ಭಾರತ ಮತ್ತು ಸಂಸ್ಕೃತ – ಭಾರತ ಆಗಲೇ ವಿಶ್ವ ಗುರು ಆಗಿತ್ತಾ ?
ಭಾರತ ವಿವೇಕನಂದರು ಹೇಳುವಂತೆ ವಿಶ್ವಗುರುವೆ. ಆದರೇ ಆಗಿನ ವಿದ್ಯಾವಂತ ಸಮೂಹದ ಸ್ವಾರ್ಥತೆ ನಮ್ಮ ದೇಶವನ್ನು ಹಾವಾಡಿಗರ ದೇಶ ಎಂದು ಕರೆಯಲು ಅನುವು ಮಾಡಿಕೊಟ್ಟಿತು .
ಹೇಗೆ ಗೊತ್ತ ಗೆಳೆಯರೇ…..
ವಿಶ್ವ ನಾಗರಿಕತೆಯ ಅ.ಆ. ಇ.ಈ ಕಲಿಯುವಾಗಲೇ ಭಾರತ ನಾಗರಿಕತೆಯ ಉತ್ತುಂಗಕ್ಕೇರಿತ್ತು, ಆಗಿನ ಭಾರತೀಯರು ನಮಗಿಂತಲೂ ಉನ್ನತವಾದ ನಾಗರಿಕತೆಯ ಪ್ರತಿನಿದಿಗಳಾಗಿದ್ದರೂ.
ನಮಗೆ ವಿಮಾನ ಗೊತ್ತಿತ್ತು. ಗ್ರಹ, ನಕ್ಷತ್ರಗಳ ಕಲ್ಪನೆಯಿತ್ತು. ಎಲ್ಲರೂ ಭೂಮಿ ಚಪ್ಪಟೆ ಆಗಿದೆ ಅಂದು ಕೂಂಡಿದ್ದ ಸಮಯದಲ್ಲೆ ಭಾರತ ಸೂರ್ಯ ಕೇಂದ್ರಿತ ವ್ಯವಸ್ಥೆಯ ಬಗ್ಗೆ ಅರೆದು ಕುಡಿದಿತ್ತು.
ಈಗಿನ ಪ್ರನಾಳ ಶಿಶು ತಂತ್ರಜ್ಞಾನದ ಬಗ್ಗೆ ನಮ್ಮ ಮಹಾ ಕಾವ್ಯಗಳೆ ಸಾಕ್ಷಿಒದಗಿಸುತ್ತವೆ. ಇಂದಿನ ಕಂಪ್ಯೂಟರ್ ನ ಭಾಷೆಯ ಸಂಶೋಧಕರು ನಾವೆ. ದೈವಕಣದ ಬಗ್ಗೆ ಶತಮಾನಗಳ ಹಿಂದೆಯೇ ಋುಷಿ ಮುನಿಗಳು ತಿಳಿಸಿದ್ದರು.
ನಾವು ಭಾರತೀಯರು ಎಂದು ಗರ್ವ ಪಡೋದಿಕ್ಕೆ ಇಷ್ಟು ಸಾಕಲ್ವಾ.
ಆ ಗರ್ವದ ನಡುವೆಯೇ ಒಂದು ಪ್ರಶ್ನೆ ಈ ಜ್ಞಾನ ಅಲ್ಲೆ ನಿಂತು ಹೋಗಿದ್ದು ಯಾಕೆ, ಮಾಟ ಮಂತ್ರ,ಯಜ್ಞ ಯಾಗಾದಿ, ಜ್ಯೋತಿಷ್ಯ ಗಳು ಬೆಳೆದು ಬಂದಂತೆ . ಈ ವಿಜ್ಞಾನ ವಿಷಯಗಳು ಬೆಳೆಯಲಿಲ್ಲ ಯಾಕೆ …..? ನಮಗೆ ನಮ್ಮ ಈ ಜ್ಞಾನ ನಮ್ಮದು ಅಂತಾ ಹೇಳಿಕೊಡೋಕೆ ಬ್ರಿಟಿಷರೆ ಬರಬೇಕಾಯ್ತಲ್ಲ. ಅದು ಯಾಕೆ…?
