ದೀಪದ ಮಹತ್ವ, ಆಚರಣೆ ಮತ್ತು ಪ್ರಯೋಜನಗಳು. The Authentic significance, ritual and Top 10 benefits of lamp
Index of Important Points
ದೀಪವು ದೇವರ ರೂಪಕ್ಕೆ ಸಮಾನ, ಈ ಸಂಚಿಕೆಯಲ್ಲಿ ದೀಪದ ಮಹತ್ವ, ಆಚರಣೆ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯೋಣ.
ಓಂ ಅಸತೋಮ ಸದ್ಗಮಯ,
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿ
🌷ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ. ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ. ಇಂಥಹ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.
🌷ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ. ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ ಪ್ರಾಮುಖ್ಯತೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಬೇಕಾದರೆ ಆ ಕಾರ್ಯಕ್ರಮ, ಪೂಜೆ ನಡೆಯುವುದು ದೀಪ ಬೆಳಗುವ ಮೂಲಕವೇ. ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ, ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ
🌟 ದೀಪವನ್ನು ದೇವರ ರೂಪ ಎಂದೇ ಪೂಜಿಸಲಾಗುತ್ತದೆ. ದೀಪಗಳನ್ನು ಹೇಗೆ ಹಚ್ಚಬೇಕು, ಬತ್ತಿ ಹೇಗಿರಬೇಕು, ಎಣ್ಣೆ ಯಾವುದು ಎಂಬುದು ಕೂಡ ಬಹಳ ಮುಖ್ಯ.
🌟 ಮೊದಲ ದೀಪವನ್ನು ದೇವರಿಗೆ ಹಚ್ಚಿಡಬೇಕು. ಮಣ್ಣಿನ ಹಣತೆಯಿಂದ ಹಿಡಿದು ಬೆಳ್ಳಿಯ ದೀಪದವರೆಗೆ ಒಂದೊಂದು ಲೋಹದ ದೀಪಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಮೇಣದ ಬತ್ತಿ, ವಿದ್ಯುತ್ ದೀಪಗಳಿಗೆ ಸಾಂಪ್ರದಾಯಿಕ ದೀಪಗಳಿಗಿರುವ ಮಹತ್ವವಿಲ್ಲ. ದೀಪದಲ್ಲಿ ಎರಡು ಬತ್ತಿಗಳಿರಲೇ ಬೇಕು. ಹೂಬತ್ತಿಯನ್ನು ಎರಡು ಇಟ್ಟಿರಬೇಕು.
ಶಿವ ಪುರಾಣದ ಪ್ರಕಾರ ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹಾಗೂ ಆರೋಗ್ಯ ವೃದ್ಧಿಸುತ್ತದೆ. ತುಪ್ಪದ ದೀಪ ಹಚ್ಚುವುದರಿಂದಲು ಹಲವು ಆರೋಗ್ಯಕರ ಪ್ರಯೋಜನಗಳಿವೆ.
🌟 ದೇವರ ಮನೆಯಲ್ಲಿ ಮಾತ್ರವಲ್ಲದೆ ಮನೆಯ ದ್ವಾರಗಳಲ್ಲಿ, ದೇವಾಲಯ, ಕಂಭಗಳು, ದೇಗುಲದ ಶಿಖರ, ಮನೆಯ ಅಂಗಳ, ತುಳಸೀ ವೃಂದಾವನ, ಪುರಾಣ ಪ್ರವಚನ ನಡೆಯುವ ಸ್ಥಳಗಳು, ಹಸುವಿನ ಕೊಟ್ಟಿಗೆ, ಅಶ್ವತ್ಥವನ, ನೆಲ್ಲಿವನ, ಮಠಗಳು ಹೀಗೆ ಹಲವೆಡೆ ದೀಪಗಳನ್ನು ಹಚ್ಚಿಡಬಹುದು.
🌟 ದೀಪ ಎಂದರೆ ಬೆಳಕು, ಜ್ಞಾನ. ಬೆಳಕಿಲ್ಲದೆ ನಾವು ಜಗತ್ತಿನಲ್ಲಿ ಏನೂ ಕಾಣಲಾರೆವು. ‘ತಮಸೋಮ ಜ್ಯೋತಿರ್ಗಮಯ’ ಎಂಬಂತೆ ನಾವೆಲ್ಲರೂ ಬೆಳಕಿನ ಪಯಣಿಗರು. ನಾವು ಭಾರತೀಯರು ಕತ್ತಲೆ ಅಜ್ಞಾನದ ಸಂಕೇತವಾದರೆ ಬೆಳಕು ಜ್ಞಾನ ವಿಶೇಷದ ಸಂಕೇತವೆಂದು ಅರಿತವರು.
ಬರೀ ಕತ್ತಲೆಯ ಸಂಗ ಕಳೆದುಕೊಂಡರೆ ಸಾಕೆಂದು ಹೇಳಿದವರಲ್ಲ, ನಾವು ಕತ್ತಲೆಯನ್ನು ಬೆಳಕಿಗೆ ಪರಿಚಯಿಸಿ ಕತ್ತಲೆಯನ್ನು ಬೆಳಕಾಗಿಸುವ ಪ್ರಯತ್ನ ಮಾಡಿದವರು.
🌟 ಪರಮಾತ್ಮನು ಈ ಜಗತ್ತಿನ ಸೂರ್ಯ, ಚಂದ್ರ, ನಕ್ಷತ್ರ, ಅಗ್ನಿ ಮುಂತಾದ ಸಮಸ್ತ ತೇಜಸ್ಸಿಗೂ ಮೂಲಭೂತನಾಗಿ, ಆಶ್ರಯನಾಗಿ, ಪ್ರೇರಕನಾಗಿ, ಸ್ವಯಂ ಅನಂತ ತೇಜೋಮಯನಾದ ದೀಪನಾಗಿದ್ದಾನೆ. ಹಾಗಾಗಿ ನಮಗೆಲ್ಲವನ್ನೂ ಕೊಟ್ಟ ಪರಮಾತ್ಮನನ್ನು ದೀಪಗಳಿಂದ ಪೂಜಿಸಿ ಕೃತಾರ್ಥರಾಗೋಣ.
