ಣಯದಲ್ಲಿ ಅತ್ಯಂತ ಅವಶ್ಯಕ ಅಂಶಗಳಾಗಿರುತ್ತವೆ

 ಅವಳ ಜೊತೆಯಲ್ಲಿ ಶುಭ ಕಾರ್ಯಗಳನ್ನು ಅನುಷ್ಠಾನಗೊಳಿಸುವಂತೆ ಶುಭ ಲಗ್ನ ಸಮಯ ಸಹ ಪ್ರಮುಖ ಪಾತ್ರ ವಹಿಸುತ್ತದೆ.

 ಪಂಚಾಂಗದಲ್ಲಿ ಎರಡು ವಿಧಗಳು

  1. ನಿರಯನ 
  2. ಸಾಯನ

 ಮೊದಲನೆಯದಾಗಿ ನಿರಯನ ಪಂಚಾಂಗ ಪದ್ಧತಿಯನ್ನು ಗಮನಿಸುವಾಗ, ಇದರ ಆರಂಭವೇ ಸ್ಥಿರವಾಗಿರುವುದರಿಂದ  ವಿಧಾನದಿಂದ ಅಯನಾಂಶದ ಲೆಕ್ಕಾಚಾರ ಮಾಡಲಾಗುವುದಿಲ್ಲ, ಹಾಗಾಗಿ ಮುಹೂರ್ತ ನಿರ್ಣಯದಲ್ಲಿನಿರಾಯನ  ಪಂಚಾಗವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ

 ಎರಡನೆಯದಾಗಿ  ಸಾಯನ  ಪಂಚಾಂಗ ಪದ್ಧತಿ, ಪದ್ಧತಿಯಲ್ಲಿ ಅಯನಾಂಶ ಲೆಕ್ಕಾಚಾರ ಇರುತ್ತದೆ, ಇದರ ವ್ಯತ್ಯಾಸಗಳನ್ನು ತಿಳಿದು ಸರಿಯಾದ ಕ್ರಮ ಅನುಸರಿಸಬೇಕಾಗುತ್ತದೆ

ಸೂಚನೆ :

 ಒಂಟಿಕೊಪ್ಪಲ್ ಉಡುಪಿ ಪಂಚಾಂಗ, ಸುತ್ತೂರು ಮಠದ ಪಂಚಾಂಗ….. ಇತ್ಯಾದಿಗಳು ನಿರಯನ ಪಂಚಾಂಗ ಪದ್ಧತಿ ಯಲ್ಲಿ ಇರುತ್ತವೆ ಎಂಬುದು ಗಮನಾರ್ಹ

 ಸಂವತ್ಸರ

 ಒಂದು ವರ್ಷದ ಕಾಲಮಾನವನ್ನು ಸಂವತ್ಸರ ಎಂದು ಕರೆಯಲಾಗುತ್ತದೆ

( ಒಂದು ವರ್ಷದಲ್ಲಿ 12 ತಿಂಗಳು ಇರುತ್ತವೆ ಎಂಬುದು ಗಮನಾರ್ಹ )

 ಸಂವತ್ಸರಗಳಲ್ಲಿ ಐದು ವಿಧಗಳು ಇರುತ್ತವೆ ಅವುಗಳು ಈ ಕೆಳಕಂಡಂತೆ ಇವೆ

  1. ಚಂದ್ರ ಸಂವತ್ಸರಗಳು
  2. ಸೌರ ಸಂವತ್ಸರಗಳು
  3. ಸಾವನ ಸಂವತ್ಸರಗಳು
  4. ನಕ್ಷತ್ರ ಸಂವತ್ಸರಗಳು
  5. ಬ್ರಾಹಸ್ಪತ್ಯ ಸಂವತ್ಸರಗಳು

1. ಚಂದ್ರ ಸಂವತ್ಸರ ಮಾಸಗಳು

  1. ಚೈತ್ರ-ಮಾಸ
  2. ವೈಶಾಖ ಮಾಸ
  3. ಜೇಷ್ಠ ಮಾಸ
  4. ಆಶಾಡ ಮಾಸ
  5. ಶ್ರಾವಣ ಮಾಸ
  6. ಭಾದ್ರಪದ ಮಾಸ
  7. ಅಶ್ವಯುಜ  ಮಾಸ
  8. ಕಾರ್ತಿಕ ಮಾಸ
  9. ಮಾರ್ಗಶಿರಮಾಸ 
  10. ಪುಷ್ಯಮಾಸ
  11. ಮಾಘ ಮಾಸ
  12. ಫಾಲ್ಗುಣ ಮಾಸ

 ಹೀಗೆ ಹನ್ನೆರಡು ಮಾಸಗಳು  ಚಾಂದ್ರ ವರ್ಷ ಅಥವಾ ಚಾಂದ್ರ ಸಂವತ್ಸರಗಲಾಗಿದ್ದು,

 ಚಾಂದ್ರ ವರ್ಷದಲ್ಲಿ 355 ದಿನಗಳಿರುತ್ತವೆ 

 12 ಚಂದ್ರಮಾಸಗಳಿಂದ ಒಟ್ಟುಗೂಡಿದ ಸಂವತ್ಸರಗಳ ಹೆಸರು ಈ ಕೆಳಕಂಡಂತೆ ಇವೆ ,

 ಇವುಗಳು ಕ್ರಮಾಂಕವಾಗಿ  ಒಂದಾದ ಮೇಲೆ ಒಂದು ನಡೆಯುತ್ತವೆ,

 ಪ್ರತಿ ಯುಗಾದಿಗೆ ಬದಲಾಗುವ ಒಟ್ಟು 60 ಸಂವತ್ಸರಗಳು:
  •  1.ಪ್ರಭಾವ
  • 2.ವಿಭವ
  • 3.ಶುಕ್ಲ
  • 4.ಪ್ರಮೋದ
  • 5.ಪ್ರಜಾಪತಿ
  • 6.ಅಂಗಿರಸ
  • 7.ಶ್ರೀಮುಖ
  • 8.ಭಾವ
  • 9.ಯುವ 
  • 10.ಧಾತು 
  • 11.ಈಶ್ವರ
  • 12. ಬಹುಧಾನ್ಯ
  • 13.ಪ್ರಮಥಿ
  • 14.ವಿಕ್ರಮ
  • 15.ವೃಷ
  • 16.ಚಿತ್ರಭಾನು
  • 17.ಸುಭಾನು
  • 18.ತಾರಣ
  • 19.ಪಾರ್ಥೀವ
  •  20.ವ್ಯೆಯ

ಸೂಚನೆ :

 ಒಂದರಿಂದ 20ರ ವರೆಗಿನ ಸಂವತ್ಸರಗಳು  ಬ್ರಹ್ಮ ವಿಂಶತಿ ಸಂವತ್ಸರಗಳಾಗಿರುತ್ತವೆ 

  • 21. ಸರ್ವಜಿತ
  • 22.ಸರ್ವಧಾರಿ
  • 23.ವಿರೋಧಿ
  • 24.ವಿಕೃತಿ
  • 25.ಖರ
  • 26.ನಂದನ
  • 27.ವಿಜಯ
  • 28.ಜಯ
  • 29.ಮನ್ಮಥ
  • 30.ದುರ್ಮುಖ
  • 31.ಹೇಮಲಂಬಿ
  • 33.ವಿಳಂಬಿ
  • 33.ವಿಕಾರಿ
  • 34.ಶಾರ್ವರಿ
  • 35.ಪ್ಲವ
  • 36.ಶುಭಕೃತ
  • 37.ಶೋಭನ
  • 38.ಕ್ರೋಧಿ (ಕ್ರೋಧಿನಾಮ ಸಂವತ್ಸರ ಎಂದರೆ ಕೋಪ. ಕೋಪದ ಸ್ವಭಾವ ಎಂದರ್ಥ.)
  • 39.ವಿಶ್ವಾವಸು
  • 40.ಪರಾಭವ

ಸೂಚನೆ :

21 ರಿಂದ 40 ರ ವರೆಗಿನ ಸಂವತ್ಸರಗಳು  ವಿಷ್ಣು ವಿಂಶತಿ  ಸಂವತ್ಸರಗಳು ಆಗಿರುತ್ತವೆ

  • 41.ಪ್ಲವಂಗ
  • 42.ಕೀಲಕ
  • 43.ಸೌಮ್ಯ
  • 44.ಸಾಧಾರಣ
  • 44.ವಿರೋಧಿಕೃತ
  • 46. ಪರಿಧಾವಿ 
  • 47.ಪ್ರಮಾಧಿ
  • 48.ಆನಂದ
  • 49.ರಾಕ್ಷಸ
  • 50.ನಲ
  • 51.ಪಿಂಗಳ
  • 52.ಕಾಲಯುಕ್ತ
  • 53.ಸಿದ್ಧಾರ್ಥಿ
  • 54. ರುದ್ರ
  • 55.ದುರ್ಮುಖಿ
  • 56.ದುದುಂಬಿ
  • 57. ರುದಿರೋದ್ಗಾರಿ
  • 58. ರಕ್ತಾಕ್ಷಿ
  • 59. ಕ್ರೋಧನ
  • 60. ಕ್ಷಯ

ಸೂಚನೆ :

