ಯಶಸ್ಸು, ತಾಳ್ಮೆ ಮತ್ತು ಸಮರ್ಪಣೆಯ ಕಥೆ | Right things will come in the right time in kannada

ಯಶಸ್ಸು, ತಾಳ್ಮೆ ಮತ್ತು ಸಮರ್ಪಣೆಯ ಕಥೆ | Right things will come in the right time in kannada

ನಿಮ್ಮ ಜೀವನದ ಯಶಸ್ಸಿನ ಸಮಯಕ್ಕೆ ಕಾಯುತ್ತಿದ್ದೀರಾ? ಯಶಸ್ಸು, ತಾಳ್ಮೆ ಮತ್ತು ಸಮರ್ಪಣೆಯ ಕಥೆ.

ಯಶಸ್ಸು ~ ಸಮರ್ಪಣೆ

 ಇದು ಸಮಯದ ವಿಷಯವಾಗಿದೆ. 

ಬ್ರಹ್ಮಚಾರಿಯೊಬ್ಬರು ಹಲವು ವಿಭಾಗಗಳ ಅಧ್ಯಯನವನ್ನು ಪೂರ್ಣಗೊಳಿಸಿದ್ದರು.  ಈಗ ಅವರು ಆತ್ಮಜ್ಞಾನದ ಜ್ಞಾನವನ್ನು ಪಡೆಯಲು ಬಯಸಿದ್ದರು.

 ಈ ಆಸೆಯನ್ನು ಪೂರೈಸಲು, ಅವರು ಪ್ರಸಿದ್ಧ ಋಷಿಗಳ ಆಶ್ರಮವನ್ನು ತಲುಪಿದರು.  

ಋಷಿಯು ಆಶ್ರಮದಲ್ಲಿ ಇರುವಂತೆ ಆಜ್ಞಾಪಿಸಿದನು.  

ಅಲ್ಲಿ ಅವರಿಗೆ ಅನೇಕ ರೀತಿಯ ಸೇವಾ ಕಾರ್ಯಗಳನ್ನು ನೀಡಲಾಯಿತು.  ಅಲ್ಲಿ ಬ್ರಹ್ಮಚಾರಿಯ ಸೇವೆ ಮಾಡುತ್ತಾ ಹಲವು ದಿನಗಳು ಕಳೆದವು.  

ಆದರೆ ಅವನ ಅಧ್ಯಯನ ಪ್ರಾರಂಭವಾಗಲಿಲ್ಲ.  ಇದರಿಂದ ಅವರ ಮನಸ್ಸಿನಲ್ಲಿ ಹಲವು ಅನುಮಾನಗಳು ಮೂಡತೊಡಗಿದವು.

 ಅಲ್ಲಿ ಅವನು ಆತ್ಮಜ್ಞಾನವೆಂಬ ಪರಮಾತ್ಮನನ್ನು ಪಡೆಯಲು ಬಂದಿದ್ದನು ಮತ್ತು ಇಲ್ಲಿ ಅವನು ಲೌಕಿಕ ಅನ್ವೇಷಣೆಗಳ ಬಲೆಗೆ ಬಿದ್ದನು.  

ಒಂದು ದಿನ ಅವನು ಮಡಕೆಯಿಂದ ನೀರು ತುಂಬಲು ಕೊಳವನ್ನು ತಲುಪಿದಾಗ, ಅವನು ಕೋಪ ಮತ್ತು ಕೋಪದಿಂದ ಉರಿಯುತ್ತಿದ್ದನು.

 ಅವನು ಮರಳಿನ ಮೇಲೆ ಬಿಂದಿಗೆ ಅನ್ನು ಬಲವಾಗಿ ಹೊಡೆದು ಅಲ್ಲಿಯೇ ಕುಳಿತನು.  

ಆಗ ಬಿಂದಿಗೆನಿಂದ ಒಂದು ಧ್ವನಿ ಬಂತು, ‘ಯಾಕೆ ಇಷ್ಟು ಕೋಪ ಮತ್ತು ಆತುರ ತೋರಿಸುತ್ತೀಯ?  

ಗುರುವು ನಿಮಗೆ ಆಶ್ರಯ ನೀಡಿದ್ದರೆ, ಖಂಡಿತವಾಗಿಯೂ ಬೇಗ ಅಥವಾ ನಂತರ ನಿಮ್ಮ ಆಸೆಯೂ ಈಡೇರುತ್ತದೆ.  

