ವಾರಣಾಸಿಯಲ್ಲಿರುವ ಸಂಕಟ್ ಮೋಚನ್ ಹನುಮಾನ್ ದೇವಾಲಯದ ಮಹತ್ವವೇನು?
Index of Important Points
ಜಾತಕದಲ್ಲಿ ಶನಿಯಿಂದ ಪೀಡಿತ ವ್ಯಕ್ತಿಗಳು ವೈದಿಕ ಜ್ಯೋತಿಷ್ಯ
ಪರಿಹಾರವಾಗಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ತುಳಸಿ ದಾಸರು ವಾರಣಾಸಿಯಲ್ಲಿ ಹನುಮಂತನಿಗೆ ಸಮರ್ಪಿತವಾದ
ಸಂಕಟ್ ಮೋಚನ್ ಹನುಮಾನ್ ದೇವಾಲಯದ ಸ್ಥಾಪಕರಾಗಿದ್ದಾರೆ.
ತುಳಸಿದಾಸರು ಹನುಮಂತನ ದರ್ಶನ ಪಡೆದ ಸ್ಥಳದಲ್ಲಿಯೇ
ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ
🍁 ದುಷ್ಟ ಶಿಕ್ಷಣ ಶಿಷ್ಟ ರಕ್ಷಣಕ್ಕಾಗಿ ತ್ರೇತಾಯುಗದಲ್ಲಿ ರಾಮಾವತಾರ. ದಶರಥ ಪುತ್ರ ಜಾನಕೀಕಾಂತ ರಾಮ ವಾನರಸೇನೆಯ ನೆರವಿನಿಂದ ಲಂಕೆಯ ದೊರೆ ದುಷ್ಟ ರಾವಣನನ್ನು ಸಂಹರಿಸಿದ, ಧರ್ಮಕ್ಕೆ ಜಯವಾಯ್ತು. ವನವಾಸ ಮುಗಿಸಿ ಸೀತೆಯೊಂದಿಗೆ ಅಯೋಧ್ಯೆಗೆ ಮರಳಿದ ನಂತರ ವಿದ್ಯುಕ್ತವಾಗಿ ಶ್ರೀರಾಮ ಪಟ್ಟಾಭಿಷೇಕ ನಡೆಯಿತು. ಆ ಸಂದರ್ಭದಲ್ಲಿ ಎಲ್ಲೆಡೆ ಸಂತೋಷ – ಸಂಭ್ರಮ.
🍁 ಶ್ರೀರಾಮ ಸೀತೆಯರು ಯಾಗ ಮಾಡಿದರು, ದಾನ ನೀಡಿದರು. ಆಪ್ತೇಷ್ಟರಿಗೆ ಧನ, ಕನಕ, ಪೀತಾಂಬರ, ಆಭರಣ ಹೀಗೆ ಬಹು ಅಮೂಲ್ಯ ವಸ್ತುಗಳನ್ನು ಹಂಚಿದರು. ರಾಮ – ಸೀತೆಯರಿಂದ ಕಾಣಿಕೆ ಸ್ವೀಕರಿಸಿ ಎಲ್ಲರಿಗೂ ಆನಂದ. ಕಡೆಗೆ ಹನುಮಂತನ ಸರದಿ. ಆತ ರಾಮ – ಸೀತೆಯರ ಮೆಚ್ಚಿನ ಬಂಟ. ಹಾಗಾಗಿ ಎಲ್ಲರಿಗಿಂತ ವಿಶೇಷ ಉಡುಗೊರೆ ಆತನಿಗೆ ಸಲ್ಲಬೇಡವೇ? ಯೋಚಿಸಿ. ರಾಮ ತನ್ನ ಕೊರಳಿನಲ್ಲಿ ಧರಿಸಿದ್ದ ಅತ್ಯಪೂರ್ವ ಮುತ್ತಿನ ಸರವನ್ನು ಸೀತೆಗೆ ಕೊಟ್ಟ. ಸೀತೆಯಿಂದ ಹನುಮಂತ ಬಲು ಭಕ್ತಿಪೂರ್ವಕವಾಗಿ ಅದನ್ನು ಸ್ವೀಕರಿಸಿದ.
🍁 ಸ್ವೀಕರಿಸಿದ್ದೇನೋ ಸರಿ, ಆದರೆ ಮಾಡಿದ್ದೇನು? ಒಂದೆಡೆ ಕುಳಿತು ಸರ ಹರಿದು ಒಂದೊಂದೇ ಮುತ್ತನ್ನು ಬಾಯಿಂದ ಕಚ್ಚಿ ಒಡೆದು ಒಳಗೆ ನೋಡಿ ಬಿಸಾಡಲಾರಂಭಿಸಿದ. ಅಷ್ಟು ಬೆಲೆಬಾಳುವ ಸರ ಹೀಗೆ ಮಾಡಿದರೆ…? ಸಭಿಕರಿಗೆ ಗಾಬರಿಯಾದರೆ ರಾಮ – ಸೀತೆಯರಿಗೆ ಆಶ್ಚರ್ಯ. ಜನರೆಲ್ಲಾ ‘ಎಂಥಾ ರಾಮಭಕ್ತ ಆದರೂ ಹನುಮಂತ ಮೂಲತಃ ಕಪಿಯೇ ಅಲ್ಲವೇ? ಆ ಮಂಗಬುದ್ಧಿ ಬಿಡಲು ಸಾಧ್ಯವಿಲ್ಲ. ಮುತ್ತು – ಚಿಪ್ಪು ಎರಡೂ ಒಂದೇ ಮಂಗಕ್ಕೆ. ಅಮೂಲ್ಯ ಸರ ಕೊಟ್ಟಿದ್ದೇ ತಪ್ಪು’ ಎಂದು ಮಾತಾಡಿಕೊಂಡರು. ಏಕಾಗ್ರತೆಯಿಂದ ತನ್ನ ಕೆಲಸದಲ್ಲಿ ನಿರತನಾಗಿದ್ದ ಹನುಮಂತನನ್ನು ಸೀತೆ ಕುತೂಹಲದಿಂದ ಹೀಗೆ ಮಾಡಲು ಕಾರಣ ವಿಚಾರಿಸಿದಳು.