ದೀಪ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ? | What are the benefits of lighting a Lamp?
ದೀಪಂಜ್ಯೋತಿ ಪರಬ್ರಹ್ಮ
ದೀಪ ಹಚ್ಚುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಾಗುತ್ತಾ ?
ಹೌದು, ದೀಪಕ್ಕೊಂದು ಅಜ್ಞಾತ ಅಗಾಧ ಶಕ್ತಿಯಿದೆ. ಕತ್ತಲೆಯನ್ನು ಬೆಳಗುವ ದೀಪ ಮನಸ್ಸಿನ ಎಲ್ಲ ಕಲ್ಮಶಗಳನ್ನೂ ದೂರ ಸರಿಸಿ ಶಾಂತಿ ಮೂಡಿಸುವ ಶಕ್ತಿ ದೀಪಕ್ಕಿದೆ.
ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ..
ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಕೆ.
ಇಂಥ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.
ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ.
ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ.
ವಿದ್ಯಾಭ್ಯಾ, ಉದ್ಯೋಗ, ವೈವಾಹಿಕ ಜೀವನ ಹೀಗೆ ಜೀವನದ ವಿವಿಧ ಮಜಲುಗಳಲ್ಲಿ ಸುಖ, ಸಮೃದ್ಧಿ, ನೆಮ್ಮದಿ ದೊರೆಯಬೇಕೆಂದರೆ ಪ್ರಾರ್ಥನೆಯದೂ ಪಾಲಿದೆ.
ಮಂದಿರಗಳಲ್ಲಿ, ಪೂಜ್ಯ ವೃಕ್ಷಗಳ ಎದುರು ಹೀಗೆ ಮನೋ ಇಚ್ಛೆಗಳನ್ನು ಪೂರೈಸಲು ಭಕ್ತರು ದೀಪ ಹಚ್ಚುವುದು ಸಾಮಾನ್ಯ.
ಮುಸ್ಸಂಜೆಯ ಹೊತ್ತು ದೇವರ ಬಳಿ ದೀಪ ಹಚ್ಚುವುದರಿಂದ ದೊರೆಯುವ ಲಾಭವನ್ನು ಇಲ್ಲಿ ವಿವರಿಸಲಾಗಿದೆ.
- ಸೋಮವಾರ ದಿನ ಶಿವನ ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಯುವತಿಯರಿಗೆ ತಮ್ಮ ಕನಸಿನ ವರ ದೊರಕುತ್ತಾನೆ. ಪ್ರೀತಿಸಿ ಮದುವೆಯಾಗ ಬಯಸುವ ಯುವತಿಯರಂತೂ ಹೀಗೆ ಮಾಡಿದರೆ ಉತ್ತಮ ಪುರುಷ ಕೈಹಿಡಿಯುತ್ತಾನೆ.
- ಮಂಗಳವಾರ ವಿಷ್ಣು ಮಂದಿರದಲ್ಲಿ ಅಥವಾ ಬಾಳೆಹಣ್ಣಿನ ಗಿಡದ ಬಳಿ ತುಪ್ಪದ ದೀಪ ಹಚ್ಚಿದರೆ ಆರೋಗ್ಯ ವೃದ್ಧಿಯಾಗುತ್ತದೆ.
- ಬುಧವಾರ ವಿಷ್ಣು ದೇವರು ಅಥವಾ ಗಣೇಶನಿಗೆ ತುಪ್ಪದ ದೀಪ ಹಚ್ಚಿದರೆ ಬಾಧೆಗಳು ದೂರವಾಗುತ್ತದೆ. ಅಲ್ಲದೆ, ಅಧಿಕ ಖರ್ಚಿಗೆ ಕಡಿವಾಣ ಬೀಳುತ್ತದೆ.
- ಗುರುವಾರ ದೇವಸ್ಥಾನ ಅಥವಾ ಬಾಳೆಹಣ್ಣಿನ ಗಿಡದ ಬಳಿ ದೀಪ ಉರಿಸಿದರೆ ಎಲ್ಲಾ ಬಾಧೆಗಳೂ ದೂರವಾಗಿ ಸಕಲ ಮನೋಕಾಂಕ್ಷೆಗಳು ಈಡೇರುತ್ತದೆ. ವಿಷ್ಣುವನ್ನು ಪ್ರಸನ್ನರಾಗಿಸಲು ತುಪ್ಪದ ದೀಪ ಹಚ್ಚಿ.
- ಶುಕ್ರವಾರದ ದಿನ ದುರ್ಗಾ ಮಾತೆಯ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿದರೆ ಸಕಲ ಮನೋಭಿಲಾಷೆಗಳೂ ದೂರವಾಗಿ ಸಕಲ ಸಂಪತ್ತು ಹಾಗೂ ಸೌಭಾಗ್ಯ ಲಭಿಸುತ್ತದೆ.
- ಶನಿವಾರದಂದು ಹನುಮಂತನ ಗುಡಿಗೆ ಹೋಗಿ ಎಣ್ಣೆಯ ದೀಪ ಉರಿಸಿದರೆ ಶನಿಯ ವಕ್ರದೃಷ್ಟಿಯಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಹಾಗೂ ಓದಿನಲ್ಲಿ ಏಕಾಗ್ರತೆ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಇದರಿಂದ ಏಕಾಗ್ರತೆ ದಕ್ಕಿ ವಿದ್ಯಾಭ್ಯಾಸ ಸುಗಮವಾಗಿ ಸಾಗುತ್ತದೆ.
