ಸಾಲಿಗ್ರಾಮ | Saligrama a Power Factory
[…]
ಸಾಲಿಗ್ರಾಮ | Saligrama a Power Factory Read More »
ಆಚರಣೆಗಳು, ಸಂಪ್ರದಾಯಗಳು ಮತ್ತು ಕುಟುಂಬದಲ್ಲಿ ನಡೆಯುವ ಪೂಜೆಗಳ ಅರ್ಥವನ್ನು ಸರಳವಾಗಿ ತಿಳಿಸುವ ಲೇಖನಗಳು.
ದೇವರ ಸನ್ನಿಧಿಗೆ ಹೋಗುವುದು ಕೇವಲ ದರ್ಶನಕ್ಕೆ ಅಲ್ಲ. ದೇವರ ದರ್ಶನದ ನಂತರ ದೇವಾಲಯ/ದೇವಸ್ಥಾನದ ಪ್ರಾಂಗಣದಲ್ಲಿ ಎಲ್ಲಾದರೂ ಯಾರಿಗೂ ತೊಂದರೆ ಆಗದಂತೆ ಕುಳಿತು ಸ್ವಲ್ಪ ಸಮಯ ದೈವ ಧ್ಯಾನದಲ್ಲಿ ಕಳೆಯಬೇಕು. ಅಲ್ಲಿನ ಧನಾತ್ಮಕ ಶಕ್ತಿಯನ್ನು ನಮ್ಮ ದೇಹದಲ್ಲಿ ತುಂಬಿಕೊಳ್ಳಬೇಕು. ಹೀಗೆ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಸ್ವಸ್ಥತೆ ಬರುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಯೋಚನೆಗಳೆಲ್ಲವೂ ಸಕ್ರಮವಾಗುತ್ತವೆ. ತೆಗೆದುಕೊಂಡ ಹಾಗೂ ತೆಗೆದುಕೊಳ್ಳಬೇಕಾದ ನಿರ್ಧಾರಗಳು ದೃಢವಾಗುತ್ತವೆ. ದೇವಸ್ಥಾನದ ಒಳಗಿನ ಸ್ಥಳ ಪ್ರಭಾವವು ಅಲ್ಲಿನ ಧನಾತ್ಮಕ ಕಂಪನಗಳು ನಮ್ಮ ದೇಹದೊಳಗೆ ಪ್ರವೇಶಿಸಿ ನಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ.
ದೇವಾಲಯದ ಆಚಾರ ಸಂಹಿತೆ | Rituals to be followed in temple Read More »
🌻ಈ ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪವೆ೦ದು ಸಹ ಕರೆಯುತ್ತಾರೆ. ಈ ದೀಪದ ಬೆಳಕಿನಲ್ಲಿ ಕಾಮಾಕ್ಷಿ ದೇವಿಯೂ ನೆಲೆಸಿರುವಳು. ಕಾಮಾಕ್ಷಿ ದೇವಿಯು ಸರ್ವ ದೇವತೆಗಳಿಗೆ ಶಕ್ತಿ ಕೊಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ಕಾಮಾಕ್ಷಿ ದೇವಸ್ಥಾನವನ್ನು ಬೇರೆ ದೇವಸ್ಥಾನಗಳಿಗಿಂತ ಬೆಳಗಿನ ಜಾವ ಬೇಗನೆ ತೆರೆಯುತ್ತಾರೆ. ಹಾಗೆಯೇ ರಾತ್ರಿಯ ಸಮಯದಲ್ಲಿ ಎಲ್ಲ ದೇವಸ್ಥಾನಗಳ ಬಾಗಿಲು ಮುಚ್ಚಿದ ನಂತರವೇ ಈ ಕಾಮಾಕ್ಷಿ ದೇವಿಯ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ದೇವಿಯ ಅವತಾರವಾದ ಈ ಕಾಮಾಕ್ಷಿ ದೀಪ ಬೆಳಗುವ ಮನೆ ಅಖಂಡ ಐಶ್ವರ್ಯದಿಂದ ಕೂಡಿರುತ್ತದೆ.