🍁 ಹನುಮಂತ ‘ರಾಮ ಧರಿಸಿದ ಸರ ಅಮೂಲ್ಯವಾದದ್ದು. ಹಾಗಾಗಿ ಮುತ್ತಿನ ಒಳಗಡೆ ರಾಮ ಇದ್ದಾನೆಯೇ ಎಂದು ಪರೀಕ್ಷಿಸುತ್ತಿದ್ದೇನೆ’ ಎಂದ. ಹನುಮಂತನ ಮಾತು ಕೇಳಿ ಎಲ್ಲರಿಗೂ ಆತನ ದಡ್ಡತನದ ಬಗ್ಗೆ ನಗು – ಕನಿಕರ. ಸೀತೆಯೂ ನಗುತ್ತಲೇ ‘ಅಯ್ಯೋ! ರಾಮನೇನು ಎಲ್ಲಾ ಕಡೆ ಇದ್ದಾನೆಯೇ? ಈ ಮುತ್ತಿನ ಒಳಗೆ ಇರಲು ಸಾಧ್ಯವೇ?’ ಎಂದು ಪ್ರಶ್ನಿಸಿದಳು. ಹನುಮಂತ ‘ಯಾಕಿಲ್ಲ! ರಾಮ ಎಲ್ಲೆಲ್ಲೂ ಇದ್ದಾನೆ. ನನ್ನೊಳಗೆ ಖಂಡಿತಾ ಇದ್ದಾನೆ.’ಎಂದವನೇ ತನ್ನ ಎದೆಯನ್ನು ಬಗೆದು ತೋರಿಸೇಬಿಟ್ಟ. ಆತ ಹೇಳಿದ್ದು ಸತ್ಯವೇ. ಹನುಮಂತನ ಹೃದಯದಲ್ಲಿ ಇದ್ದದ್ದು ಶ್ರೀರಾಮ! ಜನರೆಲ್ಲಾ ಬೆಕ್ಕಸಬೆರಗಾದರೆ ಹನುಮಂತನ ದೃಢಭಕ್ತಿಗೆ ಮೆಚ್ಚಿ ರಾಮ ಆತನನ್ನು ಬಿಗಿದಪ್ಪಿ ಪ್ರೀತಿಯಿಂದ ಆಶೀರ್ವದಿಸಿದ.
🌷 🌷ಹನುಮಂತನ ಜನ್ಮ 🌷 🌷
🌸ಯತ್ರ ಯತ್ರ ರಘುನಾಥ ಕೀರ್ತನಂ
🌸ತತ್ರ ತತ್ರ ಕೃತಮಸ್ತಕಾಂಜಲಿಮ್ l
🌸ಬಾಷ್ಪವಾರಿ ಪರಿಪೂರ್ಣ ಲೋಚನಂ
🌸ಮಾರುತಿಂ ನಮತ ರಾಕ್ಷಸಾಂತಕಮ್ ll
🌷 ಶ್ರೀರಾಮ ಜಯರಾಮ ಜಯ ಜಯ ರಾಮ”
🌻ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ, ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥ್ಯಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ. ಆದ್ದರಿಂದ ವೇದಿಕೆಯಲ್ಲಿ ಒಂದು ಮಣೆ ಹಾಕಿ ಅವನನ್ನು ಆಹ್ವಾನಿಸುತ್ತಾರೆ. ಹನುಮಂತ ಪರಶಿವನ ೧೧ನೇ ಅವತಾರ. ರಾಮನ ಅವತಾರದಲ್ಲಿದ್ದ ಶ್ರೀ ವಿಷ್ಣುವಿನ ಸೇವೆ ಮಾಡುವುದಕ್ಕಾಗಿ ಶಿವ ದೇವರು ಹನುಮಂತ ಅವತಾರವನ್ನು ತಾಳಿದರೆಂದು ಹೇಳುತ್ತಾರೆ.
🌷ಏಕಾದಶ ರುದ್ರನ ವಿವಿಧ ರೂಪಗಳು
- 🌻ಪ್ರತಾಪ ಮಾರುತಿ : ಒಂದು ಕೈಯಲ್ಲಿ ದ್ರೋಣಗಿರಿ ಪರ್ವತ ಹಾಗೂ ಇನ್ನೊಂದು ಕೈಯಲ್ಲಿ ಗದೆಯನ್ನು ಹಿಡಿದಿರುವ ರೂಪವಿರುತ್ತದೆ. ಇದುಆಂಜನೇಯನ ಶಕ್ತಿಯನ್ನು ದರ್ಶಿಸುತ್ತದೆ.