 51 ರಿಂದ 60 ರ ವೆರೆಗಿನ ಸಂವತ್ಸರಗಳು

 ರುದ್ರ ವಿಂಶತಿ ಗಳಾಗಿರುತ್ತವೆ

 60 ಸಂವತ್ಸರಗಳ ಚಕ್ರದಲ್ಲಿ 5 ವರ್ಷಗಳಿಗೆ ಒಂದರಂತೆ ಯುಗದ ರೀತಿಯಲ್ಲಿ ನಿರ್ಧಾರ ಮಾಡಲಾಗಿದೆ

 ಅಂದರೆ ಪಂಚವರ್ಷಾತ್ಮಕ 12  ಸಂವತ್ಸರಗಳು ಎಂದು

(5×12=60)

 ಇವತ್ತು ಸಂವತ್ಸರ ಗಳಿಗೆ  ಅಧಿಪತಿ ದೇವತೆಗಳ ಯುಗಾಧಿಪತಿ ಹಾಗೂ ವರ್ಷ್ಷೆಶ ಎಂದು ನಿರ್ಧಾರ ಮಾಡಲಾಗಿದೆ

 ಈಗಾಗಲೇ ಮೇಲೆ ಹೇಳಿದ 12 ಯುಗಗಳ ಅಧಿಪತಿ ದೇವತೆಗಳು ಯಾರ್ಯಾರು ಎಂದರೆ,

  •  1.ವಿಷ್ಣು
  • 2.ಬೃಹಸ್ಪತಿ
  • 3.ಇಂದ್ರ
  • 4.ಲೋಹಿತ 
  • 5.ತ್ವಷ್ಟಾ
  • 6.ಅಹಿರ್ಭುದ್ನನ್ಯ
  • 7. ಪಿತೃ
  • 8.ವಿಶ್ವೇ ದೇವಾ
  •  9.ಚಂದ್ರ
  • 10.ಇಂದ್ರಾಗ್ನಿ
  • 11.ಭಗ
  • 12.ಅಶ್ವಿನಿ ಕುಮಾರ

 ಪ್ರತ್ಯೇಕ ಯುಗ ಪಂಚವರ್ಷತ್ಮಕ ವಾಗಿರುವುದರಿಂದ  ಇದರಲ್ಲಿ ಪ್ರತ್ಯೇಕ ವರ್ಷದ ಅಧಿಪತಿ ದೇವತೆ ಅಂದರೆ ವರ್ಷ ಅಧಿಪತಿ ( ವರ್ಶೇಷ ) ಕ್ರಮವಾಗಿ

  • ಅಗ್ನಿ
  • ಸೂರ್ಯ-
  • ಚಂದ್ರ
  • ಬ್ರಹ್ಮ
  • ಶಿವ      ಆಗುತ್ತಾರೆ 

 ಮುಹೂರ್ತ ನಿರ್ಣಯದಲ್ಲಿ ಚಂದ್ರ ಸಂವತ್ಸರಗಳು ಹಾಗೂ ಮಾಸಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ

 ತಿಥಿಗಳ‌ ಅಧಿದೇವತೆಗಳು

  1. ಪಾಡ್ಯಮಿ – ಅಗ್ನಿದೇವ
  2. ಬಿದಿಗೆ – ತ್ವಷ್ಟ್ರು 
  3. ತದಿಗೆ – ಪಾರ್ವತಿ ಮಾತೆ
  4. ಚೌತಿ – ಗಣಪತಿ 
  5. ಪಂಚಮಿ – ಸರ್ಪದೇವರು 
  6. ಷಷ್ಠಿ – ಸುಬ್ರಹ್ಮಣ್ಯ
  7. ಸಪ್ತಮಿ – ಸೂರ್ಯ
  8. ಅಷ್ಟಮಿ – ಈಶ್ವರ 
  9. ನವಮಿ – ಅಷ್ಟ ವಸುಗಳು
  10. ದಶಮಿ – ಕಮಲೆ
  11. ಏಕಾದಶಿ – ದರ್ಮದೇವತೆ
  12. ದ್ವಾದಶಿ – ವಿಷ್ಣು 
  13. ತ್ರಯೋದಶಿ – ಮನ್ಮಥ 
  14. ಚತುರ್ದಶಿ – ಕಲಿಪುರುಷ 
  15. ಹುಣ್ಣಿಮೆ – ಚಂದ್ರ 
  16. ಅಮಾವಾಸ್ಯೆ – ಪಿತೃಗಳು .

ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡಕಾಲಗಳ ಅರ್ಥ ಔಚಿತ್ಯ ಮತ್ತು ಪ್ರಾಮುಖ್ಯತೆ

ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡಕಾಲಗಳ ಅರ್ಥ ಔಚಿತ್ಯ ಮತ್ತು ಪ್ರಾಮುಖ್ಯತೆ

ನಮ್ಮ ಹಿಂದೂ ಧರ್ಮದಲ್ಲಿ ಮುಖ್ಯವಾದ ಕೆಲಸ-ಕಾರ್ಯಗಳಿಗೆ ಮತ್ತು ಹಬ್ಬಗಳಾಚರಣೆಗೆ ಮುಹೂರ್ತ ನೋಡುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡ ಪದ್ಧತಿ.

ನಮ್ಮವರು ಇಂದಿಗೂ ಹಬ್ಬ, ಮದುವೆ, ಗೃಹಪ್ರವೇಶ, ಮುಂಜಿವೆ ಮುಂತಾದ ಶುಭಕಾರ್ಯಗಳಿಗೆ ಮುಹೂರ್ತ ನೋಡುತ್ತಾರೆ. 

ಅಷ್ಟೇ ಏಕೆ, ರಾಜಕಾರಣಿಗಳು ಒಂದು ಹೆಜ್ಜೆ ಇಡಬೇಕೆಂದರೂ ಮುಹೂರ್ತ ನೋಡುತ್ತಾರೆ!

ಯಾವ ದೇವರು? ಯಾವ ಶನಿ? ಯಾವ ನಕ್ಷತ್ರ? ಎನ್ನುವ ನಾಸ್ತಿಕರೂ ಸಹ ಮನೆಯ ಹಿರಿಯರ ಮಾತು ಕೇಳಿಕೊಂಡು ತೆಪ್ಪಗೆ ಉತ್ತಮ ಮುಹೂರ್ತದಲ್ಲೇ ಮದುವೆ ಮತ್ತು ಗೃಹಪ್ರವೇಶ ಮಾಡಿಕೊಳ್ಳುತ್ತಾರೆ. 

ಆದರೆ ಹೊರಗೆ ತಮ್ಮಷ್ಟಕ್ಕೆ ತಾವೇ “ಹಿಂದೂ ಧರ್ಮಾಚರಣೆ ವಿರೋಧಿ”ಗಳು ಎಂದು ಬಿಂಬಿಸಿಕೊಳ್ಳುವ ಮೂಢರು ನಮ್ಮ ಪದ್ಧತಿಗಳನ್ನು ಮೂಢನಂಬಿಕೆ ಎಂದು ಬೊಬ್ಬೆ ಹಾಕುತ್ತಿರುತ್ತಾರೆ.

ಇಂಥಹವರು ಮೊದಲೇ ಬರೆದಿಡಬೇಕು “ನಾನು ಸತ್ತಾಗ ಯಾವುದೇ ಪೂಜೆ ಮಾಡುವ ಹಾಗಿಲ್ಲ ಮತ್ತು ಯಾವುದೇ ತಿಥಿ ಕೂಡ ಮಾಡುವ ಹಾಗಿಲ್ಲ” ಎಂದು. 

ಏಕೆಂದರೆ ವ್ಯಕ್ತಿ ಸತ್ತಾಗ ಸಮಯ ಮತ್ತು ನಕ್ಷತ್ರ ನೋಡಿಕೊಂಡೇ ತಿಥಿ ಮಾಡುವ ಪದ್ಧತಿ ನಮ್ಮಲ್ಲಿದೆ ಎಂಬುದು ಗೊತ್ತಿರದ ಪೆದ್ದರಿವರು.

ನಾವು ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡಕಾಲ ಎನ್ನುವುದನ್ನು ಕೇಳಿದ್ದೇವೆ. ಆದರೆ ಆ ಕಾಲಗಳ ಮಹತ್ವ ಇಂದಿಗೂ ಎಷ್ಟೋ ಜನರಿಗೆ ಗೊತ್ತಿಲ್ಲ. 

ಗೊತ್ತಿದ್ದವರು ಹೇಳುವುದಿಲ್ಲ. 

ಹೇಳಿದರೆ ಎಲ್ಲಿ ನಮ್ಮನ್ನು ಅಪಹಾಸ್ಯ ಮಾಡುತ್ತಾರೋ ಎಂಬ ಭಯ ಅವರಿಗಿರಬಹುದು!

ಕಾಲಗಳ ಮಹತ್ವ ಗೊತ್ತಿದ್ದವರು ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಲೇ ಹೋಗುತ್ತಿರುತ್ತಾರೆ. 

ಇವರ ಯಶಸ್ಸನ್ನು ನೋಡಿ ಕೆಲವರು “ಇವನಿಗೇನೂ ಬರೋದೇ ಇಲ್ಲ! ಆದರೂ ಇವನೆಂಗೆ ಇಷ್ಟೆತ್ತರಕ್ಕೇರಿದ” ಎಂದು ಹುಬ್ಬೇರಿಸಿಕೊಂಡು ಹೊಟ್ಟೆಕಿಚ್ಚು ಪಡುತ್ತಾ ಚಡಪಡಿಸುತ್ತಿರುತ್ತಾರೆ.

ಆದರೆ, ಸಮಯ ನೋಡಿಕೊಂಡು ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ಸಾಗುತ್ತವೆ ಎಂಬ ಗುಟ್ಟು ಬಹಳಷ್ಟು ಜನರಿಗೆ ಗೊತ್ತಿಲ್ಲ. 