ಇದನ್ನು ಕೇಳಿದ ಬ್ರಹ್ಮಚಾರಿಯು, ‘ನಾನು ಇಲ್ಲಿಗೆ ಬಂದಿರುವುದು ಪ್ರಾಪಂಚಿಕ ಕೆಲಸ ಮಾಡಲು ಅಲ್ಲ, ಆತ್ಮಜ್ಞಾನವನ್ನು ಪಡೆಯಲು.

 ಆದರೆ ಇಲ್ಲಿ ನನ್ನ ಸಮಯ ಇತರರ ಸೇವೆಯಲ್ಲಿ ಕಳೆಯುತ್ತಿದೆ.

  ಅದಕ್ಕೆ ಕೊಡ ಹೇಳಿತು , “ಕೇಳು ಗೆಳೆಯಾ, ನಾನು ಮೊದಲು ಕೇವಲ ಮಣ್ಣಿನ ಗಟ್ಟಿಯಾಗಿದ್ದೆ, ಮೊದಲು ಕುಂಬಾರ ನನ್ನನ್ನು ಕರೆದೊಯ್ದು, ಅದನ್ನು ಪುಡಿಮಾಡಿ, ಕೆಲವು ದಿನಗಳವರೆಗೆ ಅವನ ಕಾಲಿನ ಕೆಳಗೆ ತುಳಿದನು. ನಂತರ ಅವನು ನನ್ನನ್ನು ರೂಪಿಸಿದನು, ಅದನ್ನು ಕುಲುಮೆಯಲ್ಲಿ ಕಾಯಿಸಿದನು.

 ಇದೆಲ್ಲದರಿಂದಾಗಿ ನಾನು ಇಂದು ಈ ರೂಪದಲ್ಲಿ ನಿಮ್ಮ ಮುಂದೆ ಪ್ರತ್ಯಕ್ಷನಾಗಿದ್ದೇನೆ.  

ನೀವೂ ಮುಂದುವರಿಯಲು ಬಯಸಿದರೆ, ತೊಂದರೆಗಳಿಗೆ ಹೆದರಬೇಡಿ.  ನಿಮ್ಮ ಕರ್ಮಕ್ಕೆ ಅಂಟಿಕೊಳ್ಳಿ.  ಇದನ್ನು ಕೇಳಿ ಬ್ರಹ್ಮಚಾರಿಯ ಕೋಪ ಮತ್ತು ವೇದನೆ ದೂರವಾಯಿತು.  

ಗುರುಗಳ ಆದೇಶವನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಪಾಲಿಸುತ್ತೇನೆ ಎಂದು ಸಂಕಲ್ಪ ಮಾಡಿದರು.  

ಋಷಿಯು ತನ್ನ ನಡವಳಿಕೆಯಲ್ಲಿನ ಈ ಬದಲಾವಣೆಯನ್ನು ಸಹ ಗುರುತಿಸಿದನು.

 ಏಕೆಂದರೆ ಆತ್ಮಜ್ಞಾನವು ಬುದ್ಧಿಯ ವಿಷಯವಲ್ಲ ಆದರೆ ಅರಿವಿನ ವಿಷಯವಾಗಿದೆ.  

ಆದ್ದರಿಂದ, ಶಿಷ್ಯನು ನಿಜವಾದ ಶರಣಾಗತಿಯ ಪಾಠವನ್ನು ಕಲಿತ ನಂತರವೇ ಅವನ ಶಿಕ್ಷಣವು ಪ್ರಾರಂಭವಾಯಿತು ಮತ್ತು ನಂತರ ಅವರು ಪ್ರಸಿದ್ಧ ಸ್ವಯಂ-ತತ್ತ್ವಜ್ಞಾನಿ ಋಷಿಯಾದರು.