🌻ನಮ್ಮ ಹಿಂದೂ ಸಂಪ್ರದಾಯದಲ್ಲಿ ಚಿನ್ನದ ಆಭರಣಗಳನ್ನು ವಂಶ ಪರಂಪರೆಯಾಗಿ ಹೇಗೆ ಮುಂದಿನ ಪೀಳಿಗೆ ನೀಡುತ್ತಾರೋ. ಹಾಗೆಯೇ ಇದನ್ನೂ ಸಹ ಜಾಗ್ರತೆಯಿಂದ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಬಳುವಳಿಯಾಗಿ ಕೊಡುತ್ತಾರೆ. ಮನೆಯಲ್ಲಿ ವ್ರತಗಳು, ಗೃಹಪ್ರವೇಶ ಪೂಜೆಯನ್ನು ಮಾಡುವಾಗ ಅಖಂಡ ದೀಪವನ್ನು ಹಚ್ಚಬೇಕು ಎನ್ನುವವರು ಕಾಮಾಕ್ಷಿ ದೀಪವನ್ನು ಹೆಚ್ಚಾಗಿ ಬಳಸುತ್ತಾರೆ. ಹೀಗೆ ಪುರಾಣಗಳಲ್ಲಿ ವ್ರತಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಕಾಮಾಕ್ಷಿ ದೀಪಗಳನ್ನು ದೀಪಾರಾಧನೆಗೆ ಬಳಸಿದರೆ ಒಳ್ಳೆಯದು. ದೀಪಾರಾಧನೆ ಮಾಡುವಾಗ ದೀಪಕ್ಕೆ ಕುಂಕುಮವನ್ನು ಇಟ್ಟು, ಹೂವನ್ನು ಅರ್ಪಿಸಿ, ದೀಪವನ್ನು ಬೆಳಗಿಸಿ ನಂತರ ಮೊದಲು ದೀಪಕ್ಕೆ ಪೂಜೆ ಮಾಡಬೇಕು ನಂತರ ದೇವರ ಪೂಜೆ ಮಾಡುವುದು ನಮ್ಮ ಸಂಪ್ರದಾಯದ ರೂಢಿಯಲ್ಲಿದೆ .
🌻ಹಾಗೆಯೇ ಕಾಮಾಕ್ಷಿ ದೀಪವನ್ನು ಬಳಸುವಾಗ ಆ ದೀಪಕ್ಕೆ ಕುಂಕುಮ ಇಟ್ಟ ನಂತರ ಅದೇ ಕೈಯಿಂದ ದೇವರ ರೂಪಕ್ಕೂ ಕುಂಕುಮ ಇಟ್ಟು, ಸುತ್ತಲೂ ಹೂವಿನಿಂದ ಅಲಂಕಾರ ಮಾಡಿ ಆ ದೀಪವನ್ನು ನೆಲಕ್ಕೆ ತಾಕದಂತೆ ಒಂದು ತಾಮ್ರದ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಇರಿಸಬೇಕು. ಈ ದೀಪವನ್ನು ಎಳ್ಳೆಣ್ಣೆ ಅಥವಾ ಹಸುವಿನ ತಾಜಾ ತುಪ್ಪದಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು. ಕಾಮಾಕ್ಷಿ ದೀಪದ ಬತ್ತಿ ಹೇಗೆ ನಿಧಾನವಾಗಿ ಸುಡುತ್ತದೆಯೋ ಹಾಗೆಯೇ ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಸಹ ನಿಧಾನವಾಗಿ ತೊಲಗಿ ಆಚೆ ಹೋಗುತ್ತದೆ. ಯಾವಾಗಲೂ ದೀಪಾರಾಧನೆ ಮಾಡುವಾಗ ಎರಡು ಬತ್ತಿಗಳು ಸಾಮಾನ್ಯವಾಗಿ ಇರುವಂತೆ ನೋಡಿಕೊಳ್ಳಬೇಕು. ಕಾಮಾಕ್ಷಿ ದೀಪವನ್ನು ಯಾವಾಗಲೂ ಉತ್ತರ ಮತ್ತು ಪೂರ್ವ ದಿಕ್ಕನ್ನು ನೋಡುವಂತೆ ಇಡಬೇಕು. ದಕ್ಷಿಣ ದಿಕ್ಕಿನಲ್ಲಿ ಖಚಿತವಾಗಿ ದೀಪಾರಾಧನೆ ಮಾಡಬಾರದು.