- 🌻ದಾಸಮಾರುತಿ : ಶ್ರೀರಾಮನ ಎದುರು ಕೈಮುಗಿದು ನಿಂತಿರುವ, ತಲೆಬಾಗಿರುವ ಹಾಗೂ ನೆಲದ ಮೇಲೆ ಬಾಲವನ್ನು ಇಟ್ಟಿರುವ ರೂಪವಿರುತ್ತದೆ. ಇದರಿಂದ ಆಂಜನೇಯನಲ್ಲಿಎಷ್ಟು ವಿನಮ್ರತೆ ಇದೆ ಎಂಬುದನ್ನು ಕಲಿಯಬಹುದು.
- 🌻ವೀರಮಾರುತಿ :ಯಾವಾಗಲೂ ಹೋರಾಡುವ ಸ್ಥಿತಿಯಲ್ಲಿ ನಿಂತಿರುತ್ತಾನೆ. ನಾವೂ ಇವನಂತೆ ಅನ್ಯಾಯದ ವಿರುದ್ಧ ಹೋರಾಡಬೇಕು. ನಾವು ಹನುಮಾನ ಜಯಂತಿಯ ಪ್ರಯುಕ್ತ ಆಂಜನೇಯನಂತೆ ಅನ್ಯಾಯದ ವಿರುದ್ಧಹೋರಾಡಲುನಿಶ್ಚಯಿಸೋಣ.
- 🌻ಪಂಚಮುಖಿ ಮಾರುತಿ : ನಾವು ಬಹಳಷ್ಟು ಕಡೆಗಳಲ್ಲಿ ಪಂಚಮುಖಿ ಮಾರುತಿಯನ್ನು ನೋಡುತ್ತೇವೆ. ಈ ಮೂರ್ತಿಯಲ್ಲಿ ಗರುಢ, ವರಾಹ, ಹಯಗ್ರೀವ, ಸಿಂಹ ಹಾಗೂ ಕಪಿಯ ಮುಖಗಳಿರುತ್ತದೆ. ಪಂಚಮುಖಿ ಎಂದರೆ ಐದು ದಿಕ್ಕುಗಳ ರಕ್ಷಕ. ಆಂಜನೇಯನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಊರ್ಧ್ವ ಈ ಐದು ದಿಕ್ಕುಗಳನ್ನು ರಕ್ಷಿಸುತ್ತಾನೆ.
ಪಂಚಮುಖಿ ಹನುಮಂತ | ಪಂಚಮುಖಿ ಮಾರುತಿ | ಪಂಚಮುಖಿ ಆಂಜನೇಯ
🌹ಪಂಚಮುಖಿ ಮಾರುತಿ ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದ ಕಥಾ ಸಾರಾಂಶ:🌹
🌹ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ರಾವಣ ಇವರ ನಡುವೆ ಯುದ್ಧವಾಯಿತು.
ಆಗ ನಿರ್ಮಾಣವಾಗಿದ್ದ ರಾಕ್ಷಸರು ಪಾತಾಳದಿಂದ ಸೂಕ್ಷ್ಮದಿಂದ ಬಂದಿದ್ದಾರೆ.
ಅದರಿಂದಾಗಿ ಈ ಗಲಭೆಗಳು ಆದವು.
ತ್ರೇತಾಯುಗದಲ್ಲಿ ಶ್ರೀರಾಮ-ರಾವಣನ ಯುದ್ಧದ ಸಮಯದಲ್ಲಿ ಅಹಿರಾವಣ ಮತ್ತು ಮಹಿರಾವಣ ಇವರಿಬ್ಬರು ರಾಕ್ಷಸರು ಪಾತಾಳದಿಂದ ನಿರ್ಮಾಣವಾದರು.
ಆಗ ಮಾರುತಿರಾಯನು ಅವರನ್ನು ಕೊಂದನು.
ಅದರಿಂದ ಮಾರುತಿರಾಯನು ರಾಕ್ಷಸರ ಉದ್ಧಾರವನ್ನೇ ಮಾಡಿದನು.
ನಂತರ ಪಾತಾಳದಲ್ಲಿ ಆ ರಾಕ್ಷಸರಿಗಿಂತ ಭಯಂಕರ ದೊಡ್ಡ ರಾಕ್ಷಸರು ನಿರ್ಮಾಣವಾದರು. ಈ ರಾಕ್ಷಸರು ಮಾರುತಿರಾಯನಿಂದ ಸಾಯುತ್ತಿರಲಿಲ್ಲ.
ಅವರನ್ನು ನಾಶಮಾಡಲು ಮಾರುತಿರಾಯನು ಪಂಚಮುಖಿ ಹನುಮಾನನ ಅವತಾರವನ್ನು ತೆಗೆದುಕೊಂಡನು.
ಮಹಿರಾವಣನನ್ನು ವಧಿಸಲು ಮಾರುತಿ ಪಾತಾಳಕ್ಕೆ ಹೋದನು.
ಅಲ್ಲಿನ ಐದು ದೀಪಗಳನ್ನು (ಐದು ರಾಕ್ಷಸರ) ಒಂದೇ ಸಮಯದಲ್ಲಿ ವಿನಾಶ ಮಾಡದೇ (ಅಂದರೆ ಆ ಐದು ದೀಪಗಳನ್ನು ಆರಿಸದೆ) ಮಹಿರಾವಣನ ಮರಣವಿಲ್ಲವೆಂದು ಹನುಮಂತನಿಗೆ ಅರಿವಾಯಿತು.