  ಪಾಠಗಳು

 ವಿಪತ್ತುಗಳಿಗೆ ಹೆದರಬೇಡಿ.  ಸಂಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡಿ.  ಖಂಡಿತ ಯಶಸ್ಸು ಸಿಗುತ್ತದೆ

🍀 ಬ್ರಾಹ್ಮಣಗೊಲಿದ ‘ಚಿತ್ತದಿ ಹೊಳೆವಾ ಪುತ್ತಳಿ ಗೊಂಬೆ’ 🍀

🌷ಒಂದು ಕಾಲದಲ್ಲಿ ಶ್ರೀ ಲಕ್ಷ್ಮಿ ಮತ್ತು ಆಕೆಯ ಸಹೋದರಿ ಜೇಷ್ಠಾ ಲಕ್ಷ್ಮಿ ಯರಲ್ಲಿ ಹೆಚ್ಚು ಶಕ್ತಿಶಾಲಿ ಯಾರು? ಈ ಕುರಿತಾಗಿ ನಡೆದ ಮಾತುಕತೆ. ಒಂದು ಗ್ರಾಮದಲ್ಲಿ ವಿಷ್ಣುದಾಸ ಶರ್ಮ ಎಂಬ ಬ್ರಾಹ್ಮಣ ವಾಸವಾಗಿದ್ದ. ಆತ ವಿಷ್ಣು ಭಕ್ತನಾಗಿದ್ದ. ಪ್ರತಿದಿನ ನಸುಕಿನಲ್ಲೇ ಎದ್ದು ಸ್ನಾನಾದಿಗಳನ್ನು ಮುಗಿಸಿ ‘ಗೋಪಾಲಕೃಷ್ಣ’ನ ಮಂದಿರಕ್ಕೆ ಹೋಗಿ ಕೃಷ್ಣನಿಗೆ ಅಭಿಷೇಕ, ಅಲಂಕಾರಗಳನ್ನು ಮಾಡುವಾಗ, ಸುಪ್ರಭಾತ, ಹರಿ ನಾಮಕೀರ್ತನೆ, ಜೊತೆಗೆ ಭಾಗವತ, ಭಗವದ್ಗೀತೆ ಮುಂತಾದ ಸ್ತೋತ್ರಗಳನ್ನು ಪಠಣ ಮಾಡಿ ನೈವೇದ್ಯ ಮಂಗಳಾರತಿಯೊಂದಿಗೆ ಪ್ರಾರ್ಥನೆ ಮಾಡುವುದು ಅವನ ದಿನಚರಿಯಾಗಿದ್ದು, ಇದರಿಂದಲೇ ಅವನು ಸಂತುಷ್ಟನಾಗಿದ್ದ.

🌷ಹೀಗೆ ಒಂದು ದಿನ ವಿಷ್ಣುದಾಸ ದೇವಸ್ಥಾನದ ಪೂಜೆ ಮುಗಿಸಿ ಮನೆಗೆ ಬರುತ್ತಿದ್ದ. ಅವನು ಬರುವ ಮಾರ್ಗದಲ್ಲಿ, ಮಾತೆ ಶ್ರೀ ಲಕ್ಷ್ಮಿ ಮತ್ತು ಆಕೆಯ ಸಹೋದರಿ ಜೇಷ್ಠಾಲಕ್ಷ್ಮಿ ಕುಳಿತುಕೊಂಡಿದ್ದರು. ಲಕ್ಷ್ಮಿಯ ದೃಷ್ಟಿ ಬ್ರಾಹ್ಮಣನ ಮೇಲೆ ಬಿತ್ತು. ಆಕೆ ತನ್ನ ಸಹೋದರಿಗೆ, ನೋಡು ನಾನು ಈಗ ಬ್ರಾಹ್ಮಣನ ಜೀವನದಲ್ಲಿ ಪ್ರವೇಶ ಮಾಡಿದ್ದೇನೆ. ನನ್ನ ಪ್ರವೇಶದಿಂದ ಆತನ ಜೀವನವೇ ಬದಲಾಗಿ ವಜ್ರ ವೈಡೂರ್ಯದಂತೆ ಝಗಮಗ ಹೊಳೆಯುತ್ತದೆ. ಇದನ್ನು ಕೇಳಿದ ಸಹೋದರಿ ನೋಡ್ತಾಯಿರು ನಾನು ಹಾಗೆ ಆಗಲು ಬಿಡುವುದಿಲ್ಲ. ಶ್ರೇಷ್ಟರು ಯಾರು ಅಂತ ನಿನಗೆ ತಿಳಿಯುತ್ತದೆ ಎಂದಳು. ಈ ರೀತಿಯಾಗಿ ಮಾತನಾಡಿಕೊಂಡು ಬ್ರಾಹ್ಮಣನ ಮೇಲೆ ಪ್ರಭಾವ ಬೀರತೊಡಗಿದರು.