🌻ಈ ದೀಪವನ್ನು ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ತೊಳೆಯಬಾರದು. ಪ್ರತಿದಿನ ಬೆಳಗಿನ ಜಾವ ಮತ್ತು ಸಾಯಂಕಾಲದ ಸಮಯದಲ್ಲಿ ಕಾಮಾಕ್ಷಿಯ ದೀಪದಿಂದ ದೀಪಾರಾಧನೆಯನ್ನು ಮನೆಯಲ್ಲಿ ಮಾಡಿದರೆ ಸಕಲ ರೀತಿಯಲ್ಲಿಯೂ ಒಳ್ಳೆಯದಾಗುವುದು. “ದೇವರ ದೀಪ” ಹಚ್ಚುವಾಗ ಯಾವಾಗಲು ಕುಳಿತು ಹಚ್ಚಬೇಕು. “ಮನೆಯಲ್ಲಿ ” ಬೆಣ್ಣೆ” ಕಾಯಿಸಿದ ತುಪ್ಪದಿಂದ ದೇವರಿಗೆ ದೀಪ ಹಚ್ಚಿದರೆ , ಆ ಮನೆಯಲ್ಲಿ ಅಭಿಷ್ಟ ಸಿದ್ಧಿಗಳು ಲಭಿಸುತ್ತವೆ. ಲಕ್ಷ್ಮೀಕಟಾಕ್ಷ ಎಂದೆಂದೂ ಇರುತ್ತದೆ
ನಾವು ದೇವಸ್ಥಾನಕ್ಕೆ ಭೇಟಿ ಕೊಡುತ್ತೇವೆ. ನಮಗೆ ಒಳ್ಳೆಯದು ಮಾಡು, ನಮ್ಮ ಮನೆಯಲ್ಲಿ ಶಾಂತಿ ಕೊಡು , ಮಕ್ಕಳು ಮರಿಗಳಿಗೆ ಆರೋಗ್ಯ, ಬುದ್ದಿ ಕೊಡು ಎಂದು ಕೇಳಲು ದೇವರ ದರ್ಶನ ಮಾಡುತ್ತೇವೆ. ದೇವಸ್ಥಾನಕ್ಕೆ ಹಣ್ಣು ಕಾಯಿ ತೆಗೆದುಕೊಂಡು ಹೋಗಿ ಪೂಜೆ ಮಾಡಿಸುತ್ತೇವೆ. ಕಾಯಿ ಎಂದರೆ ಅದು ತೆಂಗಿನಕಾಯಿ, ಹಣ್ಣು ಎಂದರೆ ಅದು ಬಾಳೆಹಣ್ಣು ಎಂದರ್ಥ. ನಿಮಗೆ ಮನೆಯಲ್ಲಿ ಹಣ್ಣು ಕಾಯಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗು ಎಂದರೆ ನೀವು ಮರು ಪ್ರಶ್ನಿಸದೆ ಬಾಳೆಹಣ್ಣು ಮತ್ತು ತೆಂಗಿನಕಾಯಿ ತೆಗೆದುಕೊಂಡು ಹೋಗೋಕೆ ಇದೇ ಕಾರಣ. ನಿಮಗೆ ಒಂದು ಸಂದೇಹ ಇರಬಹುದು ಹೂವಿನಲ್ಲಿ ಬಗೆಬಗೆಯ ರೀತಿಯ ಹೂವುಗಳನ್ನು ಪೂಜೆಗೆ ತೆಗೆದುಕೊಂಡು ಹೋಗುತ್ತೇವೆ. ಆದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಮಾತ್ರ ತೆಗೆದುಕೊಂಡು ಹೋಗ್ತೀವಲ್ಲ ಏಕೆ ಅಂತ ! ? ಅದಕ್ಕೆ ಉತ್ತರ ನಮ್ಮ ಹಿರಿಯರು ಯಾವುದೇ ಆಚಾರಗಳನ್ನು ಸುಮ್ಮನೆ ಮಾಡಿಲ್ಲ. ಅದಕ್ಕೆ ಒಂದು ಅರ್ಥವಿದೆ.
ಸರ್ಪ ದೋಷ ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಸರ್ಪ ದೋಷ ಇರುವ ವ್ಯಕ್ತಿ ಮಾಡುವ ಕೆಲಸದಲ್ಲಿ ಸಮಸ್ಯೆ, ಕೆಡಕಾಗುತ್ತಾ ಹೋಗುತ್ತದೆ. ನಿಮ್ಮ ಜಾತಕದಲ್ಲಿ ಸರ್ಪ ದೋಷವಿದ್ದರೆ ನೀವು 8 ಮತ್ತು 9 ಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಇದರಿಂದ ನಿಮಗೆ ಸಾಕಷ್ಟು ಪ್ರಯೋಜನವಾಗುತ್ತೆ.
ರುದ್ರಾಕ್ಷಿ: ಅರ್ಥ, ಸಂಪ್ರದಾಯ ಮತ್ತು ಜವಾಬ್ದಾರಿಯ ಬಳಕೆ Read More »