ಅದರಿಂದಾಗಿ ಆ ಐದು ದೀಪಗಳನ್ನು ಒಂದೇ ಸಮಯದಲ್ಲಿ ನಾಶ ಮಾಡದೇ ಪರ್ಯಾಯವಿರಲಿಲ್ಲ. ಆ ಐದು ರಾಕ್ಷಸರನ್ನು ಒಂದೇ ಸಮಯದಲ್ಲಿ ಕೊಲ್ಲಲು ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದನು.
ಮಾರುತಿಯ ಪಂಚಮುಖಗಳು ಮತ್ತು ಅವುಗಳ ಕಾರ್ಯ.
- ಹನುಮಂತ:
- ನರಸಿಂಹ:
- ಗರುಡ:
- ವರಾಹ:
- ಹಯಗ್ರೀವ:
ಮಾರುತಿಯ ಐದು ಮುಖಗಳು ಬೇರೆ ಬೇರೆ ಶಕ್ತಿ ಮತ್ತು ಸಾಮರ್ಥ್ಯಗಳ ಪ್ರತೀಕಗಳಾಗಿವೆ. ಈ ಐದು ಮುಖಗಳು ಮತ್ತು ಅವುಗಳ ಕಾರ್ಯಗಳು ಮುಂದಿನಂತಿವೆ.
ಹನುಮಂತ: ಇವನ ಮುಖವು ಪೂರ್ವದೆಡೆಗೆ ಇರುತ್ತದೆ. ಮನಸ್ಸಿನಲ್ಲಿ ಸಾತ್ತ್ವಿಕತೆ ಮತ್ತು ಪವಿತ್ರತೆಯನ್ನು ನಿರ್ಮಿಸುವುದರೊಂದಿಗೆ ಯಶಸ್ಸನ್ನು ನೀಡುವುದೇ ಈ ಮುಖದ ಕಾರ್ಯವಾಗಿದೆ.
ನರಸಿಂಹ: ಈ ಮುಖವು ದಕ್ಷಿಣದತ್ತ ಇದ್ದು ನಿರ್ಭಯತೆ ಮತ್ತು ಸಂಕಟಗಳನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಸೂಚಿಸುತ್ತದೆ. ಭೂತಪ್ರೇತ ಸಂಬಂಧಬಾಧೆ ಮತ್ತು ಶತ್ರು ಇವುಗಳ ನಿವಾರಣೆ ಮಾಡುವುದು, ಈ ಮುಖದ ಕಾರ್ಯವಾಗಿದೆ.
ಗರುಡ: ಇದು ಪಶ್ಚಿಮ ದಿಕ್ಕಿಗಿದ್ದು ಜಾದುಮಾಟ, ಮಂತ್ರ-ತಂತ್ರ, ಪಿಶಾಚಬಾಧೆ, ಭೂತಬಾಧೆ, ವಿಷಬಾಧೆ ಇವುಗಳಿಂದ ಸಂರಕ್ಷಣೆ ಮಾಡುತ್ತದೆ. ಕೋಟಿ ಸೂರ್ಯಗಳ ತೇಜದಂತೆ ಈ ಮುಖದ ತೇಜವಿದೆ.
ವರಾಹ: ಇದು ಉತ್ತರ ದಿಕ್ಕಿನಲ್ಲಿದ್ದು ಇದರ ಕಾರ್ಯವು ಮುಖ್ಯವಾಗಿ ಪ್ರಗತಿ, ಧನಸಂಪತ್ತು ಮತ್ತು ಸುಖೋಪಭೋಗವನ್ನು ನೀಡುವುದು, ಪುತ್ರಪೌತ್ರಾದಿಗಳ ವೃದ್ಧಿ ಮಾಡುವುದಿರುತ್ತದೆ. ಲಕ್ಷ್ಮಣನಿಗೆ ಶಕ್ತಿ ಬೇಕಾಗಿದ್ದಾಗ ಈ ಮುಖವು ಅವನಿಗೆ ಜೀವನದಾನ ನೀಡಿತು ಮತ್ತು ಲಂಕೆಯನ್ನು ದಹಿಸಿತ್ತು.
ಹಯಗ್ರೀವ: ಈ ಮುಖವು ಆಕಾಶದೆಡೆಗೆ ಇರುತ್ತದೆ. ಸ್ವಲ್ಪಮಟ್ಟಿಗೆ ಡೊಂಕಾದ ಅವಸ್ಥೆಯಲ್ಲಿರುವ ಈ ಮುಖವು ಹನುಮಾನನ ಮುಖದ ಮೇಲಿನ ಬದಿಗೆ ತೋರಿಸಲಾಗಿದೆ. ಈ ಮುಖದ ಸಂಬಂಧವು ಜ್ಞಾನ ಮತ್ತು ಸಂತತಿ ಈ ಎರಡು ಸಂಗತಿಗಳೊಂದಿಗೆ ಬರುತ್ತದೆ.
ಐದು ದೀಪಗಳಲ್ಲಿ ಐದನೇ ಅಸುರಾಸುರ ರಾಕ್ಷಸ, ಪಂಚಮುಖಿ ಮಾರುತಿಯ ಪಾದದ ಕೆಳಗಡೆಯಲ್ಲಿರುವ ರಾಕ್ಷಸನಾಗಿದ್ದಾನೆ.