- ಶಿವ ಪುರಾಣದ ಪ್ರಕಾರ ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹಾಗೂ ಆರೋಗ್ಯ ವೃದ್ಧಿಸುತ್ತದೆ. ತುಪ್ಪದ ದೀಪ ಹಚ್ಚುವುದರಿಂದಲು ಹಲವು ಆರೋಗ್ಯಕರ ಪ್ರಯೋಜನಗಳಿವೆ.
ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ ಬೇಸರ ಬೇಡ. ಮನೆಯಲ್ಲೇ ದಿನವೂ ದೇವರ ಮುಂದೆ ದೀಪ ಹಚ್ಚಿ. ಕೊಂಚ ಹೊತ್ತು ದೀಪದ ಬೆಳಕಿಗಾಗಿ ಮೀಸಲಿಡಿ.
ಕಾರ್ತಿಕ ಮಾಸವು ಶೈವ ಮತ್ತು ವೈಷ್ಣವ ಎರಡು ಮತದ ಅವಲಂಭಿಗಳಿಗು ಪವಿತ್ರ ಮಾಸ.
ಈ ಮಾಸದಲ್ಲಿ ಮಾಡಿದ ದಾನ , ಪೂಜೆ , ಜಪ , ಹವನ, ಶಾಂತಿಗಳಿಗೆ ಅದರದ್ದೆ ಆದ ಮಹತ್ವ ಇರುವುದು.
ಅನುಷ್ಠಾನಗಳಿಗೆ ಹೇಗೆ ಗ್ರಹಣದ ಕಾಲ ಸರ್ವೋಪರಿಯೊ ಹಾಗೆಯೆ ಕಾರ್ತಿಕವು 12 ಮಾಸಗಳಲ್ಲಿ ಹೊಲಿಸಿದಾಗ ಅನುಷ್ಠಾನಗಳಿಗೆ ಉತ್ತಮವಾಗಿರುವ ಕಾಲ.
ಭಗವಂತನ ಪ್ರೀತ್ಯರ್ಥಕ್ಕಾಗಿ, ನಮ್ಮ ಪಾಪಗಳ ಕ್ಷಯಕ್ಕಾಗಿ, ನಿತ್ಯ ದೇವರ ಮುಂದೆ ಸಾಧ್ಯವಿದ್ದಷ್ಟು ಶುದ್ದ ಹಸುವಿನ ತುಪ್ಪದ ದೀಪವನ್ನು ಪ್ರಜ್ವಲಿಸಿ ವಿಷ್ಣು ಸಹಸ್ರನಾಮ ಪಠಿಸಿ ಇದರಿಂದ ನಿಮಗೆ ಸರ್ವ ಪ್ರಕಾರದಿಂದಲೂ ಶ್ರೇಯೋಭಿವೃದ್ಧಿ ಒದಗಿ, ಕಷ್ಟಗಳು ಕರಗಿ ಹೋಗುವವು.
ಪ್ರತಿದಿನ ಸಾಯಂಕಾಲ ಯಾರು ವಿಷ್ಣುವಿನ ಸಾನಿಧ್ಯದಲ್ಲಿ 5 ತುಪ್ಪದ ದೀಪವನ್ನು ಸಾಯಂಕಾಲ ಪ್ರಜ್ವಲಿಸುವಿರೊ ಅವರಿಗೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವವು.
ಆರೋಗ್ಯದಲ್ಲಿ ತೊಂದರೆಗಳಿದ್ದರೆ ಶಿವಾಲಯದಲ್ಲಿ 9 ಎಳ್ಳೆಣ್ಣೆ ದೀಪವನ್ನು ಪ್ರಜ್ವಲಿಸಿ.
ನರದೌರ್ಬಲ್ಯ / ರಕ್ತದೋಷ , ಹೃದಯ ರೋಗದಿಂದ ಬೇಗ ಗುಣಮುಖರಾಗಲು ಗೋದಿಯ ಹಿಟ್ಟಿನ 21 ದೀಪ ತಯಾರಿಸಿ 3 ಬತ್ತಿಗಳನ್ನು ಒಂದು ದೀಪಕ್ಕೆ ಹಾಕಿ ಶುದ್ದ ಹಸುವಿನ ತುಪ್ಪದಿಂದ ನಾಳೆ ಮತ್ತು ಅಮಾವಾಸ್ಯೆ ದೀನ ದೀಪವನ್ನು ಸಂಕಲ್ಪಿ ಬೆಳಗಿಸಿದರೆ ಶೀಘ್ರವಾಗಿ ರೋಗ ಗುಣವಾಗುವುದು.
ಜಾಡ್ಯತೆ / ಆಲಶ್ಯ ಮತ್ತು ಮಂಕುತನದಿಂದ ಹೋರಬರಲು ಹಿತ್ತಾಳೆಯ ಒಂದು ದೀಪದಲ್ಲಿ 9 ಬತ್ತಿಯನ್ನು ಹಾಕಿ ನಾಳೆಯ ಸಾಯಂಕಾಲ ಪ್ರಜ್ವಲಿಸಿದ ನಂತರ 3 ದಿನಗಳವರೆಗೆ ಈ ಅಖಂಡ ದೀಪವು ಆರದಂತೆ ನೋಡಿ ಶುಭವಾಗುವುದು.
ಉದ್ಯೋಗಕ್ಕಾಗಿ ಅಥವಾ ಉದ್ಯೊಗದ ಬದಲಾವಣೆಗೆ 33 ಮಣ್ಣಿನ ಹಣತೆಯ ದೀಪವನ್ನು ಶಿವನ ಮುಂದೆ ಪ್ರಜ್ವಲಿಸಿ ಶಿವಸಹಸ್ರನಾಮ ಹೇಳಿ ಇದನ್ನು ನಾಳೆಯಿಂದ ಪ್ರಾರಂಭಿಸಿ 21 ದಿನ ಮಾಡಿ .
