What are the terrible forms of Ashta Bhairava?
Index of Important Points
These are the Terrific forms of the Kala Bhairava mentioned in the Garuda Purana
- Asithaanga Bhairava.
- Ruru Bhairava.
- Chanda Bhairava.
- Krodha Bhairava.
- Unmattha Bhairava.
- Kapaala Bhairava.
- Bheeshana Bhairava.
- Samhaara Bhairava.
Reference: GP-C24
ಅಷ್ಟ ಭೈರವನ ಭಯಂಕರ ರೂಪಗಳು ಯಾವುವು?
- 1. ಅಸಿತಾಂಗ ಭೈರವ.
- 2. ರುರು ಭೈರವ.
- 3. ಚಂಡ ಭೈರವ.
- 4. ಕ್ರೋಧ ಭೈರವ.
- 5. ಉನ್ಮತ್ತ ಭೈರವ.
- 6. ಕಪಾಲ ಭೈರವ.
- 7. ಭೀಷಣ ಭೈರವ.
- 8. ಸಂಹಾರ ಭೈರವ.
ಕಾಲಭೈರವ ಜಯಂತಿಯಂದು ಈ ಪರಿಹಾರದಿಂದ ಶತ್ರುಪೀಡೆ ನಿವಾರಣೆಯಾಗುವುದು
ಕಾಲಭೈರವ ಜಯಂತಿಯಂದು ಯಾರು ಶತ್ರುಗಳ ಪೀಡಿಯಿಂದ ಬಹಳಷ್ಟು ನೊಂದಿದ್ದಿರೊ ಅವರು ಈ ಅನುಷ್ಠಾನವನ್ನು ಸ್ವರಕ್ಷಣೆಗೆ ಮತ್ತು ದುಷ್ಟರ ಭಕ್ಷಣೆಗೆ ಅಗತ್ಯವಾಗಿ ಮಾಡಿ
ಪ್ರಾಥ ಸೂರ್ಯೋದಯ ಪೂರ್ವದಲ್ಲಿ ನಿತ್ಯಕ್ರಿಯಾದಿಗಳಿಂದ ನಿವೃತ್ತರಾಗಿ ಒಂದು ಲೋಹದ ಕಲಶದಲ್ಲಿ ನೀರನ್ನು ತುಂಬಿಕೊಂಡು ಹತ್ತಿರದ ಬೋರೆ ಗಿಡದ ಹತ್ತಿರ ಇಟ್ಟು ಬನ್ನಿ.
ನಂತರ ಭೈರವನ ದೇವಾಲಯಕ್ಕೆ ಹೋಗಿ ೫ ಮುಖದ ಸಾಸಿವೆ ಎಣ್ಣೆಯ ದೀಪವನ್ನು ಪ್ರಜ್ವಲಿಸಿ ಭೈರವ ಅಷ್ಟೊತ್ತರವನ್ನು 3 ಬಾರಿ ಪಠಿಸಿ ಭೈರವನಿಗೆ 9 ವಡೆ 8 ಬಾದಾಮಿ 18 ಕರ್ಜೂರಿಯನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿ 9 ಪ್ರದಕ್ಷಿಣೆ ಹಾಕಿ.
ಮರಳುವಾಗ ಪುರೋಹಿತರ ಕೈಯಾರೆ ಸ್ವಲ್ಪ ಕುಂಕುಮವನ್ನೊ ಅಥವಾ ಅರಿಶಿನ ,ಭಸ್ಮ ಈ ಮೂರರಲ್ಲಿ ಯಾವುದು ಲಭ್ಯವೊ ಅದನ್ನು ತೆಗೆದುಕೊಂಡು ಬನ್ನಿ.
ನಂತರ ಸೂರ್ಯಾಸ್ತದ ಸಮಯ ಬೋರೆ ಗಿಡದ ಹತ್ತಿರದಿಂದ ಜಲವನ್ನು ತಂದು ಜಾಲಿಮರ ( ಉದ್ದನೆಯ ಮುಳ್ಳು ಇರುವ ಮರ ) ಅದರ ಬುಡದ ಕೇಳಗೆ ನೀರು ಹಾಕುತ್ತಾ ಶತ್ರುವಿನ ಹೆಸರು 3 ಬಾರಿ ಸ್ಮರಿಸಿ ನಂತರ 38 ಅಕ್ಕಿ (ತುಂಡಾಗದೆ ಅಖಂಡವಾಗಿರುವ) ಮತ್ತು 40 ಉದ್ದನ್ನು ಅದರ ಪಕ್ಕಕ್ಕೆ ಹೋಳಿ ಅದಕ್ಕೆ ಮಣ್ಣು ಹಾಕಿ ಮೇಲೆ ಲಿಂಬೆ ಹಣ್ಣನ್ನು ಹಿಂಡಬೇಕು.
ಇದರಿಂದ ತ್ವರಿತದಲ್ಲಿ ಶತ್ರುವಿನಿಂದ ಆಗುವ ಸಮಸ್ಯೆಗಳು ಶಾಂತವಾಗುವವು.