ನಿಮ್ಮ ಸುಖ ಜೇವನಕ್ಕೆ 54 ಬಗೆಯ ವಿವಿಧ ಯಂತ್ರಗಳು
- ಪ್ರಾಣರಕ್ಷಕ ಮೃತ್ಯುಂಜಯ ಯಂತ್ರ – ಶತ್ರುರಕ್ಷಣೆಗೆ
- ವಿಷ್ಣುವಿಶಾಂಕ ಯಂತ್ರ – ಸಂಕಷ್ಟ ಮತ್ತು ದಾರಿದ್ರ್ಯ ನಿವಾರಣೆಗೆ
- ಸಿದ್ದಗೋಪಾಲ ಯಂತ್ರ – ಪ್ರತಿಯೊಂದು ಇಚ್ಚೆಯ ಪೂರ್ತಿಗಾಗಿ
- ಶ್ರೀ ವಟುಕ ಭೈರವ ಯಂತ್ರ – ಅಸಾಧ್ಯ ಕಾರ್ಯ ಸಿದ್ಧಿಗೆ
- ಶೀತಲಾ ಯಂತ್ರ – ಸಿಡುಬು ರೋಗದ ನಿವಾರಣೆಗೆ
- ವಿಷ್ಣು ಸುದರ್ಶನ ಯಂತ್ರ – ಕಳೆದುಹೋದ ವಸ್ಥುವಿನ ಪ್ರಾಪ್ತಿಗೆ , ಸರ್ವತ್ರ ವಿಜಯಕ್ಕೆ , ವಿಘ್ನಗಳ ನಾಶಕ್ಕೆ
- ಮಾಹಾಲಕ್ಷ್ಮೀ ಬೀಸಾ ಯಂತ್ರ – ಧನಪ್ರಾಪ್ತಿಗಾಗಿ ಇರುವ ಉತ್ಕೃಷ್ಟ ಯಂತ್ರ
- ದತ್ತಾತ್ರೇಯ ಯಂತ್ರ – ಅಲೌಕಿಕ ಶಕ್ತಿಗಳ ಪ್ರಾಪ್ತಿಗೆ
- ಕಮಲಾಖ್ಯಾ ಯಂತ್ರ – ಸುಖ ಸಮೃದ್ಧಿ, ಸಂತಾನ ಪ್ರಾಪ್ತಿಗೆ
- ನೃಸಿಂಹ ಯಂತ್ರ – ಲಕ್ಷ್ಮೀಪ್ರಾಪ್ತಿಗೆ ಮತ್ತು ಶರೀರದ ರಕ್ಷಣೆಗೆ
- ಧನದಾ ಯಂತ್ರ – ದಾರಿದ್ರ್ಯ ನಾಶಕ್ಕೆ , ಉದ್ಯೊಗದಲ್ಲಿ ಲಾಭಕ್ಕಾಗಿ
- ಮಾಹಾಸಿದ್ದಿ ಯಂತ್ರ – ಧನ , ಧಾನ್ಯ ಅಪಾರವಾಗಿ ವೃದ್ಧಿಯಾಗುವುದು
- ಶ್ರೀಗಣೇಶ ಯಂತ್ರ – ಜ್ಞಾನ , ಪ್ರಗತಿ , ಸುರಕ್ಷೆ , ಯಶಸ್ಸು ಮತ್ತು ಪ್ರತಿಷ್ಠೆಯ ಪ್ರಾಪ್ತಿಗೆ
- ಶ್ರೀಕೃಷ್ಣ ಯಂತ್ರ – ಆಕರ್ಷಣೆ ವೃದ್ದಿಗೆ , ವ್ಯಾಪಾರ ವ್ಯವಹಾರ ಕುಶಲತೆಗೆ
- ಮೃತ್ಯುಂಜಯ ಊರ್ಧ್ವ ಮುಖಿ ಯಂತ್ರ – ರೋಗಗಳ ನಾಶಕ್ಕೆ , ಅಪಮೃತ್ಯು ನಿವಾರಣೆಗೆ
- ಲಕ್ಷ್ಮಿ ಪೂಜಾ ಯಂತ್ರ – ಸಂಪತ್ತು ಸೌಭಾಗ್ಯದ ವೃದ್ದಿಗೆ
- ನವಗ್ರಹ ಪೀಡಾ ಪರಿಹಾರಕ ಯಂತ್ರ – ನವಗ್ರಹ ದೋಷಕ್ಕೆ
- ನೀಲಸರಸ್ವತಿ ಯಂತ್ರ – ವಿಭಿನ್ನ ಇಚ್ಚೆಯ ಪ್ರಾಪ್ತಿಗಾಗಿ
- ತ್ರೈಲೋಕ್ಯ ಮೋಹನ ಪೂಜಾ ಯಂತ್ರ – ಕೀರ್ತಿಯ ವೃದ್ದಿಗೆ
- ಕಾಳಿ ಯಂತ್ರ – ಧರ್ಮ ಮತ್ತು ಮೋಕ್ಷಕ್ಕಾಗಿ
- ತಾರಾ ಯಂತ್ರ – ಸಮಸ್ತ ಆಪತ್ತು ನಿವಾರಣೆಗೆ, ಬೋಗ ಮತ್ತು ಮುಕ್ತಿಗೆ
- ಷೋಡಶಿ ಯಂತ್ರ – ಧರ್ಮ , ಅರ್ಥ , ಕಾಮ, ಮೋಕ್ಷಗಳೆಂದ ಚತುರ್ವಿದ ಪುರುಷಾರ್ಥಗಳ ರಕ್ಷಣೆಗೆ
- ತ್ರಿಪುರ ಭೈರವಿ ಯಂತ್ರ – ಸರ್ವ ಮಾನಸಿಕ ಇಚ್ಚೆಗಳ ಪೂರೈಕೆಗೆ