ಮಕ್ಕಳ ಶ್ರೇಯೋಭಿವೃದ್ಧಿಗೆ ನಾಳೆ ಅಥವಾ ಅಮಾವಾಸ್ಯೆಯ ದೀನ ಶಕ್ತಿ ದೇವಾಲಯದಲ್ಲಿ ನಂದಾದೀಪ ಸೇವೆಯನ್ನು ಮಾಡಿಸಿ
ಆಧ್ಯಾತ್ಮಿಕ ಉನ್ನತಿಗಾಗಿ ನಾಳೆಯಿಂದ ಪ್ರಾರಂಭಿಸಿ 1 ಮಾಸದ ವರೆಗೆ ನಿತ್ಯವು 9 ಮಣ್ಣಿನ ಹಣತೆಯ ದೀಪವನ್ನು ನಿಮ್ಮ ದೇವರ ಪೂಜಾ ಕೋಣೆಯಲ್ಲಿ ಪ್ರಜ್ವಲಿಸಿ.
ಕಾಮಾಕ್ಷಿ ದೀಪದ ಮಹತ್ವ
- 🌻ಈ ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪವೆ೦ದು ಸಹ ಕರೆಯುತ್ತಾರೆ. ಈ ದೀಪದ ಬೆಳಕಿನಲ್ಲಿ ಕಾಮಾಕ್ಷಿ ದೇವಿಯೂ ನೆಲೆಸಿರುವಳು. ಕಾಮಾಕ್ಷಿ ದೇವಿಯು ಸರ್ವ ದೇವತೆಗಳಿಗೆ ಶಕ್ತಿ ಕೊಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಕಾಮಾಕ್ಷಿ ದೇವಸ್ಥಾನವನ್ನು ಬೇರೆ ದೇವಸ್ಥಾನಗಳಿಗಿಂತ ಬೆಳಗಿನ ಜಾವ ಬೇಗನೆ ತೆರೆಯುತ್ತಾರೆ. ಹಾಗೆಯೇ ರಾತ್ರಿಯ ಸಮಯದಲ್ಲಿ ಎಲ್ಲ ದೇವಸ್ಥಾನಗಳ ಬಾಗಿಲು ಮುಚ್ಚಿದ ನಂತರವೇ ಈ ಕಾಮಾಕ್ಷಿ ದೇವಿಯ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ದೇವಿಯ ಅವತಾರವಾದ ಈ ಕಾಮಾಕ್ಷಿ ದೀಪ ಬೆಳಗುವ ಮನೆ ಅಖಂಡ ಐಶ್ವರ್ಯದಿಂದ ಕೂಡಿರುತ್ತದೆ.
- 🌻ನಮ್ಮ ಹಿಂದೂ ಸಂಪ್ರದಾಯದಲ್ಲಿ ಚಿನ್ನದ ಆಭರಣಗಳನ್ನು ವಂಶ ಪರಂಪರೆಯಾಗಿ ಹೇಗೆ ಮುಂದಿನ ಪೀಳಿಗೆ ನೀಡುತ್ತಾರೋ. ಹಾಗೆಯೇ ಇದನ್ನೂ ಸಹ ಜಾಗ್ರತೆಯಿಂದ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಬಳುವಳಿಯಾಗಿ ಕೊಡುತ್ತಾರೆ. ಮನೆಯಲ್ಲಿ ವ್ರತಗಳು, ಗೃಹಪ್ರವೇಶ ಪೂಜೆಯನ್ನು ಮಾಡುವಾಗ ಅಖಂಡ ದೀಪವನ್ನು ಹಚ್ಚಬೇಕು ಎನ್ನುವವರು ಕಾಮಾಕ್ಷಿ ದೀಪವನ್ನು ಹೆಚ್ಚಾಗಿ ಬಳಸುತ್ತಾರೆ. ಹೀಗೆ ಪುರಾಣಗಳಲ್ಲಿ ವ್ರತಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಕಾಮಾಕ್ಷಿ ದೀಪಗಳನ್ನು ದೀಪಾರಾಧನೆಗೆ ಬಳಸಿದರೆ ಒಳ್ಳೆಯದು. ದೀಪಾರಾಧನೆ ಮಾಡುವಾಗ ದೀಪಕ್ಕೆ ಕುಂಕುಮವನ್ನು ಇಟ್ಟು, ಹೂವನ್ನು ಅರ್ಪಿಸಿ, ದೀಪವನ್ನು ಬೆಳಗಿಸಿ ನಂತರ ಮೊದಲು ದೀಪಕ್ಕೆ ಪೂಜೆ ಮಾಡಬೇಕು ನಂತರ ದೇವರ ಪೂಜೆ ಮಾಡುವುದು ನಮ್ಮ ಸಂಪ್ರದಾಯದ ರೂಢಿಯಲ್ಲಿದೆ .