ಗೊತ್ತಿದ್ದು ಗೊತ್ತಿದ್ದು ಅವರು ನಿಷ್ಕಾಳಜಿ ಮಾಡುತ್ತಿರಬಹುದು ಎನ್ನಬಹುದು ಅಷ್ಟೇ. 

ರಾಹು ಕಾಲ

ಸಾಮಾನ್ಯವಾಗಿ ರಾಹುಕಾಲವು ವಾರದ ಒಂದೊಂದು ದಿನ ಸರಿಸುಮಾರು ಒಂದೇ ಸಮಯದಲ್ಲಿರುತ್ತದೆ. 

ರಾಹುಕಾಲಕ್ಕೆ “ವಿಷಘಳಿಗೆ” ಎಂದು ಕೂಡ ಕರೆಯುತ್ತಾರೆ. 

ಈ ಸಮಯದಲ್ಲಿ ಮುಖ್ಯವಾದ ಕೆಲಸಗಳಿಗೆ ಹೊರಡದಿರುವುದು ಸೂಕ್ತ. ಏಕೆಂದರೆ ಯಾವ ಉದ್ದೇಶ ಇಟ್ಟುಕೊಂಡು ನಾವು ಈ ವೇಳೆಯಲ್ಲಿ ಹೊರಟಿರುತ್ತೇವೆಯೋ ಅದು ಯಶಸ್ಸಾಗುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೇ ಬಂದಿದೆ. 

ರಾಹುಕಾಲದಲ್ಲೇನಾದರೂ ಹೋದಿರೆನ್ನಿ, ಆಗಬೇಕಾದ ಕೆಲಸ ಲೇಟಾಗುತ್ತದೆ ಅಥವಾ ಏನಾದರೂ ಅಡೆತಡೆ ಬರುತ್ತದೆ ಇಲ್ಲವೇ ಆಗೋದೇ ಇಲ್ಲ. 

ಈ ಸಮಯದಲ್ಲಿ ಹಣದ ವ್ಯವಹಾರ ಮಾಡುವುದು ಕೂಡ ಸೂಕ್ತವಲ್ಲ. ಉದಾಹರಣೆಗೆ ಖರೀದಿ, ಸಾಲ ಕೊಡುವುದು-ಪಡೆಯುವುದು, ಮತ್ತಿತರೆ. ಇನ್ನು ಕೆಲವೊಂದು ಮಹತ್ವದ ಮಾತುಕತೆಗಳನ್ನು ಕೂಡ ರಾಹುಕಾಲದಲ್ಲಿ ಮಾಡದಿರುವುದು ಸೂಕ್ತ. 

ಏಕೆಂದರೆ ಮಾತುಕತೆಯಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದಿಲ್ಲ.

ಪ್ರತಿನಿತ್ಯ ಕೇವಲ ಒಂದೂವರೆ ಗಂಟೆಗಳಷ್ಟಿರುವ ರಾಹುಕಾಲವು, ರಾಹುದೋಷ ನಿವಾರಣಾ ಪೂಜೆಗೆ ಮತ್ತು ಮಾತೆ ದುರ್ಗಾದೇವಿಯ ಆರಾಧನೆಗೆ ತುಂಬಾ ಸೂಕ್ತ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ರಾಹುಕಾಲ ನಮಗೆ ಲಾಭವನ್ನೂ ತರುತ್ತದೆ. ಹೇಗೆಂದರೆ ನಮಗೇನಾದರೂ ಕೆಲಸ ಆಗದಿರುವ ಹಾಗೆ ಮಾಡಬೇಕೆಂದರೆ, ತೊಂದರೆಗಳಿಂದ ನಮಗೆ ಖುಷಿಯಾಗಬೇಕೆಂದರೆ ರಾಹುಕಾಲವನ್ನು ಆಯ್ಕೆ ಮಾಡಿಕೊಳ್ಳಬೇಕು! ಬೇಕಿದ್ದವರು ಪರೀಕ್ಷಿಸಿಕೊಳ್ಳಬಹುದು. 

ಗುಳಿಕ ಕಾಲ

ಗುಳಿಕ ಕಾಲವೂ ಕೂಡ ಪ್ರತಿನಿತ್ಯ ವಾರದಲ್ಲೊಂದೊಂದು ದಿನ ಒಂದೂವರೆ ಗಂಟೆಗಳಷ್ಟಿರುತ್ತದೆ. ರವಿವಾರ ಮಧ್ಯಾಹ್ನ 3 ರಿಂದ 4-30ರವರೆಗೆ ಗುಳಿಕ ಕಾಲ. 

ಆದರೆ, ಉಳಿದ ದಿನ ಬೇರೆ ಬೇರೆ ಸಮಯದಲ್ಲಿರುತ್ತದೆ ಎಂಬುದು ಗಮನದಲ್ಲಿರಿಸಿಕೊಂಡಿರಬೇಕು. 

ಈ ಗುಳಿಕ ಕಾಲದ ವಿಶೇಷವೇನೆಂದರೆ ಈ ಸಮಯದಲ್ಲಿ ಮಾಡಿದ ಕೆಲಸ ಕಾರ್ಯಗಳು ಪುನಃ ಮರುಕಳಿಸುತ್ತವೆ ಎಂಬ ನಂಬಿಕೆ ಹಿಂದಿನಿಂದ ಬಂದಿದೆ.

ಈ ಸಮಯದಲ್ಲಿಯೇ ಸಾಮಾನ್ಯವಾಗಿ ಗೃಹಪ್ರವೇಶ, ಹೊಸ ವಾಹನ ಮತ್ತು ಬಂಗಾರ ಖರೀದಿ ಮಾಡುತ್ತಾರೆ. 

ಏಕೆಂದರೆ ಇದರಿಂದ ಮತ್ತೆ ಹೊಸ ಮನೆ ಗೃಹಪ್ರವೇಶ ಮತ್ತು ವಾಹನ, ಬಂಗಾರ ಖರೀದಿ ಯೋಗ ಬರುತ್ತದೆ ಎಂಬ ನಂಬಿಕೆ.

ಆದರೆ, ಗುಳಿಕ ಕಾಲದಲ್ಲಿ ಮೃತ ವ್ಯಕ್ತಿಯ ಶರೀರವನ್ನು ಮನೆಯಿಂದ ಮಸಣಕ್ಕೆ ತೆಗೆದುಕೊಂಡು ಹೋಗುವ ಹಾಗಿಲ್ಲ. 

ಹಾಗೂ ಅಂತ್ಯಕ್ರಿಯೆ ನಡೆಸುವ ಹಾಗಿಲ್ಲ.

ಇದಕ್ಕರ್ಥ ನಿಮಗೆ ಗೊತ್ತಾಗಿರಬಹುದು. ಗೊತ್ತಾಗದವರಿಗೆ ಗುಳಿಕ ಕಾಲದಲ್ಲಿ ಮಾಡಿದ ಕೆಲಸ-ಕಾರ್ಯಗಳು ಮರುಕಳಿಸುತ್ತವೆ ಎಂಬುದನ್ನು ನೆನಪಿಸಬೇಕಾಗುತ್ತದೆ.

ಗುಳಿಕ ಕಾಲದ ಇನ್ನೊಂದು ಮಜವಾದ ವಿಷಯವೆಂದರೆ, ಮದುವೆಯ ಮುಹೂರ್ತವನ್ನು ಈ ಸಮಯದಲ್ಲಿ ಮಾಡುವುದಿಲ್ಲ. 

ಏಕೆಂದರೆ, ಮದುವೆ ಎಂಬುದು ಜೀವನದಲ್ಲಿ ಒಂದೇ ಬಾರಿ ಬರುವುದು. ಗುಳಿಕ ಕಾಲದಲ್ಲಿ ಮಾಡಿದರೆ? ಅರ್ಥವಾಗಿರಬಹುದು ಆಸ್ತಿಕರಿಗೆ!

ಯಮಗಂಡ ಕಾಲ

ಯಮಗಂಡ ಕಾಲವೂ ಪ್ರತಿನಿತ್ಯ ಒಂದೂವರೆ ಗಂಟೆಗಳಷ್ಟಿರುತ್ತದೆ. 

ರವಿವಾರ ಮಧ್ಯಾಹ್ನ 12-00 ರಿಂದ 1-30 ರವರೆಗೆ. ಉಳಿದ ದಿನಗಳು ಬೇರೆ ಬೇರೆ ಸಮಯದಲ್ಲಿರುತ್ತದೆ. 

ಇದು ಯಾವುದೇ ಕೆಲಸಗಳನ್ನು ಅಂತ್ಯಗೊಳಿಸಬೇಕೆಂದರೆ ಉತ್ತಮ ಸಮಯ. 

ಈ ಸಮಯಕ್ಕೆ “ಸಾವಿನ ಸಮಯ” ಎಂದೂ ಕೂಡ ಕರೆಯುತ್ತಾರೆ. 

ಈ ಸಮಯದಲ್ಲಿ ಮೃತ ಶರೀರದ ಅಂತ್ಯಕ್ರಿಯೆ, ತಿಥಿಯಾಚರಣೆ, ಶೋಕಾಚರಣೆ ಮಾಡಲಾಗುತ್ತದೆ.

 ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಹಾಗಿಲ್ಲ. ಮಾಡಿದಿರೆನ್ನಿ. ಆ ಕೆಲಸಕ್ಕೆ “ಎಳ್ಳು ನೀರು ಬಿಟ್ಟಂಗೆ!”