ಪಂಚಮುಖಿ ಮಾರುತಿಯು ಒಂದರ್ಥದಲ್ಲಿ ಮಾನವೀ ಜೀವನದ ಎಲ್ಲ ಅಂಗಗಳ ವಿಕಾಸ ಮಾಡಿಸಿ ತರುವುದಕ್ಕಾಗಿ ಮಹತ್ವ ಪೂರ್ಣ ಸಾಧನವಾಗಿದೆ.
ನೀವು ವಿಪರೀತ ಕಷ್ಟದಲ್ಲಿದ್ದರೆ, ಸಮಸ್ಯೆಗೆ ಪರಿಹಾರ ಹುಡುಕಾಡುತ್ತಿದ್ದರೆ, ಇದನ್ನು ಮಾಡಿ
ಹಣಕಾಸಿನ ಸಮಸ್ಯೆಗೆ ಪರಿಹಾರ
ವಿಪರೀತ ಕಷ್ಟವಿದ್ದರೆ ಆಂಜನೇಯ ಸ್ವಾಮಿಗೆ ಈ ವಸ್ತುಗಳನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗುತ್ತದೆ !!!
ಇನ್ನು ಜೀವನದಲ್ಲಿ ಕಷ್ಟಗಳು ಇದ್ದರೆ,ಶ್ರೀ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ಹರಕೆ ಮಾಡಿಕೊಂಡರೆ ,ಜೀವನದಲ್ಲಿ ಇರುವಂತಹ ಇಂತಹ ಕಷ್ಟಗಳುಇದು ಯಾವ ರೀತಿಯ ಕಷ್ಟವೇ ಆದರೂ ಸರಿ ಆಂಜನೇಯಸ್ವಾಮಿ ಕೃಪೆಯಿಂದ ಎಲ್ಲಾ ಕಷ್ಟಗಳು ಜೀವನದಲ್ಲಿ ಪರಿಹಾರವಾಗುತ್ತದೆ .
ಎಲ್ಲಾ ಸಂಕಷ್ಟಗಳು ದೂರವಾಗುವುದು ಖಚಿತ. ಸಾಕ್ಷಾತ್ ಶ್ರೀರಾಮ ಭಕ್ತ ಆಂಜನೇಯನ ಮಹಿಮೆಗಳು ಅಪಾರ. ನಂಬಿ ಬಂದ ಭಕ್ತರನ್ನು ಆಂಜನೇಯ ಎಂದಿಗೂ ಕೈ ಬಿಡುವುದಿಲ್ಲ.
ಈ ರೀತಿ ಶಕ್ತಿಶಾಲಿಯಾದ ಆಂಜನೇಯನಿಗೆ ಯಾವ ರೀತಿಯಾದ ಹರಕೆಯನ್ನು ಹೊತ್ತುಕೊಳ್ಳಬೇಕು, ಆ ಮಾಹಿತಿಯನ್ನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ.
ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿರುತ್ತದೆ. ಸಮಸ್ಯೆಗಳು ಇದ್ದರೆ ಜೀವನ,ಆಗ ಜೀವನಕ್ಕೆ ಒಂದು ಅರ್ಥ ಬರುತ್ತದೆ.
ಆದರೆ ಸಮಸ್ಯೆಗಳು ವಿಪರೀತವಾದಾಗ ದೇವರ ಮೋರೆಯನ್ನು ಹೋಗುವುದು ಬಹಳ ಒಳ್ಳೆಯದು. ದೇವರಿಗೆ ಕೆಲವರು ಹರಕೆಯನ್ನು ಮಾಡಿಕೊಂಡು ಕೆಲಸವಾದ ನಂತರ ಹರಕೆಗಳನ್ನು ತೀರಿಸುವ ಪದ್ಧತಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ಅದೇ ರೀತಿಯಾಗಿ ನೀವೇನು ಮಾಡಬೇಕು ಅಂದರೆ, ನಿಮಗೆ ಏನಾದರೂ ಸಂಕಷ್ಟಗಳು ಇದ್ದರೆ ಅಂದರೆ ಹಣಕಾಸಿನ ಸಮಸ್ಯೆ, ಎಷ್ಟೋ ಜನರ ಜೀವನದಲ್ಲಿ ಹಣಕಾಸಿನ ಸಮಸ್ಯೆ ಇರುತ್ತದೆ. ಹಣಕಾಸಿನ ಸಮಸ್ಯೆ ಹೋಗಬೇಕು, ಆಂಜನೇಯ ಸ್ವಾಮಿಯ ಅನುಗ್ರಹ ಆಗಬೇಕೆಂದರೆ.
ನೀವು ತಪ್ಪದೇ ಆಂಜನೇಯಸ್ವಾಮಿಗೆ ಉದ್ದಿನವಡೆಯ ಹಾರವನ್ನು ಹಾಕಿಸುತ್ತೇನೆ ಎಂದು ಹರಕೆಯನ್ನು ಹೊತ್ತುಕೊಂಡರೆ ಬಹಳ ಒಳ್ಳೆಯದು. ಈ ರೀತಿ ಹರಕೆಯನ್ನು ಹೊತ್ತುಕೊಂಡರೆ ಕೆಲವೇ ವಾರಗಳಲ್ಲಿ ಯಶಸ್ಸನ್ನು ಕಾಣುತ್ತೀರಾ.