🌷ಇದಾವುದೂ ತಿಳಿಯದೆ ವಿಠ್ಠಲದಾಸ ಹರಿ ನಾಮಸ್ಮರಣೆ ಮಾಡಿಕೊಳ್ಳುತ್ತ ಮನೆಗೆ ನಡೆದು ಬರುತ್ತಿರುವ ಹಾದಿಯಲ್ಲಿ ಲಕ್ಷ್ಮಿಯು, ತನ್ನ ಕೃಪಾ ದೃಷ್ಟಿಯಿಂದ ಸುವರ್ಣ ನಾಣ್ಯಗಳು ತುಂಬಿದ ಪುಟ್ಟ ಬಿದಿರು ಬೊಂಬನ್ನು ರಸ್ತೆಯ ಮೇಲೆ ಕಾಣುವಂತೆ ಇರಿಸಿದಳು. ನಡೆದು ಬರುತ್ತಿದ್ದ ವಿಠಲದಾಸನ ದೃಷ್ಟಿಗೆ ಬೊಂಬು ಕಾಣಿಸಿತು. ಅದನ್ನು ತೆಗೆದುಕೊಂಡು ಈ ಬೊಂಬು ಒಳ್ಳೆ ಮಜಬೂತಾಗಿ ಗಟ್ಟಿಯಾಗಿದೆ. ಮನೆಯಲ್ಲಿ ಯಾವುದಾದರೂ ಕೆಲಸಕ್ಕೆ ಬರುತ್ತದೆ ಎಂದು ಕೈಯಲ್ಲಿ ಎತ್ತಿಕೊಂಡು ಮುಂದೆ ಹೋಗುತ್ತಿದ್ದ. ಸ್ವಲ್ಪ ದೂರ ಹೋಗುತ್ತಿದ್ದಂತೆ, ಒಬ್ಬ ಹುಡುಗ ಬ್ರಾಹ್ಮಣ ನಿಗೆ ಎದುರಾಗಿ ಬಂದು ಅವನ ಕೈಯಲ್ಲಿದ್ದ ಬೊಂಬು ನೋಡಿ. ತಕ್ಷಣ ಸ್ವಾಮಿ ಇಂತಹ ಬೊಂಬು ನನಗೆ ಬೇಕು ಕಾಸು ಕೊಟ್ಟು, ತರಲು ಹೋಗುತ್ತಿದ್ದೇನೆ.

🌷ಆ ಹಣವನ್ನು ನಿಮಗೆ ಕೊಡುತ್ತೇನೆ ಕೊಡುತ್ತೀರಾ ಎಂದು ಕೇಳಿದನು. ಆಗ ಬ್ರಾಹ್ಮಣ ಇಲ್ಲಪ್ಪಾ ನಾನು ಇದನ್ನು ದುಡ್ಡಿಗೆ ಕೊಂಡುಕೊಂಡಿದ್ದಲ್ಲ ಬರಬೇಕಾದರೆ ಹಾದಿಯಲ್ಲಿ ನನಗೆ ಸಿಕ್ಕಿತು ನೀನು ಹಾಗೆ ತೆಗೆದುಕೋ ಎಂದನು. ಆ ಬಾಲಕನು ಹಾಗೆಯೇ ಬೇಡ ನಾನು ಒಂದು ರೂಪಾಯಿ ಕೊಡುತ್ತೇನೆ ಎಂದಾಗ ಬ್ರಾಹ್ಮಣನು ಖುಷಿಯಿಂದ ಆ ಬೊಂಬನ್ನು ಕೊಟ್ಟನು. ಹಣ ಪೂಜೆಯ ತಟ್ಟೆಯಲ್ಲಿ ಹಾಕಿದನು. ಬ್ರಾಹ್ಮಣ ಮುಂದೆ ನಡೆದನು. ಬಾಲಕ ಬೊಂಬು ತೆಗೆದುಕೊಂಡು ಮನೆಗೆ ಹೋದನು. ಇದನ್ನೆಲ್ಲಾ ನೋಡುತ್ತಿದ್ದ ಜೇಷ್ಠಾ ಲಕ್ಷ್ಮಿ ಯು ನೋಡಿದೆಯಾ? ನೀನು ಸುವರ್ಣ ನಾಣ್ಯ ತುಂಬಿಸಿ ಬ್ರಾಹ್ಮಣ ನಿಗೆ ಕೊಟ್ಟೆ, ಆದರೆ ಅವನಿಗೆ ದಕ್ಕಿದ್ದು ಒಂದು ರೂಪಾಯಿ ಬಿಕ್ಷೆ ನನ್ನ ಪ್ರಭಾವ ನೋಡಿದೆಯಾ ಎಂದು ವ್ಯಂಗ್ಯವಾಡಿದಳು.