- 🌻ಹಾಗೆಯೇ ಕಾಮಾಕ್ಷಿ ದೀಪವನ್ನು ಬಳಸುವಾಗ ಆ ದೀಪಕ್ಕೆ ಕುಂಕುಮ ಇಟ್ಟ ನಂತರ ಅದೇ ಕೈಯಿಂದ ದೇವರ ರೂಪಕ್ಕೂ ಕುಂಕುಮ ಇಟ್ಟು, ಸುತ್ತಲೂ ಹೂವಿನಿಂದ ಅಲಂಕಾರ ಮಾಡಿ ಆ ದೀಪವನ್ನು ನೆಲಕ್ಕೆ ತಾಕದಂತೆ ಒಂದು ತಾಮ್ರದ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಇರಿಸಬೇಕು. ಈ ದೀಪವನ್ನು ಎಳ್ಳೆಣ್ಣೆ ಅಥವಾ ಹಸುವಿನ ತಾಜಾ ತುಪ್ಪದಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು. ಕಾಮಾಕ್ಷಿ ದೀಪದ ಬತ್ತಿ ಹೇಗೆ ನಿಧಾನವಾಗಿ ಸುಡುತ್ತದೆಯೋ ಹಾಗೆಯೇ ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಸಹ ನಿಧಾನವಾಗಿ ತೊಲಗಿ ಆಚೆ ಹೋಗುತ್ತದೆ. ಯಾವಾಗಲೂ ದೀಪಾರಾಧನೆ ಮಾಡುವಾಗ ಎರಡು ಬತ್ತಿಗಳು ಸಾಮಾನ್ಯವಾಗಿ ಇರುವಂತೆ ನೋಡಿಕೊಳ್ಳಬೇಕು. ಕಾಮಾಕ್ಷಿ ದೀಪವನ್ನು ಯಾವಾಗಲೂ ಉತ್ತರ ಮತ್ತು ಪೂರ್ವ ದಿಕ್ಕನ್ನು ನೋಡುವಂತೆ ಇಡಬೇಕು. ದಕ್ಷಿಣ ದಿಕ್ಕಿನಲ್ಲಿ ಖಚಿತವಾಗಿ ದೀಪಾರಾಧನೆ ಮಾಡಬಾರದು.
- 🌻ಈ ದೀಪವನ್ನು ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ತೊಳೆಯಬಾರದು. ಪ್ರತಿದಿನ ಬೆಳಗಿನ ಜಾವ ಮತ್ತು ಸಾಯಂಕಾಲದ ಸಮಯದಲ್ಲಿ ಕಾಮಾಕ್ಷಿಯ ದೀಪದಿಂದ ದೀಪಾರಾಧನೆಯನ್ನು ಮನೆಯಲ್ಲಿ ಮಾಡಿದರೆ ಸಕಲ ರೀತಿಯಲ್ಲಿಯೂ ಒಳ್ಳೆಯದಾಗುವುದು. “ದೇವರ ದೀಪ” ಹಚ್ಚುವಾಗ ಯಾವಾಗಲು ಕುಳಿತು ಹಚ್ಚಬೇಕು. “ಮನೆಯಲ್ಲಿ ” ಬೆಣ್ಣೆ” ಕಾಯಿಸಿದ ತುಪ್ಪದಿಂದ ದೇವರಿಗೆ ದೀಪ ಹಚ್ಚಿದರೆ , ಆ ಮನೆಯಲ್ಲಿ ಅಭಿಷ್ಟ ಸಿದ್ಧಿಗಳು ಲಭಿಸುತ್ತವೆ. ಲಕ್ಷ್ಮೀಕಟಾಕ್ಷ ಎಂದೆಂದೂ ಇರುತ್ತದೆ
ತುಪ್ಪದ ದೀಪ ಹಚ್ಚುವುದರಿಂದ ಆಗುವ ಪ್ರಯೋಜನಗಳು
- 🌷 ತುಪ್ಪದ ದೀಪಗಳನ್ನು ಸುಬ್ರಹ್ಮಣ್ಯ ಸ್ವಾಮಿ, ಸರ್ಪದೇವತೆಗಳ ಮುಂದೆ ಹಚ್ಚಿದರೆ , ಆ ಕುಟುಂಬದವರಿಗೆ ಎಂದೂ ಸರ್ಪದೋಷಗಳು ಬರುವುದುಲ್ಲ.
- 🌷 ಮಹಾಗಣಪತಿಗೆ ೨೧ ದಿನ ತುಪ್ಪದ ದೀಪ ಹಚ್ಚಿದರೆ ನೆನೆದ ಕಾರ್ಯಗಳು ನೆರವೇರುತ್ತವೆ.
- 🌷 ದೇವಿ ದೇವಾಲಯಗಳಲ್ಲಿ ಮಂಗಳವಾರ ಮತ್ತು ಶುಕ್ರವಾರ “ತುಪ್ಪದ ದೀಪ” ಹಚ್ಚಿ ಪ್ರಾರ್ಥಿಸಿದರೆ “ಕುಜದೋಷ” ನಿವಾರಣೆಯಾಗುತ್ತದೆ.
- 🌷 ಶ್ರೀಚಕ್ರ ದೇವತೆಗಳಿಗೆ, ಗಾಯತ್ರೀದೇವಿಗೆ, ಕಾಮಾಕ್ಷಿ ದೇವಿಗೆ, ಮೀನಾಕ್ಷಿ ದೇವಿ, ತ್ರಿಪುರಸುಂದರಿ ದೇವಿ. ಇತ್ಯಾದಿ ದೇವತೆಗಳಿಗೆ ತುಪ್ಪದ ದೀಪ ಹಚ್ಚಿದರೆ ನೆನೆದ ಕಾರ್ಯಗಳು ಕ್ಷಿಪ್ರವಾಗಿ ನೆರವೇರುತ್ತವೆ.
- 🌷 ಶ್ರೀ ರಾಮನವಮಿ ದಿವಸ “ಶ್ರೀ ರಾಮಚಂದ್ರ” ದೇವರಿಗೆ ತುಪ್ಪದ ದೀಪ ಹಚ್ಚಿ ಯಾರು ಪೂಜಿಸುತ್ತಾರೋ , ಅವರ ಮನೆಯಲ್ಲಿ ಅಣ್ಣ ತಮ್ಮಂದಿರ ಕಲಹಗಳು ಇರುವುದಿಲ್ಲ.
- 🌷 ಶ್ರೀ ಕೃಷ್ಣಾಷ್ಟಮಿ” ದಿವಸ “ಶ್ರೀ ಕೃಷ್ಣನಿಗೆ ತುಪ್ಪದ ದೀಪ ಹಚ್ಚಿ , ಶ್ರೀ ಕೃಷ್ಣ ಸಹಸ್ರನಾಮ ಹೇಳುತ್ತಾರೋ, ಅವರಿಗೆ ಪುತ್ರ ಸಂತಾನವಾಗುತ್ತದೆ. ಮಕ್ಕಳಿರುವವರು ಓದಿದರೆ ಮಕ್ಕಳು ಆರೋಗ್ಯವಾಗಿದ್ದು ಸನ್ಮಾರ್ಗದಲ್ಲಿ ನಡೆಯುತ್ತಾರೆ.