ಮುಖ್ಯವಾಗಿ ಹಣಕಾಸಿನ ಸಮಸ್ಯೆ ಮತ್ತು ಸಾಲದ ಸಮಸ್ಯೆ ಇರುವವರು ಈ ರೀತಿಯ ಹರಕೆಯನ್ನು ಹೊತ್ತುಕೊಳ್ಳಬೇಕು. ಮನೆಯಲ್ಲಿ ಸುಖ ಶಾಂತಿ ಇರಬೇಕು ಮತ್ತು ಹಣಕಾಸಿನ ಸಮಸ್ಯೆ ಆದಷ್ಟು ಬೇಗ ನಿವಾರಣೆಯಾಗಬೇಕು ಎನ್ನುವವರು ಈ ರೀತಿಯ ಉದ್ದಿನವಡೆಯ ಹಾರವನ್ನು ಹಾಕುತ್ತೇನೆ ಹರಕೆಯನ್ನು ಇಟ್ಟುಕೊಂಡರೆ ಕೆಲವೇ ಇದರಿಂದ ಮೂರು ವಾರಗಳಲ್ಲಿ ನಿಖರವಾದ ಫಲಿತಾಂಶ ದೊರಕುತ್ತದೆ ಸ್ನೇಹಿತರೆ.
ಮೊದಲಿಗೆ ನೀವೇನು ಮಾಡಬೇಕು ಎಂದರೆ ಅರ್ಚಕರಲ್ಲಿ ಒಂದು ವಿನಂತಿಯನ್ನು ಮಾಡಬೇಕು. ಇದು ಒಂದು ಸಂಕಲ್ಪವನ್ನು ಮಾಡಿಸಬೇಕು. ಸಂಕಲ್ಪ ಎನ್ನುವುದು ಬಹಳ ಮುಖ್ಯ.ಸಂಕಲ್ಪ ಮಾಡದೇ ಹರಕೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಅದು ಯಶಸ್ಸನ್ನು ಕೂಡ ಕೊಡುವುದಿಲ್ಲ.
ಅದು ಹರಕೆ ಕೂಡ ನೆರವೇರುವುದಿಲ್ಲ. ಆಂಜನೇಯಸ್ವಾಮಿ ಹತ್ತಿರ ಹೋಗಿ ಸಂಕಲ್ಪವನ್ನು ಮಾಡಿಕೊಂಡು ನಂತರ ಹರಕೆಯನ್ನು ಹೊತ್ತುಕೊಳ್ಳಬೇಕು. ಮೊದಲು ಅರ್ಚಕರ ಹತ್ತಿರ ಎಲ್ಲ ವಿಚಾರವನ್ನು ಮಾಡಿಕೊಳ್ಳಬೇಕು
ಯಾಕೆಂದರೆ ಕೆಲವು ದೇವಸ್ಥಾನಗಳಲ್ಲಿ ಉದ್ದಿನವಡೆಯ ಹಾರವನ್ನು ಅವರೇ ತಯಾರು ಮಾಡಿಕೊಡುತ್ತಾರೆ. ಆದರೆ ಕೆಲವೊಂದು ದೇವಸ್ಥಾನಗಳಲ್ಲಿ ವಡೆಯನ್ನು ಹೊರಗಡೆಯಿಂದ ಅಥವಾ ತಯಾರು ಮಾಡಿಕೊಂಡು ತರಬೇಕಾಗುತ್ತದೆ.
ಅದಕ್ಕಾಗಿ ಅರ್ಚಕರ ಹತ್ತಿರ ಒಂದು ಬಾರಿ ವಿಚಾರ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ನೀವು ಆದಷ್ಟು ಬೇಗ ಹೋಗಿ ಸಂಕಲ್ಪವನ್ನು ಮಾಡಿಕೊಳ್ಳಬೇಕು ಅದರಲ್ಲಿ ಶನಿವಾರ ಸಂಕಲ್ಪ ಮಾಡಿಕೊಂಡರೆ ತುಂಬಾನೇ ಒಳ್ಳೆಯದಾಗುತ್ತದೆ.
ಮಂಗಳವಾರ ದಿನ ಕೂಡ ಸಂಕಲ್ಪವನ್ನು ಮಾಡಿಕೊಳ್ಳಬಹುದು. ಹರಕೆ ಹೊತ್ತ ನಂತರ ಕೆಲವೇ ವಾರಗಳಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಸಂಕಷ್ಟಗಳು ದೂರವಾಗುತ್ತದೆ ಅದನ್ನು ನೀವು ನೋಡಬಹುದು.
ಸಂಕಷ್ಟಗಳು ದೂರವಾದ ನಂತರ ನಿಮ್ಮ ಹರಕೆಯನ್ನು ಆದಷ್ಟು ಬೇಗ ತೀರಿಸಬೇಕು. ಮುಖ್ಯವಾದ ವಿಷಯ ಏನೆಂದರೆ ಆಂಜನೇಯನನ್ನು ಒಲಿಸಿಕೊಳ್ಳಬೇಕೆಂದರೆ ಶ್ರೀರಾಮನ ಪಾದವನ್ನು ಹಿಡಿದುಕೊಳ್ಳಬೇಕು. ಇದು ಹೇಗೆ ಎಂದರೆ ಶ್ರೀರಾಮ ರಾಮವೆಂದು ಶ್ರೀರಾಮನ ಜಪವನ್ನು ಮಾಡಬೇಕು.
