ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು? ತಿಳಿದೇನೆ ಯಾವ್ದೋ ದಿಕ್ಕಿಗೆ ಹಾಕಿದ್ದೀರಾ ?

ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು? ತಿಳಿದೇನೆ ಯಾವ್ದೋ ದಿಕ್ಕಿಗೆ ಹಾಕಿದ್ದೀರಾ ?

ಮನೆಯಲ್ಲಿ ಗಡಿಯಾರ

ಪ್ರತಿಯೊಬ್ಬರ ಮನೆಯಲ್ಲೂ ಗೋಡೆ ಗಡಿಯಾರ ಇದ್ದೇ ಇರುತ್ತದೆ. 

ಈಗ ನಾನಾತರಹದ ಗೋಡೆ ಗಡಿಯಾರಗಳು ಮಾರುಕಟ್ಟೆಯಲ್ಲಿವೆ.

ಎಲ್ಲರೂ ಗೋಡೆ ಗಡಿಯಾರವನ್ನು ತಮಗೆ ಬೇಕಾಗುವ ಸ್ಥಳದಲ್ಲಿ ಮನೆಯಲ್ಲಿ ತೂಗು ಹಾಕುತ್ತಾರೆ. 

ಆದರೆ ಗಡಿಯಾರವನ್ನು ತೂಗು ಹಾಕುವುದಕ್ಕೂ ಮೊದಲು ಕೆಲವೊಂದು ವಾಸ್ತುವಿನ ಸಲಹೆಗಳನ್ನು ಗಮನದಲ್ಲಿರಿಸಿಕೊಳ್ಳುವುದು ಉತ್ತಮ. 

ಗಡಿಯಾರವನ್ನು ಯಾವಾಗಲೂ ದಕ್ಷಿಣ ಭಾಗದಲ್ಲಿ ತೂಗು ಹಾಕಬಾರದು. ಹಾಗೆಯೇ ಬಾಗಿಲ ಮೇಲೂ ತೂಗು ಹಾಕಬಾರದು. ಪೂರ್ವ ದಿಕ್ಕು ಮತ್ತು ಉತ್ತರ ದಿಕ್ಕು ಬಹಳ ಉತ್ತಮ. ಪಶ್ಚಿಮ ದಿಕ್ಕು ಮಧ್ಯಮ. ಧನಾತ್ಮಕ ಶಕ್ತಿ ಸಿಗುತ್ತದೆ.

ವಾಸ್ತು ಶಾಸ್ತ್ರದಲ್ಲೂ ಗೋಡೆ ಗಡಿಯಾರಕ್ಕೆ ಹೆಚ್ಚಿನ ಮಹತ್ವವಿದೆ. 

ಇಂತಹ ಗೋಡೆ ಗಡಿಯಾರವನ್ನು ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. 

ದಕ್ಷಿಣ, ವಾಯುವ್ಯ ಅಥವಾ ನೈರುತ್ಯ ದಿಕ್ಕಿನ ಗೋಡೆಯಲ್ಲಿ ತೂಗು ಹಾಕಿದರೆ ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆ ಎದುರಾಗಬಹುದು. 

ಇನ್ನು ಮುಖ್ಯ ದ್ವಾರದ ಸಮೀಪದಲ್ಲಿ ಇದನ್ನು ಹಾಕಲೇಬಾರದು. 

ಇದರಲ್ಲಿ ಸಮಯ ಯಾವಾಗಲೂ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು.

ಇಲ್ಲವಾದರೆ ತಾವು ಹಾಕಿಕೊಂಡ ನಿರೀಕ್ಷಿತ ಗುರಿಯನ್ನು ಸಾಧಿಸಲು ವಿಫಲವಾಗುವ ಸಾಧ್ಯತೆಯಿದೆ. ಗಡಿಯಾರ ಕೆಟ್ಟರೆ ಕೂಡಲೇ ರಿಪೇರಿ ಮಾಡಿಸಿಕೊಳ್ಳಬೇಕು. ಗಡಿಯಾರದ ಗಾಜು ಒಡೆದು ಹೋಗಿದ್ದರೆ ಅದನ್ನು ಕೂಡ ತಕ್ಷಣವೇ ಬದಲಾಯಿಸಬೇಕು.

ವಾಸ್ತುಶಾಸ್ತ್ರದ ಪ್ರಕಾರ ಗಡಿಯಾರವನ್ನು ಮಂಚದ ಸಮೀಪದಲ್ಲೇ ತೂಗು ಹಾಕಬಾರದು

ಏಕೆಂದರೆ ವಿಶ್ರಾಂತಿಯನ್ನು ಹೆಚ್ಚು ಬಯಸುತ್ತೇವೆ. ಯಾವುದೇ ಕಾರಣಕ್ಕೂ ಚಲನೆಯಲ್ಲಿ ಇಲ್ಲದ ಗಡಿಯಾರವನ್ನು ತೂಗು ಹಾಕಬಾರದು. ಇದರಿಂದ ಆಗಬೇಕಾದ ಕೆಲಸಗಳೆಲ್ಲ ನಿಧಾನವಾಗಿ ಸಾಗುತ್ತದೆ. 

ಐದು ನಿಮಿಷ ಮುಂದೆ ಇಟ್ಟಿದ್ದರೂ ಉತ್ತಮ. ಆಗ ಜೀವನದಲ್ಲೂ ಮುಂದೆ ಮುಂದೆ ಹೋಗುವ ಯೋಗ ಬರುವುದು. 

ಗಡಿಯಾರದ ಗಾಜು ಒಡೆದಿರಬಾರದು. ಒಡೆದಿದ್ದರೆ ಮನಸ್ಸು ಸಹ ಒಡೆಯುತ್ತದೆ. ಕಾಲ ಕಾಲಕ್ಕೆ ಸರಿಯಾಗಿ ಸ್ವಚ್ಛಗೊಳಿಸಬೇಕು.

Leave a Comment

Your email address will not be published. Required fields are marked *