ದೇವರ ನೈವೇದ್ಯಕ್ಕೆ ಇಡುವ ಪದಾರ್ಥಗಳು ಹಾಗೂ ಅದರ ವೈಶಿಷ್ಟ್ಯಗಳು
Index of Important Points
🌷ಹಿಂದೂ ಧರ್ಮ ಶ್ರೇಷ್ಠ ಧರ್ಮ. ಬಹಳ ಪುರಾತನ ಈ ಧರ್ಮ ಹಲವು ವೈವಿಧ್ಯಮಯ ವೈಜ್ಞಾನಿಕ ಹಾಗೂ ವೈಚಿತ್ರ್ಯಗಳನ್ನು ಒಳಗೊಂಡಿದೆ. ನಮ್ಮ ಧರ್ಮದಲ್ಲಿರುವ ದೇವರು ಬೇರೆ ಎಲ್ಲೂ ಇಲ್ಲ ಅಂತ ಅನ್ನಿಸುತ್ತದೆ. ಮನುಷ್ಯ ಸತ್ಯವಂತನಾಗಲು , ವಿಚಾರವಂತನಾಗಲು ಹಾಗೂ ಧರ್ಮಿಷ್ಠನಾಗಲು ನಮ್ಮ ಆಚಾರ ವಿಚಾರಗಳು ಸಹಾಯ ಮಾಡುತ್ತದೆ. ನೈವೇದ್ಯದ ವಿಷಯಕ್ಕೋ ಇದು ಅನ್ವಯಿಸುತ್ತದೆ
ದೇವರ ನೈವೇದ್ಯಕ್ಕೆ ತೆಂಗಿನ ಕಾಯಿ ಮತ್ತು ಬಾಳೆ ಹಣ್ಣು ಯಾಕೆ ಶ್ರೇಷ್ಠ?
🌷 ತೆಂಗಿನಕಾಯಿ ಮತ್ತು ಬಾಳೆಹಣ್ಣು – ದೇವರಿಗೆ ಶ್ರೇಷ್ಠ ನೈವೇದ್ಯ 🌷
🌰 ದೇವರೂ : ದೇ – ದೇಹವಿಲ್ಲದ. ವ – ವರ್ಣವಿಲ್ಲದ. ರೂ – ರೂಪ ವಿಲ್ಲದ. ದೇವರಿಗೆ ಇದೇ ಹಣ್ಣು ಮತ್ತು ತೆಂಗಿನಕಾಯಿ ಶ್ರೇಷ್ಠ ಏಕೆ? ಬೇರೆ ಯಾವ ಹಣ್ಣನ್ನು ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ. ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ ಹಾಗೆಯೇ. ತೆಂಗಿನಕಾಯಿ ಒಡೆದು ಮಂಗಳಾರತಿ ಬೆಳಗುತ್ತಾರೆ ಇವೆರಡರ ವೈಶಿಷ್ಟ್ಯ ಏನು?
🌰 ಸಾಮಾನ್ಯವಾಗಿ ನಾವು ಯಾವುದೇ ದೇವಸ್ಥಾನಕ್ಕೆ ಹೋದರು ಕೂಡ ಬಾಳೆ ಹಣ್ಣು. ತೆಂಗಿನ ಕಾಯಿ. ಕರ್ಪುರ. ಹೂವು. ಗಂಧದ ಕಡ್ಡಿಯನ್ನು ತೆಗೆದುಕೊಂಡು ಹೋಗುತ್ತೇವೆ ಅಲ್ಲವೇ ಇದರ ಜೊತೆಗೆ ನಾವು ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ಕೂಡ ದೇವರಿಗೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ನೈವೇದ್ಯಕ್ಕೆ ಬಳಸುತ್ತೇವೆ ಆದರೆ ದೇವರಿಗೆ ಬಾಳೆಹಣ್ಣು ಹಣ್ಣು ತೆಂಗಿನಕಾಯಿಯನ್ನೇ ಏಕೆ ನೈವೇದ್ಯಕ್ಕೆ ಬಳಸುತ್ತೇವೆ ಎಂದು ಗೊತ್ತೇ. ತೆಂಗಿನ ಕಾಯಿ ಮತ್ತು ಬಾಳೆಹಣ್ಣನ್ನೇ ದೇವರಿಗೆ ಅರ್ಪಿಸುವುದು ಏಕೆಂದರೆ ಇವೆರಡೂ ಕೂಡ ಪೂರ್ಣಫಲಗಳು.