ಇಷ್ಟು ಜ್ಞಾನ ಸಂಪತ್ತು ಇರುವ ದೇಶದಲ್ಲಿ ಒಂದು ಗಮನಿಸೋಣ .
ನಾವು ಸ್ವಲ್ಪ ಅಕ್ಷರಸ್ಥರು, ನಮ್ ಹಿಂದಿನ ತಲೆಮಾರು, ಓದು ಬರಹ ಗೊತ್ತಿದ್ದವರು. ಅವರಿಗಿಂತ ಹಿರಿಯವರು. ರಾಮಾಯಣ , ಮಹಾಭಾರತ ವನ್ನು ಕೇಳಿ ತಿಳಿದುಕೊಂಡಿದ್ದವರು ಅವರ ಹಿಂದಿನವರು ಅಷ್ಟೆ…!
ಇಷ್ಟೋಂದು ಸಾಹಿತ್ಯ, ಪುರಾಣಗಳ ಬೆಂಬಲವಿದ್ದರೂ ವಿಶ್ವದ ಅಳಿವಿನಂಚಿನಲ್ಲಿರುವ ಬಾಷೆಗಳಲ್ಲಿ ಸಂಸ್ಕೃತವೂ ಒಂದು ಅದು ಹೇಗೆ……?
ಇವತ್ತು ಲ್ಯಾಟಿನ್, ಗ್ರೀಕ್, ಅರೇಬಿ ಈ ಪ್ರಾಚಿನಾ ಭಾಷೆಗಳಿಗೆ ಈ ದುಸ್ಥಿತಿ ಇಲ್ಲ.
ಆದರೇ ಇಂದಿನ ಪ್ರಪಂಚಕ್ಕೂ ತನ್ನ ಕಾಣಿಕೆಗಳನ್ನು ನೀಡುತ್ತಿರುವ ಭಾಷೆ ಅವನತಿಯ ಹಿಡಿದಿದೆ. ಹಾಗೂ ಕರ್ನಾಟಕದ ಒಂದು ಹಳ್ಳಿ ಹೂರತು ಪಡಿಸಿದರೇ ಇದರ ಅಸ್ಥಿತ್ವ ಉಳಿದಿರುವುದು ಬರೆ ತಂತ್ರ , ಮಂತ್ರಗಳಲ್ಲೆ . ಇಂತಹ ಶ್ರಿಮಂತ ಬಾಷೆಗೆ ಈ ದುಸ್ಥಿತಿ ಹೇಗೆ ಬಂತು …?
ನಾ ಮಾತಾಡುವ ಭಾಷೆ, ಕನ್ನಡ, ನಿನ್ನದು ತುಳು , ಮತ್ತೊಬ್ಬನದು ತಮಿಳು, ಉತ್ತರದಲ್ಲಿ, ಹಿಂದಿ, ದಕ್ಷಿಣದಲ್ಲಿ ದ್ರಾವಿಡ ಭಾಷೆಗಳು.
ಆದರೇ ಸಂಸ್ಕೃತ ಕೆಲವೇ , ಕೆಲವು ಜನರ ಆಸ್ಥಿ ಅದು ಹೇಗೆ.
ನಿಮ್ಮ ಪೂರ್ವಿಜರಿಗೆ ಅದ ಕಲಿಯುವ ಬಯಕೆ ಇರಲಿಲ್ಲವೇ,…..?
ಹಾಗೆ ನನ್ನ ಪೂರ್ವಿಜರಿಗೆ ಕಲಿಯುವ ಆಶಕ್ತಿ ಇರಲಿಲ್ಲವೇ…? ಇಲ್ಲ ಉತ್ತರದವರಿಗಿರಲಿಲ್ಲವೇ, ದಕ್ಷಿಣದವರಿಗೆ ಅದರ ವಿಷಯ ತಿಳಿದಿರಲಿಲ್ಲವೇ. ? ಈ ವಿಪುಲ ಜ್ಞಾನ ನಮ್ಮ ಪೂರ್ವಜರಿಗೆ ಯಾಕೆ ಬರಲಿಲ್ಲ…? ಇಂಗ್ಲಿಷಿಗೆ ಅವು ಭಾಷಾಂತರವಾಗುವವರೆಗೆ ಅದರ ಜ್ಞಾನ ಸತ್ತಂತೆ ಇತ್ತು. ಯಾಕೆ….?
