ದೈವಿಕ ಆಚರಣೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮಸಾಲೆ ಪದಾರ್ಥಗಳ ಸೇವನೆಗೆ ನಿಷಿಧ್ಧವೇಕೆ?

ದೈವಿಕ ಆಚರಣೆಯಲ್ಲಿ ಈರುಳ್ಳಿ; ಬೆಳ್ಳುಳ್ಳಿ ಮಸಾಲೆ ಪದಾರ್ಥಗಳ ಸೇವನೆಗೆ ನಿಷಿಧ್ಧವೇಕೆ?

ಸನಾತನ ಧರ್ಮದಲ್ಲಿ ಹಲವಾರು ಜಾತಿ ಉಪಜಾತಿಗಳಿವೆ. ಇದರಲ್ಲಿ ಭಾಗಶಃ ಎಲ್ಲಾ ವರ್ಗದಲ್ಲೂ ದೇವರನ್ನು ಪೂಜಿಸುವ ಸಂಸ್ಕಾರ ಮತ್ತು ಧರ್ಮದ ಬಗ್ಗೆ ಅತಿಯಾದ ಜಿಜ್ಞಾಸೆ ಹೊಂದಿರುವ ಅತೀವ ದೈವಭಕ್ತರಾದ ಕೆಲವರು ಪೂಜೆ, ವ್ರತ ಪುನಸ್ಕಾರಗಳಂತಹ ತಮ್ಮ ಧರ್ಮದ ಕಟ್ಟುಪಾಡುಗಳನ್ನು ಬಹಳವಾಗಿ ಅನುಷ್ಠಾನಕ್ಕೆ ತರುತ್ತಾರೆ.

ಅವರು ಇಂದಿಗೂ ಕೂಡ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸುವುದಿಲ್ಲ. ಅಷ್ಟೇ ಅಲ್ಲ, ದೇವರಿಗೆ ಸಲ್ಲುವ ನೈವೇದ್ಯದಲ್ಲಿಯೂ ಇವೆರಡು ತರಕಾರಿಗಳನ್ನು ಬಳಸಲಾಗುವುದಿಲ್ಲ. 

ಇದಕ್ಕೆ ಕಾರಣ ಏನು? 

ಆಯುರ್ವೇದದ ಪ್ರಕಾರ ನಾವು ಸೇವಿಸುವ ಆಹಾರಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. 

  1. ಸತ್ವ
  2. ರಜಸ್ 
  3. ತಮಸ್

ಸತ್ವ, ರಜಸ್ ಮತ್ತು ತಮಸ್. 

ಸತ್ವಭರಿತ ಅಂದರೆ ಸಾತ್ವಿಕ ಆಹಾರಗಳು (ಹಣ್ಣು ಹಂಪಲು) ಮಾನಸಿಕ ಶಾಂತಿಯನ್ನು ನೀಡುತ್ತವೆ.

ಇವುಗಳ ಸೇವನೆಯಿಂದ ನೆಮ್ಮದಿ, ಸತ್ಯವನ್ನು ನುಡಿಯಲು ಮತ್ತು ಸದಾ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಸಾತ್ವಿಕರು ಎಂದಿಗೂ ಸಾತ್ವಿಕ ಆಹಾರವನ್ನೇ ಸೇವಿಸಲು ಮೊದಲು ಆದ್ಯತೆ ನೀಡುತ್ತಾರೆ.

ರಜಸ್ ಆಹಾರಗಳು

ರಜಸ್ ಆಹಾರಗಳೆಂದರೆ ಈ ಭೂಮಿಯ ಮೇಲಿರುವ ಆನಂದ ಮತ್ತು ವಿಲಾಸಗಳನ್ನು ಅನುಭವಿಸುವ ಆಹಾರಗಳಾಗಿವೆ. 

ಉದಾಹರಣೆಗೆ ಈರುಳ್ಳಿ, ಅತಿಯಾದ ಹುಳಿ, ಖಾರ ಇತ್ಯಾದಿ. 

ಈರುಳ್ಳಿ ಬೆಳ್ಳುಳ್ಳಿ ಸೇವನೆಯಿಂದ ಲೈಂಗಿಕ ಬಯಕೆ ಹೆಚ್ಚುತ್ತದೆ.ಬೆಳ್ಳುಳ್ಳಿ ತಿನ್ನವುದರಿಂದ ಅಪಾನ ವಾಯು ಉತ್ಪತ್ತಿಗೆ ಕಾರಣವಾಗುತ್ತದೆ.ಇದೇ ಕಾರಣಕ್ಕೆ ಈರುಳ್ಳಿ, ಬೆಳ್ಳುಳ್ಳಿ ಯನ್ನು ತಿನ್ನದಿರಲು ಹಿಂದಿನ ಕಾಲದಲ್ಲಿ ನಿಷೇಧಿಸಲಾಗಿತ್ತು.

ತಮಸ್ ಆಹಾರಗಳು

ತಮಸ್ ಆಹಾರಗಳೆಂದರೆ ಇದರ ಸೇವನೆಯಿಂದ ಮನದಲ್ಲಿ ಋಣಾತ್ಮಕ ಭಾವನೆಗಳಿಗೆ, ಸಿಟ್ಟು, ಕ್ರೌರ್ಯ, ರೌದ್ರತೆಗಳಿಗೆ ಪುಷ್ಟಿ ನೀಡುವ ಆಹಾರಗಳಾಗಿದ್ದು ಮನದ ನಿಯಂತ್ರಣವನ್ನು ಕಳೆದುಕೊಳ್ಳುವ ಮೂಲಕ ಮಾನವ ರಾಕ್ಷಸನಾಗಿ ಮಾರ್ಪಾಡುವ ಆಹಾರಗಳಾಗಿವೆ. 

ಉದಾಹರಣೆಗೆ ನಶೆ ಏರಿಸುವ ಮದ್ಯ, ಮಾಂಸ ಮಸಾಲೆ ಅಣಬೆ ಇತ್ಯಾದಿ. 

ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ಕೂಡ ತಾಮಸ ಆಹಾರ ಎಂದು ಹೇಳಲಾಗುತ್ತದೆ.ಈ ಆಹಾರಗಳಿಂದ ಮನಸ್ಸಿನ ಏಕಾಗ್ರತೆ ಮತ್ತು ನಿಯಂತ್ರಣ ಕಷ್ಟ ಸಾಧ್ಯ.

ಇದೇ ಕಾರಣದಿಂದ ಹಿಂದಿನ ಕಾಲದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸಲು ಜನರು ಹಿಂದೇಟು ಹಾಕುತ್ತಿದ್ದರು. 

ಆದರೆ ಕೆಲವರು ಈರುಳ್ಳಿ, ಬೆಳ್ಳುಳ್ಳಿಯನ್ನು ಔಷಧಿಯ ರೂಪದಲ್ಲಿ ಫಲಕಾರಿ ಎಂದು ಕಂಡುಕೊಂಡು ಕೆಲವು ಕಾಯಿಲೆಗಳಿಗೆ ಔಷಧಿ ಎಂದು ಸೇವಿಸತೊಡಗಿ ಕ್ರಮೇಣ ತಮ್ಮ ಆಹಾರದಲ್ಲಿ ಅಳವಡಿಸಿಕೊಂಡರು.

ಇಂದಿಗೂ ತಮ್ಮ ಸಂಪ್ರದಾಯಗಳನ್ನೇ ಚಾಚೂ ತಪ್ಪದೇ ಅನುಸರಿಸಿಕೊಂಡು ಬರುತ್ತಿರುವ ಸಾತ್ವಿಕರು ಕೇವಲ ಸಾತ್ವಿಕ ಆಹಾರಗಳನ್ನು ಸೇವಿಸಿ ಇತರೆ ತಾಮಸ ಆಹಾರಗಳಾದ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮದ್ಯ ಮೊದಲಾದವುಗಳನ್ನು ಸೇವಿಸದೇ ಮನಸ್ಸಿನ ಮೇಲಿನ ನಿಯಂತ್ರಣ ಸಾಧಿಸಿ, ಮುಂದಿನ ಪೀಳಿಗೆಗೂ ಕೂಡ ಈ ಬಗ್ಗೆ ಸುಸಂಸ್ಕೃತರನ್ನಾಗಿಸುವಲ್ಲಿ ಇವರ ಕೊಡುಗೆ ಮಹತ್ವದ್ದಾಗಿದೆ.

ತನ್ಮೂಲಕ ಮಾನಸಿಕ ನೆಮ್ಮದಿ, ಶಾಂತಿ ಹಾಗೂ ಜೀವನದ ಗುರಿಯನ್ನು ಸಾಧಿಸಲು ಇಚ್ಛಿಸುತ್ತಾರೆ.

Leave a Comment

Your email address will not be published. Required fields are marked *