- 🌷 ಯಾರಿಗೆ ಮಕ್ಕಳು ಆಗಿ ಹೋಗುತ್ತಿರುತ್ತವೆಯೋ ಮತ್ತು ಮಕ್ಕಳು ಬದುಕುವುದಿಲ್ಲವೋ, ಅಂಥವರು ಸಂತಾನ ಗೋಪಾಲಕೃಷ್ಣ ಸ್ವಾಮಿಗೆ, ತುಪ್ಪದ ದೀಪವನ್ನು ಹಚ್ಚಿ, ಸಂತಾನಗೋಪಾಲಕೃಷ್ಣ ಸ್ವಾಮಿಯ ಮೂಲಮಂತ್ರವನ್ನು ಭಕ್ತಿಯಿಂದ ಜಪ ಮಾಡಿದರೆ, ಅವರಿಗೆ “ಒಂದು ವರ್ಷದ ಒಳಗೆ ಪುತ್ರಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಮಗುವು ಆಯುಷ್ಯವಂತನಾಗಿ ಇರುತ್ತಾರೆ.
- 🌷 ಸ್ತ್ರೀ ಸಂತಾನ ಬೇಕೆಂದು ಅಪೇಕ್ಷೆ ಪಡುವವರು, ಶ್ರೀ ದುರ್ಗಾ ಸಪ್ತಶತಿ ಪಾರಾಯಣ ಮಾಡುವಾಗ “ತುಪ್ಪದದೀಪ” ಹಚ್ಚಿ ಪ್ರಾರ್ಥನೆಯನ್ನು ಮಾಡುತ್ತಾರೋ ಅವರಿಗೆ, ಸಂವತ್ಸರದೊಳಗೆ ದೈವಭಕ್ತಳಾದ ಸ್ತ್ರೀ ಸಂತಾನವಾಗುತ್ತದೆ.
- 🌷 ಯಾರಿಗೆ ಸಂತಾನಭಾಗ್ಯ ಇರುವುದಿಲ್ಲವೋ , ಅಂಥವರು ಶ್ರೀ ಷಷ್ಠೀದೇವತೆ ಪೂಜೆ ಮಾಡಿ , ತುಪ್ಪದ ದೀಪ ಹಚ್ಚಿ, ಷೋಡಶೋಪಚಾರ ಪೂಜೆ ಮಾಡಿ, ಭಕ್ತಿಯಿಂದ ಪ್ರಸಾದ ಸ್ವೀಕರಿಸಿದರೆ, ದೈವಸಂಕಲ್ಪದಿಂದ ಸಂತಾನಭಾಗ್ಯವಾಗುತ್ತದೆ.
- 🌷 ಇಷ್ಟದೇವತೆ ಮತ್ತು ಕುಲದೇವತೆಯ ಮುಂದೆ ಯಾರು ತುಪ್ಪದ ದೀಪ ಹಚ್ಚಿ ಪೂಜಿಸುತ್ತಾರೋ, ಅವರ ಮನೆಯು ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ.
- 🌷 ನವರಾತ್ರಿ ಸಮಯದಲ್ಲಿ ದೇವಿಗೆ ತುಪ್ಪದ ದೀಪ ಹಚ್ಚಿ ಯಾರು ಪೂಜಿಸುತ್ತಾರೋ, ಅವರಿಗಿರುವ ಸಕಲ ಶತೃಕಾಟವು ನಿವಾರಣೆಯಾಗುತ್ತದೆ.. ಸಕಲ ದುಃಖಗಳಿಂದ ಬಿಡುಗಡೆ ಹೊಂದುತ್ತಾರೆ.
- 🌷 ಆಶ್ವೀಜ ಮಾಸ , ಕೃಷ್ಣಪಕ್ಷ, ಅಮವಾಸ್ಯೆಯ ದಿವಸ(ದೀಪಾವಳಿ ಅಮಾವಾಸ್ಯೆ) ಯಲ್ಲಿ ಯಾರು ಸಾಯಂಕಾಲ ಗೋಧೂಳಿ ಲಗ್ನದಲ್ಲಿ ಶ್ರೀಮಹಾಲಕ್ಷ್ಮೀ ದೇವಿಗೆ ತುಪ್ಪದ ದೀಪ ಹಚ್ಚಿ , ಶಾಸ್ತ್ರೋಕ್ತವಾಗಿ ಪೂಜಿಸಿ, ಸಿಹಿ ತಿಂಡಿ ನೈವೇದ್ಯ ಮಾಡಿ, ಮಕ್ಕಳಿಗೆ ಹಂಚುತ್ತಾರೋ, ಅಂಥವರಿಗೆ ಮತ್ತು ಆ ಮನೆಯವರಿಗೆ, ವರ್ಷಪೂರ್ತಿ ಹಣಕಾಸಿನ ಸಮಸ್ಯೆ ಬರದೆ ನೆಮ್ಮದಿಯಾಗಿ ಜೀವನ ಮಾಡುತ್ತಾರೆ.