🌷ಬ್ರಾಹ್ಮಣನು ಪೂಜೆ ತಟ್ಟೆ ಹಿಡಿದುಕೊಂಡು ಮುಂದೆ ಹೋಗುತ್ತಿದ್ದನು. ಅಲ್ಲಿದ್ದ ಕೆರೆಯ ಬದಿಯಲ್ಲಿ ಸುವಾಸನಾಭರಿತ ಸುಂದರ ಹೂವುಗಳು ತುಂಬಿದ ಗಿಡವನ್ನು ನೋಡಿದನು. ಕೃಷ್ಣನ ಪೂಜೆಗೆ ಹೂ ಬಿಡಿಸಿಕೊಳ್ಳಲು ಪೂಜಾ ತಟ್ಟೆಯನ್ನು ಅಲ್ಲೇ ಇಟ್ಟು ಗಿಡದ ಹತ್ತಿರ ಹೋದನು.ಆ ಸಮಯಕ್ಕೆ ಒಬ್ಬ ಬಾಲಕ ಅಲ್ಲಿಗೆ ಬಂದು ತಟ್ಟೆಯಲ್ಲಿದ್ದ ಒಂದು ರೂಪಾಯಿ ಎತ್ತಿಕೊಂಡು ಓಡಿಹೋದನು. ಇದನ್ನು ಗಮನಿಸದ ಬ್ರಾಹ್ಮಣ ಹೂಗಳನ್ನು ತಟ್ಟೆಯಲ್ಲಿ ಹಾಕಿಕೊಂಡು ಮುಂದೆ ಹೋಗುತ್ತಿರುವಾಗ ಹಣಕೊಟ್ಟು ಬೊಂಬು ತೆಗೆದುಕೊಂಡು ಹೋಗಿದ್ದ ಹುಡುಗ ಎದುರಾದನು, ಆ ಬೊಂಬನ್ನು ವಾಪಸ್ಸು ಕೊಟ್ಟು ಇದು ಬೇಡ ನನಗೆ ಅದರಿಂದ ಯಾವ ಉಪಯೋಗವೂ ಇಲ್ಲ. ನನ್ನ ರೂಪಾಯಿ ವಾಪಸ್ಸು ಕೊಡಿ ಎಂದನು. ಆಗ ಬ್ರಾಹ್ಮಣ ತಟ್ಟೆಯಲ್ಲಿದ್ದ ರೂಪಾಯಿ ಕೊಡಲು ನೋಡಿದನು ಇರಲಿಲ್ಲ. ಬಾಲಕ ನೀನು ಕೊಟ್ಟ ಹಣ ಎಲ್ಲೋ ಬಿದ್ದು ಹೋಗಿದೆ ಬೇರೆ ಹಣ ಈಗ ಇಲ್ಲ. ನೀನು ಸಂಜೆ ನನ್ನ ಮನೆಗೆ ಬಾ ಹಣ ಕೊಡುತ್ತೇನೆ ಎಂದನು. ಬಾಲಕನು ನೀವು ಚಿಂತಿಸಬೇಡಿ ನಾನು ಸಾಯಂಕಾಲ ಬಂದು ಹಣ ತೆಗೆದುಕೊಳ್ಳುತ್ತೇನೆ ಎಂದು ಹೊರಟನು.