🌰 ಇವೆರಡನ್ನೂ ನೈವೇದ್ಯ ಮಾಡುವ ಪದ್ಧತಿಯನ್ನು ನಮ್ಮ ಹಿರಿಯರು ಮಾಡುವರು. ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ. ಅಷ್ಟೇ ಅಲ್ಲ, ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ; ಹೆಚ್ಚಾಗಿ ನಾವು ಒಂದು ಹಣ್ಣನ್ನು ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೈಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗುತ್ತದೆ.ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೇ ಎಸೆದರೂ ಅದು ಮತ್ತೆ ಬೆಳೆಯುವುದಿಲ್ಲ.
🌰 ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ಧತಿಯನ್ನು ನಮ್ಮ ಹಿರಿಯರು ಮಾಡಿದ್ದಾರೆ.ತೆಂಗಿನ ಕಾಯಿಯೂ ಅಷ್ಟೇ. ತೆಂಗಿನ ಮರ ಉಪಯೋಗಿಸದ ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ‘ಪರಿಶುದ್ಧ’ವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ ಎಂಬ ತತ್ವವು ಇದರಲ್ಲಿದೆ. ಇನ್ನೂ ಹೇಳಬೇಕೆಂದರೆ, ‘ಬಾಳೆ’ ಮತ್ತು ‘ತೆಂಗಿನ’ ಮರದ ಎಲ್ಲಾ ಭಾಗಗಳು ವ್ಯರ್ಥವಾಗದೆ ಎಲ್ಲರಿಗೂ ಉಪಯುಕ್ತವಾಗಿವೆ.
🌰 ತೆಂಗಿನ ಕಾಯಿ ದೇವರ ಮುಂದೆ ಒಡೆದರೆ ನಮ್ಮ ಪಾಪ ಕರ್ಮ ದೋಷವೂ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ಆ ಶಕ್ತಿ ತೆಂಗಿನಕಾಯಿಗೆ ಇದೆ. ಅದೇ ಕಾರಣಕ್ಕೆ ಇವೆರಡನ್ನೂ ನೈವೇದ್ಯ ಮಾಡುವುದು ಶ್ರೇಷ್ಠವಾಗಿದೆ. ಹಾಗೆಯೇ ಬೇರೆಯವರಿಗೆ ಸಹಾಯ ಮಾಡುವುದೇ ನಮ್ಮ ಜನ್ಮಕ್ಕೆ ಸಫಲತೆ ನೀಡುವುದು ಎಂಬ ಗೂಢಾರ್ಥವಿದೆ.
🌷ನಾವು ದೇವಸ್ಥಾನಕ್ಕೆ ಭೇಟಿ ಕೊಡುತ್ತೇವೆ. ನಮಗೆ ಒಳ್ಳೆಯದು ಮಾಡು, ನಮ್ಮ ಮನೆಯಲ್ಲಿ ಶಾಂತಿ ಕೊಡು , ಮಕ್ಕಳು ಮರಿಗಳಿಗೆ ಆರೋಗ್ಯ, ಬುದ್ದಿ ಕೊಡು ಎಂದು ಕೇಳಲು ದೇವರ ದರ್ಶನ ಮಾಡುತ್ತೇವೆ. ದೇವಸ್ಥಾನಕ್ಕೆ ಹಣ್ಣು ಕಾಯಿ ತೆಗೆದುಕೊಂಡು ಹೋಗಿ ಪೂಜೆ ಮಾಡಿಸುತ್ತೇವೆ. ಕಾಯಿ ಎಂದರೆ ಅದು ತೆಂಗಿನಕಾಯಿ, ಹಣ್ಣು ಎಂದರೆ ಅದು ಬಾಳೆಹಣ್ಣು ಎಂದರ್ಥ. ನಿಮಗೆ ಮನೆಯಲ್ಲಿ ಹಣ್ಣು ಕಾಯಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗು ಎಂದರೆ ನೀವು ಮರು ಪ್ರಶ್ನಿಸದೆ ಬಾಳೆಹಣ್ಣು ಮತ್ತು ತೆಂಗಿನಕಾಯಿ ತೆಗೆದುಕೊಂಡು ಹೋಗೋಕೆ ಇದೇ ಕಾರಣ. ನಿಮಗೆ ಒಂದು ಸಂದೇಹ ಇರಬಹುದು ಹೂವಿನಲ್ಲಿ ಬಗೆಬಗೆಯ ರೀತಿಯ ಹೂವುಗಳನ್ನು ಪೂಜೆಗೆ ತೆಗೆದುಕೊಂಡು ಹೋಗುತ್ತೇವೆ. ಆದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಮಾತ್ರ ತೆಗೆದುಕೊಂಡು ಹೋಗ್ತೀವಲ್ಲ ಏಕೆ ಅಂತ ! ? ಅದಕ್ಕೆ ಉತ್ತರ ನಮ್ಮ ಹಿರಿಯರು ಯಾವುದೇ ಆಚಾರಗಳನ್ನು ಸುಮ್ಮನೆ ಮಾಡಿಲ್ಲ. ಅದಕ್ಕೆ ಒಂದು ಅರ್ಥವಿದೆ.
🌷ತೆಂಗಿನಕಾಯಿ ನಮ್ಮ ಅಂತರಂಗಕ್ಕೆ ಹೋಲಿಸಲಾಗುತ್ತೆ. ತೆಂಗಿನಕಾಯಿ ಸಿಪ್ಪೆ, ಕರಟ, ಕಾಯಿಚೂರು ಹಾಗೂ ನೀರನ್ನು ಹೊಂದಿದೆ. ಅಂದರೆ ಬಾಹ್ಯ ಕೊಳಕು ವಿಚಾರದಿಂದ ಒಳಗಿನ ಪರಿಶುದ್ಧ ಗಂಗೆಯಂತೆ ಬದಲಿಸು ಎಂಬರ್ಥ ಕೊಡುತ್ತೆ. ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳು ತಿಂದು ಬಿಸಾಡಿದರೆ ಅದರಿಂದ ಏನೂ ಹುಟ್ಟುವುದಿಲ್ಲ. ನಮಗೆ ಈ ಜನ್ಮ ಮಾತ್ರ ಸಾಕು. ಬೇರೆ ಜನ್ಮ ಹೊಂದದೆ ಮುಕ್ತಿ ಕೊಡು ಎಂಬ ಸಂಕೇತ ಅದು.
🌷ಬೇರೆ ಗಿಡಗಳು ಎಂಜಲುಗಳಿಂದ ಹುಟ್ಟುತ್ತವೆ. ಅಂದರೆ ನಾವು ಯಾವುದೇ ಹಣ್ಣು ತಿಂದು ಅದರ ಒಳಗಿನ ಬೀಜವನ್ನು ಬಿಸಾಡಿದರೆ ಅದರಿಂದ ಹೊಸ ಗಿಡ ಹುಟ್ಟುತ್ತೆ. ಆದರೆ ಬಾಳೆ ಹಣ್ಣು ತಿಂದು ಸಿಪ್ಪೆ ಬಿಸಾಡಿದರೆ ಏನೂ ಹುಟ್ಟುವುದಿಲ್ಲ. ತೆಂಗಿನಕಾಯಿ ಅಷ್ಟೇ. ಕಾಯಿ ತಿಂದು ಕರಟ ಬಿಸಾಡಿದರೆ ಅದು ಹುಟ್ಟುವುದಿಲ್ಲ. ಬಾಳೆದಂಡಿನಿಂದ ಇನ್ನೂಂದು ಬಾಳೆಗಿಡ ಹುಟ್ಟುತ್ತೆ. ಒಡೆಯದ ಪೂರ್ಣ ತೆಂಗಿನಕಾಯಿ ಇನ್ನೊಂದು ಸಸಿಯಾಗುತ್ತೆ. ಎಂಜಲಿನಿಂದ ಬೆಳೆಯದ ಪರಿಶುದ್ಧವಾದ ಪದಾರ್ಥಗಳೇ ಭಗವಂತನ ಸೇವೆಗೆ ಉತ್ತಮ.
ದೇವರ ನೈವೇದ್ಯಕ್ಕೆ ಇಡುವ 50 ಪದಾರ್ಥಗಳ ಹೆಸರುಗಳು ಸಂಸ್ಕೃತ ಮತ್ತು ಕನ್ನಡ ಅನುವಾದ.
ನಿಮಗೆ ತಿಳಿದಿರುವ ಹಾಗೆ ನಾವು ಎಷ್ಟೋ ಸಾರಿ ಪೂಜೆ ಮಾಡಬೇಕು ಅಂದ್ರೆ ಅಥವಾ ಯಾವುದಾದರೂ ಪೂಜಾ ವಿಧಿ ವಿಧಾನ, ಆಚರಣೆಗಳನ್ನು ಕೇಳಬೇಕಾದರೆ ಎಲ್ಲೋ ಒಂದು ಕಡೆ ನಮಗೆ ಗೊತ್ತಿಲ್ದೆ ಇರೋ ಪದಾರ್ಥಗಳ ಹೆಸರುಗಳು ಬರ್ತವೆ, ಸಂಸ್ಕೃತದ ಅರಿವು ಕಡಿಮೆ ಇರುವುದರಿಂದ ಪದಾರ್ಥಗಳು ಯಾವುದು ಅಂತ ನಮಗೆ ಬೇಗ ಹೊಳೆಯುವುದಿಲ್ಲ ಇದರಿಂದಾಗಿ ನಾವು ಅದನ್ನ ಅಲ್ಲೇ ಮರೆತುಬಿಡು ಅವಕಾಶ ಜಾಸ್ತಿ.
ಈ ಕೆಳಗೆ ಕೊಟ್ಟಿರುವ ಸಂಸ್ಕೃತ ಮತ್ತು ಕನ್ನಡ ಅನುವಾದದಿಂದ ಇನ್ಮುಂದೆ ಇತರ ಸನ್ನಿವೇಶಗಳು ಬರದೇ ಇರಲಿ ಅಂತ ಆಶಿಸುತ್ತೇವೆ
- ಬಾಳೆಹಣ್ಣು- (ಕನ್ನಡ) – ಕದಳೀ ಫಲಂ
- ಮಾವಿನ ಹಣ್ಣು- (ಕನ್ನಡ) – ಆಮ್ರ ಫಲಂ
- ಕಿತ್ತಳೆ- (ಕನ್ನಡ) – ನಾರಂಗ ಫಲಂ
- ತೆಂಗಿನಕಾಯಿ- (ಕನ್ನಡ) – ನಾರಿಕೇಳ ಫಲಂ
- ಸೀಬೆ- (ಕನ್ನಡ) – ಬಹುಬೀಜ ಫಲಂ
- ದಾಳಿಂಬೆ- (ಕನ್ನಡ) – ದಾಡಿಮ ಫಲಂ
- ಹಲಸಿನ ಹಣ್ಣು- (ಕನ್ನಡ) – ಪನಸ ಫಲಂ
- ಎಲಚಿ- (ಕನ್ನಡ) – ಬದರ ಫಲಂ
- ಖರ್ಜೂರ- (ಕನ್ನಡ) – ಖರ್ಜೂರ ಫಲಂ
- ಮೂಸಂಬಿ- (ಕನ್ನಡ) – ಜಂಬೀರ ಫಲಂ
- ದ್ರಾಕ್ಷಿ- (ಕನ್ನಡ) – ದ್ರಾಕ್ಷಾ ಫಲಂ
- ನೇರಳೆ- (ಕನ್ನಡ) – ಜಂಬೂ ಫಲಂ
- ಸೌತೆಕಾಯಿ- (ಕನ್ನಡ) – ಉರ್ವಾರುಕ ಫಲಂ
- ಚಕ್ಕೋತ- (ಕನ್ನಡ) – ಲಿಕುಚ ಫಲಂ
- ಕಬ್ಬು- (ಕನ್ನಡ) – ಇಕ್ಷು ಖಂಡಮ್
- ಕಡಲೆಬೇಳೆ- (ಕನ್ನಡ) – ಚಣಕ ದಳ
- ತಂಬಿಟ್ಟು- (ಕನ್ನಡ) – ತಂಡುಲ ಚೂರ್ಣ
- ಹೆಸರುಬೇಳೆ- (ಕನ್ನಡ) – ಮುದ್ಗದಳ
- ಕಡಲೆಪುರಿ- (ಕನ್ನಡ) – ಧಾನಾ ಭ್ರಷ್ಟಯವಃ(ಮಂಡಕ್ಕಿ)
- ಒಬ್ಬಟ್ಟು- (ಕನ್ನಡ) – ಅಪೂಪ (ಪೋಲಿಕಾ)
- ಲಾಡು- (ಕನ್ನಡ) – ಲಡ್ಡು ಕಮ್
- ಒಡೆ- (ಕನ್ನಡ) – ಮಾಷಾ ಪೂಪ
- ರೊಟ್ಟಿ- (ಕನ್ನಡ) – ಕಾಂದವ
- ವಾಂಗಿಬಾತು- (ಕನ್ನಡ) – ವೃಂತಕಾನ್ನಂ
- ಪಲ್ಯ- (ಕನ್ನಡ) – ವ್ಯಂಜನಂ
- ಪಾಯಸ- (ಕನ್ನಡ) – ಪಾಯಸಂ
- ಗೋಡಂಬಿ- (ಕನ್ನಡ) – ಭಾಲ್ಲಾತಕಃ
- ಸಿಹಿ ಗಳಿಗೆ- (ಕನ್ನಡ) – ಮಧುರ
- ಬೆಲ್ಲದ ಪಾನಕ- (ಕನ್ನಡ) – ಗುಡ ಮಿಶ್ರ ಜಲಂ
- ಪಾನಕ- (ಕನ್ನಡ) – ಶರ್ಕರಾಮಿಶ್ರ ಜಲಂ
- ಅನಾನಸ್- (ಕನ್ನಡ) – ಅನಾನಸಂ
- ಮೊಸರು ವಡೆ- (ಕನ್ನಡ) – ದದಿ ಮಾಷಾಪೂಪ
- ವೀಳೇದೆಲೆ- (ಕನ್ನಡ) – ನಾಗವಲ್ಲೀ
- ಅಡಿಕೆ- (ಕನ್ನಡ) – ಕ್ರಮುಖ
- ಕುಂಬಳಕಾಯಿ- (ಕನ್ನಡ) – ಕೂಷ್ಮಾಂಡ
- ಹಾಲು- (ಕನ್ನಡ) – ಕ್ಷೀರ
- ಎಳಗಾಯಿ- (ಕನ್ನಡ) – ಶಲಾಟು
- ಕಡುಬು- (ಕನ್ನಡ) – ಮೋದಕ
- ಅತ್ತಿಹಣ್ಣು- (ಕನ್ನಡ) – ಔದುಂಬರ ಫಲ
- ಚಟ್ನಿ- (ಕನ್ನಡ) – ತಮನಂ, ನಿಷ್ಠಾನಂ
- ಅವಲಕ್ಕಿ- (ಕನ್ನಡ) – ಪೃಥುಕಃ, ಚಿಪಿಟಕಃ
- ಗುಗ್ಗುರಿ- (ಕನ್ನಡ) – ಅಭ್ಯೂಷಃ
- ಎಲಚಿ- (ಕನ್ನಡ) – ಬದರಿ
- ಜಾಮೂನ್/ಜಿಲೇಬಿ- (ಕನ್ನಡ) – ವಿಜಿಲಂ
- ಜಾಂಗೀರ್/ಪಲಾವ್- (ಕನ್ನಡ) – ಪ್ರಯಸ್ತಂ
- ಬೆಣ್ಣೆ- (ಕನ್ನಡ) – ನವನೀತಂ
- ನೆಲ್ಲಿಕಾಯಿ- (ಕನ್ನಡ) – ಆಮಲಕ
- ಹುರಿಗಡಲೆ- (ಕನ್ನಡ) – ಬಾಲ ಭೋಜ್ಯ(ಪಪ್ಪುಲು)
- ಪೊಂಗಲ್- (ಕನ್ನಡ) – ಮುದ್ಗೋದನಂ
- ಮೊಸರನ್ನ– (ಕನ್ನಡ) – ದಧ್ಯನ್ನಂ