🍀ತುಪ್ಪದ ದೀಪ ಹಚ್ಚುವುದರ ಹಿಂದೆವೆ ಈ ರಹಸ್ಯಗಳು 🍀
🌻ಬಹು ಪ್ರಾಚೀನಕಾಲದಿಂದಲೂ ನಮ್ಮಲ್ಲಿ ಆಚರಣೆಯಲ್ಲಿರುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಇಂದಿನ ಪಾಶ್ಚಿಮಾತ್ಯವಿಜ್ಞಾನ, ಇವೆಲ್ಲದಕ್ಕೆ ಅರ್ಥವಿಲ್ಲದೆ ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಅನಾಗರಿಕತೆಯ ಲಕ್ಷಣ ಎಂದು ಹೀಯಾಳಿಸಿ ಅವುಗಳನ್ನು ತೊರೆಯಲು ಉಪದೇಶಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ಆಧುನಿಕ ವಿಚಾರವಾದಿಗಳು ಈ ಧಾರ್ಮಿಕ ಪರಂಪರೆಗಳ ಹಿಂದೆ ಇರುವ ಸತ್ಯಾಸತ್ಯತೆಗಳನ್ನು ತಿಳಿಯಲು ಚಿಂತನೆ ನಡೆಸಿ ಇವುಗಳು ಕೇವಲ ಅರ್ಥಹೀನ ಅನಾಗರಿಕ, ಮೂಢನಂಬಿಕೆಗಳಾಗಿರದೆ ನಮ್ಮ ನಾಗರಿಕ ಸಂಸ್ಕøತಿಯ ಸಂಕೇತವಾಗಿವೆ.
🌻ಹಿಂದೂ ಧರ್ಮ ಹಾಗೂ ಧರ್ಮ ಗ್ರಂಥಗಳಲ್ಲಿ ತುಪ್ಪದ ದೀಪಕ್ಕೆ ಸಾಕಷ್ಟು ಮಹತ್ವವಿದೆ. ಪ್ರತಿ ಹಿಂದೂ ಕುಟುಂಬದಲ್ಲಿ ಬೆಳಿಗ್ಗೆ, ಮತ್ತು ಸಂಜೆ ಮನೆಯಲ್ಲಿ ಮಹಿಳೆಯರು ದೇವರ ಮುಂದೆ ದೀಪವನ್ನು ಹಚ್ಚುವ ಪದ್ಧತಿ ಇದೆ. ದೀಪ ಹಚ್ಚುವುದರಿಂದ ದೇವತೆಗಳು ಸಂತೋಷವಾಗುತ್ತಾರೆ ಎಂದು ಹೇಳಲಾಗಿದೆ. ಆದರೆ ಶಿವ ಪುರಾಣದ ಪ್ರಕಾರ, ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹಾಗೂ ಆರೋಗ್ಯ ವೃದ್ದಿಸುತ್ತದೆ. ತುಪ್ಪದ ದೀಪ ಹಚ್ಚುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ, ಆದ್ದರಿಂದ ತುಪ್ಪದ ದೀಪಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ.
🌷ಕರ್ಪೂರಗೌರಂ ಕರುಣಾವತಾರಂ
🌻ತುಪ್ಪದ ದೀಪದಿಂದ ಆರತಿಯನ್ನು ಬೆಳಗಿದ ನಂತರ ಕರ್ಪೂದ ಆರತಿ ಬೆಳಗಬೇಕು. ಕರ್ಪೂರದ ಆರತಿಯ ಉಪಕರಣದಲ್ಲಿಟ್ಟ ಕರ್ಪೂರವನ್ನು ಪ್ರಜ್ವಲಿಸಿ. ಈಗ ತುಪ್ಪದಾರತಿಯಂತೆಯೇ ಈ ಆರತಿಯನ್ನು ಬೆಳಗಿರಿ. ಆರತಿಯನ್ನು ಬೆಳಗುವಾಗ ‘ಕರ್ಪೂರಗೌರಂ ಕರುಣಾವತಾರಂ..’ ಈ ಮಂತ್ರದ ಉಚ್ಚಾರಣೆ ಮಾಡಿರಿ. ಆರತಿಯ ಕೃತಿಯಲ್ಲಿ ಮೊದಲು ತುಪ್ಪದ ದೀಪದಿಂದ ಆರತಿಯನ್ನು ಬೆಳಗಲಾಗುತ್ತದೆ. ಅನಂತರ ಕರ್ಪೂರದಾರತಿಯನ್ನು ಬೆಳಗಲಾಗುತ್ತದೆ. ತುಪ್ಪದ ದೀಪದಿಂದ ಆರತಿ ಬೆಳಗಿದ ನಂತರ ಕರ್ಪೂರದ ಆರತಿ ಮಾಡುವ ಕಾರಣವೇನು?
🌻ತುಪ್ಪದ ದೀಪದಿಂದ ಆಕರ್ಷಿತವಾದ ದೇವತೆಗಳ ತತ್ತ್ವ ಲಹರಿಗಳಿಗೆ ಕರ್ಪೂರದ ಆರತಿಯು ಗತಿ ಪ್ರದಾನಿಸುತ್ತದೆ. ಇದರಿಂದ ವಾತಾವರಣ ಶುದ್ಧಿಯಾಗುತ್ತದೆ. ವಾಯು ಮಂಡಲದಲ್ಲಿ ಚೈತನ್ಯದ ವೃದ್ಧಿಯಾಗುತ್ತದೆ ಮತ್ತು ರಜ-ತಮ ಕಣಗಳ ಉಚ್ಚಾಟನೆ ಆಗುತ್ತದೆ. ಇದರಿಂದ ಪೂಜಕನಿಗೆ ಆರತಿಯನ್ನು ಮಾಡುವ ಸಮಯದಲ್ಲಿ ವಾಯುಮಂಡಲದಿಂದ ಚೈತನ್ಯ ಗ್ರಹಿಸಲು ಬರುವ ಅಡಚಣೆಗಳು ಕಡಿಮೆಯಾಗುತ್ತವೆ. ಕರ್ಪೂರದ ಉಗ್ರ ಗಂಧದಿಂದ ವಾಯುಮಂಡಲದಲ್ಲಿ ಸೂಕ್ಷ್ಮ ಸುಗಂಧ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಈ ಸುಗಂಧ-ಲಹರಿಯುಕ್ತ ವಾಯುಮಂಡಲದೆಡೆಗೆ ಬ್ರಹ್ಮಾಂಡದಲ್ಲಿರುವ ಶಿವಶಕ್ತಿಯ ಲಹರಿಗಳು ಆಕರ್ಷಿತವಾಗುತ್ತವೆ ಮತ್ತು ವಾಸ್ತುವಿನಲ್ಲಿರುವ ಕೆಟ್ಟಶಕ್ತಿಗಳ ಸಂಚಾರಕ್ಕೆ ಅಂಕುಶವನ್ನು ಹಾಕುತ್ತವೆ.