🌷ಬ್ರಾಹ್ಮಣ ಹೊರಡುವುದರಲ್ಲಿದ್ದ ಆಗ ಒಬ್ಬ ಚಮ್ಮಾರ ಬಂದು ಹೇ ಬ್ರಾಹ್ಮಣ ದೇವಾ ನನ್ನ ಮಗ ನಿಮ್ಮ ಪೂಜಾ ತಟ್ಟೆಯಿಂದ ಒಂದು ರೂಪಾಯಿ ನಾಣ್ಯ ತೆಗೆದುಕೊಂಡು ಓಡಿ ಬಂದಿದ್ದ. ನಾನು ತಂದಿದ್ದೇನೆ ಹಣ ತೆಗೆದುಕೊಂಡು ನನ್ನನ್ನು ಕ್ಷಮಿಸಿರಿ ಎಂದನು. ಹಣವನ್ನು ತೆಗೆದುಕೊಂಡ ಬ್ರಾಹ್ಮಣನು ಮುಂದೆ ಹೋಗುತ್ತಿದ್ದ ಬಾಲಕನನ್ನು ಕರೆದು ನೀನು ಕೊಟ್ಟ ರೂಪಾಯಿ ತೆಗೆದುಕೋ ಎಂದು ಅವನಿಗೆ ಕೊಟ್ಟನು. ಒಂದು ಕೈಯಲ್ಲಿ ಪೂಜಾ ಥಾಲಿ, ಇನ್ನೊಂದು ಕೈಯಲ್ಲಿ ಬೊಂಬು ಹಿಡಿದುಕೊಂಡು ಮನೆಗೆ ಹೊರಟಿದ್ದನ್ನು ಕಂಡ ಜೇಷ್ಠಾಲಕ್ಷ್ಮಿಗೆ ಸಿಟ್ಟು ಬಂದಿತು. ಶ್ರೀ ಲಕ್ಷ್ಮಿ ಬೇರೆ ಮುಗುಳ್ನಗುತ್ತಿದ್ದಳು. ಆಗ ಜೇಷ್ಠಾಲಕ್ಷ್ಮಿಯು ನೀನು ಮುಗುಳ್ನಗಬೇಡ ಮುಂದೆ ನೋಡುತ್ತಿರು ಕಾದಿದೆ ಎಂದು ತನ್ನ ಪ್ರಭಾವ ತೋರಿಸಲು ಒಂದು ಸರ್ಪದ ರೂಪ ಧರಿಸಿ ಬುಸುಗುಡುತ್ತ ಬ್ರಾಹ್ಮಣನ ಹತ್ತಿರವೇ ಬಂದಿತು. ಬ್ರಾಹ್ಮಣ ಹಾವಿನಿಂದ ದೂರ ಸರಿದರೂ ಹತ್ತಿರವೇ ಬರುತಿತ್ತು.

🌷ಗಾಬರಿಗೊಂಡ ಬ್ರಾಹ್ಮಣ ತನ್ನ ಕೈಯಲ್ಲಿದ್ದ ಬೊಂಬನ್ನೆ ಎತ್ತಿ ಹಾವಿನ ಮೇಲೆ ಹಾಕಿದನು. ಬೊಂಬು ಎರಡು ತುಂಡಾಗಿ ಅದರಿಂದ ಸುವರ್ಣ ನಾಣ್ಯಗಳು ಹೊರಬಿದ್ದವು. ಅದನ್ನು ನೋಡುತ್ತಿದ್ದಂತೆಯೇ ಬ್ರಾಹ್ಮಣ ನಿಗೆ, ಆಶ್ಚರ್ಯ, ಸಂತೋಷ ಒಟ್ಟಿಗೆ ಆಯಿತು. ಹಾವಿಗೆ ಪೆಟ್ಟಾಗಿ ಸರಸರ ಹೋಗಿ ಪೊದೆಯಲ್ಲಿ ಸೇರಿತು. ನಾಣ್ಯಗಳನ್ನು ಅವನು ಆರಿಸಿಕೊಂಡನು. ದೇವರನ್ನು ಪ್ರಾರ್ಥಿಸುತ್ತಾ , ಹೇ ಭಗವಂತ, ಮಹಾವಿಷ್ಣು, ತಾಯಿ ಮಹಾಲಕ್ಷ್ಮಿ, ನಿಮ್ಮ ಕರುಣೆ ಅಪಾರ. ನಿನ್ನನ್ನೇ ನಂಬಿ ಬದುಕುತ್ತಿರುವ ನನ್ನ ಕೈಗೆ ಸಂಪತ್ತನ್ನು ಕೊಟ್ಟು, ನನಗರಿವಿಲ್ಲದೆ ಎಲ್ಲೆಲ್ಲೋ ಹೋಗಿದ್ದರೂ, ಕೈಗೆ ಸಿಗುವಂತೆ ಮಾಡಿದೆ, ನಿನ್ನ ಮಹಿಮೆ ಅಪಾರವಾದುದು ಹೇ ಲಕ್ಷ್ಮೀನಾರಾಯಣ ನನ್ನ ಭಕ್ತಿ ಇನ್ನೂ ಹೆಚ್ಚು ಹೆಚ್ಚು ದೃಢವಾಗುವಂತೆ ಅನುಗ್ರಹಿಸು ತಂದೆ ನಿನ್ನ ಮೇಲೆ ಶ್ರದ್ಧೆ- ಭಕ್ತಿ ವಿನಹ ಬೇರೆನೂ ಬೇಡ ಎಂದು ಕಾಯಾ-ವಾಚಾ-ಮನಸಾ ಸ್ಮರಿಸಿದನು. ಭಗವಂತ ಕರುಣಿಸಿದ ಅಪಾರ ಸಂಪತ್ತಿನ ಸಹಿತ ಮನೆಗೆ ಬಂದನು.