ಈ ಸಮಯದಲ್ಲಿ ಯಾವುದೇ ಮಾತುಕತೆ, ಹಣದ ವ್ಯವಹಾರ, ಖರೀದಿ ಮಾಡುವ ಹಾಗಿಲ್ಲ. 

ಮಾಡಲು ಹೋದರೆ ಅದು ಯಶಸ್ಸೂ ಆಗಲ್ಲ, 

ಅಲ್ಲದೇ ಅದೇ ಕೊನೆಯೂ ಕೂಡ ಆಗುತ್ತದೆ. ಮುಂದೆ ಆ ಯೋಗವೂ ಬರುವುದಿಲ್ಲ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು.

ಅಲ್ಲದೇ ಉಲ್ಲಾಸ, ಉತ್ಸಾಹ ಕಳೆದುಕೊಂಡು ಬೇಸರಪಟ್ಟುಕೊಳ್ಳಬೇಕಾಗುತ್ತದೆ. 

ಆದ್ದರಿಂದ ಯಮಗಂಡ ಕಾಲದಲ್ಲಿ ಮುಖ್ಯವಾದ ಕೆಲಸಕ್ಕೆ ಹೋಗುವುದನ್ನು ಮತ್ತು ಮಾತುಕತೆಗಳನ್ನು ತಪ್ಪಿಸಬೇಕು. ಯಾವುದೇ ವಿಷಯವನ್ನಾಗಲಿ ಅದಕ್ಕೊಂದು ಅಂತ್ಯ ಹಾಡಬೇಕೆಂದರೆ ಯಮಗಂಡ ಕಾಲ ಸೂಕ್ತ!

ಈ ಕಾಲವನ್ನೆಲ್ಲಾ ನೋಡುತ್ತಾ ಹೋದರೆ ಜಗತ್ತೇ ಕೆಲವೊಮ್ಮೆ ಸ್ತಬ್ದವಾಗುತ್ತದೆ ಎನ್ನುವವರಿಗೆ, “ವಿನಾಶಕಾಲೇ ವಿಪರೀತ ಬುದ್ಧಿ” ಎಂದು “ತುಂಬಿ ಬಂದವರಿಗೆ” ಏನ್ ಹೇಳಬೇಕು? 

ಕೆಲ ದುರಂತ ಮತ್ತು ಅಪಘಾತ ಆಗಿರುವ ಸಮಯ ಮತ್ತು ಅವರು ಮನೆ ಬಿಟ್ಟ ಸಮಯವನ್ನು ಪರಿಶೀಲಿಸಿದರೆ ಗೊತ್ತಾಗುತ್ತದೆ.

ಯಾವ ನಕ್ಷತ್ರದವರಿಗೆ ಯಾವ ರೋಗಗಳು ಬರುತ್ತವೆ ?

27 ನಕ್ಷತ್ರಗಳ ಆಧಾರದ ಮೇಲೆ ರೋಗವನ್ನೂ ನಿರ್ಧರಿಸಬಹುದು..

ಪ್ರತಿಯೊಬ್ಬರಿಗೂ ಅವರವರ ಜನ್ಮ ನಕ್ಷತ್ರಗಳಿಗೆ ಅನುಗುಣವಾಗಿ ರೋಗಗಳು ಬರುತ್ತವೆ. ರೋಗದ ಅವಧಿಯು ಸಹ ನಕ್ಷತ್ರದ ಆಧಾರದ ಮೇಲೆ ನಿರ್ಧಾರವಾಗುವುದು ಎಂದು ಹೇಳಲಾಗುವುದು.

ಹಾಗಾದರೆ ನಿಮ್ಮ ಜನ್ಮ ನಕ್ಷತ್ರ ಯಾವುದು.? ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ.? ರೋಗದ ಅವಧಿಯು ಹೇಗಿರುತ್ತದೆ.. ಎನ್ನುವುದನ್ನು ತಿಳಿಯುವ ಕುತೂಹಲ ಹೊಂದಿದ್ದರೆ ಈ ಲೇಖನದ ಮುಂದಿನ ಭಾಗವನ್ನು ಗಮನವಿಟ್ಟು ಓದಿ..

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜನ್ಮ ಸಮಯ ಆಧಾರಿತವಾಗಿ ವಿಶೇಷ ನಕ್ಷತ್ರಗಳನ್ನು ಹಾಗೂ ರಾಶಿಯನ್ನು ಹೊಂದಿರುತ್ತಾರೆ. ನಕ್ಷತ್ರ ಫಲಗಳು ಹಾಗೂ ರಾಶಿ ಚಕ್ರಗಳ ಪ್ರಭಾವದಿಂದ ವ್ಯಕ್ತಿ ನಿತ್ಯ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಹಾಗೂ ಅದೃಷ್ಟಗಳನ್ನು ಪಡೆದುಕೊಳ್ಳುವನು.

ವೈದಿಕ ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ 27 ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರವು ವಿಭಿನ್ನ ಶಕ್ತಿ ಹಾಗೂ ಪ್ರಭಾವವನ್ನು ಬೀರುತ್ತವೆ. 

ಅಶ್ವಿನಿ ನಕ್ಷತ್ರ:

ಅಶ್ವಿನಿ ನಕ್ಷತ್ರವನ್ನು ಕೇತು ಆಳುವನು. ಇವನು ಈ ನಕ್ಷತ್ರದವರ ತಲೆ ಭಾಗ ಮತ್ತು ಮಿದುಳಿನ ಆರೋಗ್ಯವನ್ನು ನಿಯಂತ್ರಿಸುತ್ತದೆ. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತಲೆ ನೋವು, ಜ್ವರ, ಡೆಂಗ್ಯೂ, ಮೆದುಳಿನ ಗಾಯ, ಮೈಗ್ರೇನ್, ಸಿಡುಬುಗಳಂತಹ ರೋಗಗಳು ಕಾಣಿಸಿಕೊಳ್ಳುತ್ತವೆ. ಇವರಿಗೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ 1, 9 ಅಥವಾ 25 ದಿನಗಳ ಕಾಲ ಇರುತ್ತದೆ ಎಂದು ಹೇಳಲಾಗುವುದು..

ಭರಣಿ ನಕ್ಷತ್ರ:

ಈ ನಕ್ಷತ್ರವನ್ನು ಶುಕ್ರನು ಆಳುವನು. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಮೆದುಳು, ಹಣೆ, ಕಣ್ಣು ಹಾಗೂ ಅಂಗಾಂಶಗಳ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕಣ್ಣಿನ ಸೋಂಕು, ತಲೆಗೆ ಗಾಯ, ಸೆಳೆತ, ದೃಷ್ಟಿ ದೋಷ, ಶೀತ ಜ್ವರಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಈ ಆರೋಗ್ಯ ಸಮಸ್ಯೆಗಳು ಒಮ್ಮೆ ಕಾಣಿಸಿಕೊಂಡರೆ 11, 21 ಅಥವಾ 30 ದಿನಗಳ ಕಾಲ ಇರುತ್ತದೆ.

ಕೃತಿಕಾ ನಕ್ಷತ್ರ:

ಈ ನಕ್ಷತ್ರವನ್ನು ಸೂರ್ಯನು ಆಳುವನು. ಕೃತಿಕಾ ನಕ್ಷತ್ರದ ಅಡಿಯಲ್ಲಿ ಜನಿಸುವವರು ಸಾಮಾನ್ಯವಾಗಿ ಮುಖ, ತೋಳು, ಗಲಗ್ರಂಥಿಯ ಉರಿಯೂತ, ಕೆಳದವಡೆಯ ಸಮಸ್ಯೆ, ತಲೆ ಹಿಂಭಾಗಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವು ಒಮ್ಮೆ ಬಂದರೆ ಸಾಮಾನ್ಯವಾಗಿ 10 ಅಥವಾ 21 ದಿನಗಳ ಕಾಲ ಮುಂದುವರಿಯುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.

ರೋಹಿಣಿ ನಕ್ಷತ್ರ:

ರೋಹಿಣಿ ನಕ್ಷತ್ರವನ್ನು ಸಾಮಾನ್ಯವಾಗಿ ಪ್ರಕಾಶಮಾನವಾದ ನಕ್ಷತ್ರ ಎಂದು ಕರೆಯುವರು. ಈ ನಕ್ಷತ್ರವನ್ನು ಚಂದ್ರನು ಆಳುವನು. ಇವನು ಕಶೇರುಖಂಡ, ನಾಲಿಗೆ, ಬೆನ್ನು, ಮಿದುಳು ಭಾಗವನ್ನು ಆಳುವನು. ಈ ನಕ್ಷತ್ರದವರು ಸಾಮಾನ್ಯವಾಗಿ ಗಂಟಲು ನೀವು, ಸ್ತನ ನೋವು, ಶೀತ, ಕೆಮ್ಮು, ಮುಟ್ಟಿನ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಇವರಿಗೆ ಕಾಡುವ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಸಾಮಾನ್ಯವಾಗಿ 3, 7 ಅಥವಾ 10 ದಿನಗಳ ಕಾಲ ತೆಗೆದುಕೊಳ್ಳುವರು.

ಮೃಗಶಿರಾ ನಕ್ಷತ್ರ:

ಈ ನಕ್ಷತ್ರವನ್ನು ಮಂಗಳನು ಆಳುವನು. ಮಂಗಳನು ವ್ಯಕ್ತಿಯ ಮೂಗು, ಕತ್ತು, ಗಂಟಲು, ಧ್ವನಿ ಪೆಟ್ಟಿಗೆ, ಭುಜ, ಎದೆ ಭಾಗವನ್ನು ನಿಯಂತ್ರಿಸುವನು. ಹಾಗಾಗಿ ಈ ನಕ್ಷತ್ರದವರು ಗಳಗಂಡ, ಗಾಯ, ಮುಖದಲ್ಲಿ ಮೊಡವೆ, ಅತಿಸಾರ, ಮಲಬದ್ಧತೆ, ಲೈಂಗಿಕ ಸಮಸ್ಯೆಗಳಂತಹ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇವರು ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಸಾಮಾನ್ಯವಾಗಿ 3, 5 ಅಥವಾ 9 ದಿನಗಳು ಬೇಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.

ಆರ್ದ್ರಾ ನಕ್ಷತ್ರ:

ಈ ನಕ್ಷತ್ರವು ರಾಹುವಿನ ಆಳ್ವಿಕೆಗೆ ಒಳಗಾಗಿರುತ್ತದೆ. ರಾಹು ಗಂಟಲು, ಭುಜ ಮತ್ತು ಕತ್ತಿನ ಭಾಗವನ್ನು ಆಳುತ್ತಾನೆ. ಈ ನಕ್ಷತ್ರದ ಅಡಿ ಜನಿಸಿದವು ಸಾಮಾನ್ಯವಾಗಿ ದಡಾರ, ಅಲರ್ಜಿ, ಒಣ ಕೆಮ್ಮು, ಡಿಫ್ತೀರಿಯಾಕ್ಕೆ ಒಳಗಾಗುತ್ತಾರೆ. ಇವರು ಒಮ್ಮೆ ಅನಾರೋಗ್ಯಕ್ಕೆ ಒಳಗಾದರೆ ಚೇತರಿಸಿಕೊಳ್ಳಲು 10 ಅಥವಾ 27 ದಿನಗಳ ಕಾಲ ಬೇಕಾಗುವುದು.

ಪುನರ್ವಸು ನಕ್ಷತ್ರ:

ಪುನರ್ವಸು ನಕ್ಷತ್ರವನ್ನು ಗುರು ಗ್ರಹದ ಆಳ್ವಿಕೆಯ ಅಡಿಯಲ್ಲಿ ಬರುವುದು. ಗುರುವು ಮೂಗು, ಗಂಟಲು, ಭುಜಗಳು, ಶ್ವಾಸಕೋಶ, ತಲೆ, ಹೊಟ್ಟೆ, ಮೇದೋಜ್ಜೀರಕ ಗ್ರಂಥಿ ಹಾಗೂ ಯಕೃತನ್ನು ಆಳುವನು. ಹಾಗಾಗಿ ಈ ನಕ್ಷತ್ರದ ವ್ಯಕ್ತಿಗಳು ಸಾಮಾನ್ಯವಾಗಿ ಬ್ರಾಂಕೈಟಿಸ್, ನ್ಯುಮೋನಿಯಾ, ಎದೆ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ರಕ್ತ ಸಮಸ್ಯೆ, ಬರ್ಬೆರಿಸ್ ಹಾಗೂ ಕ್ಷಯ ರೋಗಗಳು ಕಾಡುತ್ತವೆ. ಇವರಿಗೆ ಕಾಣಿಸಿಕೊಂಡ ಕಾಯಿಲೆಗಳಿಂದ ಗುಣಮುಖರಾಗಲು ಸಾಮಾನ್ಯವಾಗಿ 7 ದಿನಗಳು ಬೇಕಾಗುತ್ತವೆ.

ಪುಷ್ಯಾ ನಕ್ಷತ್ರ:

ಈ ನಕ್ಷತ್ರವನ್ನು ಶನಿ ಗ್ರಹವು ಆಳುವುದು. ಶ್ವಾಸಕೋಶ, ಉಸಿರಾಟ ಕ್ರಿಯೆ ಮತ್ತು ವ್ಯವಸ್ಥೆಗಳ ಮೇಲೆ ಹೆಚ್ಚು ಪ್ರಭಾವ ಬೀತರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಅನಾರೋಗ್ಯದಿಂದ ಚೇತರಿಸಿಕೊಳ್ಳಲು 7 ದಿನಗಳ ಕಾಲ ಬೇಕಾಗುವುದು.

ಆಶ್ಲೇಷಾ ನಕ್ಷತ್ರ:

ಈ ನಕ್ಷತ್ರವು ಬುಧ ಗ್ರಹದಿಂದ ಆಳಲ್ಪಡುವುದು. ಇದು ಶ್ವಾಸಕೋಶ, ಅನ್ನನಾಳ, ಮೇದೋಜ್ಜೀರಕ ಗ್ರಂಥಿ, ಯಕೃತ್, ನರಗಳ ಮೇಲೆ ಹಿಡಿತವನ್ನು ಹೊಂದಿರುತ್ತದೆ. ಇವರಿಗೆ ಸಾಮಾನ್ಯವಾಗಿ ಶೀತ, ಹೊಟ್ಟೆ ಸಮಸ್ಯೆ, ಪೊಟ್ಯಾಸಿಯಮ್ ಕೊರತೆ, ಮೊಣಕಾಲು ಸಮಸ್ಯೆ, ಅಜೀರ್ಣ, ಕಫ, ವಾಯು, ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುವುದು. ಅನಾರೋಗ್ಯದಿಂದ ಚೇತರಿಸಿಕೊಳ್ಳಲು 9, 20 ಅಥವಾ 30 ದಿನಗಳು ಬೇಕಾಗುವುದು.

ಮಘಾ ನಕ್ಷತ್ರ:

ಈ ನಕ್ಷತ್ರವು ಕೇತುವಿನ ಆಳ್ವಿಕೆಗೆ ಒಳಗಾಗುತ್ತವೆ. ಕೇತು ಹೃದಯ, ಬೆನ್ನು, ಬೆನ್ನುಹುರಿ, ಯಕೃತ್ ಮತ್ತು ಅಪಧಮನಿಯ ಭಾಗವನ್ನು ನಿಯಂತ್ರಿಸುತ್ತದೆ. ಇವರಿಗೆ ಸಾಮಾನ್ಯವಾಗಿ ಬೆನ್ನು ನೋವು, ಕಾಲರ, ತಲೆ ಸುತ್ತು, ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳಲು 20, 30 ಅಥವಾ 45 ದಿನಗಳ ಕಾಲ ಬೇಕಾಗುವುದು.

ಪೂರ್ವಾ ಫಾಲ್ಗುಣಿ ನಕ್ಷತ್ರ:

ಈ ನಕ್ಷತ್ರವನ್ನು ಶುಕ್ರನು ಆಳುವನು. ಶುಕ್ರನು ಹೃದಯ, ಬೆನ್ನುಹುರಿಯ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುತ್ತಾನೆ. ಹಾಗಾಗಿ ಈ ನಕ್ಷತ್ರದವರು ಹೆಚ್ಚಾಗಿ ಮೂಳೆ ಕಾಯಿಲೆ, ರಕ್ತ ಹೀನತೆ, ಕಾಲು ನೋವು ಪಾದಗಳ ಸೆಳೆತ, ಬಿಪಿಯಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಇವರಿಗೆ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು 7, 15 ಅಥವಾ 27 ದಿನಗಳ ಕಾಲ ಬೇಕಾಗುವುದು.

ಉತ್ತರಾ ಫಾಲ್ಗುಣಿ ನಕ್ಷತ್ರ:

ಈ ನಕ್ಷತ್ರವನ್ನು ಸೂರ್ಯನು ಆಳುವನು. ಇವನು ಕರುಳಿನ ಮೇಲೆ ಹೆಚ್ಚು ಪ್ರಭಾವ ಬೀರುವನು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಜ್ವರ, ಬಿ.ಪಿ, ದೌರ್ಬಲ್ಯ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು, ಹೊಟ್ಟೆಯ ತೊಂದರೆ, ದೀರ್ಘಕಾಲದ ಕೆಮ್ಮು, ಕರುಳಿನಲ್ಲಿ ಗಡ್ಡೆ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳಿಂದ ಚೇತರಿಸಿಕೊಳ್ಳಲು 7, 15 ಅಥವಾ 27 ದಿನಗಳು ಬೇಕಾಗುತ್ತವೆ.

ಹಸ್ತಾ ನಕ್ಷತ್ರ:

ಈ ನಕ್ಷತ್ರವನ್ನು ಚಂದ್ರನು ಆಳುವನು. ಇವನು ಕರುಳು ಮತ್ತು ಗ್ರಂಥಿಗಳ ಮೇಲೆ ಹೆಚ್ಚಿನ ಹಿಡಿತವನ್ನು ಹೊಂದಿರುತ್ತಾನೆ. ಈ ನಕ್ಷತ್ರದಲ್ಲಿ ಜನಿಸಿದವರು ವಾಯು ಸಮಸ್ಯೆ, ಕರುಳು ಸಡಿಲವಾಗುವುದು, ಉನ್ಮಾದ, ಟೈಫಾಯ್ಡ್, ಅತಿಸಾರ, ಭೇದಿ, ಕಾಲರಾ ಮತ್ತು ಭುಜದ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಇವರಿಗೆ 9 ರಿಂದ 15 ದಿನಗಳ ಕಾಲ ಬೇಕಾಗುವುದು.

ಚಿತ್ತಾ ನಕ್ಷತ್ರ:

ಈ ನಕ್ಷತ್ರವನ್ನು ಮಂಗಳನು ಆಳುವನು. ಇವನು ಮೂತ್ರಪಿಂಡ, ಹರ್ನಿಯಾ, ಸೊಂಟ ಮತ್ತು ಮೆದುಳಿನ ಭಾಗಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಜ್ವರ, ಕಲ್ಲಿನ ಸಮಸ್ಯೆ, ಮೂತ್ರ ಪಿಂಡಗಳ ಸಮಸ್ಯೆ, ರಕ್ತಸ್ರಾವ, ಹುಣ್ಣು ತೀವ್ರವಾದ ನೋವು, ಮೊಣಕಾಲು ಸಮಸ್ಯೆ ಮತ್ತು ತಲೆನೋವಿನಂತಹ ಅನಾರೋಗ್ಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವುಗಳಿಂದ ಚೇತರಿಸಿಕೊಳ್ಳಲು 8 ರಿಂದ 15 ದಿನಗಳು ಬೇಕಾಗುವುದು.

ವಿಶಾಖಾ ನಕ್ಷತ್ರ:

ಗುರು ಗ್ರಹವು ವಿಶಾಖಾ ನಕ್ಷತ್ರವನ್ನು ಆಳುವುದು. ಗುರುವು ಕೆಳಹೊಟ್ಟೆ, ಯೋನಿ, ಗುದನಾಳ, ಗಾಳಿಗುಳ್ಳೆ, ಮೂತ್ರಪಿಂಡ, ಮೇದೋಜ್ಜೀರಕ ಗ್ರಂಥಿಗಳು, ಪ್ರಾಸ್ಟೇಟ್ ಗ್ರಂಥಿ ಮತ್ತು ಕೊಲೊನ್ ಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಈ ನಕ್ಷತ್ರದವರು ಗರ್ಭಕೋಶದ ತೊಂದರೆ, ಮೂತ್ರಪಿಂಡದ ಸಮಸ್ಯೆ, ಫೈಬ್ರಾಯ್ಡ್, ಅನಿಯಮಿತ ಮುಟ್ಟಿನ ಸ್ರಾವ, ಮೂತ್ರದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇವರು ಚೇತರಿಸಿಕೊಳ್ಳಲು ಸಾಮಾನ್ಯವಾಗಿ 20 ರಿಂದ 30 ದಿನಗಳ ಕಾಲ ಬೇಕಾಗುವುದು.

ಅನುರಾಧಾ ನಕ್ಷತ್ರ:

ಈ ನಕ್ಷತ್ರವನ್ನು ಶನಿಯು ಆಳುವನು. ಗಾಳಿ ಗುಳ್ಳೆ, ಜನನಾಂಗ, ಗುದನಾಳ, ಮೂಗಿನ ಮೂಳೆಗಳನ್ನು ನಿಯಂತ್ರಿಸುವನು. ಇ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಮಲಬದ್ಧತೆ, ಸಂತಾನ ಹೀನತೆ, ಮೂಳೆ ಮುರಿತ, ಗಂಟಲಿನ ಸಮಸ್ಯೆಯನ್ನು ಅನುಭವಿಸಬೇಕಾಗುವುದು. ಸಮಸ್ಯೆಗಳಿಂದ ಚೇತರಿಕೆ ಕಾಣಲು 6, 10 ಅಥವಾ 28 ದಿನಗಳು ಬೇಕಾಗುವುದು.

ಜ್ಯೇಷ್ಠಾ ನಕ್ಷತ್ರ:

ಈ ನಕ್ಷತ್ರವನ್ನು ಬುಧ ಗ್ರಹವು ಆಳುವುದು. ಇವನು ಅಂಡಾಶಯ, ಗರ್ಭ, ಕೊಲೊನ್, ಗುದದ್ವಾರ ಮತ್ತು ಜನನಾಂಗಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದವರು ಸಾಮಾನ್ಯವಾಗಿ ಗಡ್ಡೆ, ಫಿಸ್ತುಲಾ, ಭುಜದ ನೋವು, ಶಸ್ತ್ರಾಸ್ತ್ರ ಚಿಕಿತ್ಸೆಗಳನ್ನು ಹೊಂದಬೇಕಾಗುವುದು. ಇವರಿಗೆ ಬಂದ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಲು 15, 21 ಅಥವಾ 30 ದಿನಗಳು ಬೇಕಾಗುವುದು.

ಮೂಲಾ ನಕ್ಷತ್ರ:

ಈ ನಕ್ಷತ್ರವನ್ನು ಕೇತು ಆಳುವನು. ಅವನು ಸೊಂಟವನ್ನು ಆಳುವನು. ಈ ನಕ್ಷತ್ರದವರು ಸಾಮಾನ್ಯವಾಗಿ ಸಂಧಿವಾತ, ಸೊಂಟದ ಕಾಯಿಲೆ, ಶ್ವಾಸಕೋಶದ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಇವರಿಗೆ ಬಂದ ಅನಾರೋಗ್ಯದಿಂದ ಚೇತರಿಸಿಕೊಳ್ಳಲು 9,15 ಅಥವಾ 20 ದಿನಗಳು ಬೇಕಾಗುವುದು.

ಪೂರ್ವಾಷಾಢ:

ಈ ನಕ್ಷತ್ರವನ್ನು ಶುಕ್ರನು ಆಳುವನು. ಇವನು ರಕ್ತನಾಳ, ಮಿದುಳು, ಬೆನ್ನುಮೂಳೆಗಳ ಮೇಲೆ ಪ್ರಭಾವವನ್ನು ಬೀರುವನು. ಇವರು ಸಾಮಾನ್ಯವಾಗಿ ಅಸ್ತಮಾ, ಸಂಧಿವಾತ, ಸಂಟದ ನೋವು, ಸುರುಳಿ ಕಾಯಿಲೆ, ರಕ್ತ ಶುದ್ಧಿಯ ಸಮಸ್ಯೆ ಮತ್ತು ಶೀತದಂತಹ ಸಮಸ್ಯೆಗಳು ಕಾಡುತ್ತವೆ. ಈ ನಕ್ಷತ್ರದವರು ಅನಾರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಎರಡು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಸಮಯ ಬೇಕಾಗುವುದು.

ಉತ್ತರಾಷಾಢ:

ಈ ನಕ್ಷತ್ರದವರನ್ನು ಸೂರ್ಯ ಆಳುವನು. ಸೂರ್ಯನು ತೊಡೆ, ಪಕ್ಕೆಲಬು, ಮೊಣಕಾಲು, ಮಂಡಿಚಿಪ್ಪುಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದವರು ಎಸ್ಜಿಮಾ, ಚರ್ಮದ ಕಾಯಿಲೆ, ಜೀರ್ಣಾಂಗ ಅಸ್ವಸ್ಥತೆಗಳು, ಹೃದಯ ಸಮಸ್ಯೆ, ಹೊಟ್ಟೆ ಸಂಬಂಧಿ ಕಾಯಿಲೆಗಳು ಕಾಡುವುದು. ಈ ನಕ್ಷತ್ರದವರಿಗೆ ಚೇತರಿಕೆ ಕಾಣಲು 40 ರಿಂದ 45 ದಿನಗಳು ಬೇಕಾಗುವುದು.

ಶ್ರವಣಾ ನಕ್ಷತ್ರ:

ಈ ನಕ್ಷತ್ರವನ್ನು ಚಂದ್ರನು ಆಳುವನು. ಚರ್ಮ, ದುಗ್ಧರಸ, ಮೊಣಕಾಲುಗಳನ್ನು ಆಳುವನು. ಇವರು ಕ್ಷಯ, ಎಸ್ಜಿಮಾ, ಕುಷ್ಠರೋಗ, ಕೀವು ರಚನೆ, ಜೀರ್ಣಾಂಗ ಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವರಿಗೆ ಅನಾರೋಗ್ಯದಿಂದ ಚೇತರಿಕೆ ಕಾಣಲು 5 ರಿಂದ 10 ದಿನಗಳು ಬೇಕಾಗುವುದು.

ಧನಿಷ್ಠಾ ನಕ್ಷತ್ರ:

ಈ ನಕ್ಷತ್ರವನ್ನು ಮಂಗಳ ಗ್ರಹವು ಆಳುವುದು. ಅಪಘಾತ, ಹೊಲಿಗೆ ಚಿಕಿತ್ಸೆ, ಶಸ್ತ್ರಾಸ್ತ್ರ ಚಿಕಿತ್ಸೆಯ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಧನಿಷ್ಠಾ ನಕ್ಷತ್ರದವರು ಸಾಮಾನ್ಯವಾಗಿ ಮೊಣಕಾಲು ಸಮಸ್ಯೆ, ಮೂಳೆ ಸಮಸ್ಯೆ, ಮಲೇರಿಯಾ, ಫಿಲೇರಿಯಾ, ಅಧಿಕ ಜ್ವರ, ಅತಿಸಾರ, ಎಲಿಫಾಂಟಿಯಾಸಿಸ್, ಒಣ ಕೆಮ್ಮು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಅನಾರೋಗ್ಯದಿಂದ ಚೇತರಿಕೆ ಕಾಣಲು 13 ರಿಂದ 15 ದಿನಗಳ ಕಾಲ ಬೇಕಾಗುವುದು.

ಶತಭಿಷಾ ನಕ್ಷತ್ರ:

ಈ ನಕ್ಷತ್ರವನ್ನು ರಾಹು ಆಳುವನು. ರಾಹುವು ಸ್ನಾಯು, ಮೊಣಕಾಲು ಮತ್ತು ಪಾದಗಳನ್ನು ನಿಯಂತ್ರಿಸುವನು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಸಂಧಿವಾತ, ಹೃದಯಘಾತ, ಬಿ.ಪಿ, ನಿದ್ರಾಹೀನತೆ ಆರೋಗ್ಯ ಸಮಸ್ಯೆಗಳನ್ನು ಆಗಾಗ ಅನುಭವಿಸುವರು. ಇವರಿಗೆ ಅನಾರೋಗ್ಯದಿಂದ ಚೇತರಿಸಿಕೊಳ್ಳಲು 3, 10 ಅಥವಾ 40 ದಿನಗಳು ಬೇಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.