- ಭುವನೇಶ್ವರಿ ಯಂತ್ರ – ರಾಜಕಾರದಲ್ಲಿ ಯಶಸ್ಸಿಗೆ
- ಛಿನ್ನಮಸ್ತಾ ಯಂತ್ರ – ಅಭಿಷ್ಟಗಳ ಪ್ರಾಪ್ತಿ , ಲಕ್ಷ್ಮೀ ಕೃಪೆಗೆ
- ಬಗಳಾಮುಖಿ ಯಂತ್ರ – ಶತ್ರು ನಿವಾರಣೆಗೆ
- ಧೂಮಾವತಿ ಯಂತ್ರ – ಶತ್ರುಗಳಿಂದ ರಕ್ಷಣೆ ಉತ್ಕೃಷ್ಟ ಯಂತ್ರ
- ಶ್ರೀ ಮಾತಂಗಿ ಯಂತ್ರ – ಸ್ಥಿರ ಧನಕ್ಕಾಗಿ ಈ ಯಂತ್ರ ಇದ್ದಲ್ಲಿ ಸ್ವಯಂ ಕುಬೇರನೆ ಇರುವನು
- ಶ್ರೀ ಘಂಟಾಕರ್ಣ ಯಂತ್ರ – ಕ್ಷುದ್ರ ಉಪದ್ರವ ನಿವಾರಣೆಗೆ
- ದೈವಿ ಶಕ್ತಿಯ ಪ್ರಾಪ್ತಿಗೆ ಯಂತ್ರ – ಭೂತ , ಭವಿಷ್ಯವನ್ನು ತಿಳಿದುಕೊಳ್ಳಲು
- ದುರ್ಗಾ ಯಂತ್ರ – ಸಮಸ್ತ ಇಚ್ಚೆಗಳ ಪ್ರಾಪ್ತಿಗೆ ಮತ್ತು ಶಿವನನ್ನು ಪಡೆಯಲು
- ಶ್ರೀ ದುರ್ಗಾ ಯಂತ್ರ – ದುರ್ಗೆಯ ಕೃಪೆಯಿಂದ ಚಿಂತಿತ ಕಾರ್ಯವೆಲ್ಲ ಸಿದ್ದಿಯಾಗಿ ಸಂಕಲ್ಪವನ್ನು ಸಿದ್ದಿಗೊಳಿಸೂವ ಶಕ್ತಿ ದೊರೆಯುವುದು
- ಹನುಮತ ಯಂತ್ರ – ಸಮಸ್ತ ರೋಗಗಳು ಮತ್ತು ವ್ಯಾದಿಗಳ ನಿವಾರಣೆಗೆ
- ಶ್ರೀ ಶಕ್ತಿ ಯಂತ್ರ – ರೋಗ , ಸಾಲ , ಶತ್ರು ಭಯಕ್ಕೆ
- ಶನಿಪ್ರಕೋಪ ಯಂತ್ರ – ಭೂತ , ಪ್ರೇತ ದೋಷಗಳ ನಿವಾರಣೆಗೆ
- ಶ್ರೀ ಸೂರ್ಯ ಯಂತ್ರ – ಆತ್ಮಬಲದ ವೃದ್ದಿ , ಸರ್ವ ಪ್ರಕಾದರ ಯಶಸ್ಸಿಗೆ , ರೋಗಗಳ ನಾಶಕ್ಕೆ
- ಸಪ್ತಶತಿ ಯಂತ್ರ – ನಿಶ್ಚಿತ ವಾಂಛಿತ ಫಲಕ್ಕಾಗಿ
- ಶ್ರೀ ಚಂಡಿ ಯಂತ್ರ – ಷಟಕರ್ಮಗಳ ಸಿದ್ದಿಗೆ ಮತ್ತು ಅವುಗಳಿಂದ ರಕ್ಷಣೆಗೆ
- ಶ್ರೀ ಯಂತ್ರ – ಪರಬ್ರಹ್ಮ ತತ್ವಕ್ಕೆ ( ಸರ್ವರಿಗೂ ಉಪಯೋಗವಾಗುವ ವಿಷತಗಳ ಮಾಹಿತಿ ಸಿಗುವುದು)
- ಚಂಡಿಕಾ ಬೀಸಾ ಯಂತ್ರ – ಧನದ ಸಂಗ್ರಹಕ್ಕೆ ಮತ್ತು ವೃದ್ದಿಗೆ
- ಗಾಯತ್ರೀ ಯಂತ್ರ – ಸರ್ವಪಾಪದಿಂದ ಮುಕ್ತಿಗಾಗಿ ಮತ್ತು ದೀರ್ಘಾಯುಷ್ಯಕ್ಕೆ
- ಸರಸ್ವತಿ ಯಂತ್ರ – ವಿದ್ಯೆ ಮತ್ತು ಬುದ್ದಿಗಾಗಿ
- ಚಂದ್ರಯಂತ್ರ – ಚಂದ್ರದೋಷದ ನಿವಾರಣೆಗೆ
- ಮಂಗಳ ಯಂತ್ರ – ಮಂಗಳದೋಷಕ್ಕೆ
- ಬುಧಯಂತ್ರ – ಬುಧುದೋಷದ ನಿವಾರಣೆಗೆ
- ಗುರುಯಂತ್ರ – ಭೌತಿಕ ಸುಖದ ಪ್ರಾಪ್ತಿಗೆ
- ಶುಕ್ರ ಯಂತ್ರ – ಶುಕ್ರಜನ್ಯದೋಷಕ್ಕೆ
- ಶನಿಯಂತ್ರ – ಸಮಸ್ತ ಸಂಕಟ ಮತ್ತು ದೌರ್ಭಾಗ್ಯ ನಿವಾರಣೆಗೆ
- ರಾಹುಯಂತ್ರ- ರಾಹುದೋಷದ ನಿವಾರಣೆಗೆ
- ಕೇತುಯಂತ್ರ – ಷಡ್ಯಂತ್ರ ನಿವಾರಣೆಗೆ
- ನವಗ್ರಹ ಶಾಂತಿ ಯಂತ್ರ- ನವಗ್ರಹಗಳ ದೋಷದ ನಿವಾರಣೆಗೆ
- ಋಣ ಯಂತ್ರ – ಸಾಲದಿಂದ ಮುಕ್ತಿಗೆ
- ಸರ್ವ ಜ್ವರ ಪರಿಹಾರಕ ಯಂತ್ರ – ಜ್ವರದಿಂದ ರಕ್ಷಣೆಗೆ
- ಕೋಪನಾಶಕ ಯಂತ್ರ – ಕೋಪ ಶಮನಕ್ಕೆ
ನಿಮ್ಮ ಹಾಗೂ ನಿಮ್ಮ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರ ಒಳಿತಿಗಾಗಿ ಈ ಅಪರೂಪದ ಯಂತ್ರ – ತಂತ್ರಗಳನ್ನೂ ಇಲ್ಲಿ ಉಲ್ಲೇಖಿಸಿದ್ದೇವೆ. ಇದನ್ನು ಅರಿತು ಜೀವನದ ಎಲ್ಲ ಬಗೆಯ ಕಷ್ಟನಷ್ಟಗಳನ್ನು ಬಗೆಹರಿಸಿಕೊಂಡು ಸಂತೋಷಕರ ಜೀವನವನ್ನು ಸಾತ್ವಿಕತೆಯಿಂದ ಅನುಭವಿಸಲು ಲಭಿಸಿರುವ ಈ ಅತ್ಯುತ್ತಮ ಅವಕಾಶವನ್ನು ಕಳೆದುಕೊಳ್ಳಬೇಡಿ.
ಇವುಗಳನ್ನು ವರ್ತಮಾನದಲ್ಲಿ ಉಪಯೋಗಿಸಿ ಲಾಭ ಪಡೆಯಿರಿ
- ಸಂತಾನ ಲಕ್ಷ್ಮೀ ಯಂತ್ರ:
ಸಂತಾನ ವಿಳಂಬ, ಐದಾರು ತಿಂಗಳಿಗೆ ಮಗುವು ಗರ್ಭದಲ್ಲೇ ಸಾವನ್ನಪ್ಪುವುದು ಇತ್ಯಾದಿ ಸಮಸ್ಯೆಗಳಿಂದ ಸಂತಾನ ದೋಷ ಉಂಟಾಗಿದ್ದರೆ ಈ ಯಂತ್ರವನ್ನು ಬಳಸಬಹುದು. - ಮಹಾರಕ್ಷಾ ಯಂತ್ರ:
ಸರ್ಪ ಹಾಗೂ ಇತರೆ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಕೃಷಿಕರಿಗೆ ಹೆಚ್ಚು ಅನುಕೂಲ ಮಾಡಿಕೊಡುವ ಯಂತ್ರ. - ಅಗ್ನಿಸ್ಥಂಭನ:
ಜಾತಕದಲ್ಲಿನ ಅಗ್ನಿ ಅವಘಡ ದೋಷ ಇನ್ನಿತರೆ ಅಗ್ನಿ ಆಕಸ್ಮಿಕಗಳಿಂದ ರಕ್ಷಣೆಗಾಗಿ. - ಗ್ರಹಪೀಡಿತದೋಷ ನಿವಾರಣೆ:
ಪಿಶಾಚಿ, ಭೂತ, ಶಾಕಿನಿ ಡಾಕಿನಿ ಮುಂತಾದ ನಕಾರಾತ್ಮಕ ಶಕ್ತಿಗಳಿಂದ ಉಂಟಾಗುವ ಮಾನಸಿಕ ಕಿರಿಕಿರಿ, ದೇಹಾಲಸ್ಯ ಇನ್ನಿತರ ಸಮಸ್ಯೆಗಳಿಗೆ ಪರಿಹಾರವಾಗಿ ಈ ಯಂತ್ರವನ್ನು ಬಳಸಬಹುದು. - ಜ್ವರನಾಶಕ ಯಂತ್ರ:
ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುವ ಜ್ವರ ಹಾಗೂ ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಈ ಯಂತ್ರವನ್ನು ಬಳಸಬಹುದು. - ಕರಕಂಟಕ ಯಂತ್ರ:
ಯಾವ ವ್ಯಕ್ತಿ ಕಪಟಿ, ಲೋಭಿ ಶತ್ರುವಾಗಿ ನಿಮಗೆ ತೊಂದರೆ ಕೊಡುತ್ತಿದ್ದರೆ ಈ ಯಂತ್ರದ ಮೂಲಕ ಅವರು ಮಾಡುವ ಕುತಂತ್ರಗಳಿಂದ ರಕ್ಷಣೆ ಪಡೆಯಬಹುದು.
ದುಷ್ಟರನ್ನು ಪರಿವರ್ತಿಸಬಹುದು. - ಉಚ್ಛಷ್ಟಿ ಪೈಶಾಚಿಕ ಯಂತ್ರ:
ದುಷ್ಟರ ಜೊತೆಗೆ ರಕ್ತ ಸಂಬಂಧಿಕರು, ಸ್ನೇಹಿತರೇ ಕೆಲವೊಮ್ಮೆ ನಮಗೆ ತಿಳಿಯದಂತೆ ಸಮಸ್ಯೆ ನೀಡುತ್ತಿದ್ದರೆ ಈ ಯಂತ್ರದ ಮೂಲಕ ಅವರ ಮನ ಪರಿವರ್ತನೆ ಮಾಡಬಹುದು. - ಮಣಿಭದ್ರ ಯಂತ್ರ:
ಮನೆ ಬಿಟ್ಟು ಹೋದವರು ಮರಳಿ ಬರಲು ಈ ಯಂತ್ರ ಸಹಾಯಕಾರಿಯಾಗಿದೆ. ಇದನ್ನು ಮನೆಯಲ್ಲಿದ್ದ ಸಾಕು ಪ್ರಾಣಿಗಳು ತಪ್ಪಿಸಿಕೊಂಡು ಹೋಗಿದ್ದರು ಈ ಯಂತ್ರವನ್ನು ಬಳಸಬಹುದು. - ಶತ್ರು ಬಂಧನ ಯಂತ್ರ:
ಯಾವುದೇ ಶತ್ರುವು ನಿಮಗೆ ಕೇಡನ್ನು ಉಂಟುಮಾಡಲು ಅವರ ಬುದ್ಧಿಯನ್ನು ಸ್ಥಂಬನಗೊಳಿಸಲು ಈ ಯಂತ್ರ ಅನುಕೂಲವಾಗುತ್ತದೆ. - ಗರ್ಭರಕ್ಷಾ ಯಂತ್ರ:
ಹುಟ್ಟಿದ ಮಗು ಉಳಿಯುತ್ತಿಲ್ಲಾ ಅಥವಾ ಗರ್ಭದಲ್ಲಿ ಮಗು ಉಳಿಯುತ್ತಿಲ್ಲ, ಮಾಟ ಮಂತ್ರ ಪ್ರಯೋಗದಿಂದ ಗರ್ಭ ನಿಲ್ಲದೆ ಇದ್ದರೆ (abortion) ಈ ಯಂತ್ರವು ಮಾತೆಗೆ ರಕ್ಷಣೆ ನೀಡಿ ಸಂತಾನಕ್ಕೆ ಬರುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. - ಅಮೃತ ಸಿದ್ಧಿ ಯಂತ್ರ:
ಜಾತಕದಲ್ಲಿ ಶುಭ ಯೋಗಗಳು ಪಾಪಗ್ರಹ ದೃಷ್ಟಿಯಿಂದ ಶುಭ ಫಲ ಪಡೆಯಲು ಸಾಧ್ಯವಾಗದಿದ್ದರೆ ಈ ಯಂತ್ರ ಸಹಾಯಕಾರಿಯಾಗಿದೆ.
(ಉದಾ: ಜಾತಕದಲ್ಲಿ ಗುರು ಚಂದ್ರರಿಂದ ಉಂಟಾಗುವ ಗಜಕೇಸರಿ ಯೋಗವು ಶನಿದೃಷ್ಟಿ ಇದ್ದರೆ ಆ ಯೋಗದಿಂದ ಬರುವ ಶುಭ ಫಲಗಳು ನಾಶವಾಗುತ್ತವೆ.) - ಸರ್ವತೋಭದ್ರ:
ರಾಹು ಹಾಗೂ ಇನ್ನಿತರ ಗ್ರಹಗಳ ಪ್ರಭಾವದಿಂದಾಗಿ ಮನಸ್ಸಿನಲ್ಲಿ ಉಂಟಾಗುವ ನಕಾರಾತ್ಮಕ ಕಲ್ಪನೆ, ಊಹಾಪೋಹಗಳಿಗೆ, ಮಾನಸಿಕ ವೇದನೆ , ಬುದ್ಧಿ ಭ್ರಮತೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಯಂತ್ರ ಬಳಸಬಹುದು. - ಜ್ವರನಾಶಕ ಯಂತ್ರ:
ಕೆಲವರು ಶತ್ರು ನಿಗ್ರಹಕ್ಕಾಗಿ ಆರೋಗ್ಯದ ಸಮಸ್ಯೆ ಉಂಟು ಮಾಡಲು ಹಾಸಿಗೆಯಿಂದ ಮೇಲೇಳದಂತೆ ಕಾಡುವಂತಹ ಜ್ವರ ಬರುವಂತೆ ಪ್ರಯೋಗ ಮಾಡುತ್ತಾರೆ. ಈ ರೀತಿಯ ಕಠಿಣಕರ ಜ್ವರದ ಸಮಸ್ಯೆ ಎದುರಿಸುತ್ತಿರುವವರು ಈ ಯಂತ್ರದ ಬಳಕೆ ಮಾಡಬಹುದು. - ಬಾಲಗ್ರಹ ಯಂತ್ರ:
ಚಿಕ್ಕಮಕ್ಕಳಿಗೆ 9 ವರ್ಷದವರೆಗೂ ಬಾಲಗ್ರಹ ದೋಷದಿಂದ ಕಾಡುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಈ ಯಂತ್ರವನ್ನು ಬಳಸಬಹುದು. - ಪ್ರಣವ ಪಂಚಾಕ್ಷರಿ ಯಂತ್ರ:
ಸರ್ವಗ್ರಹ ವ್ಯಾಧಿ, ಪೀಡೆಗಳ ನಾಶ, ಕಂಟಕಗಳ ನಾಶ, ಸರ್ವರೋಗಗಳ ನಿವಾರಣೆ, ಪೂರ್ವ ಜನ್ಮದ ಕರ್ಮಗಳಿಂದ ಏನಾದರೂ ತೊಂದರೆ ಅನುಭವಿಸುತ್ತಿದ್ದರೆ ಈ ಯಂತ್ರದಿಂದ ಶುಭ ಫಲವನ್ನು ಪಡೆಯಬಹುದು. - ಧನಲಕ್ಷ್ಮಿ ಯಂತ್ರ:
ಹೆಸರೇ ಸೂಚಿಸುವಂತೆ ಧನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ನಿವಾರಿಸಲು ಈ ಯಂತ್ರವನ್ನು ಉಪಯೋಗಿಸಬಹುದು. - ಕ್ಷಿರಾಕ್ಷಿ ಯಂತ್ರ:
ಯಾವ ಸ್ತ್ರೀಗೆ ಅಥವಾ ಪುರುಷರಿಗೆ ಶಾರೀರಿಕ ಸಮಸ್ಯೆಗಳಿಂದ ಸಂತಾನ ಸಮಸ್ಯೆ ಉಂಟಾಗಿದ್ದರೆ ಈ ಯಂತ್ರವನ್ನು ಬಳಸುವುದರಿಂದ ಸಂತಾನ ಭಾಗ್ಯ ಪಡೆಯಬಹುದು. - ಉಚ್ಛಾಟನಾ ಯಂತ್ರ:
ಮನೆಯಲ್ಲಿ ಕಣ್ಣಿಗೆ ಕಾಣದ ಭೂತ, ಪ್ರೇತಾದಿಗಳು ಇದ್ದು ತೊಂದರೆ ಕೊಡುತ್ತಿದ್ದರೆ, ಅವುಗಳನ್ನು ಉಚ್ಛಾಟನೆ ಮಾಡಲು ಪ್ರತಿಯೊಂದು ಮನೆಯಲ್ಲೂ ಪೂಜಿಸಬೇಕಾದ ಯಂತ್ರ. - ಭೂತ ಅಥವಾ ಪ್ರೇತ ಬಾಧೆ ನಿವಾರಣಾ ಯಂತ್ರ:
ಮರಣಿಸಿದ ಹಿರಿಯರು/ವ್ಯಕ್ತಿಗಳಿಗೆ ಶ್ರಾದ್ಧ ಕರ್ಮಗಳನ್ನು ಆಚರಿಸದೇ ಇದ್ದಾಗ ಆ ಪ್ರೇತಾತ್ಮಗಳು ಮನೆಯಲ್ಲಿ ತೊಂದರೆ ಕೊಡುತ್ತಿದ್ದರೆ ಕುಟುಂಬದಲ್ಲಿ ಯಾರಿಗೂ ನೆಮ್ಮದಿ ಇಲ್ಲದಂತಾಗುತ್ತದೆ. ಇದರ ನಿವಾರಣೆಗೆ ಈ ಯಂತ್ರವನ್ನು ಬಳಸಿ. - ನೀಲಕಂಠ ಯಂತ್ರ:
ಸರ್ವಶಕ್ತಿಗಳಿಂದ ರಕ್ಷಣೆ ನೀಡುವ ಯಂತ್ರ. ಇದರ ಶಕ್ತಿ ಎಂತಹುದು ಎಂದರೆ ಈ ಯಂತ್ರವನ್ನು ಧರಿಸಿ ಶ್ಮಶಾನದಲ್ಲೂ ಕೂಡ ವಾಸ ಮಾಡಬಹುದು. ಮೂರು ವರ್ಷಗಳ ಕಾಲ ಈ ಯಂತ್ರ ಕೆಲಸ ಮಾಡುತ್ತದೆ. - ಸರ್ವ ಸಿದ್ಧಿ ಯಂತ್ರ:
ಎಲ್ಲಾ ರೀತಿಯ ಮನೋ ಸಂಕಲ್ಪಗಳು, ಕೆಲಸ ಕಾರ್ಯಗಳು ಸಿದ್ಧಿಸಲು ಈ ಯಂತ್ರವನ್ನು ಉಪಯೋಗಿಸಬೇಕು. - ಸೌಭಾಗ್ಯ ವೃದ್ಧಿ ಯಂತ್ರ:
ದುಡಿಮೆಗಿಂತ ಖರ್ಚು ಹೆಚ್ಚಾಗಿದ್ದು, ಜಾತಕದಲ್ಲಿನ ಹೆಚ್ಚು ದೋಷಗಳಿಂದ ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದ್ದರೆ ಧನಾಭಿವೃದ್ಧಿಗಾಗಿ ಈ ಯಂತ್ರವನ್ನು ಧರಿಸುವುದು. - ಇಂದ್ರಾಕ್ಷಿ ಯಂತ್ರ:
ಗರ್ಭಧಾರಣೆ, ಗರ್ಭ ರಕ್ಷಣೆಗಾಗಿ ಹಾಗೂ ಪೂರ್ವಜನ್ಮದಲ್ಲಿ ಸಂತಾನ ನಾಶ ಮಾಡಿದ್ದರೆ, ಗರ್ಭ ನಾಶ ಮಾಡಿದ್ದರೆ ಅದು ಸಹಸ್ರ ಬ್ರಾಹ್ಮಣ ನಾಶ ಮಾಡಿದಂತೆ ಅವರಿಗೆ ಈ ಜನ್ಮದಲ್ಲಿ ಸಂತಾನ ಭಾಗ್ಯ ಇರುವುದಿಲ್ಲ. ಈ ರೀತಿಯ ದೋಷ ನಿವಾರಣೆಗೆ ಇಂದ್ರಾಕ್ಷಿ ಯಂತ್ರವನ್ನು ಬಳಸಬಹುದು. - ಸಂತಾನ ಭಾಗ್ಯ ಯಂತ್ರ:
ಇದು ವಿಶೇಷವಾಗಿ ಪ್ರಾಣಿಗಳಿಗಾಗಿ ಬಳಸುವ ಯಂತ್ರ. ಸಂತಾನ ದೋಷ ನಿವಾರಣೆಗೆ ಹಾಗೂ ಹಾಲು ಅಭಿವೃದ್ಧಿಗಾಗಿ ಬಳಸಬಹುದು. - ರಾಮ ರಕ್ಷಾ ಯಂತ್ರ:
ರೋಗ ನಾಶಕ್ಕಾಗಿ ರಾಮರ ಶರಣಾಗಿ ಈ ಯಂತ್ರವನ್ನು ಧರಿಸಿದರೆ ಸರ್ವ ರೋಗಗಳಿಂದ ಮುಕ್ತಿ ಪಡೆಯಬಹುದು. - ನರಸಿಂಹ ಯಂತ್ರ:
ಭೂತ ಪಿಶಾಚಿ ದೋಷದಿಂದ ತೊಂದರೆ ಅನುಭವಿಸುತ್ತಿದ್ದರೆ ಈ ಯಂತ್ರದ ಸಹಾಯದಿಂದ ರಕ್ಷಣೆ ಲಭಿಸುತ್ತದೆ. - ಅಪರಾಜಿತ ಯಂತ್ರ:
ಸನ್ನಿಪಾತ ಜ್ವರ ಇತ್ಯಾದಿ ನಮಗೆ ಬಾರದಂತಹ ಜ್ವರ, ಅನಾರೋಗ್ಯ ಜಾತಕದಲ್ಲಿ ತೋರಿಸದಿದ್ದರೂ ಶತ್ರುಗಳ ಪ್ರಯೋಗದಿಂದ ಈ ರೀತಿಯ ಖಾಯಿಲೆ ಬಂದರೆ ಅಪರಾಜಿತ ಯಂತ್ರವನ್ನು ಬಳಸಿ ಯಾವುದೇ ರೋಗಗಳನ್ನು ನಿವಾರಿಸಬಹುದು. ಇದನ್ನು ಸೂಕ್ತರ ಬಳಿ ಜಾತಕ ಪರಿಶೀಲಿಸಿ ಪ್ರಶ್ನಾ ಶಾಸ್ತ್ರದ ಮೂಲಕ ಅರಿತು ಈ ಮೇಲೆ ತಿಳಿಸಿದಂತೆ ಕೃತಿಮಾ ಪ್ರಯೋಗಗಳಾಗಿದ್ದರೆ ಈ ಯಂತ್ರವನ್ನು ಬಳಸುವುದು. - ಗರ್ಭರಕ್ಷಣಾ ಯಂತ್ರ:
ಪಶುಗಳಿಗೂ, ಮನುಷ್ಯರಿಗೂ ಬಳಸಬಹುದಾದ ಯಂತ್ರ. - ಹೊಟ್ಟೆನೋವು/ಉದರ ದೋಷ ನಿವಾರಕ ಯಂತ್ರ:
ಮೂತ್ರಪಿಂಡದಲ್ಲಿ ಕಲ್ಲಾಗಿದ್ದರೆ, ಆಸ್ಪತ್ರೆ ಮೂಲಕವಾಗಿಯೂ ಉದರ ರೋಗ ನಿವಾರಣೆ ಆಗದಿದ್ದ ಪಕ್ಷದಲ್ಲಿ ಈ ಯಂತ್ರವನ್ನು ಬಳಸಿ ವ್ಯಾಧಿ ನಿವಾರಣೆ ಮಾಡಬಹುದು. - ಬಾಲರಕ್ಷಾಯಂತ್ರ:
ಚಿಕ್ಕಮಕ್ಕಳಿಗೆ ಸಂಬಂಧಿಸಿದ ಯಂತ್ರ, ಇದನ್ನು ಧರಿಸಿದರೆ ಹೆಚ್ಚಾಗಿ ಅಳುವುದು, ಮಲಗಿದ್ದಾಗ ಹಾಸಿಗೆಯಲ್ಲೇ ಮೂತ್ರವಿಸರ್ಜನೆ ಮಾಡುತ್ತಿದ್ದರೆ ಅವರಿಗೆ ನಕಾರಾತ್ಮಕ ಶಕ್ತಿಗಳಿಂದ ತೊಂದರೆ ಉಂಟಾಗುತ್ತಿದೆ ಎಂದರ್ಥ. ಇಂತಹ ಮಕ್ಕಳಿಗೆ ಈ ಯಂತ್ರವನ್ನು ಧಾರಣೆ ಮಾಡಿಸಿದರೆ ಉತ್ತಮ. - ಕಂಟಕ ನಿವಾರಣಾ ಯಂತ್ರ:
ಅತ್ಯಂತ ಕ್ಲಿಷ್ಟಕರ ಸಂದರ್ಭಗಳಲ್ಲಿ, ಜೀವ ರಕ್ಷಣೆಗಾಗಿ, ರಾಜಕೀಯವಾಗಿ ಹಿಂದೇಟು ಹಾಕುವ ಮನಸ್ಥಿತಿ ಬಂದಿದ್ದರೆ, ಜಾತಕದಲ್ಲಿ ಕಂಟಕ, ಮೃತ್ಯು ಭಯ ಇತ್ಯಾದಿಗಳಿಂದ ರಕ್ಷಣೆ ಪಡೆಯಲು ಗಣಪತಿಯನ್ನು ಪೂಜಿಸಿ ಈ ಯಂತ್ರವನ್ನು ಧರಿಸಲೇಬೇಕು. - ಶಿವಪಂಚಾಕ್ಷರ ಯಂತ್ರ:
ಇಷ್ಟಾರ್ಥ ಸಿದ್ಧಿಗಾಗಿ, ಸರ್ವಸಿದ್ಧಿಗಾಗಿ, ವಿಘ್ನ ನಿವಾರಣೆಗಾಗಿ, ಸಕಲ ರೀತಿಯಲ್ಲೂ ಶುಭ ಫಲಗಳನ್ನು ಪಡೆಯಲು ಈ ಯಂತ್ರ ಸಹಾಯಕಾರಿಯಾಗಿದೆ. - ಸರ್ವ ಬಾಲಗ್ರಹ ನಿವಾರಣಾ ಯಂತ್ರ:
ಹಿಂದೆ ತಿಳಿಸಿದ ಬಾಲಗ್ರಹ ಯಂತ್ರ ಕಾರ್ಯ ನಿರ್ವಹಿಸದಿದ್ದರೆ ಹೆಚ್ಚಿನ ಗ್ರಹದೋಷ ಬಾಧಿಸುತ್ತಿದ್ದರೆ ತಿಳಿದವರಲ್ಲಿ ವಿಚಾರಿಸಿ ಈ ಯಂತ್ರವನ್ನು ಮಗುವಿಗೆ ಧಾರಣೆ ಮಾಡಿಸಬೇಕು. - ಶಿವದರ್ಶಿನಿ ಯಂತ್ರ:
ಸ್ತ್ರೀಯರಿಗೆ ಪ್ರಸವದಿಂದ ತೊಂದರೆ ಆಗಿದ್ದರೆ, ಗರ್ಭದೋಷದಿಂದ ಸಂತಾನ ನಾಶವಾಗಿದ್ದರೆ ಈ ಯಂತ್ರವನ್ನು ಬಳಸಿ ಉತ್ತಮ ಸಂತಾನ ಪಡೆಯಬಹುದು. - ಧನಂಜಯ ಮಹಾಮಂತ್ರ:
ಕೋರ್ಟ್ ವಾದ ವಿವಾದಗಳಲ್ಲಿ ಜಯ ಪಡೆಯಲು ಈ ಯಂತ್ರವನ್ನು ಬಳಸುವುದು ಅತ್ಯುತ್ತಮ. - ಸರ್ವ ಶೂಲ ನಿವಾರಣಾ ಯಂತ್ರ:
ಸಮಸ್ತ ಬಗೆಯ ಶರೀರ ಬಾಧೆ (ಹೊಟ್ಟೆನೋವು, ಬೆನ್ನುನೋವು, ಮೈಕೈ ನೋವು) ಇತ್ಯಾದಿ ಆರೋಗ್ಯದ ಸಮಸ್ಯೆಗಳ ನಿವಾರಣೆಗಾಗಿ ಈ ಯಂತ್ರವನ್ನು ಬಳಸಿ ಪ್ರಯೋಜನ ಪಡೆಯಬಹುದು. - ಋತು ಚಕ್ರ ದೋಷ ನಿವಾರಣಾ ಯಂತ್ರ:
ವಿಶೇಷವಾಗಿ ಸ್ತ್ರೀಯರಿಗೆ ಶ್ವೇತಪದರ ದೋಷ, ಅನಿರೀಕ್ಷಿತ ಋತು ಚಕ್ರದ ದೋಷ ನಿವಾರಣೆಗಾಗಿ ಈ ಯಂತ್ರ ಅನುಕೂಲವಾಗುತ್ತದೆ. - ಶತ್ರು ವಶೀಕರಣ:
ಶತ್ರುಗಳಿಂದ ಯಾವುದೇ ತೊಂದರೆಗಳು ಬಾರದಂತೆ ಅವರಿಗೆ ನಮ್ಮ ಮೇಲಿನ ಶತ್ರುತ್ವವನ್ನು ಕಡಿಮೆ ಮಾಡಲು ಈ ಯಂತ್ರವನ್ನು ಬಳಸಬಹುದು. - ವೀರಭದ್ರ ಮಹಾಯಂತ್ರ:
ದರಿದ್ರತೆಯ ನಾಶ, ಕೃಷಿ, ವ್ಯಾಪಾರದಲ್ಲಿ, ಪಶು ಸಂಗೋಪನೆಯಲ್ಲಿ ಲಾಭ ಪಡೆಯಲು ಈ ಯಂತ್ರವನ್ನು ಬಳಸಬಹುದು. - ಶಿವಶಕ್ತಿ ಯಂತ್ರ:
ಮಾಟ, ಮಂತ್ರ, ತಂತ್ರ ಪ್ರಯೋಗಗಳನ್ನು ನಾಶ ಮಾಡಲು ಬಳಸುವ ಯಂತ್ರ. - ಸರ್ವ ಕಾರ್ಯ ವಿಜಯ ಯಂತ್ರ:
ಕೋರ್ಟ್ ಕಛೇರಿ ಹಾಗೂ ಇನ್ನಿತರ ವ್ಯವಹಾರಗಳಲ್ಲಿ ಜಯ ಸಾಧಿಸಲು ಈ ಯಂತ್ರದ ಬಳಕೆ ಉತ್ತಮ. ರಾಜಕಾರಣದಲ್ಲಿ, ವಕೀಲರಿಗೆ, ಪತ್ರಿಕೋದ್ಯಮದವರಿಗೆ ಉಪಯೋಗವಾಗುತ್ತದೆ. - ಸಿದ್ಧಿಯುಕ್ತ ಯಂತ್ರ:
ಹೆಣ್ಣು ಮಕ್ಕಳಿಗೆ 15 ವರ್ಷದ ನಂತರವೂ ಋತುಚಕ್ರ ಪ್ರಾರಂಭವಾಗದೇ ಇದ್ದಾಗ ಈ ಯಂತ್ರವನ್ನು ಬಳಸಬಹುದು. - ಸರಸ್ವತಿ ಯಂತ್ರ:
ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಓದಿನಲ್ಲಿ ನಿರಾಸಕ್ತಿ ಇದ್ದರೆ, ಬುದ್ಧಿ ಚುರುಕಾಗಲು ಈ ಯಂತ್ರವನ್ನು ಬಳಸುವುದು ಉತ್ಕೃಷ್ಟ. - ಪುರುಷ ಹಾಗೂ ಸ್ತ್ರೀ ವಶೀಕರಣ ಯಂತ್ರ:
ದಂಪತಿಗಳಲ್ಲಿ ಕಲಹ ಉಂಟಾಗಿ ವಿಚ್ಛೇದನದವರೆಗೂ ಹೋದಾಗ ಈ ಯಂತ್ರದ ಬಳಕೆಯಿಂದ ಒಳ್ಳೆಯದಾಗುತ್ತದೆ. - ದುಃಸ್ವಪ್ನ ನಾಶಕ ಯಂತ್ರ:
ಚಿಕ್ಕ ಮಕ್ಕಳಿಗೂ, ವಯಸ್ಕರಿಗೂ, ಸಾಧಕರಾಗಿದ್ದರೂ ದುಃಸ್ವಪ್ನ ಕಾಡುತ್ತಿದ್ದರೆ ಇದರ ನಿವಾರಣೆಗಾಗಿ ಈ ಯಂತ್ರವನ್ನು ಬಳಸುವುದರಿಂದ ಒಳ್ಳೆಯ ನಿದ್ದೆ ಮಾಡಬಹುದು. - ವಿಜಯ ಯಂತ್ರ:
ಕುಸ್ತಿಯಲ್ಲಿ ಗೆಲ್ಲಲು, ಯಾರ ವಿರುದ್ಧವಾದರೂ ಜಯ ಸಾಧಿಸಲು ಈ ಯಂತ್ರದ ಬಳಕೆ ಉತ್ತಮ. - ವಿಷಹರ ಯಂತ್ರ (1)
ಸರ್ಪ ಕಚ್ಚಿದ್ದರೆ ವಿಷವನ್ನು ಕಡಿಮೆ ಮಾಡಲು ಈ ಯಂತ್ರವನ್ನು ಬಳಸಿ ವಿಷದ ಪ್ರಮಾಣ ಕಡಿಮೆ ಮಾಡಬಹುದು.
ಸಾಮಾನ್ಯ ಹಾವುಗಳು, ನಾಯಿ ಕಡಿದರೆ, ಚೇಳು ಕಡಿತಕ್ಕೆ ಈ ಯಂತ್ರವನ್ನು ಬಳಸುವಂತದ್ದು, ಕಾಳಿಂಗ ಸರ್ಪ, ನಾಗರ ಹಾವಿನ ವಿಷ ನಿವಾರಿಸಲು ಶಕ್ತಿಶಾಲಿ ಯಂತ್ರ ಹಾಗೂ ಮಂತ್ರ ಪ್ರಯೋಗ ಮಾಡಬೇಕು. - ವಿಷ ಹರ ಯಂತ್ರ (2):
ಮೇಲಿನ ಯಂತ್ರ ಕಾರ್ಯ ನಿರ್ವಹಿಸದಿದ್ದರೆ ಈ ಯಂತ್ರವನ್ನು ಬಳಸಬಹುದು. - ಬಲಭೀಮ ಮಾರುತಿ:
ಯಾವ ವ್ಯಕ್ತಿ ಬಹಳ ನಿಶ್ಯಕ್ತನಾಗಿದ್ದರೆ, ಬಹಳ ಕಡಿಮೆ ಆಹಾರ ಸೇವಿಸುತ್ತಿದ್ದರೆ ದೈಹಿಕ ಬಲ ಹೆಚ್ಚಿಸಲು ಈ ಯಂತ್ರವನ್ನು ಧಾರಣೆ ಮಾಡಿಸಿದರೆ ಉತ್ತಮ ಫಲ ಪಡೆಯಬಹುದು. - ಪರಿಸರ ರಕ್ಷಾ ಯಂತ್ರ:
ಹೊಲ ಗದ್ದೆಗಳಲ್ಲಿ ವಿನಾಕಾರಣ ಬೆಳೆ ನಾಶವಾಗುವುದು, ಶತ್ರುಗಳು ಬೆಂಕಿ ಹಚ್ಚುವುದು ಇತ್ಯಾದಿ ತೊಂದರೆಗಳಿಂದ ರಕ್ಷಣೆ ಪಡೆಯಲು ಈ ಯಂತ್ರವನ್ನು ಬಳಸಬಹುದು.