ದೇವಿ ಸಾಧು ಮಹಾಭಾಗೇ ಮಹಾಭಾಗ್ಯ ಪ್ರದಾಯಕಂ !

ಸರ್ವೈಶ್ವರ್ಯಕರಂ ಪುಣ್ಯಂ ಸರ್ವ ಪಾಪ ಪ್ರಣಾಶನಂ. !

ಸರ್ವ ದಾರಿದ್ರ್ಯ ಶಮನಂ ಶ್ರವಣಾತ್ ಭುಕ್ತಿ ಮುಕ್ತಿದಂ !

ರಾಜ ವಶ್ಯ ಕರಂ ದಿವ್ಯಂ ಗುಹ್ಯಾ ದ್ಗುಹ್ಯತಮಂ ಪರಂ !

ದುರ್ಲಭಂ ಸರ್ವದೇವಾನಾಂ ಚತುಷಷ್ಟಿ ಕಲಾಸ್ಪದಂ !

ಪದ್ಮಾದೀನಾಂ ವರಂತಾನಾಂ ವಿಧಿನಾಂ ನಿತ್ಯ ದಾಯಕಂ!

🌷 ದೇವರಿಗೆ ಪೂಜೆ ಪ್ರಾರ್ಥನೆ ಯಾಕೆ ಮಾಡಬೇಕು ? 🌷

🌻 ನಾವು ದೇವರ ಪೂಜೆ ಮಾಡದಿದ್ದರೆ, ಏನಾಗುತ್ತದೆ ? “ಪೂಜೆ” ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ. ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ ಸೃಷ್ಟಿ, ಸ್ಥಿತಿ, ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ.

🌻ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ, ಪ್ರತಿನಿತ್ಯವೂ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ. ಶಾಂತಿ, ನೆಮ್ಮದಿ, ನಂಬಿಕೆ, ಸಂತೋಷ, ಸಹೃದಯತೆ, ಯೋಜನಾ ಮುನ್ನಡೆ, ಧೈರ್ಯ, ಕಾರ್ಯದಕ್ಷತೆ, ದೀಕ್ಷೆ, ಆಶಾವಾದ, ಶ್ರದ್ಧೆ, ಗಹಿತ್ಯ ಕಲಿಯುವಿಕೆ, ಆರಾಧನೆ, ಐಕ್ಯತೆ, ಮುಂತಾದ ಶಕ್ತಿ ಕ್ರಿಯೆಗಳು ಲಭಿಸುತವೆ‌. ಪೂಜೆಯಿಂದ ಮನೋಶಕ್ತಿ ವೃದ್ಧಿಯಾಗುತ್ತದೆ.

🌷”ಅವಶ್ಯ ಮನುಭೋಕ್ತವ್ಯಂ ಗತಂ ಜನ್ಮಶುಭಾಶುಭಂ”