ನಾನ್ಯಾಕೆ ಅಂದಿನ ಭಾರತದ ವಿಧ್ಯಾವಂತ ಸಮೂಹ ಸ್ವಾರ್ಥಿಗಳಾಗಿದ್ದರೂ ಅಂತ ಹೇಳ್ತಿನಿ ಕೇಳಿ,
ಅಂದಿನ ಗ್ರೀಕ್ , ಲ್ಯಾಟಿನ್, ಭಾಷೆಗಳನ್ನು ಆಳುವ ವರ್ಗದಿಂದ ಹಿಡಿದು, ಗುಲಾಮರವರೆಗೆ ಕಲಿಸಲಾಗುತ್ತಿತ್ತು, ಅರೇಬಿ ಪ್ರತಿ ಇಸ್ಲಾಂ ಮತಾನುಯಾಯಿಯು ಕಲಿಯಲೇಬೇಕು,
ಆದರೇ ಭಾರತದ ಇತಿಹಾಸ ಇದಕ್ಕೆ ತದ್ವಿರುದ್ದ ಇಲ್ಲಿ ಕೆಲವೇ ಜನರ ಗುಂಪಿಗೆ ಸಂಸ್ಕೃತ ಭೋಧನೆಯಾಗುತ್ತಿತ್ತು.
ಅದು ರಾಜರಾಗಿ ಧರ್ಪದಿಂದ ಇದ್ದ ಜನರಿಗೂ ಇದು ಗಗನ ಕುಸುಮವಾಗಿತ್ತು. ಆದರಿಂದಲೇ ಕ್ಷತ್ರಿಯರು ಆಗಲೇ ಬಿಟ್ಟು ಉತ್ತರದಲ್ಲಿ ಪಾಲಿ, ಬ್ರಾಹ್ಮಿ, ದಕ್ಷಿಣದಲ್ಲಿ ದ್ರಾವಿಡಭಾಷೆಗಳು ಮುಖ್ಯಭೂಮಿಕೆಗೆ ಬಂದವು, ಸಂಸ್ಕೃತ ಕೆಲವೇ ಜನರಲ್ಲಿ ಉಳಿಯಿತು. (ಅದರಲ್ಲಿ ಅಡಕವಾಗಿದ್ದ ಜ್ಞಾನವೂ ಕೂಡ ಹಾಗೇ ಉಳಿಯಿತು.)
ಅವರೋ ಅದರಲ್ಲಿ ತಮಗೆ ಯಾವ ಅಂಶಗಳು ವರಮಾನ ತರುತ್ತವೊ ಅದನ್ನು ಉಳಿಸಿಕೊಂಡರು, ಮಿಕ್ಕ ಜ್ಞಾನ ಉಪಾಂತ್ಯಕ್ಕೆ ಸರಿದವು ಅಂತಲೇ ಹೇಳಬಹುದೇನೋ…..
ಆದರಿಂದಲೇ ನಮ್ಮ ರಾಕೇಟ್ , ವಿಮಾನ, ಪ್ರನಾಳಶಿಶು, ತದ್ರೂಪ ತಳಿಯ ತಂತ್ರಜ್ಞಾನಗಳು ಬರೆ ಅಕ್ಷರಗಳಾಗಿಯೇ ಉಳಿದುಹೋದವೇ ಹೊರತು ಪೂರ್ವಜರ ವಿಜ್ಞಾನ ನಮ್ಮ ಜ್ಞಾನವಾಗಲಿಲ್ಲ. ಇದಲ್ಲವೇ ನಮ್ಮ ಭಾರತದ ದುರಂತ.