ಹನುಮಾನ್ ಚಾಲೀಸಾ ಕುರಿತಾಗಿರುವ ಆಶ್ಚರ್ಯಕರವಾದ ಸಂಗತಿಗಳು
- 🌷ತುಳಸೀದಾಸರು ಬರೆದ ಹನುಮಾನ್ ಚಾಲೀಸವನ್ನು ನಿತ್ಯ ಪಠಿಸಿದರೆ ಹಲವು ಸಮಸ್ಯೆಗಳಿಂದ ಆಂಜನೇಯನು ಮುಕ್ತಿ ನೀಡುತ್ತಾನೆ ಎನ್ನುವ ನಂಬಿಕೆ ಭಕ್ತರದ್ದು. ಇಷ್ಟೊಂದು ಪರಿಣಾಮಕಾರಿಯಾಗಿರುವ ಹನುಮಾನ್ ಚಾಲೀಸದ ಕುರಿತು ಕೆಲವೊಂದು ಆಶ್ಚರ್ಯಕರ ಸಂಗತಿಗಳಿವೆ. ಅವೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
- 🌟ಆಂಜನೇಯ ಭಕ್ತರು ಹನುಮಾನ್ ಚಾಲೀಸವನ್ನು ಪಠಿಸುತ್ತಾರೆ. ಹನುಮಾನ್ ಚಾಲಿಸಾ ಎಂಬುದು ಯಾವುದೇ ಪ್ರಮುಖ ವಿಷಯಗಳ ವಿವರಣೆ ಅಲ್ಲ. ಭಗವಾನ್ ಹನುಮಾನ್ ಆರಾಧನೆ ಕೂಡ ಅಲ್ಲ. ಬದಲಾಗಿ, ಆತನ ದೈವೀ ದರ್ಶನ ಪಡೆಯುವುದಾಗಿದೆ. ಈ ಮೂಲಕ ಜೀವನದ ನೈಜತೆಯನ್ನು ತಿಳಿಯುವ ಪ್ರಯತ್ನವಾಗಿದೆ. ಹನುಮಾನ್ ಚಾಲೀಸದ ಕುರಿತಾದ ಆಶ್ಚರ್ಯಕರವಾದ ಸಂಗತಿಗಳಿವೆ. ಅವು ಯಾವುವು ಎನ್ನುವುದರ ವಿವರಣೆ ಈ ಕೆಳಗಿದೆ.
- 🌟ವಿಜ್ಞಾನಿಗಳು ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ಕುರಿತು 17 ನೇ ಶತಮಾನದಲ್ಲಿ ಸಂಶೋಧನೆ ನಡೆಸಿ, ತಿಳಿದುಕೊಂಡಿದ್ದರೆ, ಹನುಮಾನ್ ಚಾಲೀಸಾ ಬರೆದ ತುಳಸೀದಾಸರು ಈ ಕುರಿತು 15 ನೇ ಶತಮಾನದಲ್ಲಿ ತಮ್ಮ ಲೇಖನದಲ್ಲಿ ಬರೆದಿದ್ದರು. ಅದು ಕೂಡ ಹನುಮಾನ್ ಚಾಲೀಸಾದಲ್ಲಿ.
- 🌟ತುಳಸೀದಾಸರು ವಾಲ್ಮೀಕಿಯ ಪುನರ್‌ಜನ್ಮವೆಂದು ಕರೆಯಲಾಗುತ್ತದೆ ಮತ್ತು ರಾಮಾಯಣವನ್ನು ಇವರೇ ಬರೆದರು. ವಾಲ್ಮೀಕಿಯ ಪ್ರತಿರೂಪವೆಂದೇ ಬಿಂಬಿತರಾಗಿರುವ ತುಳಸೀದಾಸರು, ತಮ್ಮ ಜೀವಿತಾವಧಿಯಲ್ಲಿ ಇದರಿಂದಲೇ ಗುರುತಿಸಲ್ಪಟ್ಟರು. ಹೀಗಾಗಿ, ಯಾರು ರಾಮಾಯಣ ಬರೆದರೋ, ಅವರೇ ಹನುಮಾನ್ ಚಾಲೀಸಾ ಬರೆದರೆಂಬ ನಂಬಿಕೆ ಇಂದಿಗೂ ಇದೆ. ಎರಡೂ ಮಹಾಕಾವ್ಯಗಳ ನಡುವೆ ಎಷ್ಟೋ ಶತಮಾನಗಳ ಅಂತರವಿದೆ.
- 🌟ತುಳಸೀದಾಸರು ಆಂಜನೇಯನನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆಂದು ಹೇಳಲಾಗುತ್ತದೆ. ತಮ್ಮ ಜೀವಿತಾವಧಿಯ ಹೆಚ್ಚಿನ ಸಮಯವನ್ನು ವಾರಣಾಸಿಯಲ್ಲಿ ಕಳೆದ ತುಳಸೀದಾಸರು ಅಲ್ಲೇ ಹನುಮಾನ್ ದೇವರನ್ನು ಕಂಡರು ಎಂಬ ಮಾತಿದೆ. ಅಂತೆಯೇ, ಅಲ್ಲೇ ಸಂಕಟಮೋಚನ ದೇವಸ್ಥಾನ ನಿರ್ಮಿಸಿದರು.