🌻ಗತ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳನ್ನೇ ನಾವು ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಅಂದಮೇಲೆ ಗತ ಜನ್ಮದ ಕಾರಣದಿಂದ ಬಂದ ಕಷ್ಟಗಳನ್ನು ಈಗ ಅನುಭವಿಸಬೇಕಾಗಿ ಬಂದಿದೆ. ಈಗ ಮಾಡುವ ಪೂಜೆಗೂ ಕಷ್ಟಗಳಿಗೂ ಸಂಬಂಧವಿಲ್ಲ. ನಾವೀಗ ಮಾಡುವ ಪೂಜಾಫಲದಿಂದ ಕಷ್ಟ ನಿವಾರಣೆಯಾಗದಿದ್ದರೂ. ಉಪಶಮನ ಸಿಗುತ್ತದೆ. ಸಹನಾಶಕ್ತಿ ಸಿಗುತ್ತದೆ. ಗತ ಜನ್ಮದ ರೋಗಕ್ಕೆ ಈ ಜನ್ಮದ ಔಷಧಿಯೇ ಪೂಜೆ. “ಪ್ರಾರ್ಥನೆ ಪೂಜೆ ನಂಬಿದವರಿಗೆ ದೇವರಿದ್ದಾನೆ, ಪಾಲಿಸುತಾನೆ, ರಕ್ಷಿಸುತ್ತಾನೆ, ಸಹಕರಿಸುತ್ತಾನೆ” ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ ಪ್ರಸಂಗವೊಂದು ಇಲ್ಲಿದೆ. ‌ ‌ ‌ ‌ ಒಂದು ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ ನಾಸ್ತಿಕನಾಗಿದ್ದ.

🌻ಆದರೆ ಜನಸೇವೆಯೆಂಬ ಕಾಯಕದಿಂದ ಆಸುಪಾಸಿನವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಆತನ ಮನೆಯವರೆಲ್ಲ ಆಸ್ತಿಕರಾಗಿದ್ದರು. ದೇವಸ್ಥಾನ, ದೇವರು, ಪ್ರಾರ್ಥನೆ ಇಂತಹ ವಿಚಾರದಲ್ಲಿ ನಂಬಿಕೆ ಇದ್ದ ಮನೆಮಂದಿಯೆಲ್ಲ ಈತನನ್ನು ಪ್ರಾರ್ಥಿಸುವಂತೆ ಒತ್ತಾಯಿಸುತ್ತಿದ್ದರೂ ನಾಸ್ತಿಕನಾಗಿಯೇ ಉಳಿದಿದ್ದ. ಒಂದು ದಿನ ರಾತ್ರಿ ಜೋರಾಗಿ ಮಳೆಸುರಿಯಲಾರಂಭಿಸಿದಾಗ ವಿದ್ಯುತ್ ಕಡಿತವಾಯಿತು. ಆ ವೇಳೆಯಲ್ಲಿ ಮಳೆಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.

🌻ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ. ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ಕ್ರಿಮಿನಾಶಕದ ಬಾಟಲಿಯಾಗಿತ್ತು. ತನ್ನಿಂದ ಅಮಾಯಕ ಜೀವವೊಂದು ಬಲಿಯಾಗುತ್ತದಲ್ಲ ಎಂಬ ಪಾಪಪ್ರಜ್ಞೆಯ ಜೊತೆಗೆ ಆ ಬಾಲಕ ಅನಾಥನಾಗುತ್ತಾನಲ್ಲ, ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಏನು ಮಾಡಬೇಕೆಂಬುದನರಿಯದೆ ಈ ದುರಂತವನ್ನು ಹೇಗೆ ತಪ್ಪಿಸಲಿ ಎಂದು ಯೋಚಿಸುತ್ತಾನೆ.

🌻ಆಗ ಆತನಿಗೆ ಗೋಡೆಯಲ್ಲಿ ತೂಗುಹಾಕಿದ್ದ ದೇವರ ಚಿತ್ರಪಟವೊಂದು ಕಣ್ಣಿಗೆ ಬಿತ್ತು. ಬೇಡವೆಂದರೂ ಒತ್ತಾಯದಿಂದ ಆತನ ತಂದೆ ಅದನ್ನಲ್ಲಿ ತೂಗು ಹಾಕಿದ್ದರು. “ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು, ದಾರಿಯೊಂದು ಗೋಚರವಾಗುತ್ತದೆ” ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ.

🌻ಕೆಲವೇ ಕ್ಷಣಗಳಲ್ಲಿ ಪವಾಡವೋ ಎಂಬಂತೆ ಔಷಧ ತೆಗೆದುಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು ‘ಅಂಕಲ್ ಜೋರುಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು, ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲೀಗ ಕೊಡಲು ಹಣವಿಲ್ಲ’ ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ.

🌻ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು. ಮನುಜ ಶುದ್ಧಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು. ಸರ್ವಶಕ್ತನಾದ ಭಗವಂತನಲ್ಲಿ ಅನುದಿನ-ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ.

Leave a Comment

Your email address will not be published. Required fields are marked *