🌻ಇದರಿಂದ ಪೂಜಾವಿಧಿಯ ಮಾಧ್ಯಮದಿಂದ ಉಂಟಾಗುವ ದೇವತಾ ತತ್ತ್ವಗಳ ಲಹರಿಗಳ ಪ್ರಕ್ಷೇಪಣೆಯಲ್ಲಿ ತೊಂದರೆದಾಯಕ ಲಹರಿಗಳ ಅಡ್ಡಿಯು ದೂರವಾಗುತ್ತದೆ. ತುಪ್ಪದ ದೀಪದಿಂದ ಆರತಿಯನ್ನು ಬೆಳಗಿದ ನಂತರ ಕರ್ಪೂದ ಆರತಿ ಬೆಳಗಬೇಕು. ಕರ್ಪೂರದ ಆರತಿಯ ಉಪಕರಣದಲ್ಲಿಟ್ಟ ಕರ್ಪೂರವನ್ನು ಪ್ರಜ್ವಲಿಸಿ. ಈಗ ತುಪ್ಪದಾರತಿಯಂತೆಯೇ ಈ ಆರತಿಯನ್ನು ಬೆಳಗಿರಿ. ಆರತಿಯನ್ನು ಬೆಳಗುವಾಗ ‘ಕರ್ಪೂರಗೌರಂ ಕರುಣಾವತಾರಂ..’ ಈ ಮಂತ್ರದ ಉಚ್ಚಾರಣೆ ಮಾಡಿರಿ. ಆರತಿಯ ಕೃತಿಯಲ್ಲಿ ಮೊದಲು ತುಪ್ಪದ ದೀಪದಿಂದ ಆರತಿಯನ್ನು ಬೆಳಗಲಾಗುತ್ತದೆ. ಅನಂತರ ಕರ್ಪೂರದಾರತಿಯನ್ನು ಬೆಳಗಲಾಗುತ್ತದೆ. ತುಪ್ಪದ ದೀಪದಿಂದ ಆರತಿ ಬೆಳಗಿದ ನಂತರ ಕರ್ಪೂರದ ಆರತಿ ಮಾಡುವ ಕಾರಣವೇನು?
🌻ತುಪ್ಪದ ದೀಪದಿಂದ ಆಕರ್ಷಿತವಾದ ದೇವತೆಗಳ ತತ್ತ್ವ ಲಹರಿಗಳಿಗೆ ಕರ್ಪೂರದ ಆರತಿಯು ಗತಿ ಪ್ರದಾನಿಸುತ್ತದೆ. ಇದರಿಂದ ವಾತಾವರಣ ಶುದ್ಧಿಯಾಗುತ್ತದೆ. ವಾಯು ಮಂಡಲದಲ್ಲಿ ಚೈತನ್ಯದ ವೃದ್ಧಿಯಾಗುತ್ತದೆ ಮತ್ತು ರಜ-ತಮ ಕಣಗಳ ಉಚ್ಚಾಟನೆ ಆಗುತ್ತದೆ. ಇದರಿಂದ ಪೂಜಕನಿಗೆ ಆರತಿಯನ್ನು ಮಾಡುವ ಸಮಯದಲ್ಲಿ ವಾಯುಮಂಡಲದಿಂದ ಚೈತನ್ಯ ಗ್ರಹಿಸಲು ಬರುವ ಅಡಚಣೆಗಳು ಕಡಿಮೆಯಾಗುತ್ತವೆ. ಕರ್ಪೂರದ ಉಗ್ರ ಗಂಧದಿಂದ ವಾಯುಮಂಡಲದಲ್ಲಿ ಸೂಕ್ಷ್ಮ ಸುಗಂಧ ಲಹರಿಗಳು ಪ್ರಕ್ಷೇಪಿತವಾಗುತ್ತವೆ. ಈ ಸುಗಂಧ-ಲಹರಿಯುಕ್ತ ವಾಯುಮಂಡಲದೆಡೆಗೆ ಬ್ರಹ್ಮಾಂಡದಲ್ಲಿರುವ ಶಿವಶಕ್ತಿಯ ಲಹರಿಗಳು ಆಕರ್ಷಿತವಾಗುತ್ತವೆ ಮತ್ತು ವಾಸ್ತುವಿನಲ್ಲಿರುವ ಕೆಟ್ಟಶಕ್ತಿಗಳ ಸಂಚಾರಕ್ಕೆ ಅಂಕುಶವನ್ನು ಹಾಕುತ್ತವೆ. ಇದರಿಂದ ಪೂಜಾವಿಧಿಯ ಮಾಧ್ಯಮದಿಂದ ಉಂಟಾಗುವ ದೇವತಾ ತತ್ತ್ವಗಳ ಲಹರಿಗಳ ಪ್ರಕ್ಷೇಪಣೆಯಲ್ಲಿ ತೊಂದರೆದಾಯಕ ಲಹರಿಗಳ ಅಡ್ಡಿಯು ದೂರವಾಗುತ್ತದೆ.
QR Code to vie this page | ಈ ಪುಟವನ್ನು ವೀಕ್ಷಿಸಲು QR ಕೋಡ್
ವಾಸ್ತು ಸಲಹೆಗಳು
ಆಗ್ನೇಯ ಭಾಗದಲ್ಲಿ ದಿನ ನಿತ್ಯ ದೀಪ ಹಚ್ಚುವುದರಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ.