“ನಿರ್ವಾಣ” ಎಂದರೇನು…? ಆಧ್ಯಾತ್ಮಿಕ ಜ್ಞಾನ ಸಾಧನೆಗೆ “ನಿರ್ವಾಣ”ದ ಪಾತ್ರವೇನು…?
ಮಾನವನಾಗಿ ಜನಿಸಿರುವ ನಮಗೆ ಜಗತ್ತಿನ ಇತರೆ ಪ್ರಾಣಿಗಳ ಜೀವನಕ್ಕಿಂತಲೂ ಮಿಗಿಲಾದ ಬದುಕನ್ನು ಕಂಡುಕೊಳ್ಳುವ ಅವಕಾಶವನ್ನು ಪರಮಾತ್ಮನು ನೀಡಿರುವನು.
ಅಂದರೆ, ಜಗತ್ತಿನಲ್ಲಿ ಕಾಣಲ್ಪಡುವ ಇತರೆ ಎಲ್ಲಾ ಶಕ್ತಿಗಳಿಗಿಂತಲೂ ಮೀರಿದ ಸಂವೇದನಾ ಶಕ್ತಿಯನ್ನು ನಾವುಗಳು ಹೊಂದಿದ್ದೇವೆ.
ಆದ್ದರಿಂದ ನಾವುಗಳು ನಮ್ಮ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿರಿಸಿ ಆ ಪಂಚೇಂದ್ರಿಯಗಳನ್ನು ಮೀರಿದ ಪರಮಾತ್ಮನ ನೈಜ ಜ್ಞಾನವನ್ನು ಅರಸುತ್ತಾ ಹೋಗಬೇಕು.
ಅಂದರೆ, ಭಗವಂತನ ಜಗತ್ ಸೃಷ್ಟಿಯೊಳಗಿನ ಸಂಪೂರ್ಣ ರಹಸ್ಯತೆಯ ತತ್ವಗಳನ್ನರಿಯುವ ಮಾರ್ಗದ ಕಡೆಗೆ ನಮ್ಮ ಪಯಣವಿರಬೇಕು.
ಇದಕ್ಕಾಗಿ ಭಗವಂತನ ಜ್ಞಾನದ ಪರಿಧಿಯನ್ನು ವಿವರಿಸುವ “ನಿರ್ವಾಣ” ಎಂಬ ದೋಣಿಯಲ್ಲಿ ಸಂಚರಿಸುವ ಅಗತ್ಯವಿದೆ.
“ನಿರ್ವಾಣ” ಎಂದರೆ, ತನ್ನನ್ನು ತಾನು ಬರಿದಾಗಿಸಿಕೊಳ್ಳುವಿಕೆ ಅಥವಾ ತನ್ನನ್ನು ತಾನೇ ಕಳೆದುಕೊಳ್ಳುವಿಕೆ.
ಅಂದರೆ, ಪರಮಾತ್ಮನ ಜ್ಞಾನ ಸಾಧನೆಯ ಅರಿವು ಪಡೆಯಲು ತನ್ನ ಅಂತಃಕರಣವನ್ನು ಮೊದಲು ಶುದ್ಧೀಕರಣಕ್ಕೊಳಪಡಿಸಿ ನಂತರ ತನ್ನ ಆತ್ಮದ ಕ್ರಿಯೆಗಳನ್ನು ಭಗವಂತನಿಗೆ ಸಂಪೂರ್ಣವಾಗಿ ಅರ್ಪಿಸುವುದು.