ಪೂರ್ವಾಭಾದ್ರಾ ನಕ್ಷತ್ರ:

ಈ ನಕ್ಷತ್ರವನ್ನು ಗುರು ಗ್ರಹವು ಆಳುವುದು. ಇವನು ಪಾದ, ಕಾಲ್ಬೆರಳು ಮತ್ತು ಕಾಳುಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಯಕೃತ್, ಕಾಮಲೆ, ಹೊಟ್ಟೆ ಗಡ್ಡೆ, ಕರುಳು ಕಾಯಿಲೆಗಳಿಗೆ ತುತ್ತಾಗುವುದು. ಈ ರೋಗಗಳಿಂದ ಚೇತರಿಕೆ ಕಾಣಲು ಈ ನಕ್ಷತ್ರದವರಿಗೆ 2, 10 ಅಥವಾ 3 ತಿಂಗಳುಗಳ ಕಾಲ ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತವೆ.

ಉತ್ತರಾಭಾದ್ರಾ ನಕ್ಷತ್ರ:

ಈ ನಕ್ಷತ್ರವನ್ನು ಶನಿ ಗ್ರಹವು ಆಳುವುದು. ಶನಿಯು ಕಾಲುಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುತ್ತಾನೆ. ಈ ನಕ್ಷತ್ರದವರು ಅಂಡವಾಯು, ತಣ್ಣನೆಯ ಪಾದ, ಕಾಲು ಮುರಿತ, ಮಲಬದ್ಧತೆ, ಡ್ರಾಪ್ಸಿ ಮತ್ತು ಅಜೀರ್ಣ ಸಮಸ್ಯೆಯು ಆಗಾಗ ಕಾಣಿಸಿಕೊಳ್ಳುವುದು. ಇವರಿಗೆ ಅನಾರೋಗ್ಯದಿಂದ ಚೇತರಿಕೆ ಕಾಣಲು ಸಾಮಾನ್ಯವಾಗಿ 7, 10 ಅಥವಾ 45 ದಿನಗಳು ಬೇಕಾಗುವುದು.

ರೇವತಿ ನಕ್ಷತ್ರ:

ಈ ನಕ್ಷತ್ರವನ್ನು ಬುಧನು ಆಳುವನು. ಬುಧನು ಕಾಲು ಮತ್ತು ಕಾಲ್ಬೆರಳಿನ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ. ಇವರಿಗೆ ಸಾಮಾನ್ಯವಾಗಿ ಮಲಬದ್ಧತೆ, ಅಂಡವಾಯು, ಕ್ಷಯ ರೋಗ ಕಾಣಿಸಿಕೊಳ್ಳುವುದು. ಇವುಗಳಿಂದ ಚೇತರಿಕೆ ಕಾಣಲು 10, 28 ಅಥವಾ 45 ದಿನಗಳು ಬೆಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಸ್ವಾತಿ ನಕ್ಷತ್ರ:

ಈ ನಕ್ಷತ್ರವನ್ನು ರಾಹು ಆಳುವನು. ಇವನು ಮೂತ್ರಪಿಂಡ, ಕೌಶಲ್ಯ, ಮೂತ್ರನಾಳಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದವರಿಗೆ ಸಾಮಾನ್ಯವಾಗಿ ಚರ್ಮರೋಗ, ಮೂತ್ರದ ಸಮಸ್ಯೆ, ವಾಯು ಸಮಸ್ಯೆ ಆಗಾಗ ಕಾಣಿಸಿಕೊಳ್ಳುವುದು. ಇವರಿಗೆ ಅನಾರೋಗ್ಯದಿಂದ ಚೇತರಿಕೆ ಕಾಣಲು 2 ಅಥವಾ 10 ದಿನಗಳು ಬೇಕಾಗುವುದು..

ನಕ್ಷತ್ರಾನುಸಾರ ಜನಿಸಿದವರ ಗುಣಲಕ್ಷಣಗಳು

ಧನಿಷ್ಟ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ವೈದಿಕ ಜ್ಯೋತಿಷ್ಯವು ಧನಿಷ್ಠ ನಕ್ಷತ್ರದಲ್ಲಿ ಜನಿಸಿದ ಜನರು ಬಹಳ ಶಕ್ತಿಯುತರು ಎಂದು ಹೇಳುತ್ತದೆ..!!

  • 🌷ಚಿಹ್ನೆ- ಡ್ರಮ್ ಅಥವಾ ಕೊಳಲು
  • 🌷ಆಳುವ ಗ್ರಹ- ಮಂಗಳ
  • 🌷ಲಿಂಗ-ಹೆಣ್ಣು
  • 🌷ಗಣ- ರಾಕ್ಷಸ
  • 🌷ಗುಣ- ಸತ್ವ / ತಮಸ್
  • 🌷ಆಳುವ ದೇವತೆ- 8 ವಾಸಸ್
  • 🌷ಪ್ರಾಣಿ- ಹೆಣ್ಣು ಸಿಂಹ
  • 🌷ಭಾರತೀಯ ರಾಶಿಚಕ್ರ- 23 ° 20 ಮಕರ – 6 ° 40 ಕುಂಭ

🌷‘ಸಿಂಫೋನಿಯ ನಕ್ಷತ್ರ’ ಎಂದೇ ಧನಿಷ್ಟ ನಕ್ಷತ್ರ ಖ್ಯಾತಿ ಪಡೆದಿದೆ.

🌷ವೈದಿಕ ಜ್ಯೋತಿಷ್ಯವು ಧನಿಷ್ಠ ನಕ್ಷತ್ರದಲ್ಲಿ ಜನಿಸಿದ ಜನರು ಬಹಳ ಶಕ್ತಿಯುತರು ಎಂದು ಹೇಳುತ್ತದೆ. ಸಮರ್ಪಣೆ ಮತ್ತು ಕ್ರಿಯಾಶೀಲತೆಯಿಂದ ಅವರು ತಮ್ಮ ಗುರಿಯನ್ನು ಸಾಧಿಸುತ್ತಾರೆ. ಅದು ಅವರ ಸ್ವಭಾವದಲ್ಲಿನ ಕೆಲವು ಉತ್ತಮ ಗುಣಗಳಾಗಿವೆ. ಈ ಜನರು ತಮ್ಮ ಉನ್ನತ ಮಹತ್ವಾಕಾಂಕ್ಷೆ ಮತ್ತು ಕಠಿಣ ಪರಿಶ್ರಮಕ್ಕೆ ಹೆಸರುವಾಸಿಯಾಗಿದ್ದಾರೆ. ಅದರ ಮೂಲಕ ಅವರು ತಮ್ಮ ಕನಸುಗಳನ್ನು ವಾಸ್ತವಕ್ಕೆ ತಿರುಗಿಸುತ್ತಾರೆ. ಅವರು ತಮ್ಮ ಕೆಲಸದ ಸ್ಥಳದಲ್ಲಿ ದೀರ್ಘಕಾಲ ಉಳಿಯುವುದಿಲ್ಲ. ಈ ನಕ್ಷತ್ರದವರು ಬಹಳ ಬುದ್ಧಿವಂತರು ಮತ್ತು ಉತ್ತಮ ಸಾಮಾನ್ಯ ಜ್ಞಾನವನ್ನು ಹೊಂದಿರುತ್ತಾರೆ.

🌷ಧನಿಷ್ಠ ನಕ್ಷತ್ರದ ಸ್ಥಳೀಯರು ಸ್ವಾಭಿಮಾನ ಮತ್ತು ಗಮನ ಸೆಳೆಯುವ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಜನರ ಮೇಲೆ ಸುಲಭವಾಗಿ ಪ್ರಭಾವ ಬೀರಬಹುದು ಮತ್ತು ಸಮಾಜದಲ್ಲಿ ತಮ್ಮ ಹಕ್ಕನ್ನು ಪ್ರತಿಪಾದಿಸಲು ಬಹಳ ಸಮರ್ಥರು. ಮೂಲತಃ ಅವರು ಘರ್ಷಣೆಗಳಿಂದ ಅಂತರ ಕಾಪಾಡಿಕೊಳ್ಳುತ್ತಾರೆ ಆದರೆ ವಿಷಯಗಳು ಹದಗೆಟ್ಟಾಗ ಅವರು ತಮ್ಮನ್ನು ತಾವು ವಿರೋಧಿಸಲು ಸಾಧ್ಯವಿಲ್ಲ ಮತ್ತು ತುಂಬಾ ಆಕ್ರಮಣಕಾರಿ ಮತ್ತು ಹಿಂಸಾತ್ಮಕವಾಗಿರಲು ಇಷ್ಟಪಡುವುದಿಲ್ಲ. ಈ ಸ್ಥಳೀಯರು ವಿಷಯಗಳ ಗೌಪ್ಯತೆ ಕಾಪಾಡಿಕೊಳ್ಳಬಲ್ಲರು. ಎಲ್ಲಿಯೂ ಅವನ್ನು ಬಹಿರಂಗಪಡಿಸುವುದಿಲ್ಲ. ಏನು ಮಾತನಾಡಬೇಕು ಮತ್ತು ಎಲ್ಲಿ ಮಾತನಾಡಬೇಕೆಂದು ಎಂಬುದರ ಬಗ್ಗೆ ಅವರಿಗೆ ಅರಿವಿರುತ್ತದೆ. ಬುದ್ಧಿವಂತರೂ ಆಗಿರುವ ಈ ನಕ್ಷತ್ರದವರು ತಮ್ಮ ಮಾತಿನಿಂದಾಗಿ ಪ್ರಭಾವಶಾಲಿಗಳಾಗಬಲ್ಲರು.