ಹನುಮಾನ್ ಚಾಲೀಸಾ ಪುಸ್ತಕ ಕನ್ನಡ ಆವೃತ್ತಿ
Hanuman Chalisa Book English Version
ದೇಹದಲ್ಲಿರುವ ನಕಾರಾತ್ಮಕ ಶಕ್ತಿ ನಿವಾರಣೆ
- 🍒ನಂಬಿಕೆಯ ಪ್ರಕಾರ ಹನುಮಾನ್ ಚಾಲಿಸ ಪಠಿಸಿದರೆ ನಮ್ಮಲ್ಲಿ ಕಂಪನ ಉಂಟಾಗುವುದು ಎಂದು ಹೇಳಲಾಗುತ್ತದೆ. ನಮ್ಮಲ್ಲಿರುವ ನಕಾರಾತ್ಮಕ ಆಲೋಚನೆಯನ್ನು ಹೋಗಲಾಡಿಸಲು ಹನುಮಾನ್ ಚಾಲೀಸಾ ಪಠನೆ ಉತ್ತಮ ಮಾರ್ಗ. ಯಾವುದೇ ನಕಾರಾತ್ಮಕ ದುಷ್ಟ ಶಕ್ತಿಗಳು ಮತ್ತು ವಿಚಾರವನ್ನು ತೋರಿಸಿ, ಭಕ್ತರನ್ನು ರಕ್ಷಿಸುವುದು ಎಂಬ ಪ್ರತೀತಿ ಇದೆ. ದೈವಿಕ ಜ್ಞಾನ ಹೆಚ್ಚಿಸುವುದು.
- 🍒40 ದ್ವಿಪದಿ ಪದ್ಯಗಳನ್ನು ಸೇರಿ ಹನುಮಾನ್ ಚಾಲೀಸಾ ಆಯಿತು ಚಾಲೀಸ್ ಎಂದರೆ 40. ನಲವತ್ತು ದ್ವಿಪದಿ ಪದ್ಯಗಳು ಹಾಗೂ ದೋಹಾಗಳು ಸೇರಿ ಹನುಮಾನ್ ಚಾಲೀಸಾ ಸಿದ್ದವಾಯಿತು. ಅದರಲ್ಲೂ, ಪ್ರತಿಯೊಬ್ಬ ದೇವಾನುದೇವತೆಗಳನ್ನು ಭಜಿಸುವ 40 ದ್ವಿಪದಿ ಪದ್ಯಗಳಿವೆ. ಹನುಮಾನ್ ಚಾಲೀಸವನ್ನು ಅವಧಿ ಭಾಷೆಯಲ್ಲಿ ಬರೆಯಲಾಗಿದೆ
- 🍒ವಾನರ ರೂಪದ ಹನುಮಾನ್, ಶ್ರೀರಾಮನ ಪರಮ ಭಕ್ತ. ಕೈಲಾಸವಾಸಿ ಶಿವನ ಸದೃಢತೆ, ಧೈರ್ಯ, ಸಂಪತ್ತು, ರಾಮನ ಕುರಿತು ಆಪ್ತತೆ ಮುಂತಾದವು ಹನುಮಾನ್ ಚಾಲೀಸಾದಲ್ಲಿ ಹೇಳಲಾಗಿದೆ. ಯಾವುದೇ ಇನ್ನಿತರ ದೇವತೆಗಳನ್ನು ಹೊರತು ಪಡಿಸಿ, ಆಂಜನೇಯನಿಗೆ ಅತೀ ಹೆಚ್ಚು ಮಂದಿರಗಳನ್ನು ಭಾರತದಲ್ಲಿ ನಿರ್ಮಿಸಲಾಗಿದೆ.
- 🍒ಎಲ್ಲೆಲ್ಲಿ ಹನುಮಾನ್ ಚಾಲೀಸಾ, ಸುಂದರಕಾಂಡ, ರಾಮಚರಿತ ಮಾನಸ ಹಾಗೂ ರಾಮಾಯಣವನ್ನು ಹಾಡಲಾಗುತ್ತದೆಯೋ, ಅಲ್ಲಲ್ಲಿ ಭಗವಾನ್ ಹನುಮಾನ್ ದರ್ಶನ ನೀಡುತ್ತಾನೆ ಎಂಬ ಪ್ರತೀತಿ ಇದೆ. ಶಿವನ ಹನ್ನೊಂದನೇ ರುದ್ರಾವತಾರದ ಪ್ರತಿರೂಪವಾದ ಹನುಮಾನ್, ಶತ್ರುಗಳನ್ನು ಹಿಮ್ಮೆಟ್ಟಿಸಲು ಸಮರ್ಥನು.
ಶ್ರೀ ಹನುಮಂತನಿಗೆ ಐವರು ನಿಜವಾದ ಸಹೋದರರಿದ್ದರು ಗೊತ್ತಾ?
ಹನುಮಂತನ ತಂದೆ ಕೇಸರನಿಗೆ 6 ಜನ ಗಂಡು ಮಕ್ಕಳಿದ್ದರು, ಹಿರಿಯ ಹನುಮಂತ ದೇವರು
ಭಗವಾನ್ ಹನುಮಾನ್ ಸಹೋದರರು
- ಮತಿಮಾನ್,
- ಶ್ರುತಿಮಾನ್,
- ಕೇತುಮಾನ್,
- ಗತಿಮಾನ್
- ಧೃತಿಮಾನ್
ಬ್ರಹ್ಮಾಂಡ ಪುರಾಣದ 3ನೇ ಸಂಚಿಕೆಯ 7ನೇ ಅಧ್ಯಾಯದ 226ನೇ ಪದ್ಯದಲ್ಲಿ ಇದರ ಉಲ್ಲೇಖವಿದೆ.