ಪೂರ್ವ ಭದ್ರಪದ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

  • 🌷ಚಿಹ್ನೆ- ಕತ್ತಿ, ಎರಡು ಮುಖಗಳನ್ನು ಹೊಂದಿರುವ ಮನುಷ್ಯ
  • 🌷ಆಳುವ ಗ್ರಹ- ಗುರು
  • 🌷ಲಿಂಗ-ಪುರುಷ
  • 🌷ಗಣ- ಮನುಷ್ಯ
  • 🌷ಗುಣ- ಸತ್ವ / ರಜಸ್‌
  • 🌷ಆಳುವ ದೇವತೆ- ಅಜಾ ಏಕಪಾದ
  • 🌷ಪ್ರಾಣಿ- ಗಂಡು ಸಿಂಹ
  • 🌷ಭಾರತೀಯ ರಾಶಿಚಕ್ರ- 20 ° ಕುಂಭ – 3 ° 20 ಮೀನಾ

🍀ಇರುವ ಇಪ್ಪತ್ತೇಳು ನಕ್ಷತ್ರಗಳಲ್ಲಿ ಪೂರ್ವಭಾದ್ರ ನಕ್ಷತ್ರವು ಇಪ್ಪತ್ತೈದನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಗುರು ಗ್ರಹವಾಗಿದೆ. ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಸತ್ಯ ಮತ್ತು ನೈತಿಕ ಚೌಕಟ್ಟಿನ ಅಡಿಯಲ್ಲಿ ಜೀವನ ನಡೆಸುತ್ತಾರೆ. ಇವರಿಗೆ ಅನೈತಿಕ, ಅನ್ಯಾಯ ಚಟುವಟಿಕೆಯನ್ನು ಸಹಿಸಲು ಆಗದು.

🍀ಅಲ್ಲದೆ, ಇವರು ಉತ್ತಮ ಮೌಲ್ಯಗಳನ್ನು ಹೊಂದಿದವರಾಗಿದ್ದು, ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಕುಶಲತೆಯನ್ನು ಹೊಂದಿರುತ್ತಾರೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಸಹ ಹೆಚ್ಚಿನ ಆಸಕ್ತಿಯನ್ನು ಉಳ್ಳವರಾಗಿರುತ್ತಾರೆ. ಅಷ್ಟೇ ಅಲ್ಲದೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆಯೂ ಒಂದುಮಟ್ಟಿಗೆ ಒಲವನ್ನು ಹೊಂದಿರುತ್ತಾರೆ.

ಉತ್ತರಾ ಭದ್ರಪದ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

  • 🌻ಚಿಹ್ನೆ-ಅವಳಿಗಳು, ಒಂದು ಮಂಚದ ಹಿಂಭಾಗದ ಕಾಲುಗಳು, ನೀರಿನಲ್ಲಿ ಹಾವು
  • 🌻ಆಳುವ ಗ್ರಹ- ಶನಿ
  • 🌻ಲಿಂಗ-ಪುರುಷ
  • 🌻ಗಣ- ಮನುಷ್ಯ
  • 🌻ಗುಣ- ಸತ್ವ / ಸತ್ವ / ತಮಾ
  • 🌻ಆಳುವ ದೇವತೆ – ಅಹಿರ್ ಭುದ್ಯಾನ
  • 🌻ಪ್ರಾಣಿ- ಹೆಣ್ಣು ಹಸು
  • 🌻ಭಾರತೀಯ ರಾಶಿಚಕ್ರ – 3 ° 20 – 16 ° 40 ಮೀನಾ
  • 🌻ಇದನ್ನು ‘ಯೋಧರ ನಕ್ಷತ್ರ’ ಎಂದು ಕರೆಯಲಾಗುತ್ತಿತ್ತು.

🍀ನಕ್ಷತ್ರಗಳ ಕೂಟದಲ್ಲಿ ಉತ್ತರಭಾದ್ರ ನಕ್ಷತ್ರವು ಇಪ್ಪತ್ತಾರನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ಶನಿ ಗ್ರಹವಾಗಿದೆ. ಕಲ್ಪನಾ ಲೋಕದಲ್ಲಿ ವಿಹರಿಸುವುದು ಈ ನಕ್ಷತ್ರದಲ್ಲಿ ಜನಿಸಿದವರಿಗೆ ಇಷ್ಟವಿರುವುದಿಲ್ಲ. ಈ ವ್ಯಕ್ತಿಗಳು ಸದಾ ಪ್ರ್ಯಾಕ್ಟಿಕಲ್ ಆಗಿ ಯೋಚಿಸುತ್ತಾರೆ. ಉದ್ಯೋಗವಾಗಲಿ ವ್ಯಾಪಾರವಾಗಲಿ ಪರಿಶ್ರಮದಿಂದ ಸಫಲತೆ ಸಿಗುತ್ತದೆ ಎಂಬ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ಅಷ್ಟೆ ಅಲ್ಲದೆ ತ್ಯಾಗ ಜೀವಿಗಳು ಇವರಾಗಿರುತ್ತಾರೆ.

ರೇವತಿ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

  • 🌻ಚಿಹ್ನೆ- ಡ್ರಮ್, ಜೋಡಿ ಮೀನು
  • 🌻ಆಳುವ ಗ್ರಹ- ಬುಧ
  • 🌻ಲಿಂಗ-ಹೆಣ್ಣು
  • 🌻ಗಣ-ದೇವ
  • 🌻ಗುಣ- ಸತ್ವ
  • 🌻ಆಳುವ ದೇವತೆ- ಪುಶನ್
  • 🌻ಪ್ರಾಣಿ- ಹೆಣ್ಣು ಆನೆ
  • 🌻ಭಾರತೀಯ ರಾಶಿಚಕ್ರ – 16 ° 40 – 30 ° ಮೀನಾ
  • 🌻ಇದು ಕೊನೆಯ ನಕ್ಷತ್ರ. ಇದು ಒಂದು ಪ್ರಯಾಣವನ್ನು ಸೂಚಿಸುತ್ತದೆ.

🍀ಜ್ಯೋತಿಷ್ಯ ಶಾಸ್ತ್ರದಲ್ಲಿ ರೇವತಿ ನಕ್ಷತ್ರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು 20 ನಕ್ಷತ್ರಗಳನ್ನೊಳಗೊಂಡ ನಕ್ಷತ್ರಪುಂಜವಾಗಿದೆ. ನಕ್ಷತ್ರಗಳ ಸಾಲಿನಲ್ಲಿ ಕೊನೆಯ ನಕ್ಷತ್ರ. ಜ್ಯೋತಿಷಿಗಳು ವಿದ್ಯಾಭ್ಯಾಸ ಆರಂಭ, ಗೃಹಪ್ರವೇಶ, ಮದುವೆ, ದೇವರ ಪ್ರತಿಷ್ಠಾಪನೆ, ವಸ್ತ್ರ ತಯಾರಿಕೆ ಇತ್ಯಾದಿ ಶುಭ ಕಾರ್ಯಗಳ ಆರಂಭಕ್ಕೆ ರೇವತಿ ನಕ್ಷತ್ರವೇ ಪ್ರಶಸ್ತ ಎನ್ನುತ್ತಾರೆ. ಈ ರಾಶಿಯ ಅಧಿದೇವತೆ ಪೂಶನ್ ದೇವ. ಈ ರಾಶಿಯ ನಾಲ್ಕು ಪಾದಗಳು ಮೀನ ರಾಶಿಗೆ ಸೇರಿವೆ. ಇದರ ಅಧಿಪತಿ ಗ್ರಹ ಬುಧ. ಈ ನಕ್ಷತ್ರದ ಮೇಲೆ ಗುರು ಮತ್ತು ಬುಧ ಸಂಯೋಜಿತ ಪರಿಣಾಮವನ್ನು ಬೀರುತ್ತವೆ.

🍀ರೇವತಿಯು 27 ನಕ್ಷತ್ರಗಳಲ್ಲಿ ಕೊನೆಯದಾಗಿರುವುದರಿಂದ ತನ್ನ ಮೂಲ ನಿವಾಸಿಗಳ ಜೀವನವನ್ನು ಪೋಷಿಸುವ ಮತ್ತು ಬೆಳಕನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ನಕ್ಷತ್ರವು ಫಲಪ್ರದ ಪ್ರಯಾಣಗಳಿಗೆ ಸಂಬಂಧಿಸಿದೆ. ರೇವತಿ ಎಂದರೆ ‘ಸಮೃದ್ಧಿ’ ಹಾಗೂ ಇದು ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವಾಗಿದೆ. ರೇವತಿ ನಕ್ಷತ್ರ ಹೊಂದಿರುವವರು ಎಲ್ಲರಿಗೂ ಬೆಂಬಲವನ್ನು ನೀಡುತ್ತಾರೆ ಮತ್ತು ಹೆಚ್ಚಿನ ಸಮಯ ಆಶಾವಾದಿಗಳಾಗಿರುತ್ತಾರೆ.

Leave a Comment

Your email address will not be published. Required fields are marked *